ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
ಕಣ್ಮಣಿ:
ದಿನಕರ
ನಿನ್ನ ಎರಡನೆಯ ಚಿತ್ರ ,
ನಿನ್ನ ಮೊದಲ ಚಿತ್ರದ ನಂತರದ ನಿರೀಕ್ಷೆನ
ಸುಳ್ಳು ಮಾಡಿಲ್ಲ.
ಒಳ್ಳೆ ಚಿತ್ರ ಈ ನವಗ್ರಹ.
ಇದು ಅಂಗ್ಲ ಚಿತ್ರ ರೆಸೆರ್ವಿಒರ್ ಡಾಗ್ಸ್,
ಹಾಗು ಹಿಂದಿ ಚಿತ್ರ ಕಾಂಟೆ ಯ ನಕಲಂತೆ ಕಾಣುತ್ತೆ.
ಆದರು ನಿನ್ನ ಪ್ರಯತ್ನ ಹಾಗು ನಟರೆಲ್ಲರ ಶ್ರಮ ವ್ಯರ್ಥ ಖಂಡಿತ ಆಗಿಲ್ಲ.
ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನ ಮತ್ತು ನೀನು ಅದರಲ್ಲಿ ಗೆದ್ದಿದಿಯ ಕೂಡ.
ಈ ಚಿತ್ರದಲ್ಲಿ ಎಲ್ಲ ನಟ ನಟಿ ತುಂಬಾನೇ ಚೆನ್ನಾಗಿ ನಟಿಸಿದ್ದಾರೆ.
ಅದರಲ್ಲೂ ಆ ಕೀರ್ತಿ ರಾಜ್ ಮಗ ವಂಡರ್ ಬಾಯ್.
ಅವನು ಕನ್ನಡ ಚಿತ್ರ ರಂಗದ ಮುಂದಿನ ಸೂಪರ್ ಸ್ಟಾರ್ ಆಗುವುದರಲ್ಲಿ ಅನುಮಾನವೇ ಇಲ್ಲ , ಸರಿಯಾದ ಅವಕಾಶ ಸಿಕ್ಕರೆ , ಸಿಗಲಿ ಅಂತ ನನ್ನ ಆಸೆ.
ಇನ್ನು ನಿನ್ನ ಬಗ್ಗೆ ನನಗೆ ಅಭಿಮಾನವಿದೆ ಯಾಕಂದೆರೆ?
ನಾನು ರೇಡಿಯೋದಲ್ಲಿ ಕಣ್ಣ್ ಕಣ್ಣ ಸಲುಗೆ, ಹಾಡು ಕೇಳಿದಾಗಲೆಲ್ಲ ಬಹುಶ ಇದು ದರ್ಶನ್ ಮತ್ತು ಶರ್ಮಿಲ ನಡುವಿನ ದುಎತ್ ಅನ್ಕೊಂಡಿದ್ದೆ.
ಆದ್ರೆ ನೀನು ಎಲ್ಲರ ನಿರೀಕ್ಷೆ,ಅನಿಸಿಕೆ ಸುಳ್ಳು ಮಾಡಿ ,
ಕೀರ್ತಿ ರಾಜ್ ಮಗನಿಗೆ ಈ ಹಾಡಿನಲ್ಲಿ ಅವಕಾಶ ಮಾಡಿಕೊಟ್ಟು , ಬಹು ತಾರಾಗಣದ ಚಿತ್ರದಲ್ಲಿ ನಿರ್ಮಾಕರ ಸಂಬಂದಿಗಳೇ ಇಲ್ಲಿ, ಹೀಗೆ ನಟಿಸಬೇಕು ಎನ್ನುವ ಸಿದ್ದ ಸಂಪ್ರದಾಯ ಮುರಿದಿದ್ದಿಯ,
ಹಾಗು ತನ್ಮೂಲಕ ಕೀರ್ತಿ ರಾಜ್ ಮಗನಿಗೆ ಅವಕಾಶಗಳ ಹೊಳೆ ಹರಿಯೋ ಹಾಗೆ ಮಾಡಿದ್ದಿಯ.
ಆ ಕೀರ್ತಿ ರಾಜ್ ಮಗ ನಿನ್ನ ಚಿತ್ರದ ಅನರ್ಘ್ಯ ಶೋಧ.
ಇನ್ನು ಸಂಗೀತ , ತಿರು ತಿರುಗಿ ಗುನುಗುವಂತೆ ಮಾಡುತ್ತದೆ.
ಸಾಹಸ ರೋಮಂಚನವನ್ನುಂಟು ಮಾಡುತ್ತದೆ.
ಅದರಲ್ಲೂ ಕ್ಲೈಮ್ಯಾಕ್ಸ್ ತುದಿಗಾಲಲ್ಲಿ ನಿಲ್ಲುವಂತೆ ಮಾಡುವಲ್ಲಿ ಯಶಶ್ವಿಯಾಗಿದೆ .
ಒಟ್ಟಿನಲ್ಲಿ ಸಂಪೂರ್ಣ ಮನೋರಂಜನ ಚಿತ್ರ.
- venkatb83's blog
- Login or register to post comments
- 439 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
ಕಣ್ ಕಣ್ಣ ಸಲಿಗೆ ಹಾಡಿನ ಮೊದಲನೇ ಚರಣ
"ಋತು ಏಳು ಭೂಮಿಯ ಮೇಲೆ
ಪ್ರಣಯಾನೇ ಎಂಟನೇ ಓಲೆ
ತಿಳಿ ತಿಳಿ ಪ್ರೇಮ
ಇರೋದಂತು ನಾಲ್ಕೇ ವೇದ
ಪ್ರೀತಿ ತಾನೆ ಪಂಚಮ ವೇದ"
>>ಋತು ಏಳು ಭೂಮಿಯ ಮೇಲೆ???
ಹೇಗೆ ಅಂತ ಯಾರಿಗಾದರು ಗೊತ್ತಾ?
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
]
ಇದು ನನ್ನ ಗಮನಕ್ಕೆ ಬಂದಿರಲಿಲ್ಲ ಥ್ಯಾಂಕ್ಸ್.....
ಹೌದು ಎಲ್ಲಿದೆ ಏಳು ಋತುಗಳು? ಮತ್ತು ಯಾವುದು ಅದು ಹಾಡು ಬರೆದವರಿಗಾದರೂ ಗೊತ್ತ?
ವೆಂಕಟೇಶ ರಾಯಚೂರು
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
ಗುರೂ ವಿನಯ್ ಉಡುಪ ಅವರೇ ನವಗ್ರಹ ಚಿತ್ರದಲ್ಲಿನ ಆ ಸೂಪರ್ ಹಾಡಿನ ಹಾಡಿನ ಸಾಹಿತ್ಯ , ಖಂಡಿತವಾಗಿಯೂ ನೀವು ಹೇಳಿದ ಹಾಗೆ ,ಋತು ಏಳು ಭೂಮಿಯ ಮೇಲೆ ಅಲ್ಲ......
ಅದು ಋತು ಹೇಳು, ಭೂಮಿಯ ಮೇಲೆ ,ಸಾದ್ಯವಾದರೆ ನೀವು ಇನ್ನೊಮ್ಮೆ, ಮಗದೊಮ್ಮೆ ಆ ಹಾಡು ಕೇಳಿ ಅನುಮಾನ ನಿವಾರಣೆ ಮಾಡಿಕೊಳ್ಳಬಹುದು....
V
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
ಇದ್ದರೂ ಇರಬಹುದೆನೋಪ್ಪ... ತಿದ್ದಿದ್ದಕ್ಕೆ ಧನ್ಯವಾದಗಳು
ನಂತರದ ೨ ಸಾಲುಗಳಲ್ಲಿ ೪ ವೇದ - ಪಂಚಮವೇದ ಬರುತ್ತಲ್ಲ.. ಹಾಗೇ ಇಲ್ಲಿ ೭ - ೮ ಬಂದಿದೆ ಅಂದುಕೊಂಡೆ..
ಆದರೂ "ಎಂಟನೆ ಓಲೆ" ಅರ್ಥ ಆಗ್ಲಿಲ್ಲ :-(
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ