ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › veereshraya ರವರ ಬ್ಲಾಗ್

ಅನುವಾದದ ಬಗ್ಗೆ ಅಭಿಪ್ರಾಯಗಳು

December 7, 2006 - 10:44am — veereshraya

ದಯವಿಟ್ಟು ಯಾರೂ ಇದನ್ನು ವೈಯಕ್ತಿಕ ಮಟ್ಟದಲ್ಲಿ ತೆಗೆದುಕೊಳ್ಳಬಾರದು.
ತಂತ್ರಾಂಶಗಳನ್ನು ಕನ್ನಡೀಕರಿಸುವ ಪ್ರಯತ್ನ ನಡೆಯುತ್ತಿರುವದು ಸ್ವಾಗತಾರ್ಹ.
ಸಂಪದ ಸೇರುವದಕ್ಕೆ ಮೊದಲು ಈ ವಿಷಯಗಳು ತಿಳಿದೇ ಇರಲಿಲ್ಲ.
ಸಂಪದಕ್ಕೆ ಧನ್ಯವಾದಗಳು.
ಈ ತುರ್ಜುಮೆ ಕೆಲಸ ಮಾಡುವಾಗ ಈಗಾಗಲೇ ಬಳಸುವ ಪದಗಳ ಬದಲಿಗೆ ಇನ್ನಾವ ಪದಗಳನ್ನು ಬಳಸಿದರೆ ಚೆನ್ನಾಗಿರತ್ತೆ ಎನ್ನುವದನ್ನು ಇಲ್ಲಿ ಇನ್ನು ಮುಂದೆ ಪಟ್ಟಿ ಮಾಡುತ್ತೇನೆ.
ಇಲ್ಲಿ ಬರೆಯುವದೆಲ್ಲ ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಬೇರೆಯವರ ಕೆಲಸದ ಗುಣದೋಷಗಳನ್ನು ಪಟ್ಟಿ ಮಾಡುವ ಉದ್ದೇಶವಿಲ್ಲ.

backup copy - ಕಾದಿಟ್ಟ ಪ್ರತಿ.
firmware - ಸ್ಥಿರಾಂಶ, ಧೃಡಾಂಶ.
image - ಬಿಂಬ ಅಥವಾ ಪ್ರತಿಕೃತಿ ಪ್ರತಿಕ್ರುತಿಯೆನ್ನುವದು ತಪ್ಪು ಪ್ರಯೋಗ. ಬಿಂಬ, ಸರಳ ಮತ್ತು
ಕೇಳಲು ಚೆನ್ನಾಗಿರುವದರಿಂದ ನನ್ನ ಮೆಚ್ಚಿನ ಪದ.
sheet - ಹಾಳೆ
tab - ಅಂಕಣ, ನಿರಿಗೆ.

~.~
  • veereshraya ರವರ ಬ್ಲಾಗ್
  • Login or register to post comments
  • 562 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 7, 2006 - 11:40am — shreekant.mishrikoti

Re: ಅನುವಾದದ ಬಗ್ಗೆ ಅಭಿಪ್ರಾಯಗಳು

shreekant.mishrikoti's picture

ನಾನೂ ಈ ತಂತ್ರಾಂಶ ಅನುವಾದದಲ್ಲಿ ತೊಡಗಿಕೊಂಡಿದ್ದೇನೆ.

ನೀವು ಈ ವಿಷಯವನ್ನು ಎತ್ತಿರುವದು ತುಂಬ ಸಕಾಲಿಕವಾಗಿದೆ.

ಏಕೆಂದರೆ ಟ್ಯಾಬ್ ಗೆ ಸೂಕ್ತ ಕನ್ನಡಪದ ಬೇಕಾಗಿದೆ.

ನಿರ್ದಿಷ್ಟಾಂತರ ಶಬ್ದ ಸಂಸ್ಕಾರಕ (word editor) ಸಂದರ್ಭದಲ್ಲಿ ಅಂದರೆ ನಾವು ಟೈಪ್ ಮಾಡುವಾಗ Tab ಕೀಲಿ ಒತ್ತುವದರಿಂದ ನಿರ್ದಿಷ್ಟ ಅಂತರ ಮುಂದೆ ಹೋಗುವದರಿಂದ ಸರಿಯಾದ ಶಬ್ದ ಎನ್ನಬಹುದು.

ಆದರೆ ಕೆಲವು ಡೈಲಾಗ್ ಬಾಕ್ಸ್ ಗಳಲ್ಲಿ ಟ್ಯಾಬ್ ಅಂದರೆ ಬೇರೆ ಬೇರೆ ಪುಟಗಳ ತಲೆಬರಹ ವಾಗಿರುತ್ತದೆ. ಈ ಸಂದರ್ಭದಲ್ಲಿ ಹಾಳೆ/ಪುಟ ಎನ್ನಬಹುದೇನೋ?
ಹೀಗಾಗಿ ಎರಡೂ ಶಬ್ದಗಳನ್ನು ಸಂದರ್ಭಾನುಸಾರ ಉಪಯೋಗಿಸಬೇಕೇನೋ ?

ನಿಮ್ಮ ಅಭಿಪ್ರಾಯ ತಿಳಿಸಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 7, 2006 - 1:14pm — Sunil Jayaprakash

ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿಗಳೇ, ನನ್ನ ಅನಿಸಿಕೆಯನ್ನು ಹಾಕುತ್ತಿದ್ದೇನೆ.

firefox, EditPlus, Mozilla, IE ಇಂತಹ ಸಾಫ್ಟವೇರ್ಗಳಲ್ಲಿ ಬರುವ tabಗೆ ಸಮನಾಗಿ, ಕನ್ನಡದಲ್ಲಿ (ಹಾಗು ತುಳುವಿನಲ್ಲೂ ಕೂಡ) ತಿಣಿ, ತುಣುಕು, ಅಥವಾ ಅಂಕಣ ಎಂದು ಕರೆಯಬಹುದು.

ಅರ್ಥದ ದೃಷ್ಟಿಯಲ್ಲಿ, ತಿಣಿ ಎಂಬುದೇ ಸರಿಯಾದ ಬಳಕೆಯಾದರೂ ಅಂಕಣ ಈಗಾಗಲೇ ಜನರಿಗೆ ಅರ್ಥವಾಗುವುದರಿಂದ ಅದನ್ನೂ ಬಳಸಬಹುದು.

ಇನ್ನೊಂದು ಮಾತು, ನಾನು ನಮ್ಮ ಪ್ರೀತಿಯ ನಾಡೋಜ, ಪ್ರೋ.ಜಿ.ವಿ ಅವರ ನಿಘಂಟಿಗಿಂತ, Dravidian Etymologyಯನ್ನು ಹೆಚ್ಚು ಬಳಸುತ್ತೇನೆ. Dravidian Etymologyಯಲ್ಲಿರುವ ಪದ, ಪಲುಕುಗಳು ಸಂಸ್ಕೃತವಲ್ಲದವರಿಗೂ ಹತ್ತಿರವಾಗಿದೆ.

Word Editor ಗೆ "ಶಬ್ದ ಸಂಸ್ಕಾರಕ" ಎನ್ನಬೇಕಾದರೆ ಒಬ್ಬ ಕನ್ನಡಿಗ(ತುಳುವಿನವರೂ ಕೂಡ) ಕನ್ನಡ, ಸಂಸ್ಕೃತ ಎರಡನ್ನೂ ಕಲಿಯಬೇಕು.

ಇಂತಹ ಇಂಗ್ಲೀಷ್ ಮತ್ತು ಸಂಸ್ಕೃತಗಳ ನಡುವೆ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದಾಗ, ಜನರು ಇಂಗ್ಲೀಷನ್ನೇ ಆಯ್ಕೆ ಮಾಡುತ್ತಾರೆ. ಶಬ್ದ ಸಂಸ್ಕಾರಕ ಎನ್ನುವುದಕ್ಕಿಂತ Word Processorಏ ಹಿತವಾಗುತ್ತದೆ. ಶಬ್ದ ಸಂಸ್ಕಾರಕ ಕನ್ನಡವೇ ಅಲ್ಲದಿದ್ದರೂ, ಜನರು ಕನ್ನಡ ಸರಿಯಿಲ್ಲ ಎಂದು ಹೇಳಿದಂತಾಗುತ್ತದೆ.

ಯಾವುದಕ್ಕೂ, ತಿಣಿ ಮತ್ತು ಅಂಕಣ ಎಂದರೇನು ಎಂಬುದನ್ನು ಒಮ್ಮೆ ನೋಡಿ, ದಯವಿಟ್ಟು. ನಿಮಗೆ ಖಂಡಿತ ನಿರಾಸೆಯಾಗುವುದಿಲ್ಲ, ನನ್ನನ್ ನಂಬಿ, ಪ್ಲೀಸ್, ಪ್ಲೀಸ್. (ಸಮಾಜ ಸೇವಕಿ, ಲಲಿತಾಂಬ ಶೈಲಿಯಲ್ಲಿ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 11:08am — veereshraya

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

veereshraya's picture

ನೀವು ಹೇಳಿದಂತೆ ಅಂಕಣ ಸೊಕ್ತವೆನ್ನಿಸುತ್ತೆ. ತಿಣಿ ಸರಿಯಿರಬಹುದಾದರೂ ನನ್ನ ತೂಗುಪಟ್ಟಿಯಂತೆ ಅದು ಸಹ.(ದ.ಕ ಬಿಟ್ಟರೆ ಬೇರೆ ಕಡೆ) ಹೆಚ್ಚು ಬಳಕೆಯಲ್ಲಿಲ್ಲ. ಇನ್ನು ಮುಂದೆ ನಾನು ಎಲ್ಲ ತುರ್ಜುಮೆಗಳಲ್ಲಿ ಅಂಕಣವನ್ನೇ ಬಳಸುತ್ತೆನೆ.
ಪುಟ ನನ್ನ ಅಭಿಪ್ರಾಯದಲ್ಲಿ ಅಷ್ಟು ಸರಿಯಾಗದು. ಅದನ್ನು Page(Web Page, JSP..) ಬದಲು ಬಳಸಬಹುದಲ್ಲವೇ?

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 7:42pm — shreekant.mishrikoti

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ...

shreekant.mishrikoti's picture

ಅಯ್ಯೋ ....

ಕಷ್ಟಪಟ್ಟು ಒಂದೊಂದೇ ಅಕ್ಷರ ಹುಡುಕಿ ಟೈಪು ಮಾಡಿದ್ದು - formatting options ನೋಡ ಹೋಗಿ ಕಳೆದು ಹೋಯಿತಯ್ಯೋ ...

ಇರಲಿ . ಉಪಾಯವಿಲ್ಲ.

ಎಲ್ಲೋ ಓದಿದೆ . ಲಿಂಕ್ ನಿಮಗೆ ಗೊತ್ತಿದ್ದರೆ ತಿಳಿಸಿ. ಬಹಳ ಹಿಂದೆ EEG/ ECG ಕುರಿತು ಕನ್ನಡದಲ್ಲಿ ಲೇಖನ ಬರೆವವರು ವಿದುನ್ಮಸ್ತಿಷ್ಕ .... ಎಂದೇನೋ ಪದ ಬಳಸಿದಾಗ ಇಂಥವೇ ಆಕ್ಷೇಪಗಳು ಬಂದಾಗ ಅವರು ಹೇಳಿದರು. ನಮ್ಮ ಜನಕ್ಕೆ ಇಂಗ್ಲೀಷಿಗಿಂತ ಸಂಸ್ಕೃತ ಹತ್ತಿರ . ಜನಕ್ಕೆ ಇಂಗ್ಲೀಷ್
ಹತ್ತಿರವಾಗಿ ಅದು ಅವರಿಗೆ ತಿಳಿವ ಕಾಲಕ್ಕೆ ಇಂಗ್ಲೀಷ್ ಶಬ್ದವನ್ನೇ ಇಟ್ಟುಕೊಳ್ಳಲಿ. ಆಗ ಈ ಶಬ್ದವನ್ನು ಕ್.ಬು.ಗೆ ಹಾಕಲಿ. ಬೇಸರವಿಲ್ಲ. ಎಂದರು.
word editor ಗೂ ಹಾಗೆಯೇ editor ಎಷ್ಟು ಕನ್ನಡಿಗರಿಗೆ ಗೊತ್ತು? ಪತ್ರಿಕೆಗಳ ಸಂಪಾದಕ ಎಂದುಕೊಂಡಾರು. ಸಂಸ್ಕಾರಕ ಎಂದಾಗ ಸಂಸ್ಕಾರ, ಸಂಸ್ಕರಿಸು ಗೊತ್ತಿರುತ್ತದೆ. ಅದಕ್ಕೆ ಸಂಬಂಧಪಟ್ಟದ್ದು ಎಂದು ಊಹಿಸಿಯಾರು.

ಇರಲಿ. ಅಂದ ಹಾಗೆ - ನೀವು ಯಾವ ಶಬ್ದಕ್ಕೆ ಈ ವರೆಗೆ ಕನ್ನಡಶಬ್ದಕೋಶ ನೋಡಿದ್ದೀರಿ ತಿಳಿಸುವಿರಾ? ( ಈ ಪ್ರಶ್ನೆ ಆಂಡಯ್ಯನ ಅಭಿಮಾನಿಗಳಿಗೆ , ಸಂಸ್ಕೃತ ಪಂಡಿತರಿಗೆ , ಮತ್ತು ದ್ರಾವಿಡಭಾಷಾ ಅಭ್ಹ್ಯಾಸಿಗಳಿಗಲ್ಲ) . ನವು ಹೊಸ ಶಬ್ದ ಹೇಗೆ ಕಲಿಯುತ್ತೇವೆ? ಡಿಕ್ಷನರಿ ನೋಡಿ ಕಲಿಯುವದು ತುಂಬಾ ಅಪರೂಪ. ಅಲ್ಲವೇ? ಬೆರಳು ನೋಯುತ್ತಿದೆ.. ವಿವರಿಸಲಾರೆ.

ಇಂಗ್ಲೀಷ್ ಅನ್ನೇ ಇಟ್ಟುಕೊಳ್ಳೋಣ ಎಂದರೆ ಇಂಗ್ಲೀಷನ್ನೇ ಕಲಿತು ಕಂಪ್ಯೂಟರ್ ಬಳಸಿದರಾಯಿತು.ಕಂಪ್ಯೂಟರ್ ನ ಕನ್ನಡೀಕರಣ ಏಕೆ? (ಇಂಥ ಮಾತನ್ನು ಸಂಸ್ಕೃತಕ್ಕೆ ಸಂಬಂಧಪಟ್ಟ ಹಾಗೆ ೧೨ನೇ ಶತಮಾನದಲ್ಲೇ ನಯಸೇನನು ಹೇಳಿದ್ದಾನೆ). ನಮ್ಮ ಗುರಿ "ಸಾಮಾನ್ಯ ಕನ್ನಡ ಮನುಷ್ಯನೂ ಕಂಪ್ಯೂಟರ್ ಅನ್ನು ತನ್ನ ಅನುಕೂಲಕ್ಕೆ , ಸುಖವೃದ್ಧಿಗೆ ಬಳಸುವಂತಾಗಬೇಕು" ಎಂಬುದಾಗಬೇಕೇ ವಿನಹ ಯಾವದೇ ಮಡಿವಂತಿಕೆಯಾಗಲೀ , ತೀವ್ರಭಾವನೆಯಾಗಲೀ ಸಲ್ಲದು. ಅದಕ್ಕೆ ಕನ್ನಡಿಗನಿಗೆ ಸುಲಭವಾಗಿ ಅರ್ಥವಾಗುವ ಶಬ್ದ ಬಳಸೋಣ. ಅದು ಯಾವದೇ ಮೂಲ ಹೊಂದಿರಲಿ. ತಿಣಿ ಯಂತಹ ಶಬ್ದ ಎಷ್ಟು ಕನ್ನಡ ಜನಕ್ಕೆ ಗೊತ್ತು? (ನನಗಂತೂ ಗೊತ್ತಿಲ್ಲ) ಅದನ್ನು ನೋಡಲು ಡಿಕ್ಷನರಿ ನೋಡಬೇಕೇ ? ಎಷ್ಟು ಜನ ಕನ್ನಡ ಡಿಕ್ಷನರಿ ಇಟ್ಟುಕೊಂಡಿದ್ದಾರೆ? ಎಷ್ಟು ಕನ್ನಡ ಡಿಕ್ಷನರಿಗಳಲ್ಲಿ ಈ ಶಬ್ದದ ಅರ್ಥ ಇದೆ? ಅಂತರ್ಜಾಲದಲ್ಲಿನ ದ್ರಾವಿಡಿಯನ್ ಶಬ್ದಕೋಶವನ್ನು ಇಂಗ್ಲೀಷ್ ಮತ್ತು ಕಂಪ್ಯೂಟರ್ ಬಳಕೆ ಅರಿಯದ ಕನ್ನಡಿಗ ಹೇಗೆ
ನೋಡಿಯಾನು ?

ನಮ್ಮ ಗುರಿ "ಸಾಮಾನ್ಯ ಕನ್ನಡ ಮನುಷ್ಯನೂ ಕಂಪ್ಯೂಟರ್ ಅನ್ನು ತನ್ನ ಅನುಕೂಲಕ್ಕೆ , ಸುಖವೃದ್ಧಿಗೆ ಬಳಸುವಂತಾಗಬೇಕು" ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳೋಣ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 7:51pm — shreekant.mishrikoti

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ...

shreekant.mishrikoti's picture

ಇದನ್ನು ಇನೊಮ್ಮೆ ನೋಡಿ.

http://sampada.net/blog/kannadiga_1956/08/12/2006/2540

ಎರಡು ದೃಷ್ಟಿಯಿಂದ ಈ ಲೇಖನ ನೋಡಬಹುದು .
ಕನ್ನಡದ ಗತಿ ( ಎರದೂ ಅರ್ಥದಲ್ಲಿ - ಗತಿ -ಕನ್ನಡ ಭಾಷೆಯ ದಿಕ್ಕು ಎಂಬರ್ಥದಲ್ಲಿ ಮತ್ತು ಕನ್ನಡಕ್ಕೊದಗಿದ ದುರ್ಗತಿ ಎಂಬ ಅರ್ಥದಲ್ಲಿ ) ಹೀಗಿರುವಾಗ ನಾವು ನಮ್ಮ ಶಕ್ತಿಯನ್ನು ಅನಗತ್ಯ ವಾದ-ವಿವಾದಗಳಲ್ಲಿ ಹಾಳು ಮಾದಿಕೊಳ್ಲುತ್ತಿದ್ದೇವೆ. ಅಲ್ಲವೇ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2006 - 12:19pm — Sunil Jayaprakash

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ...

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿ wrote:
ಹೀಗಿರುವಾಗ ನಾವು ನಮ್ಮ ಶಕ್ತಿಯನ್ನು ಅನಗತ್ಯ ವಾದ-ವಿವಾದಗಳಲ್ಲಿ ಹಾಳು ಮಾದಿಕೊಳ್ಲುತ್ತಿದ್ದೇವೆ

ಸರಿಯಾದ ಮಾತು ಮಿಶ್ರಿಕೋಟಿಗಳೇ. ಕನ್ನಡಿಗರಿಗೆ ಕೆಲಸ ಸಿಗದ ಹೊರತು ಭಾಷೆಯ ಬೆಳವಣಿಗೆ ಎನ್ನುವುದು ದೂರದ ಮಾತು. ಹಿಂಜರಿಯುವುದನ್ನು ಬಿಟ್ಟಾಗಲೇ ನಾವು ಮುಂದೆ ಬರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2006 - 1:06pm — Sunil Jayaprakash

ಉ: ಎಲ್ಲರೊಳಗೊಂದಾಗು ಮಂಕುತಿಮ್ಮ.

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿ wrote:
ಕಷ್ಟಪಟ್ಟು ಒಂದೊಂದೇ ಅಕ್ಷರ ಹುಡುಕಿ ಟೈಪು ಮಾಡಿದ್ದು - formatting options ನೋಡ ಹೋಗಿ ಕಳೆದು ಹೋಯಿತಯ್ಯೋ ...

ಹೀಗಾಗಿದ್ದಕ್ಕೆ ಕ್ಷಮಿಸಿ, ಮಿಶ್ರಿಕೋಟಿಗಳೇ. ನನಗೂ ಕೆಲವೊಮ್ಮೆ ಹೀಗೆ ಆಗುತ್ತಿರುತ್ತದೆ. ಹಾಗಾಗಿ ಈ ನಡುವೆ ಒಂದು ಅಲಿಖಿತ ನಿಯಮ ಪಾಲಿಸುತ್ತಿದ್ದೇನೆ. ಕಾಮೆಂಟು ದೊಡ್ಡದಾಗಿದ್ದರೆ, ಅಥವಾ ಅದರಲ್ಲಿ ಲಿಂಕುಗಳನ್ನು ಹಾಕುವುದಿದ್ದರೆ, ನೋಟ್ ಪ್ಹಾಡ್ ನಲ್ಲಿ ಮೊದಲು ಬರೆದ ಆಮೇಲೆ ಹಾಕುತ್ತೇನೆ.

ಶ್ರೀಕಾಂತ ಮಿಶ್ರಿಕೋಟಿ wrote:

ಇರಲಿ. ಅಂದ ಹಾಗೆ - ನೀವು ಯಾವ ಶಬ್ದಕ್ಕೆ ಈ ವರೆಗೆ ಕನ್ನಡಶಬ್ದಕೋಶ ನೋಡಿದ್ದೀರಿ ತಿಳಿಸುವಿರಾ? ( ಈ ಪ್ರಶ್ನೆ ಆಂಡಯ್ಯನ ಅಭಿಮಾನಿಗಳಿಗೆ , ಸಂಸ್ಕೃತ ಪಂಡಿತರಿಗೆ , ಮತ್ತು ದ್ರಾವಿಡಭಾಷಾ ಅಭ್ಹ್ಯಾಸಿಗಳಿಗಲ್ಲ)

ಅಯ್ಯೋ, ಮಿಶ್ರಿಕೋಟಿಗಳೇ ನೀವು ಮಾಡಿರುವಷ್ಟು ಕನ್ನಡೀಕರಣವನ್ನು ನಾನು ಖಂಡಿತವಾಗಿಯೂ ಮಾಡಿಲ್ಲ. ಆರ್ಕುಟ್ಟಿನಲ್ಲಿ ಅಚ್ಚ ಕನ್ನಡ(ಕ್ಲಿಕ್ ಮಾಡಿ ನೋಡಿ) ಎಂಬ ಗುಂಪಿದೆ. ಅಲ್ಲಿ ಬರುವ ಪ್ರಶ್ನೆಗಳಿಗೆ, ಮತ್ತು ನನ್ನದೇ ಕೆಲವು ಸಹಜ ಕುತೂಹಲ ಅನುಮಾನಗಳಿಗೆ ಮಾತ್ರವೇ ದ್ರಾವಿಡಪದ ಕೋಶವನ್ನು(ಕ್ಲಿಕ್ ಮಾಡಿ ನೋಡಿ) ಹುಡುಕುತ್ತೇನೆ. ಕನ್ನಡದ್ದೇ ಪದಗಳು ಬೇಕೆಂದಾಗ ನಾನು Dravidian Etymologyಯನ್ನು ನೋಡುವುದು. ಮಾತನಾಡುವಾಗ, ಬರೆಯುವಾಗ, ನಾನೂ ಕೂಡ ಎಲ್ಲರಂತೆ ನಿತ್ಯಬಳಕೆಯ ಪದಗಳನ್ನೇ ಬಳಸುವುದು, ಅದರಲ್ಲೂ ನಮ್ಮ ಪ್ರೀತಿಯ ನಾಡೋಜ ಪ್ರೋ.ಜಿ.ವಿಯವರ ನಿಘಂಟು, ಮತ್ತು ಇಗೋ ಕನ್ನಡಗಳು ಹತ್ತಿರವೆನಿಸುತ್ತವೆ.

ಹಾಗೆಯೇ, ನೆನ್ನೆಯಷ್ಟೇ ಪಂಡಿತ ಕವಲಿ (ನಿಮಗಿವರು ತಿಳಿದಿರಬಹುದು, ಕ್ಲಿಕ್ ಮಾಡಿ ನೋಡಿ) ಎಂಬುವರ "ಕಸ್ತೂರೀ ಕೋಶ" ಎಂಬ ಗ್ರಂಥವನ್ನು "ಅಂಕಿತ ಪುಸ್ತಕದಿಂದ" ಕೊಂಡು ತಂದೆ. ಮೊದಲ ಹತ್ತು ಪುಟಗಳನ್ನು ಓದುವಷ್ಟರಲ್ಲಿಯೇ ನನ್ನ ಕನ್ನಡದ ತಿಳಿವಳಿಕೆ ಬಯಲಾಗಿ ಹೋಗಿದೆ. ಶ್ಲೋಕ, ವೇದ ಮಂತ್ರಗಳನ್ನು ಕಲಿಯಲು ಸಂಸ್ಕತ ಕಲಿಯುತ್ತೇವೆ, GRE ಬರೆಯಲು ಇಂಗ್ಲೀಷ್ ಕಲಿಯುತ್ತೇವೆ, ಹಾಗೆಯೇ "ನಮ್ಮ ಭಾಷೆ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದಿರಬಹುದು, ಆದರೆ ನಮ್ಮ ಕನ್ನಡ ನುಡಿಯಲ್ಲಿಯೂ ಪಲುಕುಗಳಿವೆ" ಎಂಬುದನ್ನು ತಿಳಿದು ಹೆಮ್ಮೆಪಡುವುದಕ್ಕಾಗಿ Dravidian Etymology ಬಳಸುತ್ತೇನೆ, ಅಷ್ಟೇ.

ಅಚ್ಚ ಕನ್ನಡದಲ್ಲಿಯೂ ಕೂಡ ಪದಗಳನ್ನು ರೂಪಿಸಬಹುದು ಎಂದು ತಿಳಿದಾಗ, ವೈಯಕ್ತಿಕವಾಗಿ ತುಂಬಾ ಸಂತೋಷವಾಗುತ್ತದೆ. ಅದನ್ನು Global ಹೊಳೆಯಲ್ಲಿ ಕೊಚ್ಚಿಹೋಗಿರುವ ನಗರಗಳಲ್ಲಿ ನಾವು ನಿತ್ಯವೂ ಬಳಸುತ್ತೆವೆಯೋ, ಇಲ್ಲವೋ ಅದು ಬೇರೆ ವಿಚಾರ, ಆದರೆ ಅಚ್ಚ ಕನ್ನಡವೂ ಕೂಡ "ಒರೆಗಳ ದೊಡ್ಡ ಕಣಜ (ಒತ್ತಿ ನೋಡಿ)" ಎಂಬುದನ್ನು ತಿಳಿದಾಗ, ನಮ್ಮ ನುಡಿಯ ಬಗ್ಗೆ ಮತ್ತಷ್ಟು ಅಭಿಮಾನ ಉಂಟಾಗುತ್ತದೆ, ನಮ್ಮ ನುಡಿಯ ಬಗ್ಗೆ ಮತ್ತಷ್ಟು ಹೆಮ್ಮೆಯೆನಿಸುತ್ತದೆ. ಇದರಲ್ಲಿ ಬೇರೆಯವರ ಮೇಲೆ ಕೋಪ, ತಿರಸ್ಕಾರಗಳಾಗಲೀ ನನ್ನಲ್ಲಿ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 1:49am — hpn

Re: ಅನುವಾದದ ಬಗ್ಗೆ ಅಭಿಪ್ರಾಯಗಳು

hpn's picture

Tab "ಟ್ಯಾಬ್ " ಆಗಿಯೇ ಇದ್ದರೆ ಒಳ್ಳೆಯದಲ್ಲವೆ? ಹೊಸತೊಂದು ನಾಮಕರಣ ಮಾಡಿದರೆ ಜನರಿಗೆ ಅರ್ಥವಾಗದೇ ಹೋದೀತು.

ಮತ್ತೊಂದು ವಿಷಯ - ಒಬ್ಬರಿಗೆ ಸರಿಯೆನಿಸುವ ಪ್ರಯೋಗ ಮತ್ತೊಬ್ಬರಿಗೆ ಸರಿಯೆನಿಸದು. ತಾಂತ್ರಿಕವಾಗಿ ನೂರೆಂಟು ಹೊಸ ಪದಗಳಿರುವ ಸಂದರ್ಭದಲ್ಲಿ ಪ್ರತಿಯೊಂದಕ್ಕೂ ಹೊಸ ಪದ ಕಂಡುಕೊಳ್ಳುವ ಬದಲು ಇಂಗ್ಲೀಷ್ ಪದವನ್ನೇ ಬಳ್ಸೋದು ಉತ್ತಮ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 1:47pm — veereshraya

Re: ಅನುವಾದದ ಬಗ್ಗೆ ಅಭಿಪ್ರಾಯಗಳು

veereshraya's picture

ಸಮಾನವೆನಿಸುವ ಪದಗಳಿಲ್ಲದಾಗ ಇಂಗ್ಲೀಷ ಮೊರೆ ಹೋಗುವದು ಸರಿಯಾಗಬಹುದು.
ಹೊಸ ಪದಗಳನ್ನು ಹುಟ್ಟುಹಾಕುವ ಸಮಯದಲ್ಲಿ ನಿಮ್ಮ ಮಾತು ನನಗೆ ಒಪ್ಪಿಗೆ. ಯಾಕೆಂದರೆ ಕ್ಲಿಷ್ಟವಾದ ಹೊಸ ಪದಕ್ಕಿಂತ ಸರಳ ಇಂಗ್ಲೀಷ ಪದವೇ ಮೇಲು.

ಆದರೆ ಈಗಾಗಲೆ ದಿನಬಳಕೆಯಲ್ಲಿ ಸರಿಯಾದ ಪದಗಳಿದ್ದಲ್ಲಿ ಅವನ್ನೆ ಬಳಸುವದು ಸರಿಯಲ್ಲವೇ?
ಸದ್ಯದ ಮಟ್ಟಿಗೆ ಗಣಕವೆನ್ನುವದು ಇಂಗ್ಲೀಷು ಬಲ್ಲ ಗಣಕ ಸಾಕ್ಷರರ ವಸ್ತು.
ಇದು ಬರುಬರುತ್ತ ಶಾಲಾಮಕ್ಕಳ ಸಂಗಾತಿಯಾಗಿ, ಅಂಗಡಿಕಾರರ ಖಾತೆ/ಕಿರ್ದಿಯಾದಗ ತಂತ್ರಾಂಶಗಳಲ್ಲಿ ವಿಶೇಷವಾಗಿ 'UI/GUI'ನಲ್ಲಿ ಕನ್ನಡವಿರುವದೇ ಸರಿಯೆನ್ನಿಸುತ್ತೆ.

ಹೀಗಾಗಿ tabನ್ನು ಅಂಕಣವಾಗಿಸುವದು ಸರಿ ಅನ್ಸುತ್ತೆ. ಯಾಕೆಂದರೆ ಅಂಕಣ ಸರಳವಾಗಿಯೂ ಇದೆ ದಿನಬಳಕೆಯಲ್ಲಿಯೂ ಇದೆ.

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 11:38am — ಶಶಾಂಕ

Re: ಅನುವಾದದ ಬಗ್ಗೆ ಅಭಿಪ್ರಾಯಗಳು

ಶಶಾಂಕ's picture

Softwareಗೆ ತಂತ್ರಾಂಶ ಮತ್ತು Internetಗೆ ಅಂತರ್ಜಾಲ ಎಂಬ ಪದಗಳನ್ನು ಬಿಟ್ಟು, ನಾನು ಬೇರೆ ಯಾವುದೇ ಪದಗಳನ್ನು ಒಪ್ಕೊಳ್ಳೋಕ್ಕೆ ತಯಾರಿಲ್ಲ.

ಯಾಕೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ತಜುರ್ಮೆ ಮಾಡಲು ಕಷ್ಟ ಪಡ್ತಿದೀರ ಅಂತ ಗೊತ್ತಾಗ್ತಿಲ್ಲ?

ತಜುರ್ಮೆ ಮಾಡೋದಿದ್ರೆ, ಆಡು ಭಾಷೆಯಲ್ಲಿರೋ ಪದಗಳನ್ನ ಉಪಯೋಗಿಸಬೇಕೇ ಹೊರತು, ಪ್ರತಿ ಸಲ ಅಂತರ್ಜಾಲಕ್ಕೆ ಹೋದಾಗ ಒಂದು ನಿಘಂಟು ಪಕ್ಕದಲ್ಲಿ ಇಟ್ಕೊಳ್ಳೊ ಹಾಗೆ ಆಗಬಾರದು. ಜೊತೆಗೆ ಒಂದಿಬ್ರು ತಜುರ್ಮೆ ಮಾಡಿದ್ದನ್ನ ಬೇರೆಯವರ ಮೇಲೆ ಹೇರೋಕ್ಕಾಗಲ್ಲ. ಈ ಕೆಲಸ ಸಾವಿರಾರು ಜನರಿಂದ ಆಗಬೇಕಾದ್ದು.

ಇಲ್ಲಿ ಕೆಲಸ ಶುರು ಆಗಿದೆ ಆದರೆ ಪೈನಲ್‌ ಡಿಸಿಶನ್‌ ತಗೋಳ್ಳೋ ಹಕ್ಕು ನಮಗೆ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 6:07pm — Sunil Jayaprakash

ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

Sunil Jayaprakash's picture

ಶಶಾಂಕ wrote:
ತಜುರ್ಮೆ ಮಾಡೋದಿದ್ರೆ, ಆಡು ಭಾಷೆಯಲ್ಲಿರೋ ಪದಗಳನ್ನ ಉಪಯೋಗಿಸಬೇಕೇ ಹೊರತು, ಪ್ರತಿ ಸಲ ಅಂತರ್ಜಾಲಕ್ಕೆ ಹೋದಾಗ ಒಂದು ನಿಘಂಟು ಪಕ್ಕದಲ್ಲಿ ಇಟ್ಕೊಳ್ಳೊ ಹಾಗೆ ಆಗಬಾರದು.

ಈಗ ಆಗಿರೋದೇ ಹೀಗೆ. ಒಬ್ಬ ಕನ್ನಡಿಗ ಇಂದು ಕಂಪ್ಯೂಟರ್ ಬಳಸಬೇಕೆಂದರೆ, ಅವನು ಸಂಸ್ಕೃತ ನಿಘಂಟನ್ನು ಕೈಲಿ ಹಿಡಿದು ಪುಟಗಳನ್ನು ತಿರುವಿಹಾಕಬೇಕು. ಪಾಪ ಅವನಿಗೆ ತಿಳಿದಿರುವುದಿಲ್ಲ, ಅಂತರ್ಜಾಲ, ತಂತ್ರಾಂಶ, ಯಂತ್ರಾಂಶ ಎನ್ನುವುದು ಕನ್ನಡ ಅಲ್ಲವೇ ಅಲ್ಲ ಎಂಬುದು. ಈ ಪದಗಳನ್ನು ಹುಟ್ಟುಹಾಕಿದ ದಿನಕ್ಕೂ, ಇಂದಿನ ದಿನಕ್ಕೂ ತುಂಬಾ ವ್ಯತ್ಯಾಸವಿದೆ. ಅಂತರ್ಜಾಲ (ಅನ್ತರ್ಜಾಲ) ಎನ್ನುವುದಕ್ಕಿಂತ ಇನ್ಟರ್ನೆಟ್ ಎನ್ನುವುದೇ ಹತ್ತಿರವಾಗುತ್ತದೆ. ಯಂತ್ರಾಂಶ(ಯನ್ತ್ರಾಂಶ) ಎನ್ನುವುದಕ್ಕಿಂತ ಹಾರ್ಡವೇರ್ ಎನ್ನುವುದೇ ಸುಲಭ(easy). ಅಲಂಕಾರ, ವ್ಯಾಕರಣಗಳನ್ನು ಗಣನೆಗೆ ತೆಗೆದುಕೊಂಡರೂ ಕೂಡ ಇನ್ಟರ್ನೆಟ್ಟೇ ಸುಲಭ.

ಅಂತರ್ಜಾಲ, ತಂತ್ರಾಂಶ, ಯಂತ್ರಾಂಶ ಎಂಬ ಪಲುಕುಗಳು ಆಡು ನುಡಿಯಲ್ಲಿ ಎಂದೂ ಇರಲಿಲ್ಲ. ಹಾಗಾಗಿ ಹೊಸದಾದ ಒರೆಗಳನ್ನು ಹೆಕ್ಕಿ ತೆಗೆಯಲು, ಕಷ್ಟವಾದರೂ ಪರವಾಗಿಲ್ಲ, ನಾನು Dravidian Etymologyಯನ್ನೇ ಹೆಚ್ಚು ಬಳಸುತ್ತೇನೆ. ಕಷ್ಟವಾದ ಸಂಸ್ಕೃತ ಪದಗಳನ್ನು, ಸಂಸ್ಕೃತವಾಗಿಯೇ ಸ್ವೀಕರಿಸುವುದು ಒಳ್ಳೆಯದು, ಕನ್ನಡವಾಗಿ ಬರಮಾಡಿಕೊಂಡರೆ ಅದನ್ನು ಪಂಡಿತರು ಸ್ವೀಕರಿಸತ್ತಾರೆಯೇ ಹೊರತು ದಿನವೂ ಅವುಗಳನ್ನು ಬಳಸುವ ಜನರು ಅದನ್ನು ಬಳಸುವುದೇ ಇಲ್ಲ. ಜನರು ಯಾವತ್ತಿದ್ದರೂ ಕೂಡ ಯಾವುದು ಸುಲಭವೋ ಅದನ್ನು ಬಳಸುತ್ತಾರೆ. ಆದರೆ ನಾವು ಕನ್ನಡವು ಸಂಸ್ಕೃತಕ್ಕಿಂತ ಅಥವಾ ಇಂಗ್ಲೀಷಿಗಿಂತ ಸರಳ ಎಂದು ತೋರಿಸಿಕೊಡುವ ಪ್ರಯತ್ನವನ್ನೇ ಮಾಡುವುದಿಲ್ಲ. ಒಮ್ಮೆ ಜತುನಗೈದರೆ, ಹೌದು! ಕನ್ನಡವು ಎಷ್ಟು ಸುಲಭ ಎಂದು ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಕನ್ನಡ ಕನ್ನಡ! ಹಾ ಸವಿಗನ್ನಡ ಕನ್ನಡದಲ್ಲಿ ಹರಿ ಬರೆಯುವನು, ಕನ್ನಡದಲಿ ಹರ ತಿರಿಯುವನು, ಕನ್ನಡದಲ್ಲಿಯೇ ಬಿನ್ನಹಗೈದೊಡೆ, ಹರಿ ವರಗಳ ಮಳೆ ತಾ ಕರೆಯುವನ್ನು ಎಂದು ಕುವೆಂಪುರವರು ಹೇಳಿದ್ದರೂ, ಎಷ್ಟೋ ಪಂಡಿತರು ಇಂದಿಗೂ ಕೂಡ, ಕನ್ನಡವು ಗ್ರಾಮ್ಯ ಭಾಷೆ ಎಂದು ಜರಿದು ಬಿಡುತ್ತಾರೆ.

ಸಂಸ್ಕೃತದ ಪದಗಳು ಕಷ್ಟವೆನಿಸಿದಾಗ, ಕಷ್ಟವಾದರೂ ಪರವಾಗಿಲ್ಲ, ಸರಳವಾಗಿರುವ ಕನ್ನಡದ್ದೇ ಪದವನ್ನು ಹುಡುಕಬೇಕು, ಹುಟ್ಟಿಸಬೇಕು. ಇಲ್ಲ, ಅದು ನಮ್ಮ ಕೈಲಿ ಆಗದಿದ್ದರೆ, ಇಂಗ್ಲೀಷನ್ನೇ ಸ್ವೀಕರಿಸಬೇಕು.

ಒಮ್ಮೆ ನಾನು ಶಂಕರಾಚಾರ್ಯರ ವಿವೇಕ ಚೂಡಾಮಣಿ ಎಂಬ ಗ್ರಂಥ ಓದುತ್ತಿದೆ. ಅದರಲ್ಲಿ
"....ಸಮ್ಯಕ್ ದರ್ಶನ ನಿಷ್ಠಯಾ" ಎಂಬ ಶ್ಲೋಕ ಬರುತ್ತದೆ. ಅದರ ಅನುವಾದ ಹೇಗೆ ಮಾಡಿದ್ದರು ಗೊತ್ತೇ, ಸಮ್ಯಕ್ ದರ್ಶನ ನಿಷ್ಠೆಯಿಂದ ........ ಇದನ್ನು ಅನುವಾದ ಎನ್ನುವುದಕ್ಕಾಗುತ್ತದೆಯೇ ?.

ಇಂತಹ ಕಾರಣಗಳಿಂದಾಗಿಯೇ, ಕನ್ನಡದ ಹೆಸರಿನಲ್ಲಿ ಕಷ್ಟವಾದ ಕೆಲವು ಸಂಸ್ಕೃತ ಪದಗಳನ್ನು ಬಲವಂತವಾಗಿ ತುರುಕಿದರೆ ಜನರು ಅದನ್ನು ತಿರಸ್ಕರಿಸಿ ಇಂಗ್ಲೀಷನ್ನೇ ಅಪ್ಪಿಕೊಳ್ಳುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2006 - 6:23pm — Sunil Jayaprakash

ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

Sunil Jayaprakash's picture

ಅಂದ ಹಾಗೆ, ಕಂಪ್ಯೂಟರಿನಲ್ಲಿ ಕನ್ನಡವನ್ನು ತರಲೇಬೇಕು ಎಂದು ಪ್ರಯತ್ನಿಸುತ್ತಿರವ ಜನರ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಿದೆ. ಶ್ರೀಕಾಂತ ಮಿಶ್ರಿಕೋಟಿಗಳು, ಇದರ ಬಗ್ಗೆ ಬರೆಯುತ್ತಿರುತ್ತಾರೆ. ಇಂತಹವರ ತುಡಿತವನ್ನು ನೋಡಿದಾಗ ನಿಜಕ್ಕೂ ಸಂತೋಷವಾಗುತ್ತದೆ. ಸಂಸ್ಕೃತದ ಮೂಲಕವೋ, ಇಂಗ್ಲೀಷ್ ಮೂಲಕವೋ, ಅಥವಾ ಹಳೆಗನ್ನಡದ (ಅಥವಾ ದ್ರಾವಿಡ) ಮೂಲಕವೋ ಒಟ್ಟಿನಲ್ಲಿ ಕನ್ನಡವು ಕಂಪ್ಯೂಟರಿನಲ್ಲಿ ನಲಿದಾಡಿದರೆ ಸಾಕು. ಆದರೆ ಅದು ಸಲಭವಾಗಿರಲಿ ಎಂಬುದಷ್ಟೇ ನಮ್ಮ ಆಶಯವಾಗಿರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2006 - 11:29am — veereshraya

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

veereshraya's picture

ಪ್ರತಿಕ್ರಿಯೆಗಳನ್ನು ನೋಡಿ ಖುಶಿಯಾಯ್ತು.

ಈಗಾಗಲೇ ಬಳಸುವ ಪದಗಳ ಬದಲಿಗೆ ಇನ್ನಾವ ಪದಗಳನ್ನು ಬಳಸಿದರೆ ಚೆನ್ನಾಗಿರತ್ತೆ?

ಅಂಕಣವಾಗಲಿ ಬಿಂಬವಾಗಲಿ, ನಿಘಂಟನ್ನು ಬೇಡುವದಿಲ್ಲ.
diode transistor ಮುಂತಾದ ಪದಗಳಿಗೆ ಆಡುಮಾತಿನಲ್ಲಿ ಯಾವುದೇ ಸಮಾನ ಪದಗಳಿಲ್ಲದ್ದರಿಂದ ಇಂಗ್ಲೀಷ್ ಪದ ಬಳಸುವದರಲ್ಲಿ ತಪ್ಪಿಲ್ಲ.

ಆದರೆ ನಿತ್ಯಬಳಕೆಯ ಕನ್ನಡ ಪದಗಳಿದ್ದೂ ಇಂಗ್ಲೀಷ್ ಮೊರೆಹೋಗುವದು ಸರಿಯೆ?

ಅಂದಹಾಗೆ ಅಂಕಣವನ್ನು ನಮ್ಮ ಕಲಬುರಗಿ, ಬಿಜಾಪುರದ ಜನ tabನ ಇನ್ನೊಂದು ಅರ್ಥದಲ್ಲೂ(ನಿರ್ದಿಷ್ಟಾಂತರ) ಬಳಸ್ತಾರೆ.
ಮನೆಗಳ ಬಗ್ಗೆ ಆರಂಕಣದ ಮನೆ ಮೂರಂಕಣದ ಕೊಟ್ಟಿಗೆ ಅಂತೆಲ್ಲ ಹೇಳ್ತಾರೆ.
ಇಲ್ಲಿ ಅಂಕಣ ಅಂದರೆ ಎರೆಡು ತೊಲೆ ಅಥವ ಕಂಬಗಳ ನಡುವಿನ ಅಂತರ. ಇದು ನಡುವೆ ಹಾಕುವ ಜಂತಿಗಳ ಸಂಖ್ಯೆಯ ಮೇಲೆ ತುಸು ಹೆಚ್ಚೂ ಆಗಬಹುದು ಕಡಮೆಯೂ ಆಗಬಹುದು.
tab ಕೂಡ ನಮ್ಮ settingನಂತೆ ೪ ಸ್ಥಾನ ೮ ಸ್ಥಾನ ಹಾಗೆ ಬದಲಾಗುವಂತೆ.
ಹೀಗಾಗಿ ಅಂಕಣವನ್ನು ಪರಿಪೂರ್ಣ tab ಎನ್ನಲೇ?

ನಾವು spreadsheet (excel...) ಒಳಗಿನ sheetನ್ನು ಹಾಳೆಯೆನ್ನಬಹುದೆ?
softwareನ್ನು ತಂತ್ರಾಂಶ hardwareನ್ನು ಯಂತ್ರಾಂಶವೆಂದಂತೆ firmwareನ್ನು ಧೃಡಾಂಶವೆನ್ನಬಹುದೆ?
ಯಾವುದೇ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವದು ಇಲ್ಲಿಯ ಉದ್ದೇಶವಲ್ಲ.
ಆದರೆ ಚಿಂತನ ಮಂಥನ ಮಾಡಲು ತೊಂದರೆಯಿಲ್ಲವಲ್ಲ?

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು
  • ಒಂದು ಕವನ..
  • ಪ್ರಥಮ ಚುಂಬನಂ....
  • ಬರಹ ಕ್ರಾಂತಿ!
  • ನಾವು ಹಾಗೂ ನಮ್ಮ ಸಂಪದ
Syndicate content

ಲೇಖಕರು

veereshraya's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!
  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 8:12am
  • mahesha
    ಉ: ನೀನು ಯಾರೆ
    August 29, 2008 - 8:08am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
  • rajeshks
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 6:56am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 143 ಅತಿಥಿಗಳು ಆನ್ಲೈನ್ ಇರುವರು.


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator