ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › veereshraya ರವರ ಬ್ಲಾಗ್

ಪೂರ್ವಪ್ರತ್ಯಯಗಳ (prefixes) ಅನುವಾದ

December 15, 2006 - 10:44pm — veereshraya

ಬಂಧುಗಳೇ,

ನನ್ನ ವಿಚಾರದಲ್ಲಿ ತಾಂತ್ರಿಕ ವಿಷಯಗಳ ಪದಗಳ ಅನುವಾದ ಮಾಡುವಾಗ ಪೂರ್ವಪ್ರತ್ಯಯಗಳ ವಿಷಯ ಅನುವಾದಕನ ಪೀಡಕ.
ಪ್ರತ್ಯಯಗಳು ಸಂಖ್ಯಾವಾಚಕವಾಗಿದ್ದಲ್ಲಿ ಅಂಥ ಸಮಸ್ಯೆಯಲ್ಲ, ಎಕ, ದ್ವಿ, ತ್ರೈ, ಚತುರ್ - ಮುಂತಾಗಿ ಹೇಳಬಹುದು.
ಅವೇ ಪ್ರತ್ಯಯಗಳು ಗಾತ್ರಸೂಚಕವಾದಗ ಯಾವುದನ್ನು ಬಳಸಲಿ ಯಾವುದನ್ನು ಬಿಡಲಿ ಎಂಬ ಗೊಂದಲ ಶುರು.

infra -
sub - like subzero
super - ???
very - ತುಂಬಾ ಎನ್ನಲೇ ಭಾರೀ ಎನ್ನಲೇ.
ultra - ???
mini - ಮಿನಿ ನಗರ ಪ್ರದೇಶಗಳಲ್ಲಿ ಬಳಕೆಯಲ್ಲಿದೆ.
micro - ಸೂಕ್ಷ್ಮ ಬಳಕೆಯಲ್ಲಿದೆ ಮತ್ತು ಎಲ್ಲರಿಗೂ ಅರ್ಥವೂ ಆಗತ್ತೆ.
nano - ಪುಸ್ತಕಗಳ ಮಟ್ಟಿಗೆ ನ್ಯಾನೋ ಬಳಕೆಯಲ್ಲಿದೆ.
mega - ಮೆಗಾ ಎಂಬ ಆಗಲೇ ಬಳಕೆಯಲ್ಲಿದೆ.

ಈ ಪಟ್ಟಿ ಬಹುಷಃ ಇನ್ನೂ ಉದ್ದವಾಗುವದೇನೋ....
ತಿಳಿದವರು ಈ ಅನುಮಾನಗಳನ್ನು ಪರಿಹರಿಸಬೇಕು.

ಜೊತೆಗೆ ಒಂದು ಬಾಲಂಗೋಚಿ.Smiling
ಇಂಗ್ಲೀಷಿನ chipನ್ನು ಕನ್ನಡದಲ್ಲಿ ಚಿಪ್ಪು ಅನ್ನಬಹುದಲ್ಲವೇ?
ಬಹುಷಃ ಇಂಗ್ಲೀಷಿನವರು ಸಿಲಿಕಾನಿನ ತೆಳ್ಳಗಿನ ತುಂಡಿಗೆ chip ಎಂದಿದ್ದಾರೆ. ಅದೇ ರೀತಿ metal chip, chipping ಕೂಡ ಹೆಳ್ತಾರೆ (ಎಂಜಿನಿಯರರೆ workshop lab ನೆನಪು ಮಾಡಿಕೊಳ್ಳಿ)
ನಮ್ಮಲ್ಲೂ ಕೂಡ ತೆಳ್ಳಗಿನ ವಸ್ತುಗಳಿಗೆ ತೆಂಗಿನ ಚಿಪ್ಪು, ಕಪ್ಪೆ ಚಿಪ್ಪು, ಚಿಪ್ಪು ಕಲ್ಲು, ಮಾವಿನ ಚಿಪ್ಪು ಅಂತ ಅದೆ ಅರ್ಥದಲ್ಲಿ ಹೇಳ್ತೇವೆ.
ಹೀಗಾಗಿ ಖುಶಿಯಿಂದ ಕನ್ನಡದಲ್ಲಿ chipನ್ನು ಚಿಪ್ಪು ಎಂದೇ ಹೇಳೋಣವೇ?

ವೀರೇಶ ರಾಯ.

~.~
  • veereshraya ರವರ ಬ್ಲಾಗ್
  • Login or register to post comments
  • 294 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 16, 2006 - 7:06pm — Sunil Jayaprakash

ಮೊದಲ ಮಾತು: ಪೂರ್ವಪ್ರತ್ಯಯಗಳ (prefixes) ಅನುವಾದ

Sunil Jayaprakash's picture

ಚರ್ಚೆ ಮುಂದುವರಿಯುವುದಕ್ಕಿಂತ ಮುಂಚೆ ಒಂದೆರೆಡು ಮಾತು ಹೇಳಲೇಬೇಕು.

veereshraya wrote:
ಪ್ರತ್ಯಯಗಳು ಸಂಖ್ಯಾವಾಚಕವಾಗಿದ್ದಲ್ಲಿ ಅಂಥ ಸಮಸ್ಯೆಯಲ್ಲ, ಎಕ, ದ್ವಿ, ತ್ರೈ, ಚತುರ್ - ಮುಂತಾಗಿ ಹೇಳಬಹುದು.

ಅಯ್ಯಯ್ಯೋ, ರೀಈಈಈಈಈಈಈಈಈಈಈಈಈಈಈಈಈಈಈಈಈ, ಕನ್ನಡದಲ್ಲೂ ಸಂಖ್ಯಾವಾಚಕಗಳಿವೆ, ಮತ್ತು ಸಂಸ್ಕೃತಕ್ಕಿಂತ ಸರಳವಾಗಿವೆ.

ಸಂಖ್ಯೆ, ಸಂಧಿಗಳಲ್ಲಿ ಸಮಾಸಗಳಲ್ಲಿ, ಬಳಕೆ

೧. ಒಂದು = ಒರ್, ಒನ್(ಒಣ್) - ಓರ್ವ, ಒಂಟಿ. ಸಾಮಾನ್ಯವಾಗಿ one=ಒನ್ ಎನ್ನುವುದು ಇಂಗ್ಲೀಷೆಂದು ಭಾವಿಸುತ್ತೇವೆ, ಆದರೆ ಕನ್ನಡ ಸಂಧಿಗಳಲ್ಲಿ ಒನ್ ಎಂಬ ಪ್ರಯೋಗಗಳು ನಮಗೆ ಸಿಗುತ್ತವೆ. ಮತ್ತೊಂದು ಉತ್ತಮ ಬಳಕೆ, ಒಗ್ಗೂಡು. ಒರ್ + ಕೂಡು ->ಒರ್ಗೂಡು->ಒಗ್ಗೂಡು. (ಕರ್ ಗಂಟು ಕಗ್ಗಂಟು ರೀತಿಯಲ್ಲಿ).
೨. ಎರಡು = ಎರ್(ಇರ್) - ಇಕ್ಕೆಲ, ಇಪ್ಪತ್ತು, ಈರ್ವರು, ಇಬ್ಬರು(ಇರ್ + ಪರು).
೩. ಮೂರು = ಮೂರ್ - ಮೂರ್ವರು
೪. ನಾಲ್ಕು = ನಾಲ್ - ನಾಲ್ + ಪರು -> ನಾಲ್ವರು, ನಲ್ವತ್ತು.
೫. ಐದು = ಐ, ಐರ್ - ಐವರು (ಬಹುಶಃ ಇದು ಹೀಗಿರಬಹುದು, ಐರ್ +ಪರು = ಐರ್ವರು -> ಐವ್ವರು ->ಐವರು), ಐವತ್ತು(ಐರ್ ಪತ್ತು -> ಐರ್ವತ್ತು -> ಐವ್ವತ್ತು -> ಐವತ್ತು)
................
ಸಂಧಿ, ಸಮಾಸಗಳಿಗೆಂದು, ಕನ್ನಡ ಸಂಖ್ಯೆಗಳೇ ಇರುವಾಗ, ಏಕ, ದ್ವೇ, ತ್ರಯ್(ತ್ರೈ), ಚತುರ್ ಎಲ್ಲಾ ಯಾಕೆ.

ಎಲ್ಲಾ ಓಕೆ, ಏಕಂ ಯಾಕೆ ?
ಮತ್ತೊಂದು ಬಳಕೆ, ಏಕತೆ = ಒಮ್ಮನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನಪು
  • ಕಾಟು ಎಂದರೇನು?
  • ಮತ್ತೊಂದು ಕವನ
  • ಆ ಅಕೋ, ಅಗೋ, ಅದೋ
  • ಕರ್ನಾಟಕದ ಮನೆಮನೆಗಳಲ್ಲಿ ರಂಜಿಸುತ್ತಿರುವ ರಂಗೋಲಿ ಕಲೆ !
Syndicate content

ಲೇಖಕರು

veereshraya's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 125 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator