ಹೀರೋ ಆಗುವುದು ಬಹಳಾ ಕಷ್ಟ, ಝೀರೋ ಬರೀ ಸುಲಭ.
October 13, 2007 - 5:03pm — vijayammaಸೌಂದರ್ಯ ವರ್ಷಗಳುರುಳಿದಂತೆ ಕಮ್ಮಿಯಾಗುತ್ತಾ ಹೋಗುವುದು ಸಾಮಾನ್ಯ.ಆದರೆ ಕೆಲವರಲ್ಲಿ ವಯಸ್ಸಾದಂತೆ ಸೌಂದರ್ಯ ವರ್ಧಿಸುತ್ತಾ ಹೋಗುವುದು. ಮುಂದೆ ಓದಿ »

- Login or register to post comments
- 299 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
October 5, 2007 - 4:37pm — vijayammaಭೃಷ್ಟಾಚಾರ ನಿರ್ಮೂಲನೆ,ಸ್ವಚ್ಛ ಆಡಳಿತ,ರೋಟಿ,ಕಪ್ಡಾ,ರೋಡ್,ಮಕಾನ್,ಗರೀಬೀ ಹಟಾವೊ,....ಇತ್ಯಾದಿ,ಇತ್ಯಾದಿ.ಎಷ್ಟೊಂದು ಬಣ್ಣಬಣ್ಣದ ಮಾತುಗಳನ್ನು 'ಜನತೆಗೆ' ಕೊಟ್ಟ ಕಾಂಗ್ರೆಸ್, ಬಿ.ಜೆ.ಪಿ.,ಪಕ್ಷಗಳ ದೊಡ್ಡದೊಡ್ಡ ಲೀಡರುಗಳು ತಮ್ಮ ತಮ್ಮ ಮಾತು ಉಳಿಸಿಕೊಂಡಿದ್ದಾರೆಯೆ? ಮುಂದೆ ಓದಿ »

- 8 ಪ್ರತಿಕ್ರಿಯೆಗಳು
- 360 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಅಕ್ಟೋಬರ್ ೩ ರ ನಂತರ
September 26, 2007 - 4:39pm — vijayammaವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ
ನಂತರ ಮಂತ್ರಿಮಂಡಲ ರಚನೆ ಪರದಾಟ
ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ
ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ

- 2 ಪ್ರತಿಕ್ರಿಯೆಗಳು
- 273 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
September 20, 2007 - 2:59pm — vijayamma ಗಾಂಧಿ ಎಂದರೆ ಸೋನಿಯಾಗಾಂಧಿ.
ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ. ಮುಂದೆ ಓದಿ »

ನಾನೂ ಡಾಕ್ಟ್ರಾದೆ
August 29, 2007 - 4:28pm — vijayamma ಈವತ್ತು ನಾನು ಇಂಜಕ್ಷನ್ ಕೊಡುವ ಸುರುವಿನ ದಿನ.ನಾನೆಷ್ಟು ಒಳ್ಳೆಯವಳು ಎಂದರೆ,ಬೆಳಗ್ಗೆ ಬೇಗನೆ ಎದ್ದು,ಸ್ನಾನ ಮಾಡಿ,ದೇವರಿಗೆ ಕೈಮುಗಿದು,`ಈ ಇಂಜಕ್ಷನ್ ಕೊಡುವುದು ಆದಷ್ಟೂ ತಪ್ಪಿ,ಮಾತ್ರೆಯಲ್ಲೇ ರೋಗ ಗುಣವಾಗುವಂತೆ ಮಾಡಪ್ಪಾ' ಎಂದು ಬೇಡಿದೆ.
ನಂತರ ಸ್ಪಿರಿಟ್,ಸಿರಿಂಜ್,ಹತ್ತಿ,ಔಷಧಿ ಎಲ್ಲಾ ರೆಡಿಮಾಡಿಟ್ಟೆ.ತೊಡೆಯ ಬಟ್ಟೆ ಸರಿಸಿ,ಹತ್ತಿಯಿಂದ ಒರಸಿ,ಸೂಜಿಯನ್ನು ತೊಡೆಯ ಬಳಿ ತೆಗೆದುಕೊಂಡು ಹೋದೆನಷ್ಟೆ,ಕರೆಂಟ್ ಹೊಡೆದ ಹಾಗೆ ಕೈ ವಿಪರೀತ ನಡುಗಲು ಸುರುವಾಯಿತು.ಮೈಯೆಲ್ಲಾ ಬೆವರಿ ಹಣೆಯಿಂದ ಬೆವರು ತೊಟ್ಟಿಕ್ಕಲು ಸುರುವಾಯಿತು.Fan ಹಾಕುತ್ತೇನೆಂದು ನೋಡಿದರೆ ಅದು ತಿರುಗುತ್ತಲೇ ಇದೆ.ಸೆಕೆಯೇ ಇಲ್ಲದ ಸಮಯದಲ್ಲಿ fan ನ ಅಡಿಯಲ್ಲಿದ್ದೂ, ಬರೀ ಒಂದು ಸೂಜಿಗೆ ನಾನು ಇಷ್ಟು ಬೆವರಿ ನಡುಗುತ್ತಿರಬೇಕಾದರೆ,ಆ ಭೀಮ, ಅವನ ಗಧೆ,ಅವನ ಗರ್ಜನೆಗೆ ದುರ್ಯೋಧನ`ನೀರೊಳಗಿರ್ದುಂ ಬೆಮರ್ತಮ್'ಅನ್ನೋದರಲ್ಲಿ ಅತಿಶಯವೇನಿಲ್ಲ ..
ಸೂಜಿ ಚರ್ಮದ ಮೇಲಿಟ್ಟು ಎಷ್ಟು ಒತ್ತಿದರೂ ಒಳಗೇ ಹೋಗುತ್ತಿಲ್ಲಾ! INsulinನಲ್ಲಿ ಎರಡೆರಡು IN ಇದೆ.ಇಲ್ಲಿ ನೋಡಿದರೆ ಒಂದು ಸಲಕ್ಕೂ ಔಷಧಿ ಇನ್ನಾಗುತ್ತಿಲ್ಲಾ! ದುಃಖದಿಂದ ಮಂಜಾದ ಕಣ್ಣನ್ನು ಒರಸಿಕೊಂಡು ನೋಡಿದರೆ ಸುತ್ತಲೂ ಮನೆಮಂದಿಯೆಲ್ಲಾ ಮುಸುಮುಸು ನಗುತ್ತಾ ನಿಂತಿದ್ದಾರೆ.ಬೇಸರ,ಸಿಟ್ಟು,ದುಃಖ ಎಲ್ಲಾ ಒಟ್ಟೊಟ್ಟಿಗೆ ಬಂತು.ಕೆಳಗೆ ನೋಡಿದರೆ ಸೂಜಿ ಚರ್ಮದೊಳಗೆ ಹೋಗಿದೆ.ಅಳುತ್ತಾನಗುತ್ತಾ ಇಂಜಕ್ಷನ್ ಕೊಟ್ಟುಕೊಂಡೆ.ಓದಿಲ್ಲದಿದ್ದರೂ ಮಕ್ಕಳ ಬಾಯಲ್ಲಿ ಡಾಕ್ಟ್ರಾದೆ!

- Login or register to post comments
- 286 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: