ಗಂಡ ಹೆಂಡಿರ ವಾರ
ಸೋಮವಾರ war ಸುರು
ಮಗಳು ನಡುವಿರಲು ಮಂಗಳ
ಬುಧವಾರ ಬಧ್ಧ ವೈರಿಗಳು
ಅಬ್ಬರವಿಳಿಯಲು ಸುರು ಗುರುವಾರ
ಶುಕ್ರವಾರ ವಾರೆನೋಟಕೆ ಸೋತು
ಸನಿಹ ಬರುವರು ಶನಿವಾರ
ರವಿ ಸವಿ ಸವಿ ವಾರ
sorry..ನೆಂಟರು ಹಾಜರು
ಮತ್ತದೇ ಸೋಮವಾರ

- vijayamma ರವರ ಬ್ಲಾಗ್
- Login or register to post comments
- 531 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಗಂಡ ಹೆಂಡಿರ ವಾರ
ಸೂಪರ್ !!
======

ಟಿಪ್ಪಣಿ: ಗಂಡ ಹೆಂಡಿರ ವಾರ
ಈ war ವಾರಗಳನ್ನೋದಿದ ಮೇಲೆ ನನ್ನ ನೆನಪಿಗೆ ಬಂದು ಒಂದು ಹಾಡಿನ ಸಾಲು.
ಇಂದಿನ ವಾರವೆ ಶುಭವಾರ, ಇಂದಿನ ದಿನವೇ ಶುಭದಿನವು. ಯಾರಿಗಾದರೂ, ಇದು ಯಾವ ಹಾಡಿನಲ್ಲಿ ಬರುತ್ತದೆ ಎಂಬುದು ನೆನಪಿನಲ್ಲಿದ್ದರೆ ತಿಳಿಸಿಕೊಡಿ.
ಉ: ಇಂದಿನ ವಾರ
ಪುರಂದರದಾಸರ ಉಗಾಭೋಗಗಳಲ್ಲಿ ಒಂದು:
"ಇಂದಿನ ವಾರ ಶುಭ ವಾರ
ಇಂದಿನ ತಾರಿ (ತಾರೀ?) ಶುಭ ತಾರಿ
ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಠ್ಠಲರಾಯರ ಪಾಡಿದ ದಿನವು
ಪಾಡಿದ ದಿನವು, ಶುಭ ದಿನವು .."
ಉ: ಇಂದಿನ ವಾರ
ಇದನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಸವಿಯೊದಗು, ಭಟ್ರೇ. ನಾನಿನ್ನೂ ಇದನ್ನು (ಉಗಾಭೋಗಗಳನ್ನು) ಅಭ್ಯಾಸ ಮಾಡಿಲ್ಲ. ಹಾಗಾಗಿ ಇದು ತಿಳಿದಿರಲಿಲ್ಲ.
ತಾರೀ
ಸುನಿಲ,
"ತಾರೀ" ಅಂದರೆ ಏನೋ?
ಆ ಪದ್ಯ ಒಸಿ ಬಿಡಿಸಪ್ಪ ಪುರ್ಸೊತ್ ಸಿಕ್ಕದಾಗ!!

======
ಉ: ತಾರೀ
ತಾರಿ ಅಲ್ಲ, ಅದು ತಾರೆ ಆಗಬೇಕು.
ಇಂದಿನ ವಾರ, ತಿಥಿ, ನಕ್ಷತ್ರ (ತಾರೆ), ಯೋಗ, ಕರಣ (ದಿನವೊಂದಕ್ಕೆ ಸಂಬಂಧಪಟ್ಟ ವಿಶೇಷಣಗಳು)--ಯಾವ ಕೆಟ್ಟ ದಿನವಾಗಲಿ, ಯಾವ ಕೆಟ್ಟ ಗಳಿಗೆಯಾಗಲಿ--ಎಲ್ಲವೂ ಶುಭವೆ, ಎಂದು ನಾವು ದೇವರನ್ನು ನೆನಸುತ್ತೇವೆ, ..ಭಜಿಸುತ್ತೇವೆ.
ದೇವರನ್ನು ನೆನಸುವುದಕ್ಕೆ ಎಲ್ಲಾ ಗಳಿಗೆಯೂ ಸೂಕ್ತ, ಎಲ್ಲಾ ಗಳಿಗೆಯೂ ಪ್ರಶಸ್ತ; ಯಾವ ಹೊತ್ತೂ ಕೆಟ್ಟದಲ್ಲ--ಹೀಗೂ ಅರ್ಥೈಸಬಹುದು.
ಉ: ತಾರೀ
ಐಬು ಬಿಡಿಸಿದಕ್ಕೆ ನನ್ನಿ!!
======================================