Vijayasarathy ರವರ ಬ್ಲಾಗ್
ಶಾಯರಿ ಶಾಯರಿ ಇದು ಫನಾ ಕಣ್ರೀ
June 3, 2006 - 6:30pm — Vijayasarathyತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 403 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ
May 31, 2006 - 5:46pm — Vijayasarathyಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ. ಆದರೆ ಮೀಸಲಾತಿ, ಕೋಮುಗಲಭೆ, ಜಾತಿಕಲಹಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಆವರಿಸುತ್ತದೆ. ರಾಜಕೀಯ ಪಕ್ಷಗಳು ಇವುಗಳನ್ನು ಉಪಯೋಗಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತವೆ. ಮುಂದೆ ಓದಿ »

- ೧ ಪ್ರತಿಕ್ರಿಯೆ
- 689 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: