ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಭೃಷ್ಟಾಚಾರ ನಿರ್ಮೂಲನೆ,ಸ್ವಚ್ಛ ಆಡಳಿತ,ರೋಟಿ,ಕಪ್ಡಾ,ರೋಡ್,ಮಕಾನ್,ಗರೀಬೀ ಹಟಾವೊ,....ಇತ್ಯಾದಿ,ಇತ್ಯಾದಿ.ಎಷ್ಟೊಂದು ಬಣ್ಣಬಣ್ಣದ ಮಾತುಗಳನ್ನು 'ಜನತೆಗೆ' ಕೊಟ್ಟ ಕಾಂಗ್ರೆಸ್, ಬಿ.ಜೆ.ಪಿ.,ಪಕ್ಷಗಳ ದೊಡ್ಡದೊಡ್ಡ ಲೀಡರುಗಳು ತಮ್ಮ ತಮ್ಮ ಮಾತು ಉಳಿಸಿಕೊಂಡಿದ್ದಾರೆಯೆ? ಸ್ವಾಮಿ,ಕುಮಾರ ರಾಜಕೀಯದಲ್ಲಿ ಇನ್ನೂ ಬಚ್ಚಾ."ಜನತೆಗೆ"ಅಲ್ಲಾ,ಏನು ಒಂದು ಬಿ.ಜೆ.ಪಿ.,ಗೆ ಕೊಟ್ಟ ಮಾತು ತಪ್ಪಿದ್ದು ಅಷ್ಟೆ. ಅದಕ್ಕೆ ಇಲ್ಲಿಂದ ದೆಹಲಿಯವರೆಗೂ ಗಲಾಟೆ ಎಬ್ಬಿಸಿದಾರಲ್ಲಾ...ನ್ಯಾಯವಾ?

- vijayamma ರವರ ಬ್ಲಾಗ್
- Login or register to post comments
- 351 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಹಹಾ. ನೀವು ಹೇಳುತ್ತಿರೋದು sarcasm ಅನ್ಕೊಂಡಿದೀನಿ.
<ಇಲ್ಲಾಂದ್ರೆ>
ನೀವು ಹೇಳೋದು ಒಂಥರಾ ಸುಳ್ಳು ಹೇಳೋದಿಕ್ಕೆ, ಮೋಸ ಮಾಡೋದಿಕ್ಕೆ ಕುಮ್ಮಕ್ಕು ಕೊಟ್ಟಂಗೆ!!
ನಾಳೆ ನಾನೇನಾದರೂ ಯಾರಿಗೋ ಕೊಟ್ಟ ಸಾಲಕ್ಕೆ ಮೋಸ ಮಾಡಿದೆ ಎಂದಿಟ್ಟುಕೊಳ್ಳೋಣ. ಆಗ ಕುಮಾರಸ್ವಾಮಿನೇ ಮೋಸ ಮಾಡಿದ. ಇನ್ನು ನಾನು ಮಾಡಿದರೆ ತಪ್ಪೇನು ಅಂತ ಹೇಳೋದಿಕ್ಕಾಗುತ್ಯೇ?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
"ನಾಳೆ ನಾನೇನಾದರೂ ಯಾರಿಗೋ ಕೊಟ್ಟ ಸಾಲಕ್ಕೆ ಮೋಸ ಮಾಡಿದೆ ಎಂದಿಟ್ಟುಕೊಳ್ಳೋಣ. ಆಗ ಕುಮಾರಸ್ವಾಮಿನೇ ಮೋಸ ಮಾಡಿದ. ಇನ್ನು ನಾನು ಮಾಡಿದರೆ ತಪ್ಪೇನು ಅಂತ ಹೇಳೋದಿಕ್ಕಾಗುತ್ಯೇ? "
ಹೇಳಕ್ಕಾಯ್ತದೆ ಅಣ್ಣ... ಒಮ್ಮೆ ಹೇಳ್ ನೋಡ್ರಿ
.. ನೀವು ಕುವರಸಾಮಿಯಂಗೆ ಸೀಯಮ್ಮು ಆದೀರಿ 
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಅಂದಹಾಗೆ ಸ್ವಲ್ಪ ಸಾಲ ಬೇಕಿತ್ತು ಮಹೇಶ. ೨೦ ತೊಂಗ್ಳೊಳ್ಗೆ ವಾಪಸ್ ಕೊಟ್ಟು ಬಿಡ್ತೀನಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಸರಿಯಪ್ಪೋ..
ಏಸ್ಟು ಬೇಕು? ನನ್ ತಾವ ಈಗ ಇರೋದ್ರಾಗೆ ಕೊಟ್ಟೇನು, ಆದ್ರೇ.. ಅಡವು ಏನ್ ಇಟ್ಟೀರ?
ನಾನೇನು ಯಡಿಯೂರಪ್ಪನೇ.. ಸುಮ್ನೆ ಬಾಯ್ಮಾತನ್ನ ನೆಚ್ಚಿಕೊಳ್ಳಕ್ಕೆ
...
ಅಲ್ರೀ.. ಸಾಲ ಕೇಳೋರು ಯಾವಾಗ ತೀರಿಸ್ತೀನಿ ಅಂತ ದಿಟ ಹೇಳ್ತಾರ?
ಯಾಪಾರ ಅನ್ನೋದೇ ಮೋಸ, ಇನ್ನ.. ಸಾಲ-ಗೀಲದಾಗೆ ಬಿಂಕು ಇಲ್ದೇ ಇರ್ತದಾ...
ಇದನ್ನ ನೆನಪು ಮಡಗಿಕೊಳ್ಳಿ..
"ಕೊಟ್ಟೊನು ಕೋಡಂಗಿ, ಈಸುಕೊಂಡೊನು ಈರಬದ್ರ"
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಕುಮಾರಸ್ವಾಮಿಯೇ ಮೋಸ ಮಾಡಿದ.....
ಜನತೆ ಮೋಸ,ದ್ರೋಹ,ಸುಳ್ಳು,ಯಾವುದೇ ತಪ್ಪಿಗೂ ಪುರಾಣಪುರುಷರ, ಮಹಾಭಾರತ,ರಾಮಾಯಣದ ಉತ್ತಮ ಪಾತ್ರಗಳ ಉದಾಹರಣೆ ಕೊಡುವರು.
"ಶ್ರೀನಿಧಿ"ಗೆ ಸಾಲ!!-ಆ ಶ್ರೀನಿವಾಸನೇ ಸಾಲಗಾರನಾಗಿರುವಾಗ.
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಶ್ರೀನಿಧಿ-ಸಿಯೆಮ್
ಮಹೇಶ- ಡಿಸಿಯೆಮ್
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಮಾತು ತಪ್ಪದವರು ಇರಬಹುದು . ಅವರು ಕಲ್ಲು ಎಸೆಯಲು ತಯಾರು ಇರಬೇಕಲ್ಲ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ನಿಜ.ಮಾತು ತಪ್ಪದವರು ಕಲ್ಲು ಎಸೆಯುವಂತ ಕೆಲಸ ಮಾಡರು.
ಈಗಿನ 'ರಾಜಕಾರಣಿಗಳಲ್ಲಿ' ಮಾತು ತಪ್ಪದವರು ಇಲ್ಲವೇ ಇಲ್ಲ.