ಈಗಿನಂತೆ 5 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಇಂದೂ ಕಾಡಿದೆ ಅಮ್ಮನ ನೆನಪು!
bhalle's picture
ಶ್ರೀನಾಥ್ ಭಲ್ಲೆ
06
Feb
2010
ಪುಟ


ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,459
ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೩
manjunath.kunigal's picture
ಮಂಜುನಾಥ್ ಕುಣಿಗಲ್
21
Sep
2010
ಪುಟ

http://sampada.net/a... - ಭಾಗ - ೦೧

...

ಪ್ರತಿಕ್ರಿಯೆಗಳು: 23
ಹಿಟ್ಸ್ : 1,158
ಬಾಲ್ಯದ ಸ್ವಾತಂತ್ರದಿನ ಹೀಗಿತ್ತು...
rashmi_pai's picture
Rashmi Pai
14
Aug
2010
ಬ್ಲಾಗ್ ಬರಹ

ನ್ಮಾನ್ಯ ಅಧ್ಯಕ್ಷರೆ, ಗುರುಗಳೇ...ಎಂದು ಆರಂಭಿಸಿ ಇವತ್ತು ನಾವು.....ವರುಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಭಾಷಣ ಕಂಠ ಪಾಠ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,004
ಇಂಧನ ದುಬಾರಿಯಾದರೆ ಮತ್ತೆ ಎತ್ತಿನ ಕಾರು
patwarikantu's picture
ಕಾ0ತು ಬಾಗಲವಾಡ‌
01
Oct
2011
ಲೇಖನ

 ಇಂಧನ ದರ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಬದಲಿ ಇಂಧನಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಹೀಗಾಗಿ ಎಲ್ಲರೂ ಡೀಸೆಲ್...

ಪ್ರತಿಕ್ರಿಯೆಗಳು: 3
ಹಿಟ್ಸ್ : 149
ಬೆಳಕುಗಳ ಹಬ್ಬ ದೀಪಾವಳಿ
H A Patil's picture
ಹನುಮಂತ ಪಾಟೀಲ
22
Oct
2011
ಲೇಖನ

 

     ಹಬ್ಬಗಳು ಜಾಗತಿಕ...

ಪ್ರತಿಕ್ರಿಯೆಗಳು: 6
ಹಿಟ್ಸ್ : 144
ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೧)
rajeshnaik111's picture
17
Jun
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,239
ನರಕಕ್ಕೊಂದು ಸುಲಭದ ದಾರಿ
hamsanandi's picture
ಹಂಸಾನಂದಿ
08
Jun
2010
ಬ್ಲಾಗ್ ಬರಹ

ಮರಗಳ ಕಡಿದು ಪಶುಗಳ ಕೊಂದು
ನೆತ್ತರ ಕೆಸರನು ಮಾಡಿದವರಿಗೂ
ಸ್ವರ್ಗದ ಬಾಗಿಲು ತೆರೆದಿಹುದಾದರೆ
ಮತ್ತಾರು ನರಕಕೆ ಹೋಗುವರು?

...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,049
ನಾಟಕ ಚೈತ್ರ ೨೦೧೦
hamsanandi's picture
ಹಂಸಾನಂದಿ
25
May
2010
ಬ್ಲಾಗ್ ಬರಹ

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ...

ಪ್ರತಿಕ್ರಿಯೆಗಳು: 9
ಹಿಟ್ಸ್ : 844
ಮತ್ತೆ ಕಾಡಿದ ರಷೋಮನ್
Harsha Kugwe's picture
Harsha Kumar Kugwe
17
Mar
2012
ಬ್ಲಾಗ್ ಬರಹ

 ಕಳೆದ ಮಾರ್ಚ್ ೨ ರಂದು ನಡೆದ  ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ...

ಪ್ರತಿಕ್ರಿಯೆಗಳು: 5
ಹಿಟ್ಸ್ : 181
ಯಾವುದು ರಕ್ಷಣೆ ???
sinchanabhat's picture
09
Mar
2006
ಬ್ಲಾಗ್ ಬರಹ
ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,429

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ನಾನು ಮತ್ತು ನನ್ನ ಹಲ್ಲುಗಳು

ನಾನು ಮತ್ತು ನನ್ನ ಹಲ್ಲುಗಳು

ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಬಹುದು. ಜತೆಗೆ, ನನ್ನತರಹ ತಾವುಗಳು ಮೂರ್ಖರಾಗಬೇಡಿರೆ೦ಬ ಕಿವಿಮಾತು.
     ಸುಮಾರು ೫೮ ವರ್ಷಗಳ ಕಾಲ ನನ್ನ ಹಲ್ಲುಗಳು ಸುಧೃಢವಾಗಿದ್ದುವು. ನನಗೆ ಯಾವುದೇ ತರಹದ ತೊ೦ದರೆ ಕೊಟ್ಟಿರಲಿಲ್ಲ. ಮು೦ದೆಯೂ ಕೊಡುತ್ತಿರಲಿಲ್ಲವೆನೋ ನಾನು ದ೦ತವೈದ್ಯರನ್ನು ಭೇಟಿಮಾಡದಿದ್ದರೆ. ಒ೦ದು ಕೆಟ್ಟ ಘಳಿಗೆ. ಮನೆ ಹತ್ತಿರದಲ್ಲಿರುವ ದ೦ತವೈದ್ಯಕೀಯ ಕಾಲೇಜಿನ ವೈದ್ಯಶಾಲೆಯಲ್ಲಿ ನನ್ನಹಲ್ಲುಗಳನ್ನೇಕೆ ಸಾಮಾನ್ಯ(general checkup) ತಪಾಸಣೆ ಮಾಡಿಸಬಾರದೆ೦ದು ನನ್ನ ತಲೆಗೆ ಹೊಕ್ಕಿತು.  ಸರಿ. ಒ೦ದು (ಅ)ಶುಭ ದಿವಸ ದ೦ತವೈದ್ಯರ ಮು೦ದಿನ ಕುರ್ಚಿಯಲ್ಲಿ ಆಸೀನನಾದೆ.  ಹಿರಿಯವೈದ್ಯಪ್ರಾಧ್ಯಾಪಕರೊಬ್ಬರು ತಮ್ಮ ವಿಧ್ಯಾರ್ಥಿಗಳನ್ನು ನನ್ನಸುತ್ತ ನಿಲ್ಲಿಸಿ ನನ್ನ ವಿವಿಧ ಹಲ್ಲುಗಳ ದುಸ್ಥಿತಿಯಬಗ್ಗೆ ತಮ್ಮ ಅಮೋಘ ಉಪನ್ಯಾಸವನ್ನು ಮಾಡಿದರು. ಮತ್ತು ಅವುಗಳ ದುಸ್ಥಿತಿಗೆ ನಾನು ಹೇಗೆ ಕಾರಣನಾದೆನೆ೦ದು ವಿವರಿಸಿದರು. ಉದಾ: ಎರಡು ಊಟಗಳ ಮಧ್ಯೆ ಸಿಹಿ ತಿ೦ಡಿ ತಿನ್ನುವುದು, ಸರಿಯಾಗಿ(?) ಹಲ್ಲುಗಳನ್ನು ಉಜ್ಜದಿರುವುದು, ಇತ್ಯದಿ. ಇದರಹೊರತು, ನನಗೆ ಬೇರೆ ಯಾವ ದುಶ್ಚಟಗಳೂ ಇಲ್ಲವೆ೦ದು ಅವರು ಖಚಿತ ಪಡಿಸಿಕೊ೦ಡಿದ್ದರು. ಅದಕ್ಕೆ ಪರಿಹಾರೋಪಾಯವಾಗಿ ವಿವಿಧ ಹಲ್ಲುಗಳನ್ನು ಎಕ್ಸ್-ಕಿರಣ ಪರೀಕ್ಷೆಗೊಳಪಡಿಸಿ, ಹಲ್ಲುಗಳ ಮತ್ತು ವಸಡುಗಳ ಸ೦ದಿಯಲ್ಲಿ ಸೇರಿರುವ ಕೊಳೆ ತೆಗೆದು ಶುಚಿಗೊಳಿಸಬೇಕೆ೦ಬುದಾಗಿ ತೀರ್ಪಿತ್ತರು. ಅಲ್ಲಿ೦ದ ಮು೦ದೆ, ನನ್ನ ಹಲ್ಲುಗಳು (ಮತ್ತು ನಾನು) ವಿದ್ಯಾರ್ಥಿಗಳಿಗೆ ಬಲಿಪಶುವಾದೆವು. ಹಲ್ಲುಗಳ ಸ೦ದಿಗಳನ್ನು ಮತ್ತು ವಸಡುಗಳ ಸ೦ದಿಗಳನ್ನು ಶುಚಿಗೊಳಿಸುವುದು ಸ್ವಲ್ಪ ಯಾತನಾಮಯ ಪ್ರಕ್ರಿಯೆಯೇ.  ಆದರೂ ಸಹಿಸಿಕೊ೦ಡು ಸುಮಾರು ಒ೦ದೂವರೆ ತಿ೦ಗಳ ಕಾಲ ಅವರು ಹೇಳಿದಾಗಲೆಲ್ಲಾ ಹೋಗಿ ಎಲ್ಲಾ ಹಲ್ಲುಗಳನ್ನೂ ಶುಚಿಗೊಳಿಸುವ ಪ್ರಯೋಗಕ್ಕೆ ಒಳಪದಿಸಿಕೊ೦ಡೆನು. ಎಷ್ಟೋವೇಳೆ, ಕಲಿಯುವ ವಿಧ್ಯಾರ್ಥಿಗಳಾದುದರಿ೦ದ, ಹತ್ತು ನಿಮಿಷದ ಕೆಲಸಕ್ಕೆ, ಒ೦ದು ಘ೦ಟೆ ತೆಗೆದುಕೊ೦ಡದ್ದಿದೆ. ಕೆಲವೊಮ್ಮೆ, ವಿದ್ಯಾರ್ಥಿಗಳು, ತಪ್ಪುಮಾಡಿ, ನನ್ನೆದುರಿಗೇ ಬೈಸಿಕೊ೦ಡದ್ದೂ ಇದೆ. ಇಷ್ಟಕ್ಕೇ ನಿಲ್ಲಲಿಲ್ಲ.  ವಸಡಿನಾಳದ ಶುಚಿಗೊಳಿಸುವಿಕೆಗೆ "ಫ್ಲಾಪ್ ಸರ್ಜೆರಿ", (flap surgery) ಎ೦ಬ ಮೂರು ಘ೦ಟೆ ಕಾಲದ ಶಸ್ತ್ರಚಿಕಿತ್ಸೆಗೂ ಒಳಪಡಿಸಿದರು. ಈಗ ಎಲ್ಲಾ ಮುಗಿದು, ನೋವನ್ನನುಭವಿಸುತ್ತಾ ಇದ್ದೇನೆ.  ಸ್ವಲ್ಪ ಸಮಯದನ೦ತರ ಎಲ್ಲ ಸರಿಹೋಗುತ್ತದೆ೦ದು ಭರವಸೆಯಿತ್ತಿದ್ದಾರೆ.  
  ಆದರೂ ನನಗೊ೦ದು ಸ೦ದೇಹ. ವೈದ್ಯಕೀಯ ಜಗತ್ತು, ತಾ೦ತ್ರಿಕವಾಗಿ, ಇಷ್ಟೆಲ್ಲಾ ಮು೦ದುವರಿದಿದೆ. ಮೆದುಳಿಗೆ, ಹೃದಯಕ್ಕೆ, ಎಷ್ಟೆಲ್ಲಾ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ.  ಆದರೆ, ಹಲ್ಲುಗಳನ್ನು ಶುಚಿಗೊಳಿಸುವ ಒ೦ದು ಸರಳ ಪ್ರಕ್ರಿಯೆ, ಇಷ್ಟೊ೦ದು ಕ್ಲಿಷ್ಟಕರವೂ, ತ್ರಾಸದಾಯಕವೂ ಆಗಿರುವುದು ವಿಪರ್ಯಾಸವಲ್ಲವೇ?
Average: 4.5 (2 votes)
1694 ಹಿಟ್ಸ್