ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಬಹುಶ: ಈ ಕೆಟ್ಟ ಟ್ರೆಂಡನ್ನು ಶುರು ಮಾಡಿದವರು ಯೋಗರಾಜ ಭಟ್ಟರೇ ಇರಬೇಕು. ಕನ್ನಡ ಚಿತ್ರದ ಹೆಸರಿನ ಜೊತೆ ಹಿಂದಿ ಪದವನ್ನೊಳಗೊಂಡ ಒಂದು ಉಪಶೀರ್ಷಿಕೆ ಕೊಡುವುದು. ಮುಂಗಾರು ಮಳೆ ಜೊತೆಗೆ "ಹನಿ ಹನಿ ಪ್ರೇಮ್ ಕಹಾನಿ" ಎಂದು ಇಟ್ಟಿದ್ದರು. ಚಿತ್ರ ಹಿಟ್ಟಾಯಿತು. ನಮ್ಮ ಕನ್ನಡ ಚಿತ್ರ ರಂಗದವರು ಹೇಗಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಎಲ್ಲರೂ ಶುರು ಹಚ್ಚಿಕೊಂಡರು ಇಂತಹ ಉಪಶೀರ್ಷಿಕೆ ಗಳಿಡುವುದನ್ನು. ನಂತರ ಬಂದ ಗಾಳಿಪಟ ಚಿತ್ರದಲ್ಲೂ "ಮನದ ಮುಗಿಲಲ್ಲಿ ಮೊಹಬ್ಬತ್ " ಎಂದಿಟ್ಟರು ಭಟ್ಟರು. ’ನಂದ ಲವ್ಸ್ ನಂದಿತ’ ಎಂಬ ಚಿತ್ರದಲ್ಲೂ " ಪಾತಕ ಲೋಕದಲ್ಲೊಂದು ಮೊಹಬ್ಬತ್ " ಎನ್ನುವ ಸ್ಲೋಗನ್ನು. ಇದೀಗ ’ತಾಜ್ ಮಹಲ್ ’ ಎಂಬ ಚಿತ್ರದ ಪೋಸ್ಟರುಗಳಲ್ಲಿ ಹೆಸರಿನ ಜೊತೆ "ಕಣ್ ನೀರಿನ ಕಹಾನಿ" ಎನ್ನುವ ಸ್ಲೋಗನ್ನು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಕರ್ನಾಟಕದ ಯಾವ ಭಾಗದಲ್ಲೂ ಬಳಸದ ’ದುನಿಯಾ’, ’ಜಿಂದಗಿ’ ಎಂಬ ಹಿಂದಿ ಪದಗಳ ಹೆಸರಿನಿಂದ ಕನ್ನಡ ಚಿತ್ರಗಳು ತಯಾರಾಗಿವೆ/ತಯಾರಾಗುತ್ತಿವೆ.
ಮೊದಲು "ಮಂಡ್ಯ - the land of masses" ಎನ್ನುವಂತಹ ವಿಲಕ್ಷಣ ಸ್ಲೋಗನ್ನುಗಳ ಜೊತೆಗೆ ತೆರೆಗೆ ಬರುತ್ತಿದ್ದ ಕನ್ನಡ ಚಿತ್ರಗಳಿಗೆ ಈಗ ಮೊಹಬ್ಬತ್, ಕಹಾನಿ ಎನ್ನುವ ಹಿಂದಿ(ಉರ್ದು?) ಪದಗಳನ್ನುಳ್ಳ ಸ್ಲೋಗನ್ನುಗಳಿಡುವ ಹೊಸ ಟ್ರೆಂಡು ಶುರುವಾಗಿದೆ.
ಎಲ್ಲದಕ್ಕಿಂತಲೂ ಮುಂದೆ ಹೋಗಿ ಯಾವನೋ ಒಬ್ಬ ಶಿವಣ್ಣನನ್ನು ಹಾಕಿಕೊಂಡು " ಪರಮೇಶ ಪಾನ್ ವಾಲಾ" ಎನ್ನುವ ದರಿದ್ರ ಹೆಸರಿನ ಸಿನೆಮಾ ತೆಗೆಯಲು ಮುಂದಾಗಿದ್ದಾನೆ. ಶಿವಣ್ಣ ಅದು ಹೇಗೆ ಒಪ್ಪಿಕೊಂಡರೋ ಏನೋ, ಶಾರುಖ್ ಖಾನನ ದೇಹಕ್ಕೆ ಶಿವಣ್ಣ ನ ಮುಖ ಅಂಟಿಸಿರುವ ಚಿತ್ರದ ಪೋಸ್ಟರುಗಳು ಊರ ತುಂಬ ರಾರಾಜಿಸುತ್ತಾ ಹಿಂದಿಯನ್ನು, ಹಿಂದಿ ಜನರನ್ನು ತಲೆ ಮೇಲೆ ಹೊತ್ತುಕೊಳ್ಳುವ ಕನ್ನಡಿಗರ ಕೀಳರಿಮೆಗೆ ಸಾಕ್ಷಿಯಾಗಿವೆ.

- vikashegde ರವರ ಬ್ಲಾಗ್
- Login or register to post comments
- 519 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ನನಗೆ ನೆನಪಿರೊ ಹಾಗೆ 'ಎ' ಚಿತ್ರ ಸಬ್ ಟೈಟಲ್ ಹಾಕಿದ ಮೊದಲ ಚಿತ್ರ..ಅದ್ರೆ ಅದರ ಸಬ್ ಟೈಟಲ್ ಕನ್ನಡದಲ್ಲೆ ಇತ್ತು: 'ಬುದ್ಧಿವಂತರಿಗೆ ಮಾತ್ರ' ಅಂತ
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಬುದ್ದಿ, ಮಾತ್ರ - ಇವು ಸಕ್ಕದದ ಒರೆಗಳು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಹೌದು ಹೆಗಡೆಯವರೆ, ಈ ರೀತಿ ಕೆಟ್ಟ ಚಾಳಿ ಕನ್ನಡ ಚಿತ್ರರಂಗಕ್ಕೆ ತರವಲ್ಲ. ಇದು ಬದಲಾಗಬೇಕು.
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಲೋ ಎಗಡೆ...
ನೀನೇ ಅಲ್ವ ಕನ್ನಡ ಏಕೀಕೃತವಾದುದು ಸಂಸ್ಕೃತದಿಂದ ಅಂತ ಅಂದಿದ್ದು...
ಇಂದು ಹಿಂದಿ, ಸಂಸ್ಕೃತದ ಮರಿ ಅದರ ಪದ ಬಳಕೆ... ದೊಡ್ಡ ಪಾಪಾ...
ಓ ಅಯ್ ಸೀ.. ಅಪಭ್ರಂಶ.. ಸಂಸ್ಕೃತದಶ್ಟು ಪ್ಯೂರಲ್ಲ.. ಹಿಂದಿ
ನೀನೋ ನಿನ್ facist ಸಂಸ್ಕೃತ ಮಯ್‌ನ್‌ಡೋ...
ಹನಿ ಹನಿ ಪ್ರೇಮ್ ಕಾಹಾನಿ.. ನಿನ್ ಸಂಸ್ಕೃತದ ಪ್ರೇಮ ಇದೆಯಲ್ಲ.. ಇನ್ನೂ ಕಹ್ ಇದು ಕಥ್ ಅನ್ನೋದ ಅಪಭ್ರಂಶ.....
ಆ ಹಾಳು ಕೆಟ್ಟಚಾಳಿ ಕನ್ನಡಕ್ಕೆ ನಿನಂತ ಸಂಸ್ಕೃತಪ್ರೇಮಿಗಳು
ಬಂದು ವಕ್ಕರಿಸಿದಾಲೇ ಸುರುವಾಯ್ತು... ನೀವು ಸಂಸ್ಕೃತ ಪ್ರೇಮಿಗಳು ಯಾವತ್ತು ಕನ್ನಡ ಬಿಟ್ಟು ತೊಲಗ್ತೀರ?
=====================================
ಮಾಯ್ಸ!
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯಕ್ಕೂ ಮನ್ನಣೆಯಿದೆ. ಅದಕ್ಕೇ ಅಲ್ಲವೇ ಹೆಂಡ ಕುಡಿದವರೂ, ತಲೆ ತಿರುಕರೂ ಮತ ಹಾಕಿ ಸರ್ಕಾರ ಚುನಾಯಿಸುತ್ತಾರೆ.
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ವಿಕಾಸ್...
ಪ್ರಭುತ್ವವೇ ಇಲ್ಲದ ಪ್ರಜೆಗಳ ಪ್ರಜಾಪ್ರಭುತ್ವ ಅಂತ ಯಾರೋ ಸ್ವಘೋಷಿತ ಪ್ರಾಜ್ಞರ ನಮ್ ದೇಶಾಡಳಿತ ಪದ್ದತಿಯ ಬಗ್ಗೆ ಟೀಕೆ....
ಏನೊಪ್ಪ.. ಏಲ್ರೂ ನನ್ನ ನಿನ್ನ ಹಾಗೆ ಬುದ್ದಿವಂತರೂ, ನೀತಿವಂತ... ವಂತರು.. ವಂತರು ಆಗಿರಲೇ ಬೇಕಾ/?
=====================================
ಮಾಯ್ಸ!
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಇಲ್ಲ ಮಹೇಶ್, ನಿಮ್ಮ ಹಾಗೆ ಕೂಡ ಇರಬಹುದು
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ನನ್ನ ಕಮೆಂಟು ನೀನು ಸರಿಯಾಗಿ ಓದಿಲ್ಲ.. ಮತ್ತೆ ಓದು...
ನಂಗೆ ಗೊತ್ತಿತ್ತು.. ಅತುರಗೆಟ್ಟ ಅಂಜನೇಯ ನೀನು ಅಂತ
=====================================
ಮಾಯ್ಸ!
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಬಲ್ ನನ್ ಮಗ ನೀನು...
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
=====================================
ಮಾಯ್ಸ!