ಜನಪದ ತ್ರಿಪದಿಗಳು
ಪದವಿ ಓದುತ್ತಿದ್ದಾಗ ಕನ್ನಡ ಭಾಷಿಕದಲ್ಲಿ ಜನಪದ ತ್ರಿಪದಿಗಳು ಎಂಬ ಪಾಠವಿತ್ತು. ಅದರಲ್ಲಿ ಒಂದು ತ್ರಿಪದಿ ಹೀಗಿತ್ತು:
"ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ"
ಮೂರೇ ಸಾಲುಗಳಲ್ಲಿ ಎಂಥಹ ಒಂದು ಅದ್ಭುತವಾದ ಜೀವನದ ತಿರುಳನ್ನು ಬಿಚ್ಚಿಟ್ಟಿದ್ದಾರೆ!! ಈ ತ್ರಿಪದಿಗಳು ಯಾರೊಬ್ಬ ಕವಿ ಬರೆದಿದ್ದಲ್ಲ, ಜನರೇ ತಮ್ಮ ಜೀವನದ ಅನುಭವಗಳನ್ನು ಮೂರೇ ಮೂರು ಸಾಲುಗಳಲ್ಲಿ ಅಭ್ಹಿವ್ಯಕ್ತಿಪಡಿಸಿದ್ದು.
ಜನಪದ ತ್ರಿಪದಿಗಳನ್ನು ಯಾರಾದರೂ ಸಂಗ್ರಹಿಸಿ ಪ್ರಕಟಿಸಿದ್ದಾರೆಯೇ? ಇವುಗಳನ್ನೊಳಗೊಂಡ ಯಾವುದಾದರೂ ಹೊತ್ತಗೆಗಳು ಇವೆಯೇ? ಯಾರಾದರೂ ತಿಳಿದವರು ಹೇಳುತ್ತೀರಾ?

- vedumaani ರವರ ಬ್ಲಾಗ್
- Login or register to post comments
- 317 hits
- Email this blog





RSS:
ಪ್ರತಿಕ್ರಿಯೆಗಳು
ಉ: ಜನಪದ ತ್ರಿಪದಿಗಳು
ಈ ಬಗೆ ಮುಪ್ಪದಿ ನಾನು ಸಾಲೆಯಾಗೆ ಓದಿದ ನೆಪ್ಪು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಜನಪದ ತ್ರಿಪದಿಗಳು
ಸಿ.ಪಿ.ಲಿಂಗಣ್ಣನವರ ಗರತಿಯ ಬಾಳು ಪುಸ್ತಕ ಕೊಂಡುಕೊಳ್ಳಿ
ಅಲ್ಲಿಯವರೆಗೆ ಅವರ ಈ ಪುಸ್ತಕ- ಗರತಿಯ ಬಾಳ ಸಂಹಿತೆ ಓದಿ
http://dli.iiit.ac.in/cgi-bin/Browse/scripts/use_scripts/advnew/metainfo...
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಜನಪದ ತ್ರಿಪದಿಗಳು
ನನ್ನಿ ವೆಡುಮಾನಿಯವರೆ,
ಹೆಚ್.ಎಲ್.ನಾಗೇಗೌಡರ ಈ ಮುಪ್ಪದಿಗಳನ್ನು ಹೊತ್ತಗೆಯಲ್ಲಿ ಕಟ್ಟಿದ್ದಾರೆ ಅಂತ ಕೇಳಿದ ನೆನಪು.
ಇನ್ನೊಂದು
".... ಕಪ್ಪಾದ ಆ ಹಸುವು ಹಾಲು ಕರೆದರೆ ಒಪ್ಪೀತು ಶಿವನ ಪೂಜೆಗೆ"
ಉ: ಜನಪದ ತ್ರಿಪದಿಗಳು
ಡಾ ! ಎಸ್.ವಿ. ರ೦ಗಣ್ಣನವರು "ಶೈಲಿ " ಎ೦ಬ ಪುಸ್ತಕವನ್ನು ಬರೆದಿದ್ದಾರೆ.
ಅದರಲ್ಲಿ ಜನಪದ ತ್ರಿಪದಿಯ ಬಗ್ಗೆ ತು೦ಬಾ ಚೆನ್ನಾಗಿ ಬರೆದಿದ್ದಾರೆ.
ಮತ್ತು ಬೇರೆ ಬೇರೆ ಜನಪದದ ಬಗ್ಗೆ ಮಾಹಿತಿಯೂ ಇದೆ.
ಉ: ಜನಪದ ತ್ರಿಪದಿಗಳು
ಪ್ರತಿಕ್ರಿಯಿಸಿದ ಸಂಪದ ಮಿತ್ರರೆಲ್ಲರಿಗೂ ನನ್ನಿ
ವೇದುಮಾಣಿ