ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vikashegde ರವರ ಬ್ಲಾಗ್

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

May 19, 2008 - 2:29pm — vikashegde

"ಜೀವನದಲ್ಲಿ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."

’ಮುಸ್ಸಂಜೆ ಮಾತು’ ಚೆನ್ನಾಗಿದೆ ಅನ್ಸುತ್ತೆ, ಟೈಮ್ಸಾಫಿಂಡಿಯಾದಲ್ಲಿ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ ಬಾ ಹೋಗೋಣ ಎಂದು ಗೆಳೆಯರು ಕರೆದರು. ಕೆಲದಿನಗಳಿಂದ ಆ ಚಿತ್ರದ ಪೋಸ್ಟರ್ ಗಳನ್ನು ನೋಡಿದ್ದೆ. ಚಿತ್ರ ಚೆನ್ನಾಗಿಯೇ ಇರಬಹುದು ಎನ್ನಿಸಿತ್ತು. ಮಾಮೂಲಿ ಪ್ರೇಮ ಕಥೆಗಳುಳ್ಳ ಚಿತ್ರಗಳನ್ನು ನೋಡದ ನನಗೆ ಇದ್ಯಾಕೋ ಸ್ವಲ್ಪ ಬೇರೆಯೇ ತರನಾದ ಮೆಚ್ಯೂರ್ಡ್ ಲವ್ ಸ್ಟೋರಿ ಇರಬಹುದು ಅನಿಸಿತ್ತು. ಸುದೀಪ ಇದಾನೆ ಅಂದ್ಮೇಲೆ ಸ್ವಲ್ಪ ಲೆವೆಲ್ಲಾಗೇ ಇರ್ಬೋದು ಅಂತ ನಂಬಿಕೆಯೂ ಇತ್ತು. ಎಲ್ಲಾ ಹಾಳಾಗಿ ಹೋಯಿತು. ಎಲ್ಲಿಂದ ಶುರುಮಾಡಿ ಎಲ್ಲಿಗೆ ಮುಗಿಸುವುದೋ ತಿಳಿಯುತ್ತಿಲ್ಲ. ಈಗಿನ ಟ್ರೆಂಡಿನಂತೆ ನಾಯಕ ರೇಡಿಯೋ ಜಾಕಿ ಎಂಬುದೊಂದನ್ನು ಬಿಟ್ಟರೆ ಮತ್ತದೇ ೮೦ರ ದಶಕದ ಕಥೆ. ಕನ್ನಡದ ನಾಲ್ಕು ಸಿನೆಮಾ ನೋಡಿ ಅಭ್ಯಾಸವಿದ್ದವರು ಪ್ರತಿ ಸನ್ನಿವೇಶವನ್ನು, ಕಥೆಯನ್ನೂ ಸಂಭಾಷಣೆಗಳ ಸಮೇತ ಊಹಿಸಿಕೊಂಡುಬಿಡಬಹುದು !! ಚಿತ್ರ ಶುರುವಾಗಿ ೨೦ನಿಮಿಷದಲ್ಲೇ ನಾಯಕ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕು ಹಾಕಿಕೊಂಡಿದ್ದ ಗರ್ಭಿಣಿ ಹೆಂಗಸೊಬ್ಬಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ಮಗು ಆದ ಮೇಲೆ ಆಕೆ "ಅಣ್ಣಾ, ನಿಮ್ಮುಪಕಾರನ್ನ ಯಾವತ್ತೂ ಮರೆಯೋಲ್ಲ, ಈ ಮಗುಗೇ ನಿಮ್ಮದೇ ಹೆಸರಿಡ್ತೀನಿ" ಅಂತಾಳೆ. ಆವಾಗಲೇ ಇಡೀ ಟಾಕೀಸಿಗೆ ಒಳಗೆ ಬಂದು ತಪ್ಪು ಮಾಡಿಬಿಟ್ಟೆವೇನೋ ಎಂಬ ಸುಳಿವು ಸಿಕ್ಕಿಹೋಗುತ್ತದೆ. ಇರಲಿ ನೋಡೋಣ ಎಂದುಕೊಂಡರೆ ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಕುಯ್ಯುವವರೇ! ಒಂದಿಷ್ಟು ಒಳ್ಳೆಯ ಸಂದೇಶಗಳು ಇವೆಯಾದರೂ ಕೂಡ ನಿರೂಪಣೆ ನೀರಸ ನೀರಸ. ಭಾವನೆಗಳನ್ನೆಲ್ಲಾ ತಮಾಷೆಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತಾಗಿ ಹೋಗಿದೆ ಎರಡನೇ ಅರ್ಧದಲ್ಲಿ. ಕೊನೆಕೊನೆಗಂತೂ ಗಂಭೀರ ದೃಶ್ಯಗಳು ಬಂದಾಗಲೂ ಕೂಡ ಇಡೀ ಟಾಕೀಸಿಗೆ ಟಾಕೀಸೆ ಯಾವುದೋ ಹಾಸ್ಯ ಚಿತ್ರವೊಂದನ್ನು ನೋಡುತ್ತಿದ್ದಂತೆ ಪೂರ್ತಿ ಕಾಮಿಡಿಯಿಂದ ತುಂಬಿಹೋಗುತ್ತದೆ. ಇಡೀ ಊರತುಂಬಾ ಪೋಸ್ಟರುಗಳಲ್ಲಿ ಕಾಣುತ್ತಿದ್ದ ದೃಶ್ಯಗಳು ಕೇವಲ ಒಂದು ಹಾಡಿನದು. ಅದು ನಾಯಕ ನಾಯಕಿಗೆ ಪ್ರೇಮವಾಗುವ ಹಾಡು ಮತ್ತು ಅದಷ್ಟರಲ್ಲಿ ಮಾತ್ರ ಪ್ರೇಮ ಇರುವುದು.

"ಹುಡ್ಗೀರನ್ನ ರೇಗಿಸಿ ಪರ್ವಾಗಿಲ್ಲ, ಆದ್ರೆ ಅದಕ್ಕೊಂದು ಲಿಮಿಟ್ಟಿರ್ಲಿ", ಆಮೇಲೆ "ಯಾವನಾರೂ ಗಂಡಸು ಸುಮ್ನೆ ಅವನ ಪಾಡಿಗೆ ಅವನು ಇದಾನೆ ಅಂದ ಮಾತ್ರಕ್ಕೆ ಅವನು ಗಂಡಸೇ ಅಲ್ಲ ಅಂತ ಮಾತ್ರ ತಿಳ್ಕಬೇಡಿ" ಅಂತ ಸುದೀಪ ಸುಮ್ಸುಮ್ನೇ ಇರುವ ಫೈಟಿಂಗ್ ಒಂದು ಮುಗಿದ ಮೇಲೆ ಹೊಡೆಸಿಕೊಂಡ ರೌಡಿಗಳಿಗೆ ಉಪದೇಶ ಕೊಡುತ್ತಾನೆ. "ಈ ರೇಡಿಯೋ ಜಾಕಿ ಕೆಲ್ಸ ಬಿಟ್ಟು ಯಾವುದಾದ್ರೂ ಐ.ಟಿ ಕಂಪನಿ ಸೇರ್ಕೋ , ಒಳ್ಳೇ ಸಂಬಳ , ನೆಮ್ಮದಿಯಾಗಿ ಇರ್ಬೋದು" ಅಂತ ನಾಯಕನ ಅಮ್ಮ ಟಿಪಿಕಲ್ ಅಮ್ಮನಂತೆ ಹೇಳುತ್ತಾಳೆ !! ಟಾಕೀಸನಲ್ಲಿದ್ದ ಐ.ಟಿ. ಹುಡುಗರು ಹೋ...... ಎಂದು ಕೂಗುತ್ತಾರೆ Smiling

ಈ ಚಿತ್ರ ಮಾಡಿದ ನಿರ್ಮಾಪಕ, ನಿರ್ದೇಶಕನಿಗೆ ಬೈಯಬೇಕೋ, ನೋಡಿದ ನಮಗೆ ನಾವೇ ಬೈಕೊಬೇಕೋ ತಿಳೀತಿಲ್ಲ. ಸುದೀಪನ ನಟನೆ, ಮಾತು ಬಗ್ಗೆ ಎರಡು ಮಾತಿಲ್ಲವಾದರೂ ಇಂತದೇ ಚಿತ್ರಗಳನ್ನ ಮಾಡ್ತಾ ಇದ್ರೆ ಆಮೇಲೆ 'ಯಾರೋ ಯಾರೋ ಗೀಚಿ ಹೋದ .. ಹಾಳೂ ಹಣೆಯಾ ಬರಹ...." ಅನ್ಬೇಕಾಗತ್ತೆ. ಹಾಸ್ಯ,ಹರಟೆ ಖ್ಯಾತಿಯ ಗಂಗಾವತಿ ಬೀಚಿ ಪ್ರಾಣೇಶ್ ಮತ್ತು ಪ್ರೊ.ಕೃಷ್ಣೆಗೌಡರು ಬಹುಶ: ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ ಮತ್ತು ನಾಯಕನಿಗಿಂತ ಅವರ ಎಂಟ್ರಿಗೇ ಜಾಸ್ತಿ ಸಿಳ್ಳೆಗಳು ಬೀಳುತ್ತವೆ. ಹಾಗಂತ ಚಿತ್ರದಲ್ಲಿ ತೀರ ನಗು ಬರುವಂತಹ ಹಾಸ್ಯ ಏನೂ ಇಲ್ಲ! ಇಷ್ಟೆಲ್ಲಾ ಹೇಳಿದ ಮೇಲೂ ಚಿತ್ರದ ಕಥೆ ಏನು ಅಂತ ಹೇಳೋ ಅಗತ್ಯ ಕಾಣ್ತಾ ಇಲ್ಲ, ಹೇಳಲು ತಾಳ್ಮೆನೂ ಇಲ್ಲ. ಒಂದು ಕಾಲದಲ್ಲಿ ಇಂತಹುದ್ದನ್ನೆಲ್ಲಾ ನೋಡುಗರು ಗಂಭೀರವಾಗಿ ನೋಡುತ್ತಿದ್ದರು. ಆದರೆ ಈಗಿನ ನೋಡುಗರ ಮನಸ್ಥಿತಿ, ಅಭಿರುಚಿ ಹಾಗಿಲ್ಲ ಎಂಬುದು ನಿರ್ದೇಶಕನಿಗೆ ಅರ್ಥವಾಗಿಲ್ಲ. ಪದೇ ಪದೇ ಪ್ರೇಕ್ಷಕನನ್ನು ಅಳಿಸಲು ಪ್ರಯತ್ನವನ್ನು ಮಾಡಿದಂತಿದೆ. "ಹೇಳಲೊಂಥರಾ ಥರಾ.." ಎಂಬ ಹಾಡನ್ನು ಬಿಟ್ಟರೆ ಬೇರ್ಯಾವುದೂ ಬೇಕೆಂದರೂ ನೆನಪಾಗುವುದಿಲ್ಲ.!!

ಸೆಂಟಿಮೆಂಟ್ ಗಳನ್ನು ಇಷ್ಟ ಪಡೋವ್ರಾದ್ರೆ, ಗಂಭೀರವಾಗಿ ನೋಡೋವ್ರಾದ್ರೆ, ಡೀಸೆಂಟಾದ ಚಿತ್ರವೊಂದನ್ನು ನೋಡಬೇಕಾಗಿದ್ರೆ, ಮಾಡಲು ಬೇರೆ ಏನೂ ಕೆಲಸ ಇಲ್ಲಾಂದ್ರೆ ಇನ್ನು ನಾಲ್ಕು ದಿನದೊಳಗೆ ಚಿತ್ರ ನೋಡಿಕೊಂಡು ಬನ್ನಿ. ಆಮೇಲೆ ಯಾವ ಟಾಕೀಸಿನಲ್ಲೂ ಇರೋಲ್ಲ ಅಂತ ಖಾತ್ರಿ ಇದೆ. ಇಲ್ಲಾಂದ್ರೆ ಸುಮ್ನೆ ನಮ್ಮ ಹಾಗೆ ಒಂದು ಮುಸ್ಸಂಜೆ ಹಾಳು ಮಾಡ್ಕೋಬೇಡಿ. ನನ್ನನ್ನು ಕರೆದುಕೊಂಡು ಹೋಗಿದ್ದ ಗೆಳೆಯರು ಅರ್ಧಗಂಟೆ ಮೊದಲೇ ಎದ್ದುಹೋಗಿ ಬಚಾವಾಗಿ ಬಿಟ್ಟರು ! Smiling

ಅಂದ ಹಾಗೆ ಮರೆತುಬಿಟ್ಟಿದ್ದೆ , ಈ ಬರಹದ ಮೊದಲಲ್ಲಿ ಹೇಳಿದ ಮಾತಿದೆಯಲ್ಲ ಅದು ನಂದಲ್ಲ, ಅದೂ ಕೂಡ ಸಿನೆಮಾದಲ್ಲಿ ಸುದೀಪ ಹೇಳಿದ್ದು. ಚೆನ್ನಾಗಿದೆ ಅಲ್ವಾ? Smiling

ಬೆಂಕಿಬೀಳಲಿ ಆ ಟೈಮ್ಸಾಫಿಂಡಿಯಾಗೆ ಮತ್ತು ಅದರ ರೇಟಿಂಗಿಗೆ.

  • ಚಲನಚಿತ್ರ
~.~
  • vikashegde ರವರ ಬ್ಲಾಗ್
  • Login or register to post comments
  • 726 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 19, 2008 - 2:51pm — mahesha

ಉ: "ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

mahesha's picture

ಅಯ್ಯೋ ಪಾಪಾ...

’ಸಂಧ್ಯಾವಚನ’ ಎಂದು ಹೆಸರು ಇಟ್ಟಿದ್ರೆ ಸಕ್ಕತ್ ಸಿನಿಮ ಅಂತ ಬರೆತಿದ್ದಿ ಅಲ್ವ.. !! Smiling

ಅವ್ ಅವ್!! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 19, 2008 - 2:56pm — vikashegde

ಉ: "ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

vikashegde's picture

ಅವ್ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 10:59am — kavita

ಉ: "ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

kavita's picture

ನೆಕ್ಸ್ಟ್ ವೀಕೆಂಡ್ ಈ ಫಿಲ್ಮ್‌ಗೆ ಹೋಗೋಣ ಅಂತ ಪ್ಲಾನ್ ಮಾಡ್ತಾ ಇದ್ದೇ. ಥ್ಯಾಂಕ್ಸ್ ಮೊದಲೇ ಎಚರ ಕೊಟ್ಟಿಡಕ್ಕೆ. ಎಲ್ಲ ಅಂದಿದ್ರೆ ಪೋಸ್ಟರ್ಸ್ ನೋಡಿ ನಾನು ಮರುಲಾಗಿ ಬಿಡುತಿದ್ದೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏನದು ಎಕ್ಸ್ ಪೆಕ್ಟೇಷನ್ನು?
  • ಏನದು ಎಕ್ಸ್ ಪೆಕ್ಟೇಷನ್ನು??
  • ಆಹ ಎಂತ ಮಧುರ ಯಾತನೆ ....
  • ಮುಂಗಾರು ಮಳೆ v/s ಚಿಗುರಿದ ಕನಸು
  • "ಗಾಳಿಪಟ" ಹಾರಿಸಬಹುದು.......!!!
Syndicate content

ಲೇಖಕರು

vikashegde's picture

ಪೂರ್ಣ ಹೆಸರು
ವಿಕಾಸ್ ಹೆಗಡೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator