ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › vijayamma ರವರ ಬ್ಲಾಗ್

ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?

May 3, 2007 - 12:57am — vijayamma

ವೇಗವಾಗಿ ಕಾರು ಬಂದು ನಿಲ್ಲುತ್ತದೆ. ಅದರ ಬಾಗಿಲು ತೆರೆಯಿತು.
ಅದರಿಂದ ಕೆಳಗಿಳಿದವನ ಬೂಟು ಕಾಣಿಸುವುದು.ನಿದಾನಕ್ಕೆ ಬೆನ್ನು, ತಲೆ..
ಈಗ ಮುಖ ತಿರುಗಿಸುವನು.. ಹೀರೋ!!!..ಥಿಯೇಟರ್ ತುಂಬಾ ಚಪ್ಪಾಳೆ ವಿಷಲ್.
ಈಗಿನ ಸಿನೆಮಾದಲ್ಲಿ ಹೀರೋಯಿನ್ ಕಾಲಿಂದ ಸುರುವಾಗಿ ಎಲ್ಲೆಲ್ಲೋ
ಸುತ್ತಿ ಬಳಸುತ್ತಿರುತ್ತದೆ ಕ್ಯಾಮರ...ಹೀರೋ ಎಲ್ಲಿ?
ಒಂದೋ ಕಾಲಿಗೆ ಮುತ್ತು ಕೊಡುತ್ತಿರುತ್ತಾನೆ, ಇಲ್ಲಾ ಕೈ ಎರಡು ಅಗಲಿಸಿ ಆಕಾಶ ನೋಡುತ್ತಿರುತ್ತಾನೆ.
ಕಾಲ ಕೆಟ್ಟಿತು. ನಮ್ಮ ಸಂಸ್ಕೃತಿ ಎಂದಿರಾ...
ನಮ್ಮ ಹಳೇ ದೇವತಾ ಮಂತ್ರಗಳೂ ಸಹ ಹೀಗೆ ಸಾಗುತ್ತದೆ.ಕ್ಯಾಮರಾ ಕಣ್ಣಿಂದ ನೋಡುತ್ತಾಬನ್ನಿ...
ಮೊದಲಿಗೆ ಕಿರ್‍ಈಟ- ವಜ್ರ ಮಾಣಿಕ್ಯ ಕಟಕ ಕಿರ್‍ಈಟಾಯ್ಯೆ ನಮೋ ನಮಃ
ನಂತರ ತಿಲಕ - ಕಸ್ತೂರಿ ತಿಲಕೋಲ್ಲಾಸನಿಟಿಲಾಯ್ಯೆ ನಮೋ ನಮಃ
" ಹಣೆ- ಭಸ್ಮ ರೇಖಾಂಕಿತಲಸನ್ಮಸ್ತಕಾಯೈ ನಮೋ ನಮಃ
" ಕಣ್ಣು - ವಿಕಚಾಂಭೋರುಹದಳ ಲೋಚನಾಯೈ ನಮೋ ನಮಃ
" ಮೂಗು - ಶರಚಾಂಪೇಯ ಪುಷ್ಪಾಭ ನಾಸಿಕಾಯೈ ನಮೋ ನಮಃ
" ಕೆನ್ನೆ - ಮಣಿ ದರ್ಪಣ ಸಂಕಾಶ ಕಪೋಲಾಯೈ ನಮೋ ನಮಃ
" ಬಾಯಿ - ತಾಂಬೂಲಪೂರಿತ ಸ್ಮೇರವದನಾಯೈ ನಮೋ ನಮಃ
ಹೀಗೆ ಮುಂದುವರಿಯುತ್ತಾ....
ಸುವರ್ಣಕುಂಭಯುಗ್ಮಾಭಸುಕುಚಾಯೈ ನಮೋ ನಮಃ
...
...
ಬ್ರಹನ್ನಿತಂಬವಿಲಸಜ್ಜಘನಾಯೈ ನಮೋ ನಮಃ
...
...
ಭೂತೇಶಾಲಿಂಗನದ್ಭೂತಪುಳಕಾಂಗೈ ನಮೋ ನಮಃ
ಅನಂಗಜನಕಾಪಾಂಗವೀಕ್ಷಣಾಯೈ ನಮೊ ನಮಃ ...
ಲಲಿತಾಷ್ಟೋತ್ತರ ಶತನಾಮಾವಳಿಯ ಕೆಲ ಭಾಗವಿದು;
ಆ ಕಾಲದವರು ಈಗ ಇದ್ದು ಸಿನೆಮಾ ಮಾಡುತ್ತಿದ್ದರೆ...

ಯಾಕೆ ನಮಗೆ ಈಗಿನ ಹಾಡು,ಕುಣಿತಗಳಲ್ಲಿ ಅಶ್ಲೀಲತೆ ಕಾಣುತ್ತದೆ.
ಅದೇ ಅರ್ಥ ಬರುವ ಶ್ಲೋಕ ಹೇಳುವಾಗ ಭಕ್ತಿ ಇರುತ್ತದೆ.
ನರಸಿಂಹ ಹಿರಣ್ಯಕಶಿಪು ಹೊಟ್ಟೆ ಬಗೆಯುವಾಗ ಭಕ್ತಿಭಾವ;
ಭೀಮ ಬಕಾಸುರನನ್ನು,ದುಶ್ಶಾಸನನನ್ನು ಕೊಂದುದು ದೇವಸ್ಥಾನಗಳಲ್ಲಿ
ಪ್ರವಚನಗಳನ್ನು ನಡೆಸಿ ಭಕ್ತಿ ಪರವಶರಾಗಿ ಆಲಿಸುವೆವು.
ಸಿನೆಮಾಗಳಲ್ಲಿ ಮಚ್ಚು, ಲಾಂಗು ತೋರಿಸಿದರೆ ಕ್ರೌರ್ಯ ಎನ್ನುತ್ತೇವೆ.

~.~
  • vijayamma ರವರ ಬ್ಲಾಗ್
  • Login or register to post comments
  • 420 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 3, 2007 - 10:59am — mahesha

ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?

mahesha's picture

ವಿಜಯಮ್ಮ...

ನೀವು ಬಹಳ ಸರಿಯಾಗಿ, ತಿಳಿಯಾಗಿ, ಹೇಳಿರುವಿರಿ. ಈ ಸಂಗತಿಗೆ ನಂಟಾಗಿ ನಾನು ಒಂದು ಸರತಿ ಬ್ಲಾಗಿದ್ದೆನು

ನಾವು ದೇವರ ಪ್ರಾರ್ತನೆ ಎಂದು ಒಂದು ಹೆಣ್ಣಿನ ಅಂಗಾಂಗಗಳ ವರ್ಣನೆಯನ್ನು ಹೇಳುತ್ತೇವೆ. ಇದು ನನಗೂ ಹಿಡಿಸಲ್ಲ.

ಶ್ಯಾಮಲ ದಂಡಕ...
ಮಾಣಿಕ್ಯವೀಣಾಂ....
ಕುಚೋನ್ನತೇ ಕುಂಕುಮರಾಗಶೋಣೇ.

ಶ್ರೀಸೂಕ್ತ
ಪದ್ಮಾನನೇ ಪದ್ಮ ಊರು

ಇನ್ನು ಸೌಂದರ್ಯ ಲಹರಿಯ ಬಗ್ಗೆಯೂ ಈ ಮಾತಿದೆ.!!

ನನಗೆ ಪ್ರಾರ್ತನೆ ಎಂದು ಗಂಡಸೋ, ಹೆಂಗಸೋ ಅವರ ಅಂಗಾಂಗ ವರ್ಣನೆಯನ್ನು ಹೇಳುವುದು ಸರಿ ಕಾಣುವುದಿಲ್ಲ.

ಅದಕ್ಕಿಂತ ಮಿಗಿಲಾಗಿ ನಮ್ಮ ಬಸವಣ್ಣ ಮುಂತಾದವರ ವಜನಗಳು.. "ಧರಣಿ ಮಂಡಲ" ಪುಣ್ಯಕೋಟಿ ಹಾಡು, ಕೆಲವು ದಾಸಪದಗಳು, ಮಲೆಮಾದಪ್ಪ, ನಂಜುಂಡ ದೇವರ ಮೇಲಿನ ಜನಪದ ಹಾಡುಗಳು ಹೆಚ್ಚು ಒಳ್ಳೆಯವು. ಇಂತಹ ಆಯಗಳ ಬಣ್ಣನೆ ಇರುವುದಿಲ್ಲ.

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 3, 2007 - 11:05am — Sunil Jayaprakash

ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?

Sunil Jayaprakash's picture

ವಿಜಯಮ್ಮ ಅವರೆ, ಸರಿಯಾಗಿ ಹೇಳಿದ್ರಿ. ಇತ್ತೀಚೆಗೆ "ದುನಿಯಾ" ಅಂತ ಸಿನಿಮಾ ಬಂದಿತ್ತು. ಚಿತ್ರ ನೋಡಿದ "ಸಪ್ಪೆ ಮೋರೆ ಮಾಡಿಕೊಂಡು ಹಿಂದಿರುಗವವರನ್ನು" ನೋಡಲು ಸಿಗಲೇ ಇಲ್ಲ. ಇದು ಏಕೆ ಹೀಗೆಂದರೆ, ವಿಷಯಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೆ, ನಾವು ನಮಗೆ ತಿಳಿದ ನುಡಿಯಲ್ಲಿ ಏನನ್ನಾದರೂ ಕೇಳಿದಾಗ, ಏನನ್ನಾದರೂ ನೋಡಿದಾಗ ಅದರ ಪರಿಣಾಮ ಸರಿಯಾದ ಜಾಗದಲ್ಲಿ ನಾಟಿರುತ್ತದೆ. ಸಂಸ್ಕೃತ ಮಂತ್ರಗಳ ಪ್ರಸ್ತಾಪವನ್ನು ಸರಿಯಾದ ರೀತಿಯಲ್ಲಿ ಮಾಡಿ ಕನ್ನಡವನ್ನು ಕುರಿತಾದ ಎಷ್ಟೋ ಲೇಖನಗಳನ್ನು ಒಂದೇ ಸಲಿಗೆ ನೀವಾಳಿಸಿ ಬಿಟ್ಟಿದ್ದೀರಿ.

೧. ಎರಡು ವಾರದ ಹಿಂದೆ ಮಹೇಶನು ಬರೆದ ಏನೀ ಸ್ಲೋಕದ ತಿರುಳು( ಅರ್ಥ ) ಎಂಬ ಒಂದು ಬರಹವನ್ನು ಓದಿ.
೨. ಕಕ್ಕಸು(ಕಕ್ಕ), ಮಲ ಎರಡೂ ಒಂದೇ ರೀತಿಯದ್ದು. ಆದರೆ "ಕಕ್ಕಸು" ಮುಜುಗರ ತರಿಸಿದರೆ ಮತ್ತೊಂದು ಪುಸಿದೈವತ್ವದ ಭಾವನೆ ಸೂಸುತ್ತದೆ. ಆದರೆ ಪೊಳ್ಳು ದೈವತ್ವದ ಸೊಂಕಿಲ್ಲದವರು "ಕಕ್ಕಸು" ಎಂಬ ಪದವನ್ನೇ ಯಾವ ಮುಜುಗರವಿಲ್ಲದೆಯೂ ಬಳಸುತ್ತಾರೆ. ಹಾಗೆಯೇ ಸಂಸ್ಕೃತದ "ಪುರುಷ" ಪದವನ್ನು ನಾವೇನಾದರೂ ಸೀದಾ ಅನುವಾದ ಮಾಡಿದರೆ ಏನಾಗುತ್ತದೆ ಗೊತ್ತೇ ? ಕಕ್ಕಸಿಗ Eye-wink ಇನ್ನು ಮಹಾಪುರುಷ ನೀವೇ ಊಹಿಸಿ.
೩. ಅದಕ್ಕೆ ನಾನು ಹೇಳುವದು, ಇಷ್ಟವಿದ್ದರೆ ಬೇಕಿದ್ದರೆ, ಸಂಸ್ಕೃತ ಮಂತ್ರಗಳನ್ನೇ ಹೇಳಲಿ(ಹೇಳಿಸಲಿ). ಆದರೆ ಆಯಾ ಶ್ಲೋಕದ ಅರ್ಥವನ್ನು ತಿಳಿದುಕೊಂಡು(ತಿಳಿಸಿಕೊಟ್ಟು) ಪೂಜೆಗಳನ್ನು ಮಾಡಬೇಕು(ಮಾಡಿಸಬೇಕು) ಎಂಬುದಾಗಿ.

ಸರಳ ಮಾತುಗಳಲ್ಲಿ, ಒಂದು ವಿಚಾರಪ್ರಚೋದಕ ಬರಹವನ್ನು ನೀಡಿದ್ದಕ್ಕಾಗಿ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 3, 2007 - 11:30am — mahesha

ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?

mahesha's picture

ಸುನಿಲ

ಕಕ್ಕಸು(ಕಕ್ಕ), ಮಲ ಎರಡೂ ಒಂದೇ ರೀತಿಯದ್ದು. ಆದರೆ "ಕಕ್ಕಸು" ಮುಜುಗರ ತರಿಸಿದರೆ ಮತ್ತೊಂದು ಪುಸಿದೈವತ್ವದ ಭಾವನೆ ಸೂಸುತ್ತದೆ. ಆದರೆ ಪೊಳ್ಳು ದೈವತ್ವದ ಸೊಂಕಿಲ್ಲದವರು "ಕಕ್ಕಸು" ಎಂಬ ಪದವನ್ನೇ ಯಾವ ಮುಜುಗರವಿಲ್ಲದೆಯೂ ಬಳಸುತ್ತಾರೆ. ಹಾಗೆಯೇ ಸಂಸ್ಕೃತದ "ಪುರುಷ" ಪದವನ್ನು ನಾವೇನಾದರೂ ಸೀದಾ ಅನುವಾದ ಮಾಡಿದರೆ ಏನಾಗುತ್ತದೆ ಗೊತ್ತೇ ? ಕಕ್ಕಸಿಗ Eye-wink ಇನ್ನು ಮಹಾಪುರುಷ ನೀವೇ ಊಹಿಸಿ.

ಪುರುಷ = ಹೇಲಿಗ, ಕಕ್ಕಸಿಗ ಇದರ ಬಗ್ಗೆ ಇಲ್ಲಿ ನೋಡು

ಇನ್ನು ಪುರುಷರ ಶೌಚಾಲಯವಂತೆ Smiling.

ಪುರುಷ ಅಂದರೆ ಬರಿ ಗಂಡಸು ಅಂತ ಅಲ್ಲವೇ ಅಲ್ಲ, ಅಂತ ನನ್ನ ಅನಿಸಿಕೆ. ಜೊತೆ ಇಂತಾ ವೇದದ ಒರೆಗಳನ್ನು ಹಿಂಗೆ ಬಳಸೋದು ಸರಿಯಿಲ್ಲ!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 3, 2007 - 4:49pm — ಕರಿ ತವಳೆ

ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?

ಕರಿ ತವಳೆ's picture

ಆಗಿನ ಕಾಲದಲ್ಲಿ ನಮ್ಮ ದೇಶ ಬಹಳ liberal ಅಂತೆ. Exampleಗೆ ಹೇಳೋದಾದ್ರೆ, ನಮ್ಮ ಹಳೆಯ ಗುಡಿಗಳ ಗೋಡೆಗಳ ಮೇಲೆ, ಕಂಬಗಳ ಮೇಲೆ ಬೆತ್ತಲೇ ಇಲ್ಲ ಅರೆ ಬೇತ್ತಲೆ figureಗಳು, ಹಾಗೂ ಕಾಮ ಕೂಟದ ಕೆತ್ತನೆಗಳು ಬಹಳ commonಆಗಿ ಕಾಣಿಸ್ತವೆ. ಇನ್ನೂ ಗರ್ಭಗುಡಿಯಲ್ಲಿರುವ ದೇವತೆಗಳೋ, ಈಗಿನ ಯಾವುದೇ modelಅನ್ನು ಮೀರಿಸುತ್ತಾರೆ: ಮೈಮಾಟದಲ್ಲೂ, ಉಡುಗೆ ತೊಡುಗೆಯಲ್ಲೂ. Smiling

ಇನ್ನೂ ಹೀಗೆ ಎಷ್ಟೋ ಸಂಗತಿಗಳನ್ನ ಹೇಳಬಹುದು. ಒಟ್ಟಿನಲ್ಲಿ ಆಗ ನಮ್ಮ ದೇಶ ಕೆಟ್ಟು ಕುಲಗೆಟ್ಟಿದ್ದಿದ್ದಂತೂ ಗ್ಯಾರೆಂಟಿ. Smiling Smiling ಈಗಿನ ಸಿನೇಮ ಏನೂ ಇಲ್ಲ ಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೈಟಿಲ್ಲದವರಿಗೆ ಸೈಟು...ನಮಗೆ ಓಟು
  • ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??
  • ಹಾಗೇ ಸುಮ್ಮನೆ
  • ಸುಕೃತಿ
  • ಭಕ್ತಿಯ ಶಕ್ತಿ.
Syndicate content

ಲೇಖಕರು

vijayamma's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator