ಎಲ್ಲವೂ ದೇವರ ಹೆಸರಿನಲ್ಲಿ .....
ನಾನು ಬಹಳಷ್ಟು ಸಲ ಯೋಚಿಸಿದ್ದಿದೆ. ಈ ಜನ (ಸಾಕಷ್ಟು ದುಡ್ಡಿರುವ) ದೇವರಿಗೆ ಲಕ್ಷಗಟ್ಟಲೆ ಹಣ, ಬಂಗಾರವನ್ನು ಕಾಣಿಕೆಯಾಗಿ ಕೊಡುತ್ತಾರಲ್ಲ, ಅದೇ ದುಡ್ಡಿನಲ್ಲಿ ಬಡವರ ಮಕ್ಕಳಿಗೆ ಓದಲು ಸಹಾಯ ಮಾಡಿದರೆ, ಅವರ ಜೀವನ ಬಂಗಾರದಂತಾಗುವಂತೆ ಮಾಡಿದರೆ ನಿಜಕ್ಕೂ ದೇವರು ಮೆಚ್ಚದಿರುತ್ತನೆಯೆ? ಅವನಿಗೆ ಬೆಣ್ಣೆ ಅಲಂಕಾರ ಹಾಗೂ ಕಲ್ಯಾಣೋತ್ಸವ ಮಾಡಿದರಷ್ಟೆ ತೃಪ್ತಿಯೆ ?
ಜನರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕೆ ದೇವರಿಗೆ ಕಾಣಿಕೆ ಸಲ್ಲಿಸುತಾರೆಯೆ ?

- veena ರವರ ಬ್ಲಾಗ್
- Login or register to post comments
- 553 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಎಲ್ಲವೂ ದೇವರ ಹೆಸರಿನಲ್ಲಿ .....
ದುಡ್ಡು ಕೊಟ್ಟು ನೋಡುವ ದೇವರು ನಮ್ಮ ನಾಡಿನಲ್ಲಿ ಇದ್ದಾರೆ.
೨೦೦೦ ರೂ ಕೊಟ್ಟು ನೀವು ಒಂದು ದೊಡ್ಟ ಪೂಜೆ ಮಾಡಿದರೆ, ನಿಮ್ಮ ದೇವರ ಹತ್‌ತ್‌ತ್‌ತ್ತಿರ
ಬಿಡ್ತಾರೆ, ಇಲ್ದೇ ಇದ್ರೆ, ದೂರದಿಂದಲೇ ಕೈಮುಗಿದು ದಬ್ಬಿಸಿಕೊಂಡು ಹೋಗಬೇಕು 
ನಮ್ಮ ಕಡೆ ಒಂದು ಮಾತಿಗೆ "ಮನೇಲಿರೋ ದೇವರಿಗೆ ಬತ್ತಿ ಹಚ್ಚದೇ, ಬೆಟ್ಟದ್ ದೇವ್ರಿಗೆ ತಂಬಿಟ್ಟು ಹೊತ್ರಂತೆ" ಅಂತ!!
====================================================
ಉ: ಎಲ್ಲವೂ ದೇವರ ಹೆಸರಿನಲ್ಲಿ .....
ದೇವರಲ್ಲೂ ಬಡವ-ಶ್ರೀಮಂತ ಅಂತ ಇದೆಯೇ! ದೇವರು ಮನುಷ್ಯನನ್ನು ಸೃಷ್ಟಿಸಿದ್ದೋ,ಮನುಷ್ಯನೇ ದೇವರ ಸೃಷ್ಟಿ ಮಾಡಿದನೋ-ದೇವರೇ ಬಲ್ಲ
ಉ: ಎಲ್ಲವೂ ದೇವರ ಹೆಸರಿನಲ್ಲಿ .....
ಶ್ರದ್ಧೆಯೇ ಜೀವಾಳ. ಮನುಷ್ಯನ ಪ್ರತಿಯೊಂದು ಕೆಲಸದ ಹಿಂದೆಯೂ ಆತನ ಶ್ರದ್ಧೆ, ನಂಬಿಕೆಗಳೇ ಕೆಲಸ ಮಾಡುತ್ತವೆ. ದೇವರಿಗೆ ಹುಂಡಿಯನ್ನು ಹಾಕಿದರೆ ಅವನದನ್ನು ಡಬ್ಬಲ್ ಮಾಡಿಕೊಡುತ್ತಾನೆ ಎಂದು ನಂಬಿದವನನ್ನು ಏನು ಮಾಡಿದರೂ ಆ ಮಾರ್ಗದಿಂದ ವಿಮುಖನನ್ನಾಗಿಸಲು ಸಾಧ್ಯವಿಲ್ಲ. ಹಾಗೆಯೇ ರಾಕೆಟ್ ಉಡಾಯಿಸುವ ಮುನ್ನ ರಾಹುಕಾಲ, ಜೋತಿಷ್ಯ ನೋಡುವ ವಿಜ್ಞಾನಿಗೆ ತನ್ನ ಜ್ಞಾನಕ್ಕಿಂತ ಶ್ರದ್ಧೆಯಲ್ಲೇ ಹೆಚ್ಚು ವಿಶ್ವಾಸವಿರುತ್ತದೆ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.