ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?
ವಿದ್ಯುತ್ ದೀಪಗಳಿಲ್ಲದ ಹಿಂದಿನ ಕಾಲದಲ್ಲಿ ಬೆಳಗ್ಗಿನ ಜಾವದಲ್ಲಿ
ಮತ್ತು ಸಂಜೆ ಕತ್ತಲಾಗುವಾಗ ಮನೆಯಲ್ಲಿ ದೇವರ ಮುಂದೆ
ದೀಪ ಹಚ್ಚಲು ಹೇಳುತ್ತಿದ್ದರು. ಈವಾಗ ಬಣ್ಣ ಬಣ್ಣದ ವಿವಿಧ ತರಹದ
ದೀಪಗಳಂತೆ ಕಾಣುವ ವಿದ್ಯುತ್ ದೀಪಗಳು ಇರುವಾಗ,
ಎಣ್ಣೆ ದೀಪ ಹಚ್ಚುವ ಅಗತ್ಯವಿದೆಯೇ?
ವಿದ್ಯುತ್ ದೀಪ ಹಚ್ಚುವುದರಿಂದ-
-ಎಣ್ಣೆಯ ಉಳಿತಾಯವಾಗುವುದು.
- ಗಾಳಿಗೆ ದೀಪ ಆರುವ ಭಯವಿಲ್ಲ.
- ವಯಸ್ಸಾದವರು ಮತ್ತು ಮಕ್ಕಳು ಕೈ ಸುಟ್ಟುಕೊಳ್ಳುವುದು ತಪ್ಪುವುದು.
- ಎಲ್ಲಾದರು ಹೊರಗೆ ಹೋಗಬೇಕಾದಲ್ಲಿ ಬೆಂಕಿ ಬಗ್ಗೆ ಚಿಂತೆಯಿಲ್ಲ.
- ಮುಖ್ಯವಾಗಿ ದೀಪ ಹಚ್ಚುವ ವಿಷಯದಲ್ಲಿ ತಾಯಿ-ಮಗಳು/
ಗಂಡ-ಹೆಂಡತಿ/ಅತ್ತೆ-ಸೊಸೆ ನಡುವೆ ಜಗಳ ತಪ್ಪುತ್ತದೆ.
ದೇವರಿಗೆ ನಮ್ಮ ಭಕ್ತಿಯಷ್ಟೇ ಮುಖ್ಯ. ಯಾವ ದೀಪವಾದರ್‍ಏನು?
ದೀಪ ಹಚ್ಚದಿದ್ದರೂ ನಡೆಯುತ್ತದೆ ಎಂದಿರಾ?

- vijayamma ರವರ ಬ್ಲಾಗ್
- Login or register to post comments
- 462 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
ವಿದ್ಯುತ್ ಕಡಿತದ ಈ ದಿನಗಳಲ್ಲಿ ಕಡಿತವಾದಾಗ ದೇವರ ದೀಪ ನಂದಿ, ನಿಮ್ಮ ಮನಸಿಗೆ ಕಿರಿಕಿರಿ ಅನಿಸಬಹುದು!
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?
ಈ ಲೇಖನ ಸಂಪದ ಭಂಡಾರದಿಂದ ಓದಿ
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
ಅಶೋಕ ಕುಮಾರ
ಎಣ್ಣೆ ದೀವಿಗೆ, ಮಿಂಚಾರ್ಪಿನ ಬೆಳಕಾದರೂ ಏಕೆ ಬೇಕು ಕಡವಳಕ್ಕೆ?
ಅದು ತಾನೆ ಜಗವನ್ನು ಬೆಳಗೋದು?
ಕಡವಳ ಗಂಡಸೂ ಅಲ್ಲ, ಹೆಂಗಸೂ ಅಲ್ಲ. ( male dominated society
, made God as male )
ನಮ್ಮ ಮನೆಯಲ್ಲಿ ನಾವು ಗಣೇಶಂಗೆ ಮೆಣದಬತ್ತಿ ಹಚ್ಚೋದು
, ಅದು ಬರಿ ಕರೆಂಟು ಹೋದಾಗ !!
======================================
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
ನಿಜ.ಜಗವನ್ನೇ ಬೆಳಗುವವನಿಗೆ ದೀಪದ ಅಗತ್ಯವಿಲ್ಲ.
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
ವಿದ್ಯುತ್ ಹೋದಾಗ ಕರೆಂಟು ಹೋಯ್ತೆಂದು ಸುಮ್ಮನಿರಬಹುದು.
ಎಣ್ಣೆ ದೀಪವಾರಿದಾಗ ಅಪಶಕುನದ ಭಯ ರಕ್ತದಲ್ಲೇ
ಬಂದಿದೆಯಲ್ಲಾ.
ಅಪಶಕುನದ ಭಯ
ವಿದ್ಯುತ್ ಹೋದಾಗ ಕರೆಂಟು ಹೋಯ್ತೆಂದು ಸುಮ್ಮನಿರಬಹುದು.
ಎಣ್ಣೆ ದೀಪವಾರಿದಾಗ ಅಪಶಕುನದ ಭಯ ರಕ್ತದಲ್ಲೇ ಬಂದಿದೆಯಲ್ಲಾ.
ಅಮ್ಮ,
ಜಾಣ್ಮೆಯ ಮಾತು. ಚೆನ್ನಾಗಿದೆ!
=======================================
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
ಸೂರ್ಯ ಮುಳುಗುವುದು ಅಪಶಕುನವೇ ?