ನನ್ನೊಳಗೂ ಒಂದು ಮಾತಿದೆ
ನೂರೊಂದು ವಿಷಯಗಳನ್ನು ನಿಮ್ಮಲ್ಲಿ ಹೇಳಬೇಕೆಂದು ಬಯಸುತ್ತೇನೆ. ಸಮಯದ ಅಭಾವನೋ ನಿಮ್ಮ ಅದ್ರಷ್ಟನೋ ಸದ್ಯಕ್ಕಂತೂ ಅದೆಲ್ಲವನ್ನು ಹೇಳಲು ಸಾಧ್ಯವಾಗುತ್ತಿಲ್ಲ...
ತಾರಾ ಮತ್ತೆ ಕಿರುತೆರೆಗೆ ಯಾಕೆ ಬಂದಿರಬಹುದು?
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು ಅಷ್ಟು ಚೆನ್ನಾಗಿ ಯಾರೂ ಮಾಡಲಾರರು. ಇಷ್ಟೇಲ್ಲಾ ಇದ್ರೂ ತಾರಾ ಯಾಕೆ ಮತ್ತೆ ಕಿರುತೆರೆಗೆ ಪ್ರವೇಶಿಸಿದ್ದಾರೆ. ಅವರಿಗೆ ಅವಕಾಶಗಳ ಕೊರತೆಯಂತೂ ಖಂಡಿತ ಇಲ್ಲ.
ಜೀ ಕನ್ನಡ ಎನಾದರೂ ಮೋಡಿ ಮಾಡಿತೆ? ಅಥವಾ ಅದರ ‘ನಮ್ಮಾಪ್ಪಾಮ್ಮ’ ಎಂಬ ಕಾರ್ಯಕ್ರಮದ ವಸ್ತು ವಿಷಯವೇ ಅವರಿಗೆ ಸ್ಪೂರ್ತಿಯಾಯಿತೇ? ನಮ್ಮಾಪ್ಪಾಮ್ಮ ಎಂಬ ಜೀ ಕನ್ನಡದ ಕಾರ್ಯಕ್ರಮ ನಿಜಕ್ಕೂ ತಾರಾಳನ್ನು ಸೆಳೆದದ್ದಾದರೂ ಹೇಗೆ???????
ಗೊತ್ತಿಲ್ಲವಾದರೆ ಬೇಡ ಬಿಡಿ... ರಾತ್ರಿ ೮ ಗಂಟೆಗೆ ಪ್ರಸಾರವಾಗುವ ನಮ್ಮಾಪ್ಪಾಮ್ಮ ನೋಡಿದಿರಾ? ಅದು ಹೇಗನ್ನಿಸಿತು ಅಂಥವಾದರೂ ತಿಳಿಸಿರಿ

- veenadsouza ರವರ ಬ್ಲಾಗ್
- Login or register to post comments
- 304 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ತಾರಾ ಯಾಕೆ ಮತ್ತೆ ಕಿರುತೆರೆಗೆ?
ಗೊತ್ತಿಲ್ಲ. ಬಲ್ಲವನೇ ಬಲ್ಲ ಎಲ್ಲಬಲ್ಲಪ್ಪ