ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಸಂಸ್ಕೃತ ಸುಂದರ,ಸುಲಲಿತ,ಸುಶ್ರಾವ್ಯ ಭಾಷೆ.ಆದರೆ ಕೇವಲ ಕೆಲವೇ ಪಂಡಿತರು ಸೇರಿ ವ್ಯಾಕರಣಕ್ಕೇ,ಉಚ್ಛಾರಕ್ಕೇ ಮಹತ್ವ ಕೊಟ್ಟು,ಉಳಿದವರು ಕಲಿಯದಂತೆ, ಕಲಿತವರು ಮಾತನಾಡಲು ಹಿಂಜರಿಯುವಂತೆ ಮಾಡಿದರು.
ಇದೇ ರೀತಿ ಇಂಗ್ಲೀಷನ್ನೂ ಸಹ-ಸ್ಕೂಲ್ ನ ಇಂಗ್ಲೀಷ್ ಟೀಚರುಗಳು ಮಕ್ಕಳು ಮಾತನಾಡುವುದಕ್ಕೆ ಪ್ರೋತ್ಸಾಹಿಸದೇ ಬರೀ ವ್ಯಾಕರಣ ಬರಿಸಿ ಬರಿಸಿ ಇಂಗ್ಲೀಷಂದ್ರೆ ಭಯ ಪಡುವಂತೆ ಮಾಡಿದರು.(ಈಗ ಬಿಡಿ,ಕಸಗುಡಿಸುವವಳೂ ಸಹ ಟಸ್ ಪುಸ್ ಮಾತನಾಡುವಳು.)
ಹೀಗೆ ವಿಜ್ಞಾನದಲ್ಲೂ ಸಹ- ಕಂಠಪಾಠ ಚೆನ್ನಾಗಿ ಬರುವ ವಿದ್ಯಾರ್ಥಿಗಳಿಗೆ ವಿಜ್ಞಾನ,ಉಳಿದವರೇನಿದ್ದರು ಆರ್ಟ್ಸ್ ಓದಲಿಕ್ಕೇ ಲಾಯಕ್.
ಕನ್ನಡ- ಆಹಾ ಎಷ್ಟೊಂದು ಸುಂದರ.ಸುಲಿದ ಬಾಳೆಯಹಣ್ಣಿನಂತೆ,ಅಂದು ತಿನ್ನಲು ಹೋದರೆ-ಬಾಳೆ ಹಣ್ಣಿನಲ್ಲಿ ಕಲ್ಲು ಸಿಕ್ಕಿದಂತೆ ಇಲ್ಲೂ ಕನ್ನಡ ಪಂಡಿತರ ರಗಳೆ ಸುರುವಾಗಿದೆ.ಒಂದೆರಡು ಸಂಸ್ಕೃತ /ತುಳು/ತೆಲುಗು/ಮಲಯಾಳ/ಕೊಂಕಣಿ/ಇಂಗ್ಲೀಷ್ ಶಬ್ದಗಳು ಮಿಕ್ಸ್ ಆಗಲಿ ಬಿಡಿ. ಕನ್ನಡದ ಕೊಲೆಯೇನಾಗುವುದಿಲ್ಲ.ಕನ್ನಡವನ್ನು ಈರುಳ್ಳಿ,ಬೆಳ್ಳುಳ್ಳಿ ಇಲ್ಲದ ಪುಳಿಚಾರು ಅಡುಗೆ ಮಾಡಬೇಡಿ.

- vijayamma ರವರ ಬ್ಲಾಗ್
- Login or register to post comments
- 771 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ವಿಜಯಮ್ಮ...
ಇದಕ್ಕೆ ನಿಮ್ಮ ಬಗೆಹರಿಕೆ/ಪರಿಹಾರ ಏನು?
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಕನ್ನಡದಲ್ಲಿಲ್ಲದ ಇತರ ಭಾಷೆಯ ಜನಪ್ರಿಯ ಶಬ್ದಗಳನ್ನು ಕನ್ನಡಕ್ಕೆ ತರುವ ಅಗತ್ಯವೇ ಇಲ್ಲ.(ಉದಾ-ಪೋಲೀಸ್)
ಕನ್ನಡ ವಾಕ್ಯವೆಂಬ ಹಾರದಲ್ಲಿ ಸಂಸ್ಕೃತ ಶಬ್ದಗಳು ವಜ್ರದಂತೆ.
ಮಲೆಯಾಳಿಗಳ ಕನ್ನಡ,ತೆಲುಗರ ಕನ್ನಡ,ತಮಿಳರ ಕನ್ನಡ,ಕೆಲ ಮುಸಲ್ಮಾನರ ಉರ್ದು ಮಿಶ್ರಿತ ಕನ್ನಡ,ಉತ್ತರಭಾರತೀಯರ ಹಿಂದಿ ಮಿಶ್ರಿತ ಕನ್ನಡ ಕೇಳಲು ನನಗೆ ಖುಶಿಯಾಗುವುದು.ಏನೇ ಆಗಲಿ,ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುವರಲ್ಲಾ.ಆವಾಗ ನಾವೂ ಅವರ ಭಾಷೆಯ ಒಂದೆರಡು ಶಬ್ದಗಳನ್ನು ಕನ್ನಡದಲ್ಲಿ ಸೇರಿಸಿ ಮಾತನಾಡಿದರೆ ಅವರಿಗೂ ಖುಷಿ.
ಕಾವೇರಿ ತಲಕಾವೇರಿಯಲ್ಲಿದ್ದಂತೆ ಬೆಂಗಳೂರಿಗೆ ಬರುವಾಗ(ನಳ್ಳಿಯಲ್ಲಿ)ಶುದ್ಧವಾಗಿರಬೇಕೆಂದು ಬಯಸುತ್ತೇವೆ.ಆದರೆ ಸಾಧ್ಯವಾ? ಭಾಷೆಯೂ ನದಿಯಂತೆ ಎಲ್ಲಾ ಇತರ ನದಿ,ಮೋರಿ(ಕೆಲ FM ಕನ್ನಡ?)ಗಳನ್ನೂ ಸಹ ಸೇರ್‍ಈಸಿಕೊಂಡು ಭೋರ್ಗರೆಯುತ್ತಾ ಹರಿಯಲಿ,ಶುದ್ಧ ನೀರಿನ ಸಣ್ಣಕೆರೆಯಾಗಿ ಸ್ವಲ್ಪಸಮಯದಲ್ಲೇ ಒಣಗಿಹೋಗುವುದು ಬೇಡ.
ಭಾರತ್ ಮಾತಾ ಕೀ ಜೈ
ಭಾರತಮ್ಮನಿಗೆ ಜಯವಾಗಲಿ
ಕನ್ನಡ ಉಳಿಯಲಿ,ಬೆಳೆಯಲಿ
(ಶುದ್ಧಕನ್ನಡ-ಪಂಡಿತರಲ್ಲಿ ಉಳಿಯಲಿ)
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಓ! ನಾವ್ ಕನ್ನಡಿಗರ ಈ ಹಿಂಜರಿತದಿಂದಲೇ ಈ ಸ್ತಿತಿಗೆ ನಾವು ಇಳಿದಿರೋದು. ತೆಲುಗು, ತಮಿಳರು ಮರುಕ ತೋರಿ, ಕನ್ನಡಾ ಮಾತಾಡಬೇಕಾ? ಏನ್ರಿ?... ಸರಕಾರದ ಎಲ್ಲಾ ವೆವಹಾರಗಳೂ ಕನ್ನಡದಲ್ಲಿಯೇ ನಡಿಬೇಕು, ಪಾಸ್‍ಪೋರ್ಟಿಗೆ ಹಾಕೋ ಅರ್ಜಿಯಿಂದ ಹಿಡಿದು ಪೋಲಿಸ್ ದೂರಿನ ವರೆಗೆ ಎಲ್ಲಾನೂ ಕನ್ನಡದಲ್ಲೇ ಇರಬೇಕು. ಅಂದರೆ ಆಗ ಇದು ಕನ್ನಡ ನೆಲ, ಅನ್ನೋದು ತಿಳಿಯುತ್ತೆ, ಕನ್ನಡ ಉಳಿದುಕೊಳ್ಳುತ್ತೆ.
ಎಲ್ಲಿಯವರೆಗೆ ಸರಕಾರಾನೇ ಕರ್ನಾಟಕದಲ್ಲಿ ಬೇರೆ ನುಡಿಗಳಿಗೆ ಮಣೆ ಹಾಕೊಂಡಿರುತ್ತೋ, ಅಲ್ಲಿವರೆಗೂ ಏನು ಮಾಡಿದ್ರೂ ದಂಡ.
ಇದು ಕನ್ನಡ ನೆಲ, ಹಾಗಾಗಿ ಇಲ್ಲಿ ವೆವಹಾರಿಕವಾಗಿ ಎಲ್ಲಾ ಕನ್ನಡದಲ್ಲೇ ನಡಿಬೇಕು, ಮನೆಗಳಲ್ಲಿ ಅವರವರಿಗೆ ಬೇಕಾದ ನುಡಿಗಳಲ್ಲಿ ಮಾತಾಡಲಿ.
ಕನ್ನಡ ತಾಯಿಗೆ ಗೆಲುವಾಗಲಿ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ತೆಲುಗು,ತಮಿಳರು ಮರುಕ ತೋರಿ ಕನ್ನಡಾ ಮಾತಾಡಬೇಕಾ? ಏನ್ರಿ?...
ಸಮಾಧಾನ...
ಸಮಾಧಾನ, ಸಂಗನ ಗೌಡ್ರೆ,(ದೊಡ್ಡಗೌಡ್ರು ಪತ್ರಿಕೆಯವರನ್ನು ಜೋರುಮಾಡುವಂತೆ ಬರೆಯುವಿರಲ್ಲಾ?)ಸರಕಾರದ ಎಲ್ಲಾ ವ್ಯವಹಾರಗಳೂ ಕನ್ನಡದಲ್ಲಿಯೇ ನಡೆಯಬೇಕು.ಅರ್ಜಿಗಳಲ್ಲಿ ಒಂದು ಬದಿ ಕನ್ನಡ,ಇನ್ನೊಂದು ಬದಿಯಲ್ಲಿ ಇಂಗ್ಲೀಷ್ ಇದ್ದಾಗ"ಕನ್ನಡಿಗರ್‍ಏ" ಬರೆಯುವುದು ಯಾವ ಭಾಷೆಯಲ್ಲಿ? ಎಲ್ಲರೂ ಕನ್ನಡದಲ್ಲಿಯೇ ಮಾತನಾಡಲಿ.ಅದನ್ನೇ ನಾನೂ ಹೇಳುವುದು.ಆದರೆ ವ್ಯಾಕರಣ ತಪ್ಪಿದಲ್ಲಿ,ಒಂದೆರಡು ಪರಭಾಷೆ ಶಬ್ದಗಳು ಮಿಕ್ಸ್ ಆದರೆ ಕಿರಿಕಿರಿ ಮಾಡಬೇಡಿ ಎಂದು ವಿನಂತಿಸಿದೆ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಪತ್ರಿಕೆಯವರನ್ನು ಜೋರು?
ನಾನು ಹೇಳುತ್ತಿರುವದು ಸರಕಾರದ ಬಗ್ಗೆ.
ಅಯ್ಯೋ, ಮಾತಾಡ್ರಿ, ಯಾರ್ ಬೇಡಾ ಅಂದರು? ಬೇರೆ ನುಡಿಯವರು ಕನ್ನಡ ಕಲಿಯುತ್ತಾ ಬೆರೆತ ಕನ್ನಡದಲ್ಲಿ ಮಾತಾಡಿದರೆ ತಪ್ಪಿಲ್ಲಾ, ಆದರೆ ಕನ್ನಡದವರೆ ಆದವರು ಅವರ ಜೊತೆ ಹಂಗೇ ಮಾತಾಡ್ತೀನಿ ಅಂದರೆ ಅದು ಸರಿ ಅಲ್ಲಾ. ಇದು ಸರಿ ಕನ್ನಡ ಅಲ್ಲಾ ಅಂತಾ ಅವರನ್ನು ತಿದ್ದಿದರೆ, ಎಲ್ಲಿ ಅವರು ಕನ್ನಡಾ ಮಾತಾಡಲ್ಲವೇನೋ ಅಂತಾ ನಿಮಗೆ ಹೆದರಿಕೆ ಅಲ್ವಾ?? ಅಂದರೆ ನೀವು ಕನ್ನಡದಲ್ಲಿ ಮಾತಾಡೋಕೆ ನೋಡ್ತಿರುವವನ ಮುಲಾಜಿಗೆ ಬಿದ್ದಂಗಾಗುತ್ತೆ. ಅದ್ಯಾಕೆ? ಅಲ್ಲದೇ ಕಲಿಯುತ್ತಿರುವ ಆತ ಅದೇ ಸರಿ ಕನ್ನಡ, ಅಂದುಕೊಂಡ್ ಬಿಡಲ್ವಾ?
ಕರ್ನಾಟಕ ಕನ್ನಡ ನೆಲ, ಇಲ್ಲಿನ ಆಡಳಿತ ಕನ್ನಡದಲ್ಲಿರಬೇಕಾದ್ದು ಸರಿಪು ತಾನೇ? ಹೊರಗಿನಿಂದ ಬಂದವರು ಕನ್ನಡ ಯಾಕೆ ಕಲಿಯಬೇಕು? ನಿಮ್ಮಂತವರು ಅವರ ನುಡಿಯಲ್ಲೇ ಮಾತಾಡೋರು ಏಸೋ ಸಿಗುವಾಗ, ಅಲ್ಲದೇ ಸರಕಾರ ಇಂಗ್ಲೀಸಿನಲ್ಲೂ ವೆವಹಾರ ಮಾಡಬಹುದು ಅಂತಾ ಇರುವಾಗ ಅವರು ಇಂಗ್ಲೀಸೇ ಬಳಸ್ತಾರೆ, ಎಲ್ಲೂ ಅವರಿಗೆ ಕನ್ನಡ ಕಲಿಯಬೇಕಾದ್ದೇ(ನೆಸೆಸ್ಸಿಟಿ) ಬರಲ್ಲಾ ಅಂದಾಗ ಅವರೇಕೆ ಕನ್ನಡ ಕಲಿತಾರೆ ಹೇಳಿ.
ಅದಕ್ಕೇ ನಾನು ಹೇಳಿದ್ದು, ಸರಕಾರದ ವೆವಹಾರಗಳು ಎಲ್ಲಾ ಕನ್ನಡದಲ್ಲೇ ಇರಲಿ ಅಂತಾ. ಕನ್ನಡ ಬರದೇ ಇರುವವರಿಗೆ ತೊಂದರೆ ಆಗುತ್ತೆ ಅನ್ನೋದು ಕೆಲವರ ಅಳಲು, ಹಾವೂ ಸಾಯ್ಬೇಕು, ಕೋಲ್‍ನೂ ಮುರಿಬಾರದು ಅನ್ನೋರಿಗೆ ಏನ್ ಹೇಳೋಣಾ....
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
"....ಕನ್ನಡ ವಾಕ್ಯವೆಂಬ ಹಾರದಲ್ಲಿ ಸಂಸ್ಕೃತ ಶಬ್ದಗಳು ವಜ್ರದಂತೆ...."
ಸಕ್ಕದ ವಜ್ರ ಯಾಕೆ ಅಂತ ಹೇಳಿ ? ಸುಮ್ನೆ ದೊಡ್ಡದಾಗಿ ಹೇಳಿಕೆ ಕೊಡಬೇಡಿ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
"ಕನ್ನಡ ವಾಕ್ಯವೆಂಬ ಹಾರದಲ್ಲಿ ಸಂಸ್ಕೃತ ಶಬ್ದಗಳು ವಜ್ರದಂತೆ"
ಇದರಲ್ಲಿ ವಜಿರಗಳೇ ಹಚ್ಚಿವೇ. ಕನ್ನಡವೊಂದೇ ದಾರ!
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಶ್ರೀಮಂತರು ವಜ್ರದ ಹಾರ,
ಮಧ್ಯಮ ವರ್ಗ ಚಿನ್ನದ ಹಾರ,
ಬಡವರು ಅರಿಶಿನದ ದಾರ ಹಾಕಿಕೊಳ್ಳುವರು.
ತಮ್ಮೆಲ್ಲರ ಪ್ರಯತ್ನದಿಂದ ಕನ್ನಡ ಅರಿಶಿನದ ದಾರದ ಸ್ಥಿತಿಯಿಂದ ಚಿನ್ನ, ವಜ್ರದ ಹಾರವಾಗಲಿ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
"ತಮ್ಮೆಲ್ಲರ ಪ್ರಯತ್ನದಿಂದ ಕನ್ನಡ ಅರಿಶಿನದ ದಾರದ ಸ್ಥಿತಿಯಿಂದ ಚಿನ್ನ, ವಜ್ರದ ಹಾರವಾಗಲಿ."
ನಲ್ವೇ/ಸನ್ಮಾನ್ಯೆ,
ನೀವು ನೆಲೆಸಿರುವ ಬೆಂಗಳೂರೋ, ಮಂಗಳೂರೂ ಮತ್ತಾವುದೋ ಒಂದು ಹೊಳಲೊಂದರ ಕನ್ನಡವನ್ನೇ ಹಿಡಿದು ಪಟ್ಟಣಿಗರಂತೆ ನಿಮ್ಮ ದೊಡ್ಡ ದೊಡ್ಡ ಮಾತಿದೆ.
ನಿಮ್ಮ ಉಂಕಿಗೆ ಗಟ್ಟಿ ನೆಲೆಯಿಲ್ಲ. ಅದರಲ್ಲಿ ನಮ್ಮತನ ಉಳಿಸುಕೊಳ್ಳುವ ಹೊಣೆಯಂತೂ ಇಲ್ಲವೇ ಇಲ್ಲ. ನಿಮ್ಮ ಮಾತು ಜಾರಿಕೆಯ ಮಾತಾಗಿದೆ. ನಿಮಗೆ ಕನ್ನಡದ ಹಲವು ಒರೆಗಳೇ ಗೊತ್ತಿರದೇ ಬರೀ ಈ ಹೊಳಲ್ಗನ್ನಡವನ್ನೇ ಓದಿಕೊಂಡು ಆಡಿಕೊಂಡು, ಹೆಚ್ಚು ಕನ್ನಡದೊರೆಗಳನ್ನು ಬಳಸಿ ಮಾತಾಡುವ ಬೇರೆಡೆಯ ಕನ್ನಡಿಗರೊಂದಿಗಿಂತ ನಿಮಗೆ ಬೇರೆನುಡಿಗಾರರ ಕೂಟೇ ಮಾತುಕತೆ ಹೆಚ್ಚಿರುವಂತೆ.
ನಿಮ್ಮ ಮಾತಿನ ಸರಣಿಗೆ ಗಟ್ಟಿ ನೆಲೆಯಿಲ್ಲ.! ಸುಮ್ಮನೆ ತೇಲಿಸಿದ ಮಾತುಗಳು. ನಿಮ್ಮ ಮಾತಿನಂತೆ ಬಿಯಗರಣ/ವ್ಯಾಕರಣವೇ ಇರಬಾರದು. ಜಗದಲ್ಲಿ ಬಿಯಗರಣವಿಲ್ಲದ ನುಡಿಯುಂಟೆ? ಹಾಗೆ ಪಾಂಡಿತ್ಯಕ್ಕೆ ಬೆಲೆಯಿಲ್ಲ.
ನೀವು ಆಡುನುಡಿಯಲ್ಲಿ ಇರದ ಎನಿತೋ ಸಕ್ಕದ ಒರೆಗಳನ್ನು ಬಳಸಿದ್ದೀರಿ. ಇದು ಯಾಕೆ?
"ಸಂಸ್ಕೃತ ಸುಂದರ,ಸುಲಲಿತ,ಸುಶ್ರಾವ್ಯ ಭಾಷೆ.ಆದರೆ ಕೇವಲ ಕೆಲವೇ ಪಂಡಿತರು ಸೇರಿ ವ್ಯಾಕರಣಕ್ಕೇ, ಉಚ್ಛಾರಕ್ಕೇ ಮಹತ್ವ ಕೊಟ್ಟು,ಉಳಿದವರು ಕಲಿಯದಂತೆ, ಕಲಿತವರು ಮಾತನಾಡಲು ಹಿಂಜರಿಯುವಂತೆ ಮಾಡಿದರು,"
ಇದು ಯಾಕೆ? ಇದು ಬರೀ ಪಾಂಡಿತ್ಯಪ್ರದರ್ಶನ, ತೋರಿಕೆ ಅಲ್ಲವೇ? ಹೀಗೆ ಇಲ್ಲಿ. ಪಾಂಡಿತ್ಯ ಅನ್ನೋದು ತಮಗೂ ಬೇಕಾಯಿತಲ್ಲ!! ಆದುದರಿಂದ ಪಾಂಡಿತ್ಯ/ಪಂಡಿತರನ್ನು ಹಂಗಿಸುವಾಗಿಲ್ಲ. ಏಕೆಂದರೆ ನೀವು ಪಾಂಡಿತ್ಯ ತೋರಿ ಪಂಡಿತೆಯಾದಿರಿ.
ಉಚ್ಚಾರವದು, ಉಚ್ಛಾರವಲ್ಲ!
ಹಾಗೇ ಮಾತನ್ನಾಡಲು, ಮಾತನಾಡಲು ಹೇಗೆ ಸರಿ?.
ಹಿಂಜರಿ ಹೇಗೆ ? ಜರಿ ಅಂದರೆ ಬೈಯಿ/ಹಳಿ ಅಂತ ಅಲ್ವಾ? )
ನೋಡಿ ನೀವು ಬರೆದಿರುವುದು ಎಷ್ಟು ಗೋಜಲಿಂದಕೂಡಿದೆ. ಇವನ್ನೆಲ್ಲ ಬಿಡಿಸಲು ಬೇಕಲ್ಲ ಬಿಯಗರಣ.
"ಸಂಸ್ಕೃತ ಸುಂದರ,ಸುಲಲಿತ,ಸುಶ್ರಾವ್ಯ ಭಾಷೆ" ಅಂದಿರಲ್ಲ. ಸರಿ ಹಾಗಾದರೆ ನನಗೂ ನಿಮಗೂ ಸಂಸ್ಕೃತ ಯಾಕೆ ಸುಂದರವಲ್ಲ, ಸುಲಲಿತವಲ್ಲ, ಸುಶ್ರಾವ್ಯವೂ ಅಲ್ಲ, ಅನ್ನುವದಕ್ಕೆ ಮಾತುಕತೆಗೆ ಇಳಿಯಲು ನೀವು ಅಣಿಯೇ?
( ನನಗೆ ಸಂಸ್ಕೃತದ ಕೊರತೆ ತೋರಲು ಹಂಬಲವಿಲ್ಲ, ಅದರಲ್ಲಿ ಹೆಮ್ಮೆಯೂ ಇಲ್ಲ. ಅದರೆ ಅದು ಕನ್ನಡಕ್ಕಿಂತ ಸುಂದರ, ಸುಲಲಿತ, ಸುಶ್ರಾವ್ಯ ಹೇಗೆ? ಸಂಸ್ಕೃತದ ಸಾಹಿತ್ಯ/ಬರೆವಣಿಕೆ ದೊಡ್ದದು ಹರಿಮೆಯದು, ಇದನ್ನು ಅಲ್ಲಗಳೆಯುತ್ತಿಲ್ಲ, ಆದರೆ ಒಂದು ನುಡಿಯಾಗಿ ಸಕ್ಕದದಲ್ಲಿ ಬಲು ಕೊರತೆಗಳಿರುವುದಂತೂ ದಿಟ )
ಸಂಸ್ಕೃತ ನುಡಿಯು ಹಲವಾರು ಕೊರತೆಗಳಿಂದ ತುಂಬಿಕೊಂಡಿದೆ. ಕನ್ನಡವೂ ಆ ಕೊರತೆಗಳನ್ನು ಹೆಚ್ಚು ಕಡೆ ಮೀರಿದೆ.
ನಿಮಗೆ ಸಂಸ್ಕೃತದಲ್ಲಿ ತಕ್ಕುಮೆ ಇರಬಹುದು, ಆದರೆ ಕನ್ನಡದಲ್ಲಿ ತಕ್ಕುಮೆ ಇರದ ಓಸುಗರ, ಹೀಗೆ ನೆವವೇಳುವದು ತರವಲ್ಲ. ಬರೀ ಕನ್ನಡದ ಒರೆಗಳಲ್ಲೇ( ಬೇಕಾದರೆ ಕೊಂಚ ೧೦% ಹೊರನುಡಿ ಒರೆಗಳು ಬಂದರೆ ಅಡ್ಡಿಯಿಲ್ಲ, ಆದರೆ ೯೯% ಹೊರನುಡಿ ಆದರೆ ...)
ಹೀಗೆ ಎಗ್ಗಿಲ್ಲದೇ, ಬೇಕಾಬಿಟ್ಟಿ ಸಕ್ಕದದ ಒರೆಗಳ ಬಳಕೆಯನ್ನು ಹಿಂದಿನವರೂ ತಪ್ಪೆಂದಿದ್ದಾರೆ ( ಕವಿರಾಜಮಾರ್ಗ, ಶಬ್ದಮಣಿದರ್ಪಣ ನೋಡಿರಿ ), ಈಗಿನ ನುಡಿಕಲಿಗಳು ಹೇಳುತ್ತಿದ್ದಾರೆ ( ಶಂಕರಭಟ್ಟ, ಕಾಡದೇವನೂರ(?) )!!
ಕವಿರಾಜಮಾರ್ಗ ಪದ್ಯ(೫೧-೬೧) : ಈ ಹನ್ನೊಂದು ಪದ್ಯಗಳಲ್ಲಿ ಬಿಡಿಸಿ ಬಿಡಿಸಿ ಕನ್ನಡದಲ್ಲಿ ಎಂತಹ ಸಕ್ಕದದ ಪದಗಳು ಬರಬಹುದು, ಎಂತವು ಬರಬಾರದು, ಯಾಕೆ ಮುಂತಾದವುಗಳನ್ನು ಕೊಟ್ಟಿದೆ.
ಅದರಲ್ಲಿ( ಪದ್ಯಗಳನ್ನು ಬರೆದಿಲ್ಲ )
೫೧)ಕನ್ನಡಕ್ಕೆ ಹೊಂದಿಕೆಯಾಗುವಂತಹ ಒರೆಗಳನ್ನು ಅರಿತು ಬೆರೆಸಬೇಕು. ಇದಕ್ಕೆ ಅವರು ಹೇಳು ಓಸುಗರ ತಿಳಿವು,/ಅರ್ಥ ಕೆಡುವುದು, ಅಲ್ಲದೇ ಕಣ್‌ಕಮಲ, ಮುಖತಾವರೆ( ಈಗಿನ ಕಲಿಕಾ-ಕೇಂದ್ರ, ಅಗಲೀಕರಣ ಮುಂತಾದವು ಕನ್ನಡದ ಸೊಗಡನ್ನು ಮುರಿದಿವೆ, ವೆಂಕಟಸುಬ್ಬಯ್ಯನವರೂ ಇದನ್ನೇ ಹೇಳಿದ್ದಾರೆ) ಇಂತವು ಹೇಳಲೂ ತಿಳಿಯಲೂ ಹೊಂದಿಕೆ ತೋರುವುದಿಲ್ಲ. ಅಂದರೆ ಸಂಸ್ಕೃತದ ಬಳಕೆ ಕನ್ನಡದಲ್ಲಿ ’ಸುಲಲಿತ’ವಲ್ಲ. ( ಸುಲಲಿತ ಅಂದರೆ ಸಲೀಸಾಗಿ ತಿಳಿಯುವಂತಹದ್ದು ಅಲ್ವಾ? ಸಂಸ್ಕೃತ ಕನ್ನಡಕ್ಕಿಂತ ಸುಲಲಿತವೇ? ). ನಿಮಗಸ್ಟು ಸುಲಲಿತವಾಗಿ ಸಕ್ಕದ ಬರುವುದಾದರೇ( ಏಕೆಂದರೆ ಇವರಿಗೆ ಸಕ್ಕದ ಸುಲಲಿತ ಅಂತ ಅವರೇ ಹೇಳಿಕೊಂಡಿದ್ದಾರೆ )
೫೨/೫೩/೫೪/೫೫)ಇದು ಸುಶ್ರಾವ್ಯದ ಬಗ್ಗೆ ಹೇಳುವುದು. ಕನ್ನಡದಲ್ಲಿ ಅಹರಹಃ, ಉಚ್ಛೈಃ, ನೀಚೈಃ, ಮುಹುರ್ಮುಹುಃ, ಇತಸ್ತತಃ, ಪುನಃಪುನಃ, ಈಷತ್ ಮುಂತಾದ ಸಕ್ಕದದ ಒರೆಗಳ ಬಳಕೆಗಳನ್ನು "ಅಸಹಾಯಗಳು"( ಸಹಿಸಲಾರದವು, ತಾಳಲಾರದವು, ಕೇಳಲು ಕರ್ಕಶವಾದವು ) ಎಂದು ಹೇಳಿದೆ. ಅಂದರೆ ಇಲ್ಲಿ ಸುಶ್ರಾವ್ಯತೆ ಬಿದ್ದು ಹೋಯಿತು. ಕನ್ನಡವು ಇಂಪಾಗಿಸಲು ಹಲವು ಬಿರುಸು ಸಂಸ್ಕೃತದ ಒರೆಗಳನ್ನು ಮೆದು ಮಾಡಿದೆ
ಇಂತಹ ಒರಟು ಸಕ್ಕದದ ಒರೆಗಳನ್ನು ಬಳಸುವದರಿಂದ ಮಾತಿನ ಚೆಲುವು, ಕಬ್ಬದ ಚೆಲುವುಗೆಡುವುದೆಂತು ಹಿಂದಿನಿಂದಲೂ ಹೇಳಿದ್ದಾರೆ. ಸಂಸ್ಕೃತವೂ ಸುಶ್ರಾವ್ಯವಲ್ಲ. ( ಸುಶ್ರಾವ್ಯ ಅನ್ನೋ ಪದದಲ್ಲೇ ಎಷ್ಟು ಕರ್ಕಶ(ಶ್ರ,ವ್ಯ) ವ್ಯಂಜನಗಳಿವೆ.)
ಸಂಸ್ಕೃತ = ಸಕ್ಕದ
ಕರ್ಕಶ = ಕಕ್ಕಸ
ಪತಿವ್ರತೆ = ಹದಿಬದೆ
ಪದ್ಯ ನೋಡಿ
ಈ ಮೇಲಿನ ಒರೆಗಳ ಪಟ್ಟಿಕೊಟ್ಟು...
ಬೆರೆಸಿರೆ ಕನ್ನಡದೊಳ್ ಬಂ
ಧುರಮಾಗದು ಕಾವ್ಯರಚನೆ ಪೇೞ್ದೊಡೆ ಪೀನಂ
ಪರುಷತರಮಕ್ಕುಮೊತ್ತುಂ
ಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೋಲ್
"ಬೆರೆಸಿದ್ದರೆ ಕನ್ನಡದಲ್ಲಿ ಬಂಧುರ/ಚೆಲುವಾಗದು, ಕಾವ್ಯರಚನೆ ಹೇಳಿದರೆ ಪೀನ/ದಪ್ಪಗೆ ಪರುಷತರ/ಕರ್ಕಶವಾಗಿ/ಒರಟಾಗಿ ಇರುವುದು, ಒತ್ತಿ ಬಾರಿಸುವ ಕರಡೆ(ಕರಡಿ) ವಾದ್ಯ, ಮದ್ದಳೆಯ ಜರ್ಝರ ಸದ್ದಂತೆ"
ಸುಶ್ರಾವ್ಯತನವಿಲ್ಲ
೫೩) ಯಾವು ಸುಲಲಿತವಲ್ಲವೋ, ಸುಶ್ರಾವ್ಯವೂ ಅಲ್ಲವೋ ಅಂದು ಹೇಗೆ ಸುಂದರವಾದ ನುಡಿಯಾಗುವುದು? ಇಲ್ಲಿ ನೀವು ಹೇಳಿರುವ ನುಡಿಚೆಲುವು/ಭಾಷಾಸೌಂದರ್ಯವೇನು?
ಇದೇ ಮಾತನ್ನು ಹಲವು ಕನ್ನಡದ ಕವಿಗಳು ಹೇಳಿದ್ದಾರೆ.
ನೀವು ಈ ಮಾತುಗಳನ್ನು ನಿಮ್ಮ ಮೇಲೇ ಮಾಡಿ ಹಳಿತ/ಹಂಗಿಸಿಕೆ ಅಂತ ಎಣಿಸದೇ, ಮುನಿಸದೇ, ಬರೀ ಅರಿಮೆ/ಮಾಹಿತಿಯಾಗಿ ಪಡೆಯಿರೇಂದು ಕೋರಿಕೆ.
ನೀವು ದಯವಿಟ್ಟು ನಿಮ್ಮ ಹೇಳಿಕೆಗಳಿಗೆ/ತೀರ್ಪುಗಳಿಗೆ ಸರಿಯಾದ ಓಸುಗರ/ಕಾರಣಗಳನ್ನು ನೀಡಿರಿ, ತೇಲಿಕೆಯ ಮಾತುಗಳಾದರೆ ಬೇಡ!
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ನಿಜ.ಸಂಸ್ಕೃತ,ಕನ್ನಡ ಎರಡರಲ್ಲೂ ಪರಿಣತರಾದ ತಮ್ಮಷ್ಟು ನಾನು ಓದಿಲ್ಲ.ಕನ್ನಡಿಗಳು,ನಿಮಗಿಂತ ವಯಸ್ಸಾಗಿದೆ ಎಂಬ ಕಾರಣ ಬಿಟ್ಟರೆ ನಿಮ್ಮೊಂದಿಗೆ ವಾದಿಸುವ ಅರ್ಹತೆಯೂ ನನಗಿಲ್ಲ.
ನಾನೆಲ್ಲೂ ವ್ಯಾಕರಣವೇ ಇರಬಾರದು ಎಂದು ಹೇಳಿಲ್ಲ. ಅದಕ್ಕೇ ಜಾಸ್ತಿ ಒತ್ತು ಕೊಡಬೇಡಿ ಎಂದೆ.(ಉದಾ-ಉಚ್ಚಾರ/ಉಚ್ಛಾರ)
ಒಂದೆರಡು ಸಂಸ್ಕೃತ/ತುಳು...ಶಬ್ದಗಳು ಮಿಕ್ಸ್ ಆಗಲಿ ಬಿಡಿ ಅಂದಿದ್ದೆ.ತಾವು ೧೦% ವರೆಗೆ ರಿಯಾಯಿತಿ ಕೊಟ್ಟ್ರಿ.(ಬೇಕಾದರೆ ಕೊಂಚ ೧೦% ಹೊರನುಡಿ ಒರೆಗಳು ಬಂದರೆ ಅಡ್ಡಿಯಿಲ್ಲ.)
ನೀವು ಉಪಯೋಗಿಸುವ ಕನ್ನಡ ಶಬ್ದಗಳಲ್ಲಿ ನಾನು ಮನೆಯಲ್ಲಿ ಮಾತನಾಡಿದಾಗ ನನ್ನ ಯಜಮಾನರು ನನ್ನನ್ನು ವಿಚಿತ್ರವಾಗಿ ನೋಡಿದರು,ಮಕ್ಕಳು 'ಇದು ಯಾವ ಭಾಷೆ?' ಎಂದು ಕೇಳಿದರು.
ನಾನೂ ಸಹ ನಿಮ್ಮಷ್ಟೇ ಕನ್ನಡ ಪ್ರೇಮಿ.ಕನ್ನಡ ೨೧ನೇ ಶತಮಾನದಿಂದ ೧೮ನೇ ಶತಮಾನಕ್ಕೆ ಹಿಂದಿರುಗುವುದು ಬೇಡ.ಕನ್ನಡ (ಹಿಂದಿ/ಇಂಗ್ಲೀಷ್/ತಮಿಳು/ತೆಲುಗು/ಉರ್ದು/ಸಂಸ್ಕೃತ/ತುಳು/ಕೊಂಕಣಿ/..)ಪ್ರಚಲಿತ ಭಾಷೆಯಲ್ಲಿರುವ ಉತ್ತಮ ಶಬ್ದಗಳನ್ನು ಸೇರಿಸಿಕೊಂಡು ಬೆಳೆಯಲಿ.ಹಳೆಗನ್ನಡಕ್ಕೇ ಜೋತುಬಿದ್ದರೆ ಕನ್ನಡ ಜನರಿಂದ ದೂರವಾಗಬಹುದೇ ಎಂಬ ಭಯ.
ಇದು ಸರಿಯಾದ ಕಾರಣವಾ,ತೇಲಿಕೆಯ ಮಾತಾ ತಿಳಿದವರು ನೀವೇ ನಿರ್ಧರಿಸಿ.ನನಗೆ ನಿಮ್ಮಲ್ಲಿ ಎಳ್ಳಷ್ಟು ಮುನಿಸಿಲ್ಲ.ಬದಲಿಗೆ ಅನೇಕ ವಿಷಯಗಳನ್ನು ತಮ್ಮಿಂದ ತಿಳಿದುಕೊಂಡೆ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ನೋಡಿ ವಿಜಯಮ್ಮ ( ಅಮ್ಮ ಅನ್ನೋದೇ ಮರ್ಯಾದೆ )
ನಿಮ್ಮಂತೆ ಹೆಂಗಸು ಮುಂದು ಬಂದು ಮಾತಾಡುವುದು, ಅದು ಇಂತಹ ಬಿಯಗರಣ/ವ್ಯಾಕರಣದ ಸಂಗತಿಗಳನ್ನು!! ಇದಕ್ಕೆ ನಿಮ್ಮನ್ನು ಮೆಚ್ಚುವೆನು.
ಆದರೆ ನಮ್ಮ ಬೆಳವಣಿಗೆ ಹೇಗಿರಬೇಕು ಎಂಬುದು ತುಸು ಆಳವಾಗಿ ಉಂಕಿಸಿದರೆ ತಿಳಿಯುವುದು.
೧) ಬಿಯಗರಣವಿಲ್ಲದ ನುಡಿಯಿಲ್ಲ. ನುಡಿಯ ರೂಹು ತಿಳಯುವುದೇ ಅದನ್ನು ಕುರಿತೋದಿ, ಉಂಕಿಸಿ, ಅದನ್ನು ಬಣ್ಣಿಸಿವ ಬಿಯಗರಣದಿಂದೇ!!
೨) "ಕನ್ನಡ ೨೧ನೇ ಶತಮಾನದಿಂದ ೧೮ನೇ ಶತಮಾನಕ್ಕೆ ಹಿಂದಿರುಗುವುದು ಬೇಡ." ಇದು ಹೇಗೆ? ನಾನು ಬರೆಯುವ ಕನ್ನಡ ೨೧ ನೂರೇಡಿನದೇ, ಆದರೆ ನಾನು ಸುಮ್ನೆ ಬೇಡವಾದಡೆ ಹೊರನುಡಿಯೊರೆಗಳನ್ನು ಬಳಸಲ್ಲ ಅನಿತ್ತೇ. ಇನ್ನು ನಿಮಗೆ ಯಾಕೆ ಹಳಗನ್ನಡ ಅಂದರೆ ಕೀಳರಿಮೆ? ಸಕ್ಕದ ಹಳಗನ್ನಡಕ್ಕಿಂತ ಹಳತು, ಆದರು ಅದರ ಒರೆಗಳ ಮೇಲೇ ನಿಮ್ಮ ನೆಚ್ಚುಮೆಚ್ಚು ಇದೆಯಲ್ಲ? ಇದಕ್ಕೆ ನಾನು ನಮ್ಮ ಬರಹ ಪೂರ್ವಹಳಗನ್ನಡವಾಗುವುದು ಬೇಡ, ಅದಕ್ಕೆ ಸಕ್ಕದದ ಪದಗಳು ಬೇಡ ಎಂಬ ವಾದ ಮುಂದಿಡಬಹುದು.
ನಿಮಗೆ ಈ ಸಂಗತಿಯಲ್ಲಿ ಹುರುಪಿದೆ, ಅದಕ್ಕೆ ಬಿಡುವಾದಾಗ "ಕನ್ನಡ ವನ್ನು ಕಠಿಣ ಮಾಡಿರುವ ಸಂಸ್ಕೃತ ಪದಗಳು" [ http://sampada.net/blog/mahesha/12/04/2007/3686] ಈ ಬರಹವನ್ನು ಕೊಂಚ ಓದಿರಿ.
ಸಂಸ್ಕೃತದ ಒರೆಗಳನ್ನು ನಾವು ಹಿಡಿತದಲ್ಲಿ ಬಳಸಲು ಕೋರುತ್ತಿರುವುದಕ್ಕೆ ಹಲವು ಓಸುಗರ/ಕಾರಣಗಳನ್ನು ನೀಡಿರುವೆವು. ಅದರಲ್ಲಿ ಕೆಲವನ್ನು ಇಲ್ಲಿ ಹೇಳುವೆನು.
೧) ಉಲಿಯಲು ತೊಡರು, ಸಂಸ್ಕೃತದ ಪದಗಳು ಉಚ್ಚಾರಕಠಿಣ.
೨) ಕನ್ನಡದ ಬಿಯಗರಣಕ್ಕೆ ಹೊಂದದ ಹಲವು ಸಕ್ಕದ ಒರೆಗಳಿವೆ
೩) ಸಕ್ಕದದ ಒಂದು ಒರೆ/ಪದಕ್ಕೆ ಹಲಹಲವು ತಿಳಿವುಗಳಿರುವುವು ( ಕನ್ನಡಕ್ಕಿಂತು ಇದು ಬಲುಪಟ್ಟು ಹೆಚ್ಚು )
ಮಾದರಿ:
ಆಭಾಸ = ಎಡವಟ್ಟು, ಹೊಳೆಯುವ.
ಸೂಕ್ತ = ಸು + ಉಕ್ತ = ಚನ್ನಾಗಿ ಹೇಳಿದ ( ಇದನ್ನು oppropriate, ತಕ್ಕ ಅಂನುವದಕ್ಕೆ ಸಮವೆನ್ನುವುದು ಹೇಗೆ ಸರಿ? )
೪) ಸಕ್ಕದದ ಒರೆಗಳನ್ನು ಕೂಡಿಸುವಾಗ/ಸಂಧಿಸಿವಾಗ ಸಕ್ಕದದ ಬಿಯಗರಣವನ್ನು ಬಳಸಬೇಕು, ಕನ್ನಡದಂತೆ ಆಗಲ್ಲ.
ಅವನ + ಅದು = ಅವನದು !+ ಅವನಾದು
ರಾಮ +ಅವತಾರ = ರಾಮಾವತಾರ != ರಾಮವತಾರ( ಗಮನಸಿರಿ, ಹಲವರು ರಾಮವತಾರ ಅಂತಲೇ ಹೇಳುವುದುಂಟು )
೫) ಹೇರಳವಾದ ಹೊರನುಡಿಯೊರೆಗಳ ಬಳಕೆಯಿಂದ ನಮ್ಮ ಕನ್ನಡದ್ದೇ ಆದ ಒರೆಗಳು ಮೂಲೆ ಸೇರಿ ಬಳಕೆ-ತಪ್ಪಿ ಹೋಗಿ, ಇನ್ನೊಂದು ಹಳಗನ್ನಡವಾಗುವುದು. ಈಗಾಗಲೇ ಹಲವು ಆಡುಮಾತಿನ ಒರೆಗಳು ಬರಹದಲ್ಲಿ ತಪ್ಪಿವೆ
ಮಾದರಿ: ಅಣಿ( ಸಿದ್ಧತೆ ), ಕೊರೆ( extra ), ಓರಣ( ವ್ಯವಸ್ಥೇ, arrangement ), ಮೆಲ್ಲಗೆ( ನಿಧಾನ )
ನಂಮ ಕನ್ನಡ ಉಳಿಯುವುದು, ಕನ್ನಡದ ಒರೆಗಳು ಉಳಿಯುವುದರಿಂದ ಹೊರತು, ಕನ್ನಡವೆಂಬ ಹಸರಿನಲ್ಲಿ ಇರುವ ೬೦-೭೦% ಬರೀ ಹೊರನುಡಿಯೊರೆಗಳು ತುಂಬಿದ ಬೆರಕೆಗನ್ನಡದಿಂದಲ್ಲ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಮಹೇಶ,
ಇದು ಬೊಂಬಾಟಾಗಿದೆ.
ಬಳಸದೇ ಇರುವ ಏಸೋ ಪದಗಳು ಈಗಾಗಲೇ ಹಳಗನ್ನಡ ಪದಗಳು ಅನಿಸಿಕೊಂಡಿವೆ. ಅದಕ್ಕೆ ಆ ಪದಗಳನ್ನ ಈಗ ಮತ್ತೆ ಬಳಸಿದರೆ ಅದು ಹಳಗನ್ನಡ ಪದ ತಿಳಿಯಲ್ಲ ಅಂತಾರೆ....
ಹಾಗೆನೆ.. ಈಗ ನಾವಾಡುವ, ದಿನವೂ ನುಡಿಯುವ ಪದಗಳು ಬೇರೆ ನುಡಿಗಳಿಂದ ಬದಿಗೆ ಸರಿದು ಅವೂ ಕೊನೆಗೆ ಅದೇ ಹಳೆಗನ್ನಡ ನುಡಿ ಅನಿಸಿಕೊಂಡು, ನಂತರ ನನಗೆ ಅವುಗಳೆಲ್ಲ ತಿಳಿಯೋದಿಲ್ಲ ಅನ್ನೊ ದಿನಗಳು ದೂರ ಇಲ್ಲ.
ಈಗಾಗಲೆ ಇಂಗ್ಲೀಷನ ಪದಗಳನ್ನೇ ಜಾಸ್ತಿಯಾಗಿ ಬಳಸುವವರು ಈಗ ಬಳಸುವ ಕನ್ನಡ ಪದಗಳನ್ನು ನುಡಿದರೇನೆ ತಿಳಿಯಲ್ಲ ಅಂತಾರೆ.... ಮುಂದೇನೋ ದೇವರೇ ಗತಿ...
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ವಿನಾಯಕರೇ...
ಅದೂ ಅಲ್ಲದೇ ನೋಡಿರಿ ಇಂದಿನ ಕನ್ನಡ ಒರೆಗಂಟು = ಕನ್ನಡದ ಒರೆಗಳು + ಸಕ್ಕದ ಒರೆಗಳು, ಅದಕ್ಕೆ ನಮ್ಮ ಕಂನಡ ಒರೆಗಂಟಲ್ಲಿ ಕಂನಡಕ್ಕಿಂತ ಸಕ್ಕದದ ಒರೆಗಳೇ ಬಲುಪಟ್ಟು ಹೆಚ್ಚಿವೆ. ಇದರಿಂದ ಸುಮ್ಮನೆ ಕಂನಡ ಕಲಿಯಲು ಬಳಸಲು ದೊಡ್ಡ ಎಡರು.
ಹಾಗೆ ಈ ಹೊರನುಡಿ ಒರೆಗಳ ಬಳಕೆಯೂ ಮುಜುಗರ, ಕಂನಡದ್ದೇ ಒರೆಗಳನಿತ್ತು ಸಲೀಸಲ್ಲ.
ಮಾದರಿ; ಜಾಸ್ತಿ ಹಾಗು ಹೆಚ್ಚು..
ನೋಡು, ಹೆಚ್ಚು, ಹೆಚ್ಚಿಗೆ, ಹೆಚ್ಚುವರಿ, ಹೆಚ್ಚಿತು, ಹೆಚ್ಚಾಯ, ಹೆಚ್ಚುವುದು, ಹೆಚ್ಚುಹೆಚ್ಚು, ಹೀಗೆ ಒಂದೇ ಕಂನಡದ ಒರೆಬೇರಿಂದ ಏನೆಲ್ಲ ಸಲೀಸಾಗಿ ಹೇಳಿಕೊಂಡು ಇರಬಹುದು.
ಆದರೆ ಈ ಜಾಸ್ತಿ = ಹೆಚ್ಚು ಅನಿತ್ತೇ. ಆದರೆ ಹೆಚ್ಚಿಗೆಗೆ, ಹೆಚ್ಚುವರಿಗೆ ಇವಕ್ಕೆಲ್ಲ, ಜಾಸ್ತಿಗೆ, ಜಾಸ್ತಿವರಿ, ಜಾಸ್ತಿತು, ಹೀಗೆಲ್ಲ ಹೇಳಕ್ಕೆ ಬರದು.
ಕಂನಡವು ಹೆಚ್ಚು ಕೆಲಸದೊರೆಗೆ/ಕ್ರಿಯಾಪದಕ್ಕೆ ಒತ್ತು ಕೊಡುವ ನುಡಿ ( ಸಕ್ಕದವು ಹೆಚ್ಚು ಹೆಸರೊರೆ/ನಾಮಪದಕ್ಕೆ )
ಹೀಗೆ ಹಲಹಲವು ಓಸುಗರಗಳಿಂದ ನಮಗೆ ಹೊಂದದ/imcompatible ಒರೆಗಳನ್ನು ಬಳಸಿಕೊಂಡು ನಂಮ ನುಡಿಯನ್ನು ಗೋಜಲು ಮಾಡಿಕೊಂಡಿದ್ದೇವೆ, ಮಾಡಿಕೊಳ್ಳುತ್ತಿದ್ದೇವೆ.
ನಂನಿ
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
".......ನೀವು ಉಪಯೋಗಿಸುವ ಕನ್ನಡ ಶಬ್ದಗಳಲ್ಲಿ ನಾನು ಮನೆಯಲ್ಲಿ ಮಾತನಾಡಿದಾಗ ನನ್ನ ಯಜಮಾನರು ನನ್ನನ್ನು ವಿಚಿತ್ರವಾಗಿ ನೋಡಿದರು,ಮಕ್ಕಳು 'ಇದು ಯಾವ ಭಾಷೆ?' ಎಂದು ಕೇಳಿದರು......."
ಹಾಗೆಯೇ ನೀವು ಹೇರಳವಾಗಿ ಸಕ್ಕದ ಬೆರೆಸಿ ಮಾತಾಡಿದಾಗ ಹಲವು ಮಂದಿಗೆ ತಲೆಗಿಳಿಯುವುದಿಲ್ಲ ಅಂತ ನಿಮಗೆ ಗೊತ್ತಾದರೆ ಸಾಕು.
"...ತಾವು ೧೦% ವರೆಗೆ ರಿಯಾಯಿತಿ ಕೊಟ್ಟ್ರಿ..."
ಇದು ಮಾರುಕಟ್ಟೆ ಅಲ್ಲ. ೧೦, ೨೦% ಅಂತ ಹೇಳಕ್ಕೆ. ಇದನ್ನು ಹೇಳಿರುವುದು ನುಡಿಪಂಡಿತರು. ಒಂದು ನುಡಿಯನ್ನು ಚೆನ್ನಾಗಿ ಅರಿತು ಕಲಿತು ಅದರ ನಿಬ್ಬರ/ವಿಶೇಶಗಳೇನು ? ಅದರ ಬೇಕರನ/ವ್ಯಾಕರಣ ಕಟ್ಟಳೆಗಳೇನು ? ಅದರ ಸೊಗಡು ಹೇಗಿರಬೇಕು ? ಸೊಗಡು ಉಳಿಸಿಕೊಳ್ಳಲು ಮತ್ತು ಹೆಚ್ಚು (majority) ಮಂದಿಗೆ ತಲೆಗಿಳಿಯಬೇಕಾದರೆ ನುಡಿ ಹೇಗಿರಬೇಕು?
ಇವುಗಳ ಬಗ್ಗೆ ಉಂಕಿಸಿ ಮಾತಾಡಿ ಅರಯ್ಯಿಸಿ/ಸಂಶೋದಿಸಿ ಹೀಗೆ ಹೇಳಿರುವುದು.
"....ಕನ್ನಡ ೨೧ನೇ ಶತಮಾನದಿಂದ ೧೮ನೇ ಶತಮಾನಕ್ಕೆ ಹಿಂದಿರುಗುವುದು ಬೇಡ...."
ಮತ್ತೇ ಅದೇ ನಿಜಕ್ಕೆ ದೂರವಾದ ಮಾತು. ೧೮ ಯಾಕೆ ಇನ್ನು ಹಿಂದಕ್ಕೆ ಹೋಗಿ, ಇನ್ನು ೧೨ನೇ ನೂರೇಡಿನ/ಶತಮಾನದ ವಚನಗಳು, ೧೩/೧೪ ನೂರೇಡಿನ/ಶತಮಾನದ ದಾಸರ ಪದಗಳು ಮತ್ತು ಯಾವಾಗಲೋ ಯಾರೋ ಬರೆದಿರುವ ಜನಪದಗಳು ಇವೆಲ್ಲ ಮಂದಿ ನಾಲಿಗೆ ಮೇಲೆ ಇಂದಿಗೂ ನಲಿದಾಡುತ್ತಿಲ್ಲವೇ?
ನೀವು ೧೮ನೇ ನೂರೇಡಿನ ಕನ್ನಡ ಓದಿದ್ದೀರ ? ಅದು ಏಕೆ ಎಡರು/ಕಶ್ಟ ಅಂತ ತಿಳಿಸುತ್ತೀರ ?
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಸರ್. ಮೊದಲಿಗೆ ವೈಭವಕ್ಕೆ ಕನ್ನಡದಲ್ಲಿ ಏನನ್ನುತ್ತಾರೆ ತಿಳಿಸುವಿರಾ?
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
@ವಿಜಯಮ್ಮ.
ಕೇಳ್ಮೆಗೆ ಮರು ಕೇಳ್ಮೆ ..ಇರಲಿ
ಅಯ್ಯೊ ನೀವು ಯಾವುದೇ ಗಂಟು ತೆಗೆದು ನೋಡಿದರೆ ಇದು ಸಿಗುತ್ತಿತ್ತು. ಇಲ್ಲಿ ಕೇಳಬೇಕಾಗಿರಲಿಲ್ಲ.
ವೈಭವ ಅಂದ್ರೆ ಮಿನುಗುವುದು, ಹೊಳೆಯುವುದು, ಹೊಳಪು, ಮಿಣುಕು
ವೈಭವ ಅಂದ್ರೆ ಹೆಚ್ಚೆಲುವು, ಚೆಲುವಿನಲ್ಲಿ ಮೇಲ್ಮಟ್ಟದ್ದು ಅಂತ ತಿಳಿವು ಇದೆ. ಇವೆಲ್ಲ ಕನ್ನಡದ್ದೆ ಅದಕ್ಕೆ ಪುರಾವೆ ನಿಮಗೆ ಬೇಕಾದರೆ ಕೊಡ್ತೀನಿ.
ಮತ್ತೆ ವೈಭವ ಸಕ್ಕದದ ಪದ ಇದಿಯಲ್ಲ ಅಂತ ಕೇಳ್ಬೇಡಿ. ಅದು ನಾನು ಇಟ್ಟಿಕೊಂಡ ಹೆಸರಲ್ಲ.
ಈಗ ಹೇಳಿ ಸಕ್ಕದ ಯಾಕೆ ವಜುರ ಅಂತ ??
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಈಗ ಹೇಳಿ ಸಕ್ಕದ ಯಾಕೆ ವಜುರ ಅಂತ ...ಸುಮ್ನೆ ಹೇಳಿಕೆ ಕೊಟ್ಬುಟ್ಟು ತಪ್ಪಿಸ್ಕೊಬೇಡಿ
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ವಯಿರ ಎಂದರೂ ವಜ್ರವೇ ಹೊಳೆವರಲು(ಳು) ಎಂದರೂ ವಜ್ರವೇ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ವಿಜಯಮ್ಮ ಅವರೇ,
ಹೆಜ್ಜಿರಿ= ವೈಭವ. ಹೀಗೆ ಕನ್ನಡ ಬೞಸಲಿಕ್ಕೂ ಕನ್ನಡದ ಮೇಲೆ ಹೆಮ್ಮೆ ನಮಗಿರಬೇಕು.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ವಿಜಯಮ್ಮ,
".....ಒಂದೆರಡು ಸಂಸ್ಕೃತ /ತುಳು/ತೆಲುಗು/ಮಲಯಾಳ/ಕೊಂಕಣಿ/ಇಂಗ್ಲೀಷ್ ಶಬ್ದಗಳು ಮಿಕ್ಸ್ ಆಗಲಿ ..."
ಒಂದೆರಡು ಆಗಿದ್ದರೆ ಯಾರು ಸೊಲ್ಲು ಎತ್ತುತ್ತಿರಲಿಲ್ಲ. ಹೇರಳ ಆಗಿರೋದರಿಂದಲ್ಲೆ ಶಂಕರಬಟ್ಟರಂತವರು ಹೊತ್ತಗೆ ಬರೆದಿರೋದು.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಏನು ಹೇರಳವಾಗಿರುವುದು?
ಮಾರ್ಡನ್ ಆಗಿ ಮಿಕ್ಸ ನುಡಿಯಲ್ಲಿ, ಸ್ರಾಂಗ್ ಆಗಿ ಡೈಲಾಗ್ ಹೊಡೆಯೋದು, ಈಗ ಪ್ಯಾಷನ್. ನೀವು ಯಾವ ಓಬೀರಾಯನ ಕಾಲದವರು ಎಂದು ನಮ್ಮ ಮುಂದಿನ ಪಿಳ್ಳೆಗಳು ತಿರುಗಿಸಿ ಅಂದ್ರೆ ಏನ್ ಹೇಳೋದು ಸಿವ?
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
@ವಿಜಯಮ್ಮ,
೧. ಸಂಸ್ಕೃತ/ಇಂಗ್ಲೀಷ್ ಬಗ್ಗೆ - ಸಂಸ್ಕೃತದ ಅತಿವ್ಯಾಮೋಹದ ಅಥವಾ ಕುರುಡು ಹಿಂಬಾಲಿಕೆಗಳ ಬಗ್ಗೆ ಯಾರೋ ಕೆಲವು "ಕನ್ನಡ ಪಂಡಿತರು" ಈಗ ೨೧ನೇ ಶತಮಾನದಲ್ಲಿ ಮಾಡುತ್ತಿಲ್ಲ. ಕನ್ನಡಿಗರು ಹೆಮ್ಮೆಪಡಬೇಕಾದ, ೯ನೇ ಶತಮಾನದ, ಕವಿರಾಜಮಾರ್ಗದಲ್ಲಿಯೇ ಸಂಸ್ಕೃತದ (ಈಗ ಇಂಗ್ಲೀಷಿಗೆ ಅನ್ವಯಿಸಿಕೊಳ್ಳಬಹುದು) ಅಪ್ಲಿಕಾಬಿಲಿಟಿ ಎಷ್ಟರ ಮಟ್ಟಿಗಿರಬೇಕು ಎಂಬುದನ್ನು ಹೇಳಿದೆ. ಕನ್ನಡಿಗರಿಗೆ ಬೇಕಿರುವುದು ಜ್ಞಾನ. ಜ್ಞಾನಕ್ಕೆ ಸಂಬಂಧಪಟ್ಟ ಪದಗಳನ್ನು, ನಮ್ಮಲ್ಲಿಲ್ಲದಿದ್ದರೆ, ಅಳೆದುತೂಗಿ ನಮಗೆ ಹೊಂದಿಕೆಯಾಗುವಂತೆ, ಯಾವ ಭಾಷೆಯಿಂದ ಬಂದರೂ ಸರಿ, ಬರಮಾಡಿಕೊಳ್ಳೋಣ. ಆದರೆ ಇವುಗಳನ್ನು ಅರ್ಥಮಾಡಿಕೊಳ್ಳದೆ, ತಪ್ಪು ಎಂದು ತಿಳಿದಿದ್ದರೂ ಕೂಡ, (ನೀವು ಹೇಳಿದ ಟಸ್ಸು-ಪುಸ್ಸು) ಪಾಂಡಿತ್ಯ ಪ್ರದರ್ಶಿಸಲು "ಸಂಸ್ಕೃತ-ಪಂಡಿತರು" ಅಥವಾ "ಸಂಸ್ಕೃತವನ್ನು ಅಭ್ಯಾಸ ಮಾಡದೆ, ಬರೀ ಅದರ ದೈವಿಕ ಕಲ್ಪನೆಯಲ್ಲಿ ಕುರುಡಾಗಿ ಮುಳುಗಿರುವವರು" (ದಿಟವಾದ ಸಂಸ್ಕೃತ-ಪಂಡಿತರು ಮನ್ನಿಸಿ), ಯಾವ ಮಣ್ಣಾಂಗಟ್ಟಿ ಜ್ಞಾನವಿಲ್ಲದ "ಸಿದ್ಧಸ್ಮೃತಿಕೋಶ, ವಕ್ರಾವರಣ, ಇತ್ಯಾತ್ಮಕ, ನೇತ್ಯಾತ್ಮಕ" ಮುಂತಾದ ಅತಿಕೆಟ್ಟ ಪದಗಳನ್ನು ಮುಂದಾಲೋಚನೆ ಇಲ್ಲದೆ ಕನ್ನಡದ ಹೆಸರಿನಲ್ಲಿ ತುರುಕಿ ಕನ್ನಡವನ್ನು ಮಡಿ-ಮಡಿಯಾಗಿಸುತ್ತಿರುವುದು. ಈ ವಿಚಾರಗಳನ್ನು ದಯವಿಟ್ಟು ಸಿಟ್ಟಿನಿಂದ ನೋಡಬೇಡಿ. ನಿಜ ಹೇಳಿ {}, [], <> ಮುಂತಾದ ಬ್ರಾಕೆಟ್ಟುಗಳಿಗೆ ನೀವು ಎಂದಾದರೂ "ಪುಷ್ಪಾವರಣ, ಕೋನಾವರಣ, ದ್ವಿಕೋನಾವರಣ, ವಕ್ರಾವರಣ" ಅಂತೆಲ್ಲಾ ಯಾವತ್ತಾದರೂ ಹೇಳಿದ್ದೀರಾ ? ಆದರೆ ಇಂದು ಕನ್ನಡದ ಹೆಸರಿನಲ್ಲಿ ಇಂಥಹ ಅತಿಕೆಟ್ಟ ಪದಗಳನ್ನು "ಸಂಸ್ಕೃತದ ಕುರುಡಾಸುರರು" ತುರುಕುತ್ತಿದ್ದಾರೆ. ನೀವು ಹೇಳಿದ, "ಕನ್ನಡ-ಪಂಡಿತರಿಗೆ" ಬಹುಶಃ ಇದರ ಬಗ್ಗೆಯಷ್ಟೇ ತಕರಾರು ಇರೋದು. ಸಂಸ್ಕೃತದಲ್ಲಿರುವ ಜ್ಞಾನದ ಬಗ್ಗೆ, ಸಂಸ್ಕೃತ ಸಾಹಿತ್ಯದ ಗಟ್ಟಿತನದ ಬಗ್ಗೆ ಯಾರಿಗೂ ಎಳ್ಳಷ್ಟೂ ಸಂಶಯವಿಲ್ಲ. ಸಂಸ್ಕೃತದ ಮೇಲೆ ದ್ವೇಷವಂತೂ ಖಂಡಿತವಾಗಿಯೂ ಇಲ್ಲ.
೨. ತುಳು/ತೆಲುಗು/ಮಲಯಾಳ/ಕೊಂಕಣಿ... - ಈ ನುಡಿಗಳು ಕನ್ನಡಕ್ಕೆ ತೊಡಕು ಅಂತ ಯಾವ ತಲೆಗೆಟ್ಟ "ಕನ್ನಡ-ಪಂಡಿತ" ಹೇಳಿದ್ದಾನೆ. ಕನ್ನಡಕ್ಕೂ ಹಾಗು ಕನ್ನಡದ್ದೇ ಗುಂಪಿಗೆ ಸೇರಿದ ಇತರ ಭಾಷೆಗಳಿಗೂ ಬಿಡಿಸಲಾರದ ನಂಟಿದೆ. ಸಂಪದದಲ್ಲಿಯೇ, ತುಳುವಿನ ಪದಗಳ ಬಗ್ಗೆ ಅನೇಕ ಚರ್ಚೆಗಳಾಗಿವೆ. ತುಳು/ಕೊಡವ/ಕೊಂಕಣಿ/.... ಪದಗಳ ಬಗ್ಗೆ ಯಾರೂ (ಕಡೇಪಕ್ಷ, ಸಂಸ್ಕೃತವಲ್ಲದ ಕನ್ನಡಿಗರು) ತಕರಾರು ತೆಗೆಯುವುದೇ ಇಲ್ಲ. ಏಕೆಂದರೆ ತುಳು/ಕೊಂಕಣಿಗಳು ಕನ್ನಡಕ್ಕೆ ನಂಟಾದ ನುಡಿಗಳೇ. ಕನ್ನಡಕ್ಕೆ ನೇರವಾಗಿ ನಂಟಾಗಿರುವ ಇಂತಹ ತುಳು/ಕೊಡವ/ಬಡಗ/ಕುಂದಾಪುರ/ಹವ್ಯಕ/ಕೊಂಕಣಿ ಮುಂತಾದ ನುಡಿಯ ಪದಗಳನ್ನು ಕನ್ನಡದ ಹದದಲ್ಲಿ ಬಳಸುವುದರಿಂದ ಕರ್ನಾಟಕದಲ್ಲಿರುವ ನಾವುಗಳು ಮತ್ತಷ್ಟು ಭಾಷಿಕವಾಗಿ ಗಟ್ಟಿಯಾಗುತ್ತೇವೆ.
ಇನ್ನೊಮ್ಮೆ ಹೇಳುವೆ, ಇಂತಹ ವಿಷಯಗಳನ್ನು ಸಿಟ್ಟಿನಿಂದ ನೋಡಬಾರದು. ಆದರೆ ಇಂದು, "ಕನ್ನಡವು ಕೇವಲ ಆರ್ಟ್ಸ್ ಸ್ಟೂಡೆಂಟ್ಸ್ ಮಾತ್ರವೇ ಓದುವಂಥದ್ದು ಎಂಬ ಪೊಳ್ಳುನಂಬಿಕೆ ಬರುವುದಕ್ಕೆ ಬಹುಮುಖ್ಯವಾದ ಕಾರಣ ನಮ್ಮ ಹಿರಿಯರು, ಅವರಿಗೂ ಹಿಂದಿನ ಹಿರಿಯರು (ಕವಿರಾಜಮಾರ್ಗ, ಶಬ್ದಮಣಿದರ್ಪಣ...) ನೀಡಿದ ಎಚ್ಚರಿಕೆಯನ್ನೂ ಗಮನಿಸದೆ, "ಸಂಸ್ಕೃತವೊಂದೇ ದೇವಭಾಷೆ, ಮಿಕ್ಕವು ಆಡುಭಾಷೆ" ಎಂಬ ಕಲ್ಪನೆಯಿಂದ ಕನ್ನಡ/ತುಳು/ಕೊಡವ/ಬಡಗ.. ಮುಂತಾದ ಕನ್ನಡಕ್ಕೆ ನಂಟಾದ ಪದಗಳನ್ನು ಪ್ರಚಾರಕ್ಕೆ ತರದೆ ಎಗ್ಗಿಲ್ಲದೆ ಜ್ಞಾನಕ್ಕೆ ನಂಟಾಗದ ಸಂಸ್ಕೃತ ಪದಗಳನ್ನು ತುರುಕಿ ತುರುಕಿ ಕನ್ನಡವನ್ನು ಸಂಸ್ಕೃತಮಯ ಮಾಡಿದ್ದು (ನಿಸಾರ ಅಹ್ಮದರ ಪಾಡ್ಕಾಸ್ಟ್ ಕೇಳಿ, ಸ್ವಲ್ಪ ಸಾಂಪಲ್ ತಿಳಿಯತ್ತೆ, ಇವುಗಳ ಬಗ್ಗೆ ಕಿಡಿಕಾರಿದ್ದಾರೆ ಅವರು). ಕನ್ನಡದಲ್ಲಿ ವಿಜ್ಞಾನ, ಗಣಿತ ಓದುವವರಿಗೆ ತೊಡಕಾಗಿರುವುದು ಇಂತಹ ತಲೆಬುಡವಿಲ್ಲದ ಸಂಸ್ಕೃತ ಪದಗಳೇ ಹೊರತು, ಸುಲಿದ ಬಾಳೆಹಣ್ಣಿನಂತಹ ಕನ್ನಡವಾಗಲೀ ತುಳು/ಕೊಡವ/ಕೊಂಕಣಿಯಿಂದ ಕೊಟ್ಟುತಂದು ಮಾಡುವುದಾಗಲೀ ಅಲ್ಲ. ಇದನ್ನು ತಿದ್ದಿಕೊಂಡು ನಮ್ಮನ್ನು ನಾವು ಸರಿಪಡಿಸಿಕೊಳ್ಳುವ ಹೊಣೆ ಈಗಿನ ಸನ್ನಿವೇಶಗಳಿಗೆ ಸ್ಪಂದಿಸುವ ನಮ್ಮ-ನಿಮ್ಮೆಲ್ಲರ ಕೈಯಲ್ಲಿಯೇ ಇರಬೇಕು. ಅದ್ಯಾರೋ "ಕನ್ನಡ-ಪಂಡಿತ"ರಲ್ಲಂತೂ ಇದು ಇದೆ ಅಂತ ಕಾಣುತ್ತದೆ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಒಪ್ಪ ಓರಣದಲ್ಲಿ ನಮ್ಮ ಊ ಸುನಿಲಂಗೆ ಸಾಟಿಯುಂಟೇ!! ಭಳಾ!!
ನಲ್ಗೆಳೆಯ ಸುನಿಲ,
ಬಲು ಚಂದವಾದ ಕಮೆಂಟು( ಚಂಗಮೆಂಟು )
ನಂನಿ!
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಸುನಿಲ, ಸರಿಯಾಗಿ ಹೇಳಿದೆ.
{} ಇವುಗಳಿಗೆ ನಾವು ಮೀಸೆ ಕಂಸ ಅಂತೀವಿ. bracket = ಕಂಸ.
ನಮ್ಮ ಕಡೆ ಒಂದು ಜೋಕ್ ಇದೆ, "ಕಂಸಿನಲ್ಲಿ ಮೀಸೆ ತಿರುವಿ" ಅಂತಾ.
ನಾಟಕದ ಹೊತ್ತಗೆಯನ್ನಿಟ್ಟುಕೊಂಡು ಕೆಲ ಹುಡುಗರು ಪ್ರ್ಯಾಕ್ಟಿಸ್ ಮಾಡ್ತಿರ್ತಾರೆ. ದುರ್ಯೋದನನ ಪಾತ್ರದ ಹುಡುಗ ಹೇಳೋದು, "ತಮ್ಮಾ ದ್ರೌಪದಿಯನ್ನು ಎಳೆದು ತಾ, ಕಂಸಿನಲ್ಲಿ ಮೀಸೆ ತಿರುವಿ" ಅಂತಾನೆ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಬೇಱೆ ಭಾಷೆಯ ಪದಗಳು ಮಿಕ್ಸ್ ಆದರೆ ಎಂಬುದಱ ಬದಲು ಸೇರಿದರೆ ಎಂದು ಸಹಜವಾಗಿ ಹೇೞಬಹುದಿತ್ತಲ್ಲ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಎವ್ರಿಥಿಂಗಿಗೂ ಇಂಗ್ಲಿಸ್ ವರ್ಡ್ ಗಳನ್ನೆ ಎಲ್ರೂ ಟೆದ್ದರೆ ಎಷ್ಟು ಬ್ಯೂಟಿಫುಲ್ಲಂತೀನಿ ಅಲ್ವಾ ವಿಜಯ ಮೇಡಮ್.
ಹೊಸ ವ್ಯಾಕರಣ ಗೆಲ್= ಗೆದ್ದರೆ ಆಗೋದ್ರಿಂದ ಟೆಲ್=ಹೇಳೂ ಟೆದ್ದರೆ ಆಗತ್ತೆ ಅಂತ ನಮ್ಮ ಊಹೆ. ಇದಕ್ಕೆ ವಿಜಯಮ್ಮನೋರು ಏನಂತಾರೋ ಕಾದು ನೋಡೋಣ.
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಟೆಲ್ದರೆ...
ಸೇದು = sayದು
ಕಮೆಂಟಿ
ಮಿಕ್ಸಿ = ಬೆರಸಿ
ಲುಕ್ಕಿದರು = lookಇದರು
ಯಾವಾಗ ಕಂಮಿದೆ? = ಯಾವಾಗ comeದೆ
ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಮಾಯ್ಸ, ಯಾಕ್ಲಾ ನಿಂಗೀ ತೀಟೆ ಬಂತು? ಹಾಕ್ಕೊಂಡೊದ್ರೆ ಹಲಸೂರು ಕೆಱೇಲಿ ಬೀೞ್ತೀಯಾ ಹುಸಾರು. ವಸಿ ಅಚ್ಚಗನ್ನಡದಲ್ಲೆ ಮಾತಾಡ್ಲಾ

ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
ಅಯ್ಯಯ್ಯೋ...
ವಸಿ ತಡಕಳಿ..
ಏನ್ ನಿಮ್ ಇಸ್ಯ...
ಒಟ್ನಲ್ಲಿ.. ಹಯ್ಜಾಕ್..
ಅವನ ಯಾವೋನೋ ಯೋಳವ್ನಂತೆ.. ಮನೆಗ್ ಒಂದ್ ಬಾಸೆ, ಬೀದಿಗೊಂದ್ ಬಾಸೆ, ಕೇರಿಗೊಂದ್ ಬಾಸೆ, ಊರಿಗೊಂದ್ ಬಾಸೆ, ದೋಸೆಗೊಂದ್ ಬಾಸೆ ಇಡ್ಲಿಗೊಂದ್ ಬಾಸೆ ಅಂತ..
ಯಿಂಗ್ ಬೆಂಗಳೂರ್ ’ಬಾಸಾಪಿರೇಮಿಗಳು, ಬಾಸಾಬಿಮಾನಿ’ಗಳಿಗೆ ಮನೆಯಾಗ್ "ಟುಮಾರೋ ಕಮ್ತೀನಿ ಕನ್ನಡ", ಬೀದೀ "ಅಯ್ ಕಮ್ಮು ಟುಮಾರೋ" ಕನ್ನಡ, ಬಾಸಣಕ್ಕೆ ಅಂದ್ರೆ "ಶ್ವ ನಾನು ಆಗಮಿಸುವೆನು" ಕನ್ನಡ..