ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಆಮೆ ಮತ್ತು ಮೊಲದ ರನ್ನಿಂಗ್ ರೇಸ್ ಕಥೆಯನ್ನು ನಾವೆಲ್ಲರೂ ಬಾಲ್ಯದಲ್ಲಿ ಓದಿರುತ್ತೇವೆ. ಆಮೆಯು ಮೊಲವನ್ನು ಸೋಲಿಸಿ ಹೇಗೆ ಓಟದ ಸ್ಪರ್ದೆಯನ್ನು ಗೆದ್ದಿತು ಎಂದು ತಿಳಿದಿದ್ದೇವೆ. ಆದರೆ ನಾನು ಇತ್ತೀಚಿಗೆ ಇದೇ ಕಥೆಯನ್ನು ಬದಲಾದ ರೂಪದಲ್ಲಿ ಎರಡು ಪತ್ರಿಕೆಗಳಲ್ಲಿ ಓದಿದೆ. ಒಂದರಲ್ಲಿ, ಆಮೆಯು ಓಟದ ಮಾರ್ಗವನ್ನು ತಾನೆ ನಿರ್ಧರಿಸಿ, ನದಿಯು ಮಾರ್ಗದಲ್ಲಿ ಬರುವ ಹಾಗೆ ಮಾಡಿ, ನದಿಯನ್ನು ಈಜಿ ಪ್ರಥಮವಾಗಿ ತನ್ನ ಗುರಿಯನ್ನು ಮುಟ್ಟುತ್ತದೆ. ಮೊಲಕ್ಕೆ ಈಜಲು ಬರದೆ ಸೋತು ಹೋಗುತ್ತದೆ. ಮತ್ತೊಂದು ಕಥೆಯಲ್ಲಿ ಆಮೆಯು ಓಟದ ದಾರಿಯನ್ನು ತಪ್ಪು ದಾರಿಯಲ್ಲಿ ಬರೆದು ಮೊಲವು ಹೆಚ್ಚು ದೂರ ಓಡುವಂತೆ ಮಾಡಿ, ಮೊಲಕ್ಕಿಂತ ಮೊದಲೆ ತಾನು ಹತ್ತಿರದ ದಾರಿಯಲ್ಲಿ (ಅಡ್ಡದಾರಿ) ಓಡಿ ಗುರಿ ಮುಟ್ಟುತ್ತದೆ. ಹಿಂದಿನ ಕಥೆಯಲ್ಲಿ ಕಷ್ಟಪಟ್ಟವರಿಗೆ ಯಶಸ್ಸು ಖಂಡಿತ ಎಂಬ ನೀತಿ ಪಾಠವಿತ್ತು,ಹೊಸ ಕಥೆಯಲ್ಲಿ ಅಡ್ಡದಾರಿಯಲ್ಲಿ ಯಶಸ್ಸು ಗಳಿಸುವುದನ್ನು ಬೋಧಿಸಲಾಗಿದೆ. ಈ ರೀತಿ ಕಥೆಯಲ್ಲಿನ ನೀತಿಯನ್ನೇ ಬದಲಾಯಿಸಿದರೆ ಮೂಲ ಕಥೆಯ ಆಶಯಕ್ಕೆ ಧಕ್ಕೆ ತಂದಂತಾಗುವುದಲ್ಲವೆ ? ಮಕ್ಕಳಿಗೆ ಇದೇ ನೀತಿಯನ್ನೇ ನಾವು ಹೇಳುವುದು ?

- veena ರವರ ಬ್ಲಾಗ್
- Login or register to post comments
- 592 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ನೀವು ಓದಿದ ಕತೆಗಿಂತ ಭಿನ್ನ ಅಂತ್ಯ ಹೊಂದಿದ ಕತೆ ನಾನು ಕೇಳಿದೆ.
ಆಮೆ ನದಿ ಬರುವ ದಾರಿಯಲ್ಲಿ ಓಟ ಏರ್ಪಡಿಸಿ ಸೋತ ಬಳಿಕ ಮತ್ತೊಮ್ಮೆ ಸ್ಪರ್ಧೆ ಏರ್ಪಡಿಸುತ್ತದೆ. ದಾರಿ ಅದೇ ಹಿಂದಿನದು-ನದಿಯಿದೆ.
ಮೊಲ ಆಮೆಯೊಡನೆ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಆಮೆಯನ್ನು ಹೊತ್ತು ನದಿವರೆಗೆ ಓಡುತ್ತದೆ. ನದಿ ಬಂದಾಗ ಆಮೆಯ ಬೆನ್ನ ಮೇಲೆ ಕುಳಿತು ನದಿ ದಾಟಿ ಜತೆಯಾಗಿ ಗುರಿ ತಲುಪುತ್ತವೆ. ಈರ್ವರೂ ಜಯಶಾಲಿಯಾಗುವ ವಿನ್- ವಿನ್ ಸೂತ್ರ ಪರಸ್ಪರ ಸಹಕಾರ. ಇಬ್ಬರ ಪ್ರಾಬಲ್ಯವೂ ಬಳಕೆಯಾಗುತ್ತದೆ. ಹೇಗಿದೆ ಈ ಕತೆಯ ನೀತಿ?
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಇಬ್ಬರನ್ನು ಗೆಲ್ಲಿಸಬೇಕಿಂದಿದ್ದಲ್ಲಿ, ಪೋಟಿ ಯಾಕೆ ಬೇಕು? ಇಬ್ಬರನ್ನು ಹಾಗೆ ಗೆದ್ದವರೆಂದು ಸಾರಬಹುದಲ್ಲ?
ಮೊಲ ಮತ್ತು ಆಮೆ ಕತೆಯಲ್ಲಿ ದಿಟವಾದ ತಿರುಳು ಇದು.( ಮಾಯ್ಸನ ಬೋದನೆ
)
ನೀವು ಮೊಲವಾದರೆ, ಮೊದದಂತೆ ಉಂಕಿಸಿ, ಮೊಲಕ್ಕೆ ತಕ್ಕದಾರಿ ಹಿಡಿದು ನಿಮ್ಮ ಗೆಲುವನ್ನು ಕಂಡುಕೊಳ್ಳರಿ. ಆಮೆಯಾದರೆ ಆಮೆಯಂತೆ ಉಂಕಿಸಿ, ಆಮೆಗೆ ತಕ್ಕ ದಾರಿ ಹಿಡಿದು ಗೆಲ್ಲಿರಿ.
ಇಲ್ಲಿ ಮೊದಲಿಗೆ ಆಮೆಗೆ ಮತ್ತು ಮೊಲಕ್ಕೆ ಓಟದ ಪೋಟಿ ಇಟ್ಟಿರುವುದೇ ಸರಿಯಿಲ್ಲ!! ಪಾಪ ಆಮೆ!

ಒಂದು ವೇಳೆ ಆಮೆಗೆ ಮತ್ತು ಮೊಲಕ್ಕೆ ಈಜುವ ಪೋಟಿ ಇಟ್ಟಿದ್ದರೆ, ಯಾವಾಗಲೂ ಆಮೆಯೇ ಗೆಲುತ್ತಿತ್ತು.
- ಮಾಯ್ಸ
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಸ್ಪರ್ಧೆಯಲ್ಲಿ ಒಬ್ಬರು ಗೆಲ್ಲಬೇಕು ಇನ್ನೊಬ್ಬರು ಸೋಲಬೇಕು ಎನ್ನುವುದು ಹಳೆಯ ಮನೋಭಾವ. ನಮ್ಮ ನಮ್ಮ ಶಕ್ತಿಯನ್ನು ಬಳಸಿಕೊಂಡು ಎಲ್ಲರೂ ಗೆಲುವಿನತ್ತ ಸಾಗಬೇಕು.
ನೀವು ಹೇಳುವ ಅವರವರ ಶಕ್ತಿಯುತ ಕ್ಷೇತ್ರದಲ್ಲಿ ಸ್ಪರ್ಧಿಸಲು ಪ್ರಯತ್ನಿಸುವುದು ತುಸು ಹಳೆಯ ಸಿದ್ಧಾಂತವಂತೆ.
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಏನ್ ಸಾರ್?
ಎಲ್ಲ win-win ಆಗಕ್ಕೆ ಆಗುತ್ಯೇ?
- ಮಾಯ್ಸ
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಆಮೆ-ಮೊಲ ಕತೆಯಲ್ಲಿ ಆದಂತೆ ಆಗಬಹುದಲ್ಲಾ.
ಉದಾ: ಯೋಜನೆಯೊಂದಕ್ಕೆ ರೈತರ ಭೂಮಿ ಕೈಗಾರಿಕೆಯವರು ಕೊಳ್ಳುವಾಗ, ಅವರನ್ನು ಪಾಲುದಾರರಂತೆ ಮಾಡಿಕೊಂಡರೆ, ಕೈಗಾರಿಕೆ ಗಳಿಸುವ ಲಾಭ ಅವರಿಗೂ ಸಿಗುತ್ತಿರುತ್ತದೆ.(ವಿನ್-ವಿನ್) ಅದೇ ಭೂಮಿಯ ಬೆಲೆ ಕೊಟ್ಟು ಬಿಟ್ಟರೆ ರೈತ ಒಂದೆರಡು ವರ್ಷ ಮಜಾ ಮಾಡಿ ಹಣ ಉಡಾಯಿಸಬಹುದು.(ರೈತನ ಸೋಲು, ಗೆಲುವು ಉದ್ಯಮದ್ದು).
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಅಯ್ಯಾ..
ಕನಸಿನ ಮಾತಾಯ್ತು.!! ಎಂದು ರೈತ ನೆಟ್ಟಗೆ ಸೊಗವಾಗ್ ಇದ್ದಾನು!!
ಇಬ್ಬರಿಗೆ ಮೊದಲ ರ್‍ಯಾಂಕ್ ಹೇಗೆ ಕೊಡೋದು?
ಇಬ್ಬರಿಗೆ ಮುಕ್ಯಮಂತಿರಿ ಪಟ್ಟ ಹೇಗೇ ಗಿಟ್ಟುತ್ತೆ?
ಎಲ್ಲ ಕಡೇ win-win ಹ್ಯಾಂಗೆ ಮಾರಾಯ್ರೆ?
- ಮಾಯ್ಸ
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಜೋಸ್ತಿ ಸರಕಾರ ಸರಿಯಾಗಿ ನಡೆದರೆ(?) ಯೆಡಿಯೂರಪ್ಪ(ಬಿಜೆಪಿ)-ಕುಮಾರಸ್ವಾಮಿ (ಜೆಡಿಎಸ್) ವಿನ್-ವಿನ್.
ಕ್ರೀಡೆಯ ಬಗ್ಗೆಯೇ ಯೋಚಿಸದಿರಿ. rank ಬೇರೆ ಮಾತು. ವ್ಯವಹಾರದ ಬಗ್ಗೆ ನೀತಿ ಅನ್ವಯಿಸಬೇಕು. theoretical ಎನ್ನುವುದು ಒಪ್ಪುವೆ.
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಅದೇಯಾ..
ಬಿರಿ theoryಯಲ್ಲಿ, idealogy ಯಲ್ಲಿ, ಹಂಗ್ ಆಗಬೋದು, ಆದ್ರೆ practicalಅಲ್ಲಿ ಸ್ಯಾನೆ ಕಸ್ಟ ಐತೆ, ಕಸ್ಟ ಏನ್ ಬಂತು ಆಗಕ್ಕೇಏಏಏ ಇಲ್ಲ.
ನಮ್ ದೋಸ್ತಿ( ಜೋಸ್ತಿ? ) ಸರಕಾರ ನಡೆದರೆಸ್ಟು ಬಿಟ್ರೆಸ್ಟು.! ಅದರಿಂದ ನಮ್ಗೇನ್ ಲಾಬ ಐತೆ. ಏನಿದ್ರು ಅವ್ರಿಗೆ ಲಾಬ.
ಅದ್ವೈತ ( ಎಲ್ಲ ಒಂದೆ, ಎಲ್ಲ win-win ) ಬರೀ idealogyಗೆ ಮಸ್ತ್, ಬಾಸಣಕ್ಕೆ ಮಸ್ತ್, ಸಕ್ಕತ್, ಆದ್ರೆ
ದ್ವೈತ, ತಾರತಮ್ಮ ಇದೇ ದಿಟ, ಇದೇ practical.!!!
- ಮಾಯ್ಸ
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ನಮ್ಮಲಿ ದೋಸ್ತಿಗೆ ಜೋಸ್ತಿ ಅನ್ನುವುದಿದೆ.
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಜೋಸ್ತಿ ಯಾವ ನುಡಿಯಿಂದ ಬಂದಿದ್ದು?
ದೋಸ್ತ್, ದೋಸ್ತೀ, ದೋಸ್ತಾನ ಪಾರಸೀ, ಉರ್ದುವೋ ಇರಬೇಕು!
- ಮಾಯ್ಸ
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ತುಳು ಪ್ರಭಾವ ಇರಬಹುದು. ತುಳುವಿನಲ್ಲಿ ಅದೇ ಶಬ್ದ ಬಳಕೆಯಾಗ್ತದೆ.
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಅವ್ದಾ !!
ನಿಮಗೆ ಅದು ತುಳು ಮೂಲದ್ದೇ ಎಂದು ತಿಳಿಹೇಳಲಾದೀತೇ??? ನನಗೆ ಈ etymology ಅಂದ್ರೆ ಸಿಕ್ಕಾಪಟ್ಟೆ ಹುರುಪು ಅದಕ್ಕೆ ಕೇಳ್ತಿವ್ನಿ!
ನನ್ನಿ!
- ಮಾಯ್ಸ
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಗೆಳೆತನಕ್ಕೆ ತುಳು ಶಬ್ದ ಜೋಸ್ತಿ ಎಂದು ಎನ್ನುವುದು ನನಗೆ ಗೊತ್ತು. ಮೂಲ ಕೆದಕಿಲ್ಲ.
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
"ಜೋಸ್ತಿ" ಇದು ಬಟಾಟೆ ಹಂಗೆ ತುಳು ಸದ್ದು ಅಲ್ವಂಗೆ.
"ಜೋಸ್ತಿ" ದೋಸ್ತಿಯ corrupt form ಅಂತೆ!
ಮರಾಠಿಯಲ್ಲಿ ಕಂಡ(?) ಅಂದ್ರೆ ಆಲೂಗೆಡ್ಡೆಯೇ? ಈ 'ಕಂಡ' ದ್ರಾವಿಡ ಒರೆ ಅನ್ನುತ್ತೆ ಒರೆಗಂಟು!
"ಮೂಲವನ್ನು ಕೆದುಕುವುದಲ್ಲ, ಹುಡುಕುವುದು"
- ಮಾಯ್ಸ !!
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಅಲ್ವಂಗೆ= ಅಲ್ವಂತೆ
- ಮಾಯ್ಸ !!
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಎಲ್ಲಾ ಗೆಲ್ - ಗೆಲ್ ಆಗಲ್ಲ... ಅದರೆ ಪರ್ಸಂಟೇಜ್ ಮುಕ್ಯ ಅಲ್ವ.?
೯೦% ಮಂದಿ ಸೋತು, ೧೦% ಮಂದಿ ಗೆದ್ರೆ ಎಲ್ಲ ನೆಟ್ಟಗಿಲ್ಲ ಅಂತ...
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಅಲ್ಲ ಇಲ್ಲಿ ಮೊಲಕ್ಕೆ ಮತ್ತು ಆಮೆಗೆ ಓಟದ ಪೋಟಿ ಸೈಪೇ?
ಅವು ಚೆಸ್ ಪೋಟಿ ಆಡಲಿ ಬೇಕಾದರೆ.
- ಮಾಯ್ಸ !!
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಆಡಳಿತ ಚೆನ್ನಾಗಿದ್ರೆ ಜನರೂ ವಿನ್ ಅಲ್ವೇ?
*ಅಶೋಕ್
ಉ: ಆಮೆ ಮತ್ತು ಮೊಲ -ಒಂದು ನೀತಿ ಕಥೆ
ಆಡಳಿತ ಚೆನ್ನಾಗಿದ್ರೆ!!!
ಇದ್ಯಾ?
- ಮಾಯ್ಸ !!