ಗುಲಾಬಿ ಗಿಡದ ಆರೈಕೆ
ಕನ್ನಡ ಸಾಹಿತ್ಯ, ಕವನ, ಲಘು ಬರಹಗಳನ್ನು ಬಿಟ್ಟು ತೋಟಗಾರಿಕೆಯ ಬಗ್ಗೆ ಪ್ರಶ್ನೆ ಕೇಳಿರುವುದಕ್ಕೆ ಕ್ಷಮೆಯಿರಲಿ. ಮನೆಯಲ್ಲಿ ಬೆಳೆಸುವ ಗುಲಾಬಿ ಗಿಡಗಳಿಗೆ ರಾಸಾಯನಿಕ ಕೀಟನಾಶಕಗಳ ಬದಲಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರದ ಯಾವುದಾದರೂ ಕೀಟನಾಶಕಗಳಿದ್ದರೆ ದಯವಿಟ್ಟು ತಿಳಿಸುವಿರಾ?

- vnag ರವರ ಬ್ಲಾಗ್
- Login or register to post comments
- 629 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಕೀಟನಾಶಕ
ಪರಿಸರಸ್ನೇಹಿಯಾದ ಔಷಧವೊಂದು ಇಲ್ಲಿದೆ. ಪ್ರಯೋಗಿಸಿನೋಡಿ.
ಅರ್ಧಸೇರಿನಷ್ಟು ಬೇವಿನಕಾಯಿಯನ್ನು ೫೦ಗ್ರಾಂ ಮೈಲುತುತ್ತದೊಂದಿಗೆ ಸೇರಿಸಿ ಚೆನ್ನಾಗಿ ಅರೆದು ಒಂದು ಬಕೆಟ್ ನೀರಿನಲ್ಲಿ ಮಿಶ್ರಣಮಾಡಿ, ೫೦ ಗ್ರಾಂ ಸುಣ್ಣ ಹಾಕಿ ಕದಕಿರಿ. ನಂತರ ಅರ್ಧ/ಮುಕ್ಕಾಲು ಲೀಟರ್ ಮೊಸರನ್ನು ಇದರಲ್ಲಿ ಹಾಕಿ ಒಂದು ದಿನ ಪೂರ್ತಿಬಿಸಿಲಿನಲ್ಲಿಟ್ಟು ನಂತರ ಗುಲಾಬಿ ಅಥವಾ ಇನ್ಯಾವುದೇ ಗಿಡಕ್ಕಂಟುವ ಹುಳಗಳ ಮೇಲೆ ಇದನ್ನು ಪ್ರಯೋಗಿಸಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ತೋಟಗಾರಿಕೆಯೋ, ಹೈನುಗಾರಿಕೆಯೋ ಒಟ್ಟಿನಲ್ಲಿ ಯಾವುದೋ ಒಂದು 'ಗಾರಿಕೆ';) ಅನವಶ್ಯಕವಾದ ರಾಜಕೀಯದ ಹೊರತಾಗಿ ತಿಳುವಳಿಕೆ ಮೂಡಿಸುವ ಯಾವುದೇ ವ್ಯವಹಾರವಿರಲಿ ಅದಕ್ಕೆ ಸಂಪದಿಗರು ಬೇಡವೆನ್ನಲಾರರು. ಮೇಲಾಗಿ ಲಘುಬರಹ ಎಂತಲೇ ಅಂದಿರುವಿರಲ್ಲ, ನೀವು ಬರೆದಿರುವುದು ಮತ್ತಿನ್ನೇನು?
ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ಸಂಪದವನ್ನು ಸೀಮಿತಗೊಳಿಸದೆ ಜ್ಞಾನಪೂರಕವಾದ ಚಟುವಟಿಕೆಗಳು ಕನ್ನಡದಲ್ಲಿ ನಡೆದಾಗ ತಾನೆ ಸಂತಸ?
ಎನಗಿಂತ ಕಿರಿಯರಿಲ್ಲ
ಪರಿಸರಸ್ನೇಹಿ ಕೀಟನಾಶಕ
ರಘುನ೦ದನರವರೇ,
ತಮಗೆ ಧನ್ಯವಾದಗಳು. ಸಧ್ಯದಲ್ಲಿಯೇ ತಾವು ತಿಳಿಸಿರುವ ಕೀಟನಾಶಕದ ಪ್ರಯೋಗಮಾಡಿ, ಪರಿಣಾಮವನ್ನು ತಿಳಿಸುತ್ತೇನೆ.