ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › vworld4u ರವರ ಬ್ಲಾಗ್

ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

May 22, 2007 - 2:18pm — vworld4u

ಅಲ್ರೀ.. ಬೇಡವಾದದ್ದನ್ನ ತಲೆಗೆ ಹಾಕಿಕೊಂಡು ಯೋಚಿಸಿದರೆ ಚಿಂತೆ ಅಲ್ಲದೆ ಮತ್ತೇನ್ ಬರೋಕೆ ಸಾಧ್ಯ?
ನಿಮಗಾಗಿ ಈ ಇಡೀ ಬದುಕೇ ಕಾದಿದೆ. ನೀವು ಮನಸ್ಸು ಪಟ್ಟರೆ ಕಳೆದುಕೊಂಡಿದ್ದನೆಲ್ಲಾ ಪಡೆಯಬಹುದು, ಮನಶಾಂತಿಯೊಂದನ್ನು ಬಿಟ್ಟು. ದೇವರು ಒಂದು ದಾರಿಯನ್ನು ಕಾಣದ ಹಾಗೆ ಮಾಡಿದ ಅಂತ ಹಾದ್ರೆ, ಮತ್ತೊಂದು ದಾರಿಯಲ್ಲಿ ದೀಪವಿಟ್ಟು ನಿಮ್ಮನ್ನು ಸ್ವಾಗತಿಸುತ್ತಾನೆ. ನಿಮಗಾಗಿಯೇ ಮಾಡಿಟ್ಟ ಆ ಹಾದಿಯು ನಿಮಗೆ ಒಳ್ಳೇದನ್ನೇ ಮಾಡಲು ಕಾಯುತಿರುತ್ತದೆ. ಅಂದ ಮೇಲೆ ಚಿಂತೆ ಯಾಕೆ ಮಾಡ್ತೀರ? ಕೇವಲ ನಿಮ್ಮ ಸೂಕ್ಷ್ಮ ಕಣ್ಗಳಿಂದ ಆ ಹೊಸ ಹಾದಿಯನ್ನು ಹುಡುಕಿ. ಆ ಹುಡುಕಾಟವನ್ನೂ ಮಾಡದಿರೊ ಸೋಮಾರಿತನ ಬೇಡ!
ಶಾಂತಿ, ನೆಮ್ಮದಿ ಎರಡು ಮಾನವನಿಗೆ ಬಹು ಅಮೂಲ್ಯ ಭಾವನೆಗಳು. ಮನುಜನು ಎನೇ ಕೆಲ್ಸ ಮಡಿದ್ರೂ ಕೊನೆಗೆ ಬಯಸೋದು ಇವೆರಡನ್ನೇ ತಾನೆ? ಅವೆರಡೂ ಸಿಗದಾಗ ಅವನು ಚಿಂತೆಯ ಮೆಟ್ಟಿಲೇರುತ್ತಾನೆ, ಚಿತೆಯ ಮೆಟ್ಟಿಲು ಅಲ್ಲೆ ಇಣುಕಿ ನೋಡಲು ಶುರು ಮಾಡುತ್ತದೆ!
ಆದರೆ ಕೆಲವರು ತಿಳಿದುಕೊಳ್ಳದಿರೋ ವಿಷಯವೊಂದಿದೆ - ಈ ಎರಡರ ಮೂಲ ತ್ರುಪ್ತಿಯಲ್ಲಿದೆ. ಯಾವ ಮನುಷ್ಯನಿಗೆ ತ್ರುಪ್ತಿ ಪಡುವ ಮನಸ್ಸಿರುತ್ತದೋ, ಅವನನ್ನು ಶಾಂತಿ, ನೆಮ್ಮದಿಗಳು ತಾನಾಗಿಯೆ ಹುಡುಕಿಕೊಂಡು ಬರುತ್ತವೆ. ಹಾಗೆಂದು ನಾನೇನು ಕಷ್ಟಗಳು ಬಂದಾಗಲೂ ತ್ರುಪ್ತಿ ಪಡಲು ಹೇಳುತ್ತಿಲ್ಲ. ಕಷ್ಟಗಳು ಮನುಷ್ಯನಿಗೆ ಬುದ್ದಿ ಕಲಿಸುವ, ಅನುಭವ ನೀಡುವ ಸತ್ವ ಪರೀಕ್ಷೆಗಳಷ್ಟೆ! ಅವನ್ನು ಎದುರಿಸಲೆಂದೇ ದೇವರು ನಮಗೆ ಇಲ್ಲಿಯವರೆಗೆ ಜೀವನದ ಪಾಠಗಳ್ಳನ್ನು ಹೇಳಿಕೊಟ್ಟಿದ್ದು ಅಲ್ಲವೇ? ಆ ಪಾಠಗಳು ಬೇರೆಯವರಿಂದ ನಮಗಾದ ಅನುಭವಗಳಾಗಿರಬಹುದು ಅಥವ ಬೇರೆಯವರ ಅನುಭವಗಳ ಸಾರವಿರಬಹುದು! ಅವೆಲ್ಲವನ್ನು ಒಟ್ಟಿಗೆ ಸೇರಿಸಿ ಅವುಗಳ ಸಾರವನ್ನು ಅರ್ಥೈಸಿಕೊಂಡಾಗ ನಮ್ಮ ಸಮಸ್ಯೆಗಳು ಹಗುರಾಗಿ ಕಂಡು, ಅವುಗಳ ಪರಿಹಾರದ ದಾರಿ ಗೋಚರಿಸುತ್ತವೆ. ಆದ್ದರಿಂದ ಬೇರೆಯವರ ಕಷ್ಟವಳನ್ನು ಹಗುರಾಗಿ ಕಾಣಬೇಡಿ. ಅವುಗಳಿಂದ ಪಾಠ ಕಲಿಯಿರಿ. ನಿಮ್ಮ ಜೀವನದಲ್ಲಿ ಅವುಗಳ ಸಾರವನ್ನ ಜೀರ್ಣಿಸಿಕೊಳ್ಳಿ.

  • ಜೀವನದ ಕೆಲವು ಸಂದೇಶಗಳು
~.~
  • vworld4u ರವರ ಬ್ಲಾಗ್
  • Login or register to post comments
  • 371 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 22, 2007 - 7:56pm — ASHOKKUMAR

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

ASHOKKUMAR's picture

Quote:
ದೇವರು ಒಂದು ದಾರಿಯನ್ನು ಕಾಣದ ಹಾಗೆ ಮಾಡಿದ ಅಂತ ಹಾದ್ರೆ, ಮತ್ತೊಂದು ದಾರಿಯಲ್ಲಿ ದೀಪವಿಟ್ಟು ನಿಮ್ಮನ್ನುಸ್ವಾಗತಿಸುತ್ತಾನೆ.

ಆದರೆ ಒಂದು ದಾರಿ ಕಾಣದಾಗ ಹತಾಶರಾಗಿ, ಹೊಸ ದಾರಿ ತೆರೆದಿರುವುದನ್ನು ನಾವು ಗಮನಿಸುವುದೇ ಇಲ್ಲ ಎನ್ನುವುದು ವಿಪರ್ಯಾಸ!

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 23, 2007 - 6:03pm — vworld4u

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

vworld4u's picture

ಹೌದು. ಅಲ್ಲೇ ಮನುಷ್ಯ ದೇವರಿಗೆ ಬಯ್ಯಲು ಶುರು ಮಾಡೋದು. ಆದ್ರೆ ಅಲ್ಲಿಯವರೆಗೆ ದೇವರು ಅವನಿಗೆ ಕೊಟ್ಟ ಅನುಭವಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳದ್ದು ಅವನ ತಪ್ಪು ಅಂತ ಮರೀತಾನೆ. ಆದ್ದರಿಂದಲೇ ಕಷ್ಟಗಳು ಬೆಟ್ಟದಂತಾಗಿ ಅವನಿಗೆ ತಲೆಭಾರಗಳಾಗಿ, ಚಿಂತೆಗಳ ಸರಮಾಲೆಯನು ಕತ್ತಿಗೆ ಹಾಕಿಕೊಂಡು ಚಿತೆಯ ಹತ್ತಲು ತಯಾರಾಗುತ್ತಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 23, 2007 - 7:02pm — mahesha

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

mahesha's picture

ಸಾರ್‍...

ಬೇಜಾರ್‍ ಮಾಡ್ಕೋಬೇಡಿ...

ದೇವರು ಇದ್ದಾನ, ಇಲ್ವಾ ಎಂದು ಅವರವರಿಗೇ ಅರಿತುಕೊಳ್ಳೋಕೆ ಅನುವು ಇರಬೇಕು ಅಂತ ನನ್ನ ಅನಿಸಿಕೆ.!

ನನಗೆ "ಕೆಲಸ ಮಾಡು, ಅದರ ಫಲ/ ಅದರಿಂದ ಏನಾಗುತ್ತೇ, ಲಾಬ ಎಸ್ಟು, ನಸ್ಟ ಎಸ್ಟು ಅಂತ ಯೋಚನೇ ಮಾಡಬೇಡ" ಅನ್ನೋ ಮಾತಲ್ಲಿ ನಂಬಿಕೆಯಿಲ್ಲ.

ನಮ್ಮ ಎಡರುಗಳಿಗೆ ನಾವೇ ಹೊಣೆ, ಬೇರಾರು ಅಲ್ಲ!
ಹಾಗೇ ನಮ್ಮ ಗೆಲುವುಗಳಿಗೂ ನಾವೇ ಹೊಣೆ, ಬೇರಾರು ಅಲ್ಲ. ಕೆಲ ನೆರವಿರಬೋದು. ಆದರೆ ಅದು co-incidence!

ಒಟ್ಟಿನಲ್ಲಿ "ಮಂತ್ರಗಳನ್ ಪೇಳಿದರೆ ಮಾಂಗಾಯಿಗಳು ಉದರಲ್ಲ" ಅದಕ್ಕೆ ನಾವೇ ಗುರಿಯಿಟ್ಟು ಕಲ್ಲೆಸಯಲೇ ಬೇಕು, ಹಾಗೆ ಆ ಕಲ್ಲು ನಮ್ಮ ತಲೆ ಮೇಲೆ ಬೀಳದಂತೆ ನೋಡ್ಕೋಬೇಕು. ಇಲ್ಲಿ ಮಾಂಗಾಯನ್ನು ನೋಡುವ, ಗುರಿಯಿಡುವ, ಕಲ್ಲೆಸೆಯುವ, ತಪ್ಪಿಸಿಕೊಳ್ಳುವ, ಮಾವು ತಿನ್ನುವ ಎಲ್ಲ ಹೊಣೆ ನಮ್ಮದೇ ಆಗಿರುತ್ತೆ.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 23, 2007 - 7:41pm — ASHOKKUMAR

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

ASHOKKUMAR's picture

ಕಲ್ಲೆಯೆಸದೆ ಮಾವು ಉದುರಿಸುವ ಇತರ ಮಾರ್ಗಗಳು ಇರುತ್ತವೆ ಅನ್ನುವುದನ್ನು ಮರೆತು ಕಲ್ಲೆಸೆತ ಫಲ ನೀಡಲಿಲ್ಲ ಅಂತ ಹತಾಶೆ ಬೇಡ ಅಲ್ಲವೇ? ದೇವರು ಇದ್ದಾನೋ ಅಲ್ಲವೋ ಅನ್ನುವುದು ಇಲ್ಲಿ ಪ್ರಸ್ತುತವಲ್ಲವೇನೋ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 9:46pm — mahesha

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

mahesha's picture

ಅವುದವುದು.. ಒಪ್ದೆ!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 8:30pm — vworld4u

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

vworld4u's picture

ನಿಮ್ಮ ಭಾವನೆಗಳಿಗೆ ನನಗೆ ಗೌರವವಿದೆ. ಆದ್ರೆ ನೀವು "ನಾಸ್ತಿಕ" ತತ್ವಗಳನ್ನು ನಂಬಿದ್ದೀರ. ನಿಮಗೆ ಪ್ರಪಂಚ ಯಾವುದರ ಮೇಲೆ ನಿಂತಿದೆ ಅಂತ ಗೊತ್ತಿದೆಯ? ನನ್ನ ಪ್ರಕಾರ ಅದು ನಿಂತಿರುವುದು "ನಂಬಿಕೆ"ಯ ಭದ್ರ ಬುನಾದಿಯ ಮೇಲೆ. ನೀವು ನಂಬುವ ಮಹಾನ್ ಙ್ನಾನಿಗಳು, ವಿಙ್ನಾನಿಗಳು ಆ ನಂಬಿಕೆ ಇದ್ದಿದ್ದರಿಂದಲೇ ಅವರ ಶಂಶೋಧನೆಗಳನ್ನು ಜನರಿಗೆ ನಂಬಿಸಿದ್ದು. ನಾಸ್ತಿಕರು ಆಸ್ತಿಕರನ್ನು ಬದಲಿಸಲು ಸಾದ್ಯವಿಲ್ಲ. ಹಾಗೆ ಆಸ್ತಿಕರು ನಾಸ್ತಿಕರನ್ನು ಬದಲಿಸಲು ಸಾದ್ಯವಿಲ್ಲ. ಅವರಿಬ್ಬರಲ್ಲು ಇರುವ ಸಾಮಾನ್ಯ ಗುಣ ಅಂದರೆ "ನಂಬಿಕೆ". ನಾಸ್ತಿಕರು ಅವರನ್ನು ಮಾತ್ರ ನಂಬುತ್ತಾರೆ. ಆಸ್ತಿಕರು ದೇವರನ್ನು ನಂಬುತ್ತಾರೆ. ಆ ನಂಬಿಕೆ ಅವರು ಮಾಡುವ ಕೆಲಸದ ಮೇಲೆ ನಂಬಿಕೆಯನ್ನು ತರುತ್ತದೆ. ಅಂದರೆ ಅವರ ಮೇಲೆ ನಂಬಿಕೆ ತರುತ್ತದೆ. ಅಂದರೆ ಅವರನ್ನು ಗೆಲ್ಲಿಸುತ್ತದೆ. ನಾನಿಲ್ಲಿ ಮೇಲೆ ಬರೆದ ಭಾವನೆಗಳು "ಆಸ್ತಿಕರಿಗಾಗಿ". ನಾಸ್ತಿಕರಿಗೆ ಇವುಗಳು ಇನ್ನು ಸುಲಭ. ಅವರು ಅವರನ್ನು ಎಂದಿಗೂ ನಂಬಬೇಕು. ಅವರ ಮೇಲೆ ಆತ್ಮವಿಶ್ವಾಶವಿರಿಸಿಕೊಳ್ಳಬೇಕು. ನಂಬಿಕೆ ಇದ್ದಷ್ಟು ದಿನ ಅವರು ಗೆಲ್ಲುತ್ತಲೇ ಹೋಗುತ್ತಾರೆ. ಆದರೆ ದೊಡ್ಡ ಸಮಸ್ಯೆ ಅಂದರೆ ಅವರನ್ನು ಅವರೇ ನಂಬಲಾರದ ಪರಿಸ್ಥಿತಿಗೆ ಬಂದಾಗ! ಆಗ ಅವರನ್ನು ಕಾಪಾಡಲು ಯಾರಿಗೂ ಸಾದ್ಯವಿಲ್ಲ. ಆ ವಿಷಯದಲ್ಲಿ "ಆಸ್ತಿಕತೆ" ಮೇಲೆನಿಸಿಕೊಳ್ಳುತ್ತದೆ. ಏಕೆಂದರೆ ಅವರಿಗೆ ತಮ್ಮನು ನಂಬಲಾರದಾಗ ದೇವರಿರುತ್ತಾನೆ. ಅವನ ಮೇಲಿನ ನಂಬಿಕೆ ಅವರಿಗೆ ಒಂದಲ್ಲಾ ಒಂದು ದಿನ ಗೆಲುವಿನ ದಾರಿಯನ್ನು ತೋರುತ್ತದೆ. ಆ ನಂಬಿಕೆಯನ್ನು ಬಲಗೊಳಿಸಲೆಂದೇ ಈ ಬ್ಲಾಗ್. ಇದರಲ್ಲಿ ನಾಸ್ತಿಕರನ್ನು ಅಲ್ಲಗಳೆಯುವ ಉದ್ದೇಶವಿಲ್ಲ. ದೇವರನ್ನು ಬಲವಂತವಾಗಿ ನಂಬಿಸುವ ಉದ್ದೇಶವಂತೂ ನಿಜವಾಗಿಯೂ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 9:59pm — mahesha

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

mahesha's picture

೧) ನಾನು "ನಾನು ನಾಸ್ತಿಕ" ಎಂದು ಹೇಳಿಕೊಂಡಿಲ್ಲ.
೨) ನಾನು ಹೇಳತೊಡಗಿದ್ದು "ಆಸ್ತಿಕ/ನಾಸ್ತಿಕ" ಬಗ್ಗೆ ಅಲ್ಲ.

ನಾನು ಹೇಳಿದ್ದು ಹೇಗೆ
೧) ದೇವರನ್ನು ನಂಬೋದು ಬಿಡೋ ಅವರವರ ಒಳಸಂಗತಿ. ಅದಕ್ಕೆ ಬೇರೆಯವರು ಇಣುಕಬಾರದು.
೨) ತೊಂದರೆಗಳಿಗೆ ದೇವರನ್ನು ಮೊರೆಹೋಗುವುದೇ ಕೊನೆಯನ್ನುವುದು ಸರಿಯಲ್ಲ. ಬದಲಿಗೆ ತೊಂದರೆಯನ್ನು ಮೆಲ್ಲಗೆ ನಾವೇ ನಮ್ಮ ಜಾಣತನದಲ್ಲಿ ಬಿಡಿಸಲು ಮೊಗಸಬೇಕು. ಇದನ್ನು ಬಿಟ್ಟು ನಮ್ಮಲ್ಲಿ ಹಲವರು ತೊಂದರೆ ಬಂತು ಎಂದು ನೇರ "ಅಯ್ಯೋ ದೇವರೇ" ಎಂದು ಓಡುವುದ ಜಾಸ್ತಿ, ಕೈಗೆರೆ ತೋರಿಸುವುದು ಜಾಸ್ತಿ, ಏನೇನೋ ಪೂಜೆ ಮಾಡಿ ದುಡ್ಡು ಹರಿಸುವುದು ಜಾಸ್ತಿ.!

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂತೆಯ ಸರಮಾಲೆ
  • ಮನಸ್ಸಿನ ಮನಸ್ಸೆ...
  • ವ್ಯಕ್ತಿತ್ವ
  • ನೀನಾರಿಗಾದೆಯೋ ಎಲೆ ಮಾನವ!
  • ನಿಮಗ್ಯಾವ ಚಿಂತೆ
Syndicate content

ಲೇಖಕರು

vworld4u's picture

ಪರಿಚಯ

ಬದುಕಲೇನು ಬೇಕು? - ಒಂದಿಷ್ಟು ಜವಾಬ್ದಾರಿ, ಸಾಧನೆಯ ಉಮ್ಮಸ್ಸು, ಬೆಚ್ಚಗಿನ ಪ್ರೀತಿ, ಜೀವನ ನಿಭಾವಣೆಗೊಂದು ಕೆಲಸ, ಸಮಸ್ಯೆಗಳನ್ನೆದುರಿಸಲು ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ತೋಳಿಗಷ್ಟು ಬಲ, ಮನಸಿನಲ್ಲಷ್ಟು ಒಳ್ಳೆಯ ಗುಣ!
ಈ ರೀತಿಯ ಮನುಜನು ನಾನು!! - ವೆಂಕಟೇಶ. ಟಿ. ಆರ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 518 ಅತಿಥಿಗಳು ಆನ್ಲೈನ್ ಇರುವರು.


ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator