ನನ್ನೊಳಗೂ ಒಂದು ಮಾತಿದೆ
ನೂರೊಂದು ವಿಷಯಗಳನ್ನು ನಿಮ್ಮಲ್ಲಿ ಹೇಳಬೇಕೆಂದು ಬಯಸುತ್ತೇನೆ. ಸಮಯದ ಅಭಾವನೋ ನಿಮ್ಮ ಅದ್ರಷ್ಟನೋ ಸದ್ಯಕ್ಕಂತೂ ಅದೆಲ್ಲವನ್ನು ಹೇಳಲು ಸಾಧ್ಯವಾಗುತ್ತಿಲ್ಲ...
ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ
ಬೆನಜೀರ್ ಬುಟ್ಟೊ ಹತ್ಯೆಯಾದದ್ದು ಬಹುಶಃ ಮುಸ್ಲಿಂ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವಂತಿಲ್ಲ, ನೀಡಬಾರದು ಎಂಬ ಉದ್ದೇಶವನ್ನು ಹೊಂದಿದೆ ಎಂದು ಕಾಣುತ್ತಿದೆ. ಒಬ್ಬ ಮಹಿಳೆಯನ್ನು ಈ ರೀತಿ ಹೀನಾಯವಾಗಿ ಅಂತ್ಯಕಾಣಿಸಿದ್ದು ನಿಜಕ್ಕೂ ಪುರುಷ ಪ್ರಧಾನ ಸಮಾಜಕ್ಕೆ ಹೇಸಿಗೆ ತರುವಂತಹ ವಿಷಯ. ಪ್ರಜಾಪ್ರಭುತ್ವದ ಅಂತ್ಯ ಅನ್ನುವುದಕ್ಕಿಂತಲೂ ಮಹಿಳಾ ರಾಜಕೀಯದ ಅಂತ್ಯವೆಂದರೂ ತಪ್ಪಾಗದು. ಈ ಘಟಣೆ ಸೋನಿಯಾ ಗಾಂಧಿಯನ್ನು ಚಿಂತಿಸುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ...
ವಿಪರ್ಯಾಸವೆಂದರೆ ರಾಜಕಾರಣಿಗಳ ಹತ್ಯೆಗಳು ವರ್ಷಗಳಿಂದ ನಡೆಯುತ್ತಲೇ ಬಂದರೂ ಅಧಿಕಾರದ/ಖುರ್ಚಿಯ ಆಸೆ ರಾಜಕಾರಣಿಗಳಲ್ಲಿ ಕಡಿಮೆಯಾಗಿಲ್ಲ ಬದಲಾಗಿ ಅಧಿಕಾರದ ದಾಹ ಹೆಚ್ಚುತ್ತಿದೆ.

- veenadsouza ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ
__ಜಗತ್ತಿನ ಎಲ್ಲಾ ಸಂಗತಿಗಳನ್ನು ‘ಫೆಮಿನಿಸಂ’ನ ದೃಷ್ಟಿಕೋನದಿಂದ ಕಾಣುವ ಯತ್ನ ಅಷ್ಟು ಸಮಂಜಸವಲ್ಲ ಎಂಬುದು ನನ್ನ ಭಾವನೆ. ಏಕೆಂದರೆ, ಬೆನಜಿರ್ ಭುಟ್ಟೋ ಇತ್ತೀಚಿಗೆ ರಾಜಕೀಯಕ್ಕಿಳಿದವರಲ್ಲ. ಅವರು ಎರಡು ಬಾರಿ ಪಾಕಿಸ್ತಾನವೆಂಬ ಮುಸ್ಲಿಂ ರಾಷ್ಟ್ರದ ಪ್ರಧಾನಿಯಾಗಿದ್ದರು. ಆಗಿಲ್ಲದ ಪುರುಷ ಪ್ರಧಾನತೆಯ ವಾದ ಈಗೆಲ್ಲಿಂದ ಬಂದಿತು? ಮೇಲಾಗಿ ಭಾರತದಲ್ಲೂ ಇಂದಿರಾಗಾಂಧಿಯವರ ಹತ್ಯೆ ನಡೆದದ್ದು ಆಕೆ ಹೆಣ್ಣು ಎಂಬ ಕಾರಣಕ್ಕಾಗಿ ಅಲ್ಲ. ಅದಕ್ಕೆ ರಾಜಕೀಯ, ಧಾರ್ಮಿಕ ಅಂಶಗಳು ಕಾರಣವಾಗಿದ್ದವು.
ಸೋನಿಯಾ ಗಾಂಧಿಯವರಿಗೆ ಹೆದರಿಕೆಯೇ? ಹ್ಹ..ಹ್ಹ..
_____________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com