ಚೈತನ್ಯದಾಯಕ ಚಹಾಯ ನಮಃ
ಆಹಾ, ಚಹಾ...
ಬೆಳಗ್ಗೆ ೪ ಗಂಟೆಗೇ ಏಳಿ,ಇಲ್ಲಾ ೮ ಗಂಟೆಗೆ, ಮೊದಲಿಗೆ ನೆನಪು ಬರುವುದು ಚಹಾ,ಆಹಾ.
ಕೆಲವರು ಕಾಫಿ ಎನ್ನಬಹುದು. ಅವರು ಹೇಳಿಕೊಳ್ಳಲಿ ಬಿಡಿ. ಚಹಾದಲ್ಲಿ ಸಿಕ್ಕುವಷ್ಟು ಚೈತನ್ಯ ಬೇರಾವುದರಲ್ಲೂಇಲ್ಲ.ಚೈತನ್ಯವೂ(chaitanya) ಸಹ ಚಹಾಮಯ ನೋಡಿ-
CHA-Iತನ್ಯ,
ಚೈT(ಟೀ)a ನ್ಯ;
ಎಲ್ಲಾ ಹೆಂಗಸರ ಬೆಳಗ್ಗಿನ ಡ್ಯೂಟಿ ಸುರುವಾಗುವುದೇ ಚಹಾದಿಂದ.
ಚಹಾ ಮಾಡಿ, ಯಜಮಾನರನ್ನು,ಮಕ್ಕಳನ್ನು " ಚಹಾ ರೆಡಿ,ಏಳಿ,ಏಳಿ,"
ಎಂದು ಒಬ್ಬೊಬ್ಬರನ್ನು ಎಬ್ಬಿಸುತ್ತಾ,ಚಾಕುಡಿಸಿ ಬರುವಾಗ
ಅವರಿಗೆ ಮಾಡಿಟ್ಟ ಚಹಾವೇ ಆರಿ ಹೋಗಿರುತ್ತದೆ.
ಗೆಳೆಯರ,ನೆಂಟರಿಷ್ಟರ,ಜತೆಯಲ್ಲಿ ಮಾತುಕತೆಯಾಡುವಾಗ ಲೋಟಾ
ತುಂಬಾ ಚಹಾ ಕೈಯಲ್ಲಿದ್ದರೆ,ಸಮಯ ಹೋದುದೇ ಗೊತ್ತಾಗುವುದಿಲ್ಲ.
ಚಹಾ ಹಾಲು ಹಾಕಿ ಮಾಡಿ,ಹಾಕದೇ ಮಾಡಿ, ಸಕ್ಕರೆ ಹಾಕಿ/ಹಾಕದೇ,
ಹೇಗೆ ಬೇಕಾದರೂ ಮಾಡಿ ರುಚಿ ಕಮ್ಮಿಯಾಗದು.
ಶುಂಠಿ/ಏಲಕ್ಕಿ/ಮಸಾಲೆ ಸೇರಿಸಿ ಚಾ ಮಾಡಿ, ಅವಲಕ್ಕಿ ಉಪ್ ಕರಿ ಅಥವಾ
ಹಲಸಿನ ಹಪ್ಪಳದ ಜತೆ ಸಾಯಂಕಾಲ ಜಿಟಿಜಿಟಿ ಮಳೆ ಬರುವಾಗ
ಚಾ ಕುಡಿಯುವ ಮಜಾವೇ ಬೇರೆ.
ಅಂದ ಹಾಗೆ ಕಂಪ್ಯೂಟರ್ ನೋಡುವಾಗಲೂ ಎಡಕೈಯಲ್ಲಿ ಚಹಾ,
ಬಲಕೈಯಲ್ಲಿ ಮೌಸ್ ಇದ್ದರೆ...
ಮತ್ಯಾಕೆ ತಡ ಕರ್‍ಈರಿ ಮನೆಯಾಕೆಯನ್ನು " ಏ, ಚಿನ್ನಾ, ಒಂದು ಲೋಟ ಟೀ ....."

- vijayamma ರವರ ಬ್ಲಾಗ್
- Login or register to post comments
- 387 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಚೈತನ್ಯದಾಯಕ ಚಹಾಯ ನಮಃ
ಕಫನಿವಾರಕ ಕಾಫಯೇ ನಮಃ
ಉ: ಚೈತನ್ಯದಾಯಕ ಚಹಾಯ ನಮಃ
ನನಗೆ ಬೆಳಿಗ್ಗೆ ಕಾಫಿ ಇರಬೇಕು ಹಾಗೂ ಸಾಯಂಕಾಲ ಚಹ, ಜೊತೆಗೊಂದಿಷ್ಟು ಚುರಮುರಿ ಚೂಡ, ತುಣುಕು ಉಳ್ಳಾಗಡ್ಡಿ, ಕರಿದ ಮೆಣಸಿನಕಾಯಿ ಇದ್ದರಂತು ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆನೆ...
ಉ: ಚೈತನ್ಯದಾಯಕ ಚಹಾಯ ನಮಃ
ಟೀ ಬಗ್ಗೆ ಕೆಲವು ಸಂಗತಿಗಳು
೧) ಟೀ ಎಲ್ಲರಿಗೂ ಒಳ್ಳೇದಲ್ಲವಂತೆ. ಪಿತ್ತ ಅಂತೆ. ನನಗೆ ಕಾಮಲೆ ಬಂದು ಹೋದ ಮೇಲೆ, ಟೀ ಕುಡಿಯಕ್ಕೆ ಹೆದರಿಕೆ.( ಯಾರು ಹೆದರಿಸಿರಬೇಕು )
೨) ಮುದುವೆ ಮುಂತಾದ ಒಸಗೆಗಳಲ್ಲಿ ಟೀ ಕೊಟ್ಟರೆ, ನಮ್ಮ ಕಡೆ ಮಂದಿ ಆಡಿಕೊಳ್ಳುತ್ತಾರೆ. ಏನೇ ಆದರೂ ಕಾಪಿ ಸಮಾರಾದನೆ ನಡೆಯಲೇ ಬೇಕು. ಹಲವು ಹಳ್ಳಿಯೋರಂತೂ ವತ್ತಾರೆ ಬಿಸಿಬಿಸಿ ಬೆಲ್ಲದ ಕಾಪಿ ಗಂಟಲಿಗಿಳಿಸೇ ಮುಂದಿನ ಕೆಲಸ ನೋಡೋದು.
೩) ಇವೊತ್ತು cafe day ಮುಂತಾದವುಗಳಿಂದ ಕಾಪಿಗೆ ಬಂದ ಹಿರಿಮೆ ಟೀಗೆ ಬಂದಿಲ್ಲ ಅಂತ ಅನಿಸು. ಅದಕ್ಕೆ ಟೀ ಬೋಡಿರ್ನೋರು ಏನೇನು ad ಕೊಡಕ್ಕೆ ಒಡರಿದ್ದಾರೆ.
ಆದರೂ ಟೀ ಸವಿಯೋರು ಬಹಳ ಮಂದಿ ಇದ್ದಾರೆ. ಅದರಲ್ಲೂ ಸಿಗರೇಟು ಸೇದೋರಂತೂ, ಟಿ+ಸಿಗರೇಟು ಹಿಡಿದು ಒಂದು ದಂ ಅದರಿಂದ, ಒಂದು ಗುಟುಕು ಇದರಿಂದ ಕುಡೀತಾರೆ.
===============================================
ಉ: ಚೈತನ್ಯದಾಯಕ ಚಹಾಯ ನಮಃ
ಮುದುವೆ ಅಲ್ಲ ಮದುವೆ
======================================
ಉ: ಚೈತನ್ಯದಾಯಕ ಚಹಾಯ ನಮಃ
ಹಾಲನ್ನು ಬಿಸಿ ಮಾಡಿ, ಅದಕ್ಕೆ ಟೀ ಪುಡಿ ಸೇರಿಸಿ, ಕುದಿಸಿ, ಸಕ್ಕರೆ ಸೇರಿಸಿ, ಕಡಕ್ ಟೀ ಕುಡಿಯಲೆಂದೇ ಬೆಳಗ್ಗೆ ಬೇಗ ಏಳಬೇಕೆನ್ನಿಸುತ್ತದೆ. ನೀರಿಗೆ ಪುಡಿ ಸೇರಿಸಿ, ಕುದಿಸಿ, ಡಿಕಾಕ್ಷನ್ ಮಾಡಿ ಅದಕ್ಕೆ ಹಾಲು-ಸಕ್ಕರೆ ಸೇರಿಸುವ ಇನ್ನೊಂದು ಬಗೆಯ ಟೀ ತಯಾರಿಯೂ ಇದೆ. ಅದೇನಿದ್ದರೂ ರುಚಿ ಅಷ್ಟಕ್ಕಷ್ಟೆ. ಟೀ ತಯಾರಿಸಿ ಕೂಡಲೆ ಕುಡಿಯಬೇಕು. ತಣಿದದ್ದು ಬಿಸಿ ಮಾಡಿ ಕುಡಿಯುವಂತಿಲ್ಲವಲ್ಲ?