ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಉತ್ತರ ಕರ್ನಾಟಕದ ಭಾಷೆ ಎಷ್ಟು ಸ್ವಾರಸ್ಯಕರ, ಸುಂದರವೋ, ಅಷ್ಟೇ ರಸಮಯ ಅಲ್ಲಿನ ತಿಂಡಿ ತಿನಿಸುಗಳು, ಹಾಗೂ ಅಲ್ಲಿನ ಮಂದಿಯ ಅಡ್ಡಹೆಸರುಗಳು. (ಸರ್ ನೇಮು) ನೀವು ಯಾರನೇ ಪರಿಚಯ ಮಾಡಿಕೊಂಡರೂ ಅವರು ಒಂದು ಪ್ರಶ್ನೆ ಕೇಳೇ ಕೇಳ್ತಾರೆ. ನಿಮ್ಮ ಅಡ್ಡಹೆಸರೇನ್ರೀ ? ಎಂದು. ನನಗೆ ಅಡ್ಡಹೆಸರಿಲ್ಲ ಎಂದರೆ ಆಶ್ಚರ್ಯ ಅವರಿಗೆ. ನನ್ನ ವೃತ್ತಿಯಲ್ಲಿ ಸಾಗಿ ಬಂದ ಕೆಲವು ವ್ಯಕ್ತಿಗಳ ಸ್ವಾರಸ್ಯಕರ
ಅಡ್ಡಹೆಸರುಗಳಲ್ಲಿ ಕೆಲವೊಂದನ್ನು ಇಲ್ಲಿ ಕೊಟ್ಟಿದ್ದೇನೆ. ಇಲ್ಲಿ ಇ ಕಾರದ ಬಳಕೆಯೂ ಹೆಚ್ಚು.
ಅಂಗಡಿ, ವಸ್ತ್ರದ್, ಪತ್ರಿ, ಕರಡಿ, ಇಟಗಿ, ಕುರಿ, ಕೋಟಿ, ಹುಗ್ಗಿ, ಹಕ್ಕಿ, ತಾಡಪತ್ರಿ, ಪ್ಯಾಟಿ, ಲಿಂಬಿಕಾಯಿ, ಮಿತ್ರ, ಔಂಟಿ, ತಲವಾರ, ದಡೂತಿ, ಕಟ್ಟೀಮನಿ, ನಡುವಿನ ಮನಿ, ಹಂಚಿನಮನಿ, ಕಡೆಮನಿ, ಅಕ್ಕಿ, ಅತ್ತರ್, ಗೋಟಡಕಿ, ಒಂಟಗೋಡಿ, ತಂಬಾಕು, ಪೋಲೀಸ್ ಪಾಟೀಲ್, ಕೊಟ್ಟಗಿ, ಚೂರಿ, ಕುಳ್ಳಿ, ಗುಬ್ಬಿ, ಸಾಲಿ, ಉಳ್ಳಾಗಡ್ಡಿ, ಬಳ್ಳೊಳ್ಳಿ, ತಿಗಣಿ, ಮಜ್ಜಗಿ, ಮೋರೆ, ಕೊಳ್ಳಿ, ಮಾರಿ, ಗಸ್ತಿ, ಗೋಡಿ, ಹುಡಗಿ, ಬೆಲ್ಲದ್, ತುಪ್ಪದ್, ಮೊಟ್ಟೆ, ರೊಟ್ಟಿ, ಕಿಲ್ಲೆಕೇತ, ಕಟಗಿ, ಕಡ್ಲಿ, ಬಜ್ಜಿ, ಈಟಿ, ಭಾವಿ ಕಟ್ಟಿ, ಮೂರಾಬಟ್ಟೆ,.

- veena ರವರ ಬ್ಲಾಗ್
- Login or register to post comments
- 669 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ವೀಣಕ್ಕ
ಅದು ಅಡ್ಡಹೆಸರಲ್ಲ, ಮನೆತನದ ಹೆಸರು
pet name = ಅಡ್ಡಹೆಸರು; ಮಾದರಿ
ಮಹೇಶ = ಮಾಯ್ಯ, ಶ್ರೀನಿವಾಸ = ಸೀನ, ನಾರಾಯಣ = ನಾಣಿ, ಸುಬ್ರಮಣ್ಯ = ಸುಬ್ಬು
ತಾಡಪತ್ರಿ ಇದು ಬಳ್ಳಾರಿ ಹತ್ರ ಒಂದು ಊರು ಅಲ್ವಾ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಮಾಯ್ಸ.
ಇವನ್ನು ಬಡಗಣದ ಕಡೆ 'ಅಡ್ಡ ಹೆಸರು' ಎಂದು ಕರೆಯುತ್ತಾರೆ. ನಾನು ಹುಬ್ಬಳ್ಳಿಗೆ ಹೋಗಿದ್ದಾಗ ಇದು ಗೊತ್ತಾಯಿತು.
ಅವರು ನನಗೆ ಕೇಳಿದರು " ನಿಮ್ಮ ಅಡ್ಡ ಹೆಸರೇನು?" ...ನಾನು "ಕರಿಯ" ಅಂದೆ.
ಆಗ ಅವರು ಬಿಡಿಸಿ ಹೇಳಿದರು. ಅಡ್ಡಹೆಸರು ಅಂದರೆ ಎರಡನೆ ಹೆಸರು( ಸರ್ ನೇಮ್)
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಅಣ್ನ ’ಕರಿಯ’
ನಂಮ ತೆಂಕಣದ ಕಡೆಯ ಮನೆತನದ ಹೆಸರುಗಳು ಹೇಗೆ ಅಂತ ನಾನು ವಸಿ ಉಂಕಿಸಕ್ಕೆ ತೊಡಗೀನಿ.
ನಾವು ತೆಂಕರು ನಮ್ಮ ಊರಿಂದ ಗುರುತಿಸಿಕೊಳ್ಳೋದೇ ಹೆಚ್ಚು.
ಗೌಡ, ಆರಾಧ್ಯ, ರಾವ್/ರಾಯ/, ಶಾಸ್ತ್ತಿ, ಜೋಯಿಸ, ಅಯ್ಯ, ಅಯ್ಯಂಗಾರ್, ಭಟ್ಟ, ಆಚಾರ್, ಇವೀಸೇ ನಂಗೆ ಹೊಳೆದವು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ತಾಡಿಪತ್ರಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ನಂಗೆಳೆಯ ಅಪ್ಪಟ ಕನ್ನಡಿಗ ಅವನೂರು ತಾಡಪತ್ರಿ.
ಅವನು ಯಾವಾಗಲೂ ಹೇಳ್ತಾನೆ ಇರ್ತಾನೆ, ರಾಯದುರ್ಗ, ತಾಡಪತ್ರಿ ಕಡೆ, ಹಳ್ಳಿ ಹಳ್ಳೀಲಿ ಮಂದಿ ಕನ್ನಡ ಮಾತಾಡ್ತಾರಂತೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ನಿಮ್ಮ ಗೆಳೆಯ ಹೇಳಿದ್ದು ನಿಜ. ರಾಯದುರ್ಗ, ಆಲೂರು, ಅದೋನಿಯ ಬಳಿ ಕನ್ನಡಿಗರೇ ಹೆಚ್ಚಿರುವ ಸಾಕಷ್ಟು ಊರುಗಳಿವೆ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಸರಿ ಹೇಳಿದಿರಿ ಮಹೇಶರವರೆ, ಪ್ರಪಂಚದ ಎಲ್ಲಾ ಕಡೆಯಲ್ಲೂ ಒಬ್ಬ ವ್ಯಕ್ತಿಯನ್ನು ಗುರುತಿಸಲು ಮನೆತನದ ಹೆಸರನ್ನು ಬಳಸುತ್ತಾರೆ, ನಮ್ಮ ನಾಡಲ್ಲಿ ಬಹು ಭಾಗ ಆ ವ್ಯಕ್ತಿ ಬಂದ ಊರು, ಬೀದಿ, ಮನೆ ಅಥವ ವೃತ್ತಿಗೆ ಸಂಬಂಧಪಟ್ಟ ಪದಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ, ಜರ್ಮನ್‍ನಲ್ಲಿ ಶುಮಾಖರ್ (ಮೈಖಲ್ ಶುಮಾಖರ್ ಯಾರಿಗೆ ತಾನೆ ಗೊತ್ತಿಲ್ಲ) ಎಂದರೆ ನಿಜವಾಗು ’ಚಪ್ಪಲಿ ಮಾಡುವವನು’ ಎಂದು ಅರ್ಥ, ಆಂಗ್ಲದ ಷು ಮೇಕರ್ ಥರ. ಹಾಗೆಯೇ, ಉತ್ತರ ಭಾರತದಲ್ಲಿಯೂ ವೃತ್ತಿ ಆಧಾರಿತ ಹೆಸರುಗಳು. ದಕ್ಷಿಣದಲ್ಲಿ, ನನಗೆ ತಿಳಿದ ಹಾಗೆ, ತಮಿಳರನ್ನು ಬಿಟ್ಟು ಎಲ್ಲರೂ ಊರು, ಬೀದಿ, ಮನೆ ಅಥವ ವೃತ್ತಿಗೆ ಸಂಬಂಧಪಟ್ಟ ಪದಗಳನ್ನು ಹೆಸರಾಗಿ ಬಳಸುತ್ತಾರೆ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ವೃತ್ತಿಗೆ ಸಂಬಂಧಪಟ್ಟ ಹೆಸರುಗಳು ಉತ್ತರ ಕರ್ನಾಟಕದಲ್ಲಿ ಸಿಗ್ತವೆ. ಕಂಬಾರ, ಬಡಿಗೇರ, ಅಂಗಡಿ, ಕಂಚಗಾರ ಇತ್ಯಾದಿ. ಕೆಲ ಇಂಗ್ಲಿಷ ಮನೆತನದ ಹೆಸರುಗಳನ್ನು ನೋಡಿ - Smith, Taylor ಇತ್ಯಾದಿಗಳು ವೃತ್ತಿಗೆ ಸಂಬಂಧಪಟ್ಟವು.
ದಕ್ಷಿಣ ಭಾರತದವರು ದೇಶದ ಹೊರಗೆ ಹೋದಾಗೆ ಅದರಲ್ಲೂ ಅಮೇರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಮೊದಲ, ಮಧ್ಯದ ಮತ್ತು ಕೊನೆಯ ಹೆಸರುಗಳನ್ನು ದಾಖಲಿಸಲೇಬೇಕು. ಬರೀ ಮೊದಲನೆ ಹೆಸರು ಮತ್ತು initials ಇಟ್ಟುಕೊಳ್ಳುವ ದಕ್ಷಿಣದವರಿಗೆ ಇದರಿಂದ ಭಾರಿ ಗೊಂದಲ!! ಅನೇಕರು ತಮ್ಮ ತಂದೆಯ ಇಲ್ಲವೆ ಊರಿನ ಹೆಸರನ್ನು (ತೆಲುಗರಲ್ಲಿ ಇದು ಸಾಮಾನ್ಯ) ಮೊದಲನೆಯ ಹೆಸರಾಗಿ ದಾಖಲಿಸುತ್ತಾರೆ. ಇತರ ಭಾರತೀಯರಿಗೆ ಇದು ಅರ್ಥವಾದೀತು. ಆದರೆ ವಿದೇಶಿ ಗೆಳೆಯರು ತಂದೆಯ ಇಲ್ಲವೆ ಊರಿನ ಹೆಸರಿಂದ ಅವರನ್ನು ಕರೆಯುಲು ಪ್ರಾರಂಭಿಸುತ್ತಾರೆ.
Hi Bangalore!! How are you? Let's catch a movie this weekend if you are free. Bring along your wife Mysore too!!
ಮಕ್ಕಳ ಹೆಸರು ದಾಖಲಿಸುವಾಗ ಇನ್ನಷ್ಟು ಗೊಂದಲ. ಅಪ್ಪನ ಹೆಸರನ್ನು ಕೊನೆಯ ಹೆಸರಾಗಿಟ್ಟರೆ (surname) ಹುಡುಗಿಯರ ಪಾಡು ನೋಡಿ. Formal ಆಗಿ ಕರೆದಾಗ Ms. Kodandarama ಇಲ್ಲವೆ Ms. Gundanna ಆಗುತ್ತೆ
@ವೀಣಾ ಅವರೆ, ಮೋರೆ ಅಂದ್ರೆ ಮರಾಠಿ ಮೂಲದ್ದು. ದಕ್ಷಿಣ ಕರ್ನಾಟಕದ ಮೋರೆಯಲ್ಲ
ಮೂರಾಬಟ್ಟೆ ಅನ್ನೋ ಹೆಸರು ಖಂಡಿತ ಕೇಳಿಲ್ಲ. ನಿಮ್ಮ ಕಲ್ಪನೆಯೇ?
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
veena.
ಕಲ್ಪನೆಯಲ್ಲ ಜಿಸಿ ಅವರೆ, ನನ್ನ ಕಂಪ್ಯೂಟರ್ ನಲ್ಲಿ search ಮಾಡಿದಾಗ, ಎಂಟು ಜನರ ಹೆಸರು ಈ ಅಡ್ಡಹೆಸರಿನಿಂದ ಸಿಕ್ಕವು. ನಿಮಗೆ ಗೊತ್ತ, ಲಂಗೋಟಿ ಎನ್ನುವ ಅಡ್ಡಹೆಸರು ಕೂಡ ಇದೆ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ನಮ್ಮ ಫಿಸಿಕ್ಸ್ ಮಾಷ್ಟರ ಹೆಸರು ಬೆಲ್ಲದ್ ಅಂತ ಇತ್ತು.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ನಮ್ಮ ಹಿಂದಿ ಮೇಷ್ಟ್ರ ಹೆಸರು "ಅಡ್ಡಮನಿ".
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ನಮ್ಮ ಫಿಸಿಕ್ಸ್ ಮಾಷ್ಟರ ಹೆಸರು ಬೆಲ್ಲದ್ ಅಂತ ಇತ್ತು. ಇದು ಹೇಗೆ ಬಂದಿರಬಹುದು ?
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಬೆಲ್ಲ ಮಾಡುವ ಇಲ್ಲವೆ ಮಾರುವ ಮನೆತನದವರು. ಧಾರವಾಡದಿಂದ ಚಂದ್ರಕಾಂತ ಬೆಲ್ಲದರು ಕೆಲ ವರ್ಷ ಶಾಸಕರಾಗಿದ್ದರು. ಅವರ ಮನೆತನದನದವರು ಅಲ್ಲಿ ಅನೇಕ Automibile Dealershipಗಳನ್ನು ನಡೆಸುತ್ತಿದ್ದಾರೆ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಇರಬಹುದು. ಯಾರೋ ಹಳೇ ಮೈಸೂರಿನವರು Data Entry ಮಾಡಿರ್ಬೇಕು!! ಮೂರಾಬಟ್ಟಿ ಹೆಸರನ್ನೇ ಮೂರಾಬಟ್ಟೆ ಮಾಡಿದ್ದಾರೆ
"ಲಂಗೋಟಿ" ಅನ್ನುವ ಮನೆತನದವರು ನಮಗೆ ಗೊತ್ತಿದ್ದಾರೆ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಕನ್ನಡ ಮತ್ತು ಇಂಗ್ಲಿಷ್ನಲ್ಲಿ ವೃತ್ತಿಯಿಂದ ಬಂದಿರುವ ಅಡ್ಡ/ಮನೆತನದ/ಕೊನೆಯ ಹೆಸರುಗಳ (family/surname/last names/occupational names) ಹೋಲಿಕೆ:
ಕಮ್ಮಾರ -> Smith
ಕುಂಬಾರ, ಕಂಬಾರ -> Potter
ಬಡಿಗೇರ -> Carpenter
ಅಕ್ಕಸಾಲಿ -> Goldsmith, ಜರ್ಮನ್ - Goldschmidt
ಕಂಚಗಾರ -> ?? (Coppersmith ಎನ್ನುವ ಅಡ್ಡ ಹೆಸರುಗಳು ಇಂಗ್ಲಂಡಿನಲ್ಲಿ ಇವೆ)
ಬಣಕಾರ, ಸುಣಗಾರ -> Painter
ಹಡಪದ್ -> Barber
ಸಿಂಪಿ -> Taylor, Weaver?
ಗೌಂಡಿ, ಉಪ್ಪಾರ್ -> Mason
ಗೌಳಿ -> Shepherd (close enough?)
ಗಾಣಿಗೇರ್ -> ??
ಕುಲಕರ್ಣಿ -> ??
?? -> Miller
....
....
....
ತಪ್ಪಿದ್ದರೆ ಸರಿ ಮಾಡಿ. ನಿಮಗೆ ಬೇರೆ ಹೆಸರುಗಳು ಗೊತ್ತಿದ್ದರೆ ಇಲ್ಲಿ ಹಾಕಿ.
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಕನ್ನಡ ಮತ್ತು ಇಂಗ್ಲಿಷ್ನಲ್ಲಿ ವೃತ್ತಿಯಿಂದ ಬಂದಿರುವ ಅಡ್ಡ/ಮನೆತನದ/ಕೊನೆಯ ಹೆಸರುಗಳ ಪಟ್ಟಿಗೆ ಮತ್ತಷ್ಟು ಹೆಸರುಗಳು.
ಕರಿಗಾರ್ - > ಮುಸ್ಲಿಂ ಕ್ಷೌರಿಕ
ಸೌದಾಗರ್ - ವ್ಯಾಪಾರಿ
ಕಲಾಲ್ - butcher
ಯೆಮ್ಮಿ
ಪಾಟೀಲ್
ಪೋಲಿಸ್ ಪಾಟೀಲ್
ಹವಾಲ್ದಾರ್
ಭಂಡಾರಿ - treasurer; ಕನ್ನಡ ಜಿಲ್ಲೆಗಳಲ್ಲಿ ಕ್ಷೌರಿಕರಲ್ಲೂ ಈ ಅಡ್ಡಹೆಸರಿನ ಬಳಕೆ ಇದೆ.
ಭಂಡಾರ್ಕರ್
ರಾಜಗುರು, ರಾಜಪುರೋಹಿತ
ಶ್ರೋತ್ರಿ,
ಸಾಮಗ ( ಸಾಮವೇದ ಓದಿದವರು)
ಜೋಶಿ
ಜೋಯಿಸ್
ಅತ್ತರ್ - > ಅತ್ತರು (scent) ತಯಾರಕ, ವ್ಯಾಪಾರಿ
ಕರಗುದರಿ, ಬಿಳೆಗುದ್ರಿ -> ಕಪ್ಪು ಕುದುರೆ, ಬಿಳಿ ಕುದುರೆ ಸಾಕಿದ ಮನೆತನದವರು
ಗುಬ್ಬಚ್ಚಿ
ಸಿಂಹ (C.R. ಸಿಂಹ)
ಸಮಗಾರ = shoemaker/schumacher
ಕಮತದ್, ಕಾಮತ್, ನಾಡಕರ್ಣಿ, ಶ್ಯಾನುಭೋಗ/ಶ್ಯಾನ್ ಭಾಗ್/ಶೆಣೈ/ಶೆಣ್ ವಿ, ಕಾರ್ಣಿಕ್, ಪಟೇಲ್,
ದೇಸಾಯಿ, ಇನಾಂದಾರ್ (ಹಿಂದು, ಮುಸ್ಲಿಂ ಇಬ್ಬರಲ್ಲೂ), ಸರ್ದೇಸಾಯ್, ಮುತಾಲಿಕ ದೇಸಾಯಿ, ಜಾಗೀರ್ ದಾರ್, ಗೌಡ,
ಕನ್ನಡ ಜಿಲ್ಲೆಯ ಭಟ್, ಗಡಿಯಾರ್, ಅಡಿಗೆ, ವಾಘ್ (ಹುಲಿ ಹೊಡೆದ ಮನೆತನದವರು)
ಪಾರಸೀಗಳಲ್ಲಿ ಇಂಥ ಹೆಸರುಗಳು ಅನೇಕ - ದಾರುವಾಲಾ (ಸಾರಾಯಿತಯಾರಕ/ವ್ಯಾಪಾರಿ), Engineer, ಮಿಸ್ತ್ರಿ, Contractor,
chashmawala, ghaswala, lakdawala, lokhandwala, ginwala, unwala, canteenwala, vakil, Ghadiyali, dalal, masalawala, aarsiwala, acidwala, bagwala, batliwala, batlibhai, bookmaker, chiniwala, commissioner, collector, clubwala, driver,
ಇನ್ನು ಇಂಗ್ಲೆಂಡ್, ಅಮೆರಿಕಾ ಗಳಲ್ಲಿನ ಕೆಲ ಅಡ್ಡ ಹೆಸರುಗಳು -Ramsbottom, Bull, Bush, Rice, Bacon (ಹಂದಿಮಾಂಸ), Black, Bullock, Butler, Cook, Fisher, Gardner, Gates, Hacker, Hunt, Knight, Longfellow, Short, Loveless, Mailer, Page, Pound, Price, King, Queen, Pepper, Goldman,
ಇನ್ನೂ ಹೆಚ್ಚಿನ ಮಾಹಿತಿಗಾಗಿ http://www.ourkarnataka.com/states/nk_familynames.htm
-- ಆರಾಮ್
ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು
ಆರಾಮರೆ, ಉತ್ತಮವಾದ ಪಟ್ಟಿ!!
ಪಾಟೀಲ, ಪಟೇಲ, ಗೌಡರ, ಹೆಗಡೆ, ಇತ್ಯಾದಿಗಳು ಬಿರುದುಗಳಿಂದ ಅಥವಾ ಸಾಮಾಜಿಕ/ರಾಜಕೀಯ ಸ್ಥಾನಗಳಿಂದ ಬಂದಂತಹ ಹೆಸರುಗಳು. ಇವಕ್ಕೆ ಇಂಗ್ಲೀಷಿನಲ್ಲಿ ಸಮನಾದ ಹೆಸರುಗಳು ನನಗೆ ಸಿಕ್ಕಿಲ್ಲ. ೧೮ನೆಯ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯಿಂದ ಯುರೋಪಿನಲ್ಲಿ ಹೊಸ ವೃತ್ತಿಗಳು ಹುಟ್ಟಿದವು. ಅಂತಹ ವೃತ್ತಿಗಳು ನಮ್ಮಲ್ಲಿರಲಿಲ್ಲ.
ಪಾರಸಿಗಳಲ್ಲಿ ಇನ್ನೊಂದು ಸ್ವಾರಸ್ಯಕರ ಹೆಸರು - Bandookwala!!
Bush ಹೆಸರಿಗೆ ಸಮೀಪದ್ದು ಕಂಟೀಮನಿ (ಕಂಟಿಗಳ ಹತ್ತಿರವಿದ್ದ ಮನೆಯವರು). ಆದರೆ Bush ಹೆಸರಿಗೆ ಇನ್ನೊಂದು ಮೂಲವಿದೆ - wine merchant ಎಂದು.