ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › vijayamma ರವರ ಬ್ಲಾಗ್

ಬೆಂಗಳೂರು ಅಳಿಯ ಬೇಕಾ?

April 20, 2007 - 1:11am — vijayamma

ದೂರದ ಹಳ್ಳಿಗಳಲ್ಲಿ ನೆಮ್ಮದಿಯಿಂದ ಇರುವ ಕನ್ಯಾಪಿತೃಗಳೇ,
ಮದುವೆ ಸೀಸನ್ ಬಂತು. ನಿಮ್ಮ ಸುಂದರಿ, ಸುಕೋಮಲ, ಸುಕುಮಾರಿಗೆ
ಬೆಂಗಳೂರು ಕಡೆಯಿಂದ ಗಂಡು ಬಂದರೆ ಕಣ್ಣು ಮುಚ್ಚಿ ಹೇಳಿ
"ನಮಗೆ ಬೆಂಗಳೂರು ಗಂಡು ಬೇಡವೇಬೇಡ"!!
ನೂರಕ್ಕೂ ಮೀರಿ ಸಿನಿಮಾ ಮಂದಿರಗಳು,ಲಾಲ್ ಭಾಗ್..ಪಾರ್ಕ್ ಗಳು,
ಮನೆಬಾಗಿಲಿಗೇ ತರಕಾರಿ ಸಾಮಾನುಗಳು,ಪಕ್ಕದಲ್ಲೇ ಕಾನ್ವೆಂಟು ಸ್ಕೂಲುಗಳು
ಎಂದು ಕನಸು ಕಾಣುವ ಹುಡುಗಿಯರೇ, ಬೆಂಗಳೂರು ಬಲೆಗೆ ಬೀಳದಿರಿ.
ತೊಂದರೆಗಳು ಬೆಳ್ಳಂಬೆಳಗ್ಗೆನೇ ಸುರುವಾಗುವುದು. ೨-೩-೪..ದಿನಕ್ಕೊಮ್ಮೆ
ಬರುವ ನೀರಿಗೆ ಕ್ಯೂ,ನಂತರ ಜಗಳದಿಂದ ಹೊಡೆದಾಟದ ಹಂತ ತಲುಪುವಾಗ
ನೀರು ಬರುವುದು ನಿಲ್ಲುವುದು. ಇದ್ದ ನೀರಲ್ಲಿಯೇ ಅಡುಗೆ,ಸ್ನಾನ...ಮುಗಿಸಿ
ಮಾರನೇದಿನಕ್ಕೂ ಉಳಿಸಿಕೊಳ್ಳಬೇಕು.
ಈ ಸ್ವಚ್ಚ(?) ಬೆಂಗಳೂರಲ್ಲಿ ಕಸ ಬಿಸಾಡಲೂ ಎಷ್ಟು ತಾಪತ್ರಯ ನೋಡಿ-
ಬೀದಿಗಳ ತೊಟ್ಟಿಗಳನ್ನು ತೆಗೆದು ಹಾಕಿ, ಮನೆ ಬಾಗಿಲಿಗೆ ಕಸ ತೆಗೆದುಕೊಳ್ಳುವ
ಗಾಡಿ ಬರುವುದು. ಅದು ೬ ಗಂಟೆಯಿಂದ ನಂತರ ಎಷ್ಟು ಹೊತ್ತಿಗೂ ಬರಬಹುದು.
ಊರಲ್ಲಿಯಂತೆ ರೇಡಿಯೋದಲ್ಲಿ ನ್ಯೂಸ್,ಸುಪ್ರಭಾತ ಕೇಳಿಕೊಂಡಿರಲು ಸಾಧ್ಯವಿಲ್ಲ.
ಒಂದು ಕಿವಿ ರಸ್ತೆಗೇ ಇಟ್ಟುಕೊಂಡು ಇರಬೇಕು. ತಿಂಗಳಿಗೆ ೫-೧೦ ರೂ,
ಹಬ್ಬದ ಬೋನಸ್, ಹಳೇಬಟ್ಟೆ ಇತ್ಯಾದಿ ಕೊಟ್ಟರೂ ಅವರಿಗೆ ಸಮಾಧಾನ/ಸಮಯವಿಲ್ಲ.
೧ ನಿಮಿಷವೂ ಕಾಯದೇ ಬೆಂಗಳೂರು ಮೈಸೂರು ರಾಜಹಂಸ ಬಸ್ಸಿಗಿಂತ ವೇಗವಾಗಿ
ಹೋಗುವರು. ನಿಮ್ಮ ಹಣೆ ಬರಹವನ್ನು ಹಳಿದುಕೊಂಡು ಮಾರನೇದಿನದವರೆಗೆ ಕಾಯಬೇಕು.
ಇದು ಬೆಳಗ್ಗಿನ ಒಂದು ಎರಡು ಗಂಟೆಯ ಝಲಕ್.
ಇನ್ನು ಇಡೀ ದಿನದ ತಾಪತ್ರಯ ಕೇಳುವ ತಾಳ್ಮೆ ಇದೆಯೇ.
ಬೆಂಗಳೂರಿನ ಹೆಣ್ಣುಗಳು ಇದನ್ನು ಓದಿದರೆ ತಮ್ಮ ಅನಿಸಿಕೆಯನ್ನೂ ಇದಕ್ಕೆ ಸೇರಿಸಿ.

~.~
  • vijayamma ರವರ ಬ್ಲಾಗ್
  • Login or register to post comments
  • 457 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 20, 2007 - 2:51am — kadeshammi

ಉ: ಬೆಂಗಳೂರು ಅಳಿಯ ಬೇಕಾ?

kadeshammi's picture

ಏಕೆ ಮೇಡಂ ಅನಾವಶ್ಯಕ ಬೆಂಗಳೂರಿನ ಬಗ್ಗೆ ಹೆದರಿಸುತ್ತಿದ್ದೀರಾ ನಮ್ಮ ಹೈಕಳುಗಳಿಗೆ ಕನ್ಯೆ ಸಿಕ್ಕುವುದೇ ಕಠಿಣ ಆಗಿರುವಾಗ. ಕೇವಲ ಮಧ್ಯಮ ವರ್ಗವನ್ನು "ಪ್ರಪಂಚ" ಅಂತ ಬಿಂಬಿಸಿದರೆ ಸರೀನಾ? ಇದನ್ನು ಓದಿ.. ನಂತರ ನಕ್ಕು ಬಿಡಿ. ನಿಮ್ಮ ಕಾನ್ಸೇಪ್ಟ್ ಪ್ರಕಾರ "ಸಿಲಿಕಾನ್ ಸಿಟಿಯಲ್ಲಿ ಅದರ ವಸತಿ ಸಮುಚ್ಚಯದಲ್ಲಿ, ನಲ್ಲಿ ನೀರಿಗೆ ಹೊಡೆದಾಟ?..!!"  ಅದು ಬೆಂಗಳೂರಿನ ಭಾಗವೇ ತಾನೇ? ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 3:34am — ಶ್ರೀನಿಧಿ

ಉ: ಬೆಂಗಳೂರು ಅಳಿಯ ಬೇಕಾ?

ಶ್ರೀನಿಧಿ's picture

ಬೆಂಗಳೂರು ಅಳಿಯಬೇಕಾಗಿಲ್ಲ / ಹಳಿಯಬೇಕಾಗಿಲ್ಲ. Laughing out loud

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 10:46am — mahesha

ಉ: ಬೆಂಗಳೂರು ಅಳಿಯ ಬೇಕಾ?

mahesha's picture

ಕರೆಕ್ಟ!!

ಅದಕ್ಕೆ ನಾನು ಬರಿ ಬೆಂಗಳೂರು ಹುಡಗೀನೇ ಮದುವೇ ಆಗೋದು ಅಂತ ತೀರ್ಮಾನ ಮಾಡಿದೀನಿ. ಬೇರೆ ಊರೋರ್ಗೆ ಇಲ್ಲಿ ತುಸು ಕಸ್ಟ.

ಏನೇ ಆದ್ರು.
"ಸೊಲ್ಪ adjust ಮಾಡ್ಕೊಳ್ಳಿ" ಅಂತ ನಮ್ ಬೆಂಗಳೂರು ಎಲ್ರನ್ನು ಕೈ ಬೀಸಿ ಕರೀತಾ ಇದೆ.
======================================

ಅದು ಸರಿ ಕಮೆಂಟಿಗೆ heading ಕೊಡೋ ಸವಲತ್ತು ಯಾಕೆ ಇಲ್ಲ ನೆನ್ನೆ ಇಂದ? ಇದು ಬರಿ ನಂಗೆನೋ, ಇಲ್ವೆ ಇಲ್ರುಗೂ ಹಿಂಗೆ ನಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಬೆಂಗಳೂರಿಗೆ ವಿದಾಯ
  • ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
  • " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
Syndicate content

ಲೇಖಕರು

vijayamma's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
  • ನನ್ನಿ ಬಳಕೆ ಹೆಚ್ಚಾಗಿದೆ :)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
  • rajeshks
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 6:56am
  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator