Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Yamini ರವರ ಬ್ಲಾಗ್

ಅ-ಪರಿಚಿತ!

June 13, 2006 - 5:40pm — Yamini

ನಾಲ್ಕು ದಿನಗಳಿಂದ ಮಳೆ ನಿಂತಿದೆ. ಮಂಗಳೂರಿನಲ್ಲಿ ಮಳೆ ನಿಂತಿದೆ ಅಂದರೆ ಬಿಸಿಲು ಹೆಚ್ಚಿದೆ ಎಂಬ ಅರ್ಥವೂ ಇದೆ!

ಮಳೆ ಬರುತ್ತಿರುವಾಗಲೆಲ್ಲಾ ಹೊರಗೆ ಕಾಲಿಡುವುದಕ್ಕೇ ಬೇಸರವಾಗುತ್ತಿತ್ತು. ಈಗ ಮಳೆ ಬಾರದೆ ಹೊರಗೆ ಹೋಗುವುದಕ್ಕೆ ಮನಸ್ಸಾಗುತ್ತಿಲ್ಲ. ನಿರಂತರವಾಗಿರಬಹುದು ಎಂಬ ಭ್ರಮೆಯನ್ನು ಹುಟ್ಟಿಸುತ್ತಲೇ ಆಗಮಿಸುವ ರಜೆ ಕೂಡಾ ಮಳೆಯಂತೆಯೇ ಮಾಯವಾಗಿಬಿಟ್ಟಿದೆ. ಮತ್ತೆ ಅದೇ ಬಸ್ಸು, ಹಂಪನಕಟ್ಟೆ. ಅಲ್ಲಿಂದ ಮಲ್ಲಿಕಟ್ಟೆ. ಅದೇ ಸಿಸ್ಟರ್‌ಗಳು.

ಬೇಡಾ ಅಂದರೂ ಕೆಲವು ತುಂಟ ಐಡಿಯಾಗಳು ಬರುತ್ತಲೇ ಇರುತ್ತವೆ. ಮೊನ್ನೆ ಹೀಗೇ ಆಯಿತು. ಜ್ಯೋತಿ ಸ್ಟಾಪ್‌ನಲ್ಲಿ ಆತ ಪೇಪರ್‌ ಬ್ಯಾಗ್‌ ಹಿಡಿದುಕೊಂಡು ಬಸ್‌ ಹತ್ತಿದಾಗಲೇ ಇದು `ಅತ್ರಿ'ಯಿಂದ ಹೊರ ಬಂದ ಪ್ರಾಣಿ ಅಂತ ಅರ್ಥವಾಗಿಬಿಟ್ಟಿತು. ಹೆಸರೇ ಇಲ್ಲದ ನನ್ನಣ್ಣನ ಫ್ರೆಂಡ್‌ಗಳಲ್ಲಿ ಯಾರೋ ಒಬ್ಬನನ್ನು ಹೋಲುತ್ತಿದ್ದ ಈ ಪ್ರಾಣಿಯನ್ನು ನೋಡುತ್ತಿದ್ದರೆ ಎಂಥವರಿಗೂ ಕೀಟಲೆ ಬುದ್ಧಿ ಜಾಗೃತವಾಗುತ್ತಿತ್ತು.

ನನ್ನ ಕೀಟಲೆ ಬುದ್ಧಿಯನ್ನು ಎಷ್ಟು ಅದುಮಿಟ್ಟರೂ ಅದು ಕೇಳಿಯೇ ಬಿಟ್ಟಿತು. `ಅತ್ರಿಗೆ ಹೋಗಿದ್ದಿರಾ?'.

ಜಾರುತ್ತಿದ್ದ ಕನ್ನಡಕ ಮೇಲೇರಿಸಿಕೊಂಡು ಅದು `ಹೌ...ಹೌದು' ಎಂದಿತು.

ಆ ಕ್ಷಣ ಅಯ್ಯೋ ಪಾಪ ಎನಿಸಿತಾದರೂ ಮತ್ತೊಂದು ಪ್ರಶ್ನೆ ಬಿಸಾಡಿದೆ. `ಜಯಂತಿ ಸಿಕ್ಕಿದ್ದಳಾ?'

`ಇಲ್ಲ. ಇ..ಲ್ಲ'

`ನನ್ನ ಗುರುತು ಸಿಕ್ಕಿತಾ?'

`?!?!...'

ಅಷ್ಟೊತ್ತಿಗೆ ಆಗ್ನೆಸ್‌ ಸ್ಟಾಪ್‌ ಬಂದಿತ್ತು. ನಾನು ಇಳಿದುಬಿಟ್ಟೆ.
ಜತೆಗಿದ್ದ ಅಮ್ಮಿ ಮಾತ್ರ ಬೈಯ್ಯುತ್ತಲೇ ಇದ್ದಳು: `ನಿಕ್ಕ್‌ ಒರ ಏರಾಂಡಲಾ ಸರೀ ಕಲ್ಪಾವೆರ್‌'

-ಯಾಮಿ
Ornamental seperator
  • Yamini ರವರ ಬ್ಲಾಗ್
  • Login or register to post comments
  • 744 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 13, 2006 - 6:00pm — Sunil Jayaprakash

ಅಯ್ಯೋ...ದಯವಿಟ್ಟು

Sunil Jayaprakash's picture

ಅಯ್ಯೋ, ಈಗ ಈ ಬಡಪಾಯಿಯ ಕಷ್ಟವನ್ನು ಸ್ವಲ್ಪ ಹೋಗಲಾಡಿಸುವಿರಾ..ದಯವಿಟ್ಟು.

?????!!$$##@@`ನಿಕ್ಕ್‌ ಒರ ಏರಾಂಡಲಾ ಸರೀ ಕಲ್ಪಾವೆರ್‌' - ಅಂದರೇನು?????!!$$##@@

  • Login or register to post comments
  • link
  • Email this ಪ್ರತಿಕ್ರಿಯೆ
June 13, 2006 - 6:13pm — pavanaja

ತುಳು ತೆರಿಲೆ

pavanaja's picture

> ನಿಕ್ಕ್‌ ಒರ ಏರಾಂಡಲಾ ಸರೀ ಕಲ್ಪಾವೆರ್‌' - ಅಂದರೇನು?

ಹಾಗೆಂದರೆ "ನಿನಗೆ ಒಮ್ಮೆ ಯಾರಾದರೂ ಚೆನ್ನಾಗಿ ಕಲಿಸುತ್ತಾರೆ" ಎಂದು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
June 13, 2006 - 6:22pm — ismail

ಇದು ನಿಜವೇ?

ismail's picture

ಇಂಚ ಮಲ್ಪರೆ ಬಲ್ಲಿ. ಆಂಡಲಾ ಒಂಜಿ ಕೇನುವೇ. ನಿಜವಾದ್ ಆತಿನವಾ? ಕತೆನಾ?
(ಹೀಗೆಲ್ಲಾ ಮಾಡಬಾರದು. ಆದರೂ ಒಂದು ಪ್ರಶ್ನೆ. ಇದು ನಿಜವಾ, ಕತೆಯಾ?)

  • Login or register to post comments
  • link
  • Email this ಪ್ರತಿಕ್ರಿಯೆ
June 13, 2006 - 8:27pm — Yamini

ವಾಸ್ತವದ ಮಹತ್ವ

Yamini's picture

ವಾಸ್ತವ ಕಲ್ಪನೆಗಿಂತ ಹೆಚ್ಚು ಆಶ್ಚರ್ಯ ಹುಟ್ಟಿಸುವುದು ನಿಜ ಅಂತ ನನಗೆ ಅರ್ಥವಾಗುತ್ತಿದೆ. ನನ್ನ ತುಳುವನ್ನು ಅನುವಾದಿಸಿದ ಪವನಜರಿಗೆ ಥ್ಯಾಂಕ್ಸ್.

-ಯಾಮಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ದ ರಾ ಬೇಂದ್ರೆಯವರ ಕವನ
  • ಪುರದ ಪಾಪಿಗಳು
  • "ಕಲಾ-ಪದ" - ದೃಶ್ಯಮಾಧ್ಯಮದ ವೇದಿಕೆ
  • "ಅನಂತನ ಅವಾಂತರ"
Syndicate content

ಲೇಖಕರು

Yamini's picture

ಪರಿಚಯ

ಹೌದು!
ನಾನು ಅದೇ ಯಾಮಿನಿ. ವ್ಯಾಸರಾಯ ಬಲ್ಲಾಳರ `ಬಂಡಾಯ'ಕಾದಂಬರಿಯ ಪಾತ್ರ. ಆ ಕಾದಂಬರಿ ಓದಿಯೇ ನನ್ನಪ್ಪ ನನಗೆ ಹೆಸರಿಟ್ಟದ್ದು. ಆದರೆ ನಾನು ಆ ಯಾಮಿನಿಯಷ್ಟು ಧೈರ್ಯದವಳಲ್ಲ. ನಾನಿರುವುದು ಮಂಗಳೂರಿನಲ್ಲಿ.
ಇದಕ್ಕಿಂತ ಹೆಚ್ಚಿನ ಮಾಹಿತಿ ಅಗತ್ಯವಿದೆಯೇ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator