ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !
"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ !
ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ !
ಸಿರಿಗನ್ನಡಮ್ ಗೆಲ್ಗೆ !
ಮಾನ್ಯರೆ,
ಸಿರಿಗನ್ನಡಮ್ ಗೆಲ್ಗೆ !
ನಾನು ವ್ರುತ್ತಿಯಲ್ಲಿ ಟೆಕ್ಸ್ಟೈಲ್ ಇಂಜಿನಿಯರು. ಓದಲು ಬರೆಯಲು ನನಗೆ ಬಹಳ ಆಸಕ್ತಿ. ಬಹುಶಃ ನಮ್ಮ ಮನೆಯಲ್ಲಿದ್ದ ವಿಶಾಲ ಪುಸ್ತಕ ಭಂಡಾರ ಒಂದು ಕಾರಣವಾದರೆ, ಇನ್ನೊಂದು ನಮ್ಮ ತಂದೆ, ಅಣ್ಣತಮ್ಮಂದಿರ 'ಬೌಧ್ಧಿಕ ಹಿನ್ನೆಲೆ' ಎಂದರೆ ತಪ್ಪಾಗಲಾರದು. ಎಲ್ಲಾ ಸಾಂಸ್ಕ್ರುತಿಕ ಸಮಾರಂಭಗಳಲ್ಲೂ ಪ್ರೇಕ್ಷಕನಾಗಿ ಪಾಲ್ಗೊಂಡಿದ್ದೇನೆ. ಮುಂಬೈ ಒಂದು ವಿಶಾಲವಾದ ಮಂಚ. ಬೆಂಗಳೂರಿನಲ್ಲಿ ಕೇಳಿರದಿದ್ದ ಮಹಾ ವ್ಯಕ್ತಿಗಳ ಮಾತುಗಳನ್ನು ಇಲ್ಲಿ- ನನ್ನ 40 ವರ್ಷಗಳ ಜೀವನದಲ್ಲಿ ಕೇಳಿದ್ದೇನೆಂದು ಹೇಳಲು ಹೆಮ್ಮೆಯೆನ್ನಿಸುತ್ತಿದೆ ! ಇಂಗ್ಲೀಶಿನಲ್ಲಿ ಒಂದು ಪುಸ್ತಕ, ಬೇರೆ ಬೇರೆ ಲೇಖನಗಳು ನನ್ನ ಸರಿಕಿನಲ್ಲಿವೆ. ಸಂಪದ ಬಳಗಕ್ಕೆ ಬಂದಮೇಲೆ ನನ್ನ ಬರವಣಿಗೆ ಹೆಚ್ಚಾಯಿತೇನೋ. ನಿವ್ರುತ್ತ ನಾಗಿರುವುದೂ ಇದಕ್ಕೆ ಪೂರಕವಾಗಿರಬಹುದು !
ವೆಂಕಟೇಶ.

- venkatesh ರವರ ಬ್ಲಾಗ್
- Login or register to post comments
- 928 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಕ್ಷಮಿಸಿ
ತಪ್ಪು - ಸರಿ
ವ್ರುತ್ತಿ- ವೃತ್ತಿ
ಬೌಧ್ಧಿಕ - ಬೌದ್ಧಿಕ
ಸಾಂಸ್ಕ್ರುತಿಕ = ಸಾಂಸ್ಕೃತಿಕ
ಇಂಗ್ಲೀಶ್ = ಇಂಗ್ಲೀಷ್
ನಿವ್ರುತ್ತ = ನಿವೃತ್ತ
ಬಹುಶಃ ನಿಮಗೆ "ಋ" ಕಾರವನ್ನು ಬರೆಯುವುದಲ್ಲಿ ಕಷ್ಟವಾಗುತ್ತಿರಬೇಕು.
ಈ ವಿಷಯವಾಗಿ ನಡೆದ ಮಾತುಕತೆಗಳನ್ನು ದಯವಿಟ್ಟು ಗಮನಿಸಿರಿ.
ಮಹೇಶ್ ರವರಿಗೆ,
ಮಹೇಶ್ ರವರಿಗೆ,
ವಂದನೆಗಳು.
ನೀವು ಗಮನಕ್ಕೆ ತಂದ ತಪ್ಪುಗಳನ್ನು ತಿದ್ದಿಕೊಳ್ಳುತ್ತೇನೆ.ಹೀಗೆಯೇ ಮುಂದೆಯೂ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ.ನಾನು ಬಳಸುವ ಪರಿಕರ "ಟ್ರಾನ್ಸ್ಲಿಟರೇಟ್ ಟು ಕನ್ನಡ" ಎನ್ನುವ "ಇಂಡಿಯನ್ ಲ್ಯಾಂಗ್ ವೇಜ್ ಕನ್ವರ್ಟರ್' ಸಹಾಯದ ಸೈಟಿನಿಂದ.ಕಲಿಯುವುದು ಬಹಳವಿದೆ !
ನಿಮ್ಮ ಬರಹದ ಬಗ್ಗೆ
ಸಾಮಾನ್ಯವಾಗಿ ನಮ್ಮಹಾಗೆ ನಿವೃತ್ತ ವಯಸ್ಕರು ಬ್ಲಾಗರ್ ಗಳಾಗಿರುವುದು ಅಪರೂಪ ನಿಮ್ಮ ಕಷ್ಟ ಅರ್ಥವಾಗುತ್ತದೆ. ಆದರೆ, ಹಿರಿಯರಲ್ಲೆ ಹಂಚಿಕೊಳ್ಳಲು ಹೆಚ್ಚು ಅನುಭವಗಳು. ನೀವು ಬಳಸುವ ಟ್ರಾನ್ಸ್ ಲಿಟರೇ ಷನ್ ಗಿಂತಲೂ ಕನ್ನಡ ಗಣಕ ಪರಿಷತ್ ಅಭಿವೃದ್ಧಿ ಪಡಿಸಿರುವ ನುಡಿ ತಂತ್ರಾಂಶ ಸುಲಭವಾಗಿದೆ. ಅದರ"ಕೆಜಿಪಿ" ಕೀಬೋರ್ಡ್ ಬಳಸುವುದನ್ನು ಅಭ್ಯಸಿಸಿ,ಜೊತೆಗೆ ವಿನ್ Xp ಓಎಸ್ ನಿಂದ kannada Indic ಆಯ್ಕೆ ಉತ್ತಮ. ಈ ಬಗ್ಗೆ ಸಂಪದ Font Help ನೋಡಬಹದಲ್ಲ.