ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
ನೂರು ಕೋಟಿದಾಟಿರುವ, ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಭಿವೃಧ್ದಿ ಪಥದಲ್ಲಿ ಸಾಗುತ್ತಿರುವ ಭಾರತದಂತಹ ದೇಶವನ್ನು ಆಳುತ್ತಿರುವ ನಮ್ಮ ರಾಜಕಾರಣಿಗಳಿಗೆ ಕನಿಷ್ಟ ವಿದ್ಯಾರ್ಹತೆಯೂ ಅಗತ್ಯವಿಲ್ಲವೆಂದಾದರೆ, ನಮಗೆ ನಾಚಿಕೆಯೆನಿಸುತ್ತದೆ. ಇಂದಿನ ಕಾಲದಲ್ಲಿ ಒಂದು ಜವಾನನ ಕೆಲಸಕ್ಕೂ ವಿದ್ಯಾರ್ಹತೆ ನಿಗದಿ ಪಡಿಸಿರುವಾಗ ಆಡಳಿತದ ಚಿಕ್ಕಾಣಿ ಹಿಡಿದಿರುವ ನಮ್ಮ ನಾಯಕರಿಗೆ ವಿದ್ಯೆಯ ಅಗತ್ಯ ಕಾಣುತ್ತಿಲ್ಲವೆ. ಇಂತಹ ಪರಿಸ್ಥಿತಿಯಿರುವಾಗಲೆ ಆಡಳಿತವು ಅಧಿಕಾರಿಗಳ ಕೈ ವಶವಾಗಿ , ಹತೋಟಿ ತಪ್ಪುತ್ತದೆ. ವಯಸ್ಸು ತೊಂಭತ್ತಾದರೂ ನಾನಿನ್ನೂ ಪ್ರಧಾನಿಯಾಗಬೇಕು, ರಾಷ್ಟ್ರಪತಿಯಾಗಬೇಕು ಎಂದು ಕನಸು ಕಾಣುತ್ತಾ ಕುಳಿತಿರುವವರು, ನಮ್ಮ ಯುವಕರಿಗೆ ಜಾಗ ಬಿಡಿವುದು ಯಾವಾಗ ? ಇಂದಿನ ಉದಾರೀಕರಣದ, ಜಾಗತೀಕರಣದ ಕಾಲದಲ್ಲಿ, ಅನುಭವದ ಜೊತೆಗೆ, ಸೃಜನಶೀಲತೆ, ಬುದ್ಧಿಶಕ್ತಿಯೂ ಇರುವ ಯುವಕರು ರಾಜಕಾರಣದಲ್ಲಿ ಸಕ್ರಿಯರಾಗುವ ಅಗತ್ಯ ತುಂಬಾ ಇದೆ. ಅಂತೆಯೇ, ಚುನಾವಣೆ ಹತ್ತಿರ ಬಂದಾಗ ಕಪ್ಪೆಗಳಂತೆ ಪಕ್ಷದಿಂದ ಪಕ್ಷಕ್ಕೆ ಹಾರುವ ಕೋತಿ ಬುದ್ದಿಯನ್ನೂ ನಿಯಂತ್ರಣಕ್ಕೆ ತರುವ ಕಾನೂನಿನ ಅಗತ್ಯವೂ ಕಾಣುತ್ತಿದೆ. ಇದೆಲ್ಲ ಆಗುವುದು ಯಾವಾಗ ?

- veena ರವರ ಬ್ಲಾಗ್
- Login or register to post comments
- 498 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
ನನಗನಿಸುವುದು, ಬರೀ ಒಬ್ಬನು ಅದನ್ನು ತಿಳಿದಿದ್ದರೆ, ಇದನ್ನು ತಿಳಿದಿದ್ದರೆ ಆಡಳಿತಕ್ಕೆ ಬರಬೇಕು ಅನ್ನೋದು, ಬೇಡ.
ಒಟ್ಟಿನಲ್ಲಿ ಯಾರೇ ಆದರೂ, ಹೆಚ್ಚು ಮಂದಿಯ ನಂಬಿಕೆಗಳಿಸಿದ್ದರೆ, ಅವರೇ ಆಳಕ್ಕೆ ಬರಬೇಕು.
ಇಲ್ಲ ಅಂದರೆ, ಹಿಂದೆ ಇದ್ದ ಹಂಗೆ ಬರೀ ಓದುಕೊಂಡಿರೋರು ಅಂತ ಅನ್ನಿಸಿಕೊಂಡಿರೋರು, ಅವರವರ ಕಡೆಯೋರ್‍ನ ಮೇಲೆ ತಂದುಕೊಂಡು, ಮಿಕ್ಕಿದೋರ್‍ನ ಮೂಲೆಗುಂಪು ಮಾಡಿಕ್ತಾರೆ.
===============================================
ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
ಕನಿಷ್ಠ ವಿದ್ಯಾರ್ಹತೆ ನಿಗದಿ ಪಡಿಸಿದರೆ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತದೆಯೇ? ಶಾಲೆಗೆ ಹೋಗಿ ಕಲಿತರಷ್ಟೇ ವಿದ್ಯೆಯೇ?
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
veena.
ಹಾಗಾದರೆ ಈ ರಿಯಾಇತಿ ರಾಜಕಾರಣಿಗಳಿಗೆ ಮಾತ್ರವೇಕೆ, ಬೇರೆಯವರಿಗೆ ಯಾಕಿಲ್ಲ? ರಾಜ್ಯ, ದೇಶವನ್ನು ಆಳುವ ಜನರಿಗೆ ಯವುದೇ ಅರ್ಹತೆಯು ಬೇಕಿಲ್ಲವೆ? ವಿದ್ಯೆಯಿಂದ ಜನರ ಸಂಸ್ಕೃತಿ, ವಿಚಾರಧಾರೆ ಎಲ್ಲವೂ ಬದಲಾಗುತ್ತದೆ, ಹಾಗಾದಾಗ ಬಹುಶಃ ಈಗಿರುವ ಭ್ರಷ್ಟ್ಟಾಚಾರ, ಹಗರಣಗಳು ಸ್ವಲ್ಪ ಮಟ್ಟಿಗೆ ತಹಬಂದಿಗೆ ಬರಬಹುದೇನೋ....
ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
ವೃತ್ತಿಗೆ/ಕೆಲಸಕ್ಕೆ, ಪಟ್ಟಕ್ಕೆ ಅರ್ಹತೆ/ತಕ್ಕುಮೆ ಬೇಕು. ಹೌದು.
ಬರೀ ವಿದ್ಯೆ/ಕಲಿಕೆ ಒಂದೇ ಅರ್ಹತೆಯಲ್ಲ.
ಜನರಾಡಳಿತದಲ್ಲಿ ನಮ್ಮನ್ನು ಆಳುವವರಿಗೆ ಜನಬೆಂಬಲವೇ ಅರ್ಹತೆ.
ಎಂದು ಜನಬೆಂಬಲವಿಲ್ಲವೋ ಅಂದು ಅವರಿಗೆ ಅರ್ಹತೆ ಇಲ್ಲ. ಇರುವ ವರೆಗೂ ಪೂರ್ತಿ ಅರ್ಹತೆಯುಂಟು.
- ಮಾಯ್ಸ