ಅಕ್ಷರವಿಹಾರ
ಮಲೆನಾಡ ಮಡಿಲಿನಿಂದ ಹೊರಟ ವಾಕಿಂಗು...
ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಮಹಿಳಾ ಮೀಸಲಾತಿ ಇನ್ನೂ ಅನಿವಾರ್ಯವೇ? ಹೀಗೊಂದು ಪ್ರಶ್ನೆ ನನ್ನ ತಲೆಯಲ್ಲಿ ಗಿರಕಿ ಹೊಡೆಯಲು ಪ್ರಾರಂಭಿಸಿದ್ದು ಮೊನ್ನೆ ಬಸಲ್ಲಿ ಕುಳಿತಿದ್ದ ನನ್ನನ್ನು ಇದು ಲೇಡೀಸ್ ಸೀಟು ಸಾರ್ ಎಂದು ಮಹಿಳೆಯೊಬ್ಬಳು ಎಬ್ಬಿಸಿದ ನಂತರ!ಥಟ್ಟನೆ ಅಕ್ಕ ಗುನುಗುತ್ತಿದ್ದ ಮಹಿಳೆಗೆ ಎಷ್ಟೇ ಮೀಸಲಾತಿ ಕೊಟ್ಟರೂ ಅತ್ತೆ ಮನೆಯಲ್ಲಿ ದಬ್ಬಳಿಕೆ ಸಹಿಸಿಕೊಂಡು ಇರುವ ಮಹಿಳೆಗೆ ಆ ಸಂಕೋಲೆಯಿಂದ ಹೊರಬಂದು ಮೀಸಲಾತಿ ಉಪಯೋಗಿಸಿಕೊಳ್ಳುವುದು ತುಂಬಾನೇ ಕಷ್ಟ ಅನ್ನೋ ಡೈಲಾಗ್ ನೆನಪಾಯಿತು!ಅತ್ತೆ ಮನೆಯಲ್ಲಿ ಸಂಕಷ್ಟ ಇರೋ ಮಹಿಳೆಗೆ ಮೀಸಲಾತಿ ಉಪಯೋಗ ಆಗೋದು ಬಸ್ಸಿನ ಸೀಟಲ್ಲಿ ಮಾತ್ರ ಅನ್ನಿಸಿತು!
ಅಂದಹಾಗೇ ಕಲಿಯುಗವಪ್ಪಾ ಅಂತಾ ಕರೆಯುವ ಈ ಕಾಲದಲ್ಲೂ ಮಹಿಳೆಗೆ ಮೀಸಲಾತಿ ಬೇಕಾ? ಮೀಸಲಾತಿ ಅನ್ನೋ ಪದದ ಅರ್ಥವೇ ಕೆಳವರ್ಗದ ಜನರನ್ನು ಮೇಲಕ್ಕೆ ತರುವುದಂತೆ! ಮಹಿಳೆ ಕೆಳವರ್ಗಕ್ಕೆ ಸೇರಿದವಳಾ? ಒಂದು ಕಾಲದಲ್ಲಿ ಸೌಟು ಹಿಡಿದು ಅಡುಗೆ ಮನೆಯಲ್ಲಿ ಕುಳಿತ್ತಿದ್ದ ಮಹಿಳೆ ಇಂದು ಎಲ್ಲಾ ರಂಗಕ್ಕೂ ಕಾಲಿಟ್ಟಿದ್ದಾಳೆ. ಯಾವ ರಂಗದಲ್ಲೂ ತಾನು ಪುರುಷನಿಗಿಂತ ಕಡಿಮೆಯಲ್ಲ ಅನ್ನೋದನ್ನ ಸಾಬೀತು ಪಡಿಸಿದ್ದಾಳೆ. ಎಲ್ಲದರಲ್ಲೂ ಅಂದರೆ ಕುಡಿತ, ಸಿಗರೇಟು ಸೇದುವುದು, ಕ್ಲಬ್‌ಗೆ ಹೋಗುವುದರಿಂದ ಹಿಡಿದು ಐ.ಪಿ.ಎಸ್ ಅಧಿಕಾರಿಯಾಗುವವರೆಗೂ! ಹೀಗಿರುವಾಗ ನಾವಿನ್ನೂ ಆಕೆಯನ್ನು ಹಿಂದುಳಿದವಳು ಅಂತಾ ಟ್ರೀಟ್ ಮಾಡೋದು ಸರಿನಾ?!
ಒಂದು ಕಾಲದಲ್ಲಿ ಮಾವನ ಮನೆಯ ಕೂಪದಿಂದ ಹೊರಬರುತ್ತಿರಲ್ಲಿಲ್ಲ ಮಹಿಳೆ, ಗಂಡನನ್ನೇ ದೇವರು ಅಂತಾ ಆರಾಧಿಸುತ್ತಿದ್ದಳು. ಅವ ಎಂಥಾ ಗಂಡನಾದರೂ ಕೂಡಾ! ಆದರೆ ಇವತ್ತು ಆಕೆ ಆ ಕೂಪದಿಂದ ಹೊರಬಂದಿದ್ದಾಳೆ. ತನ್ನ ಹಕ್ಕುಗಳ ಕುರಿತಾಗಿ ಅರಿತುಕೊಳ್ಳುವಷ್ಟರ ಮಟ್ಟಿಗೆ ಬೆಳೆದುನಿಂತಿದ್ದಾಳೆ. ಗಂಡನ್ನ ಬಿಟ್ಟು ಕೂಡಾ ಇದೇ ಪ್ರಪಂಚದಲ್ಲಿ ಬದುಕಬಹುದು ಅನ್ನುವ ವಿಚಾರವೊಂದು ಅವಳಿಗೆ ಗೊತ್ತಾಗುವಷ್ಟರ ಮಟ್ಟಿಗೆ ಆಕೆ ಮುಂದಿವರೆದಿದ್ದಾಳೆ. ಇಂತಹ ಮಹಿಳೆಯನ್ನು ನಾವು ಇನ್ನೂ ಹಿಂದುಳಿದವಳು, ಮುಂದೆ ಬರಲು ಮೀಸಲಾತಿ ಬಯಸುವವಳು ಅಂತೆಲ್ಲಾ ಶೋಷಿಸುವುದು ಸರಿನಾ?
ಪ್ರತಿಭೆಯಿದ್ದು ಬೆಳೆಯುವ ತಾಕತ್ತಿರುವ ಮಹಿಳೆಗೆ ಮೀಸಲಾತಿಯ ಅಗತ್ಯವಿಲ್ಲ ಅನ್ನುವುದು ಮಹಿಳೆಯರೇ ಒಪ್ಪುತ್ತಾರೆ. ಇನ್ನೂ ಇವತ್ತಿಗೂ ಅತ್ತೆ ಮನೆ ಅಂಗಳದಲ್ಲಿ ಕೊಳೆಯುವ ಮಹಿಳೆಗೆ ಅಕ್ಕಾ ಹೇಳಿದ ಹಾಗೇ ಮೀಸಲಾತಿ ಕೊಟ್ಟರೂ ಪ್ರಯೋಜನವಿಲ್ಲ. ಒಟ್ಟಲ್ಲಿ ಹೇಳೋದಾದರೆ ಸ್ವಾಭಿಮಾನಿ ಅನ್ನಿಸಿಕೊಂಡಿರುವ ಮಹಿಳೆಯರಿಗೆ ಮೀಸಲಾತಿ ಕೊಡುವುದು ಅವಮಾನವೀಯ ಸಂಗತಿ. ಯಾವುದೋ ಅನುಕಂಪದ ಮೇಲೆ ಕರುಣೆಯ ಮೇಲೆ ತಾನು ಮುಂದುಬರುವುದನ್ನು ಯಾರು ಬಯಸುತ್ತಾರೆ ಹೇಳಿ? ಎಲ್ಲರಿಗೂ ಒಂಚೂರಾದರೂ ಸ್ವಾಭಿಮಾನ ಇರತ್ತೆ ಅಲ್ವಾ?
ಮೀಸಲಾತಿಯ ಹಂಗಿಲ್ಲದೇ ಯಾರದ್ದು ಕರುಣೆ ಅನುಕಂಪಗಳಿಲ್ಲದೇ ಬೆಳೆದು ನಿಂತಿರುವ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ.ಅಂತಹವರನ್ನು ಮುಂದಿಟ್ಟುಕೊಂಡು ಕೂಡಾ ನಾವು ಇನ್ನೂ ಮೀಸಲಾತಿ ದಾಸರಾಗಿರುವುದು ಎಷ್ಟು ಸಮಂಜಸ? ಪಕ್ಷದವರು ಟಿಕೇಟ್ ಕೊಡಲಿಲ್ಲ ಅಂತಾ ಕೂಗಾಡುವುದು ಎಷ್ಟು ಸರಿ? ಅನ್ನೋದನ್ನಾ ಮಹಿಳಾವಾದಿಗಳಾದ ಪ್ರಮೀಳನೇಸರ್ಗಿ, ಲಲಿತಾ ನಾಯಕ್‌ರಂತಹವರನ್ನೇ ಕೇಳಬೇಕು! ಅಂದಹಾಗೇ ಆ ಮಹಿಳಾ ವಾದಿಗಳೆಲ್ಲಾ ಬೆಳೆದಿದ್ದು ಮೀಸಲಾತಿಯಿಂದಾನೂ ಅಲ್ಲ. ಪ್ರತಿಭೆಯಿಂದಾನೂ ಅಲ್ಲ. ಮತ್ತ್ಯಾವುದರಿಂದ ಅಂತಾ ಪ್ರತ್ಯೇಕವಾಗಿ ಹೇಳೋದು ಬೇಡ ಅಲ್ವಾ?!

- vinayaka ರವರ ಬ್ಲಾಗ್
- Login or register to post comments
- 305 hits
- Email this blog




RSS:
ಪ್ರತಿಕ್ರಿಯೆಗಳು
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
>> "ಮೀಸಲಾತಿ ಅನ್ನೋ ಪದದ ಅರ್ಥವೇ ಕೆಳವರ್ಗದ ಜನರನ್ನು ಮೇಲಕ್ಕೆ ತರುವುದಂತೆ! ಮಹಿಳೆ ಕೆಳವರ್ಗಕ್ಕೆ ಸೇರಿದವಳಾ?"
ಯೋಗ್ಯತೆ/ಅರ್ಹತೆ ಇದ್ದೂ ಅವಕಾಶಗಳ ಕೊರತೆಯಿಂದ ಹಿಂದುಳಿದವರಿಗೆ ಅವಕಾಶ ಕಲ್ಪಿಸೋಕೆ ಮೀಸಲಾತಿ ವ್ಯವಸ್ಥೆ ಇದೆ ಅಂತ ನನ್ನ
ಅನಿಸಿಕೆ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಜಾತಿ, ಲಿಂಗಾಧಾರಿತ ಮೀಸಲಾತಿಗಿಂತ ಗ್ರಾಮಸ್ಥರಿಗೆ ಮೀಸಲಾತಿ ಅಗತ್ಯ ಎಂಬುದು ನನ್ನ ಇಂಗಿತ.
ಏಕೆಂದರೆ ಗ್ರಾಮ, ಕುಗ್ರಾಮಗಳಿಂದ ನಗರಕ್ಕೆ ವಲಸೆ ಬರುವವರು ಹೆಚ್ಚಾಗಿ ವ್ಯವಸಾಯ/ತೋಟಗಾರಿಕೆ ನಶಿಸುತ್ತಿದೆ. ಹಾಗಾಗಿ ಗ್ರಾಮೀಣರಿಗೆ ಉತ್ತೇಜನ ಬೇಕು ಅಲ್ಲವೇ?
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಮೀಸಲಾತಿ ಬೇಕೆ ಬೇಕು ನೀವು ಹೇಳಿದ ಬಸ್‌ನಿಂದ ಹಿಡಿದು ಚುನಾವಣೆಯ ಟಿಕೆಟ್ ಸಿಗುವ್ವರೆಗೆ
ನೈಸರ್ಗಿಕವಾಗಿಯೆ ಹೆಣ್ಣು ದೈಹಿಕವಾಗಿ ದುರ್ಬಲಳು (ಕೆಲವರನ್ನು ಹೊರತು ಪಡಿಸಿ) . ಅದರ ಜೊತೆಗೆ ತಿಂಗಳ ತೊಂದರೆ, ಅದೂ ಇದು ಎಂದು ಕೆಲವು ತೊಂದರೆಗಳನ್ನು ಸೃಷ್ಟಿಯಿಂದಲೇ ಬಳುವಳಿಯಾಗಿ ಪಡೆದವಳು.
ಬಸ್ನಲ್ಲಿ ಎಂತಹ ನೂಕು ನುಗ್ಗಲಿದ್ದರೂ ಎಲ್ಲರನ್ನೂ ತಳ್ಳಿ ಕೂರುವಂತಹ ಒರಟು ಸ್ವಭಾವ ಗಂಡಸರಿಗಿದೆ. ಹೆಣ್ಣು ಹಾಗಲ್ಲ. ಹೆಣ್ಣು ಹುಟ್ಟಿನಿಂದಲೆ ನಾಜೂಕು. ಅಲ್ಲಿ Ladies seat ಬೇಕೆ ಬೇಕು.
ಇನೂ ಎಲೆಕ್ಷನ್ ನಲ್ಲಿ ಯಾವ ದಾರಿಯನ್ನಾದರೂ ಹಿಡಿದು ಟಿಕೆಟ್ ಗಿಟ್ಟಿಸಿಕೊಳ್ಳುವ ಗಂಡಸರ ನಡುವಲ್ಲಿ ಸಾಧನೆ ತೋರಬೇಕಾದರೆ ಹೆಣ್ಣನ್ನು ಗುರತಿಸಬೇಕು. ಅದಕ್ಕೆ reservation ಎನ್ನುವುದು ಇದ್ದರೆ ಮಾತ್ರ ಅದು ಸಾಧ್ಯ.
ಇದನ್ನು ಅನುಕಂಪ ಎನ್ನಲು ಸಾಧ್ಯವಿಲ್ಲ . ನಿಸರ್ಗ ಮಾಡಿದ ತಾರತಮ್ಯವನ್ನು ಸರಿಪಡಿಸಿಕೊಳ್ಳುವ ಹಕ್ಕಷ್ಟೆ
ಇದನ್ನು ಕಾಲೇಜ್ ನಲ್ಲೊ , ಕೆಲಸದಲ್ಲೋ ಮೀಸಲಾತಿಯೇನು ಬೇಕಾಗಿಲ್ಲ. ಅದನ್ನು ಹೆಣ್ಣು ತನ್ನ ಸ್ವಂತ ಪ್ರತಿಭೆಯಿಂದಲೇ ಗಳಿಸಿಕೊಳ್ಳಬಲ್ಲಳು.
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ತುಂಬಾ ಜಾಣತನದಿಂದ ತುಂಬಾ ಸಂಕುಚಿತ ದೃಷ್ಟಿಕೋನದ ವಾದ ಮುಂದಿಟ್ಟಿದೀರ! ಮೀಸಲಾತಿ ಕ್ಷಮತೆಯಿಲ್ಲದವರಿಗೆ ಕೊಡೋದಲ್ಲ, ಅದನ್ನ ’ಅವಮಾನವೀಯ’(ಹೊಸ ಪದ?) ಅನ್ನೋಕೆ! ಕ್ಷಮತೆಯಿದ್ದೂ ಹೊರಗಿನ ಕಾರಣಗಳಿಂದ ತನ್ನ ಸಾಮರ್ಥ್ಯ ತೋರಿಸೋಕೆ ತೊಡಕು ಕಾಣುತ್ತಿರೋವ್ರಿಗೆ ಅವಕಾಶ ಕಲ್ಪಿಸೋ ದಾರಿ ಮೀಸಲಾತಿ. "ಆ ಮಹಿಳಾ ವಾದಿಗಳೆಲ್ಲಾ ಬೆಳೆದಿದ್ದು ಮೀಸಲಾತಿಯಿಂದಾನೂ ಅಲ್ಲ. ಪ್ರತಿಭೆಯಿಂದಾನೂ ಅಲ್ಲ. ಮತ್ತ್ಯಾವುದರಿಂದ ಅಂತಾ ಪ್ರತ್ಯೇಕವಾಗಿ ಹೇಳೋದು ಬೇಡ ಅಲ್ವಾ?!" ಅನ್ನೋ ಅಂಥಾ ಮಟ್ಟದ ಮಾತುಗಳು ಹೆಂಗಸರ ಬಗ್ಗೆ ಕೇಳಿಬರೋದು ನಿಲ್ಲೋವರೆಗೂ ಮೀಸಲಾತಿಯೋ ಅಥ್ವಾ ಇನ್ಯಾವುದೇ ರೀತಿಯ ವಿಶೇಷ ಪ್ರೋತ್ಸಾಹವೋ ಬೇಕೇಬೇಕು. ಇದರ ಅವಶ್ಯಕತೆ ಹೆಣ್ಣುಮಕ್ಕಳ ಅಸಾಮರ್ಥ್ಯದ ಕಾರಣಕ್ಕಲ್ಲ, ಸಮಾಜದ ದೃಷ್ಟಿಕೋನದಲ್ಲಿ ಇರೋ ಪುರುಷವಾದ ಅನ್ನೋ ಕೆಟ್ಟರೋಗಕ್ಕೆ ಮದ್ದಾಗಿ!
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಮಹಿಳಾ ಮೀಸಲಾತಿ ಜಾರಿಗೆ ಬಂದ ಮೇಲೆ ಸಮಾಜದಲ್ಲಿ ಬಹಳಷ್ಟು ಮಾರ್ಪಾಡು ಆಗಿರುವುದು ನಿಜ. ಈಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಮೀಸಲಾತಿ ಬೇಕೆ-ಬೇಡವೆ ಎನ್ನುವ ಚರ್ಚೆಗಿಂತ ಸರ್ಕಾರ, ಈ ಮೀಸಲಾತಿಯನ್ನು ಎಷ್ಟು ಹೆಂಗಸರು ಉಪಯೋಗಿಸಿದ್ದಾರೆ, ಇದರಿಂದ ನಿಜಕ್ಕೂ ಉಪಯೋಗವಿದೆಯೇ ಎಂದು ಸರ್ವೆ ಮಾಡಿ ಅಂಕಿ-ಅಂಶಗಳನ್ನು ಬೆಳಕಿಗೆ ತರಬೇಕು.
ಹಾಗೇನೇ, ಜಾತಿ ಆಧಾರಿತ ಮೀಸಲಾತಿಯೂ ಬೇಕೆ ಎಂಬ ಪ್ರಶ್ನೆಗೂ ಉತ್ತರ ಬೇಕು. ಏಕೆಂದರೆ, ಸುಮಾರು ವರ್ಷಗಳ ಹಿಂದೆ, ನಮ್ಮ ಸರ್ಕಾರಿ ಕಾಲೇಜಿನ ಗ್ರಂಥಾಲಯದಲ್ಲಿ, ಎಸ್.ಎಸ್ಟಿ. ವಿದ್ಯಾರ್ಥಿಗಳಿಗೆಂದು ಎರಡು ತಿಜೋರಿಗಳ ತುಂಬಾ ಪಠ್ಯೆಪುಸ್ತಕಗಳನ್ನು ನೀಟಾಗಿ ಜೋಡಿಸಿಟ್ಟಿರುತ್ತಿದ್ದರು. ಅದನ್ನು ಬೇರೆಯವರು ಉಪಯೋಗಿಸುವಂತಿಲ್ಲ, ಆದರೆ ಮೀಸಲಾತಿ ವಿದ್ಯಾರ್ಥಿಗಳು ಅವುಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ! ಏಕೆಂದರೆ, ಕೇವಲ ಪಾಸಾದರೆ ಸಾಕು, ಅವರಿಗಾಗಲೇ ಸರ್ಕಾರಿ ಆಫೀಸಿನಲ್ಲಿ ಒಂದು ಉದ್ಯೋಗ ಖಾಯಂ ಆಗಿ ಕಾಯುತ್ತಿರುತ್ತಿತ್ತು
ಹಾಂ, ಇಲ್ಲೆಲ್ಲೂ ಮಹಿಳಾ ಮೀಸಲಾತಿ ಇರುತ್ತಿರಲಿಲ್ಲ.
ರೂಪಾರವರು ಹೇಳಿದಂತೆ ಬಸ್ಸಿನಲ್ಲಿ ಸೀಟು ಮಹಿಳೆಯರಿಗಾಗಿ ಮೀಸಲು ಇಡಲೇಬೇಕು. ಅವರು ಹೇಳಿದ ಕಾರಣಗಳನ್ನು ನಾನೂ ಒಪ್ಪುತ್ತೇನೆ.
ಕೊನೆಯಲ್ಲಿ, ಜಾತಿ-ಲಿಂಗ ಆಧಾರಿತ ಮೀಸಲಾತಿಗಳಿಗಿಂತ, ಆರ್ಥಿಕ ಹಿನ್ನೆಲೆ ಆಧಾರಿತ ಮೀಸಲಾತಿ ಸರಿಯೆನ್ನಿಸುತ್ತೆ.
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
@roopa
nimma vaadavannu naanu opputene. aadare esto sala busnalli mahileye magu hotta taayige seatu bittu koduvudilla. henni9ge hennina mele karune illavaadaaga itararinda adannu apekshisuvudu sarinaa? adalade atte mane mannu horuva hennige ee meesalaathiyinda enu prayojana? naanu jaathi aadaaritha meesalaathiya virodhi kooda. nammada jaathyaatheetha raastraa antha helutta naave jaathige imbu koduvudu sariyalla. aadru nimma think istavaayitu nange.
@shreemaatha
illi vaastava heliddene aste. jaanatanavenoo illa. nesargi, laleeta nayak belediddu hege anta kutuhalaviddare avaranne hogi kelibanni.
@vinay
meesalaathi andre idu anta yaaro hiriya jaatyateetha, dalitha para bhashanakaararu helida arthavadhu! bhasha shaasthrajyanru helo prakaara aa artha sariyaagiye idhe.
@kalpana
nimma pratikriyege melinavugalindale uttara sikkide anta bhavisuve
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಯಾವ್ದು ವಾಸ್ತವ?? ಹೆಣ್ಣುಮಕ್ಕಳು ಕಷ್ಟಪಟ್ಟು ಮುಂದೆ ಬಂದ್ರೆ ಇವ್ರೆಲ್ಲಾ ತಾವೇ ಉದ್ಧಾರ ಆಗ್ತಿದಾರೆ, ಅದಕ್ಕೆ ಸಮಾಜದ ನೆರವು ಬೇಡ ಅನ್ನೋದಾ?? ಮುಂದೆ ಬಂದ್ರು ಅಂದ ಮಾತ್ರಕ್ಕೆ ಅವರ ಹಾದಿ ಸರಳವಿತ್ತು ಅಂದುಕೊಂಡುಬಿಡೊದಾ? ಯಾರೋ ನಾಕು ಜನದ ಹೆಸರೆತ್ತಿ ಅವ್ರು ಅಡ್ಡಹಾದಿಯಿಂದ ಮುಂದೆಬಂದವ್ರು, ಅವ್ರೂ ಮೀಸಲಾತಿಬಗ್ಗೆ ಮಾತಾಡ್ತಾರೆ, ಆದ್ರಿಂದ ಮೀಸಲಾತಿ ಬೇಡ ಅನ್ನೋದಾ? ಕ್ಷಮತೆ, ಪರಿಸ್ಥಿತಿಗಳ ಪ್ರಶ್ನೆಗಳಿಗೆ ಉತ್ತರಿಸದೇ ಹೋಗೋದಾ? ಈ ಅಡ್ಡಹಾದಿ ಹಿಡಿಯೋ ಬಗೆಗಿನ ಮಾತುಗಳು ಬರೇ ಹೆಂಗಸರ ಬಗ್ಗೆ ಯಾಕೆ ಎತ್ತುತೀರಾ ಅಂತ ಯಾವತ್ತಾದ್ರೂ ಪ್ರಶ್ನಿಸಿಕೊಂಡಿದೀರಾ? ಅಲ್ಲಿ ನಿಮ್ಗೆ ನಿಮ್ಮ, ಸಮಾಜದ ಡಬಲ್ ಸ್ಟ್ಯಾಂಡರ್ಡ್ಸ್ ಕಾಣೋಲ್ವಾ??
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಶ್ರೀಮಾತೆಗೆ....
ಮಾತೆಯವರೆ ಲೇಖನದ ಚಿಂತನೆಯನ್ನು ಮತ್ತೊಮ್ಮೆ ಅವಲೋಕಿಸಿ ನೋಡಿ. ವಾಸ್ತವ ಯಾವುದು ಅಂತಾ ನಿಮಗೆ ಅರ್ಥವಾಗತ್ತೆ.ಯಾರೋ ಅಡ್ಡಹಾದಿ ಹಿಡಿದಿದ್ದಕ್ಕ್ವೆ ಮೀಸಲಾತಿ ಬೇಡ ಅಂದಿಲ್ಲ. ಅದರ ಸಾಧಕ ಬಾಧಕ ಚರ್ಚಿಸಿಯೇ ಬೇಡ ಅಂದಿದ್ದು. ಯಾವುದಕ್ಕೂ ಇಡಿ ಲೇಖನವನ್ನೊಮ್ಮೆ ಸಮಾಧಾನದಿಂದ ಕುಳಿತು ಓದಿ
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ವಿನಾಯಕರೇ,
ಸುಮ್ಮನೆ ಯಾವುದೋ ಲಹರಿಯಲ್ಲಿ ಈ ವಾದವನ್ನು ನೀವು ಅರೆಬೆಂದ ವೈಚಾರಿಕತೆಯಲ್ಲಿ ಮಂಡಿಸಿದ ಹಾಗಿದೆ.
ಮೀಸಲಾತಿ ಅಂದರೆ ಏನು ಎಂಬುದನ್ನು ಮೊದಲು ಸ್ಪಷ್ಟವಾಗಿಸಿಕೊಳ್ಳಿ. ‘ಸಮಾನ ಅವಕಾಶಗಳು’ ಎಂಬ ಆದರ್ಶವನ್ನು ಸಾಧಿಸುವುದಕ್ಕಾಗಿ ಈ ಮೀಸಲಾತಿ ಎಂಬುದು ಒಂದು ದಾರಿ. ಮೀಸಲಾತಿ ಅನುಕಂಪವಲ್ಲ, ಅವಕಾಶ ವಂಚಿತರ ಸಾಂವಿಧಾನಿಕ ಹಕ್ಕು. ಅದು ಯಾರೋ ಕೂತು ತಮ್ಮ ಮೆಹರುಬಾನಿಯಿಂದ ಮಂಜೂರು ಮಾಡುವ ಸವಲತ್ತು ಅಲ್ಲ.
ಇನ್ನು ಈ ಕಲಿಯುಗದಲ್ಲಿ ಮೀಸಲಾತಿ ಬೇಕೆ ಎಂದಿರುವುದು ನಿಮ್ಮ ಇಡೀ ಲೇಖನದ ಹಿಂದಿನ ಮನಸ್ಥಿತಿಯನ್ನು ತೋರುತ್ತದೆ. ನಿಮಗೆ ‘ಕಲಿಯುಗ’ವಾಗಿ ಬ್ರಿಗೇಡ್ ರೋಡ್, ಎಂ.ಜಿ ರೋಡ್, ಪಬ್‌ಗಳಲ್ಲಿನ ಲಲನೆಯರು ಇರುವ ಕಾಲವಾಗಿ ಕಾಣುತ್ತಿದ್ದರೆ ಅದು ನಿಮ್ಮ ದೃಷ್ಟಿಯಲ್ಲಿರುವ ದೋಷ. ಕೊಂಚ ಆ ಗ್ಲಾಮರ್‌ನಿಂದ ಹೊರಬನ್ನಿ, ಹೆಣ್ಣನ್ನು ಸೆಕೆಂಡ್ ಸೆಕ್ಸ್ ಎಂತಲೇ ಕಾಣುವ ಮನಸ್ಥಿತಿ ಎಲ್ಲಾ ಸಮಾಜಗಳಲ್ಲೂ ಇದೆ. ಇದಕ್ಕೆ ಮುಂದುವರಿದ ಪಾಶ್ಚಿಮಾತ್ಯ ಸಮಾಜವೇ ನಿದರ್ಶನ. ಹೇಳಿ, ರಾಜಕೀಯದಲ್ಲಿ ಎಷ್ಟು ಮಂದಿ ಮಹಿಳೆಯರಿಗೆ ಸ್ಥಾನ ಸಿಕ್ಕುತ್ತದೆ ಮೀಸಲಾತಿ ಇರದಿದ್ದರೆ? ಇನ್ನು ಶಕ್ತಿಯಿದ್ದವರು ಬಡಿದಾಡಿ ಪಡೆಯಬೇಕು ಎನ್ನುವುದು ಪ್ರಾಣಿ ಜಗತ್ತಿನ ನಿಯಮವಾಗುತ್ತದೆ... ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ವಾಸ್ತವ ಯಾವ್ದು ಅಂತ ನಿಮ್ಮ ಲೇಖನದಲ್ಲಿ ಇಲ್ಲ ಅನ್ನಿಸಿದ್ದಕ್ಕೇ ಆ ಪ್ರಶ್ನೆಗಳನ್ನೆತ್ತಿದ್ದು. ನಿಮ್ಗೆ ಅದಕ್ಕೆ ಉತ್ತರ ನನ್ನ ಸಮಾಧಾನದಲ್ಲಿದೆ ಅನ್ನಿಸಿದ್ರೆ ನಾನೇನ್ ಮಾಡ್ಲಿ?!
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಸುಪ್ರೀತ್
ಶ್ರಿಯುತರೇ ಮೀಸಲಾತಿ ಅವಕಾಶವಂಚಿತರ ಸಾಂವಿಧಾನಿಕ ಹಕ್ಕು ಅಂತಾದರೆ ಅದನ್ನು ಮಹಿಳೆ, ದಲಿತರಿಗೆ ಮೀಸಲಾಗಿಡುವುದೇಕೆ? ಸಮಾಜದ ಎಲ್ಲಾ ವರ್ಗದ ಅವಕಾಶವಂಚಿತರಿಗೂ ನೀಡಲಿ. ಮೀಸಲಾತಿ ಎಮ್ಬುದು ಖಂಡಿತಾ ಸಮಾನ ಅವಕಾಶ ಸಾಧಿಸುವ ಹಾದಿಯಲ್ಲ. ಹಾಗೆಲ್ಲಾದರೂ ಉಲ್ಲೇಖವಿದ್ದರೆ ಅದನ್ನು ದಯವಿಟ್ಟು ತೋರಿಸಿ. ಸಮಾನ ಅವಕಾಶ ಸಾಧಿಸುವ ಹಾದಿಗೆ ಸಮಾಜವಾದ ಅಂತಾ ಅನ್ನುತ್ತಾರೆ ಎಂಬುದು ನನ್ನ ತಿಳುವಳಿಕೆ. ಇಲ್ಲಿ ಕೇವಲ ಕಲಿಯುಗವನ್ನು ಪರಿಗಣಿಸಿಲ್ಲ. ಅತ್ತೆಮನೆಯೆಂಬ ಶಿಲಾಯುಗದಲ್ಲಿರುವ ಹೆಣ್ಣಿನ ಸ್ಥಿತಿಯನ್ನು ಪ್ರಸ್ತಾಪಿಸಿದ್ದೇನೆ. ಲೇಖನವನ್ನು ಇನ್ನೊಮ್ಮೆ ಓದಿ ಬರಹಗಾರ ಹೆಳಲು ಹೊರಟ್ಟಿದ್ದೇನು ಅಂತಾ ಇನ್ನೊಮ್ಮೆ ಅವಲೋಕಿಸಿ.
ಮಹಿಳೆಗೆ ರಾಜಕೀಯ ಬೇಡ ಅನ್ನುವುದು ನನ್ನ ವಾದವಲ್ಲ. ಅದನ್ನು ತೀರಾ ಅಸಹ್ಯವಾಗಿ ಆಕೆ ಪಡೆಯುವುದು ಬೇಡ. ಭಾರತ ಇನ್ನು ಬ್ರಿಟನ್ ಆಗಿಲ್ಲ. ಆಗುವುದು ಬೇಡ.
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ಸುಪ್ರೀತ್
ಶ್ರಿಯುತರೇ ಮೀಸಲಾತಿ ಅವಕಾಶವಂಚಿತರ ಸಾಂವಿಧಾನಿಕ ಹಕ್ಕು ಅಂತಾದರೆ ಅದನ್ನು ಮಹಿಳೆ, ದಲಿತರಿಗೆ ಮೀಸಲಾಗಿಡುವುದೇಕೆ? ಸಮಾಜದ ಎಲ್ಲಾ ವರ್ಗದ ಅವಕಾಶವಂಚಿತರಿಗೂ ನೀಡಲಿ. ಮೀಸಲಾತಿ ಎಮ್ಬುದು ಖಂಡಿತಾ ಸಮಾನ ಅವಕಾಶ ಸಾಧಿಸುವ ಹಾದಿಯಲ್ಲ. ಹಾಗೆಲ್ಲಾದರೂ ಉಲ್ಲೇಖವಿದ್ದರೆ ಅದನ್ನು ದಯವಿಟ್ಟು ತೋರಿಸಿ. ಸಮಾನ ಅವಕಾಶ ಸಾಧಿಸುವ ಹಾದಿಗೆ ಸಮಾಜವಾದ ಅಂತಾ ಅನ್ನುತ್ತಾರೆ ಎಂಬುದು ನನ್ನ ತಿಳುವಳಿಕೆ. ಇಲ್ಲಿ ಕೇವಲ ಕಲಿಯುಗವನ್ನು ಪರಿಗಣಿಸಿಲ್ಲ. ಅತ್ತೆಮನೆಯೆಂಬ ಶಿಲಾಯುಗದಲ್ಲಿರುವ ಹೆಣ್ಣಿನ ಸ್ಥಿತಿಯನ್ನು ಪ್ರಸ್ತಾಪಿಸಿದ್ದೇನೆ. ಲೇಖನವನ್ನು ಇನ್ನೊಮ್ಮೆ ಓದಿ ಬರಹಗಾರ ಹೆಳಲು ಹೊರಟ್ಟಿದ್ದೇನು ಅಂತಾ ಇನ್ನೊಮ್ಮೆ ಅವಲೋಕಿಸಿ.
ಮಹಿಳೆಗೆ ರಾಜಕೀಯ ಬೇಡ ಅನ್ನುವುದು ನನ್ನ ವಾದವಲ್ಲ. ಅದನ್ನು ತೀರಾ ಅಸಹ್ಯವಾಗಿ ಆಕೆ ಪಡೆಯುವುದು ಬೇಡ. ಭಾರತ ಇನ್ನು ಬ್ರಿಟನ್ ಆಗಿಲ್ಲ. ಆಗುವುದು ಬೇಡ.