ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › yuvapremi ರವರ ಬ್ಲಾಗ್

ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

July 15, 2008 - 7:12pm — yuvapremi

ಹೊಯ್ತು, ಎಲ್ಲ ಹೊಯ್ತು..! ಬಹಳ ವರ್ಷದಿಂದ ಕಾಪಾಡಿಕೊಂಡುಬಂದದೆಲ್ಲ ಈ ಸಂಜೆಯಷ್ಟೆ ಹೊಯ್ತು. ನಾನು ಇಂದು ಈ ಆಡುಗೆಮನೆಗಾದರು ಏಕೆ ಹೋದೆನೋ ? ನಾನು ಅಡುಗೆ ಮನೆಗೆ ಹೋಗದಿದ್ದರೆ ಹೀಗಾಗುತ್ತಿರಲಿಲ್ಲವಲ್ಲ.

ಏನಪ್ಪ ಹೋಗಿದ್ದು ನಿಂದು ಅಂದಿರ ? ಇಲ್ಲಿ ಕೇಳಿ, ನಾನು ಈ ಸಂಜೆ ತರಕಾರಿ ಕತ್ತರಿಸುವ ಸಲುವಾಗಿ ಅಡುಗೆಮನೆಗೆ ಹೋದೆ. ಒಂದು ಕೈನಲ್ಲಿ ತರಕಾರಿ ಹಿಡಿದು, ಮತ್ತೊದರಲ್ಲಿ ಚಾಕು ಹಿಡಿದು ಎಂದಿನಂತೆ ನನ್ನ ಪಾಡಿಗೆ ತರಕಾರಿ ಕತ್ತರಿಸುತಿದ್ದೆ. ಅದೇನಾಯ್ತೋ ತಿಳೀಲಿಲ್ಲ. ಈ ಚಾಕು ತರಕಾರಿಯನ್ನು ಬಿಟ್ಟು ನನ್ನ ಬೆರಳನ್ನು ಕತ್ತರಿಸಿಬಿಡುವುದೆ ?? ಕೃಷ್ಣ, ಕೃಷ್ಣ....!!

ಮೂರು ವರ್ಷದಿಂದ ಈ ಅಡುಗೆ ಮನೆಯ ನಂಟಿನ ಗಂಟನ್ನು ಒಂಟಿಯಾಗಿ ಹಿಡಿದುಬಂದವನಿಗೆ ಇಂದು ಹೀಗಾಗಿದ್ದು ಬಹಳ ಅನ್ಯಾಯ ಅಲ್ಲವೆ ?

ಏನು ರಕ್ತ ಅಂತೀರ, "ಕೆಂಪಾದವೊ ಎಲ್ಲ ಕೆಂಪಾದವೋ" ಅಂತ ನಮ್ಮ ಅಡುಗೆ ಕೋಣೆಯಲ್ಲ ಕೆಂಪಗಾಯ್ತು.
ನಮ್ಮ ರಕ್ತದಲ್ಲಿ ಅದೇನೊ ಫ಼ೈಬ್ರಿನೋಜೆನ್ ಅನ್ನೊ ಫ಼ೈಬರ್ ಇರುತ್ತಂತೆ, ಅದು ನಮ್ಮ ದೇಹದ ರಕ್ತ ಸೋರುವಿಕೆಯನ್ನು ತಡೆಗಟ್ಟಿ ಕತ್ತರಿಸಿದ ಬಾಗದಲ್ಲೆ ರಕ್ತವನ್ನು ವಣಗಿಸುತ್ತದಂತೆ. ಆದರೆ ಈ ಫ಼ೈಬ್ರಿನೋಜೆನ್ ಇವತ್ತು ನನ್ನ ಮೈನಲ್ಲಿ ರಜೆ ಹಾಕಿತ್ತು ಅನ್ಸುತ್ತೆ, ಒಂದು ಹದಿನೈದು ನಿಮಿಷ ರಕ್ತ ನಿಲ್ಲಲೇ ಇಲ್ಲ. ಸುಮಾರು ಅರ್ದ ಬಾಟಲಿನಷ್ಟು ರಕ್ತಿ ಹೋಗಿದ್ದರು ಹೋಗಿರಬಹುದು. ಇದೇ ರಕ್ತವನ್ನು ರಕ್ತವಿಲ್ಲದವರಿಗೆ ನೀಡಿದ್ದರೆ ಒಂದು ಜೀವ ಉಳಿಯುತ್ತಿತ್ತು ಅಂತನ್ನಿಸಿತು ನನಗೆ.

ಬೆರಳಿನಲ್ಲಿ ರಕ್ತ ಹರಿಯುತ್ತಿದ್ದಂತೆ ನನ್ನ ಕಣ್ಣಿನಲ್ಲಿ ನೀರು ಸುರಿಯಲಾರಂಭಿಸಿತ್ತು. ಯಾಕಪ್ಪ ಅಳ್ತೀಯ. ಎಲ್ರು ನಿನ್ನ ಹಾಗೆ ಒಂದಲ್ಲ ಒಂದು ರೀತಿಯಲ್ಲಿ ಕೈ ಕೊಯ್ದುಕೊಂಡು ರಕ್ತ ಸುರಿಸುತ್ತರೆ ಅಂತೀರ ನೀವು ?

ಆದ್ರೆ ನಾನು ಅಳ್ತಾ ಇರೋದು ಅದಕ್ಕಲ್ಲಪ್ಪ, ನನ್ನ ಅಳು ನೆನ್ನೆ ನಡೆದ ಇಂತಹುದೇ ಇನ್ನೊಂದು ಘಟನೆಗೆ.

ನೆನ್ನೆ ಎಂದಿನಂತೆ ಸಂಜೆ ಮನೆಗೆ ಬಂದು ಬಾಗಿಲು ತೆರೆಯಲು ಬಾಗಿಲ ಮುಂದೆಯೇ ನಿಂತು ನನ್ನ ಜೀಬಿನಲಿದ್ದ ಬಾಗಿಲ ಕೀ ಹುಡುಕಿದೆ. ಆದರೆ ಈ ಕೀ ನನ್ನನ್ನು ಎಷ್ಟು ದಿನದಿಂದ ದ್ವೇಷಿಸುತ್ತಿತ್ತೊ ಗೊತ್ತಿಲ್ಲ, ಅದು ನನ್ನ ಜೈಬಿನಿಂದ ಜಾರಿ ಎಲ್ಲೊ ಬಿದ್ದು ಹೋಗಿತ್ತು. ಈಗೇನು ಮಾಡುವುದು ? ಬಾಗಿಲನ್ನು ಹೊಡೆಯುವುದೇ ? ಆದರೆ ಈ ಅಪಾರ್ಟ್ಮೆಂಟ್ ಏಜನ್ಸಿನವರು ಅಬ್ಜಕ್ಟ್ ಮಾಡಿ ದಂಡ ಹಾಕಿದ್ರೆ ಏನು ಮಾಡುವುದು ಎನ್ನುವುದು ಒಂದು ಕಡೆ.
ಇನ್ನೊಂದು ಕಡೆ ನಮ್ಮ ಮನೆಬಾಗಿಲನ್ನು ನಾನು ಹೊಡೆದಾಗ ಪಕ್ಕದ ಮನೆಯವರು ನನ್ನನ್ನು ಕಳ್ಳನೆಂದುಕೊಂಡು ಪೋಲೀಸರಿಗೆ ಹಿಡಿದೊಪ್ಪಿಸಿದರೆ, ನಾನು ಈ ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ ಅನ್ನುವ ಭಯ. ಅದೊ ಅಲ್ಲದೆ ಮೊನ್ನೆ ಜೈಲಿನಲ್ಲಿ ಮಲಗಿದ್ದ ಕೆಲವರಿಗೆ ಸೊಳ್ಳೆಗಳು ಕಚ್ಚಿ ರಣಗಾಯ ಮಾಡಿವೆ ಎನ್ನುವ ಸುದ್ದಿ ಓದದ್ದ ನೆನಪು.

ಒಳ್ಳೆ ಪೇಚಾಟವಾಯ್ತಲ್ಲ, ಈ ಚಳಿನಲ್ಲಿ ರಾತಿಯಲ್ಲ ಮನೆಯ ಮುಂದೆ ಕೊತ್ಕೊಬೇಕಲ್ಲ ಅನ್ನುತ್ತ ನಾನು ಯೋಚನೆ ಮಾಡ್ತಾಯಿದ್ದೆ.

ಇದಕೆಲ್ಲ ಒಂದೇ ಉಪಾಯ.

"ಕೇವಲ ಒಂದು ಮನೆಯ ಕೀ ಜೋಪಾನವಾಗಿ ಇಟ್ಟುಕೊಳ್ಳಲು ಆಗದಿರುವಾಗ ನಮ್ಮಂತವರಿಗೆ ಮದುವೆಯೇ ಒಳ್ಳೆ ಶಿಕ್ಷೆ"

ಹೌದು, ಮದೆವೆ ಮಾಡ್ಕೊಂಡು ಮಡದಿ ಮನೆಯೊಳಗೆ ಇದ್ರೆ ಮನೆ ಕೀ ಯಾಕೆ ಬೇಕು, ಮನೆ ಮುಂದೆ ನಿಂತು "ಕುಲ್ಜಾ ಸಿಮ್ ಸಿಮ್" ಅಂದರೆ ಸಾಕು, ಹೆಂಡತಿಯಾದವಳು ನಗುಮುಖದಿಂದ ಮನೆಬಾಗಿಲನ್ನು ತೆರೆಯುತ್ತಾಳೆ. ಹಾ..! ಎಂತ ಉಪಾಯ. ಈಗಲೆ ನಮ್ಮ ತಂದೆತಾಯಿಗೆ ಫ಼ೋನ್ ಮಾಡಿ ಹೇಳ್ತೀನಿ. Smiling

ಆದರೆ ನನಗೆ ಈ ಮದುವೆ ಮಾಡಿಕೊಳ್ಳಲು ಅಷ್ಟು ಸಮಯವಿದೆಯೇ ?

  1. ಹುಡುಗಿ ಹುಡುಕ ಬೇಕು.
  2. ಹುಡುಗೀ ಮನೆಗೆ ಹೋಗಿ ಅವರು ಕೊಡುವ ವಣ ಉಪ್ಪಿಟ್ಟನ್ನು ಕಂಟಲಿಗೆ ಇಳಿಸಬೇಕು.
  3. ಎಂಗೆಜ್ಮೆಂಟ್ ಮಾಡ್ಕೊಬೇಕು.
  4. ನಂತರ ಮದುವೆ ಮಾಡ್ಕೊಬೇಕು.

ಅಬ್ಬಬ್ಬ, ಎಷ್ಟು ದೊಡ್ಡ ಪ್ರೋಸೆಸ್ಸ್ ಇದು, ಇದರಲ್ಲಿ ಯಾವ ಒಂದು ಸ್ಟೆಪ್ಪನ್ನು (step) ದಾಟಿ ಮತ್ತೊಂದಕ್ಕೆ ಹೋಗುವಂತಿಲ್ಲವಲ್ಲ. ನಮ್ಮ ಈ ಯಾಂತ್ರಿಕ ಜೀವನದಲ್ಲಿ ನಾವು ಇಷ್ಟು ಸಮಯವನ್ನಾದರು ಎಲ್ಲಿಂದ ತರುವುದು ? ಯಾರಾದರು ಸಮಯವನ್ನು ಸಾಲ ಕೊಡುವರೆ ?

ಅದಕ್ಕೆ ನಾನು ಇನ್ನೊಂದು ಉಪಾಯ ಮಾಡಿದ್ದೇನೆ. ಅದೇನಪ್ಪ "ಇನ್ಸ್ಟೆಂಟ್ ವೈಫ಼್ ಪ್ರೊಗ್ರಾಮ್". ಇದು ನನ್ನಂತ ಎಲ್ಲಾ ಅವಿವಾಹಿತ ಹುಡುಗ/ಹುಡುಗಿ ಯರಿಗೆ ಬಹಳಾನೇ ಉಪಯೋಗವಾಗುತ್ತದೆ.

ಏನಿಲ್ಲ, ಈ ಮದುವೆಯ ಎಲ್ಲ ಕೆಲಸವನ್ನು ನಾವು ಇಂಟರ್ನೆಟ್ ಸಹಾಯದಿಂದ ಆನ್ಲೈನ್ ನಲ್ಲೆ ಮಾಡುವಂತಿದ್ದರೆ ಬಹಳ ಸಂತೋಷವಲ್ಲವೆ ? ಈ ಹೆಂಡತಿಯನ್ನು ನಮ್ಮ ಮ್ಯಾಟ್ರಿಮೋನಿಯಲ್ ಏಜನ್ಸಿಯವರು ಅಣಿಮಾಡಿದರೆ ಅವರು ಕೇಳಿದಷ್ಟು ಪ್ರಾಸಸಿಂಗ್ ಶುಲ್ಕ ಕೊಡುವುದು ಇನ್ನೊ ಒಳಿತು. [ಈಗಾಗಲೆ ಪ್ರಪಂಚದ ಕೆಲ ಮೂಲೆಯಲ್ಲಿ ಆನ್ಲೈನ್ ಮದುವೆಗಳು ಆಗಿರುವುದನ್ನು ಇಲ್ಲಿ ಸ್ಮರಿಸಬಹುದು]

ನಾವು ಇಂಟರ್ನೆಟ್ ನಲ್ಲಿ ನಮಗೆ ಹೆಂಡತಿಯಲ್ಲಿನ ಬೇಕು/ಬೇಡ ಗಳ ಒಂದು ಪಟ್ಟಿಯನ್ನು ಅಣಿಮಾಡಿದರೆ ಸಂಜೆಯಷ್ಟರಲ್ಲಿ ಅಂತಹ ಒಬ್ಬಳು ಹೆಂಡತಿಯನ್ನು ರೆಡಿಮಾಡಬೇಕು.

ಕೆಲವು ಬೇಕು ಬೇಡಗಳ ಪಟ್ಟಿ ಹೀಗಿದೆ :

೧) ದಿನದಲ್ಲಿ ಎಷ್ಟು ಗಂಟೆ ನಗುತ್ತಾಳೆ. (ದಿನವೆಲ್ಲ ನಗುವ ಹೆಂಡತಿ ಬೇಡ. ಮನೆ ಹುಚ್ಚಾಸ್ಪತ್ರೆ ಯಾಗುತ್ತೆ ಅಷ್ಟೆ) ?
೨) ಪ್ರತಿ ದಿನ ಮೇಕಪ್ ಮಾಡಲು ಎಷ್ಟು ಗಂಟೆ ತೆಗೆದುಕೊಳ್ಳುತ್ತಾಳೆ. ?
೩) ಕೆಲಸಕ್ಕೆ ಹೋಗುವಳೆ ?
೪) ಕ್ರೆಡಿಟ್ ಕಾರ್ಡ್ ಕೇಳುವಳೆ ?
೫) ಜಗಳವಾಡುವಳೆ ? ಹೌದು ಎಂದಲ್ಲಿ ದಿನದಲ್ಲಿನ ಎಷ್ಟು ಗಂಟೆ ಜಗಳವಾಡುತ್ತಾಳೆ ?
೬) ಎತ್ತರ ಎಷ್ಟಿರ ಬೇಕು ?
೭) ತೊಕ ಎಷ್ಟಿರ ಬೇಕು ? (ಬಹಳ ತೊಕವಿದ್ದರೆ ನಿಮ್ಮ ಕಾರು ಒಂದು ಭಾಗದಲ್ಲಿ ವಾಲೀತು ಎಚ್ಚರ..!!)
೮) ತಿಂಗಳೆಲ್ಲ ಮೇಕಪ್ಗಾಗಿ ಎಷ್ಟು ಹಣ ಕರ್ಚು ಮಾಡುವಳು. ಮುಂತಾದವು.

ಈ ಪಟ್ಟಿಯಲ್ಲಿ ಯಾವುದು ಎಷ್ಟಿರಬೇಕು ಎಂದು ನಮ್ಮ ತಂದೆ/ತಾಯಿ ಯರು ಇಂಟರ್ನೆಟ್ ನಲ್ಲೆ ಸೊಚಿಸಿದರೆ ನಾವು ಸಂಜೆ ಕೆಲಸದಿಂದ ಬರುವಾಗ ಮ್ಯಾಟ್ರಿಮೋನಿಯಲ್ ಆಫ಼ೀಸ್ಗೆ ಹೋಗಿ ಈ ಹುಡುಗಿಯನ್ನು ಕರೆದು ತಂದು ತಾಲಿ ಕಟ್ಟಿ ಆರತಿಮಾಡಿ ಹೆಂಡತಿ ಅಂತ ಮನೆ ತುಂಬಿಸಿಕೊಳ್ಳಬಹುದು.

ನಿಮಗೆಲ್ಲರಿಗು ಈ ನನ್ನ ಉಪಾಯ ಅತಿರೇಕವೆನಿಸಬಹುದು. ಆದರೆ ಈಗಿನಂತೆಯೇ ಜೀವನ ಯಂತ್ರದಂತೆ ಓಡಿದರೆ ಮುಂದಿನ ೩-೪ ವರ್ಷದಲ್ಲಿ ಇಂತಹ ಯೋಜನೆಗಳು ಅನುಷ್ಟಾನಕ್ಕೆ ಬರುವುದರಲ್ಲಿ ಯಾವ ಸಂಶಯವಿಲ್ಲ.

ಈಗಾಗಲೆ ಇಂತಹ ಒಂದು ಯೋಜನೆ ಜಾರಿಯಲ್ಲಿ ಇದ್ದಿದ್ದರೆ ನಾನು ಈ ಲೇಖನವನ್ನು ನನ್ನ ಹತ್ತೊ ಬೆರಳುಗಳನ್ನು ಉಪಯೋಗಿಸಿ ಟೈಪಿಸಬಹುದಿತ್ತು. ಮುಂದಿನ ಎರಡು ಮೂರು ದಿನದವರೆಗೆ ನನ್ನ ಒಂದು ಬೆರಳಿಗೆ ವಿರಾಮದ ಅಗ್ತತ್ಯ ಬರುತ್ತಿರಲಿಲ್ಲ.


ನಕ್ಕುಬಿಡಿ.......................!!
ಈ ರೀತಿಯ ಒಂದು ವ್ಯವಸ್ತೆ ಏನಾದರು ಜಾರಿಯಲ್ಲಿದ್ದರೆ ಹೇಗಿರಬಹುದು/ಹೇಗಿರಬೇಕು ಎಂದು ಊಹಿಸಿಕೊಂಡು ಲೇಖನವನ್ನು ಸುಮ್ಮನೆ ತಮಾಷೆಗೆ ಬರೆದ್ದದ್ದು.

ಅಬ್ಬಬ್ಬ..........! ಇಂತಹ ವ್ಯವಸ್ತೆ ಏನಾದ್ರು ನಮ್ಮಲ್ಲಿ ಆದ್ರೆ ಮದುವೆಗೆ ಯಾವ ಬೆಲೆಯೂ ಇರುವುದಿಲ್ಲ.



ಕೊನೆಗೆ ನಾನು ತೀರ್ಮಾನಿಸಿದ್ದು "ನನಗೆ ಇನ್ಸ್ಟೆಂಟ್ ವೈಫ಼ಿನ ಅಗತ್ಯವಲ್ಲ, ಬೇಕಿರುವುದು ದ್ಯೊಪ್ಲಿಕೇಟ್ ಮನೆ ಕೀ...!!" ಅಂತ.............! Eye-wink

  • ಚುಟುಕು ಬರಹ
~.~
  • yuvapremi ರವರ ಬ್ಲಾಗ್
  • Login or register to post comments
  • 311 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 16, 2008 - 11:52am — roopablrao

ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

roopablrao's picture

ನಮಗೆ ಮದುವೆ ಬೇಡ ಸ್ವಾಮಿ ಅಂತ ಅಂದೋರಲ್ಲವೇ ತಾವು Smiling

ಹೋಗಲಿ ಬಿಡಿ ಬುದ್ದಿ ಬಂದಿದೆ ಅನ್ನಿಸುತ್ತೆ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 8:38pm — yuvapremi

ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

yuvapremi's picture

ರೊಪ ಮ್ಯಾಡಮ್, ಹೌದು ಅದೂ ನಾನೇ, ಇದೂ ನಾನೇ Smiling

"ಗುಂಡೀ ಗೆ ಬಿದ್ದೊಂಗೆ ಆಳಿಗೊಂದು ಕಲ್ಲು" ಅಂತ ನೀವು ನನ್ನ ಮೇಲೆ ಸೇಡು ತೀರಿಸಿಕೊಂಡಂತಿದೆ..!! Sad

ಆದರು ನಾನು ಈ ಲೇಖನದ ಕೊನೆಯಲ್ಲಿ ಹೇಳಿದ ಹಾಗೆ "ನಮಗೆ ಮಧುವೇ ಬೇಡಾ ಸ್ವಾಮಿ" ಅಂತಲೇ ಅಂತೀನಿ...!! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2008 - 1:21pm — roopablrao

ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

roopablrao's picture

ಆಗ ಹೇಳಿದ್ದು ಮದುವೆ ಬೇಡ ಅಂತ

ಈಗ ಮಧುವೇ (ವಧುವೇ (ಮದುವೆ ) ಬೇಡ ಅನ್ನಲ್ಲ Smiling ) ಬೇಡ ಅಂತೀರಾ ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2008 - 6:30pm — yuvapremitwo

ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

yuvapremitwo's picture

ರೊಪಾ ಮ್ಯಾಡಮ್, ನೀವು ಹೇಳಿದ್ದು "ಅಳಿಯಾ ಅಲ್ಲ, ಮಗಳ ಗಂಡ" ಅಂದ ಹಾಗೆ ಆಯ್ತು.

ಬಹಳ ಯಂಗೆಳೆಯರಾದ ನಾವು ಕೆಲವು ಭಾರಿ ಕಣ್ಣಿನಲ್ಲಿ ನೋಡುವುದೇ ಒಂದು, ಕೈನಲ್ಲಿ ಟೈಪುಸುವುದೇ ಇನ್ನೊಂದಾಗುತ್ತದೆ. Smiling
ಅದನ್ನು ನಮ್ಮ ವಯಸಿನ ತಪ್ಪು ಅಂತ ಅಂದ್ಕೊಳ್ಳಿ...!! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 11:13am — muralihr

ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

muralihr's picture

ಅಯ್ಯೋ ಪಾಪ ಅದೆಷ್ಟು ನೋವಾಯ್ತೋ ಏನೋ ?
ಛೇ ! ನನಗೆ ತಿಳಿದಿದ್ದರೆ ಒ೦ದೇ ಕ್ಷಣದಲ್ಲಿ ನಿಮ್ಗೇ ಡುಪಿಲಿಕೇಟ್ ಕೀ ಮಾಡುವ ವನ ಪೋನ್ ನ೦ಬರಿ ಕೊಡ್ತಿದ್ದೆ.
ಮೊಬೈಲ್ ನ೦ ಡಯಲ್ ಮಾಡಿದರೆ - ಮನೆಗೆ ಬ೦ದು ಕೀ ತಯಾರು ಮಾಡ್ತಾರೆ.
ಈಗ ಏನು ಮಾಡಿದ್ದೀರಿ ..ಡುಪಿಲಿಕೇಟ್ ಕೀ ತ೦ದರೋ ಅಥವಾ ರಿಯಲ್ ಹೆ೦ಡತಿಯನ್ನೇ ತ೦ದರೋ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 4:28pm — yuvapremi

ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!

yuvapremi's picture

ಹೀ ಹೀ ಹೀ....!!

ಕೇಕ್ ಇಷ್ಟಾ ಅಂತ ಬೇಕರೀನೇ ಕೊಂಡ್ಕೊಳೊಕ್ಕಾಗುತ್ತ ?? Smiling
ನಾನು ಈಗ ಎರಡು ಡ್ಯೂಪ್ಲಿಕೇಟ್ ಕೀ ಮಾಡಿಸಿ ಇಟ್ಟುಕೊಂಡಿದ್ದೇನೆ...!! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಜಕೀಯ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ನನ್ನ ಕಾವ್ಯ
  • "ಪ್ರೀತಿಯ ಗೆಳೆಯ"
  • ಎಲ್ಲೆಲ್ಲೂ ಇ-ಮೇಲು, ಆ ಮೇಲು…!
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 473 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator