"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಗಾಂಧಿ ಎಂದರೆ ಸೋನಿಯಾಗಾಂಧಿ.
ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ.
ಇನ್ನು ಕರುಣಾನಿಧಿ- ಮುದಿ ಪ್ರಾಯ,ಮುಖ್ಯಮಂತ್ರಿ,ಜತೆಗೆ ಮಹಾನ್ ಸಾಹಿತಿ, ಅರಳುಮರಳು-ಅಹಂಕಾರ ಸಹಜ.ಬಾಯಿಗೆ ಬಂದುದನ್ನು ಹೇಳುತ್ತಾರೆ.ಬಾಕಿ ಧರ್ಮವನ್ನು ನಿಂದಿಸಲಿ ಎಂದು ಕೇಳುವುದು ಸರಿಯಲ್ಲ.
ಆ ಕಾಲದ ರಾಮಭಕ್ತರು ಸಾವಿರಾರು ಮೈಲಿ ದೂರದಲ್ಲಿದ್ದ ರಾವಣನಲ್ಲಿ ಹೋಗಿ,ಅವನೊಂದಿಗೆ ಯುದ್ಧ ಮಾಡಿದರೇ ಹೊರತು, ರಾವಣನ ಸಂಬಂಧಿಗಳ ಮನೆಗೆ ಕಲ್ಲು ತೂರಾಡುವ ಕೆಲಸ ಮಾಡಲಿಲ್ಲ.
ರಾಮ ಬಯಸಿದಲ್ಲಿ ಮಂದಿರ ನಿರ್ಮಾಣ ಎಷ್ಟರ ವಿಷಯ.ರಾಮನಿಗೆ ಅದು ಇಷ್ಟವಿಲ್ಲದಿರಬಹುದು.ರಾಮನ ಗುಣ,ನಡತೆಯನ್ನು ಜನತೆ ಅಳವಡಿಸಿಕೊಳ್ಳಲಿ ಎಂಬುದು ಅವನಿಚ್ಛೆ ಇರಬಹುದು.ಮಂದಿರವೇ ಇಷ್ಟವಿಲ್ಲ ಎಂದ ಮೇಲೆ ಸೇತುವೆ, ಕೇವಲ ರಾವಣನ ಮೇಲೆ ಯುದ್ಧಕ್ಕಾಗಿ ನಿರ್ಮಿಸಿದ್ದು,ರಾಮ ಹಿಂದಿರುಗುವಾಗ ಪುಷ್ಪಕವಿಮಾನದಲ್ಲಿ ಬಂದನೇ ಹೊರತು ಸೇತುವೆ ಮೇಲೆ ಬಂದಿಲ್ಲ. ಆ ವಾನರರು ನಿರ್ಮಿಸಿದ ಸೇತುವೆಯನ್ನು ಈ (ವಾ)ನರರು ಮುರಿಯಲಿ ಬಿಡಿ.
ರಾಮನ ವಿಷಯ ಬಂದ ಕೂಡಲೇ ಎದ್ದು ಕೂಡುವ ಪಕ್ಷಗಳೇ,ರಾಮಸೇತು ಬಿಡಿ , ನಿನ್ನೆ ಮೊನ್ನೆ ಕಟ್ಟಿದ ಸೇತುವೆಗಳೇ ಬೀಳುತ್ತಿವೆ.ಬೆಂಗಳೂರು-ಮೈಸೂರು ಬಿಟ್ಟರೆ ಕರ್ನಾಟಕದ ಉದ್ದಗಲಕ್ಕೂ ರಸ್ತೆಗಳು ಹಾಳಾಗಿವೆ. ಇವುಗಳ ಬಗ್ಗೆ ಹೋರಾಡಿ.ಮುಂದಿನ ಬಾರಿ ನೀವು ಗೆದ್ದು ಬಂದರೆ ರಾಮಭಕ್ತರೆಲ್ಲ ಸೇರಿ ಹೊಸದಾಗಿ ರಾಮಸೇತು ನಿರ್ಮಿಸೋಣ.

- vijayamma ರವರ ಬ್ಲಾಗ್
- Login or register to post comments
- 802 hits
- Email this blog




ಪ್ರತಿಕ್ರಿಯೆಗಳು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮೇಡಂ,
"ರಾಮನಿಗೆ ಕಟ್ಟಿದ ಸೇತುವೆ. ಆದ್ದರಿಂದ ಮುರಿಯಬಾರದು" ಎಂಬುದಷ್ಟೇ ವಾದವಾಗಿದ್ದರೆ ಅದರಲ್ಲಿ ಹುರುಳಿಲ್ಲ ಎನ್ನಬಹುದು, ಇದು ಕೇವಲ ಸಾಂಕೇತಿಕ ಎನ್ನಬುಹುದು.. ಸರಿ. ಆದರೆ ರಾಮ ಸೇತುವೆಯ ಇತರ ecological servicesಗಳನ್ನು ಬಿಡುವುದು ಹೇಗೆ. ಸೇತುವೆಯನ್ನು ಮುರಿಯುವ ವೆಚ್ಚ, ಮುರಿದಮೇಲೆ ಅಲ್ಲಿ ಮರಳು ಕೂರದೆ ಇರದಂತೆ ಕಾಯುವ ವೆಚ್ಚ, ಸೇತುವೆಯನ್ನು ಮುರಿದ ಮೇಲೆ ಬರುವ ಲಾಭ ಇವುಗಳನ್ನಾದರೂ ಲೆಕ್ಕ ಹಾಕಲೇಬೇಕು ಅಲ್ಲವೆ? ಈ ಲಾಭವನ್ನು, ಆಗುವ ಉಳಿತಾಯವನ್ನು ಉತ್ಪ್ರೇಕ್ಷೆ ಮಾಡಲಾಗಿದೆ, ಆಗುವ ತೊಂದರೆಗಳನ್ನು ಮುಚ್ಚಿಡಲಾಗಿದೆ ಎಂದು ಹಲವು independent studies ತೋರಿಸುತ್ತಲೇ ಬಂದಿವೆ. ಇವೆಲ್ಲವನ್ನು ಬದಿಗಿಟ್ಟು ಕೇವಲ ಇದರ ಧಾರ್ಮಿಕ/ಸಾಮಾಜಿಕ ಅಂಶಗಲನ್ನು ಹಿಡಿದು ಜಗ್ಗಾಡುವುದು ಸರಿಯಲ್ಲ.
ಬಾಬ್ರಿ ಮಸೀದಿಯನ್ನು ಇದ್ದಂತೆಯೇ ಬಿಡುವುದು, ರಾಮ ಮಂದಿರ ಕಟ್ಟುವುದು ಇವುಗಳ ಪರಿಣಾಮ ಅವರವರ ಮನಸ್ಸಿಗೆ ಬಿಟ್ಟದ್ದು, ಸಾಂಕೇತಿಕವಾದದ್ದು. ಆದರೆ, ರಾಮ ಸೇತುವೆಯನ್ನು ಮುರಿದರೆ ಪರಿಸರದ ಮೇಲಾಗುವ ಪರಿಣಾಮ, ಸರ್ಕಾರದ ಬೊಕ್ಕಸದ ಮೇಲಾಗುವ ಹಾನಿ ಕೇವಲ ಸಾಂಕೇತಿಕವಾಗಿರುವುದಿಲ್ಲ. ಕಡಿದ ಮೇಲೆ ನಷ್ಟವಾಯ್ತು ಅಂದರೆ ಪುನ: ಕಟ್ಟಲಾಗುತ್ತದೆಯೇ? ದುಂದು ವೆಚ್ಚದ ದುಡ್ದನ್ನು ಪುನಃ ಗಳಿಸಲಾದೀತೆ?
ಪರಿಸ್ಥಿತಿ ಹೀಗಿರುವಾಗ ಇದರಲ್ಲಿ ಧಾರ್ಮಿಕ ಅಂಶವೂ ಸೇರಿದ ಮಾತ್ರಕ್ಕೆ ಏನಾದ್ರೂ ಮಾಡಿಕೊಳ್ಳಲಿ ಮುಂದೆ ನೋಡಿಕೊಂಡ್ರಾಯ್ತು ಅನ್ನುವ ನಿಲುವು ಪ್ರಜ್ಞಾವಂತ ಪ್ರಜೆಗಳಿಗೆ ಹೊಂದುವುದಿಲ್ಲ. ದೇಶದ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಸದ್ಬಳಕೆ ಪ್ರತಿಯೊಬ್ಬ ಪ್ರಜೆಯ ಹೊಣೆ.
ಶ್ಯಾಮ ಕಶ್ಯಪ
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಬಿ.ಜೆ.ಪಿ.ಯ ರಾಮ ಭಕ್ತರೆಲ್ಲ ಸೇರಿ ಅವರದ್ದೇ ಸರಕಾರವಿದ್ದಾಗ ನಿರ್ಮಿಸಿದ ರಾಮಮಂದಿರವನ್ನು ನೋಡಿದ್ದೀರಲ್ಲ.ಹಾಗೇ ತಮಾಷೆಯಾಗಿ ರಾಮಸೇತು ನಿರ್ಮಿಸೋಣ ಎಂದೆ.
ಸೇತುವೆಯನ್ನು ಮುರಿಯುವಾಗ,ಮುರಿದ ಮೇಲೆ ಬರುವ ಲಾಭವನ್ನು ಲೆಕ್ಕ ಹಾಕಿಯೇ ಈ ಕೆಲಸ ಸುರುಮಾಡಿರುವುದು.ಆದರೆ ಲಾಭ ದೇಶಕ್ಕಲ್ಲ,ತಮಗೆ,ತಮ್ಮ ಪಕ್ಷಕ್ಕೆ.
ಇಲ್ಲಿ ಪ್ರತೀ ಪಟ್ಟಣದಲ್ಲೂ ಒಂದು ಕಿ.ಮೀ. ಹೋಗಲು,ಉದ್ದಕ್ಕೂ ಒನ್ ವೇ ಮಾಡಿ ಹತ್ತು ಕಿ.ಮೀ. ಸುತ್ತಿಸುತ್ತಾರೆ.ಅಲ್ಲಿ ಉಳಿತಾಯದ ಮಾತನಾಡುತ್ತಾರೆ.
ಪರಿಸರವಾದಿಗಳ ವಿರೋಧವಿದ್ದರೂ,ತಮ್ಮವರೇ ರಾಷ್ಟ್ರಪತಿ ಇರುವುದರಿಂದ ಸುಪ್ರೀಂ ಕೋರ್ಟನ್ನೇ ಎದುರುಹಾಕಿ ರಾಮಸೇತುವನ್ನು ಒಡೆಯುವುದು ಖಂಡಿತ-ಸರಕಾರವನ್ನು ಕಮ್ಮುನಿಷ್ಟರು ಉರುಳಿಸದಿದ್ದರೆ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಒಬ್ಬ ವ್ಯಕ್ತಿಯ ತೀರ ಸ್ವ೦ತ ವಿಚಾರಗಳಾದ ದೆವರು, ದರ್ಮ, ಜಾತಿ, ಉಪಜಾತಿಗಳು ಬೀದಿಗೆ ಬರಲು ಕಾರಣ ರಾಜಕಾರಣಿಗಳು. ಇ೦ದು ಸಾಮಾನ್ಯ ಜನರ ದೈನ೦ದಿನ ಜೀವನ ಅನೇಕ ಸಮಸ್ಯೆಗಳಿ೦ದ ತು೦ಬಿಕೊಡಿರುವುದರಿ೦ದ ಈ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಸಮಯವೂ ಇಲ್ಲ ಮತ್ತು ಇದರ ಬಗ್ಗೆ ಆಸ್ತೆಯೂ ಇಲ್ಲ. ಆದರೆ ಬ್ರಷ್ಟ ರಾಜಕಾರಣಿಗಳು ಹಣ ಮತ್ತು ಅದಿಕಾರದ ಆಸೆಯಿ೦ದ ಸಾಮಾನ್ಯ ಜನರಿಗೆ ಬೇಡದೇ ಇರುವ ವಿಷಯಗಳನ್ನ ಹೊರ ತ೦ದು ಕಿತ್ತಾಡುತ್ತಿದ್ದಾರೆ ಮತ್ತು ಜನರ ಹಾದಿ ತಪ್ಪಿಸುತ್ತಿದ್ದಾರೆ. ಇದಕ್ಕೆ ಸರಿಯಾಗಿ ನಮ್ಮ ಮಾದ್ಯಮಗಳು ತಮ್ಮ ಪ್ರೇಕ್ಷಕ ವರ್ಗವನ್ನ ಹೆಚ್ಚಿಸಿಕೊಳ್ಳಲು, ಇ೦ತ ವಿಚಾರಗಳಿಗೆ ಸಾಕಷ್ಟು ಪ್ರಚಾರ ಕೊಡುತ್ತಾರೆ.
ಇ೦ತ ಪರಿಸ್ತಿತಿಯಲ್ಲಿ ನಮ್ಮ ದೇಶದ ಜನರನ್ನ ಆ ಶ್ರೀರಾಮನೇ ಕಾಪಾಡಬೇಕು.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮಸೀದಿ, ಚರ್ಚ್ ದಾರಿಗೆ ಅಡ್ಡ ಬಂತು ಅಂತ ಮೆಟ್ರೊ ರೈಲು, ಕೊಂಕಣ ರೈಲು ದಾರಿಯನ್ನೇ ಬದಲಿಸಿರುವವರು, ಈ ರಾಮ ಸೇತು ತೆಗೆದು ದಾರಿ ಮಾಡುತ್ತೇವೆ ಅಂತ ಹೊರಟಿರುವುದು ವಿಪರ್ಯಾಸ. ಹಿಂದುಗಳ ಭಾವನೆಗೆ ಬೆಲೆ ಇಲ್ಲ.. ಆದರೆ ಅದನ್ನು ಮಾಡುತ್ತಿರುವುದು ಬೇರೆ ಯಾರು ಅಲ್ಲ ಹಿಂದೂಗಳೆ. ಒಬ್ಬ ಸ್ವಾಮಿಯನ್ನು ಜಯಲಲಿತ ಜೈಲಲ್ಲಿ ಹಾಕಿದಾಗ ಹಿಂದುಗಳ ಭಾವನೆ ಬಗ್ಗೆ ಮಾತಾಡಿದ ಕರುಣಾನಿಧಿ ರಾಮನ ಬಗ್ಗೆ ಸರಾಯಿ ಅಂಗಡಿಯಲ್ಲಿ ಕೂತು ಮಾತಾದುವವರಂತೆ ಮಾತಾದುತ್ತಾರೆ. ಈ ಗೊಂದಲದಲ್ಲಿ ತಮ್ಮ ತಮ್ಮ ಬೇಳೆ ಹೇಗೆ ಬೆಯಿಸಿಕೊಳುವುದು ಅಂತ ಇತರರು ಪ್ರಯತ್ನಿಸುತ್ತಿಧಾರೆ. ನಮ್ಮ ಜನಾರ್ದನ ಪುಜಾರಿ ಅಂತವರು ಸೊನಿಯಾಗಾಂಧಿಯಿಂದಾಗಿ ರಾಮಸೆತು ಉಳಿದಿದೆ ಅನ್ನುವಸ್ಟು ಕೀಳ್ಮಟಕ್ಕೆ ಹೊಗುತ್ತಾರೆ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಕರುಣನಿಧಿಯವರಿಗೆ ರಾಮನ Degree certificate ಬೆಕಂತೆ... college ಹೆಸರೂ ಬೆಕಂತೆ, ಮೊದಲು ಅವರ್ ಹತ್ತಿರ ಅವರ [ಕರುಣನಿಧಿಯವರ] Birth certificate ಸರಿಯಾಗಿದೆಯಾ ಕೇಳಿನೊಡ್ಬೆಕು.. ರಾಮನ Degree certificate ತಗೊಂಡು ಅವನಿಗೇನು ತಮಿಳುನಾಡಿನಲ್ಲಿ software ಅಥವಾ Civil Engineer ಕೆಲಸಾ ಕೊಡೊ ವಿಚಾರ ಇದ್ದರೂ ಇರಬಹುದು.... ಇಂಥ ಕೆಲವು ದರಿದ್ರ ರಾಜಕಾರಣಿಗಳಿಂದಾಗಿಯೇ ಇಂದು ನಮ್ಮ ದೇಶದ ಸ್ಥಿತಿ ಸ್ವಲ್ಪ ಬಿಗಡಾಯಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ.... ರಾಮ ಸೇತು ಧಾರ್ಮಿಕವಾಗಿ ಹಾಗೂ ಪ್ರಕೃತಿಕವಾಗಿ ಮಹತ್ವದ್ದಾಗಿದೆ ಎಂದು ಎಲ್ಲರಿಗೂ ತಿಳಿದ ವಿಷಯ, ಆದರೂ ಕೇಂದ್ರ ಸರ್ಕಾರ ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
ವಿನಾಯಕ ಮುತಾಲಿಕ ದೇಸಾಯಿ
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
http://www.vijaykarnatakaepaper.com/pdf/2007/09/22/20070922a_008101002.j...
ವಿನಾಯಕ ಮುತಾಲಿಕ ದೇಸಾಯಿ
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಪ್ರತಾಪರ ಬರವಣಿಗೆಯ ಮೊದಲ ಭಾಗ ತು೦ಬಾ ಚೆನ್ನಾಗಿ ಮೂಡಿದೆ.ಆದರೆ ಕೆಲವೆಡೆ ಆಧಾರ ರಹಿತ ವಾದವಿದೆ,
ಬರ್ಟ್ ರೆ೦ಡ್ ರಸಲ್ ರವರ ಪುಸ್ತಕದಲ್ಲಿ "ಕ್ರಿಸ್ ಮಸ್" ಬಗ್ಗೆ ಎಲ್ಲಿಯೂ ಹಿತವಾಗಿ ಬರೆದಿತುವ ಸ೦ಗತಿ ನನ್ನ ಕಣ್ಣಿಗೆ ಬಿದ್ದಿಲ್ಲಾ.
http://users.drew.edu/~jlenz/whynot.html
ನಿಮ್ಮ ಕಣ್ಣಿಗೆ ಬಿದ್ದಿದ್ದರೆ ತಿಳಿಸಿ. ಒಬ್ಬ ಪತ್ರಕರ್ತ ಹಲವು ಸ೦ಗತಿಗಳನ್ನು ತಿಳಿಸುವ ಸ೦ಗಾತಿ.
ಇ೦ತಹ ದೋಷಗಳನ್ನು ಆದಷ್ಟು ಕಡಿಮೆ ಮಾಡಬೇಕು.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಶ್ರೀ.ಶ್ಯಾಮ ಕಶ್ಯಪ
ಇಲ್ಲಿ ಸೂಚಿಸಿರೋದು ತಾವು ತಿಳಿಸಿರುವ೦ತಹ ವಿಚಾರಗಳ ಬಗ್ಗೇನೇ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
"ಇನ್ನು ಕರುಣಾನಿಧಿ- ಮುದಿ ಪ್ರಾಯ,ಮುಖ್ಯಮಂತ್ರಿ,ಜತೆಗೆ ಮಹಾನ್ ಸಾಹಿತಿ, ಅರಳುಮರಳು-ಅಹಂಕಾರ ಸಹಜ.ಬಾಯಿಗೆ ಬಂದುದನ್ನು ಹೇಳುತ್ತಾರೆ.ಬಾಕಿ ಧರ್ಮವನ್ನು ನಿಂದಿಸಲಿ ಎಂದು ಕೇಳುವುದು ಸರಿಯಲ್ಲ."
ವಿಜಯಮ್ಮ ಈ ಮಾತು ನನಗೆ ಸರಿ ಕಾಣ್ತಿಲ್ಲ. ಕರುಣಾನಿಧಿಗೆ ಅರುಳುಮರಳು-ಅಹಂಕಾರ-ಮುದಿಯ ಇದೆಲ್ಲ ಬೇಡವಾಗಿತ್ತು.
ಕರುಣಾನಿಧಿ ೪೦ ಏಡುಗಳಿಂದಲೂ ಇದನ್ನೇ ಹೇಳಿಕೊಂಡು ಬಂದಿರುವುದು. ಅವರು ಯಾವುದನ್ನು ಹೊಸತಾಗಿ ಹೇಳಿಲ್ಲ. ಪೆರಿಯರ್ ರಾಮಸ್ವಾಮಿ( ಇವರೇ ದ್ರಾವಿಡ ಚಳುವಳಿಗಳ ತಂದೆ ) ರಾಮ ಕೃಷ್ಣರು ಆರ್ಯರು/ಆರಿಯರು ಎಂದು ಅವರು ಚಿತಿರಗಳನ್ನು ಪಬಲಿಕ್ಕಲ್ಲಿ ಸುಟ್ಟಿದ್ದರು. ಕರಣಾನಿಧಿ ಅವರು ಕೂಟದವರೇ.( ದ್ರಾವಿಡ ಚಳುವಳಿ ಬಗ್ಗೆ ಓದಿರಿ )
ನನಗೇ ಇನ್ನೂ ಈವಯ್ಯ ತನ್ನ ದ್ರಾವಿಡ ತತುವಕ್ಕೆ ಪಟ್ಟುಕಟ್ಟಿರುವುದು ಅವರ ಗಟ್ಟಿತನವನ್ನು ತೋರಿಸಿತು.
ಇನ್ನೊಂದು ಗೊತ್ತು ಕರಣಾನಿಧಿಯ ಬಳಗದವರು ತಮ್ಮನ್ನು "we are so called Hindus" ಅಂತವೇ ಹೇಳಿಕೊಳ್ಳೋದು, ತಮ್ಮನ್ನು ತಾವು ’Hindu' ಎಂದು ಒಪ್ಪಿಕೊಂಡಿಲ್ಲವವರು.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಹಾಗನ್ನುವುದು ಸಹಜ ! ಅಲ್ಲಾ ಆಯಪ್ಪಾ ರಾಮಾ ಕುಡುಕಾ , ಎಣ್ಣೆ ಹೊಡಿತ್ತಿದ್ದಾ ಹಾಗೇ ಹೀಗೇ ಹೇಳ್ಟಾನಲ್ಲಾ.
ಅದ್ಯಾವ ಬಾರ್ ನಲ್ಲಿ ರಾಮನ ದರ್ಶನ ಮಾಡಿದ್ದನ೦ತೆ.
ಇನ್ನು ಬುಷ ಮಹಾಶಯ ಮ೦ಡೆಲಾ ಸತ್ತು ಹೊದಾ ಅ೦ತಾ ಮಾತಾಡಿದ್ದನ೦ತೆ. ಜಯರಾಮ್ ರಮೇಶ್ "ನಾನಾಗಿದ್ರೇ ರಾಜೀನಾಮೆ ಕೊಟ್ಟಿರ್ತಿದ್ದೆ". ಹೀಗೆ ರಾಜಕೀಯವೆ೦ದದೆ ಮಾತುಗಳ ವರಸೆ , ಅದನ್ನು ಬರೆಯೋಕ್ಕೆ ಪ್ಯಾಪರ್ಗಳು ನೂರಾರು.
ಲೋ ಮಹೇಶ ನಿ೦ಗ್ಯಾಕ್ಕೆ ಆ ತಾತನ ಮೇಲೆ ಅಷ್ಟೋ...೦ದು ವ್ಯಾಮೋಹ ?
"ದ್ರಾವಿಡ ತತುವಕ್ಕೆ ಪಟ್ಟುಕಟ್ಟಿರುವುದು ಅವರ ಗಟ್ಟಿತನವನ್ನು ತೋರಿಸಿತು."
>> ಸುಮ್ಕಿರು ಮಹಾರಾಯ ! ಆವಾಗಲೇ ನಮ್ಮನ್ನು ಜಾತಿ ಹೆಸರಲ್ಲಿ, ಧರ್ಮದ ಹೆಸರಲ್ಲಿ , ಭಾಷೆ ಹೆಸರಲ್ಲಿ ಛಿದ್ರ, ಛಿದ್ರ ಮಾಡಿರ ಬೇಕಾದರೆ, ಇದ್ಯಾವುದೋ ಠೊಳ್ಳ್ , ವಾದ ತ೦ದು "ನಾವೇ ಬೇರೆ , ನೀವೇ ಬ್ಯಾರೇ " ಅನ್ನೋದು ಅದೇನು ಗಟ್ಟಿ ತನವು.
ಖುರ್ಚಿ ಬಿಟ್ಟಿಯಾಗಿ ಸಿಕ್ಕಿರಬೇಕಾದ್ರೇ .. ಇವರದೇ ರಾಜಕೀಯ ನಡೆಯುತ್ತೆ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಚುನಾವಣೆಗಾಗಿ ಎನ್.ಡಿ.ಎ. ಪರ ನಿ೦ತಾಗ ಈ ಮಹನೀಯನ ತತ್ವ ರಜೆಯ ಮೇಲೆ ಹೋಗಿದ್ದಿರಬಹುದು.
http://www.hindu.com/2004/05/15/stories/2004051506300400.htm
http://www.hindu.com/thehindu/2001/07/26/stories/04262231.htm
http://www.hinduonnet.com/2001/09/06/stories/0406223b.htm
http://www.hinduonnet.com/2001/08/08/stories/0408223i.htm
http://timesofindia.indiatimes.com/articleshow/36344297.cms
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಹಾಗಾದ್ರೆ ಬೀ.ಜೇ.ಪೀಗೆ DMK ಏನು ಎಂತ, ಅವರ ತತುವ ಏನು ಅಂತ ಗೊತ್ತಿಲ್ದೇ ಅವರ ಕೂಟ ಹೋದ್ರಾ?
DMK ಕೇಂದಿರದಲ್ಲಿ ಪಟ್ಟಹಿಡಿಯಕ್ಕೆ ಮಾಡಿದ ತಂತ್ರ ಅದು. ನೋಡಿ ಅದೇ ಮೊದಲ ಸರತಿ, ಒಂದು ದ್ರಾವಿಡ ಪಾರ್ಟಿ ಹಾಗೆ ಕೇಂದ್ರದಲ್ಲಿ ದೊಡ್ಡಹಿಡಿತ ಮಾಡಿದ್ದು. ಅದನ್ನೇ ಈಗಲೂ ಮುಂದುವರಿಸಿದ್ದಾರೆ, ಮುಂದುವರಿಸಬೋದು. ಆದ್ರೆ ಅವರ ಲಾಬ ಬಿಟ್ಟಿವಲ್ಲ?
NDA ಯಾವಾ ತಮಿಳು ಮಂತಿರಿಗಳಿ ಏನೇನು ಇಲಾಕೆ ಕೊಟ್ಟಿತ್ತು? ಈ UPA ಏನೇನು ಕೊಟ್ಟಿದೆ ಅಂತೆ ನೋಡಿ. DMK ಇವರು ಹೀಗೆ ನಾಲುನಾಳು ಬಲವಾಗ್ತಿದ್ದಾರೆ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಬಿಜೆಪಿಯ ವಿಷಯ ಬಿಡಿ, ನೀವು ಹೇಳುತ್ತಿದ್ದುದು ಕರುಣಾನಿಧಿ ಮತ್ತು ಆತನ ತತ್ವನಿಷ್ಠೆಯ ಬಗ್ಗೆ.
ಅ೦ತೆಯೇ ಡಿಎಮ್‍ಕೆಯನ್ನು ಸೇರಿಸಿಕೊ೦ಡದ್ದು ಬಿಜೆಪಿ ಕೇ೦ದ್ರದಲ್ಲಿ ಪಟ್ಟ ಹಿಡಿಯಲು ಮಾಡಿದ ತ೦ತ್ರವಾಗಿರಬಹುದು.
ರಾಮನೂ ಒಬ್ಬ ನಾಡಮು೦ದಾಳೆ೦ಬುದನ್ನು ಮರೆಯದಿರೋಣ.
ನಾಡಮು೦ದಾಳಾಗಿದ್ದರೆ ಏನು ನುಡಿದರೂ ತಪ್ಪಿಲ್ಲವೋ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ವಿಜಯಮ್ಮ ಹೇಳಿದುದರಲ್ಲಿ ಅತಿರೇಕವೇನೂ ಇಲ್ಲ, ಅವರು ಚುರುಕು ಮುಟ್ಟಿಸಿದರಷ್ಟೇ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
"ವಿಜಯಮ್ಮ ಹೇಳಿದುದರಲ್ಲಿ ಅತಿರೇಕವೇನೂ ಇಲ್ಲ, ಅವರು ಚುರುಕು ಮುಟ್ಟಿಸಿದರಷ್ಟೇ."
ಬೊಳುಂಬು ಸಾರ್. ಇದೇ ಸುಮ್ನೆ ಯಾಕೆ. ಹೀಗೆ ಚುರುಕು ಮುಟ್ಟಿಸೋದಿಂದಲೇ ಗದ್ದಲ.
ಈಗ ಇದೇ ಮಾತನ್ನು ಕರಣಾನಿದಿ ಕಡೆಯನ್ನು ಹೀಗೆ ಹೇಳಿದರೆ
"ಕರುಣಾನಿಧಿ ಹೇಳಿದುದರಲ್ಲಿ ಅತಿರೇಕವೇನೂ ಇಲ್ಲ, ಅವರು ಚುರುಕು ಮುಟ್ಟಿಸಿದರಷ್ಟೇ." ಆಗ
!!
ಇಲ್ಲಿ ಸುಮ್ನೆ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಯಾಕೆ ಗದ್ದಲ ಎಬ್ಬಿಸ್ತೀರಿ ( ಎರಡು ಕಡೆಯವರಿಗೂ )?
ಈ ಅಯೋದ್ಯದಲ್ಲಿ ಕೂತ ಊ ಸಂತ ಕರಣನಿದಿ ತಲೆ ತಂದದವರಿಗೆ ಹೊನ್ನುಕೊಡುವ ಹೇಳಿಕೆ ಮಾಡಿದ್ದಾನೆ. ಇದಕ್ಕೆ ಸೇಡು ಎಂದು ತಮಿಳು ಮಂದಿ ಹೋಗಿ ಅವನನ್ನೇ ಕೊಲ್ಲಬೋದು(ಆಗಲ್ವಾ?
)... ವಿಸಯ ತಣ್ಣಗೆ ಆಗಕ್ಕೆ ಇಬ್ರೂ ಬಿಡದೇ ಹಿಂಗೆ "ಚುರುಕು ಮುಟ್ಟಿಸಿಕೊಂಡಿದ್ರೆ" ನಸ್ಟ ನಾವು ಕಾಮನ್ ಮಂದಿಗೆ.
ಈ ಬೀಜೀಪೀಯೂ ಬೇಕು ಬೇಕಂತಲೇ ಓಟಿಗಾಗಿ ಹೀಗೆ ಕಿಚ್ಚುಹೆಚ್ಚಿಸ್ತಾ ಐತೆ, ಹಂಗೆ ಕರುಣನಿಧಿ ತನ್ನ ದ್ರಾವಿಡವಾದವನ್ನು ಮೆರೆಸಕ್ಕೆ ನಿಂತವ್ನೆ. ಕೊನೆ ಒಂದಸ್ಟು ಕಾಮನ್ ಮಂದಿ ಸತ್ತು ಇದು ನಿಲ್ಲೋದು. ರಾಮಮಂದಿರದ ಗಲಾಟೆಯಲ್ಲಿ ಅಡವಾಣಿಯಾಗಲೀ, ಉಮಾಬಾರತಿಯಾಗಲಿ ಸತ್ರಾ? ಸತ್ತೋರು ಯಾರು?
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ನೀ ಹೇಳಿದ ಹಾಗಾಯ್ತು ! ಎಲ್ರೂ ಮತ್ತೊಬ್ಬರಿಗೆ ಚುರುಕು ಮುಟ್ಟಿಸ್ತಿದ್ದಾರೆ !
DMK ಕಪಿ ಸೇನೆ BJP ಕಛೇರಿಯ ಮೇಲೆ ದಾಳಿ ನಡೆಸಿದೆ.
ಒಟ್ಟಿನಲ್ಲಿ ರಾಮ ನಿಲ್ಲದೇ, ಬರೀ ಕಪಿರಾಜ್ಯವಾಯ್ತು ನಮ್ಮ ದೇಶ/
ಗಾ೦ಧೀ ಕ೦ಡಾ ರಾಮರಾಜ್ಯವ೦ತೂ ನಾವು ಕಟ್ಟಲಿಲ್ಲಾ, ಆದರೆ ಕಪಿ ರಾಜ್ಯವ೦ತೂ ಕಟ್ಟಿದ್ದೇವೆ..
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಅಲ್ಲಾ ಮಾರಾಯ್ರೆ,
ನೀವು ಹಿಂಗೆಲ್ಲ ಸುಮ್ನೆ ಸುಮ್ನೆ ಒಬ್ಬ ನಾಡಮುಂದಾಳ್ನ ಬೈಯೋದನ್ನ, ಹಳಿಯೋದನ್ನ ಬೆನ್ತಟ್ತೀರ?
ನಾನು ಹೇಳಿದ್ದು ಎಸ್ಟೋ, ಅಸ್ಟನ್ನೆ ತಕ್ಕೊಳ್ಳೀ, ಇಲ್ಲದನ್ನೆಲ್ಲ ಸೇರೀರಿ ಇಲ್ಲಿ.
ನಂಗೆ ಆವಯ್ಯನ ಮೇಲೇ ಯಾವ ಯಾಮೋಅ? ಇದೊಳ್ಳೆ ಕತೆಯಾಯ್ತು ನಿಮ್ದುರಿ. ನಾನು ಹೇಳಿದ್ದು..
ಆವಯ್ಯ, ಆವಯ್ಯನ ಗುರು, ಇವರೆಲ್ಲ ಕಮ್ಮಿ ಅಂದ್ರೆ ೪೦ ವರಸಗಳಿಂದ ಹಿಂಗೇ ಆಡ್ತವ್ರೆ, ಇದ್ರಾಗೆ ಏನು ನಿಬ್ರ/ಸ್ಪೆಸಲ್ಲು?. ಅವಯ್ಯ ಹುಡುಗನಾಗಿದ್ದಾಗ ಏನು ಹೇಳ್ತಿದ್ನೋ, ಅದನ್ನೇ ಈಗಲೂ ಹೇಳವ್ನಲ್ಲ.
ಇನ್ನು ಅವರು "ರಾಮ ಕುಡಿತಿದ್ದ" ಅಂತ ಹೇಳಿಲ್ಲ, ತುಸು ನೋಡ್ರಿ, ಅವ್ರು ಹೇಳಿರೋದು ’ವಾಲ್ಮೀಕಿ ರಾಮ ಕುಡಿತಿದ್ದು ಅಂದವ್ನೆ’ ಅಂತ. ಇನ್ನ ವಾಲ್ಮೀಕಿ ಹಂಗೆ ಹೇಳಿಲ್ಲ/ಹೇಳವ್ನೆ ಎಂದು ತಿಳಿಯಕ್ಕೆ ನಾವು ವಾಲಮೀಕಿ ರಾಮಯ್ಣ ಓದಬೇಕು, ನೀವು ಓದಿವ್ರಾ ಪೂರ?
"ಸುಮ್ಕಿರು ಮಹಾರಾಯ ! ಆವಾಗಲೇ ನಮ್ಮನ್ನು ಜಾತಿ ಹೆಸರಲ್ಲಿ, ಧರ್ಮದ ಹೆಸರಲ್ಲಿ , ಭಾಷೆ ಹೆಸರಲ್ಲಿ ಛಿದ್ರ, ಛಿದ್ರ ಮಾಡಿರ ಬೇಕಾದರೆ, ಇದ್ಯಾವುದೋ ಠೊಳ್ಳ್ , ವಾದ "
ಅಲ್ರೀ ನೀವ್ಯಾಕೆ certificate ಕೊಡೋ ಕೆಲಸ ತಗೋತೀರಿ? ನೋಡಿ ಇಲ್ಲಿ ಆ ವಾದ ಟೊಳ್ಳು ಅಂತ ಅಂದುಬಿಸಾಕಿದ್ರಿ. ಅದು ಟೊಳ್ಳಾಗಿದ್ರೆ, ಕಳೆದ ಮುವ್ವತ್ತು/ನಲವತ್ತು ವರಸಗಳಿಂದ ತಮಿಳನಾಡನ್ನು ಆ ವಾದದ ಮಂದಿಯೇ ಯಾಕೆ ಆಳ್ತವ್ರೆ? ಇವೊತ್ತು ಕೇಂದಿರ ಸರಕಾರದಾಗೆ ಆ ವಾದದವ್ರೇ ೧೦ ಮಂತಿರಿಗಳು ಯಾಕವ್ರೆ?
"ಅದ್ಯಾವ ಬಾರ್ ನಲ್ಲಿ ರಾಮನ ದರ್ಶನ ಮಾಡಿದ್ದನ೦ತೆ."
ಇದನ್ನೇ ತಿರುಗಿಸಿ, ನಿಮಗೆ ಯಾರಾರ "ನೀವು ಏನು ರಾಮನ ಜೊತೆ ೨೪ಗಂಟೆ ಇದ್ರಾ?, ನೀವು ಹೇಗೆ ಅವನು ಕುಡಿದೇ ಇಲ್ಲ ಅಂತ ಗ್ಯಾರಂಟಿಯಾಗಿ ಹೇಳ್ತೀರಿ?" ಅಂದ್ರೆ. ಸುಮ್ನೆ ಇಂತ ಮಾತುಗಳು ಯಾಕೆ? ಹಿಂಗೆ ಎರಡು ಕಡೆಯೋರು ಹೇಳ್ತಾ ಇರಿ. ಗೊಡವೆ ರಣ ಆಯ್ತದೆ.
ಇದೇ ತರ ಕರಣಾನಿಧಿ "ರಾಮ ಯಾವ ಇಂಜಿನಿಯರಿಂಗ್ ಓದವ್ನೇ" ಎಂದುದು ಸುಮ್ನೆ ಬೆಂಕಿಗೆ ಎಣ್ಣೆ ಸುರಿಯೋ ಕೆಲಸ!! ಆ ಮಾತಿಗೆ ತಲೆಬುಡಯಿಲ್ಲ!!
ಆದ್ರೆ "ರಾಮ ಒಂದು ಕತೆಯ ಪಾತ್ರ, ದಿಟವಾದ ಮಾನಿಸ ಇರಲಿಲ್ಲ" ಅನ್ನೋದು ನಂಬಿಕೆಯ ಸಂಗತಿ. ಅವರು ನಂಬಲ್ಲ ಅಂದ್ರೆ ಹೀಗೆ ಹೇಳಬೋದು.
ಅದ್ ಸರಿ ನಾನು ಇದನ್ನೆಲ್ಲ ಹೇಳಿದ್ನೇ?
ನಾನು ಹೇಳಿದ್ದರ ತಿರುಳು ಈಟೇ
ಕರುಣಾನಿಧಿ+ದ್ರಾವಿಡ ಪಾರ್ಟಿಗಳು ೪೦ ವರುಸದಿಂದಲೂ ಇದೇ ಸಂಕ ಊದ್ತಾ ಇರೋದು. ಅದರಲ್ಲಿ ಏನು ಹೊಸತಿಲ್ಲ. ನೀವು/ವಿಜಯಮ್ನೋರು ಹೊಸತಾಗಿ ನೋಡೀರಿ. ಅದೆಲ್ಲ ಏನೇ ಇದ್ರು ಆವಯ್ಯಂಗೆ ಈಗ ಅರುಳುಮರುಳು-ಮುದಿಯ-ಅಹಂಕಾರ ಅನ್ನೂದು ಸರಿಯಿಲ್ಲ. ಆವಯ್ಯ ಇದ್ದ ಹಾಗೆ ಇದ್ದಾನೆ.
ನೆನೆಸಿಕೊಳ್ಳಿ ಮುದಿಯ(ವಿಜಯಮ್ಮನ ದಾಟಿಯಲ್ಲಿ) ಅಟಲ ಬಿಆರಿ ವಾಜಪೇಯಿ, ಅಂದ್ರೆ ರಾಮನ ಹುಟ್ಟುಜಾಗದಾಗೆ ಗುಡಿಕಟ್ಟೋ ಪಾರ್ಟಿ ಮುಂದಾಳು, ಇವರೂ ಈ ದ್ರಾವಿಡವಾದಿಗಳ ಬೆನ್ನಿಲುವಿಂದೇ ಐದೇಡು ಪಟ್ಟದ ದರಬಾರು ನಡೆಸಿದ್ದು. ಈ ಮಾಪುರುಸನ ಕಾಲದಾಗೇ ಈ ಸೇತುಸಮುದ್ರ ಸುರುಹಚ್ಚಿಕೊಂಡಿದ್ದು.. ಆಗಲೂ ಈ ದ್ರಾವಿಡ ಪಾರ್ಟಿ ಅವರು ಹೀಗೆ ಇದ್ರೂ, ಈಗಲೂ ಹಾಗೇ ಇದ್ದಾರೆ. ಬದಲಾಗಿರೋರು ಈಗ ಯಾರು ಅಂತ ತಿಳಿಕೊಳ್ಳೋದು ಈಸೀ!!
ಏನಾರಾ ಹಾಳಾಗಾಗೋಗ್ಲಿ,
ನಾನು ಹೇಳಿದ್ದು ನಂಗೆ ರಾಮನ ಕಂಡ್ರೆ ಆಗಲ್ಲ, ಕರುಣನಿಧಿ ನನ್ ಚಿಕ್ಕಪ್ಪನಂಗೆ ಅಂತ ಅಲ್ಲ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಅಲ್ಲಾ ಸತ್ತು ಹೋಗಿದ್ದಾ ಅ ಬಿ.ಜೇ.ಪಿ ಯವರು ಯಾವುದೇ ವಿಷಯ ಇಟ್ಕೊ೦ಡು ದೇಶವನ್ನು ನಡೆಸೋಕ್ಕೆ ಆಗ್ತಿರಲಿಲ್ಲಾ.
ಅವರಿಗೆ ತಿರುಗಾ ರಾಮ ಜಪ ಜ್ಞಾಪಿಸೋದು ರಾಜಕೀಯವಾಗಿ ಮುಠಾಳತನ.
ಈವತ್ತಿ ಹಿ೦ದೂ ಪ್ಯಾಪರ್ ನೋಡಿ !
ಮುಖಪುಟದಲ್ಲಿ ಆವಗಲೇ ಒ೦ದು ಯಾತ್ರೆ ಮಾಡ್ತವರೇ .. ಬಿ.ಜೇ.ಪಿ ಯವರು.
ಉತ್ತರ ದೇಶದವರಿಗೆ ರಾಮಾ ಅ೦ದರೆ ಸ್ವಲ್ಪ ಜಾಸ್ತಿ ವ್ಯಾಮೋಹ. ಅವರು ಅದನ್ನೇ ದೊಡ್ಡ ಕತೆ ಮಾಡಿ ಗೆದ್ದರೆ ನಮ್ಗೇ ತಾನೇ ನಷ್ಟಾ.
ಕರುಣಾನಿಧಿ ರಾಜಕೀಯವಾಗಿ ಮುದಿಯ ಆಗಿಲ್ಲಾ. ನೀವು ತಮಿಳ್ ನಾಡು ರಾಜಕೀಯವನ್ನು ಸ್ವಲ್ಪ ನೋಡಿ..
ರಾಜ್ಯದಲ್ಲಿ ಒಟ್ಟಿಗೆ ಒ೦ದೇ ಪಕ್ಷಕ್ಕೇ ವೋಟ್ ಹಾಕ್ತಾರೇ ..
M. Karunanidhi 27 January 1989 30 January 1991 3 DMK
Jayalalithaa 24 June 1991 12 May 1996 1 AIADMK (ಐದು ವರ್ಷ)
M. Karunanidhi 13 May 1996 13 May 2001 4 DMK - (ಐದು ವರ್ಷ.) Jayalalithaa 14 May 2001 21 September 2001 -[16] AIADMK
O. Panneerselvam 21 September 2001 1 March 2002 1 AIADMK
J. Jayalalithaa 2 March 2002 12 May 2006 2[16] AIADMK (ಐದು ವರ್ಷ)
M. Karunanidhi 13 May 2006 incumbent 5[17] DMK (ಐದು ವರ್ಷ)
ಅ೦ದರೆ 71 ನೇ ಇಸವಿಯಿ೦ದಾ ಇವರಿಬ್ಬರೇ ಜಗಳ ಆಡ್ಕೊ೦ಡು .. ಒ೦ದ್ ವರ್ಷ ಇವರು ಮತ್ತೊ೦ದು ವರ್ಷ ಅವರು ...
http://kla.kar.nic.in/mladr.htm
http://www.assembly.tn.gov.in/election2006/pollupd/ac/states/S22/a_defau...
ಅದೂ ತಮಾಷೆ ಅ೦ದರೆ ವಿರೋಧ ಪಕ್ಷವೇ ಇರೋದಿಲ್ಲಾ.
:)
ಗೆದ್ದರೇ ಪೂರ್ತಿ ಮಜಾ..ರಿಟಿ ನಮ್ಮ ಕರ್ನಾಟಕ ನೋಡಿ ಇನ್ನು ಮು೦ದೇ Coalition ರಾಜಕಾರಣ ಗ್ಯಾರ೦ಟಿ///
ಮಾಯಾವತಿ ಪಕ್ಷ ಬರೋವರೆಗೂ ...
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮುರುಳಿ ದೇವರು..
ಈ ಬೀಜೇಪೀ ತಮಿಳನಾಡಲ್ಲಿ ಎಂದಾದ್ರು ಗೆಲ್ತದ? ಕನಸಲ್ಲೂ ಆಗೋದು ಕಾಣೆ!
ತಮಿಳುನಾಡು, ಆಂದ್ರ, ಕೇರಳ ಇಲ್ಲಿ ಬೀಜೀಪಿ ಬೆರಳಣಿಕೆಯಸ್ಟು ಸೀಟು ಗೆಲ್ಲಕ್ಕೆ ಆಗಲ್ಲ! ಕರ್ನಾಟಕದಲ್ಲೂ ಬೀಜೀಪಿಗೆ ತೆಂಕಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಲು ಕಸ್ಟ.. ಅದ್ರಲ್ಲೂ ಮಂಡ್ಯದಲ್ಲಿ ಕಳೆದ ಲೋಕಸಭೆಯ ಎಲೆಕ್ಸನ್ಗೆ ಬೀಜೀಪಿಯಿಂದ ಯಾರು ನಿಂತೇ ಇರಲಿಲ್ಲ
.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಅಮ್ಮನವರು ಶ೦ಕರಾಚಾರ್ಯರನ್ನು ಅರೇಸ್ಟ್ ಮಾಡ್ಸಿದ್ದಾಗ ಆಕೆಯನ್ನು ಹಿ೦ದೂ ವಿರೋಧಿ ಅ೦ದಿದ್ದರು . ಈಗ ಆಕೆನೇ ದೋಸ್ತು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
"ಕರುಣಾನಿಧಿಗೆ ಅರಳು ಮರಳು,ಅಹಂಕಾರ,ಮುದಿಯ ಇದೆಲ್ಲಾ ಬೇಡವಾಗಿತ್ತು."
ತಮ್ಮಾ ಮಹೇಶಾ,'ಕರುಣಾನಿಧಿ ಬುದ್ಧಿವಂತರು,ನಿರಹಂಕಾರಿ,ನಿಮ್ಮಂತೆ ಯುವಕ'.ಸಮಾಧಾನವಾಯಿತಾ?
ಕೂಲಿಂಗ್ ಗ್ಲಾಸ್ ಮಹಿಮೆ.
೩೦-೪೦ ವರ್ಷಗಳಿಂದ ಒಂದೇ ನಿಲುವಿಗೆ ಕಟ್ಟುಬಿದ್ದರೆ,ಅದೇ ಸರಿ ಎಂದಾಗುವುದಿಲ್ಲ.ಕಾಶ್ಮೀರಿಗಳ,ಭಯೋತ್ಪಾದಕರುಗಳ ನಿಲುವು ಸರಿಯಾ?
ಪೆರಿಯಾರ್ ರಾಮಸ್ವಾಮಿ - ದೇವರ ಚಿತ್ರ ಸುಟ್ಟಿದ್ದು.ಅಷ್ಟೆ.ಅದೂ ಹಿಂದೂ ದೇವರು.ತನ್ನ ಹೆಸರಿಂದ ರಾಮ ಶಬ್ದ ಕಿತ್ತೊಗೆಯಲಿಲ್ಲ.ದ್ರಾವಿಡ ಚಳವಳಿಯವರಿಂದಲೂ ರಾಮ ನಾಮ ಸ್ಮರಣೆಯೇ ನಡೆಯಿತು.
"ನನಗೆ ಇನ್ನೂ ಈವಯ್ಯ ತನ್ನ ದ್ರಾವಿಡ ತತುವಕ್ಕೆ ಪಟ್ಟು ಕಟ್ಟಿರುವುದು ಅವರ ಗಟ್ಟಿತನ ತೋರಿಸಿತು." ಮಣ್ಣಂಗಟ್ಟಿ. ಕರ್ನಾಟಕದಲ್ಲಾಗುತ್ತಿದ್ದರೆ ಈವಯ್ಯನನ್ನು ಯಾವತ್ತೋ ಮೂಲೆಗೆ ತಳ್ಳುತ್ತಿದ್ದರು.
ದ್ರಾವಿಡ ಚಳುವಳಿಗಾರರು!.ಅವರಿಗೆ ರಾಮನನ್ನು ಬಿಟ್ಟು,ಪೆರಿಯಾರ್,ಎಮ್.ಜಿ.ಆರ್.,ಜಯಮ್ಮ,ಕರುಣಾನಿಧಿ,ಖುಷ್ಬೂ...ಎಲ್ಲರೂ ದೇವರೇ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಏನ್ರಿ! ಸರಿ.. ಬಿಡಿ ನಿಮಗೆ ತಮ್ಮ ಮೂಗೇ ನೆಟ್ಟಗೆ ಅಂದ್ರೇ, ನಾವು ನಕ್ಕು ಹೌದೌದು ಅಂತೀವಿ.!!
ನೀವು ಇನ್ನೊಬ್ಬರ ವಿಚಾರ ತಗೊಳ್ಳಲ್ಲ. ಅಂದ್ರೆ!!
"೩೦-೪೦ ವರ್ಷಗಳಿಂದ ಒಂದೇ ನಿಲುವಿಗೆ ಕಟ್ಟುಬಿದ್ದರೆ,ಅದೇ ಸರಿ ಎಂದಾಗುವುದಿಲ್ಲ.ಕಾಶ್ಮೀರಿಗಳ,ಭಯೋತ್ಪಾದಕರುಗಳ ನಿಲುವು ಸರಿಯಾ?"
ಕಾಶಮೀರದವರಿಗೆ ಅದು ಸರಿಯಾಗಿದ್ರೆ ಅದು ಸರಿ!! ಅದು ಸರಿಯೋ ತಪ್ಪೂ ಎಂದು ಅವರು ತೀರ್ಮಾನಿಸಿಕೊಳ್ಳಬೇಕು. ಒಂದು ವೇಳೆ ಕಾಶಮೀರದ ಬಲುಹೆಚ್ಚು ಮಂದಿ ನಮ್ಮ ದೇಸದಿಂದ ಬೇರೆಯಾಗ್ತೀವಿ ಅಂದ್ರೆ, democrazy ಅಂದ ಮೇಲೆ ಅದಕ್ಕೂ ಅನುವು ಇರಬೇಕು. ಇಲ್ಲ ಅಂದ್ರೆ ಅದು ದಬ್ಬಾಳಿಕೆ ಆಗ್ತದೆ.
"ನನಗೆ ಇನ್ನೂ ಈವಯ್ಯ ತನ್ನ ದ್ರಾವಿಡ ತತುವಕ್ಕೆ ಪಟ್ಟು ಕಟ್ಟಿರುವುದು ಅವರ ಗಟ್ಟಿತನ ತೋರಿಸಿತು." ಮಣ್ಣಂಗಟ್ಟಿ. ಕರ್ನಾಟಕದಲ್ಲಾಗುತ್ತಿದ್ದರೆ ಈವಯ್ಯನನ್ನು ಯಾವತ್ತೋ ಮೂಲೆಗೆ ತಳ್ಳುತ್ತಿದ್ದರು."
ಮುಂದೆ ನೋಡಿ, ನಿಮ್ಮ ಮಾತನ್ನೂ ಓದಿ ಯಾರಾದ್ರು, ನಿಮ್ಮ ಮೇಲೆ ಮುನಿಸಿಕೊಂಡವರು ನಿಮ್ಮನ್ನು "ಮುದುಕಿ, ಅಹಂಕಾರಿ, ಅರುಳು-ಮರುಳು" ಅಂತಾರೆ. ಆಗ ಮಂದಿ "ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅಂತಾರೆ"
.!!
ನಾನು ಹೇಳಿದ್ದು ಇಸ್ಟೇ.. ಟೀಕೆ, ಬೈಗುಳ, ಆಗಬಾರದು.!
"ಕರುಣಾನಿಧಿ ರಾಮನ ಬಗ್ಗೆ ಮಾತಾಡಿದ್ದು ಸರಿಯಿಲ್ಲ, ಅದು ತಪ್ಪು" ಹೀಗೆ ಹೇಳಿದ್ರೆ ಸರಿ. ಅದನ್ನು ಬಿಟ್ಟು "ಮುದಿಯ-ಅಹಂಕಾರಿ-ಅರುಳು/ಮರುಳು" ಅಂತ ಮಾತು ತಕ್ಕುದ್ದಲ್ಲ. ನನಗೆ ಹಿಡಿಸಿಲ್ಲ ಏಕೆಂದ್ರೆ, ನಾನು ಈ DMK ಪಕ್ಷದವರು ೪೦-೫೦ ವರಸದಿಂದ ಮಾಡ್ತಾ ಇರೋದನ್ನ, ಅವರ ಸಿದ್ದಾಂತವನ್ನು ಓದಿಕೊಂಡಿದ್ದೀನಿ. ಅವರ ಮಾತಲ್ಲಿ, ಅವರಂತೆ ಅವೆಲ್ಲ ಸರಿಯೇ. ಅವರಿಗೂ ಹಾಗೆ ಮಾಡಲು ಬಲವಾದ ಕಾರಣ ಇತ್ತು. ಅದಕ್ಕೆ ನಾನು ನಿಮಗೆ ಅವರ ಹೋರಾಟದ ಬಗ್ಗೆ ಓದಿದರೆ ಇದು ನಿಮಗೆ ಅಸ್ಟು ಕಹಿ ಅನಿಸದು ಎಂದು ಹೇಳಿದ್ದು.
’ಮಣ್ಣಂಗಟ್ಟಿ’ ಇಂತ ಪದಗಳು ..
.. ಬರೀ ’ಚುರುಕು ಮುಟ್ಟಿಸುವ’ ತರಲೆ, ಹಗೂರ ಮಾತು ಅಸ್ಟೇ.. ವಿಸಯ ಬಿಡಿಸುವಲ್ಲಿ ಯಾವ ಬಾಳಿಕೆ ಅಲ್ಲ.!!( ಬೇಜಾರು ಬೇಡ, ಇದು ನನ್ನನಿಸಿಕೆ )
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಈ ರಾಮಾಯಣದಲ್ಲಿ ತೆಂಕಣದವರನ್ನು ಕೀಳಾಗಿ ತೋರಿಸಿದ್ದಾರೆ ಎಂದು ಅನಿಸುತ್ತದೆ.
ನೋಡಿ ಬಡಗಣದಲ್ಲಿರುವವರೆಲ್ಲರೂ ಮನುಸ್ಯರೆ(ರಾಮ)... ತೆಂಕಣಕ್ಕೆ ಬಂದರೆ(ಕಿಶ್ಕಿಂದೆ..ಈಗಿನ ಕರುನಾಡು) ಪಾತ್ರಗಳೆಲ್ಲ ಕಪಿಗಳು( ಹನುಮ,ಸುಗ್ರೀವ) ಇನ್ನು ತೆಂಕಣಕ್ಕೆ(ಸಿರಿಲಂಕೆ) ಬಂದರೆ ಮಂದಿ ಎಲ್ಲ ರಕ್ಕಸರು.(ರಾವಣ)
ಬಹುಶಹ ನಮ್ಮ ಕರುನಾಡಿನಲ್ಲಿ ರಾಮನ ಗುಡಿಗಳಿಗಿಂತ ಹನುಮನ ಗುಡಿಗಳೇ ಹೆಚ್ಚು ಇರುವುದು.
ತೆಂಕಣದವರೆಲ್ಲ ಕಪಿಗಳು ಇಲ್ಲವೆ ರಕ್ಕಸರು ಎಂಬ ಅನಿಸು ರಾಮಾಯಣದಲ್ಲಿ ಇದೆ ಅನಿಸಿತ್ತು. ಬಹುಶಹ ಇದರಿಂದಲೇ ತಮಿಳರು ತಿರುಗಿ ಬಿದ್ದಿರಬಹುದು.
ನಾವು(ಕನ್ನಡಿಗರು) ಕಪಿಗಳು, ತಮಿಳರು ರಕ್ಕಸರು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ರಾಮಾಯಣದಲ್ಲಿ ತೆಂಕಣದವರನ್ನು ಕೀಳಾಗಿ ತೋರಿಸಿದ್ದಾರೆ
>> ಅಲ್ಲಾ ರಾಮಾಯಣದಲ್ಲಿ ಪಕ್ಷಿಗಳು ಇವೇ ! ಅವೆಲ್ಲಾ ಕನ್ನಡ ಪಕ್ಷಿಗಳು ಅನ್ನೋಕಾಗುತ್ತೇನು ?
ಜಟಾಯು ಕನ್ನಡದ ಪಕ್ಷಿ ಅ೦ದರೆ ಹೆಮ್ಮೆಯ ವಿಷಯವೇ ..ಆದರೆ ನಾವು ಆ ರೀತಿ ಯಾವತ್ತು ಯೋಚನೆ ಮಾಡಿಲ್ಲಾ !
ಈ ಭಾವನೇ ಕಾವ್ಯವನ್ನು ಓದದೇ , ಅದರ ಭಾವ ತಿಳಿಯದೇ ಆಡುವ ಮಾತುಗಳು.
ಪಾಪ ವಾಲ್ಮೀಕಿಗೆ ಈ ಆರ್ಯ-ದ್ರಾವಿಡ ನಿಲುವು ಗೊತ್ತಿರಲಿಲ್ಲಾ ಅನ್ಸತ್ತೆ.
ಹಾಗೇ ನೋಡಿದರೂ ವಿಭೀಷಣನಿಗೆ ಪಟ್ಟ ಕಟ್ಟಿದ ಮೇಲೆ ವೈರ ಎಲ್ಲಿ ಉಳಿಯಿತು.
ರಾಮ ಅಧರ್ಮ ಇದ್ದ ಕಡೆ ಎಲ್ಲಾ ಧರ್ಮ ಸ್ಥಾಪನೆ ಮಾಡಿ ಹೋಗಿಬಿಟ್ಟಾ ಅನ್ನುವುದು ಕಥೆಯ ಒ೦ದು ಭಾಗ.
ರಾಮನ ಶಕ್ತಿ ಅಪರಿಫುರ್ಣವಾದದ್ದು, ಅದಕ್ಕೆ ಕೃಷ್ಣನ ಅವತಾರ ದಲ್ಲಿ ಪೂರ್ಣತೆ ಕ೦ಡು ಬರುತ್ತೆ.
>> ತೆಂಕಣದವರೆಲ್ಲ ಕಪಿಗಳು ಇಲ್ಲವೆ ರಕ್ಕಸರು ಎಂಬ ಅನಿಸು ರಾಮಾಯಣದಲ್ಲಿ ಇದೆ ಅನಿಸಿತ್ತು. ಬಹುಶಹ ಇದರಿಂದಲೇ ತಮಿಳರು ತಿರುಗಿ ಬಿದ್ದಿರಬಹುದು.
?? ಈ ಭಾವನೆ ಪೆರಿಯಾರ್ ಮಹಾಶಯ ಬಿತ್ತಿದ್ದು, ಅಲ್ಲಿಯವರೆಗೆ ರಾಮನ ಭಕ್ತಿ ಗೀತೆಗಳು ಎಷ್ಟು ಬ೦ದಿವೆ ತಮಿಳು ಸಾಹಿತ್ಯದಲ್ಲಿ,
ತ್ಯಾಗರಾಜರು ತಮಿಳ್ ನಾಡಿನಲ್ಲಿಯೇ ತಮ್ಮ ಸಾಧನೆ ಮಾಡಿದ್ದು, ಸುಬ್ರಮನಿಯ ಭಾರತೀಯರ್ ಕೂಡ ತಮಿಳು ಕವಿಗಳೇ ,
ಅವರ ಕಾವ್ಯದಲ್ಲಿ ಕೃಷ್ನಾ, ದುರ್ಗ, ಇವರೆಲ್ಲಾ ಇದ್ದಾರಲ್ಲಾ. ಅವರೂ ಕೂಡ ದೇವಿಯುಪಾಸಕರು.
ಅವರ ಸಾಹಿತ್ಯದ ಸೊಗಸು ಆ ಕಾಲದ ಮಿಕ್ಕ ಸಾಹಿತ್ಯದಲ್ಲಿ ಕಾಣೋದಿಲ್ಲಾ.
ಗಾಯತ್ರಿ North Indian , ನಾನ್ಯಾಕ್ಕೆ ಪೂಜೆ ಮಾಡಲಿ ಅ೦ದರೆ ?
ಅವರ ಕಾವ್ಯಕ್ಕೆ ಸ೦ಗೀತ ಸ೦ಯೋಜನೆ ಮಾಡುತ್ತಿರುವ ರಾಜ್ ಕುಮಾರ್ ಭಾರತಿಯವರನ್ನು ಮಾತಾಡಿಸಿದ್ದೇನೆ.
http://www.musicalnirvana.com/carnatic/rajkumar_bharathi.html
ಅವೆಲ್ಲಾ ಬಿಡಿ "ರಮಣ ಮಹರ್ಷಿ" ಗಳು ತಮಿಳುನಾಡಿರಲಿ ವಿಶ್ವದ ಮಹಾ ಋಶಿಗಳಲ್ಲಿ ಒಬ್ಬರು,
ತಮಿಳು ಅವರ ತ೦ದೆ ಭಾಷೆ, (ಆವರ್ ತಾಯಿ ಭಾಷೆ - ಮೌನ) ಅವರೂ ಸ್ಪಷ್ಟ ಪಡಿಸ್ತಿದ್ದರು ರಾಮಯಣದಲ್ಲಿ
ಈ ರೀತಿ ದೋಷವಿದೆ ಅ೦ತಾ. ಆದರೆ ಅವರು ನಿತ್ಯ ಆಧ್ಯಾತ್ಮ ರಾಮಾಯಣ ವೆ೦ಬುವ ಮಳಯಾಳ೦ ಗ್ರ೦ಥವನ್ನು ಓದಿ ಹೇಳ್ತಿದ್ದರು.
ಪ್ರಜಾಪ್ರಭುತ್ತ್ವದಲ್ಲಿ ಮಾತಿನ ಉಪಟಳ ಜಾಸ್ತಿ ಯಾಗಿ ಈ ರೀತಿ ಮತಿ ಭ್ರಮೆಯಾಗುವ೦ತಾ ಯೋಚನೆಗಳು ಬರ್ತವೇ..ಅಷ್ಟೇ.
ರಾಮಾಯಣದಲ್ಲಿ ಕನ್ನಡಿಗರೆಲ್ಲಾ ಕಪಿಗಳು ಅನ್ನುವ ಭಾವ ಕುವೆ೦ಪುಗೆ ಬ೦ದಿದ್ದರೆ ರಾಮಾಯಣ ದರ್ಶನ೦ ಬರೀತ್ತಿದ್ದರೆ. ?
ಪುಣ್ಯಕ್ಕೆ ಕುವೆ೦ಪು ಅ೦ತಾ ಕವಿಗಳು ಇದ್ದು ನಮ್ಮ ನಾಡನ್ನು ಕಾಪಾಡಿದರು, ಇಲ್ಲಾ ಅ೦ದರೆ DMK ಅ೦ತಾ ಪಕ್ಷಗಳು ನಮ್ಮ ಚಿತ್ತವನ್ನು ಛಿದ್ರ
ಛಿದ್ರ ಮಾಡಿಬಿಡಿದ್ದವು.
ಇಲ್ಲಿ ಭಾರತೀಯರ್ ತಮಿಳ್ ಸ೦ಗೀತವನ್ನು ಕೇಳಿ !
http://www.musicindiaonline.com/music/carnatic_vocal/s/composer.10/
Chinnanchiru Kiliye ತು೦ಬಾ ಚೆನ್ನಾಗಿದೆ ! ಅದು ಯಶೋದೆ ಕೃಷ್ಣನಿಗೆ ಹಾಡಿರುವುದು.
ಭಾರತೀಯರ್ ಮತ್ತು ರಮಣರನ್ನು ಮರೆತು ಇ೦ದು ತಮಿಳು ನಾಡಿಗೆ ಕರುಣಾನಿಧಿ ಸಾಹಿತಿ ಮತ್ತು ಮಾರ್ಗದರ್ಶಕನಾಗಿರುವುದು ತಮಿಳುನಾಡಿನ ದುರ೦ತ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮುರಳಿ, ನನಗೆ ನಿನ್ನ ಮಾತು ತುಂಬಾ ಇಷ್ಟವಾಯಿತು.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಅಪ್ಪ ಮುರುಳಿ ಮಾರಾಯ್ರೆ...
ಏನ್ರೀ ನೀವು .. ಹಿಂಗಾ?
"ತೆಂಕಣದವರೆಲ್ಲ ಕಪಿಗಳು ಇಲ್ಲವೆ ರಕ್ಕಸರು ಎಂಬ ಅನಿಸು ರಾಮಾಯಣದಲ್ಲಿ ಇದೆ ಅನಿಸಿತ್ತು. ಬಹುಶಹ ಇದರಿಂದಲೇ ತಮಿಳರು ತಿರುಗಿ ಬಿದ್ದಿರಬಹುದು."
ಇದನ್ನು ಈ ತಮಿಳರು ೧೧-೧೨ ಶತಮಾನದಿಂದಳೂ ಮಾಡ್ತಾ ಇದ್ದಾರೆ. 'ಅರಿಯ/ಆರ್ಯ' ಎನ್ನೋ ಪದದ ಬಳಕೆ( ಬೇರೆ ಮಂದಿ, ಹಗೆಗಳು ಎಂಬ ತಿಳಿವಿನಲ್ಲಿ) ಅವರ ಹಳೆಯ ಕಾವ್ಯದಲ್ಲೂ ಆಗಿವೆ.
ಎಲ್ಲಿಂದ ಎಲ್ಲಿಗೂ ಕೊಕ್ಕೆ ಹಾಕಿ ಹಾಕಿ, ಪಜೀತಿ.!
ನೇರವಾಗಿ ತಿಳಿದುಕೊಂಡ್ರೆ.. ಇಸ್ಟೇ..
'ತಮಿಳರು ಬಲು ಹಿಂದಿನಿಂದಲೂ ಸಂಸ್ಕೃತವನ್ನು, ಆರ್ಯರನ್ನು(ಸಂಸ್ಕೃತದವರನ್ನು ಆರ್ಯರು ಎಂದು ಕರೆದಿದ್ದಾರಂತೆ) ಹಗೆ ಮಾಡ್ತಾ ಬಂದಿದ್ದಾರೆ. ಇದು ಅವರ ಕಾವ್ಯದಲ್ಲೂ ಇವೆಯಂತೆ. ಅವರ ಕಾವ್ಯದಲ್ಲಿ ಕನ್ನಡಿಗರು ಬಲು ಕ್ರೂರಿಗಳು ಎಂದು ಬರೆದುಕೊಂಡಿದ್ದಾರೆ.
ರಾಮನನ್ನು ಹಲವು ತಮಿಳರು ದೇವರೆಂದು ನಂಬಲ್ಲ. ಕಂಬ ರಾಮಾಯಣದಲ್ಲಿ ರಾಮಣನು ಬಲು ದೊಡ್ಡ ವೆಕ್ತಿ ಅಂತೆ"....
ಬೇಕಾದ್ರೆ ನೀವೇ ಹುಡುಕಿ ಓದಿ.. !!
ವಯ್ಬವ...
ಹಾಗೆ ತೆಂಕಣದವರು ರಾಕ್ಷಸರು, ಅನಾಗರಿಕರೂ ಅಂತ ಬರೀ ರಾಮಾಯಣ ಅಸ್ಟೇ ಅಲ್ಲ ಹೇಳೋದು, ಆರ್ಯಾವರ್ತದ ಹೆಚ್ಚು ಕಡಮೆ ಎಲ್ಲು ಕತೆಗಳೂ ಹಾಗೆಯೇ ಅಂತೆ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ತಮ್ಮಾ ಮಹೇಶಾ,
ನನ್ನ ಮೊಮ್ಮಕ್ಕಳಿಗೆ ನಾನೀಗಾಗಲೇ ಅಜ್ಜಿ."ಮುದ್ಕಿ ಬಂದಳಾ?" ಎಂದು ನನ್ನೆಜಮಾನರು ಮೊಮ್ಮಕ್ಕಳ ಹತ್ತಿರ ಪ್ರೀತಿಯಿಂದ ವಿಚಾರಿಸುವುದು.ಅದರಲ್ಲಿ ಅವಮಾನವೇನಿಲ್ಲ. ಆದರೆ ಆ ವಯಸ್ಸಿಗೆ ತಕ್ಕ ಮಾತುಗಳಿರಬೇಕು.ಇಲ್ಲದಿದ್ದರೆ ಅಹಂಕಾರಿ,ಅರಳುಮರಳು ಎನ್ನಬಹುದು.
ತಮಿಳರು ನಮ್ಮ ಹಾಗಲ್ಲ...ಚನ್ನೈನಲ್ಲಿ ಹೇಳಿ ನೋಡೋಣ...
ಅಂದರೆ ತಮಿಳರು ರೌಡಿಗಳಾ?ರಕ್ಕಸರಾ?
ಕಾಶ್ಮೀರದ ಬಲು ಹೆಚ್ಚು ಮಂದಿ ನಮ್ಮ ದೇಶದಿಂದ ಬೇರೆಯಾಗ್ತೀವಿ ಅಂದರೆ,ಡೆಮೊಕ್ರೆಜ಼ಿ ಅಂದ ಮೇಲೆ ಅದಕ್ಕೂ ಅನುವು ಇರಬೇಕು.
ಈ ತರಹ ಯೋಚನೆ ಮಾಡುವ ಪಕ್ಷ ಅಧಿಕಾರಕ್ಕೆ ಬಂದರೆ?
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
"ತಮಿಳರು ನಮ್ಮ ಹಾಗಲ್ಲ...ಚನ್ನೈನಲ್ಲಿ ಹೇಳಿ ನೋಡೋಣ...!ಅಂದರೆ ತಮಿಳರು ರೌಡಿಗಳಾ?ರಕ್ಕಸರಾ?"
.. ಆದ್ರೆ ನಿಮ್ಮ ಡೈಲಾಗನ್ನು ಅವರು ತಾಳಿಕೊಂಡಿ ಬಿಡುವರೋ ಎಂಬ ಗುಮಾನಿ ನನಗೆ! 
ಅಲ್ಲ.. !
"ಕಾಶ್ಮೀರದ ಬಲು ಹೆಚ್ಚು ಮಂದಿ ನಮ್ಮ ದೇಶದಿಂದ ಬೇರೆಯಾಗ್ತೀವಿ ಅಂದರೆ,ಡೆಮೊಕ್ರೆಜ಼ಿ ಅಂದ ಮೇಲೆ ಅದಕ್ಕೂ ಅನುವು ಇರಬೇಕು.
ಈ ತರಹ ಯೋಚನೆ ಮಾಡುವ ಪಕ್ಷ ಅಧಿಕಾರಕ್ಕೆ ಬಂದರೆ?"
ಒಳ್ಳೆಯದು.. ಏಕೆಂದ್ರೆ ನಮ್ಮದು ಜನಾಡಳಿತ. ನಾವು ಹಾಗೆ ಇರಬೇಕು. ಇಲ್ಲ ಅಂದ್ರೆ ದಬ್ಬಾಳಿಕೆ, dictorship ಆಗ್ತದೆ. ಅದಕ್ಕೆ ದಂಗೆ ಏಳೋದು ಮಂದಿ!
ಆ ಜನಕ್ಕೆ ನಮ್ಮ ಜೊತೆಗಿರೋದಕ್ಕೆ ಒಲ್ಲೆ ಆದ ಮೇಲೂ ಅವರನ್ನು ಒತ್ತಾಯವಾಗಿ, ಅವರ ಮೇಲೆ ನಮ್ಮ ಪಡೆಯನ್ನು ಹಾಯಿಸಿ, ನಮ್ಮ ಹಿಡಿತದಲ್ಲಿ ಇಡೋದು "democracy" ಆಗಲ್ಲ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
"democracy" ಅ೦ದರೇನೂ ?
ಮಝಾರಿಟಿ ಮೈನಾರಿಟಿಯ ಮೇಲೆ ದಬ್ಬಾಳಿಕೆ ನಡೆಸೋದು ತಾನೇ ?
ಮಝಾರಿಟಿ ಯಾವಾಗಲೂ ಸರಿಯಾದ ದಾರಿಯಲ್ಲಿ ಹೋಗೋದಿಲ್ಲಾ. ಗು೦ಪಿನಲ್ಲಿ ಗೋವಿ೦ದಾ ಅನ್ನೋ ಮ೦ದಿ ಹೆಚ್ಚು !
ಆಗ ಯಾರಿಗೂ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇರುವುದಿಲ್ಲಾ.
ಈಗ ನಮ್ಮ ನಾಡಿನ ಕಾಡು- ಕೆರೆ -ನದಿ ಎಲ್ಲಾ ನೆಲಸಮ ಆಗ್ತಾಯಿದೆ. ಇದಕ್ಕೆ ಯಾರು ಹೊಣೆ ತಗೊ೦ಡಿಲ್ಲಾ ..ಹ೦ಗೇ ರಕ್ಷೆಗು ನಿ೦ತಿಲ್ಲಾ..
ಮಝಾರಿಟಿಗೆ ಯಾವುದರಲ್ಲಿ ಆಸ್ಥೆ ಇಲ್ಲಾ.. ಅ೦ದ ಮೇಲೆ ಪ್ರಜಾ ಪ್ರಭುತ್ತ್ವ ಭ್ರಷ್ಟವಾಗುತ್ತದೆ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
"ಮಝಾರಿಟಿ ಮೈನಾರಿಟಿಯ ಮೇಲೆ ದಬ್ಬಾಳಿಕೆ ನಡೆಸೋದು ತಾನೇ ?"
ಇಲ್ಲಿ ದಿಟವಾಗ್ಲೂ ಮೆಜಾರಿಟಿ ಇರೋರು, ಬರಿ ಬಾಯ್ಮಾತಲ್ಲಿ ಮೆಜಾರಿಟಿ ಅನ್ನೋರಿಗೆ ಯತ್ವಾಸ ಐತಲ್ಲ.!
"Indian democracy for the majority, by the majority and from the majority"
.
ನಾಳೆ ಈ ಮೆಜಾರಿಟಿಯೂ ಒಡೆದು ಪಾಲು-ಪಾಲಾದಾಗ, ಮತ್ತೆ ಅಲ್ಲೂ ಸಣ್ಣ ಪಂಗಡವನ್ನು ಅಳಿಸೋದು. ಇದು ಎಲ್ಲಿ ತನಕ ಸಾಗಬೇಕು ಅಂದ್ರೆ ದೇಸದಲ್ಲಿ ಇರುವ ಒಬ್ಬೊಬ್ಬರು ಒಂದೇ ತರ ನಡೆಯಬೇಕು, ನುಡಿಯಬೇಕು...... .
ಹೀಗೆ ಹೋದ್ರೆ ಕೊನೆಗೆ ಉಳಿಯೋದು ಒಬ್ನೇ ಒಬ್ಬ. ಏಕೆಂದ್ರೆ ಯಾವಾಗ್ಲೂ ಇಬ್ರೂ ಒಂದೇ ತರ ಇರಲ್ಲ!
ಮುರುಳಿ ದ್ವಾವರು ಸೂಪರ್ ನೀವು!
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಒಳ್ಳೆ "ಡೆಮೊಕ್ರಸಿ ' ಅ೦ದು ಎಲ್ಲ ಬ್ರೈನ್ ವಾಸ್ ಮಾಡ್ತಾ ಅವರೇ ಗುರು !
ಯಾವುದೇ ವ್ಯವಸ್ಥೆ ಯಲ್ಲಿರುವುದು "ಪ್ರಭುಗಳ ಪ್ರಭುತ್ತ್ವ" ... ಈಗ ಬೆ೦ಗಳೂರಿನಲ್ಲಿ ಮಝಾರಿಟಿ ಯಾರು ?
ಕನ್ನಡದವರು ..
ಮೈನಾರಿಟಿ ಯಾರು ?? ತು೦ಬಾ ಜನ ಇದ್ದಾರೆ. ತೆಲುಗು, ತಮಿಳು ...
"ಮೈನಾರಿಟೀಗಳೆಲ್ಲಾ" ಸೇರಿ ದರೆ ಒ೦ದು ಮಝಾರಿಟಿ ಆಗೋದಿಲ್ವೇ ?
ಈ ಮೈನಾರಿಟೀಗಳ್ ಮಝಾರಿಟಿ ತನ್ನ ಸ೦ಸ್ಖ್ರುತಿಯನ್ನು , ತನ್ನ ವಿಚಾರವನ್ನು , ತನ್ನ ಭಾಷೆಯನ್ನು ನಿಜವಾದ ಮಝಾರಿಟಿ ಮೇಲೆ ಹೇರಬಹುದಲ್ಲವೇ ?
ನಿಜವಾಗಲೂ ದುಡ್ಡು ಯಾರ ಹತ್ರಾ ಇದೆಯೋ ಅವರೇ ಮಝಾರಿಟಿ . ಬಡವರ್ಯಾರೋ ಅವರೇ ಮೈನಾರಿಟಿ.
ಇದು ವಾಸ್ತವ.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮಹೇಶ, ವೈಭವ ಮತ್ತು ವಿಜಯಮ್ಮ, ಇಲ್ಲಿ ವಿಷಯ ತುಂಬಾ ಕಡೆ ಚದುರಿಹೋಗಿದೆ.
ಡಿ.ಎಮ್.ಕೆ ಏಥಿಸ್ಟ್. ಆದರೆ ಇದೇ ಕಾರಣಕ್ಕೆ ನಾವೇನು ಹೆಚ್ಚು ಮಹತ್ವ ನೀಡಬೇಕಿಲ್ಲ. ಮಹೇಶ, ಒಂದು ಗಮನಿಸು, ಉತ್ತರ ಭಾರತದಲ್ಲಿಯೂ ನಾಸ್ತಿಕ ಜನಾಂಗಗಳು ಇವೆ. ಆದರೆ ವಿಜಯಮ್ಮನವರ ಈ ಥ್ರೆಡ್ಡಿನಲ್ಲಿ ದ್ರಾವಿಡ ಸಿದ್ದಾಂತದ ಬಗ್ಗೆ ಅಲ್ಲ ವಾದ ಇರೋದು. ಬಹುಶಃ ಅವರ ಪ್ರಶ್ನೆ, "ಒಬ್ಬ ನಿಜವಾದ ಮುತ್ಸದ್ದಿಗೆ ಬೇರೆ ಸಂಸ್ಕೃತಿಯನ್ನು ಗೌರವಿಸುವ ನೈತಿಕತೆಯಿರಬೇಡವೇ". ಬೇರೆಯವರಿಗೆ ಇದೆಯಾ ಅದು ಬೇಕಿಲ್ಲ (ಬಿ.ಜೆ.ಪಿಗೆ ಇತ್ತಾ, ಕಾಂಗ್ರೆಸಿಗಿತ್ತಾ ಅವೆಲ್ಲ ಪ್ರಶ್ನೆಯೇ ಅಪ್ರಸ್ತುತ). ೮೦ ವರ್ಷ ದಾಟಿದ, ಈ ಎಳೆಯ ಕೇಂದ್ರಬಿಂದು ಕರುಣಾನಿಧಿಯಲ್ಲಿ ಇದೆಯೇ.
ಗಮನಿಸು,
೧. ರಾಮನೊಬ್ಬ ಕುಡುಕ.
೨. ರಾಮ ಯಾವ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. - ಇವು ಎಷ್ಟು ಎಳಸಾಗಿದೆ ಅನ್ನಿಸುವುದಿಲ್ಲವೇ. ಜನರನ್ನು ಸೆಳೆಯುವ ತಂತ್ರ ಅಷ್ಟೇ. ದ್ರಾವಿಡರು ಆರ್ಯರು ಬೇರೆ ಎಂದು ಹೇಳುವ ನೆಪದಲ್ಲಿ ಜನರ ಭಾವನೆಗೆ ತುಪ್ಪವನ್ನೋ, ಉಪ್ಪನ್ನೋ ಸುರಿಯುವುದು.
೩. ಮತ್ತೊಂದು ಬಹಳ ಮುಖ್ಯವಾದದ್ದು. ತಮಿಳುನಾಡಿನಲ್ಲಿಯೇ, ಧಾರ್ಮಿಕ ನೆಲೆಯಲ್ಲದೆ ವೈಜ್ಞಾನಿಕ ನೆಲೆಯಲ್ಲಿಯೇ ಈ ಸೇತುಸಮುದ್ರಂ ಯೋಜನೆಗೆ ವಿರೋಧವಿದೆ. ಆದರೆ, ಎಂದೂ ಇವುಗಳಿಗೆ ಉತ್ತರಿಸುವ ಗೋಜಿಗೆ ಯಾವ ಪಕ್ಷ(ಮುಖ್ಯವಾಗಿ ಡಿ.ಎಮ್.ಕೆ) ಹೋಗಿಲ್ಲ. ಆದರೆ, ಧಾರ್ಮಿಕ ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಮಾತ್ರಕ್ಕೆ ಡಿ.ಎಮ್.ಕೆ ಸೆಟೆದುಕೊಂಡು, ರಾಮನೊಬ್ಬ ಕುಡುಕ ಅಂದರೆ ಆ ಪಕ್ಷದ ನಿಲುವನ್ನು ಬೆಂಬಲಿಸುವ ಯಾವ ಅಗತ್ಯವೂ ನನಗೆ ಕಾಣುವುದಿಲ್ಲ.
೪. ರಾಮ ಅವತಾರ ಅಲ್ಲ ಎಂದು ಹೇಳುವ ಕರುಣಾನಿಧಿಗೆ, ಕನ್ನಗಿಯೂ ಅವತಾರ ಅಲ್ಲ ಎಂಬುದರ ನೈತಿಕ ಪ್ರಜ್ಞೆ ಇರಬೇಡವೇ ? ಡಿ.ಎಮ್.ಕೆ ನೇತೃತ್ವದಲ್ಲಿಯೇ ಕನ್ನಗಿಯ ಸುತ್ತಾ ಹಲವಾರು ರಾಜಕೀಯ ನಡೆದಿದೆ. ನೀನು ಇವುಗಳ ಬಗ್ಗೆ ಓದಿಯೇ ಇರುತ್ತೀಯಾ. ಇಲ್ಲವಾದರೆ, ಇದರ ಬಗ್ಗೆಯೂ ಅಲ್ಲಲ್ಲಿ ಓದಿನೋಡು.
೫. ಒಂದು ಕಡೆ, ರಾಮನಿಲ್ಲ, ದೇವರನ್ನು ನಂಬಬೇಡಿ ಎಂದು ಹೇಳುವ ಏಥಿಸ್ಟ್ ಡಿ.ಎಮ್.ಕೆಯೇ ಮತ್ತೊಂದು ಕಡೆ ಕರುಮಾರಿಯಮ್ಮನ್, ಮುರುಗನ್ ದೇವಸ್ಥಾನಗಳನ್ನು ಕಟ್ಟಿಸುತ್ತದೆ, ಮತ್ತು ಅವುಗಳ ಹೆಸರಿನ ಸಂಘಟನೆಗಳನ್ನು ಬೆಂಬಲಿಸುತ್ತದೆ. ಇಲ್ಲಿ ಯಾವ ಸಿದ್ದಾಂತದಲ್ಲಿಯೂ ಯಾವ ನೈತಿಕ ಹಿಡಿತವೂ ನನಗೆ ಕಾಣಿಸುವುದಿಲ್ಲ.
ತುಂಬಾ ತುಂಬಾ ಮುಖ್ಯವಾಗಿ :
೧. ಭಾಷಿಕವಾಗಿ ಕನ್ನಡ-ತಮಿಳು ನುಡಿಗಳು ಸಂಸ್ಕೃತಕ್ಕಿಂತ ಬೇರೆ ಎಂಬುದನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಡಿ.ಎಮ್.ಕೆ ಅವರನ್ನು ಬೆನ್ನಿಗೇರಿಸಿಕೊಂಡರೆ ನಮ್ಮಷ್ಟು ಎಚ್ಚರ ತಪ್ಪಿದವರು ಸಿಗುವುದಿಲ್ಲ. ಡಿ.ಎಮ್.ಕೆ ಒಂದೇ ದ್ರಾವಿಡ ಭಾಷಾ ಕುಲವನ್ನು ಎರವಲು ಪಡೆದುಕೊಂಡಿಲ್ಲ. ೨. ದ್ರಾವಿಡರನ್ನು ರಾಕ್ಷಸರು ಎಂದು ಕರೆದಿದ್ದಾರೆ ಎನ್ನುತ್ತಾ, ಹಿಂದಿ-ಹೇರಿಕೆ, ಸಂಸ್ಕೃತ-ದಬ್ಬಾಳಿಕೆ ಇವುಗಳನ್ನು ಮುಂದಿಟ್ಟುಕೊಂಡು, ಇವುಗಳ ಹೆಸರಿನಲ್ಲಿ, ೮೦ ವರ್ಷ ದಾಟಿದ ಒಬ್ಬ ಮುತ್ಸದ್ದಿ, ನಿಮ್ಮ ಸಂಸ್ಕೃತಿಯ ದೇವರು ಕುಡುಕ ಎನ್ನುವ ಮಟ್ಟಿಗೆ ಇಳಿದುಹೋದರೆ, ಆ ಪಕ್ಷದ ರಾಜಕೀಯ ಪ್ರಬುದ್ಧತೆ ಎಷ್ಟರಲ್ಲಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡು ನಮ್ಮ ಹತೋಟಿಯಲ್ಲಿ ನಾವಿರಬೇಕು.
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮಾರಾಯ ಮತ್ತೆ 'ಚುರುಕು ಮುಟ್ಟಿಸುವ' ಆಟವೇ?
ನೀನು ಸರಿಯಾಗಿ ನಾನು ಹೇಳಿದನ್ನು ತಿಳಿದುಕೊಂಡಿಲ್ಲ. ನಾನು ಈವಯ್ಯ ಹಿಂದಿನಿಂದಲೂ ಹೀಗೆ, ಏನು ಹೊಸತಿಲ್ಲ ಅಂದಿರೋದು.
ನೀನು ಸುಮ್ನೆ ಇಲ್ಲದನ್ನೆಲ್ಲ ಸೇರಿಸಿದ್ದೀಯ..
ನೀನು ಸರಿಯಾಗಿ ಇಡೀ ಎಳೆಯನ್ನು ಓದು.. ಮತ್ತೆ ಮತ್ತೆ ಹೇಳೋದು ಬೇಡ..
'೧. ರಾಮನೊಬ್ಬ ಕುಡುಕ.'
ಅವರು ಹೇಳಿದ್ದು, ವಾಲಮೀಕಿ ರಾಮಾಯಣದಲ್ಲಿ 'ರಾಮನು ಕುಡಿತಿದ್ದ' ಎಂದಿದೆ ಎಂದು. ನೀನು ಪೂರ ವಾಲಮೀಕಿ ರಾಮಾಯಣ ಓದಿದ್ದೀಯಾ? ಹಿಂದೆ ರಾಮ ಮಾಂಸ ತಿನ್ನುತ್ತಿದ್ದ ಎಂದು ಗದ್ದಲದಲ್ಲೂ ವಾಲಮೀಕಿ ರಾಮಯಣದಿಂದೇ ಎತ್ತಿ ಹೇಳಿದ್ರು. ಇಲ್ಲಿ ವಾಲಮೀಕಿ ರಾಮಾಯಣದಲ್ಲಿ ಹಾಗೆ ಇಲ್ಲವೇ ಇಲ್ಲ ಎಂದು ಯಾರಾದ್ರು ಅದನ್ನು ಪೂರ ಓದಿದೋರು ಹೇಳಬೇಕು, ನೀನು ಓದಿ ಹೇಳು.
"೨. ರಾಮ ಯಾವ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. - ಇವು ಎಷ್ಟು ಎಳಸಾಗಿದೆ ಅನ್ನಿಸುವುದಿಲ್ಲವೇ. ಜನರನ್ನು ಸೆಳೆಯುವ ತಂತ್ರ ಅಷ್ಟೇ. ದ್ರಾವಿಡರು ಆರ್ಯರು ಬೇರೆ ಎಂದು ಹೇಳುವ ನೆಪದಲ್ಲಿ ಜನರ ಭಾವನೆಗೆ ತುಪ್ಪವನ್ನೋ, ಉಪ್ಪನ್ನೋ ಸುರಿಯುವುದು."
ಮತ್ತೆ ತಿರುಚಿದ ಮಾತು.. ಸರಿಯಾಗಿ ನೋಡು.. ಇದರ ಹಿನ್ನಲೆ ನೋಡು...
ಬೀಜೇಪಿ - ಅದು ರಾಮ ಕಟ್ಟಿದ ಸೇತುವೆ. ಅದಕ್ಕೆ ಒಡೆಯಬಾರದು/
ಕರಣಾ( ತನ್ನ ಮಾಮೂಲಿ ನಾಸತಿಕ ಮೂಡಲ್ಲಿ ) = ರಾಮ ಒಂದು epic hero. ಅವನು ಯಾವ ಇಂಜಿನಿಯರ್? .... ಇಸ್ಟೇ.. ಇಲ್ಲಿ ಆರ್ಯ-ದ್ರಾವಿಡ ಏನು ಅವರು ಹೇಳೇ ಇಲ್ಲಲ್ಲ.
ಇನ್ನು 'ಜನರ ಬಾವನೆ'
. ನಮ್ಮ ದೇಸದ ಜನರಿಗೆ ಎಲ್ಲ ವಿಸಯಕ್ಕೂ ಬಾವನೆ ಕೆಡು ಅಂಜಿಕೆ ಇದ್ದೇ ಇದೆ.
೩. ಮತ್ತೊಂದು ಬಹಳ ಮುಖ್ಯವಾದದ್ದು. ತಮಿಳುನಾಡಿನಲ್ಲಿಯೇ, ಧಾರ್ಮಿಕ ನೆಲೆಯಲ್ಲದೆ ವೈಜ್ಞಾನಿಕ ನೆಲೆಯಲ್ಲಿಯೇ ಈ ಸೇತುಸಮುದ್ರಂ ಯೋಜನೆಗೆ ವಿರೋಧವಿದೆ. ಆದರೆ, ಎಂದೂ ಇವುಗಳಿಗೆ ಉತ್ತರಿಸುವ ಗೋಜಿಗೆ ಯಾವ ಪಕ್ಷ(ಮುಖ್ಯವಾಗಿ ಡಿ.ಎಮ್.ಕೆ) ಹೋಗಿಲ್ಲ. ಆದರೆ, ಧಾರ್ಮಿಕ ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಮಾತ್ರಕ್ಕೆ ಡಿ.ಎಮ್.ಕೆ ಸೆಟೆದುಕೊಂಡು, ರಾಮನೊಬ್ಬ ಕುಡುಕ ಅಂದರೆ ಆ ಪಕ್ಷದ ನಿಲುವನ್ನು ಬೆಂಬಲಿಸುವ ಯಾವ ಅಗತ್ಯವೂ ನನಗೆ ಕಾಣುವುದಿಲ್ಲ.
"೪. ರಾಮ ಅವತಾರ ಅಲ್ಲ ಎಂದು ಹೇಳುವ ಕರುಣಾನಿಧಿಗೆ, ಕನ್ನಗಿಯೂ ಅವತಾರ ಅಲ್ಲ ಎಂಬುದರ ನೈತಿಕ ಪ್ರಜ್ಞೆ ಇರಬೇಡವೇ ? ಡಿ.ಎಮ್.ಕೆ ನೇತೃತ್ವದಲ್ಲಿಯೇ ಕನ್ನಗಿಯ ಸುತ್ತಾ ಹಲವಾರು ರಾಜಕೀಯ ನಡೆದಿದೆ. ನೀನು ಇವುಗಳ ಬಗ್ಗೆ ಓದಿಯೇ ಇರುತ್ತೀಯಾ. ಇಲ್ಲವಾದರೆ, ಇದರ ಬಗ್ಗೆಯೂ ಅಲ್ಲಲ್ಲಿ ಓದಿನೋಡು."
ನನಗೆ DMK ಕನ್ನಗಿ ಬಗ್ಗೆ ನೀಡಿದ comment ತೋರಿಸಿ. ಅವರು ಕನ್ನಗಿಯನ್ನು ರಾಮನಂತೆ ಒಂದು epic heroine ಅಂತೆ ನೋಡಿದ್ರೆ ತಪ್ಪಾ?
"೫. ಒಂದು ಕಡೆ, ರಾಮನಿಲ್ಲ, ದೇವರನ್ನು ನಂಬಬೇಡಿ ಎಂದು ಹೇಳುವ ಏಥಿಸ್ಟ್ ಡಿ.ಎಮ್.ಕೆಯೇ ಮತ್ತೊಂದು ಕಡೆ ಕರುಮಾರಿಯಮ್ಮನ್, ಮುರುಗನ್ ದೇವಸ್ಥಾನಗಳನ್ನು ಕಟ್ಟಿಸುತ್ತದೆ, ಮತ್ತು ಅವುಗಳ ಹೆಸರಿನ ಸಂಘಟನೆಗಳನ್ನು ಬೆಂಬಲಿಸುತ್ತದೆ. ಇಲ್ಲಿ ಯಾವ ಸಿದ್ದಾಂತದಲ್ಲಿಯೂ ಯಾವ ನೈತಿಕ ಹಿಡಿತವೂ ನನಗೆ ಕಾಣಿಸುವುದಿಲ್ಲ."
ಮತ್ತೆ DMK ಕರುಮಾರಿಯಮ್ಮಳ್, ಮುರುಗನ್ ಗುಡಿ ಎಲ್ಲಿ ಕಟ್ಟಿಸಿದ್ದಾರೆ? ತಮಿಳರೆಲ್ಲ DMK ಮಂದಿಯೇ?
ತುಂಬಾ ತುಂಬಾ ಮುಖ್ಯವಾಗಿ :
"೧. ಭಾಷಿಕವಾಗಿ ಕನ್ನಡ-ತಮಿಳು ನುಡಿಗಳು ಸಂಸ್ಕೃತಕ್ಕಿಂತ ಬೇರೆ ಎಂಬುದನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಡಿ.ಎಮ್.ಕೆ ಅವರನ್ನು ಬೆನ್ನಿಗೇರಿಸಿಕೊಂಡರೆ ನಮ್ಮಷ್ಟು ಎಚ್ಚರ ತಪ್ಪಿದವರು ಸಿಗುವುದಿಲ್ಲ. ಡಿ.ಎಮ್.ಕೆ ಒಂದೇ ದ್ರಾವಿಡ ಭಾಷಾ ಕುಲವನ್ನು ಎರವಲು ಪಡೆದುಕೊಂಡಿಲ್ಲ. "
ಇದೊಂದು ಬ್ರಾಂತಿ. DMKಗೆ ಕನ್ನಡ ನಾಡಲ್ಲಿ ಯಾವ ಬೆಂಬಲವೂ ಇಲ್ಲ. ನಾನು ಅದನ್ನು ಬೆಂಬಲ ಮಾಡ್ತಿಲ್ಲ. ಸುಮ್ನೆ ಎಳೀಬೇಡ.
"೨. ದ್ರಾವಿಡರನ್ನು ರಾಕ್ಷಸರು ಎಂದು ಕರೆದಿದ್ದಾರೆ ಎನ್ನುತ್ತಾ, ಹಿಂದಿ-ಹೇರಿಕೆ, ಸಂಸ್ಕೃತ-ದಬ್ಬಾಳಿಕೆ ಇವುಗಳನ್ನು ಮುಂದಿಟ್ಟುಕೊಂಡು, ಇವುಗಳ ಹೆಸರಿನಲ್ಲಿ, ೮೦ ವರ್ಷ ದಾಟಿದ ಒಬ್ಬ ಮುತ್ಸದ್ದಿ, ನಿಮ್ಮ ಸಂಸ್ಕೃತಿಯ ದೇವರು ಕುಡುಕ ಎನ್ನುವ ಮಟ್ಟಿಗೆ ಇಳಿದುಹೋದರೆ, ಆ ಪಕ್ಷದ ರಾಜಕೀಯ ಪ್ರಬುದ್ಧತೆ ಎಷ್ಟರಲ್ಲಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡು ನಮ್ಮ ಹತೋಟಿಯಲ್ಲಿ ನಾವಿರಬೇಕು."
ನೀನು ಇಲ್ಲಿ ಹತೋಟಿಯಲ್ಲಿ ಇಲ್ಲ ಅಂತೀನಿ ನಾನು. ಏನೇನೋ ಸೇರಿಸಿದ್ದಿಯ್. ಸುಮ್ನೆ 'ಕುಡುಕ' ಅನ್ನೋದನ್ನೆ ನಲವತ್ತು ಸಲ ಹೇಳೀಯಿ... ಇದೇಕೆ, ನೀನು 'ಚುರುಕು ಮುಟ್ಟಿಸುವ' ಗುಂಪಿನವಂ ಎಂದು ನನ್ನ ಅನ್ನಿಸ ಹತ್ತಿದೆ.
ಇಲ್ಲಿ "ತುಪ್ಪ ಸುರಿಯೋ, ಸುರಿಸೋ" ಕೆಲಸವರು ತಮ್ಮ ಪದಪುಂಜೋನ್ಮಾದೋದ್ರಿಕ್ತತೆಯಲ್ಲಿ ಮರೆದಿದ್ದಾರೆ.!!!