ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

B-A-D ಹಾಗೂ ರಾಜಕಾರಣ

ದೆಹಲಿಯಲ್ಲಿ ಮೊನ್ನೆ ಬಾಂಬ್ ಬ್ಲಾಸ್ಟ್ ಆಗಿರೋದು ನಮ್ಮೆಲ್ಲರಿಗೂ ಗೊತ್ತೇ ಇದೆ.... ಆದರೆ ನನಗ್ಯಾಕೋ ಕೆಲವರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅಂತ ಅನಿಸ್ತಿದೆ...

೧. ಬೆಂಗಳೂರಿನಲ್ಲಿ ಸ್ಫೋಟವಾದಾಗ ಮಾನ್ಯ(?) ಕೇಂದ್ರ ಗೃಹಮಂತ್ರಿಯವರು ಒಂದು ಹೇಳಿಕೆ ಕೊಟ್ಟಿದ್ದರು : "ಇದರಬಗ್ಗೆ ನಾವು ಕರ್ನಾಟಕ ಸರ್ಕಾರಕ್ಕೆ ಮೊದಲೇ ಸೂಚನೆ ನೀಡಿದ್ದೆವು, ಆದರೆ ಕರ್ನಾಟಕ ಸರ್ಕಾರ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು".
=> ಕರ್ನಾಟಕ ಸರ್ಕಾರ ಅದನ್ನು ನಿರ್ಲಕ್ಷಿಸಿದ್ದರೂ ಕೇಂದ್ರ ಸರ್ಕಾರದ ಜವಾಬ್ದಾರಿ ಏನೂ ಇಲ್ಲವೇ? ಬರೀ ಮಾಹಿತಿ ನೀಡುವುದು ಕೇಂದ್ರ ಸರ್ಕಾರದ ಕೆಲಸವೇ? ಆದ ಅನಹುತಕ್ಕೆ ಯಾರು ಹೊಣೆ?

೨. ಈಗ ದೆಹಲಿಯಲ್ಲಿ ಆದ ಸ್ಫೋಟ, ಮಾನ್ಯ(?) ಗೃಹಮಂತ್ರಿಯವರ ಗುಪ್ತಚರ ಇಲಾಖೆಗೆ ಮುಂಚೆಯೇ ಗೊತ್ತಾಗಿರಲಿಲ್ಲವೇ? ಅಥವಾ ಕೇಂದ್ರ ಸರ್ಕಾರ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತೋ?
೩. ಕರ್ನಾಟಕದಲ್ಲಿ ಸ್ಫೋಟವಾದಾಗ ಕಾಂಗ್ರೆಸ್ ನಾಯಕರುಗಳೆಲ್ಲಾ ಒಂದೇ ರಾಗ... "ಕರ್ನಾಟಕ ಸರ್ಕಾರದ ಮಾನ್ಯ(?) ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು" : ಸ್ವಾಮಿ ಈಗ ತಾವು ಕೇಂದ್ರ ಸರ್ಕಾರದ ಗೃಹಮಂತ್ರಿಯವರಿಗೆ ಇದೇ ಪ್ರಶ್ನೆ ಯಾಕೆ ಕೇಳುತ್ತಿಲ್ಲ? ತಪ್ಪುಮಾಡಿದವರು ತಮ್ಮಪಕ್ಷದವರಾದರೆ ರಾಜೀನಾಮೆ ಕೊಡುವ ಅಗತ್ಯವಿಲ್ಲವೇ?

ನಾನು ಯಾವುದೇ ಪಾರ್ಟಿ ಪರವಾಗಿ ಇಲ್ಲಿ ವಾದಿಸುತ್ತಿಲ್ಲ.. ನಮ್ಮ ರಾಜಕಾರಣಿಗಳು ಮಾಡುತ್ತಿರುವ "ದರಿದ್ರ" ರಾಜಕಾರಣದ ಬಗ್ಗೆ ಹೇಳುತ್ತಿದ್ದೇನೆ ಅಶ್ಟೇ....

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: B-A-D ಹಾಗೂ ರಾಜಕಾರಣ

ASHOKKUMAR's picture

ಹೌದು ನೀವು ಹೇಳುವುದು ನಿಜ-ಕೇಂದ್ರ ಸರಕಾರ ರಾಜ್ಯದ ಮೇಲೆ ಗೂಬೆ ಕೂರಿಸಲು ಯತ್ನಿಸಿತ್ತು.
ಈಗ ದೆಹಲಿಯಲ್ಲಿ ಕಾಂಗ್ರೆಸಿನದ್ದೇ ಸರಕಾರ ಇದೆ. ಬಿಜೆಪಿಯ ಮೋದಿ ಮತ್ತಿತರರು ನಾವು ಕೇಂದ್ರವನ್ನು ಈ ಬಗ್ಗೆ ಎಚ್ಚರಿಸಿದ್ದೆವು-ಕೇಂದ್ರ ವಿಫಲವಾಗಿದೆ ಎನ್ನುತ್ತಾರೆ.
ಆದರೆ ಒಂದು ವಿಷಯ-ಭಯೋತ್ಪಾದಕರ ಕೆಲಸ ಎಷ್ಟು ಸುಲಭ! ಯಾವ ಕಸದ ತೊಟ್ಟಿನಲ್ಲಿಯಾದರೂ ಬಾಂಬು ಇಟ್ಟರೆ ಮುಗಿಯಿತು. ಎಲ್ಲ ಕಡೆ ಬಂದೋಬಸ್ತು ಮಾಡುವುದು ಹೇಗೆ? ಹೆಚ್ಚು ಭದ್ರತಾ ತಪಾಸಣೆ ಇತ್ಯಾದಿ ಮಾಡಿದರೆ ಜನರೇ ಕೋಪಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಜನರ ಗತಿ ನಾಯಿಪಾಡು.
*ಅಶೋಕ್

ಉ: B-A-D ಹಾಗೂ ರಾಜಕಾರಣ

ajitmb's picture

ಚೆನ್ನಾಗಿದೆ...

ಉ: B-A-D ಹಾಗೂ ರಾಜಕಾರಣ

ajitmb's picture

ಇದೊ೦ದು ಬಿಸಿ ತುಪ್ಪಾ ಬಾಯಲ್ಲಿದ್ದ೦ಗ....
ನು೦ಗಿದರ ನಮಗ ಕಷ್ಟ...
ಉಗಳಿದರ ಎಲ್ಲಾರಿಗು ಕಷ್ಟ...

ಅಜಿತ.
ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು.