ಮಾತಿನ ಮೋಡಿ
ನಾನು,ಯಜಮಾನರು ಚರ್ಚಿಸಿ,ಅನೇಕ ಮಿತ್ರರ ಅಭಿಪ್ರಾಯ ಕೇಳಿ,ಸ್ಯಾಮ್ ಸಂಗ್ ಟಿ.ವಿ ತೆಗೆದುಕೊಳ್ಳಲು ಹೋದೆವು. ತೆಗೆದುಕೊಂಡುದು ಒನಿಡಾ.
ಇದೇ ರೀತಿ ಐ ಎಫ಼್ ಬಿ ವಾಷಿಂಗ್ ಮೆಷಿನ್ ತೆಗೆದು ಕೊಳ್ಳಲು ಹೋಗಿ ಕೊಂಡದ್ದು ವಿಡಿಯೊಕಾನ್.
ಸೊನಿ ಡಿ.ವಿ.ಡಿ ಪ್ಲೇಯರ್ ತೆಗೆದುಕೊಳ್ಳಲು ಹೋಗಿ ಡೇಪಿಕ್ ನೊಂದಿಗೆ ಮನೆಗೆ ಬಂದೆವು.ನೋಕಿಯಾ ಬದಲಿಗೆ ಸಾಮ್ಸಂಗ್ ಮೊಬೈಲ್ ಬಂತು.ಇದೆಲ್ಲಾ ಬೇರೆ ಬೇರೆ ಅಂಗಡಿಗಳಲ್ಲಿ,ಬೇರೆ ಬೇರೆ ಸೇಲ್ಸ್ ಮ್ಯಾನ್ ಗಳ ಮಾತಿನ ಮೋಡಿಯಿಂದ ಆದುದು.ಒಬ್ಬ ಸಾಧಾರಣ ಸೇಲ್ಸ್ ಮ್ಯಾನ್ ಗೆ ನಮ್ಮ ನಿರ್ಧಾರವನ್ನು ಬದಲಿಸುವ ತಾಕತ್ತಿರುವಾಗ ಇನ್ನು ಒಬ್ಬ ಉತ್ತಮ ವಾಗ್ಮಿ ಜನರ ಮೇಲೆ ಎಷ್ಟು ಹಿಡಿತ ಸಾಧಿಸಿಯಾನು?ಇದೇ ಕಷ್ಟ. ಆ ಸಾಹಿತಿ ಹೇಳಿದ್ದೂ ಸರಿ ಎನಿಸುತ್ತದೆ. ಈ ಸಾಹಿತಿ ಬರೆದದ್ದೂ ಸರಿ ಎನಿಸುತ್ತದೆ.
ಓದಿದ ನಮ್ಮ ಅವಸ್ಥೆಯೇ ಹೀಗಿರಲು,ಓದದ ಕಾಡಿನಲ್ಲಿ ವಾಸಿಸುವ ಯುವಕರನ್ನು ದಾರಿ ತಪ್ಪಿಸುವುದು ಎಷ್ಟರ ಕೆಲಸ.
ಹೀಗೆ ನಮ್ಮ ರಾಜಕಾರಣಿಗಳ ಮಾತಿನ ಮೋಡಿಗೊಳಗಾಗಿ,ಅವರ ಕೋಟಿಗಟ್ಟಲೆ ಹಣದ ಹಗರಣಗಳನ್ನೂ ಮರೆತು ಬಿಡುತ್ತೇವೆ.

- vijayamma ರವರ ಬ್ಲಾಗ್
- Login or register to post comments
- 419 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮಾತಿನ ಮೋಡಿ
ವಿಜಯಮ್ಮ
ನಿಮ್ಮ ಗಮನ ಚನ್ನಾಗಿದೆ.
ಈ ಆಯ್ಕೆ/choice ಅನ್ನೋದು ಇರೋದರಿಂದಲೇ ಈ ಪಾಟಿ ಪಜೀತಿ!!
ಜಗದಲ್ಲಿ ಆಯ್ಕೆ ಅನ್ನೋದೇ ಇರದಿದ್ದರೆ ಎಸ್ಟು ನೆಮ್ಮದಿ ಇರ್ತಿತ್ತು ಅಲ್ವಾ!
ಉ: ಮಾತಿನ ಮೋಡಿ
http://www.columbia.edu/~ss957/articles/Rethinking_the_Value_of_Choice.p...
ಇಲ್ಲಿ ಚಾಯ್ಸ್ ಬಗ್ಗೆ ಒ೦ದು ಸ೦ಶೋಧನೆ ನಡೆದಿದೆ.
ಚಾಯ್ಸ್ ಜಾಸ್ತಿಯಾದಷ್ಟು ದು:ಖ ಜಾಸ್ತಿಯ೦ತೆ.
The Dark Side of Choice: When Choice Impairs Social Welfare
http://www.columbia.edu/~ss957/articles/dark_side_of_choice.pdf
How Much Choice is Too Much?
:)
http://www.columbia.edu/~ss957/articles/How_Much_Choice_Is_Too_Much.pdf
ಇದರಲ್ಲಿ ಯಾವುದಾದರೂ ಒ೦ದು ಓದಿ ! ಎಲ್ಲಾ ಓದ ಬೇಡಿ ! "Choice is Yours "
ಉ: ಮಾತಿನ ಮೋಡಿ
"ಇದರಲ್ಲಿ ಯಾವುದಾದರೂ ಒ೦ದು ಓದಿ ! ಎಲ್ಲಾ ಓದ ಬೇಡಿ ! "Choice is Yours ""
ಅಲಲಾ!! ಮುರುಳಿ ಆತ್ಮರಿಗೂ ನಗೆಚಟಾಗಿ ಬರುವುದು ಅಂತ ತಿಳಿಯಿತು..
ನಾನು ನಕ್ಕು ನಕ್ಕೂ ನೆಗೆದು ಬಿದ್ದೆ
ಉ: ಮಾತಿನ ಮೋಡಿ
ಓದಲು ಬಹಳ ಪುಟವಿದೆ.ಅದನೆಲ್ಲಾ ಸಂಕ್ಷೇಪವಾಗಿ ನೀವೇ ಹೇಳಿ ಮುರಳಿಯವರೆ...ಪ್ಲೀಸ್
ಉ: ಮಾತಿನ ಮೋಡಿ
ಮುರಳಿಯವರೆ!

ವಿಜಯಮ್ಮನವರು, ನಿಮ್ಮನ್ನು ಮಾತಿನ ಮೋಡಿಯಲ್ಲಿ ಸಿಕ್ಕಿ ಹಾಕಿಸ್ತಾ ಇದ್ದರೆ - ಹುಷಾರ್!
--ಶ್ರೀ
ಉ: ಮಾತಿನ ಮೋಡಿ
ಆಯ್ಕೆ ಅನ್ನೋದೇ ಇರದಿದ್ದರೆ ...ಸೀರೆ ಅಂಗಡಿಗೆ ಹೋಗಿ ಯುನಿಪಾರ್ಮ್ ಬಟ್ಟೆ ತರಬೇಕಾಗುತಿತ್ತು.
ಉ: ಮಾತಿನ ಮೋಡಿ
ಇಂಗ್ಲೆಂಡಿನಲ್ಲಿ ವಾಸವಾಗಿರುವ ಆಸ್ಟ್ರೇಲಿಯಾದ ಟಿವಿ ವ್ಯಕ್ತಿ ಕ್ಲೈವ್ ಜೇಮ್ಸ್ ಎಂಬಾತ ಟಿವಿ ಚಾನಲ್‌ಗಳ ವಿಷಯದಲ್ಲಿ ಹೇಳಿದ ಮಾತು ನೆನಪಿಗೆ ಬಂತು. "infinite choices of the sameness!" ("ಒಂದೇ ಬಗೆಯ ಅನಂತ ಆಯ್ಕೆಗಳು"(?))
ಉ: ಮಾತಿನ ಮೋಡಿ
ವಿಜಯಮ್ಮರವರು ಎತ್ತಿಕೊಂಡ ವಿಷಯ ಬಹಳ ಚೆನ್ನಾಗಿದೆ. ಅವರ insight (ಅಂತರ್ದ್ರಷ್ಟಿ ) ಮೆಚ್ಚಿದೆ.
ಉ: ಮಾತಿನ ಮೋಡಿ
ಧನ್ಯವಾದಗಳು.