ಮನದ ನಿನಾದ
ಮನದ ವೀಣೆ ಮೀಟಿದಾಗ ಕೇಳಿಸೋದು...
Bugs ಮಳೆ
Bugs ಮಳೆ ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು... Developers ಕೈಯಿಂದ ಇಂದು ಮತ್ತಷ್ಟು ಬಂದಿವೆಯೆಂದು
ಅಹಾ ಎಂಥ Bugಗಳ ಸುರಿಮಳೆ ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...|| ಊಟದ ತಟ್ಟೆಯ ಮುಂದೆಯೂ ಕೇಳಿದೆ ಕಲರವ, ರಾತ್ರಿಯ ಕನಸಲೂ ನಾನು ಹೋದರೆ ತಳಮಳ ನೆಮ್ಮದಿ ನಿದ್ದೆ ರಜ ಹಾಕಿದೆ ಕೆಲಸಕೆ ನಾನು ಬಂದ ಕ್ಷಣ
ನಾ ಖೈದಿ ಕಂಪೆನಿ ಸೆರೆಮನೆ, ನಿದ್ದೆ ಬರುವುದು ಎಂದು ನನಗೆ, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||
Applicationನ ಸೆಲೆಯಲಿ ಕಾಣದ Bugಗಳೇ ತುಂಬಿವೆ Notepadiನ ಪುಟದಲಿ ಕೇವಲ report ಮಾಡದ Bugs ಇವೆ ಯಾರಿಗೂ ಕಾಣದ major Bugನು,ಇಂದು ನಾನು ನೋಡಿರುವೆ ಮ್ಯಾನೇಜರ್ಗೆ ಉಂಟೆ ಇದರ ಕಲ್ಪನೆ ಬಂದು ಹೊಗಳರೋ ಒಮ್ಮೆ, ಹಾಗೇ ಸುಮ್ಮನೆ..... ||ಅನಿಸುತಿದೆ ಯಾಕೋ ಇಂದು...|| ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು... Developers ಕೈಯಿಂದ ಮತ್ತಷ್ಟು ಬಂದಿವೆಯೆಂದು ಅಹಾ ಎಂಥ Bugಗಳ ಸುರಿಮಳೆ ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...|| ---------ಅಮರ್

- vbamaranath ರವರ ಬ್ಲಾಗ್
- Login or register to post comments
- 546 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: Bugs ಮಳೆ
ಆಹಾ ಎಂತ ಮದುರ ಯಾತನೇ!!!

ಮಜಾ ಮಾಡಿ
Bugಗಳೇ ಸತ್ಯ bugಗಳೇ ನಿತ್ಯ.
ನಿಮ್ಮ ಮೊಗಸು ಸೊಗಸಾಗಿದೆ!!
======================================