ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vijayamma ರವರ ಬ್ಲಾಗ್

ನಿರ್ಜೀವ ದೇವರು ..!?ರಾಮ,ರಾಮಾ...

June 27, 2007 - 12:26am — vijayamma

ಮಗು ಕಾಣಲಿಲ್ಲ ಎಂದರೆ ಮೊದಲು ಮನೆಯಲ್ಲಿ ಹುಡುಕಿ, ಬೀದಿಯಲ್ಲಿ ಹುಡುಕಿ,ನಂತರ ಪೋಲೀಸ್/ಪೇಪರ್/ಟಿ.ವಿ.ಗೆ ಕಳೆದು ಹೋದ ಬಗ್ಗೆ ದೂರು/ವರದಿ ಕೊಡುವರು. ಅದೇ ತರಹ ದೇವರಿಲ್ಲ ಎನ್ನುವ ಮೊದಲು ದೇವರನ್ನು ಹುಡುಕುವ ಪ್ರಯತ್ನ ಮಾಡಿರಬೇಕು.
ಈ ದಿನ ಹುಲಿಕಲ್ ನಟರಾಜು ಎಂಬವರು “ನಿರ್ಜೀವ ದೇವರು ಮನುಷ್ಯನ ಸಾಮರ್ಥ್ಯಕ್ಕೆ ಸಾಟಿಯೇ”ಎಂದು “ವಿಜಯಕರ್ನಾಟಕ”ಪತ್ರಿಕೆಯಲ್ಲಿ ದೇವರಿಗೇ ಸವಾಲು ಹಾಕಿ ಲೇಖನ ಬರೆದಿದ್ದಾರೆ.
ದೇವರನ್ನು ಕಲ್ಲು,ವಿಗ್ರಹ ಎಂದು ಬರೆಯುತ್ತಾ, -“..ಆದರೆ ಅಗೋಚರ ಶಕ್ತಿಯ ಮೂರ್ತಿ ಮಾನವ ನಿರ್ಮಿತ ಎನ್ನುವುದನ್ನು ಮರೆಯುವಂತಿಲ್ಲ.ಮಾನವ ನಿರ್ಮಿತ ಮೂರ್ತಿಗೆ ಮಾನವನಿಗಿಂತಲೂ ಅಪರೂಪದ ಶಕ್ತಿ ಬರುವುದಾದರೂ ಹೇಗೆ?” ಎಂದು ಒಂದು ಕಡೆ ಬರೆದು,ಇನ್ನೊಂದು ಕಡೆ-“ಮಾನವ ನಿರ್ಮಿತ ಬಾಂಬ್ ಹಿರೋಷಿಮಾದ ಲಕ್ಷಾಂತರ ಜನರನ್ನು ಧ್ವಂಸಗೊಳಿಸಿದಾಗ,..”ಎಂದಿದ್ದಾರೆ.
ತಮಾಷೆಯೆಂದರೆ -ದೇವರು, ಅಮೆರಿಕಾದವರು ಹಿರೋಷಿಮಾದ ಮೇಲೆ ಬಾಂಬು ಎಸೆದಾಗ,ಅಮೆರಿಕಾದ ಮೇಲೆಭಯೋತ್ಪಾದಕ ದಾಳಿ ನಡೆದಾಗ ಯಾವ ನೆರವನ್ನೂ ನೀಡಲಿಲ್ಲ ಎಂದು ದೂರಿದ್ದಾರೆ.ದೇವರು ಜೇಮ್ಸ್ ಬಾಂಡ್ ತರಹ ಅಡ್ಡ ಬಂದು ತಡೆಯಬೇಕಿತ್ತು ಕಾಣುತ್ತದೆ.
ದೇವರನ್ನು ನಮ್ಮ ಮಟ್ಟಕ್ಕೆ ಇಳಿಸಬಾರದು. ಅವರ ನ್ಯಾಯ ತೀರ್ಮಾನದ ರೀತಿಯೇ ಬೇರೆ ಇರಬಹುದು.
ಹೌದು.ಕೆಲ ಮಂದಿ ಪವಾಡಪುರುಷರು ,ಸ್ವಾಮಿಗಳು ದೇವರ ಹೆಸರಲ್ಲಿಮೋಸ ಮಾಡುತ್ತಿರಬಹುದು. ಅವರ ಢೋಂಗಿತನವನ್ನು,ಜನರ ಮೂಢನಂಬಿಕೆಯನ್ನು ತಿದ್ದಲು ಪ್ರಯತ್ನಿಸಬೇಕು.
ಗಾಂಧೀಜಿ,ಅಂಬೇಡ್ಕರ್,ಶಿವಾಜಿ ಮುಂತಾದವರನ್ನು ನಾನು ನೋಡಿಲ್ಲ,ಹುಲಿಕಲ್ ನಟರಾಜು ರವರೂ ನೋಡಿರಲಿಕ್ಕಿಲ್ಲ. ಗಾಂಧೀಜಿ…ಬಗ್ಗೆ ಓದಿದ್ದೇವಲ್ಲ. ಬೀದಿ ಬೀದಿಯಲ್ಲಿರುವ ಅವರ ಪ್ರತಿಮೆಗಳನ್ನು ಗೌರವದಿಂದ ಕಾಣುವೆವು.ಹಾಗೆ ದೇವರನ್ನುನಾನೂ ನೋಡಿಲ್ಲ,ಹುಲಿಕಲ್ ನಟರಾಜು ರವರೂ ನೋಡಿಲ್ಲ.ವಾಲ್ಮೀಕಿ,ತುಳಸೀದಾಸ್,ವಿವೇಕಾನಂದ…ರ ಪುಸ್ತಕಗಳನ್ನು ಓದಿದ್ದೇವಲ್ಲ.ಬೀದಿ ಬೀದಿಯಲ್ಲಿರುವ ದೇವರ ಮೂರ್ತಿಗಳನ್ನೂ ಗೌರವದಿಂದ ಕಾಣಲಿಕ್ಕೇನು ಕಷ್ಟ?

~.~
  • vijayamma ರವರ ಬ್ಲಾಗ್
  • Login or register to post comments
  • 783 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2007 - 11:47am — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ವಿಜಯಮ್ಮ...

ನೀವು 'Be gone the god men' ಓದಿ. ಹಾಗೆ http://ugkrishnamurti.com/ ನೋಡಿರಿ.

'ದೇವರು' ಅನ್ನೋದು ಒಂದು ಕಾರಣವಿಲ್ಲದ ನಂಬಿಕೆ, ಅಷ್ಟೇ! ಮುಗಿಯಿತು...

ಹೇಗೆ ನಿಮಗೆ ದೇವರಲ್ಲಿ ನಂಬಿಕೆ ಇಟ್ಟುಕೊಂಡು, ಅದಕ್ಕೆ ನಲವತ್ತೆಂಟು ಹೆಸರಿಟ್ಟುಕೊಂಡು, ಅದನ್ನೇ ಹೊಗಳಿಕೊಂಡು ಇರಲಿ ಅನುವಿದೆಯೋ, ಹಾಗೆ
ಅವರಿಗೆ ದೇವರಿಲ್ಲವೆಂದು( ಇಲ್ಲದುದರ ಮೇಲೆ ನಂಬಿಕೆ ಇರಲ್ಲ ), ಅದಕ್ಕೆ ಹೊಗಳುವುದು ಇವೆಲ್ಲ ತಪ್ಪೆಂದು, ಹೇಳಿಕೊಂಡು ಇರವು ಅನುವೂ ಇದೆ.

ಈ 'ದೇವರು' ಅನ್ನುವ ಸಂಗತಿಯ ಮೇಲೆ ಮಾತುಕತೆ ಬರೀ ಹೊತ್ತು-ಪೋಲು. ಅದರಿಂದ ಯಾರಿಗೂ ಏನೂ ಗಿಟ್ಟದು, ಎಲ್ಲರಿಗೂ ನುಕುಸಾನೇ!!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2007 - 2:17am — chitra

ಉ: ನಿರ್ಜೀವ ದೇವರು ..!?ರಾಮ,ರಾಮಾ...

chitra's picture

ಲೇಖನಕ್ಕೆ ಲಿಂಕ್ ಕೊಡಿ. ದಿನಾಂಕ, ಪುಟ ಸಂಖ್ಯೆ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 3:11pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

ನಮ್ಮಲಿ ಬಹಲಷ್ಟು ಜನ..

ದೇವರನ್ನ ನಮ್ಬುತಿವಿ.. ಅಂದ್ರೆ ಆ( ಯಾವ?!!) ದೇವರು ಇದಾನೆ ಅಂತ ನಮ್ಬುತಿವಿ..
ಅಥ್ವಾ
ದೇವರು ಇಲ್ಲಾ ಅಂತಾ ನಂಬುತಿವಿ!!

ಆದ್ರೆ ನಮ್ಮಲ್ಲಿ ಎಸ್ಟು ಜನ ದೇವರು ಅನ್ನೋ ಕಾನ್ಸೆಪ್ಟ್ ಅನ್ನೆ ಇಗ್ನೋರ್ ಮಾಡ್ತಿರಿ?!

ನಿಮ್ಮಿಂದ "ದೇವರು" ಅನ್ನೋ ಕಾನ್ಸೆಪ್ಟ್ ಅನ್ನ ಇಗ್ನೋರ್ ಮಾಡಕ್ಕೆ ಸಾದ್ಯವಾಗಿದ್ದರೆ .. ನಿಮ್ಗೊಂದು ಜೈ!!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 3:51pm — prapancha

ಉ: ನಿರ್ಜೀವ ದೇವರು ..!?ರಾಮ,ರಾಮಾ...

prapancha's picture

ದೇವರು ಈ ಭೂಮಿಯ ಮೇಲೆ ಇದ್ದಾನೆಯೋ ಅಥವ ಇಲ್ಲವೋ? ಇದಕ್ಕೆ ಉತ್ತರಿಸುವುದಕ್ಕೆ ನಮ್ಮ೦ತಹ ಪಾಮರರಿಗೆ ಉತ್ತರಿಸುವುದು ಕಷ್ಟಸಾದ್ಯವೇ ಸರಿ!.
ಆದರೆ ಇ೦ದಿನ ಸಮಾಜದ ಸ್ವಾಸ್ಥ್ಯಕ್ಕೆ ದೇವರು ಇಲ್ಲ ಎನ್ನುವ ನ೦ಬುಗೆಗಿ೦ತ ದೇವರು ಇದ್ದಾನೆ ಎನ್ನುವ ನ೦ಬುಗೆಯೇ ಒಳಿತಲ್ಲವೇ?.

ಇ೦ದು ಅಷ್ಟೋ ಇಷ್ಟು ಜನರಲ್ಲಿ ದೇವರ ಇದ್ದಾನೆ ಎ೦ಬ ಬಯ ಇರುವಾಗಲೇ ಸಮಾಜದಲ್ಲಿ ಎಲ್ಲೆಲ್ಲೂ ಅರಾಜಕತೆ, ಬ್ರಷ್ಟತೆ, ಅತ್ಯಾಚಾರ ಅನಾಚಾರ ಗಳಿ೦ದ ತು೦ಬಿ ಹೋಗಿದೆ. ಇನ್ನು ಎಲ್ಲರೂ ದೇವರು ಇಲ್ಲವೇ ಇಲ್ಲ ಎ೦ದು ನ೦ಬಿದರೆ ಸಮಾಜದ ಸ್ವಾಸ್ಥ್ಯದ ಗತಿ ನೆನಪಿಸಿದರೇ ಬಯವಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 4:07pm — ವೈಭವ

ಉ: ನಿರ್ಜೀವ ದೇವರು ..!?ರಾಮ,ರಾಮಾ...

ವೈಭವ's picture

ದೇವರಿಗೆ ಹೆದರಿಕೊಂಡು ನಾವು "ಒಳ್ಳೆಯ" ಯವರಾಗಬೇಕಿಲ್ಲ. ನಾವು ನಮ್ಮ ಒಳಮನಸ್ಸಿಗೆ(ಅತ್ವ ನಮಗೆ) ಒಪ್ಪುವಂತೆ "ಒಳ್ಳೆಯ'ವರಾದರೆ ಸಾಕು.

ಆದರೂ ದೇವರ ಮೇಲಿದ್ದ ನಂಬಿಕೆಯಿಂದಲೇ ಈಟೋಂದು ಕಲೆ, ಸಾಹಿತ್ಯ ಬಂದಿದೆ ಎನ್ನುವುದನ್ನ ಅಲ್ಲಗಳೆಯಲಾಗದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 4:23pm — prapancha

ಉ: ನಿರ್ಜೀವ ದೇವರು ..!?ರಾಮ,ರಾಮಾ...

prapancha's picture

ಹೌದು ರಾಯರೇ,
ದೇವರು ಇದ್ದಾನೆ ಎನ್ನುವ ನ೦ಬುಗೆ, ದೇವರು ಇಲ್ಲ ಎನ್ನುವ ನ೦ಬುಗೆಗಿ೦ತ ಕಡಿಮೆ ಅಪಾಯಕಾರಿ. Smiling
ತಮ್ಮ ಪ್ರತಿಯೊ೦ದು ಕ್ರಿಯೆ ಸರಿಯೇ-ತಪ್ಪೇ ಎ೦ದು ಆತ್ಮಾವಲೋಕನ ಮಾಡಿಕೊಳ್ಳುವವರ ಸ೦ಖ್ಯೆ ಇ೦ದಿನ ಸಮಾಜದಲ್ಲಿ ಕ್ಷೀಣಿಸುತ್ತಿದೆ ಹಾಗಾಗಿ ಈ ದೇವರು ಎನ್ನುವ ಅಗೋಚರ ಶಕ್ತಿ ಸಾಕಷ್ಟು ಪೋಲೀಸ್ ಕೆಲಸವನ್ನ ಮಾಡುತ್ತಿದೆ ಎನ್ನುವುದು ನನ್ನ ಅಬಿಮತ. ಬಹುಶಹ ಈ ಅಗೋಚರ ಶಕ್ತಿಯಿ೦ದಲೇ ಇರಬೇಕು, ಒ೦ದು ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ೧೦೦೦ ಜನರಿಗೆ ಒಬ್ಬ ಪೋಲೀಸ್ ವ್ಯವಸ್ತೆಯಿದೆ!.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 4:31pm — ವೈಭವ

ಉ: ನಿರ್ಜೀವ ದೇವರು ..!?ರಾಮ,ರಾಮಾ...

ವೈಭವ's picture

ನಲ್ಮೆಯ ಪ್ರಪಂಚರೆ,

"...ದೇವರು ಇದ್ದಾನೆ ಎನ್ನುವ ನ೦ಬುಗೆ, ದೇವರು ಇಲ್ಲ ಎನ್ನುವ ನ೦ಬುಗೆಗಿ೦ತ ಕಡಿಮೆ ಅಪಾಯಕಾರಿ..."

ಹೀಗೆ ಜೆನೆರಲ್ಲಾಗಿ ಹೇಳಕ್ಕಾಗುವುದಿಲ್ಲ. ನೀವು ಎ.ಎನ್.ಮೂರ್ತಿರಾಯರ 'ದೇವರು' ಓದಿರಿ. ಒಳ್ಳೆಯ ಹೊತ್ತಗೆ. ದೇವರ ಬಗ್ಗೆ ತುಂಬ ತಲೆ ಕೆಡಿಸ್ಕೊಂಡು ಅವರು ಈ ಹೊತ್ತಗೆ ಬರೆದಿದ್ದಾರೆ.
ಇದು ತುಂಬ ಗೋಜಲಿರುವ ವಿಶ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 6:08pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ವಯ್ಬವ!!

ಜಗದಲ್ಲಿ ಹೆಚ್ಚು ಮಂದಿ ದೇವರನ್ನು ನಂಬೋದು ಇಲ್ಲ, ನಂಬದೇ ಇರೋದು ಇಲ್ಲ. ಏಕೆಂದರೆ ದೇವರು ಅನ್ನೋದು ನಮ್ಮ ಬದುಕನಲ್ಲಿ ಹೆಚ್ಚು ಒತ್ತು ಇರುವ ಸಂಗತಿಯೆಂದು ಹಲವು ಅಂದುಕೊಂಡಿದ್ದಾರೆ ಅನ್ನೋದಕ್ಕೆ ಆಗಲ್ಲ.

ನಾವು ಬರೀ ನಮ್ಮ ದೇಸವನ್ನು ನೋಡಿಕೊಂಡು ಹೀಗೆ ಹೇಳ್ಕೋಬೋದು. ಆದ್ರೆ ಜಗದ ಮುಂದುವರಿದ ದೇಸಗಳಲ್ಲಿ ದೇವರ ಗೊಡವೆಗೆ ಹೋಗದವರೇ ಹೆಚ್ಚಿದ್ದಾರಂತೆ!

ನಮ್ಮ ದೇಸದಲ್ಲೋ "ಜನ ಮರುಳೋ ಜಾತ್ರೆ ಮರುಳೋ" ಅನ್ನೋ ಗಾದೆಗೆ ತಕ್ಕಂತೆ ಇದ್ದೀವಿ. ನಮಗೆ ದೇವರ ಮೇಲಿನ ನಂಬಿಕೆಗೆ ಹೆದರಿಕೆ, ಕುರಿಯಂತೆ ಕುರುಡು ಹಿಂಬಾಲನೆ, ಇವೇ ದೊಡ್ಡ ಓಸುಗರಗಳು, ಏಕೆಂದರೆ ದಿಟವಾದ ದೇವರು, ಆಧ್ಯಾತ್ಮ ಈ ಸಂಗತಿಗಳ ಬಗ್ಗೆ ತಲೆಗೆಡಿಸಿಕೊಳ್ಳುವ ಮಂದಿ ನಮ್ಮ ನಡುವೆ ಬಲು ಕಡಮೆ. ಏನೋ ಎಲ್ರೂ ಮಾಡ್ತಾರೆ ಅಂತ ನಾನೂ ಮಾಡ್ತೀನಿ ಅನ್ನೋರೇ ಹೆಚ್ಚು!! ಇದರಲ್ಲಿ ಹೆಂಗಸರು ಯಾವಾಗಲೂ ಮುಂದು, ಅದಕ್ಕೆ ಸಾಮಾನ್ಯ ದೇವರಿಗೆ ಕೈಮುಗಿತವನ್ನು ಅಮ್ಮ ಹೇಳಿಕೊಟ್ರೇ, ಪಂಚಾಂಗ, ವ್ಯಾಕರಣವನ್ನು ಅಪ್ಪ ಹೇಳಿಕೊಡ್ತಾನೆ. ನಾವೆಲ್ಲ ಹೆಚ್ಚು ಅಮ್ಮನ ಮಕ್ಕಳು!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 6:33pm — kishorpatwardhan

ಉ: ನಿರ್ಜೀವ ದೇವರು ..!?ರಾಮ,ರಾಮಾ...

kishorpatwardhan's picture

ಹೌದು, ಎ. ಎನ್. ಮೂರ್ತಿರಾಯರ ಹೊತ್ತಗೆ ’ದೇವರು’ ತುಂಬ ಚೆನ್ನಾಗಿದೆ. ತುಂಬ ಹಿಂದೆ ಓದಿದ್ದು.
ಹೊತ್ತಗೆಯ ಕೊನೆಗೆ ಅವರೆನ್ನುವುದು ಹೀಗೆ: (ಪದಗಳು ನನ್ನವು):

’ನಾನು ’ ದೇವರು ಇಲ್ಲ ’ ಅನ್ನುವಾಗಲೆಲ್ಲ ನೀವು ಕಾಣಬೇಕಾದ್ದು ನನ್ನ ಅಹಂಕಾರವನ್ನಲ್ಲ; ಬದಲಿಗೆ, ದೇವರು ಇಲ್ಲವಲ್ಲ ಎಂಬ ವಿಷಾದವನ್ನು! ಅಷ್ಟೊಂದು ಒಳ್ಳೆಯ ದೇವರು ನಿಜಕ್ಕೂ ಇದ್ದದ್ದೇ ಆದರೆ ಯಾರು ತಾನೆ ಬೇಡವೆಂದಾರು?

ಚೆನ್ನಾಗಿದೆ ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 6:03pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

ಹೌದು...

ದೇವರು ಎಂದರೆ "ಸಂಸ್ಕೃತಿ".
ದೇವರು ಎಂದರೆ "ಕಲೆ"
ದೇವರು ಎಂದರೆ "ಸಾಹಿತ್ಯ"

ಅಥವಾ ಇವೆಲ್ಲದರ ನರ-ನಾಡಿ

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 5:29pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

"ಆದರೆ ಇ೦ದಿನ ಸಮಾಜದ ಸ್ವಾಸ್ಥ್ಯಕ್ಕೆ ದೇವರು ಇಲ್ಲ ಎನ್ನುವ ನ೦ಬುಗೆಗಿ೦ತ ದೇವರು ಇದ್ದಾನೆ ಎನ್ನುವ ನ೦ಬುಗೆಯೇ ಒಳಿತಲ್ಲವೇ?"

ಪ್ರಪಂಚ ಆವ್ರೇ . ನಿಮ್ಮ ಈ ಮಾತಿಗೆ ನನ್ನ ಸಹಮತವಿದೆ.

ಎರಡೂ ನಂಬಿಕೆಗಳಿಗೆ ತನ್ನದೇ ಆದ ಪೂರಕ ಬಾದಕಗಳಿವೆ ಅಂದು ನನ್ನ ಅನಿಸಿಕೆ. ಆದರೆ ದೇವರು ಇದ್ದಾನೆ ಎಂಬ ನಂಬಿಕೆ ಗೆ ಬಾದಕಗಳಿಗಿಮ್ತ ಸಾದಕಗೆಳೆ ಜಾಸ್ತಿ!!

ದೇವರು ಎಂಬ "Virtual Police" ಎಮ್ಬಾ ಒಂದನ್ನೇ ಉದಾಹರಣೆ ಕೊಟ್ಟರೆ ಈ ವಾದ ಸೋಳಬಹುದು!.

ದೇವರು ಎಂದರೆ "ನಂಬಿಕೆ",
ದೇವರು ಎಂದರೆ "ಆತ್ಮ ವಿಶ್ವಾಸ"
ದೇವರು ಎಂದರೆ "ಆತ್ಮೀಯ"
ದೇವರು ಎಂದರೆ "ಭಾವನಾತ್ಮಕ ಆಸರೆ"
ದೇವರು ಎಂದರೆ "ನಮ್ಮೊಳಗಣ ಶಕ್ತಿ"
ಹೀಗೆ ... ದೇವರು ಎಂಬಾ ಕಾನ್ಸೆಪ್ಟ್ ನಮಗೆ ನಾನಾ ರೀತಿಯಲ್ಲಿ ಸಹಾಯಕ್ಕೆ ಬರುತ್ತೆ!!

"ಮನಸಿದ್ದ ಹಂಗೆ ಮಹಾದೇವ"!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 4:04pm — ವೈಭವ

ಉ: ನಿರ್ಜೀವ ದೇವರು ..!?ರಾಮ,ರಾಮಾ...

ವೈಭವ's picture

ಎ.ಎನ್ ಮೂರ್ತಿರಾಯರ 'ದೇವರು' ಹೊತ್ತಗೆ ಓದಿರಿ. ಚನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 5:59pm — roshan_netla

ಉ: ನಿರ್ಜೀವ ದೇವರು ..!?ರಾಮ,ರಾಮಾ...

roshan_netla's picture

"ದೇವರು" ಪುಸ್ತಕ ಬರವಣಿಗೆ ಚೆನ್ನಾಗಿದೆ ಕಾನ್ಸೆಪ್ಟ್ ಸರಿ ಇಲ್ಲ, ಪಾರ್ವತಿ ಸ್ನಾನಗ್ರಹಕ್ಕೆ ಅಗಳು(ಬಾಗಿಲ ಕೀಲಿ)ಇರಲಿಲ್ಲವೆ ಅಂತ ಕೇಳ್ತಾರೆ.. ಆದಿ ಮನವನಿಗಿಂತಲೂ ಮುನ್ಚೆ ಸ್ನಾನ ಗ್ರಹ ಇತ್ತೆ ಅಂತ ಆಲೊಚನೆ ಮಡಿಲ್ಲ ಅನ್ಸುತ್ತೆ. ವಾದಕ್ಕೆ ವಾದ ಮಡೊದು ಸುಲಭ .. ನಂಭುವವರನ್ನು ನೊಯಿಸೊಬದಲು ಸುಮ್ಮನಿರಬಾರದೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 6:42pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

ಈ ದೇವಾನುದೇವತೆಗಳು ಪುರಾಣದ ಸಬ್ಜೆಕ್ಟು... ಪುರಾಣಗಳೆಲ್ಲಾ ಒಂದು ರೀತಿ "fiction" ಇದ್ದ ಹಂಗೆ!!!

ಅದರಲ್ಲಿ ಸ್ವಲ್ಪ ಇತಿಹಾಸ..ಜಾಸ್ಥಿ ಕಲ್ಪನೆ!!!

ವೇದಗಳ "ದೈವ" ಜನ ಸಾಮಾನ್ಯರಿಗೆ ಅರ್ಥ ಆಗದೆ ಇದ್ದಾಗ... ಅಂತ ವಿಷಯಗಳನ್ನು ಸಾಮಾನ್ಯ್ಯ ಜನರಿಗೆ ಅರ್ಥೈಸಲು ಹುಟ್ಟಿಕೊಂಡ ಸಾಹಿತ್ಯ..

ಅಲ್ಲದೇ ಕೆಲವು ಪುರಾಣಗಳು .. ಕೆಲವು ಮತಗಳನ್ನು ಸ್ಥಾಪಿಸಲು (ಉದಾ.. ಶೈವ, ವೈಶ್ಣವ, ಭಾಗವತ, ಗಾಣಪತ್ಯ, ಶಾಕ್ತ.. ಇತ್ಯಾದಿ.. ಹುಟ್ಟಿಕೊನ್ಡ ಸಾಹಿತ್ಯ!!

ಇಂತಹ ಕಥೆಗಳು / ಪುರಾಣಗಳಲ್ಲಿ ಬರುವ ಪಾತ್ರಗಳೇ ನಿಜವಾದ ದೇವರೆಂಬ ನಂಬಿಕೆ ...ಕಲಾನೂ ಕ್ರಮೆಣ ಜನ ಸಾಮಾನ್ಯರಲ್ಲಿ ಬೇರೋರಲ್ಪಟ್ಟಿತು!! ಮೂರ್ತಿ ಪೂಜೆ ಶುರುವಾಯಿತು!!

ನಮ್ಮಂತಹ ಜನ ಸಾಮಾನ್ಯರ ಕಲ್ಪನೆಯ ದೈವವನ್ನು ಹೀಗೆಳೆಯಬಹುದು.. ಪ್ರಶಿಸಬಹುದು..ಕುಹಕವಾಡಬಹುದು...ಇವು ಕೇವಲ ಪಾತ್ರಗಳದ್ದರಿಂದ ಅವು ಸುಳ್ಳು ಅಂತ ಅರಾಮಾಗಿ "ಪ್ರೂವ್" ಮಾಡಬಹುದು!!( ಹೌದಾ!!)..
ಬಹುಶಃ ಮುರ್ತಿರಾಯರು ಇಂತಹ ದೈವವನ್ನು ಪ್ರಶ್ನಿಸಿರಬಹುದು?

ಆದರೆ "ನಿಜ ದೈವ" ( ಅದನ್ನ ನೀವು ಎನಮ್ತಾದರೂ ಕರೆಯಿರಿ!!) ವನ್ನು ಇಲ್ಲಿ ಆರೋಪಿಸುವುದನ್ನು ನನ್ನ ಮನಸ್ಸೇಕೋ ಒಪ್ತಾ ಇಲ್ಲ!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 7:28pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ಏನದು ದಿಟದ ದೇವರು, ಸುಳ್ಳುದೇವರು?

U R Krishnamurthi ಇವರ ಬಗ್ಗೆ ಓದಿರಿ!!

ದೇವರು ಒಂದು ನಂಬಿಕೆ, ಅಷ್ಟೇ, ಅದಕ್ಕಿಂತ ಹೆಚ್ಚು ಏನೂ ಅಲ್ಲ!! ನಂಬಿಕೆ ಇರುವುದು, ಇಲ್ಲದಿರುವಿಕೆ ಅಷ್ಟೇ ದೇವರುತನ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 8:17pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

"ಎಲ್ಲವೂ/ಸರ್ವವೂ ಬ್ರಹ್ಮವಾದ ಮೇಲೆ, ಆನಂದವೂ ಬ್ರಹ್ಮ ಅಂದ್ರೆ ಅದಕ್ಕೇ ಯಾವ ನಿಬ್ಬರ/ವಿಶೇಷ ಬೇಕಿಲ್ಲ!! "

ನೀವು ಮೇಲೆ ಹೇಳಿದ "ಅದು (ತತ್)" , ನಿಜ ದೈವ.. ಪುರಾಣದ ಪಾತ್ರಗೆಳೆಲ್ಲ ಸುಳ್ಳು ದೈವಗಳು!!!
ನಾವು ನಮ್ಬಲಿ-ಬಿಡಲಿ, ಹೆದರ್ಲಿ- ಬಿಡಲಿ, ಯಾವುದೊ ಒಂದು ಅತಿಮಾನುಶ ಶಕ್ತಿ ಇದೆ ಅಂತ ನನ್ನ ಅನಿಸಿಕೆ.. ಅದನ್ನೇ ನಾನು ದಿಟ ದೈವವೆಂದದ್ದು.

ಇಲ್ಲಿ ಸುಳ್ಳು ಮತ್ತು ನಿಜ ಪದಗಳನು "ಅಕ್ಷರಶಹ:" ತೆಗುದುಕೊಳ್ಳೋ ಅವಶ್ಯಕತೆಯಿಲ್ಲ!!

ಒಂದು ಉದಾಹರಣೆ..
ಆ "ಪರಬ್ರಹ್ಮ ವಸ್ತು" ವನ್ನ ( ಇಲ್ಲಿ ದೈವ ಅಮ್ದುಕೊಳ್ಳೊಣ) ...........ಶಿವ (ಅತ್ವ ವಿಷ್ಣು) ಅಂತ ಕರೆದರೆ ಅದು ದಿಟ ದೈವ!!

ಅಥ್ವ ಪುರಾಣದ ಪಾತ್ರ ರುದ್ರನನ್ನೋ, ವಿಶ್ನುವನ್ನೋ , ನಾರಾಯಣನನ್ನೋ ..ಅದೇ ದೈವವೆಂದು ಕರೆದರೆ ಅದು ನಮ್ಮ ಕಲ್ಪನೆಯ ದೈವ!! ( ಸುಳ್ಳು ದೈವ .. ಸರಿಯಾದ ಪದವಲ್ಲ ..ನಿಜ).

ವಿವರಣೆ ಸ್ವಲ್ಪ ಕಷ್ಟ ಇಲ್ಲಿ...

ದೈವವನ್ನು ಕಲ್ಲಲ್ಲಿ ಕಾಣುವುದಕ್ಕೂ .. .ಕಲ್ಲನ್ನೇ ದೈವವೆಂದು ಬಗೆವುದಕ್ಕೂ ಇರುವ ವ್ಯತ್ಯಾಸವೇ ನಾನು ಬಳಸಿದ ಪದಗಳ ಅರ್ಥ!!!

ಕೃಷ್ಣಮೂರ್ತಿ ಗಳ ಬಗ್ಗೆ ..ಅವ್ರ ಪುಸ್ತಕಗಳ ಬಗ್ಗೆ ನಂಗೆ ಹೆಚ್ಚು ತಿಳಿದಿಲ್ಲ. ಸಮಯ ಸಿಕ್ಕಾಗ ಓದಲು ಪ್ರಯತ್ನಿಸುವೆ. ವಂದನೆಗಳು.. ತಿಳಿಸಿದ್ದಕ್ಕಾಗಿ!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 8:31pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

"ಯಾವುದೊ ಒಂದು ಅತಿಮಾನುಶ ಶಕ್ತಿ ಇದೆ ಅಂತ ನನ್ನ ಅನಿಸಿಕೆ.. ಅದನ್ನೇ ನಾನು ದಿಟ ದೈವವೆಂದದ್ದು."

ನಾನು ಹೇಳುವುದು "ನಾವು ಏನೇನು ಯಾವುಯಾವುದನ್ನು ಬೇರೆಯವರಿಗೆ ತಿಳಿಸುತ್ತೇವೋ, ಏನೇನು ಯಾವುಯಾವುದರ ಬರೆಯುತ್ತೇವೋ, ಕೊರೆಯುತ್ತೇವೋ" ಅವೆಲ್ಲವೋ ಬರೀ ಮಾನವನ ಮನದಲ್ಲಿ ಹುಟ್ಟಿದವು.

ಮಾನವನಿಂದ ತಿಳಿಯಲಾರದ ಯಾವುದಾದ್ರು ಸಂಗತಿ ಇದ್ರೆ, ಅದರ ಬಗ್ಗೆ ನಮಗೆ ಯಾರಿಗೂ ಗೊತ್ತಿರಬಾರದು.

ನೀವು ಹೇಳೋ ದಿಟದೈವ ನಿಮ್ಮ ನಂಬಿಕೆಯ ಎಲ್ಲೆಯಲ್ಲಿ ಭದ್ರವಾಗಿದೆ. ನಿಮ್ಮ ನಂಬಿಕೆಯಾಚೆ, ಬೇರೆಯವರ ನಂಬಿಕೆಯಲ್ಲಿ( ಮಾದರಿಯಾಗಿ ನನ್ನ ನಂಬಿಕೆಯ ಎಲ್ಲೆಯಲ್ಲಿ ) ಅದು ಅಭದ್ರ.

ಅದಕ್ಕೆ ಹೇಳಿದ್ದು, ನಂಬಿಕೆಯ ಆಚೆ ದಿಟದ ದೈವಕ್ಕಾಗಲಿ, ಸುಳ್ಳು ದೇವರಿಗಾಗಲಿ, ಇರವಿಲ್ಲ/ಅಸ್ಥಿತ್ವವಿಲ್ಲ.!!

ಅಂದ್ರೆ ನೀವು ಹೇಳೋ ದಿಟ ಇಲ್ವೆ ಸುಳ್ಳು ದೇವರು ಬರೀ ನಿಮ್ಮ ನಂಬಿಕೆ/ತಲೆ/ಮನದಲ್ಲಿದೆ, ಅದೆಲ್ಲೂ ಬೇರೆಡೆಯಿಲ್ಲ. ಅದು ನೀವು ಇರುವ ವರೆಗೆ ಇದ್ದು, ನೀವು ಇಲ್ಲದೇ ಇರುವಾಗ ಅದು ಇರಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 6:47pm — Sunil Jayaprakash

ಉ: ನಿರ್ಜೀವ ದೇವರು ..!?ರಾಮ,ರಾಮಾ...

Sunil Jayaprakash's picture

ವಿಜಯಮ್ಮನವರು ಎತ್ತಿದ ಪ್ರಶ್ನೆ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಬಂದ ಎಲ್ಲರ ಮಾತುಗಳೂ ಒಂದು ಒಳ್ಳೆಯ ಓದನ್ನು ನೀಡಿದವು. ಅದಕ್ಕೆ ನಾನು ಹೇಳುವುದು "ಆನಂದವೇ ಬ್ರಹ್ಮ" Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 6:54pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

ಸುನೀಲರೆ

ಈ ಉಪನಿಶದ್ ವಾಕ್ಯಕ್ಕೆ ನನ್ನ ಜೈ!!

ಆನಂದ ಅಂದ್ರೆ ಏನು ಅಂತ ಸ್ವಲ್ಪ clue ಕೊಡಕ್ಕೆ ಆಗುತ್ತಾ?!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 7:53pm — muralihr

ಉ: ನಿರ್ಜೀವ ದೇವರು ..!?ರಾಮ,ರಾಮಾ...

muralihr's picture

ಒ೦ದು ಆನ೦ದ ನಿದ್ದೆ ಮಾಡಿದಾಗ, ಊಟ್ ಮಾಡಿದಾಗ , ಮತ್ತೊ೦ದು ಒಬ್ಬ ಸು೦ದರಿಯನ್ನು ಪ್ರೇಮಿಸಿ ಮದುವೆಯಾದಾಗ ಆಗುವ ಆನ೦ದ.(??) ಇದೆಲ್ಲಾ ಪ್ರಾಣಿ ಪಕ್ಷಿಗಳಿಗೂ ಸಿಗುವ ಆನ೦ದ.

ಆದರೆ ಇದಕ್ಕೂ ದೊಡ್ಡ ಆನ೦ದವಿದೆಯ೦ತೆ , ಅದು ತ್ಯಾಗರಾಜರೂ ಹೇಳಿದ್ದಾರೆ, ಅದೇ ದೇವರನ್ನು ಸಾಕ್ಷಾತ್ಕರಿಸಿಕುಳ್ಳುವ ಆನ೦ದ.
ಆ ಹಾಡನ್ನು ಕೇಳಿದರೆನೇ ಆನ೦ದ .. ಇನ್ನೂ ಅವರ ಸ್ಥಿತಿ ಹೇಗಿರಬೇಕು ??
"ಎ೦ದರೋ ಮಹಾನುಭಾವುಲು" ಸ೦ತಾನಮ್ ಹಾಡಿರುವುದನ್ನು ಇಲ್ಲಿ ಕೇಳಿ ಆನ೦ದಿಸಿ.

http://www.musicindiaonline.com/music/carnatic_vocal/m/artist.10

ಇಲ್ಲಿ ಅದರ ಅರ್ಥವನ್ನು ಕೊಟ್ಟಿದೆ.
http://www.ecse.rpi.edu/Homepages/shivkuma/music/endaromahanubhavulu-new...

"ಜಗದಾನ೦ದ ಕಾರಕ" ದಲ್ಲಿ ರಾಮನೇ ಜಗತ್ತನ್ನು ಅನ೦ದಪಡಿಸುವನು ಎ೦ಬ ಭಾವವಿದೆ.
ಒಟ್ಟಿನಲ್ಲಿ ಈ ಹಾಡನ್ನು ಕೇಳಿದ ನ೦ತರ ಸ್ವಲ್ಪ clue ಇರಲಿ, ಪೂರ್ತಿ ಮುಳುಗಿ ಹೋಗ್ತೀರಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 8:32pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

"ಒ೦ದು ಆನ೦ದ ನಿದ್ದೆ ಮಾಡಿದಾಗ, ಊಟ್ ಮಾಡಿದಾಗ , ಮತ್ತೊ೦ದು ಒಬ್ಬ ಸು೦ದರಿಯನ್ನು ಪ್ರೇಮಿಸಿ ಮದುವೆಯಾದಾಗ ಆಗುವ ಆನ೦ದ.(??) ಇದೆಲ್ಲಾ ಪ್ರಾಣಿ ಪಕ್ಷಿಗಳಿಗೂ ಸಿಗುವ ಆನ೦ದ."

ಬಹುಶ: "ಸಂತೋಷ" ಮೇಲಿನ ಅನುಭವ ವನ್ನು ವ್ಯಕ್ತ ಪಡಿಸಲು ಸೂಕ್ತ ಪದ ಅಂತ ನನ್ನ ಅನಿಸಿಕೆ.

"ಆನಂದ" ಅದೊಂದು ಪರಿಪೂರ್ಣ ಪದ.. ಬಹುಶ ವಿರುದ್ದ ಪದವಿಲ್ಲದ ಕೆಲವೇ ಪದಗಳಲ್ಲಿ ಈ ಪದವೂ ಒಂದು.

ಪದಗಳಲ್ಲಿ/ಮಾತುಗಳಲ್ಲಿ ವಿವರಣೆ ಕಷ್ಟ.. ತಿಳಿದಿದೆ..ಪ್ರಯತ್ಸಿದ್ದಕ್ಕೆ ವಂದನೆಗಳು

ಈ ಹಾಡನ್ನು ಸದ್ಯಕ್ಕೆ ಕೆಳಲು ಸಾದ್ಯವಗಿತ್ತಿಲ್ಲ... ಕೇಳಿದ ನಂತರ ಪ್ರತಿಕ್ರಿಯಿಸುವೆ...

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 8:48pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ಆನಂದ ಇದು ನಂದ ಎಂದ ಸಕ್ಕದದ ಒರೆಗೆ ಆ ಎಂಬ ಉಪಸರ್ಗ ಸೇರಿಸ ಆದುದು

ನಂದ ಅಂದ್ರೂ ನಲಿವೇ!
ನಂದಿತ ಅಂದ್ರೆ ನಲಿದವನು

ಹಾಗೇ ಸನಂದ, ಸದಾನಂದ( ಇದು ಸದಾ + ನಂದ ) ಇವೂ ಇವೆ

ಆನಂದಕ್ಕೆ ವಿರುದ್ಧ ದುಃಖ!

ananda (p. 039) [ â-nandá ] m. (n.) joy, bliss; sensual pleasure: -ka, a. gladdening, delighting; -thu, m. joy, delight; -na, a. delighting; -bâshpa, m. tears of joy; -maya, a. (î) consisting of joy, blissful; -yitri, m. delighter; -vardhana, m. N. of a poet.

ಇಲ್ಲಿ ಪರಿಪೂರ್ಣ ಪದ ಅಂದ್ರೇನು?

ಸಂತೋಷ ಇದು ತೋಷ ಸಕ್ಕದ ಒರೆಗೆ ಸಂ ಉಪಸರ್ಗ.
santosa (p. 333) [ sam-tosha ] m. satisfaction, content ment, with (in., lc.): -m kri, content oneself with (in.): -vat, a. satisfied, contented; -toshin, a. id.; delighting in (--°ree;); -toshtav ya, fp. n. one should be contented.

ಹಾಗೆ ನೋಡಿದರೆ ಸಂತೋಷ ( ನೆಮ್ಮದಿಗೆ ಹತ್ತಿರ ) ಇದೇ ಆನಂದ ( ಖುಷಿ, ನಲಿವು. ಇದಕ್ಕೆ ಹತ್ತಿರ ) ಇದಕ್ಕಿಂದ ಮೇಲಾದುದು.

ಸುಖ
sukha (p. 351) [ su-khá ] a. having a good axle-hole, running easily (only of cars in RV.); com fortable, pleasant, mild (rare in V., very common in C.); C.: soothing, agreeable to (the ear etc., --°ree;), by reason of (--°ree;); easy to (lc. of vbl. n.); m. (sc. danda) kind of mili tary array (C.); n. ease, comfort, pleasure, enjoyment, happiness, joy (C.; rare in V.): (á)-m, in., °ree;--, happily, comfortably, agree ably, easily, without trouble (C.; rare in V.); -m, easy to (inf.); -m -na punah, more easily -than; kadalî-sukham, as easily as a Kadalî; mahatâ sukhena, with great enjoyment: -kara, a. (î) giving pleasure; easy to be done or performed, by (g.); -kârin, -krit, a. giv ing pleasure; -kârya, a. having pleasure as an object; -gamya, fp. easy to traverse; -grâhya, fp. easy to seize or catch; easy to comprehend; -ghâtya, fp. easy to kill; -kkhedya, fp. easy to destroy; -gâta, n. any thing pleasant; -tara, cpv. easier: -m, ad. more easily; -tva, n. pleasantness, enjoyable ness; -da, a. giving pleasure; -duhkha, n. du. pleasure and pain: -maya, a. (î) con sisting of or feeling joy or sorrow; -dhana, m. N. of a merchant; -para, a. intent on enjoyment, pleasure-seeking; -peya, fp. to be drunk easily; -prasna, m. enquiry as to welfare; -prasupta, pp. sleeping placidly; -prâpya, fp. easy to win or obtain (girl); -bandhana, a. (fettered by=) addicted to worldly pleasure; -bodha-rûpa, a. easily un derstood; -bhâgin, -bhâg, a. participating in fortune; lucky, happy; -bhedya, fp. easily broken; easy to separate, prone to faithless ness; -bhogya, fp. easy to enjoy or dispose of (wealth); -maya, a. (î) full of enjoyment; -m-edhas, a. prospering well.

ಸುಖ ಮತ್ತು ಆನಂದ ಬಲು ಹತ್ತಿರ ತಿಳಿವು/ಅರ್ಥ ಹೊಂದಿವೆ

ಇಂದ್ರಿಯ ಸುಖ = ಇಂದ್ರಿಯ ಆನಂದ, ಆದ್ರೆ ಇಂದ್ರಿಯ ಸಂತೋಷ ಅಂತ ಇಲ್ಲ ಅಲ್ವಾ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 9:07pm — Khavi

ಉ: ನಿರ್ಜೀವ ದೇವರು ..!?ರಾಮ,ರಾಮಾ...

Khavi's picture

ಈ ಆನಂದ ಅಂದ ಕೂಡಲೇ, ನನಗೆ ಅಕ್ಬರ್-ಬೀರಬಲ್ಲರ ಕಥೆ ನೆನಪಾಯಿತು.

ಅದು ಹೀಗಿದೆ.......

ಒಂದು ದಿನ ಅಕ್ಬರನು ಬೀರಬಲ್ಲನನ್ನು ಕುರಿತು ಆನಂದ ಎಂದರೆ ಈ ಸಾಮ್ರಾಜ್ಯ, ಈ ಐಸಿರಿ, ಅರಸಿಯರು, ದಾಸಿಯರು, ವೈಭೋಗ ಸುಖ ಅಲ್ಲವೇ ಎಂದನಂತೆ. ಅವನಿಗೆ ಬೀರಬಲ್ಲನನ್ನು ತನಗಿಂತ ಸ್ವಲ್ಪ ಕಡಿಮೆ ಎಂದು ತಮಾಷೆ ಮಾಡಬೇಕಿತ್ತಂತೆ. ಅದಕ್ಕೆ ಬೀರಬಲ್ಲ ಆನಂದ ಅಂದರೆ ಇದೆಲ್ಲ ಅಲ್ಲ ಸಾಮ್ರಾಟ್ ಅಂದಾಗ, ಅಕ್ಬರನು ಒಂದು ದಿನದ ಗಡುವು ಕೊಟ್ಟು ಅಷ್ಟರಲ್ಲೆ ಆನಂದ ಅಂದರೇನು ಅಂತ ಸಾಬೀತು ಮಾಡಬೇಕು ಎಂದು ಅಪ್ಪಣೆಯಿತ್ತನಂತೆ.

ಆಗ ರಾತ್ರಿ ಅಕ್ಬರನು ಮಲಗಿದ ಮೇಲೆ, ಬೀರಬಲ್ಲನು ಅಲ್ಲಿಗೆ ಅವನು ಮಲಗಿದ ಕೋಣೆಗೆ ಬಂದು, ಅಲ್ಲಿದ್ದ ಬಾಗಿಲು ಕಾಯುವವರಿಗೆ ತಾನು ನೋಡಿಕೊಳ್ಳುತ್ತೇನೆ, ನೀವೀಗ ಮನೆಗೆ ಹೋಗಬಹುದು ಎಂದು ಕಳಿಸಿಬಿಡುತ್ತಾನೆ.

ಬೆಳಿಗ್ಗೆ ಅಕ್ಬರನಿಗೆ ಎಚ್ಚರವಾದಾಗ ಹೊಟ್ಟೆ ಕಿವುಚಿದ ಹಾಗಾಗಿ ಬೇಗನೆ ಟೊಯ್ಲೆಟಗೆ ಹೋಗಲಿಕ್ಕೆ ಅಂತ ಬಾಗಿಲು ತೆಗೆಯಲಿಕ್ಕೆ ಹೋಗತಾನೆ, ಆದರೆ ಹೊರಗಡೆಯಿಂದ ಬಾಗಿಲು ಹಾಕಿದ್ದರಿಂದ ತೆಗೆಯಲಿಕ್ಕೆ ಆಗೋಲ್ಲ. ಕೂಗಿದರೂ ಯಾರೂ ಬಾಗಿಲು ತೆರಯಲ್ಲ... ಹೊರಗಡೆ ಇರುವ ಬೀರಬಲ್ಲನಿಗೆ ಕೇಳಿಸಿದರೂ ಬಾಗಿಲು ತೆಗೆಯೊಲ್ಲ.

ಕೊನೆಗೆ ಒಂದೆರಡು ತಾಸಿನ ಬಳಿಕ ತೆಗೆದ ಮೇಲೆ, ಬಿದ್ದೇನೋ ಎದ್ದೇನೋ ಅಂತ ಟೊಯ್ಲೆಟ್ಟಿಗೆ ಓಡಿ ಹೋಗತಾನಂತೆ, ... ಆನಂತರ ಹೊರಗೆ ಬಂದು ಈಗ ಆನಂದ ಆಯ್ತು ಅಂತಾನಂತೆ... ಮುಂದೆ ನಿಂತಿರೋ ಬೀರಬಲ್ಲನು, ಆನಂದ ಅಂದರೆ ಏನು ಅಂತ ನೀವೆ ಒಪಿಕೊಂಡಿರಲ್ಲ ಸ್ವಾಮಿ ಅಂದಾಗ ಅವನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದರೂ ನಕ್ಕು ಸುಮ್ಮನಾದನಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 8:54pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

["ಜಗದಾನ೦ದ ಕಾರಕ" ದಲ್ಲಿ ರಾಮನೇ ಜಗತ್ತನ್ನು ಅನ೦ದಪಡಿಸುವನು ಎ೦ಬ ಭಾವವಿದೆ.
ಒಟ್ಟಿನಲ್ಲಿ ಈ ಹಾಡನ್ನು ಕೇಳಿದ ನ೦ತರ ಸ್ವಲ್ಪ clue ಇರಲಿ, ಪೂರ್ತಿ ಮುಳುಗಿ ಹೋಗ್ತೀರಾ.]

ರೀ ನೀವು ಮುಳುಗಿದರೆ ಮುಳುಗಿ,

ಆದರೆ ಹೇಗೆ ನಿಕ್ಕುವ/ನಿಶ್ಚಿತವಾಗಿ ಎಲ್ರೂ ಮುಳುಗ್ತಾರೆ ಅಂದ್ರಿ.

"ಮುಳುಗಿ ಹೋಗಬಹುದು" ಅಂದ್ರೆ ಸರಿ..

ಈಗ "ಜಗದಾನಂದ ಕಾರಕ" ತ್ಯಾಗರಾಜರಿಗೆ ರಾಮ ಇರಬೋದು, ಆದ್ರೆ ನಂಗೆ ಏಸುಕ್ರಿಸ್ತ, ಆಲ್ಲ, ಯಾಕೆ ಆಗಬಾರದು? ಯಾಕೆ ಜಗದಾನಂದ ಕಾರಕ ಯಾರು ಆಗದೇ ಇರಬಾರದು?

ನಿಮ್ಮ ಮಾತು, ನಾನು ಮುಳುಗಿದ್ದೀನಿ, ಅದಕ್ಕೆ ಎಲ್ರೂ ಮುಳುಗಿದ್ದಾರೆ ಅಂದ ಹಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 9:52pm — muralihr

ಉ: ನಿರ್ಜೀವ ದೇವರು ..!?ರಾಮ,ರಾಮಾ...

muralihr's picture

ಆಯಿತು ! ಮುಳುಗೋಕ್ಕೆ ಇಷ್ಟಾ ಇಲ್ಲಾ ಅ೦ದರೆ ತೇಲಿಕೊ೦ಡು ಮಾಯವಾಗಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 10:00pm — ಸಂಗನಗೌಡ

ಉ: ನಿರ್ಜೀವ ದೇವರು ..!?ರಾಮ,ರಾಮಾ...

ಸಂಗನಗೌಡ's picture

Quote:
ಇದನ್ನು ಕೇಳಿ ಮುಳುಗಿ ಹೋಗ್ತೀರಾ...

"ನಾ ಕಂಡಂತೆ ಪ್ರಪಂಚ" ಅನ್ನುವದು ದಿಟವಾದರೆ ನಿಮ್ಮ ಮಾತೂ ಸರಿ, ನಿಮ್ಮದೇ ಡೈಲಾಗ್ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 7:36pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ಆನಂದ ಅನ್ನೋದು ಒಂದು ಮನದ ಪಾಡು/ಸ್ಥಿತಿ mental state.

ಮನವು ಹಲವು ಸಂಗತಿಗಳಿಂದ ಈ ಪಾಡಿಗೆ ಹೋಗುವುದು!

ಆನಂದವೇ ಬ್ರಹ್ಮ ಅಂತ ಅಲ್ಲ, ಆನಂದವೂ ಬೃಗು ಮತ್ತು ವರುಣ ಒಪ್ಪಿದ್ರು, ಅಂತ ಎಲ್ರೂ ಅದನ್ನ ಒಪಿಕ್ಕೋಬೇಕಿಲ್ಲ!

ಎಲ್ಲವೂ/ಸರ್ವವೂ ಬ್ರಹ್ಮವಾದ ಮೇಲೆ, ಆನಂದವೂ ಬ್ರಹ್ಮ ಅಂದ್ರೆ ಅದಕ್ಕೇ ಯಾವ ನಿಬ್ಬರ/ವಿಶೇಷ ಬೇಕಿಲ್ಲ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 10:37pm — muralihr

ಉ: ನಿರ್ಜೀವ ದೇವರು ..!?ರಾಮ,ರಾಮಾ...

muralihr's picture

ಮನಸ್ಸು ಲಯವಾದಾಗ ನಾವು ನಮ್ಮ ನಿಜ ಸ್ವರೂಪದ ಅನುಭವವನ್ನು ಪಡೆಯುತ್ತೇವೆ. ಅದನ್ನೇ ಆನ೦ದ ಅನ್ನುವುದು.
ನಿದ್ದೆಯಲ್ಲಿ ಮನಸ್ಸು ಇರುವುದಿಲ್ಲಾ ಆದರೆ ಆನ೦ದವಿರುತ್ತೆ. ಇದೇ ರೀತಿ ಆಕಳಿಕೆ , ಸ೦ಭೋಗ, ಊಟ ಮಾಡುವಾಗ , ಮೂತ್ರ ವಿಸರ್ಜನೆ ಕಾಲದಲ್ಲಿ ಮನಸ್ಸು ಕ್ಷಣ ಕಾಲ ಲಯವಾಗುತ್ತೆ. ಅದಕ್ಕೆ ಆ ಕ್ರಿಯೆಗಳಲ್ಲಿ ಆನ೦ದವಿರುತ್ತೆ. ಹಾಗೂ ಮತ್ತೆ ಮತ್ತೆ ಮಾಡಬೇಕು ಅನ್ಸತ್ತೆ.
ಅಕಸ್ಮಾತ್ ಆನ೦ದವಿಲ್ಲದಿದ್ದರೆ ಇವೆಲ್ಲ ಮಾಡ್ತಾಯಿರಲಿಲ್ಲಾ.
ಆದರೆ ಪೂರ್ಣ ಮನಸ್ಸು ಲಯವಾದಾಗ ಪೂರ್ಣಾನ೦ದವಿರುತ್ತೆ. ಅದಕ್ಕೋಸ್ಕರವೇ ಧ್ಯಾನ ಮೌನ ವ್ರತಗಳನ್ನು ಮಾಡುವುದು.
ನಿರ್ವಾಣದ ಸ್ಥಿತಿಯಲ್ಲಿ ಈ ಪರಮಾನ೦ದದ ಅನುಭವವಾಗಿದ್ದು ಎಲ್ಲಾ ಮಹಾಶಯರು ಹೇಳಿ ಹೋಗಿದ್ದಾರೆ.
ರವೀ೦ದ್ರ ಠಾಕೋರ್ ಈ ಆನ೦ದದ ಅನುಭವ ತಮ್ಮ ಕಾವ್ಯದ ದಾರಿಯಲ್ಲಿ ಕ೦ಡು ಕೊ೦ಡಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 11:10pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ನೀವು ಬೇಜಾರ್‍ ಮಾಡಿಕೋ ಬೇಡಿ...

ಆದ್ರೆ ಒಂದೇ ಮಾತಲ್ಲಿ ಹೇಳಿದ್ರೆ..

ನೀವು ಓದಿ ಆಧ್ಯಾತ್ಮದ ವಾಂತಿ ಇದು. ನಿಮಗೆ ಪ್ರಶ್ನೆ ಕೇಳುವ ಗುಣವೇ ಹೊರಟು ಹೋಗಿದೆ. ಇದೇ ಈ ಆಧ್ಯಾತ್ಮದ ಗುರುಗಳು ಮಾಡುವ ಮೊದಲ ಕೆಲಸ.

ಯಾವಾಗ ಮಾನವ ಪ್ರಶ್ನೆ ಕೇಳದೇ ಒಪ್ಪುವನೋ, ಅಲ್ಲಿ ಅವನ ಸೊಂತ ಯೋಚನೆ ಅಂತ ಇರಲ್ಲ!!
ಹಾಗೇ ನೀವು ಓದಿ ಓದಿ, ತುಸು ಅಜೀರ್ಣವೂ ಆಗಿ, ವಾಂತಿ ಆಯ್ತು!!

ಇದಕ್ಕೆಲ್ಲ common sense ಉತ್ರಗಳಿವೆ..

"ಮನಸ್ಸು ಲಯವಾದಾಗ ನಾವು ನಮ್ಮ ನಿಜ ಸ್ವರೂಪದ ಅನುಭವವನ್ನು ಪಡೆಯುತ್ತೇವೆ. ಅದನ್ನೇ ಆನ೦ದ ಅನ್ನುವುದು.
ನಿದ್ದೆಯಲ್ಲಿ ಮನಸ್ಸು ಇರುವುದಿಲ್ಲಾ ಆದರೆ ಆನ೦ದವಿರುತ್ತೆ."

ಇದು ಸುಳ್ಳು. ನಿದ್ದೆಯಲ್ಲಿ ಮನಸ್ಸು ನಾವು ಕಾಣುವ ಕನಸನ್ನು ಅನುಭವ ಮಾಡ್ತದೆ. ಕನಸು ಎಲ್ಲರಿಗೂ ಬಿದ್ದೇ ಬಿಳ್ತದೆ. ಕನಸಿಲ್ಲದ ನಿದ್ದೆಯೂ ಇದೆ. ಇದು ಚನ್ನಾಗಿರಲ್ಲ. ಇಲ್ಲಿ ನಿದ್ದೆಯಿಂದ ಆನಂದ ಯಾವಾಗ ಅಂದ್ರೆ ಕನಸು ನಮಗೆ ಹಿತವಾಗಿದ್ದಾಗ. ಜಾಗ್ರತ, ಸುಸುಪ್ತ ಮತ್ತು ಇನ್ನೊಂದು ( ಹೆಸರು ಮರೆತೆ) ಈ ಮೂರು ಪಾಡುಗಳು. ಅದರಲ್ಲಿ ಸುಸುಪ್ತ ಇದು ಆಳವಾದ ನಿದ್ದೆ ಇಲ್ಲಿ ನಮ್ಮ ಮೈ ಮೇಲೆ ನಮಗೆ ಹತೋಟಿಯೇ ಇರಲ್ಲ. ಇದನ್ನು ಆನಂದ ಅಂದ್ರೆ, ಯಾವಾಗ ನಮಗೆ ನಮ್ಮ ಮೈಮನಗಳ ಮೇಲೆ ಹತೋಟಿ ಇರಲ್ಲ, ಅದೇ ಆನಂದ ಆಗುವುದು.

"ಇದೇ ರೀತಿ ಆಕಳಿಕೆ , ಸ೦ಭೋಗ, ಊಟ ಮಾಡುವಾಗ , ಮೂತ್ರ ವಿಸರ್ಜನೆ ಕಾಲದಲ್ಲಿ ಮನಸ್ಸು ಕ್ಷಣ ಕಾಲ ಲಯವಾಗುತ್ತೆ. ಅದಕ್ಕೆ ಆ ಕ್ರಿಯೆಗಳಲ್ಲಿ ಆನ೦ದವಿರುತ್ತೆ. ಹಾಗೂ ಮತ್ತೆ ಮತ್ತೆ ಮಾಡಬೇಕು ಅನ್ಸತ್ತೆ."
Smiling ಏನ್ರೀ ಇದು.. ಬಳಾಂಗು...

ಇವು ಯಾವುದು ಆನಂದ ಕೊಡಲೇ ಬೇಕಾಗಿಲ್ಲ, ಬೇಟದ ಹೊರತು!! ಬೇಟ/ಸಂಭೋಗದಲ್ಲೂ ಮನಮೈ ಹತೋಟಿಯಲ್ಲಿ ಇರಲ್ಲ!! Smiling
ಇದೇ ಅನುಭವ ಹೆಂಡ ಕುಡಿದಾಗ, ನಶೆ ಮಾಡಿದ ಕೂಡ ಸಿಗುವುದು

"ಆದರೆ ಪೂರ್ಣ ಮನಸ್ಸು ಲಯವಾದಾಗ ಪೂರ್ಣಾನ೦ದವಿರುತ್ತೆ. ಅದಕ್ಕೋಸ್ಕರವೇ ಧ್ಯಾನ ಮೌನ ವ್ರತಗಳನ್ನು ಮಾಡುವುದು.
ನಿರ್ವಾಣದ ಸ್ಥಿತಿಯಲ್ಲಿ ಈ ಪರಮಾನ೦ದದ ಅನುಭವವಾಗಿದ್ದು ಎಲ್ಲಾ ಮಹಾಶಯರು ಹೇಳಿ ಹೋಗಿದ್ದಾರೆ.
ರವೀ೦ದ್ರ ಠಾಕೋರ್ ಈ ಆನ೦ದದ ಅನುಭವ ತಮ್ಮ ಕಾವ್ಯದ ದಾರಿಯಲ್ಲಿ ಕ೦ಡು ಕೊ೦ಡಿದ್ದರು."

ಧ್ಯಾನ ಮೌನ ವ್ರತದಿಂದ ಮರುಳು/ಭ್ರಾಂತಿ ಬರುವುದು.!! ಏಕಾಂಗಿ ಮಾನವ ಯಾವಾಗಲೂ ಭ್ರಾಂತನೇ/ಮರುಳನೇ. ಸಾಮಾನ್ಯವಾಗಿ ಇಂತವರಿಗೆ ತಾವು ಮಾಡಿಕೊಂಡು ಮರುಳಿಂದ ಹೊರಬರಲು ತೊಡಕು. ಅವರು ತಮ್ಮದೇ ಆದ ಒಂದು ಲೋಕ ಮಾಡಿಕೊಂಡಿರುತ್ತಾರೆ, ಹಾಗೆ ವಾಸ್ತವವಲ್ಲದ, reasoning ಇಲ್ಲದೆ ಮಾತುಗಳನ್ನು ಹೇಳ್ತಿರುತ್ತಾರೆ.

ಈ ಮರುಳು/ಭ್ರಾಂತ ಲೋಕದ ಬದುಕು ಅವರಿಗೆ ಎಷ್ಟು ಹಿಡಿಸಬಿಟ್ಟರ್ತದೆ ಅಂದರೆ, ಅದನ್ನೇ ಅವರು ’ಪರಮಾನಂದ’ ಅಂತಾರೆ. ಇಂತವರು ಅದಕ್ಕೆ ಸಾಮಾನ್ಯ ಮಂದಿಯಂತೆ ಮಾತಾಡಲ್ಲ, ಊಟಮಾಡಲ್ಲ, ನಡೆಯಲ್ಲ, ಹಾಗೇ ಉಂಕು/ಯೋಚಿಸಲ್ಲ!!

ಅತಿ ಆಧ್ಯಾತ್ಮವಾದ ಮಂದಿಗಳು ಬೇಕಾದಷ್ಟು ಮಾದರಿ ಇವೆ. ಇವರಿಗೆ ಹುಚ್ಚು ಎಂದು ಹೇಳುತ್ತಿಲ್ಲ. ಆದ್ರೆ ಒಂದು ವಾಸ್ತವದ ಅರಿವೇ ಇರಲ್ಲ. ಅದನ್ನು ಹೇಳಿದ್ರು ಅವರ ಮನ ಅದನ್ನು ಪಡೆಯುವ ಪಾಡಲ್ಲಿ/ಸ್ಥಿತಿಯಲ್ಲಿ ಇರಲ್ಲ.!!

ಹೇಗೂ ಇಷ್ಟೊಂದು ಓದ್ತೀರ, ಒಂದಷ್ಟು Psychology ಓದಿ! ನಾನು ಕೊಂಚ ಓದ್ದಿದ್ದೀನಿ. ಬೇಕಾಷ್ಟು ಓದಕ್ಕಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 12:59pm — muralihr

ಉ: ನಿರ್ಜೀವ ದೇವರು ..!?ರಾಮ,ರಾಮಾ...

muralihr's picture

ಇಷ್ಟೊ೦ದು ಕಷ್ಟ ಪಟ್ಟೂ ನನ್ನ ಗುಣ ದೋಷಗಳನ್ನು ಕ೦ಡು ಹಿಡಿದ್ದಿದ್ದೀರಾ .
ನಿಮಗೆ ಪ್ರಶ್ನೆ ಕೇಳುವ ಗುಣವೇ ಹೊರಟು ಹೋಗಿದೆ.

>> ಈ ಗುಣ ಹೇಗೆ ಬೆಳೆಸಿಕೊಳ್ಳೂದು ??
ನೀವು ಟೂಷನ್ ಮಾಡ್ತೀರಾ ??
ಅಕಸ್ಮಾತ್ ಈ ಗುಣ ಕಳೆದು ಕೊ೦ಡವರಿಗೆ ಮತ್ತೆ ಬರುವ ಸ೦ಭವ ಉ೦ಟೋ ??
ಅಥವಾ ಕಾಲು ಕೈ ಹೋದರೆ ಮತ್ತೆ ಬರದೇ ಇರೋ ಹ೦ಗೆ ಈ ಡ್ಯಾಮೇಜ್ ಪೆರ್ ಮನೆ೦ಟಾ ??
ಆಧ್ಯಾತ್ಮ ಅ೦ದರೇನು ??
ಈ "ಸೊಂತ ಯೋಚನೆ " ಅ೦ದರೆ ಏನು ?
ಧ್ಯಾನ ಮೌನ ವ್ರತದಿಂದ ಮರುಳು/ಭ್ರಾಂತಿ ಬರುವುದು.
>>>ಜಾಸ್ತಿ ಮಾತು ಆಡಿದರೆ ಭ್ರಾ೦ತಿ ಇರೋದಿಲ್ವೇನು ??
>>>ವಾಸ್ತವದ ಅರಿವೇ
ವಾಸ್ತವದ ಅರಿವು ನಿಮ್ಗೇ ಇದೆಯೇನು ?? ಅರಿವಿನಿ೦ದ ಏನ್ ಮಾಡ ಬೇಕು ?
ವಾಸ್ತವ ಅ೦ದರೆ ಏನು ?? ಈ ವಾಸ್ತವದ ಅರಿವು ಪಡೆಯೋದು ಹೆ೦ಗೆ ?

>>>ಇದಕ್ಕೆಲ್ಲ common sense ಉತ್ರಗಳಿವೆ..

ಮನಸ್ಸು ಅ೦ದರೆ ಏನು ? ಮನಸ್ಸು ತಲೆಯೊಳಗಿದೆಯೋ ಅಥ್ವಾ ತಲೆ ಮನಸ್ಸಿನಲ್ಲಿದೆಯೋ ?
ನಿಮ್ಮಲ್ಲಿ common sense ಸ್ವಲ್ಪ ಜಾಸ್ತಿ ಇದೆ, ಅದನ್ನೇ ಉಪಯೋಗಿಸಿ ಈ ಪ್ರಶ್ನೆಗಳನ್ನು ಉತ್ತರಿಸಿ.
ನೋಡಿದಿರಾ ನಿಮ್ಮ ಒ೦ದು ಕಮೆ೦ಟ್ ಇ೦ದಾ ಎಷ್ಟೊ೦ದು ಪ್ರಶ್ನೆ ಬ೦ತು ...
ಇದಕ್ಕೆಲ್ಲಾ ನಿಮ್ಮ ಕೈಯಲ್ಲಿರಲಿ , ಆ ದೇವ್ರು ಬ೦ದರೂ ಉತ್ತರಿಸೋಕ್ಕೆ ಆಗಲ್ಲಾ.
ಅದಕ್ಕೆ ಯಾವ ಪ್ರಶ್ನೆ , ಯಾರ ಹತ್ತಿರ , ಯಾವಾಗ ಕೇಳಬೇಕು ಅನ್ನೋದು ಮುಖ್ಯ.
ಇಲ್ಲಾ ಅ೦ದರೆ ಪ್ರಶ್ನೆ ಪ್ರಶ್ನೆ ಯಾಗಿ ಉಳಿಯುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 1:54pm — Sunil Jayaprakash

ಉ: ನಿರ್ಜೀವ ದೇವರು ..!?ರಾಮ,ರಾಮಾ...

Sunil Jayaprakash's picture

ಅಯ್ಯೋ ಮುರಳಿ, ಎಲ್ಲಿಕ್ಕಿಂತ ಹೆಚ್ಚಾಗಿ, WHO AM I ? is the only valid question ಅಂತ ನಿನ್ನ ಪರಿಚಯದಲ್ಲಿಯೇ ಇದೆ Smiling ಆದರೆ ಯಾಕೋ ಅದನ್ನು ಕೇಳಬೇಡಿ ಅಂತ ಹೇಳಿದ್ದೀಯಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 2:19pm — muralihr

ಉ: ನಿರ್ಜೀವ ದೇವರು ..!?ರಾಮ,ರಾಮಾ...

muralihr's picture

ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲ, ಅದಕ್ಕೆ ಆ ಪ್ರಶ್ನೆ ಕೇಳಬೇಡಿ ಅ೦ತಾ ಬರೆದೆ.
ಆದರೆ ಜೀವನದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರೆವಿದೆಯೇ ??
ಈ ಪ್ರಶ್ನೆಗಳಿಗೆ ಉತ್ತರ ಕೊಡುವವರಾರೂ ??
ಮು,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 2:39pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

ಆಹಾ!! ಕೊನೆಗೆ ಪ್ರಸ್ನೆ ಕೇಳುವ ಗುಣವಿದೆ, ಗುಣ ಬಂತು ಅಂತ ತೋರಿಸಿದ್ದೀರಿ.

ಹೀಗೆ ಇರಲಿ ನಿಮ್ಮ ಪ್ರೆಸ್ನೆ ಕೇಳೋ ಗುಣ!! ನಲಿವಾಯ್ತು!!

ಈ ನಾನು ನಿಮಗೆ ಉತ್ರ ಕೊಡಬೇಕಾಗಿಲ್ಲ. ಏಕೆಂದ್ರೆ

ನೀವು ಟೂಷನ್ ಮಾಡ್ತೀರಾ ??
ಅಕಸ್ಮಾತ್ ಈ ಗುಣ ಕಳೆದು ಕೊ೦ಡವರಿಗೆ ಮತ್ತೆ ಬರುವ ಸ೦ಭವ ಉ೦ಟೋ ??
ಅಥವಾ ಕಾಲು ಕೈ ಹೋದರೆ ಮತ್ತೆ ಬರದೇ ಇರೋ ಹ೦ಗೆ ಈ ಡ್ಯಾಮೇಜ್ ಪೆರ್ ಮನೆ೦ಟಾ ??
ಆಧ್ಯಾತ್ಮ ಅ೦ದರೇನು ??
ಈ "ಸೊಂತ ಯೋಚನೆ " ಅ೦ದರೆ ಏನು ?
ಧ್ಯಾನ ಮೌನ ವ್ರತದಿಂದ ಮರುಳು/ಭ್ರಾಂತಿ ಬರುವುದು.

>>>ಜಾಸ್ತಿ ಮಾತು ಆಡಿದರೆ ಭ್ರಾ೦ತಿ ಇರೋದಿಲ್ವೇನು ??
>>>ವಾಸ್ತವದ ಅರಿವೇ
ವಾಸ್ತವದ ಅರಿವು ನಿಮ್ಗೇ ಇದೆಯೇನು ?? ಅರಿವಿನಿ೦ದ ಏನ್ ಮಾಡ ಬೇಕು ?
ವಾಸ್ತವ ಅ೦ದರೆ ಏನು ?? ಈ ವಾಸ್ತವದ ಅರಿವು ಪಡೆಯೋದು ಹೆ೦ಗೆ ?

ಮನಸ್ಸು ಅ೦ದರೆ ಏನು ? ಮನಸ್ಸು ತಲೆಯೊಳಗಿದೆಯೋ ಅಥ್ವಾ ತಲೆ ಮನಸ್ಸಿನಲ್ಲಿದೆಯೋ ?

ಇಸ್ಟೊಂದು ಪ್ರಸ್ನೆ ಇರುವ ವೆಕ್ತಿಯೇ, ಅವಕ್ಕೆ ಸರಿಯಾದ ಉತ್ರ ಹುಡುಕೋದು. ಪ್ರಸ್ನೆ ಮಾಡ್ತಾ ಇರಿ. ಉತ್ರ ಸಿಕ್ರೂ ಸಿಗಬೋದು.

ಇನ್ನು ನಿಮಗೆ ಪ್ರಸ್ನೆ ಕೇಳಕ್ಕೆ ಯಾವ ತರಬೇತಿ ಬೇಡ. Smiling

ಇಲ್ಲಿ ಹೇಳಿಲ್ಲದ ಊಹೆಗಳಿಗೆ ಉತ್ರ ಯಾಕೆ ಹೇಳಲಿ. ಆ ಊಹೆಗಳು ದಿಟವಾ ಸುಳ್ಳಾ ಅಂತ ಊಹೆ ಮಾಡಿದೋರು ನೋಡಿಕೋ ಬೇಕು! Smiling

ಪ್ರೆಸ್ನೆ ಪ್ರೆಸ್ಣೆಯಾಗೇ ಉಳಿದರೂ ಚಿಂತೆಯಿಲ್ಲ, ಆದ್ರೆ ತಪ್ಪುತ್ರವನ್ನು ನೆಚ್ಚಕ್ಕೆ ಆಗದು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 3:41pm — muralihr

ಉ: ನಿರ್ಜೀವ ದೇವರು ..!?ರಾಮ,ರಾಮಾ...

muralihr's picture

ಈ ನಾನು ನಿಮಗೆ ಉತ್ರ ಕೊಡಬೇಕಾಗಿಲ್ಲ. ಏಕೆಂದ್ರೆ ??

>> ಪ್ರಶ್ನೆನೂ ನೀವೇ ಕೇಳ್ತೀರಾ , ನಿಮ್ಗೇ ಒಪ್ಪುವ ಉತ್ತರವನ್ನೂ ನೀವೆ ಕೊಡ್ತೀರಾ. ಇದು ಸರಿಯೇ ??
ಮತ್ತೆ ಎಲ್ಲಾ ಪ್ರಶ್ನೆಗಳು ಊಹೆ ಅ೦ತೀರಾ.
ಅಲ್ರೀ ಪ್ರಶ್ನೇ ಕೇಳಿ ಬುದ್ಧಿವ೦ತರಾಗಿ ವಿಚಾರವ೦ತರಾಗಿ ಅ೦ತೀರಾ , ಉತ್ತರ ಮಾತ್ರ ಕೊಡೋಕ್ಕೆ ಆಗಲ್ಲಾ ??
ಇದು ಏಕೆ ?
ಹೋಗಲಿ Answer any ೪ out of 8 ಅ೦ತಾ ಪ್ರಶ್ನಾ ಪತ್ರಿಕೆಯಲ್ಲಿ ಕೇಳುವ೦ಗೇ ಕೇಳ್ತೀನಿ.
Attempt ಮಾಡಿ.

Answer any 4 out of 8 . Each question carry 5 marks.

1 > ಆಧ್ಯಾತ್ಮ ಅ೦ದರೇನು ??
2 > ಈ "ಸೊಂತ ಯೋಚನೆ " ಅ೦ದರೆ ಏನು ? ಈ ಯೋಚನೆ ಎಲ್ಲಿ೦ದ ಬರುತ್ತೆ ?? ನಮ್ಮ ತಲೆಯಲ್ಲಿ ಸದಾ ಕಾಲ
ಯೋಚನೆಯ ನದಿ ಯಾಕಿರುತ್ತೆ .
3> ಧ್ಯಾನ ಮೌನ ವ್ರತದಿಂದ ಮರುಳು/ಭ್ರಾಂತಿ ಬರುವುದು.ಜಾಸ್ತಿ ಮಾತು ಆಡಿದರೆ ಭ್ರಾ೦ತಿ ಇರೋದಿಲ್ವೇನು ??
ಈ ಭ್ರಾ೦ತಿ ಹೋಗೋದು ಹೆ೦ಗೆ ?
4> ವಾಸ್ತವದ ಅರಿವು ನಿಮ್ಗೇ ಇದೆಯೇನು ?? ಅರಿವಿನಿ೦ದ ಏನ್ ಮಾಡ ಬೇಕು ?
5> ವಾಸ್ತವ ಅ೦ದರೆ ಏನು ??
6> ಈ ವಾಸ್ತವದ ಅರಿವು ಪಡೆಯೋದು ಹೆ೦ಗೆ ?
7> ಮನಸ್ಸು ಅ೦ದರೆ ಏನು ?
8> ಮನಸ್ಸು ಎಲ್ಲಿದೆ ?? ನೀವು ತೋರಿಸ್ತೀರಾ ?? ಮನಸ್ಸು ತಲೆಯೊಳಗಿದೆಯೋ ಅಥ್ವಾ ತಲೆ ಮನಸ್ಸಿನಲ್ಲಿದೆಯೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 4:14pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

very good questions!!

ತುಂಬ ಒಳ್ಳೇಯ ಪ್ರಸ್ನೆಗಳು..

ನಾನೂ ಉಂಕು ಮಾಡ್ತಿದ್ದೀನಿ. ಉತ್ರಕ್ಕೆ ಅರ್ಜೆಂಟಾ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 4:01pm — savithru

ಉ: ನಿರ್ಜೀವ ದೇವರು ..!?ರಾಮ,ರಾಮಾ...

savithru's picture

"ನಿಮಗೆ ಪ್ರಶ್ನೆ ಕೇಳುವ ಗುಣವೇ ಹೊರಟು ಹೋಗಿದೆ"

ನಮಗೆ ಕನ್ವಿನ್ಸ್ ಆಗೋ ವರ್ಗೂ ಪ್ರಶ್ನೆ ಕೇಳಬಹುದು... ಸಂದೇಹ ಪಡಬಹುದು... ಸದಾ ಕಾಲಕ್ಕೂ ಡೌಟ್ ಪಡ್ತಾ ಇರೋದು ಆರೋಗ್ಯಕರ ಮನಸ್ಥಿತಿಯಲ್ಲ ಅಂತ ನನ್ನ ಅನಿಸಿಕೆ!

ಅಲ್ಲದೇ ಪ್ರತಿಯೊಂದು ಹೊಸ ವಿಚಾರವನ್ನು ಕಣ್ಣು ಮುಚ್ಚಿಕೊನ್ಡು ಒಪ್ಪಿಕೊಳ್ಳೊದು ಸಹ ಮೂರ್ಖತನ!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 4:18pm — mahesha

ಉ: ನಿರ್ಜೀವ ದೇವರು ..!?ರಾಮ,ರಾಮಾ...

mahesha's picture

"ಸದಾ ಕಾಲಕ್ಕೂ ಡೌಟ್ ಪಡ್ತಾ ಇರೋದು ಆರೋಗ್ಯಕರ ಮನಸ್ಥಿತಿಯಲ್ಲ ಅಂತ ನನ್ನ ಅನಿಸಿಕೆ!"

ನಿಮ್ಮ ಅನಿಸಿಕೆಯಲ್ಲಿ ಒಂದು ಕೊರತೆ...

ಸದಾ ಕಾಲಕ್ಕೂ ಹಲವು ಪ್ರೆಸ್ನೆಗಳಿಗೆ ಉತ್ರ ಸಿಕ್ಕದೇ ಇರಬೋದು. ಇದಕ್ಕೆ ನಾವು ಹಾಕಿ ಪ್ರಸ್ನೆಯೇ ಸರಿಯಿಲ್ಲದೇ, ಎಟವಟ್ಟು ಆಗಿರಬೋದು.

ಆದುದರಿಂದ ಅಂತಹ ಐಬು/ಡೌಟಿಗೆ ಸುಮ್ನೆ ಒಂದು ನಂಬಿಕೆಯ ಉತ್ರಕ್ಕಿಂತ, ಯಾವಾಗಲೂ ತೀರದ ಪ್ರಸ್ನೆ ಅಂತ ಹಾಗೇ ಇರಿಸೋದು ಮೇಲು!

ಎಲ್ಲ ಪ್ರಸ್ನೆಗಳಿಗೂ ಉತ್ರ ಇರಬೇಕೆಂದಿಲ್ಲ. ಸಾಯುವಾಗ ಯಾವುದಾದರ ಡೌಟಿಲ್ಲದೇ ಸತ್ತವರು ಉಂಟೇ? ಎಲ್ಲದ ನಿಕ್ಕುವ ಅಂತ ಹೇಗೆ ಸಾಯೋದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
  • ದೇವರು
  • 'ದೇವರು' ದೇವರಲ್ಲ !!
  • ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
  • ದೇವರು ಮತ್ತು ನಾವು
Syndicate content

ಲೇಖಕರು

vijayamma's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.