ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Yamini ರವರ ಬ್ಲಾಗ್

ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

July 14, 2006 - 5:31pm — Yamini

ನನ್ನ ಅಮ್ಮನ ಲೆಕ್ಕಾಚಾರ ಸರಿಯಾಗಿದ್ದರೆ ನಾನು ಇಷ್ಟು ಹೊತ್ತಿಗೆ ಎಂಬಿಬಿಎಸ್ ಓದುತ್ತಾ ಇರಬೇಕಿತ್ತು. ಅಪ್ಪ ಹೇಳಿದಂತೆ ಕೇಳಿದ್ದರೆ ಈಗ ಕಂಪ್ಯೂಟರ್ ಸೈನ್ಸ್ ಕಲಿಯಬೇಕಿತ್ತು. ಯಾರ ಮಾತನ್ನೂ ಕೇಳದೇ ಇದ್ದುದರಿಂದ ಸಮಾಜ ಕಾರ್ಯ ಕಲಿಯುತ್ತಾ ಇದ್ದೇನೆ. ಈಗ ನಾನು ಬರೆಯಲು ಹೊರಟಿರುವ ವಿಷಯಕ್ಕೆ ಈ ವಿವರಗಳು ಎಷ್ಟರ ಮಟ್ಟಿಗೆ ಬೇಕು ಎಂಬುದು ಗೊತ್ತಿಲ್ಲ. ನನಗೆ ಮಾತ್ರ ಈ ವಿವರಗಳು ಅಗತ್ಯ ಎನಿಸುತ್ತಿವೆ.

ಎರಡು ವಾರದ ಹಿಂದೆ ಮಂಗಳೂರಿನ ಕೆಲವು ಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದು ನಾನು ಪಿಯುಸಿ ಮುಗಿಸಿದ ಕಾಲೇಜಿನ ಸುದ್ದಿಯಾಗಿದ್ದರಿಂದ ಕುತೂಹಲದಿಂದ ಓದಿದೆ. ವಿಷಯ ಬಹಳ ಸರಳ. ಸೈನ್ಸ್ ವಿಭಾಗದ ಹುಡುಗಿಯೊಬ್ಬಳು ಮೊದಲನೇ ವರ್ಷದ ಪಿಯುಸಿಯಲ್ಲಿ ಫೇಲಾಗಿದ್ದಾಳೆ. ಇದು ಪತ್ರಿಕೆಗಳಲ್ಲಿ ಸುದ್ದಿಯಾದದ್ದೇಕೆ ಎಂಬುದು ನಿಜಕ್ಕೂ ಸುದ್ದಿ.

ಆಕೆಯ ಹೆಸರು ಯಶ್ವಥ. ಈಕೆ ಕೆಮಿಸ್ಟ್ರಿಯ ಪ್ರಾಕ್ಟಿಕಲ್ಸ್ ನಲ್ಲಿ 10ಕ್ಕೆ 10 ಅಂಕಗಳನ್ನು ಪಡೆದಿದ್ದಳು. ಆದರೊ ಥಿಯರಿಯಲ್ಲಿ ಮಾತ್ರ 19 ಅಂಕಗಳಿಗೆ ಸಮಾಧಾನ ಪಡಬೇಕಾಗಿತ್ತು. ಪರಿಣಾಮವಾಗಿ ಈಕೆ ಪಿಯುಸಿಯ ಮೊದಲ ವರ್ಷದಲ್ಲೆ ಫೇಲ್. ಎಲ್ಲರಂತೆ ಯಶ್ವಥ ಸಪ್ಲಿಮೆಂಟರಿ ಪರೀಕ್ಷೆ ತೆಗೆದುಕೊಂಡಳು. ಆಕೆಗೆ ಥಿಯರಿಯಲ್ಲಿ ಸಿಕ್ಕದ್ದು ಕೇವಲ 22 ಅಂಕಗಳು. ಈ ಬಾರಿ ಆಕೆಗೆ ನಿಜಕ್ಕೂ ತಲೆಬಿಸಿಯಾಯಿತು. ನಿಗದಿದ ಫೀಸು ಕಟ್ಟಿ ತನ್ನ ಉತ್ತರ ಪತ್ರಿಕೆಯ ಫೋಟೋಸ್ಟಾಟ್ ಪ್ರತಿ ಪಡೆದಳು. ಅದನ್ನು ನೋಡಿದಾಗ ಆಕೆಯ ದುಃಖ ಮತ್ತಷ್ಟು ಹೆಚ್ಚಿತು. ಏಕೆಂದರೆ ಆಕೆಯ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡಿದವರು ಮೊದಲಿಗೆ 25 ಅಂಕಗಳನ್ನು ಕೊಟ್ಟಿದ್ದರು. ಇದಾದ ಮೇಲೆ ಏನೋ ಜ್ಞಾನೋದಯವಾದಂತೆ ಕೆಲವು ಉತ್ತರಗಳಿಗೆ ನೀಡಲಾಗಿದ್ದ ಅಂಕಗಳಲ್ಲಿ ಅರ್ಧ ಅಂಕಗಳನ್ನು ಕಡಿಮೆ ಒಟ್ಟು ಮೊತ್ತವನ್ನು 22ಕ್ಕೆ ಸೀಮಿತಗೊಳ್ಳುವಂತೆ ಮಾಡಲಾಗಿತ್ತು. ಈ ಅನ್ಯಾಯದ ಬಗ್ಗೆ ಪ್ರಶ್ನಿಸಿದ ಆಕೆಗೆ ಸಿಕ್ಕ ಉತ್ತರ ಎಲ್ಲ ವಿದ್ಯಾರ್ಥಿಗಳಿಗೆ ಸಿಗುವಂತೆಯೇ ಇತ್ತು-ಅದಷ್ಟೇ, ಚೆನ್ನಾಗಿ ಓದಿ ಇನ್ನೊಮ್ಮೆ ಪರೀಕ್ಷೆ ಬರೆ.

ಆಕೆಗೆ ಈ ಉತ್ತರ ಕೋಪ ತರಿಸಿತು. ಅದಕ್ಕೆ ಸಕಾರಣವೂ ಇದೆ. 25 ಅಂಕಗಳು ದೊರೆತರೆ ಪಾಸ್ ಆಗಬಹುದಿದ್ದ ಆಕೆಯನ್ನು ಉದ್ದೇಶಪೂರ್ವಕವಾಗಿ ಫೇಲ್ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿ ಆಕೆ ಪತ್ರಿಕಾ ಕಚೇರಿಗೆ ಹೋದಳು. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಯಿತು. ಈವರೆಗೂ ಆಕೆಗೆ ನ್ಯಾಯ ದೊರೆತಂತೆ ಕಾಣಿಸುವುದಿಲ್ಲ.

ಪತ್ರಿಕೆಗಳ ವರದಿಗಳನ್ನೇ ನೋಡಿಕೊಂಡು ಹೇಳುವುದಾದರೆ ಆಕೆ ಮರು ಮೌಲ್ಯ ಮಾಪನ ಮಾಡಿಸಿದಾಗ ಮೂವತ್ತು ಅಂಕಗಳು ದೊರತವಂತೆ. ಕಾಲೇಜಿನವರು ಮಾತ್ರ ಈ ತಪ್ಪನ್ನು ಸರಿಪಡಿಸಲು ಸಿದ್ಧವಿಲ್ಲವಂತೆ.

ಇಷ್ಟಕ್ಕೂ ಇದೆಲ್ಲಾ ಯಾಕೆ ನಡೆಯುತ್ತದೆ ಎಂಬುದು ಸೈನ್ಸ್ ನಲ್ಲಿ ಪಿಯುಸಿ ಕಲಿತ ಎಲ್ಲರಿಗೂ ಅಲ್ಲದಿದ್ದರೂ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಲಿತವರಿಗಂತೂ ಗೊತ್ತಿರುತ್ತದೆ. ಈ ಪ್ರತಿಷ್ಠಿತ ಕಾಲೇಜುಗಳ ದೊಡ್ಡ ಸಮಸ್ಯೆಯೆಂದರೆ ಅವರಿಗೆ ಪ್ರತೀ ವರ್ಷ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಬೇಕು. ಇದರಲ್ಲಿ ಹೆಚ್ಚಿನವರು 60 ಪರ್ಸೆಂಟ್ ಗಿಂತ ಹೆಚ್ಚು ಅಂಕ ಪಡೆದಿರಬೇಕು. ಒಂದೆರಡು ರಾಂಕ್ ಬಂದರೆ ಒಳ್ಳೆಯದು. ಇದನ್ನು ಸಾಧಿಸುವುದಕ್ಕಾಗಿ ಪಾಸ್ ಕ್ಲಾಸ್ ನ ಮಟ್ಟದಲ್ಲಿರುವ ವಿದ್ಯಾರ್ಥಿಗಳು ಎರಡನೇ ವರ್ಷದ ಪಿಯುಸಿಗೆ ಹೋಗದಂತೆ ತಡೆಯಲು ಉದ್ದೇಶ ಪೂರ್ವಕವಾಗಿ ಫೇಲ್ ಮಾಡಲಾಗುತ್ತದೆ.

ಇದು ನನ್ನ ಅನುಭವ ಕೂಡಾ. ನನ್ನನ್ನೂ ಎರಡನೇ ವರ್ಷದ ಪಿಯುಸಿಗೆ ಹೋಗದಂತೆ ತಡೆಯಲಿಲ್ಲ ಎಂಬುದನ್ನು ಬಿಟ್ಟರೆ ಉಳಿದೆಲ್ಲವೂ ಹೀಗೆಯೇ ಸಂಭವಿಸಿತ್ತು. ಅದಕ್ಕೇ ಇರಬೇಕೇನೋ ಯಶ್ವಥಳ ಕುರಿತ ವರದಿ ಓದಿದಾಗ ಇದು ನನ್ನ ಕುರಿತ ವರದಿಯೂ ಆಗಬಹುದಿತ್ತಲ್ಲ ಅನ್ನಿಸಿತು.

-ಯಾಮಿ
~.~
  • Yamini ರವರ ಬ್ಲಾಗ್
  • Login or register to post comments
  • 971 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 9, 2006 - 2:52pm — ಸಂಗನಗೌಡ

ಓಹ್ ! ಹುಡುಗೀರೂ ಅದಾರೆ !

ಸಂಗನಗೌಡ's picture

ಇವರು ಸಂಪದದಲ್ಲಿ ನೋಡುತ್ತಿರುವ ಎರಡನೇ ಹುಡುಗಿ. ಮೊದಲು ಅಂಜಲಿ ಅನ್ನೋರು. ಇವರು ಎರಡನೆಯವರು. ಸಂಪದಕ್ಕೆ ಸೇರಿಕೊಂಡಿರುವ ೧೩೫೫ ಜನರಲ್ಲಿ ಈ ಇಬ್ಬರೇನಾ ಹುಡುಗೀರು? ಹಾಗಿದ್ದರೆ ಇದೂ ಒಂದು ಕನ್ನಡಿಗರ ಸಮಸ್ಸೆನೇ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2006 - 9:09pm — Ashwini

Re: ಓಹ್ ! ಹುಡುಗೀರೂ ಅದಾರೆ !

Ashwini's picture

yaakri ? nan hesru illwa ili 1 varsha dinda?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2006 - 2:18am — ರಘುನಂದನ

Re: ಓಹ್ ! ಹುಡುಗೀರೂ ಅದಾರೆ !.... ಏನು ಪ್ರಯೋಜನ?

ರಘುನಂದನ's picture

ಒಂದು ವರ್ಷದಿಂದ ಹೆಸರು ಇದೆ ಅಂತೀರ, ಆದ್ರೂ ಇಂಗ್ಲೀಷ್ಗನ್ನಡದಲ್ಲಿ ಉತ್ರ ಬರೆದಿದ್ದೀರಲ್ಲ....? ಹಿರಿಯ ಸದಸ್ಯರು ದಯವಿಟ್ಟು ಹೀಗೆ ಮಾಡದಿರಿ. ನಮ್ಮ ಭಾಷೆಯನ್ನು ನಾವೇ ಅಲ್ಲವೇ ಮಾತನಾಡಬೇಕಿರುವುದು?

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2006 - 9:04am — ಸಂಗನಗೌಡ

Re: ಓಹ್ ! ಹುಡುಗೀರೂ ಅದಾರೆ !.... ಏನು ಪ್ರಯೋಜನ?

ಸಂಗನಗೌಡ's picture

ಇರಲಿ ಬಿಡಿ, ಏನೋ technical ತೊಂದರೆ ಆಗಿರಬೇಕು. ಹೌದೇನ್ರೀ ಅಶ್ವಿನಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2006 - 12:29pm — ರಘುನಂದನ

Re: ಓಹ್ ! ಹುಡುಗೀರೂ ಅದಾರೆ !.... ಏನು ಪ್ರಯೋಜನ?

ರಘುನಂದನ's picture

ಓಹೋ ಟೆಕ್ನಿಕಲ್ ತೊಂದರೆಯೇ ... ಸರಿ ಸರಿ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2006 - 2:29pm — H.S.R.Raghavend...

Re: ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

H.S.R.Raghavendra Rao's picture

H.S.Raghavendra Rao

ಇದು ನಿಜವಾಗಿಯೂ ಸಮಸ್ಯೆಯೇ. ಕಾಲೇಜಿನ ಹಿತರಕ್ಷಣೆಗಾಗಿ ವಿದ್ಯಾಥಿಗಳನ್ನು ಬಲಿ ಕೊಡುವುದು ಎಷ್ಟಕ್ಕೂ ಸರಿಯಲ್ಲ. ಅಂಥ ಕಡೆ ಮರುಮೌಲ್ಯಮಾಪನಕ್ಕೂ ಅವಕಾಶವಿಲ್ಲ. ನಾನು ಕೆಲಸ ಮಾಡಿದ ಕಾಲೇಜಿನಲ್ಲಿ ಇನ್ನೊಂದು ಬಗೆ. ಅಲ್ಲಿ ಮೊದಲ ಪ್ರಿ-ಯೂನಿವಸಿಟಿಯಲ್ಲಿ ಯಾರನ್ನೂ ಫೇಲ್ ಮಾವುವುದಿಲ್ಲ. ಈ ಎರಡೂ ಅತಿಗಳನ್ನು ಮೀರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2006 - 9:11pm — Yamini

ತುಂಬಾ ಸಂತೋಷವಾಗುತ್ತಿದೆ

Yamini's picture

ಸರ್, ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ನಿಮ್ಮ "ಹಾಡೇ ಹಾದಿಯ ತೋರಿತು" ಓದಿದ್ದೇನೆ. ನೀವು ಅದೇ ಎಚ್ ಎಸ್ ಆರ್ ಅಂದುಕೊಳ್ಳುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ನನ್ನ ಬರೆಹ ಅರ್ಹವಾಯಿತು ಎನ್ನುವುದೇ ನನಗೆ ಹೆಮ್ಮೆ. ಧನ್ಯವಾದಗಳು.

ಯಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 29, 2006 - 11:56pm — H.S.R.Raghavend...

Re: ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

H.S.R.Raghavendra Rao's picture

ನಮಸ್ಕಾರಗಳು. ನಿಜ. ನಾನು ಅದೇ ಎಚ್.ಎಸ್.ಆರ್. . ನಿಮ್ಮ ಒಳ್ಳೆಯ ಮಾತುಗಳಿಗಾಗಿ ನಾನು ಋಣಿ. ಆದರೆ ಈ ವೆಬ್ ಲೋಕದಲ್ಲಿ ನಾವೆಲ್ಲರೂ ಸಮಾನರು. ಅದೇ ಈ ಲೋಕದ ವಿಶೇಷ ಮತ್ತು ಹೆಚ್ಚುಗಾರಿಕೆ. `ಸಮಾಜಕಾರ್ಯ'ವು ತುಂಬಾ ಆಸಕ್ತಿ ಹುಟ್ಟಿಸುವ ಮತ್ತು ಜನಸೇವೆಗೆ ಅವಕಾಶ ಕೊಡುವ ವಿಷಯ.

H.S.Raghavendra Rao

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2006 - 8:20pm — Aravinda

Re: ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

Aravinda's picture

ನಿಮ್ಮ ಬರಹ ಚೆನ್ನಾಗಿದೆ, ನೀವು ಬರೆದ ಇನ್ನೊಂದು ಲೇಖನವನ್ನೂ ಓದಿದೆ(ಅ-ಪರಿಚಿತ! ).

ಧನ್ಯವಾದಗಳೊಂದಿಗೆ

ಅರವಿಂದ

http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Manada maathugalu
  • ಮೊದಲ ಅನುಭವ
  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
  • ನಿಮ್ಮಿ (ಕಥೆ)
  • ಕಣ್ಣು ನೋಡೇ ಗೌರಿ
Syndicate content

ಲೇಖಕರು

Yamini's picture

ಪರಿಚಯ

ಹೌದು!
ನಾನು ಅದೇ ಯಾಮಿನಿ. ವ್ಯಾಸರಾಯ ಬಲ್ಲಾಳರ `ಬಂಡಾಯ'ಕಾದಂಬರಿಯ ಪಾತ್ರ. ಆ ಕಾದಂಬರಿ ಓದಿಯೇ ನನ್ನಪ್ಪ ನನಗೆ ಹೆಸರಿಟ್ಟದ್ದು. ಆದರೆ ನಾನು ಆ ಯಾಮಿನಿಯಷ್ಟು ಧೈರ್ಯದವಳಲ್ಲ. ನಾನಿರುವುದು ಮಂಗಳೂರಿನಲ್ಲಿ.
ಇದಕ್ಕಿಂತ ಹೆಚ್ಚಿನ ಮಾಹಿತಿ ಅಗತ್ಯವಿದೆಯೇ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
  • ಸ್ವಲ್ಪನಗಿ
  • ಡೈರಿಯ ಕೆಲವು ಹಾಳೆಗಳು - ಭಾಗ ೫
  • ಇಂಬಕ್ಕ
  • ಡೈರಿಯ ಕೆಲವು ಹಾಳೆಗಳು - ಭಾಗ ೪
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
  • ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
  • ಓದಿದ್ದು ಕೇಳಿದ್ದು ನೋಡಿದ್ದು 40 ಮತಾಂತರ:ಮಹಾತ್ಮಾ ಗಾಂಧೀಜಿ ಏನು ಹೇಳಿದ್ದರು?
  • ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಇದು ಯಾವ ಹೂವು? ಹೇಳಿ ನೋಡೋಣ...
    October 6, 2008 - 11:03pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 10:59pm
  • Rajeshwari
    ಉ: ಸಪ್ತಸ್ವರಗಳು
    October 6, 2008 - 10:32pm
  • gurubaliga
    ಉ: ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
    October 6, 2008 - 10:09pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 10:03pm
  • Nagaraj.G
    ಉ: ಸ್ವಲ್ಪನಗಿ
    October 6, 2008 - 10:00pm
  • Nagaraj.G
    ಉ: ಸ್ವಲ್ಪನಗಿ
    October 6, 2008 - 9:58pm
  • Rajeshwari
    ಉ: ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
    October 6, 2008 - 9:56pm
  • siddharam
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 9:50pm
  • siddharam
    ಉ: ಗಜಲ್
    October 6, 2008 - 9:46pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator