Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › vinayudupa ರವರ ಬ್ಲಾಗ್

ಮಾತೊಂದ ಹೇಳುವೆ....

ನೀ ಮೆಟ್ಟುವ ನೆಲ ಅದೆ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ

ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

April 9, 2008 - 10:01am — vinayudupa

ಈ ಸಿನಿಮಾ ನೋಡಿದ್ದೂ ಒಂದು ಆಕ್ಸಿಡೆಂಟ್. ಮೊನ್ನೆ ಯುಗಾದಿಯಂದು ರಜೆ ಇದ್ದಿದ್ರಿಂದ ಹಾಗೆ ಒಂದು ಪ್ರವಾಸ ಅಂತ ಹೋಗಿದ್ವಿ. ಚಿಕ್ಕಮಗಳೂರು ತಲುಪಿದಾಗ ಸಂಜೆ ೫.೩೦. ಕಳಸಕ್ಕೆ ರಾತ್ರಿ ೧೨.೩೦ರ  ವರೆಗೂ ಬಸ್ ಇರ್ಲಿಲ್ಲ. ಯಾವ್ದದ್ರು ಲಾಡ್ಜ್ಅಲ್ಲಿ ಕೋಣೆ ಮಾಡಿದ್ರೆ, ನಮಗೆ ರವಿ ಹುಟ್ಟಿದ್ದು ಗೊತ್ತಾಗಿ ಎದ್ದು ಹೊರಡೋದು ತಡ ಆಗೋದು ಗ್ಯಾರಂಟಿ.  ಅದಕ್ಕೆ ೧೨.೩೦ ಬಸ್ಸಿಗೆ ಹೊರದೊದಂತ ತೀರ್ಮಾನ ಆಯ್ತು. ಇನ್ನು ಅಲ್ಲಿವರೆಗೆ ಏನ ಮಾಡೋದು ಅಂತ ಯೋಚಿಸಿ, ಒಂದು ಸಿನಿಮಾ ನೋಡೋಕೆ ಹೊರಟ್ವಿ. ಸರಿ.. "ಆಕ್ಸಿಡೆಂಟ್"  ಬಿಡುಗಡೆ ಆಗಿದ್ದು ಗೊತ್ತಿತ್ತು. ಚಿಕ್ಕಮಗಳೂರಲ್ಲಿ ಬಿಡುಗಡೆ ಆಗಿದ್ಯೋ ಇಲ್ವೋ; ಹೇಗಿರುತ್ತೋ ಏನೋ ಅಂತ ಯೋಚನೆ ಬಂತು. ಅಲ್ಲೇ ಒಂದು ಅಂಗಡಿಲಿ ವಿಚಾರಿಸಿ, ಅವ್ರು ಹೇಳಿದ ನಾಗಲಕ್ಷ್ಮಿ  ಚಿತ್ರಮಂದಿರದಲ್ಲಿ ೧೧.೩೦ ವರೆಗೆ ಸೆಟಲ್. ಅದೊಂದು ಸಸ್ಪೆನ್ಸ್ ಸಿನಿಮಾ ಅಂತ ಬಿಟ್ರೆ ಬೇರೇನೂ ಗೊತ್ತಿರ್ಲಿಲ್ಲ. ಸಿನಿಮಾ ಬಹಳ ಇಷ್ಟ ಆಯ್ತು. ರಮೇಶ್ ಸಿನಿಮಾ ವೇಗವನ್ನ ಸಕ್ಕತ್ತಾಗಿ ಕಾಯ್ದುಕೊಂಡು ಹೋಗಿದಾರೆ. ಯಾವ ಹಂತದಲ್ಲೂ ಇದು ಸರಿ ಇದೆಯ, ಇದನ್ನ ಹಿಂದೆ ಎಲ್ಲಿ ನೋಡಿರಬಹುದು ಅಂತೆಲ್ಲ ತಲೆ ಕೆಡಿಸಿಕೊಳ್ಳುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಬಹಳಷ್ಟು ತಿರುವುಗಳೊಂದಿಗೆ ಉತ್ತಮ ನಿರೂಪಣೆ ಇದೆ. ನಮಗಂತೂ ಒಳ್ಳೆ ಟೈಮ್-ಪಾಸ್ ಆಯ್ತು.

  • ಚಿತ್ರ ವಿಮರ್ಶೆ
Ornamental seperator
  • vinayudupa ರವರ ಬ್ಲಾಗ್
  • Login or register to post comments
  • 532 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 9, 2008 - 4:41pm — hpn

ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್

hpn's picture

"ನಾ ಕಂಡ ಸಿನಿಮಾ" ಅಂತ ಬರೆಯೋದಕ್ಕಿಂತ - "ನಾ ನೋಡಿದ ಸಿನಿಮಾ" ಎಂದು ಬರೆಯಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 4:50pm — vinayudupa

ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್

vinayudupa's picture

ತಪ್ಪು ಸರಿಪಡಿಸಿದ್ದಕ್ಕೆ ವಂದನೆಗಳು. ತಿದ್ದಿಕೊಂಡೆ. ಹಾಗೇ ಅರ್ಥ ವ್ಯತ್ಯಾಸನೂ ತಿಳಿಸಿ. ನಾ ಕಂಡ ಅಂದ್ರೆ ನನ್ನ view ಅನ್ನೋ ಅರ್ಥ ಬರಬಹುದು ಅಂದುಕೊಂಡೆ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 5:06pm — hpn

ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್

hpn's picture

ಅರ್ಥ ವಿವರಿಸಿ ಹೇಳುವಲ್ಲಿ ನಾನಷ್ಟು ಪರಿಣಿತನಲ್ಲ Smiling

ಆದರೆ "ಕಂಡ" ಎಂದರೆ ಬಹುಶಃ ಕಣ್ಣಿಗೆ ಬಿದ್ದದ್ದು ಎಂದು, "ನೋಡಿದ" ಎಂದರೆ ನಾವಾಗಿಯೇ ಕಣ್ಣು ಬಿಟ್ಟು ನೋಡಿದು ಎಂಬರ್ಥ ಬರತ್ತೆ ಅನ್ಸತ್ತೆ. ಸಿನಿಮಾ ಬಗ್ಗೆ ಬರೆಯುವಾಗ "ನಾ ನೋಡಿದ ಸಿನಿಮಾ" "ವೀಕ್ಷಿಸಿದ ಸಿನಿಮಾ" ಎಂದು ಬಳಸೋದನ್ನ ಗಮನಿಸಿದ್ದೇನೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 8:47pm — mahesha

ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್

mahesha's picture

ದರ್ಶನ ಮತ್ತು ಪ್ರೇಕ್ಷಣೆ ನಡುವೆ ಇರುವ ಬೇರೆತನ..

ಅಂತ ಹರಿ ಹೇಳಿದ್ದು ಸರಿ...

ಕಂಡುಹಿಡಿ vs ನೋಡಿಕೊಳ್ಳು Eye-wink

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 8:26am — vinayudupa

ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್

vinayudupa's picture

ನೀವು ಹೇಳೋದೂ ಸರಿ. ಆದ್ರೆ ದ. ಕ. ಜಿಲ್ಲೆಗಳಲ್ಲಿ "ಇಲ್ಲಿ ಕಾಣು" ಅನ್ನೋದನ್ನ "ಇಲ್ಲಿ ನೋಡು" ಅನ್ನೋ ಅರ್ಥದಲ್ಲೇ ಬಳಸ್ತಾರೆ ಅಂತ ಕೇಳಿದೀನಿ. ಅದೂ ಅಲ್ಲದೆ "ನಾ ಕಂಡ ......" ಅನ್ನೋ ಬಳಕೆ ನನ್ನ ಸ್ವಂತದ್ದಲ್ಲ. ಹಾಗೇ ಎಲ್ಲೋ ಓದ್ದಿದ್ದು. (ನಾ ಕಂಡ ರಾಜಕುಮಾರ್, ನಾ ಕಂಡ ಜರ್ಮನಿ, ನಾ ಕಂಡ ಕಲಾವಿದರು... ಇತ್ಯಾದಿ)

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 5:46pm — savithru

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

savithru's picture

ಸಿನಿಮ ನೋಡಿದೆ. ತುಂಬ ಚೆನ್ನಾಗಿದೆ. ಪತ್ತೇದಾರಿ ರೀತಿಯ ಈ ಸಿನಿಮ ಎಲ್ಲಿಯೂ ತನ್ನ ಬಿಗಿಯನ್ನು ಕಳೆದುಕೊಳ್ಳುವುದಿಲ್ಲ. ಕೊನೆ ಕ್ಷಣದವರೆಗೂ ತನ್ನ ಸಸ್ಪೆನ್ಸ್ ಉಳಿಸಿಕೊಳ್ಳುತ್ತೆ. ಹಾಡುಗಳೂ ಚೆನ್ನಾಗಿವೆ.

ಇಂತಹ ಚಿತ್ರಗಳು ಓಡಲಿ.

ಚಳಿಗಾಲದಲ್ಲಿ ಹೇಗೆ ಮುಖವನ್ನು ಬೆಚ್ಚಗೆ ಮಾಡಿಸಿಕೊಳ್ಳುವುದು ಎಂದು ತಿಳಿಯಿತು! Smiling

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 11:54am — ಶಿವ

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ಶಿವ's picture

ಆಕ್ಸಿಡೆಂಟ್ ನಿಜಕ್ಕೂ ಒಳ್ಳೆಯ ಸಿನೆಮಾ.ರಮೇಶ್ ಒಬ್ಬ ಸೆನ್ಸಿಬಲ್ ಮನುಶ್ಯ .ಆತನ ಸಿನೆಮಾದಲ್ಲು ಅದು ಗೊತ್ತಾಗುತ್ತದೆ. ಸಸ್ಪೆನ್ಸ್ ಕೊನೆಯವರೆಗೂ ಇದೆ..ಒಂದು ತ್ರಿಲ್ಲರ್‍ಗೆ ಬೇಕಾದ ವೇಗವೂ ಸಿನೆಮಾಕ್ಕಿದೆ.ಈ ವರ್ಶ ಇಲ್ಲಿಯವರೆಗೆ ತೆರೆಕಂಡ (ನಾನು ನೋಡಿದ) ಸಿನೆಮಾಗಳಲ್ಲಿ ಆಕ್ಸಿಡೆಂಟ್ ಎಲ್ಲದಕ್ಕಿಂತಲೂ ಚೆನ್ನಾಗಿದೆ. .ಕನ್ನಡ ಸಿನೆಮಾಗಳು ಬದಲಾಗುತ್ತಿವೆ,ಒಳ್ಳೆಯದಕ್ಕೆ.

  • Login or register to post comments
  • link
  • Email this ಪ್ರತಿಕ್ರಿಯೆ
April 12, 2008 - 11:36pm — hpn

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

hpn's picture

ನಿಮ್ಮೆಲ್ಲರ ಕಾಮೆಂಟ್ ಓದಿ ಮೋಸಹೋದೆವು. ಈ ಸಿನಿಮಾ ಚೆನ್ನಾಗಿಲ್ಲ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
April 21, 2008 - 5:02pm — ವೈಭವ

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ವೈಭವ's picture

ಯಾಕೆ ಚೆನ್ನಾಗಿಲ್ಲ ಅಂತ ವಸಿ ಹೇಳಿ ಗುರುವೆ? ಸುಮ್ನೆ ಚೆನ್ನಾಗಿಲ್ಲ ಅನ್ಬುಟ್ರೆ !!!
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
April 21, 2008 - 2:17pm — ASHMYA

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ASHMYA's picture

ನಾನು ಆಕ್ಸಿಡೆಂಟ್ ನೋಡಿದೆ. ಚನ್ನಾಗಿದೆ.
--------------------------------
ಆದರೆ ನಾನು ಗಮನಿಸಿದ ಹಾಗೆ,ಆಕ್ಸಿಡೆಂಟ್ ಚಿತ್ರದ ಪೋಸ್ಟರ್ಸಲ್ಲೆಲ್ಲ 'ಆಕ್ಸಿಡೆಂಟ್' ಅಂತ ಇಲ್ಲ. 'ಆ' ಗೆ 'ಯ' ಒತ್ತು ಕೊಟ್ಟಿದ್ದಾರೆ. ಹಾಗೆ ಸ್ವರಕ್ಕೆ ಒತ್ತಕ್ಷರ ಕೊಡಬಹುದ? ನನಗದು ತಪ್ಪು ಅನ್ನಿಸ್ತಾ ಇದೆ.. ತಿಳಿದವರು ಹೇಳಿ

  • Login or register to post comments
  • link
  • Email this ಪ್ರತಿಕ್ರಿಯೆ
April 21, 2008 - 5:00pm — ವೈಭವ

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ವೈಭವ's picture

ನೀವು ಸರಿ, ಸೊರಕ್ಕೆ ಬೆಂಜನ ಒತ್ತಾಗಿ ಬರುವುದಿಲ್ಲ. ಈ ತರ ಬರೆಯಬಹುದು ಎಂಬುದನ್ನ ಯಾವ ಹೊತ್ತಿಗೆಯಲ್ಲೂ ಹೇಳಿಲ್ಲ (ನನಗೆ ಗೊತ್ತಿರುವ ಮಟ್ಟಿಗೆ).
ಅದನ್ನ 'ಆಕ್ಸಿಡೆಂಟ್" ಅಂತ ಬರೆದರೆ ಸಾಕು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
April 21, 2008 - 9:42pm — hamsanandi

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

hamsanandi's picture

ಬಹುಶಃ ಇಂಗ್ಲಿಷ್ ಉಚ್ಚಾರಕ್ಕೆ ಹತ್ತಿರವಾಗಬೇಕೆಂದು ಆ ರೀತಿ ಬರೆದಿರಬೇಕು.

ಸ್ವರಕ್ಕೆ ವ್ಯಂಜನದ ಒತ್ತು ಬರುವುದಿಲ್ಲ ನಿಜ. ಆದರೆ, ತರಂಗದಂತಹ ಪತ್ರಿಕೆಯವರೇ ಜಯಂತ ಕಾಯ್ಕಿಣಿ ಎನ್ನುವುದನ್ನು ಕಾ ಗೆ ಐತ್ವ ಕೊಟ್ಟು ಬರೆಯುತ್ತಿದ್ದರಲ್ಲ ( ಅಂದರೆ ಒಂದು ವ್ಯಂಜನಕ್ಕೆ ಎರಡು ಸ್ವರಗಳ ಸೇರ್ಪಡೆ!) - ಅದನ್ನು ನೋಡಿದರೆ, ಇದೂ ಸರಿ ಅಂದುಬಿಡಬಹುದು!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
April 21, 2008 - 8:03pm — ವೈಭವ

ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ವೈಭವ's picture

'ಆಕ್ಸಿಡೆಂಟ್' ಬಗ್ಗೆ ನನ್ನ ಅನಿಸಿಕೆಗಳು
೧ ಸಿನಿಮಾ ಚೆನ್ನಾಗಿದಿಯೋ ಇಲ್ವೊ ಗೊತ್ತಿಲ್ಲ ಆದರೆ ಒಂದು ಒಳ್ಳೆ ಬೇರೆ/ವಿಬಿನ್ನ ತೆರನಾದ ಮೊಗಸು/ಪ್ರಯತ್ನ ಸಿನಿಮಾದ ಉದ್ದಕ್ಕೂ ಕಾಣುತ್ತದೆ.
೨ ಒಳ್ಳೆ ಅಂಶಗಳು
* ಪೋಟೋಗ್ರಾಪಿ, ಒಂದೆರಡು ಹಾಡುಗಳು
* ಕತೆ ಹೇಳಿರುವ ತೆರ
* ರಾಜೇಂದ್ರ ಕಾರಂತರ ನಟನೆ ಮತ್ತು ಮಾತುಗಳು
* ಮೊದಲರ್ದ ಸಿನಿಮಾ ಓಡುವುದೇ ಗೊತ್ತಾಗುವುದಿಲ್ಲ
* ರೇಕಾ ಪಾತ್ರದ ಮೂಲಕ ಸಮಾಜಕ್ಕೆ ಒಳಿತಾಗುವ ಅಂಶಗಳ ಬಗ್ಗೆ ಬೆಳಕು ಚೆಲ್ಲಿರುವುದು.

೩. ಕೆಟ್ಟ ಅಂಶಗಳು
* ಚಿತ್ರಕತೆ ಗಟ್ಟಿಯಾಗಿಲ್ಲ, ಹಲವು ಕಡೆ ಸಡಿಲ ಇದೆ. (ತಿಲಕ್ಗೆ ಪೆನ್ ಡ್ರೈವ್ ಬಗ್ಗೆ ಗೊತ್ತಿದ್ರು ಅವನು ಯಾಕೆ ವಿಲನ್ ಗಳಿಗೆ ಹೇಳಲಿಲ್ಲ?, ರಮೇಶ್ ಆ ಚಂದ್ರಪ್ಪನ ಬಂಟ(ಚೆಂಬು ಹಿಡಿಕೊಂಡಿರುವವನು)ನನ್ನು ಹಿಡಿದು ಯಾಕೆ ಬಿಟ್ ಬಿಡುತ್ತಾನೆ. ಅವನೆ ಬಂದು ಕೋಲಾಟದ ಹಾಡಿನಲ್ಲಿ ದೀಪ ಆಪು ಮಾಡುವುದು )
* ಹಿನ್ನಲೆ ಸಂಗೀತಕ್ಕೆ ಇನ್ನು ಹೆಚ್ಚು ಒತ್ತು ಕೊಡಬಹುದಾಗಿತ್ತು.
* ಎರಡನೆ ಅರ್ದವನ್ನು ಸುಮ್ಮನೆ ಎಳೆಯಲಾಗಿದೆ ಅನ್ನಿಸಿತು( ಒಂದೆರಡು ಹಾಡುಗಳು ಬೇಕಾಗಿರಲಿಲ್ಲ ಅನ್ನಿಸಿತು)
* ಪೂಜಾ ಗಾಂದಿ, ಡಾಕ್ಟರ್ ಪಾತ್ರಗಳು ಬೇಕಾಗಿತ್ತಾ? ಅನ್ನಿಸಿತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಿನಿಮಾ
  • ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?
  • ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
  • ಯಾವ ಕನ್ನಡ ಸಿನಿಮಾ ನೋಡಲಿ?
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
Syndicate content

ಲೇಖಕರು

vinayudupa's picture

ಪೂರ್ಣ ಹೆಸರು
ವಿನಯ ಉಡುಪ

ಪರಿಚಯ

ಇಲ್ಲಿರಲಾರೆ, ಬಿಟ್ಟು ಹೋಗಲಾರೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator