ಮನದ ನಿನಾದ
ಮನದ ವೀಣೆ ಮೀಟಿದಾಗ ಕೇಳಿಸೋದು...
ಹೃದಯ ಪ್ರಭು ಗೀತೆ...
ನಮ್ಮ ಕಂಪೆನಿಯಲ್ಲಿ ನಿಶ್ಚಿತಾರ್ಥವಾದ ಸಹೋದ್ಯೋಗಿ ಸ್ನೇಹಿತೆಯ ಕಂಡು... ನಾನು ಅವಳಾಗಿ ಕಲ್ಪಿಸಿ
ಬರೆದದ್ದು....
-: ಹೃದಯ ಪ್ರಭು ಗೀತೆ:-
ನಿಮ್ಮ ನೋಡಿದಂದಿನಿಂದ
ಹೃದಯಗೀತೆ ಹಾಡುತಿದೆ;
ನಿಮ್ಮ ನೆನೆದರೆ ಸಾಕು
ರೋಮಾಂಚನ ಮೈಗೂಡುತಿದೆ;
ನಿಮ್ಮ ಕಾಣದೆ ಅರೆಘಳಿಗೆ
ರೆಪ್ಪೆ ಮುಚ್ಚದೆ ನಿದ್ದೆಗೆ;
ನಿಮ್ಮ ಕನಸ ಕಾಣದೆ
ಕಂಗಳು ಬೆಳಕ ನೋಡದೆ;
ನಿಮ್ಮ ಒಲವು ದೊರೆಯದೆ
ನನ್ನ ಬಾಳಿಗರ್ಥವೆಲ್ಲಿದೆ?
ನಿಮ್ಮ ನೆರಳು ಸೋಕದೆ
ಮೊಗವು ಹಾಗೆ ಬಾಡಿದೆ;
ಹೊಸಬಾಳಿಗೆ ಮುನ್ನುಡಿ ಬರೆದವರೆ
ತಾಳಿಯ ಕಟ್ಟಲು ಎಂದು ಬರುವಿರೆ?
ಬಿಸಿಲಧಗೆಗೆ ಬೇಸತ್ತು ಹೂತಿರಲು
ತಂಗಾಳಿ ಬಂದು ತೀಡಲು,
ನೀವೇ ಬಂದಿರೆಂದು ಹುಡುಕುವೆ;
ಕಛೇರಿಗೆ ಹೊರಡಲು ಅಣಿಯಾಗಲು
ಕನ್ನಡಿ ಮುಂದೆ ನಾ ನಿಲ್ಲ-
ಲು,
ನಿಮ್ಮನ್ನೆ ಕಾಣುವೆ;
ಬಸ್ ಸ್ಟಾಪಿನಲಿ ಬಾರದ ಬಸ್ಸಿಗೆ ಕಾಯುತಿರಲು
ಯಾವುದೋ ಗಾಡಿಯಲಿ ನೀವೇ ಬಂದಂತೆ ಅನ್ನಿಸುತಿರಲು
ಎದುರು ಬಂದು ಹೊಗೆಯುಗುಳಿ ನಿಂತ ಬಸ್ಸನ್ನೇ ಅರಿಯದಾದೆ!
ನಿಮ್ಮ ನೆನಪ ಸಾಗರದಲಿ ಈಜುತಾ...
ಕಛೇರಿ ಎದುರ ದಿಬ್ಬ ಹತ್ತಿದೆ
ಆಯಾಸದ ಪರಿವಿಲ್ಲದೆ, ಒಂದ್ಚೂರು ಜಾರದೆ!
ಕೆಲಸ ಮಾದಲೆಂದು
ಕಂಫ್ಯೂಟರ್ ಮುಂದೆ ಕೂತರೂ
ಮಾನಿಟರ್ ಉದ್ದಗಲಕ್ಕೂ ನೀವೆ;
mouse move ಮಾಡಿದಾಗ
ನಿಮ್ಮ ಕೆನ್ನೆ ನೇವರಿಸಿದ ನೆನಪು;
Left-right click ಮಾಡಲು
ನಿಮಗೆ ಕಚಗುಳಿ ಇಟ್ಟ ಸಲಿಗೆಯ ಕನಸು;
ಬಾಳಲಿ ನೀವು ಬಂದಾಗಿನಿಂದ,
ಹೊಟ್ಟೆಗೆ ಹಸಿವಿಲ್ಲ,
ಪ್ರೋಜೆಕ್ಟ್ ಕೆಲಸ ಅಂತ ಒತ್ತಡವಿಲ್ಲ,
ಮೋಬೈಲ್ ಬ್ಯಾಟರಿ ಚಾರ್ಜ್ ಮಾತ್ರ ಸಾಕಾಗಲ್ಲ,
ಧಮನಿಗಳಲಿ ಪ್ರೇಮ ಸಂಚಾರ ನಿಲ್ತಾ ಇಲ್ಲ;
ವಾಸ್ತವದ ಅರಿವು ಮರೆತಿರುವೆ
ನನ್ನೇ ನಾ ಕಳೆದುಕೊಂಡಿರುವೆ
ಹೇ ಪ್ರಭು...
ವಾಸ್ತವಕೆ ಕರೆದು ತಾ ಬೇಗ
ಮದುವೆ ದಿಬ್ಬಣದಲಿ ಹೂಡಿಸುತಾ...
ಇದರ ಒಂದು ವಿಶೇಷತೆಯಂದ್ರೆ ಹುಡುಗ-ಹುಡುಗಿ ಇಬ್ಬರ ಹೆಸರುಗಳು ಈ ಕವನದಲ್ಲಿ ಅಡಕವಾಗಿವೆ,
ಹುಡುಕಬಲ್ಲಿರಾ?

- vbamaranath ರವರ ಬ್ಲಾಗ್
- Login or register to post comments
- 482 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೃದಯ ಪ್ರಭು ಗೀತೆ...
ಹೃದಯಗೀತೆ ಹಾಡುತಿದೆ ಭೂಮಿ ಸ್ವರ್ಗವಾಗಿದೆ.
ನಿಮ್ಮ ಸಹೋದ್ಯೋಗಿಯ ಬಾಳು ಹಸನಾಗಿರಲಿ ಎಂದು ಆಶಿಸುತ್ತಾ ಹೆಸರುಗಳನ್ನು ಹುಡುಕಲು ಮೊದಲುಮಾಡಿದಾಗ ಹೊಳೆದದ್ದು..ಹುಡುಗ - ಪ್ರಭು, ಹುಡುಗಿ - ಗೀತಾ, ಪ್ರೇಮ...
ಉ: ಹೃದಯ ಪ್ರಭು ಗೀತೆ...
ನಿಮ್ಮ ಊಹೆ ಸರಿಯಾಗಿದೆ, ಅವರಿಬ್ಬರ ಹೆಸರುಗಳು ಪ್ರಭು ಮತ್ತು ಗೀತಾ
---ಅಮರ್
ಉ: ಹೃದಯ ಪ್ರಭು ಗೀತೆ...
ಸೂಪರ್... ಕಂಪ್ಯೂರ್ ಕವನ
right clickಗೆ?
ಯಪ್ಪ!! ನಮ್ಮ ಹುಡುಗರು ಏಟ್ ಚಂದಾಗಿ ಪದ್ಯಗೊಳ್ನ ಬರೆಯಕ್ಕೆ ತೊಡಗಿದ್ದಾರೆ.
ಯುವಪ್ರೇಮ ಜೊತೆ ಈ IT ಪ್ರೇಮ
!! ( ತಮಾಸೆ )
- ಮಾಯ್ಸ
ಉ: ಹೃದಯ ಪ್ರಭು ಗೀತೆ...
ಅಯ್ಯಯ್ಯಪ್ಪೊ