ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !
"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ ! ಜುಲೈ ೪ ನೆ ತಾರೀಕ್ ಆದ್ಮ್ಯಾಗೆ, ನಾನ್ ಇಲ್ಲಿಲ್ಲ. ಪರ್ದೇಸ್ದಲ್ಲಿ ಅಂದ್ರೆ ಅಮ್ರ್ಕದಲ್ಲಿವ್ನಿ. ಒಂದೆಲ್ಡ್ ತಿಂಗ್ಳಾದ್ ಮ್ಯಾಗೆ ಬರೋದು. ಅಂಗೆ ಗೀಚೋ ಅಳೇ ಉಚ್ಚು ಐತಲ್ಲ ! " ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು "! ಅಂತ ತಲಿಗ್ ತೋಚಿದ್ನ ಬರ್ದಿವ್ನಿ. ಓದಂಗಿದ್ರೆ ಓದ್ರಪೋ. ನಾನ್ತಾನೇ ಏನೇಳ್ಲಿ ? ! ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ ! ನಿಮ್ದರ್ಮ
"ಮುಂಬೈ- ಪೂನಾ ಕನ್ನಡ ಸಾಹಿತ್ಯ.ಕಾಂ", ಮುಂಬೈ ನಗರದಲ್ಲಿ ವಿಧ್ಯುಕ್ತವಾಗಿ ನೆರೆವೇರಿತು !!
ಮುಂಬೈ-ಪೂನಾ ಕನ್ನಡಸಾಹಿತ್ಯ.ಕಾಂ ವಿಧ್ಯುಕ್ತವಾಗಿ ಅಕ್ಟೋಬರ್, ೧೫ ರಂದು, ಮುಂಬೈಯ 'ಕರ್ನಾಟಕ ಸಂಘ'ದ ಆವರಣದಲ್ಲಿ ಉದ್ಘಾಟನೆಯಾಯಿತು. ಪ್ರಾ. ಜಯದೇವ ಹಟ್ಟಂಗಡಿಯವರ ಹಸ್ತದಿಂದ ಶುರುವಾದ ಈ ಅಭಿಯಾನ, ಶ್ರೀ ಶೇಖರ್ ಪೂರ್ಣರವರ ಕನಸಿನ ಕೂಸನ್ನು ಮೇಲೆತ್ತಿ ನಲಿಸಿ, ಮೆರೆಸಲು, ಬೆಳೆಸಲು ಅನುವು ಮಾಡಿಕೊಟ್ಟಿದೆ. ಮೇಲಾಗಿ ಇದು ಕನ್ನಡಿಗರೆಲ್ಲರ ಆಶೋತ್ತರಗಳಿಗೆ ಹಿಡಿದಿಟ್ಟ ದರ್ಪಣವೆಂದರೆ ಅತಿಶಯೋಕ್ತಿಯಲ್ಲ !
ಕನ್ನಡ ಸಾಹಿತ್ಯ ಡಾ.ಕಾಂ, ೬ ವರ್ಷಗಳ ಹಿಂದೆ ಜನಿಸಿದ ಮಗು. ಬೆಂಗಳೂರಿನ ಎಮ್.ಜೆ. ರೋಡಿನ 'ಕಾಫಿ ಹೌಸಿ'ನಲ್ಲಿ ನಿರ್ಧರಿಸಿ, ರೂಪಗೊಂಡ ಬಯಕೆ, ಒಂದೇ ವರ್ಷದಲ್ಲಿ ನನಸಾಗಿ ಮೂರ್ತರೂಪ ಪಡೆಯಿತು. ಈಗ ಅದು ಒಂದು 'ಸಾಮುದಾಯಿಕ ಚಟುವಟಿಕೆ'ಯಾಗಿ ಹೊರಹೊಮ್ಮಿರುವುದು ಆರೊಗ್ಯಕರ ಬೆಳವಣಿಗೆಯ ಲಕ್ಷಣ ವೆನ್ನಿಸುತ್ತಿದೆ. ಬೆಂಬಲಿಗರ ಬಳಗಗಳು ಈಗಾಗಲೇ ಅಮೆರಿಕ, ಇಂಗ್ಲೆಂಡ್, ಮತ್ತಿತರ ದೇಶಗಳಲ್ಲಿ ಪ್ರಚಾರದಲ್ಲಿವೆ. 'ಶ್ರೀ ಶೇಶಾದ್ರಿ ವಾಸು'ರವರ "ಬರಹ ಕನ್ನಡ ಸಾಫ್ಟ್ವೇರ್" ಇದಕ್ಕೆ ಪೂರಕವಾಗಿರುವುದು ಹೆಮ್ಮೆಯ ವಿಶಯ !
ಈಗ ತಾನೇ ಶುರುವಾದ 'ಮುಂಬೈ-ಪೂನಾ ಕನ್ನಡಸಾಹಿತ್ಯ.ಕಾಂ' ಮುಂಬೈ, ಪುಣೆ ಗಳಂತಹ ಊರಿನ ಕವಿಗಳಿಗೆ, ಸಾಹಿತ್ಯಾಸಕ್ತರಿಗೂ ಮುದನೀಡಿದೆ ! ಬೆಂಗಳೂರು, ಮೈಸೂರಿನ ಜನರಿಗೆ ಮೊದಲೇ ಇದು ಲಭ್ಯವಾಗಿತ್ತು !
ದಿನ ವಿಡೀ ನಡೆದ 'ವಿಚಾರ ಸಂಕಿರಣ'ದಲ್ಲಿ 'ಕನ್ನಡ ಸಾಹಿತ್ಯ.ಕಾಂ' ನಮ್ಮ ಸಂಸ್ಕ್ರುತಿ ಮತ್ತು ಸಾಹಿತ್ಯಗಳನ್ನು ಸುಲಭವಾಗಿ ಪ್ರಪಂಚದ ಮೂಲೆ ಮೂಲೆಗಳಿಗೆ ದೊರಕಿಸುವಹಾದಿಯಲ್ಲಿ ದುಡಿಯುತ್ತಿದ್ದು,ಅದರ ಸಾಮರ್ಥ್ಯವನ್ನು ,ಸಾಧ್ಯತೆಗಳನ್ನೂ ಎಲ್ಲರೊಡನೆ ವಿಚಾರವಿನಿಮಯ ಮಾಡಿಕೊಂಡಿತು, ಎಂದು ಧಾರಾಳವಾಗಿ ಹೇಳಬಹುದು. ಯುವ ಜನರಿಗೆ ತಾವು ಕೂಡ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಹಾಯ ಹಸ್ತ ವನ್ನು ಕೊಡುವುದರ ಮೂಲಕ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬಹುದೆಂದು ಶೆಖರ್ ಬಿನ್ನವಿಸಿಕೊಂಡರು. ಕಾರ್ಯಕ್ರಮಕ್ಕೆ
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಸಾಧ್ಯವಾಗಲಿಲ್ಲ. ಅದೇ ದಿನ ಮುಂಬೈನಲ್ಲಿ ಸ್ವಾಮಿಗಳ ಕಾರ್ಯಕ್ರಮ ಕೂಡ ಇತ್ತು. ಪುಣೆಯ ಕನ್ನಡ ವಿಧ್ಯಾರ್ಥಿನಿಯರು 'ಸ್ವಾಗತ ಗೀತೆ' ಹಾಡಿ ಕಾರ್ಯಕ್ರಮಕ್ಕೆ 'ಶ್ರೀಗಣೇಶ'ಮಾಡಿದರು. ಶೇಖರ್ ಜೊತೆ, ಯುವ ಮನಸ್ಸುಗಳಾದ ಬಿ.ಚಿದಾನಂದ, ನರಸಿಂಹದತ್ತ, ರೋಹಿತ್, ಅರೇಹಳ್ಳಿರವಿ,ಮುಂತಾದವರು ಅನವರತವಾಗಿ ದುಡಿಯುತ್ತಿದ್ದು, ಈ ಅಭಿಯಾನದ ಯಶಸ್ಸಿಗೆ ಕಾರಣ ರಾಗಿದ್ದಾರೆ.
ಕನ್ನಡದ ಅತ್ಯುತ್ತಮ ಸಾಹಿತ್ಯ, ಚಿಂತನಶೀಲ ಲೇಖನಗಳನ್ನೂ, ನಾಟಕ, ಕಾವ್ಯ ಮುಂತಾದ ಪಠ್ಯ ಗಳನ್ನೂ ಲೇಖಕರ ಅನುಮತಿಯೊಂದಿಗೆ ಮೊದಲು ಒಂದೊಂದಾಗಿ ಪ್ರಕಟಿಸಲು ಪ್ರಾರಂಭಿಸಿದ್ದು, ಇಂದು ಅಂತರ್ಜಾಲದಲ್ಲಿ ಸಿಗುವ ಏನೆಲ್ಲಾ ಸೊಗಸಾದ ಕೃತಿಗಳ ಪಟ್ಟಿ ಓದಿ :
೧. ಕೆ.ವಿ.ಸುಬ್ಬಣ್ಣ (ಮ್ಯಗ್ ಸೆಸೆ ಪ್ರಶಸ್ತಿ ವಿಜೇತರು)
೨. ಡಾ. ಯು.ಆರ್. ಅನಂತಮೂರ್ತಿ (ಜ್ಞಾನ ಪೀಠ ಪ್ರಶಸ್ತಿ ವಿಜೇತರು)
೩. ಎಸ್.ಎಲ್.ಬೈರಪ್ಪ (ಸಾಹಿತ್ಯ ಅಕೇಡಮಿ ವಿಜೇತರು)
೪. ಚಂದ್ರ ಶೇಖರ ಕಂಬಾರ
೫. ಯಶವಂತ ಚಿತ್ತಾಲ
೬. ಶಂಕರ ಮೊಕಾಶಿ ಪುಣೇಕರ
೭. ಕುಂ. ವೀರಭದ್ರಪ್ಪ
೮. ಅಬ್ದುಲ್ ರಶೀದ್
೯. ಕೆ.ಎಸ್. ನಿಸಾರ್ ಅಹಮದ್
೧೦. ನಾ. ಡಿಸೋಜ
೧೧. ದೇವನೂರು ಮಹದೇವ
೧೨. ಬಿ.ಎಂ.ಶ್ರಿ. ಇತ್ಯಾದಿ.
ಒಟ್ಟಿನಲ್ಲಿ , ಇದೊಂದು 'ಮಾಹಿತಿ ತಂತ್ರ ಜ್ಞಾನ'ದ ಬಳಕೆಯಿಂದ ಕನ್ನಡದ ಸಾಹಿತ್ಯ ಸಂಪತ್ತನ್ನು ಬೆಳೆಸುವ ದಿಶೆಯಲ್ಲಿ ಇಟ್ಟ ಇನ್ನೊಂದು ದಿಟ್ಟ ಹೆಜ್ಜೆ !!
ಕೃಪೆ : ಕನ್ನಡಸಾಹಿತ್ಯ.ಕಾಂ, "ಕನ್ನಡದ ಕಣ್ಣಲ್ಲಿ ವಿಶ್ವದ ಕನಸು"- ಚಿ.ಅರೇಹಳ್ಳಿ ರವಿಯವರ ಲೇಖನ. ಮತ್ತು ನಾನೇ ಸ್ವತಃ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ !

- venkatesh ರವರ ಬ್ಲಾಗ್
- Login or register to post comments
- 657 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ
- ಕನ್ನಡಸಾಹಿತ್ಯ.ಕಾಂ-ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ಹಾಗೂ ‘ಸಲ್ಲಾಪ’ ಪ್ರಕಾಶನದ ಎರಡು ಕೃತಿಗಳ ಬಿಡುಗಡೆ
- ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ
- ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !



RSS:
ಪ್ರತಿಕ್ರಿಯೆಗಳು
ನಿಮ್ಮಂಥ ಹಿರಿಯರ ಮಾರ್ಗದರ್ಶನ ಕನ್ನಡಸಾಹಿತ್ಯಡಾಟ್‌ಕಾಂಗಿರಲಿ.........
ಹಿರಿಯರಾದ ವೆಂಕಟೇಶ್‌ರವರಿಗೆ ನಮಸ್ಕಾರಗಳು...
ನೀವು ನನ್ನ ಹೆಸರನ್ನು ನಿಮ್ಮ ಬ್ಲಾಗ್‌ನಲ್ಲಿ ಪ್ರಸ್ತಾಪಿಸಿದ್ದು ನೋಡಿ ತುಂಬಾ ಸಂಕೋಚವಾಯಿತು.......ಇಷ್ಟಕ್ಕೂ ನಾವು ಇದನ್ನೆಲ್ಲ ನಮ್ಮ ಅಹಂನ ತೃಪ್ತಿಗಾಗಿ ಮಾಡುತ್ತಿರಬಹುದು ಅಂಥನಿಸುತ್ತಿರುತ್ತದೆ.....
ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ನನ್ನ ಫೋಟೊ ನೋಡಿದಾಗಲೂ ಯಾಕೋ ಕೆಲಸಕ್ಕಿಂತ ಹೆಸರೇ ಜಾಸ್ತಿಯಾಗುತ್ತಿದೆಯೆನಿಸಿತು.....
anyway ವಿಕ್ರಾಂತ ಕರ್ನಾಟಕದ ನನ್ನ ಲೇಖನವನ್ನು ತಾವು ಪ್ರಸ್ತಾಪಿಸಿದ್ದು ನನ್ನೊಳಗಿನ ಅರ್ಧಂಬರ್ಧ ಲೇಖಕನಿಗೆ .....ಒಂಚೂರು ಪ್ರೋತ್ಸಾಹದಾಯಕ..........
ವಂದನೆಗಳೊಂದಿಗೆ.. ಅರೇಹಳ್ಳಿ ರವಿ
ನಿಮ್ಮಂತಹ ಹಿರಿಯರ.........
ರವಿಯವರೆ,
ನಿಮ್ಮ 'ವಿಕ್ರಾಂತ ಕರ್ನಾಟಕ' ಪತ್ರಿಕೆಯಲ್ಲಿನ ಲೇಖನ ನಿಜಕ್ಕೂ ಉಪಯುಕ್ತವಾದ ಮಾಹಿತಿಗಳಿಂದ ಕೂಡಿದ್ದು ಸಂದರ್ಭೋಚಿತವಾಗಿತ್ತು ಎನ್ನುವುದು ನನ್ನ ಅನಿಸಿಕೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಗಂಧವೂ ಇಲ್ಲದ ನನ್ನಂತಹ 'ನಿರಕ್ಷರ ಕುಕ್ಷಿ'ಗಂತೂ ತಯಾರುಮಾಡಿ ಕೈಗಿಟ್ಟ 'ಬುತ್ತಿ'ಯಾಗಿತ್ತು ! ಅದರಿಂದ ಹೆಕ್ಕಿದ ತುಣುಕುಗಳನ್ನು ಕೊಟ್ಟಾಗ ನಿಮ್ಮ ಹೆಸರು ನಮೂದಿಸದೆ ಇರುವುದು 'ಸೌಜನ್ಯವೇ' ನೀವೇ ಹೇಳಿ ?
ಶೇಖರ್ ತಮ್ಮ 'ಕನ್ನಡಸಾಹಿತ್ಯ.ಕಾಂ'ನ್ನು ಮುಂದೆ ಬೆಳೆಸುವ ಗುರುತರ ಜವಾಬ್ದಾರಿಯನ್ನು ನೋಡಿಕೊಳ್ಳಲು ಉತ್ತಮ ತಯಾರಿ ನಡೆಸಿದಂತಿದೆ ! ಯುವಜನರ ಸಮುದಾಯವನ್ನು ನೆಟ್ಟು ಹಾಕಿದ್ದಾರೆ. ಅವರಲ್ಲಿ ನೀವು ಒಬ್ಬ ಪ್ರಮುಖ ವ್ಯಕ್ತಿ ! ಸಭೆಯಲ್ಲಿ ಏನು ಹೇಳಬೇಕು, ಬರಣಿಗೆಗೆ ಸೀಮಿತವಾದ ವಸ್ತುಗಳ್ಯಾವು ? ಎನ್ನುವುದನ್ನು ಸರಿಯಾಗಿ ತಿಳಿದಿದ್ದೀರಿ. ನಿಮ್ಮ ಧೊರಣೆಗಳು, ಮುಂದಿನ ಕಾರ್ಯ ಚಟುವಟಿಕೆಗಳ 'ನೀಲನಕ್ಷೆ' ಚೆನ್ನಾಗಿ ಮೂಡಿ ಬಂದಿದೆ. ಬೆಳವಣಿಗೆಯ ಹಂತದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಅತಿ ಮುಖ್ಯ್ತ. ಕೆಲವೊಮ್ಮೆ ದುಡಿದ ಪ್ರತಿಭೆಗಳನ್ನೂ ಹೆಸರಿಸದೆ ತಣ್ಣೀರೆರೆಚುವ ಪ್ರಯತ್ನ ನಡೆದದ್ದನ್ನು ಕಣ್ಣಾರೆ ಕಂಡಿದ್ದೇನೆ. ನಿಮಗೆ ಎಲ್ಲಾ ಶುಭಹಾರೈಕೆಗಳು.
ದೀಪಾವಳಿಯ ಶುಭಾಷಯಗಳು ಕೂಡ !!