ಪ್ರೇಮಿಗಳ ನಗರಿ ಬೆಂಗಳೂರು...!!
ಬಹುಶಃ ಈ ಹೆಸರು ನಮ್ಮ ಬೆಂಗಳೂರಿನ ಜನರ ಮನಸಿನಲ್ಲಿ ನೆನಪಿದ್ದೂ ಮರೆಯಾದಂತಿದೆ...!!
ಹೌದು, ಒಂದು ಕಾಲದಲ್ಲಿ ನಮ್ಮ ಬೆಂಗಳೂರು ಉದ್ಯಾನ ನಗರಿ, ಪೆನ್ಶನರ್ಸ್ ಪ್ಯಾರಡೈಸ್ ಅಂತ ಕರೆಯಲ್ಪಡುವುದಲ್ಲದೆ ಪ್ರೇಮಿಗಳ ನಗರ ಎಂದೂ ಕರೆಸಿಕೊಳ್ಳುತ್ತಿತ್ತು. ಅಬ್ಬಬ್ಬ ಎಷ್ಟು ಪ್ರೇಮಿಗಳು ಅಂತೀರ ಮಾರಾಯ್ರೆ ನಮ್ಮ ಬೆಂಗಳೂರಿನಲ್ಲಿ ಆಗ. ನಗರದ ತುಂಬೆಲ್ಲ ಕೈಗೆ ಕಾಲ್ಗೆ ಸಿಗೋರು ಪ್ರೇಮಿಗಳು. ಎಲ್ಲಾ ಪ್ರೇಮಿಗಳು ಬಿಡುವಿಲ್ಲದಿದ್ದರೂ ಸರೀ, ಪ್ರತಿದಿನ ನಮ್ಮ ನಗರದ ಪ್ರೇಮಿಗಳ ದೇವಸ್ತಾನಕ್ಕೆ ಬೇಟಿ ಕೊಡ್ತಾ ಇದ್ರು.
ಯಾವುದು ಈ ಪ್ರೇಮಿಗಳ ದೇವಸ್ತಾನ ಅಂದ್ರ ? ಅದೇಪ್ಪ, ನಮ್ಮ ಲಾಲ್-ಭಾಗ್, ಕಬ್ಬನ್ ಪಾರ್ಕು. ಇವೆರಡು ನಮ್ಮ ನಗರದ ಪ್ರೇಮಿಗಳಿಗೆ ಎರಡು ಕಣ್ಣುಗಳಿದ್ದ ಹಾಗೆ ಇತ್ತು ಆಗ.
ಆದರೆ ಈಗ ನೀವೆಲ್ಲ ಸ್ವಲ್ಪ ವಾಸ್ತವಕ್ಕೆ ಬನ್ನಿ.
ಪ್ರೇಮಿಗಳ ನಗರ ಬೆಂಗಳೊರು ಅಂತ ಅನ್ನೊದೇನೊ ಸರಿ, ಆದರೆ ಈಗ ನಮ್ಮಂತಹ ಪ್ರೇಮಿಗಳಿಗೆ ಪ್ರೀತಿ ಮಾಡೊದಕ್ಕೆ ಲಾಲ್ ಭಾಗ್ , ಕಬ್ಬನ್ ಪಾರ್ಕ್ ಬಿಡಿ, ಒಂದು ಕಾಲಿ ಬೆಂಚೊ ಸಿಗ್ತಾ ಇಲ್ಲ ನೋಡಿ ?
ಇಂತಹ ಸಂಕಟದ ಸಂದರ್ಭದಲ್ಲಿ ನಮ್ಮಂತಹ ಯುವಪ್ರೇಮಿಗಳು ಹೇಗೆ ತಾನೆ ಪ್ರೀತಿಸಿಯಾರು ?
ಬನ್ನಿ, ಇಲ್ಲಿ ಇಬ್ಬರು ಯುವಪ್ರೇಮಿಗಳು ಈ ನಮ್ಮ ಬದಲಾದ ಬೆಂಗಳೂರು ಸಿಲಿಕಾನ್ ವ್ಯಾಲಿಯಲ್ಲಿ ಪ್ರೀತಿಸಲು ಸ್ತಳವಿಲ್ಲದೆ ಎಲ್ಲಿಗೆ ಓಡಿಹೋಗುವುದು ಎಂಬುದನ್ನು ಯೋಚಿಸುತ್ತಿದ್ದಾರೆ. ಇವರಿಗೆ ನೀವು ಸಪೋರ್ಟ್ ಮಾಡ್ತೀರೊ ಇಲ್ಲ ಕಿವಿ ಹಿಡಿದು ಬುದ್ದಿ ಹೇಳ್ತೀರೊ ನಿಮಗೇ ಬಿಟ್ಟಿದ್ದು.
ಹೀಗೊಂದು ಪ್ರೇಮಿಗಳ ನಡುವಿನ ಕರೆ...!!
9981425739.......!! ಟ್ರಿನ್ ಟ್ರಿನ್...!!
ಪ್ರಿಯಾ: ಹಲೋ...!
ರಾಜೇಶ್ : ಹಲೋ, ಹೇಗಿದ್ದೀಯ ಪ್ರಿಯಾ.
ಪ್ರಿಯಾ:ಹಾಯ್ ರಾಜೇಶ್, ನಾನು ಚನ್ನಾಗಿದ್ದೀನಿ ಆದ್ರೆ ನನಗೆ ನಿನ್ಮೇಲೆ ಕೋಪ ಬಂದಿದೆ. ನೀನು ನೆನ್ನ ಸಂಜೆ ನನ್ನನ್ನು ಬೇಟಿ ಮಾಡಲು ಕಬ್ಬನ್ ಪಾರ್ಕಿಗೆ ಬರ್ಲೇ ಇಲ್ಲ ? ನಾನು ಕಾದು ಕಾದು ಅಲ್ಲೆ ಒಂದು ಮೊಲೆಯಲ್ಲಿ ಮಾರುತ್ತಿದ ಕಬ್ಬನ್-ಪಾರ್ಕ್ ಸ್ಪೆಶಲ್ ಹುರಿದ ಕಡಲೆಕಾಯಿ ತಿನ್ನುತ್ತ ಬರೆಗೈನಲ್ಲಿ ಮನೆಗೆ ಹೋದೆ ಗೊತ್ತ.
ರಾಜೇಶ್: ಹೋ.., ಸಾರಿ ಪ್ರಿಯ, ನಾನು ಹೇಳಿದ ಹಾಗೆ ಕಬ್ಬನ್ ಪಾರ್ಕಿಗೆ ಬಂದಿದ್ದೆ,ಆದ್ರೆ ನಾನು ಅಲ್ಲಿ ಕಂಡದ್ದನ್ನು ನೀನು ಕೇಳಿದರೆ ನೀನು ನಂಬೋದಿಲ್ಲ.
ಪ್ರಿಯಾ: ಐಯ್ಯೊ ಕೃಷ್ಣ, ಎನಪ್ಪ ಅಂತದ್ದು ಕಂಡದ್ದು, ನನ್ಗಿಂತ ಚನ್ನಾಗಿರೊ ಹುಡುಗೀನೇನಾದ್ರು ಕಂಡು ಅಲ್ಲೇ ನಿಂತ್ಬಿಟ್ಯಾ ಏನು ಕಥೆ ನಿಂದು ????
ರಾಜೇಶ್:ಇಲ್ಲಾ ಪ್ರಿಯಾ,ನೀನು ಗಿಫ಼್ಟ್ ಮಾಡಿರೊ ಈ ಮೊಬೈಲ್ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ ನಾನು ಹಾಗೆ ಮಾಡ್ಲಿಲ್ಲ.
ಪ್ರಿಯಾ: ಆದ್ರೆ ನೀನು ನೆನ್ನೆ ಕಂಡದ್ದಾದರೂ ಏನು ?
ರಾಜೇಶ್:ಹಾಗೆ ಕೇಳು ಹೇಳ್ತೀನಿ, ನೆನ್ನೆ ನಾನು ನಿನ್ನನ್ನ ಮೀಟ್ ಮಾಡಲು ಪಾರ್ಕಿನ ಒಳಗೆ ಬಂದನ,ಅಲ್ಲಿ ನೋಡ್ತೀನಿ ನಮ್ಮ ಅಪ್ಪ ಇರೋದೆ...! ಅವರು ನಾವಿಬ್ಬರು ಸದಾ ಸೇರುತ್ತಿದ್ದ ಮರದ ಬುಡದ ಬಳಿಯೇ ಇರುವ ಜಾಗಿಂಗ್ ಟ್ರ್ಯಾಕ್ ಬಳಿ ತಮ್ಮ ಓಬಿಸಿಟಿ ಓಡಿಸಲು ಓಡುತ್ತಿದ್ದದ್ದು ಕಂಡೆ.
ಪ್ರಿಯಾ:ಮೈ ಗಾಡ್, ನಿಜ್ವಾಗ್ಲು, ನನಗೆ ಗೊತ್ತಾಗ್ಲೇ ಇಲ್ಲ, ಅಪ್ಪಿ ತಪ್ಪಿ ನೀನು ಅಲ್ಲಿ ಬಂದ್ಬಿಟಿದ್ರೆ, ನಮ್ಮಿಬ್ಬರನ್ನ ನಿಮ್ಮ ತಂದೆ ನೋಡಿದ್ರೆ ದೇವ್ರೆ ಗತ್ತಿ ನಮ್ಮ ಪ್ರೀತಿಗೆ. ಸದ್ಯಾ, ನೀನು ಬರದೇನೆ ಒಳ್ಳೆ ಕೆಲ್ಸಾ ಮಾಡಿದೆ.
ರಾಜೇಶ್:ಹೌದು ನಾನು ಹಾಗೇ ಅಂದುಕೊಂಡೆ, ಈ ಬೆಂಗಳೂರಿನ ಅಪ್ಪಂದ್ರೆಲ್ಲ ಈಗ ಅದೇನೊ ಲಾಫ಼ಿಂಗ್ ಕ್ಲಬ್ ಅಂತೆ, ಅದೇ ಹುಚ್ಚುಚ್ಚಾಗಿ ನಕ್ರೆ ಸಕ್ರೆ ಕಾಯಿಲೆ ಕಡಿಮೆಯಾಗುತ್ತೆ ಅಂತಾರಲ್ಲ, ಅದನ್ನ ಕಲಿಸೋ ತರಗತಿ, ಅದರ ತರಗತಿಗೆ ನಮ್ಮ ರಸ್ತೆಯಲ್ಲಿರುವ ಅಪ್ಪಂದ್ರೆಲ್ಲ ಪ್ರತಿ ದಿವಸ ಕಬ್ಬನ್ ಪಾರ್ಕ್ನಲ್ಲಿ ಕಾಣಿಸ್ಕೊಳ್ಳೋಕೆ ಶುರುಮಾಡಿದ್ದಾರೆ.
ಪ್ರಿಯಾ:ಮೈ ಗಾಡ್, ಅದಕ್ಕೇ ನಾನು ನಿನಗೆ ಹೇಳಿದ್ದು ಈ ಪಾರ್ಕುಗಳ ಸಹವಾಸ ನಮಗೆ ಬೇಡ, ಅವೆಲ್ಲ ಓಲ್ಡ್ ಸ್ಟೈಲು, ನಾವು ಲೇಟೆಸ್ಟಾಗಿ ಪಿ.ವಿ.ಆರ್, ಕಾಫ಼ಿ ಡೇ ನಲ್ಲಿ ಪ್ರೀತಿ ಮಾಡೋಣ ಅಂತ. ನೀನು ನನ್ನ ಮಾತು ಎಲ್ಲಿ ಕೇಳ್ತೀಯ.ನಮ್ಮ ಮದುವೆ ಆದ್ಮೇಲೆ ನೀನು ಹೀಗೆ ನನ್ನ ಮಾತು ಕೆಳ್ಳಿಲ್ಲ ಅಂತ ಅಂದ್ರೆ ಮಾರನೆ ದಿವ್ಸಾನೆ ನಿನಗೆ ಇಂಟರ್ನೆಟ್ ಫ಼ಾಶ್ಟ್ ಟ್ರ್ಯಾಕ್ ಕೋರ್ಟ್ ನಿಂದ ಡಿವೋರ್ಸ್ ಹಾಕ್ತಿನಿ ಅಷ್ಟೆ.
ರಾಜೇಶ್: ಅಯ್ಯೋ ಮಾರಾಯ್ತಿ, ಹಾಗೆಲ್ಲ ಮಾಡ್ಬಿಟ್ಟೀಯ. ಇರೋ ಒಂದು ಜೀವ ನಿನ್ಮೇಲೆ ಇಟ್ಕೊಂಡು ಜೀವಿಸ್ತಾ ಇದ್ದೀನಿ. ನೀನು ಹೇಳಿದ ಹಾಗೆ ಮಾಡ್ಬಿಟ್ರೆ ನನ್ನ ಜೀವ ಜಾರಿ ಜೇಬಿಗೆ ಬಿದ್ಬಿಡುತ್ತೆ.
ಪ್ರಿಯಾ:ಹಾಗಿದ್ರೆ ನಾಳೆಯಿಂದ ನಮ್ಮ ಪ್ರೀತಿ ಠಿಕಾಣಿ ಕಾಫ಼ಿ ಡೇನಲ್ಲಿ ಆಯ್ತಾ ?
ರಾಜೇಶ್:ಹಾ....! ಆದ್ರೆ ಅದು ಪ್ರಿಯಾ....!!
ಪ್ರಿಯಾ:ಏನು ನಿಂದು ರಾಗ, ಕಾಫ಼ಿ ಡೇ ಬೇಡ ಅಂದ್ರೆ ಪಿ.ವಿ.ಆರ್ ಗೆ ಹೋಗೋಣ ಬಿಡು.
ರಾಜೇಶ್:ಅದಲ್ಲ ಪ್ರಿಯಾ,ಇತ್ತೀಚೆಗೆ ನನ್ನ ಮೇಲೆ ನಮ್ಮ ತಾಯಿಗೆ ಅನುಮಾನ ಬಂದಿದೆ.ನಾನು ಕಾಫ಼ಿ ಡೇ,ಫ಼ಾರಮ್ ಸುತ್ತೋದನ್ನೆ ಯಾರಿಂದಲೋ ತಿಳಿದು ಅವೆಲ್ಲ ಈ ಅಮೇರಿಕನ್ನರು ಮಾಡೊ ಕೆಟ್ಟ ಚಾಳಿ, ನೀನು ಯಾಕೆ ಇಂತ ಕೆಟ್ಟ ಕೆಲಸ ಮಾಡ್ತಾಯಿದ್ದೀಯ. ಅಂತ ದಿನ ಬೆಳಿಗೆ ಬೈತಾ ಇರ್ತಾರೆ ನನಗೆ.
ಅದೊ ಅಲ್ಲದೆ, ನಾನು ವೀಕೆಂಡ್ ಪಾರ್ಟಿ ನಲ್ಲಿ ಕುಡಿಯೋ ವಿಚಾರ ಕೂಡ ಗಿತ್ತಾಗ್ಬಿಟ್ಟಿದೆ ನಮ್ಮಮ್ಮಂಗೆ.
ಪ್ರಿಯಾ:ಮೈ ಗಾಡ್ ಅಗೈನ್, ನಿಮ್ಮಮ್ಮಂಗೆ ನೀನು ಹೊರಗೆ ಮಾಡೋದೆಲ್ಲ ಹೇಗೆ ಗೊತ್ತಾಗುತ್ತೆ ? ನಿನಗೆ ತಿಳೀದಂಗೆ ನಿಮ್ಮ ತಾಯಿ ನಿನ್ನ ಜೇಬಿನಲ್ಲಿ ಏನಾದ್ರು ಪೋರ್ಟಬೆಲ್ ಕ್ಯಾಮರಾ ಇಟ್ಟಿದ್ದಾರೇನೊ, ಒಂದ್ಸಾರಿ ನೋಡು. ಕಾಲ ಕೆಟ್ಟೋಯ್ತು, ನಂಬೊಕ್ಕಾಗೊಲ್ಲ.
ರಾಜೇಶ್:ಹಾಗೆಲ್ಲ ಎನಿಲ್ಲ, ಆದ್ರೆ ಇವೆಲ್ಲ ನನ್ನಂತೊರು ಮಾಡ್ತಿದ್ದಾರೆ, ಅದನ್ನೆ ಅವ್ರು ಬೆರಳು ಮಾಡಿ ನನಗೆ ಹೇಳ್ತಾಯಿದ್ದಾರೆ. ಆದ್ರು ನಿನಗೆ ಗೊತ್ತಿದ್ಯ ? ನಾನು ವೀಕೆಂಡ್ ಪಾರ್ಟಿ ಅಂತ ನಮ್ಮ ಮ್ಯಾನೇಜರ್ ಜೊತೆ ಹೋಗೋದ್ರಿಂದ ನನಗೆ ಈ ವರ್ಷ ಎಂತ ಲಾಭ ಬಂದಿದೆ ಅಂತ.
ಪ್ರಿಯಾ: ಏನ್ ಲಾಭಾನಪ್ಪ, "ನಿದ್ರೆ ಬರ್ದೆ ಇರೊ ಕಳ್ಳಂಗೆ ಒಂದು ಸೊಳ್ಳೆ ನೆಪ" ಅಂತ ಕುಡುಕ್ರಿಗೆ ಕುಡಿಯೋದಕ್ಕೆ ಸಾವ್ರಾರು ಲಾಭ ಹುಟ್ಟುತ್ತಂತೆ.
ರಾಜೇಶ್:ಇಲ್ಲಾ ಪ್ರಿಯಾ, ನನ್ನ ಮಾತು ನಂಬು, ಪ್ಳೀಸ್, ಪ್ಳೀಸ್. ನಮ್ಮ ಮ್ಯಾನೇಜರ್ ಗೊತ್ತಲ್ವ ನಿನಗೆ, ಅದೆ ಎರಡು ಮದ್ವೆ ಮಾಡ್ಕೊಂಡಿರೊರು, ತಲೇನಲ್ಲಿ ಕೂದ್ಲಿಲ್ಲ ಅಂತ ಯಾವಾಗ್ಲು ಟೋಪಿ ಹಾಕೊಂಡಿರ್ತಾರಲ್ಲ, ಅವ್ರು.
ಪ್ರಿಯಾ:ಹಾ..! ಗೊತ್ತು, ಗೊತ್ತು, ಅದೇ ನಿಮ್ಮ ಆಫ಼ೀಸ್ನಲ್ಲಿ ಇರೊ ಒಬ್ಳು ನಾರ್ತೀ ಹುಡ್ಗೀಗೆ ಪ್ರೊಪೋಸ್ ಮಾಡಿದ್ರಲ್ಲ ಅವ್ರೆ ಅಲ್ವ, ಹೇಳು.
ರಾಜೇಶ್: ಹೌದು, ಅವ್ರು ಕಳೆದವಾರ ನನ್ನನ್ನ ಪಾರ್ಟೀಗೆ ಕರೆದಾಗ ಹೋಗಿದ್ದೆ. ಅಲ್ಲಿ ಅವರು ನಂಗೆ ಇಷ್ಟವಾದ ವಿಸ್ಕೀ ಬ್ರಾಂಡ್ ಯಾವ್ದು ಅಂತ ಕೇಳಿದ್ರು, ನಾನು ಏನ್ ಹೇಳ್ಬೇಕೊ ಅಂತ ಗೊತ್ತಾಗ್ದೆ ನನ್ನ ಯೂಶುಯಲ್ ಬ್ರಾಂಡ್ "johnnie walker, black label" ಅಂದೆ. ಅದಕ್ಕೆ ಅವ್ರು ಬಹಳಾ ಕುಶಿ ಪಟ್ಟು ತನ್ನ ಬ್ರಾಂಡ್ ಕೂಡ ಅದೇ ಅಂತ ಹೇಳಿದ್ರು. ಇದೇ ಕಾರಣದಿಂದ ನನಗೆ ಅವರು ಈ ವರ್ಷ ಎಲ್ಲಾರ್ಗಿಂತ 20% ಜಾಸ್ತಿ ಸಂಬಳ ಕೊಡ್ತಿದ್ದಾರೆ, ಗೊತ್ತಾ.
ಪ್ರಿಯಾ:ಓ ಮೈ ಗುಡ್ನೆಸ್, ಎಂತಾ ಹ್ಯಾಪಿ ವಿಷಯ ಇದು, ಕಂಗ್ರ್ಯಾಡ್ಸ್ ರಾಜೇಶ್. ಸದ್ಯ, ನೀನು ಡ್ರಿಂಕ್ಸ್ ಮಾಡೋದು ಒಳ್ಳೇದೇ ಆಯ್ತು.
ರಾಜೇಶ್:ತ್ಯಾಂಕ್ಸ್ ಪ್ರಿಯಾ, ಆದ್ರೆ ನಾನು ವೀಕೆಂಡ್ ಪಾರ್ಟಿ ಹೋಗೋದ್ರಿಂದ ಆಗೋ ಈ ಲಾಭವನ್ನ ನಮ್ಮ ಅಮ್ಮ ಯಾಕೆ ಎಷ್ಟು ಹೇಳಿದ್ರು ತಿಳ್ಕೊಳೊಲ್ಲ. ಅದಕ್ಕೆ ನಾನು ಕಾಫ಼ಿ ಡೇನಲ್ಲಿ ನಿನ್ನನ್ನ ಮೀಟ್ ಮಾಡೋಕೆ ಹಿಂದೆ ಮುಂದೆ ನೋಡ್ತಾ ಇರೋದು.
ಪ್ರಿಯಾ:ಅಂದ್ರೆ ನೀನು ಹೇಳೋದು ಇನ್ಮೇಲೆ ನನ್ನನ್ನ ಮೀಟ್ ಮಾಡೋದು ಬೇಡ ಅಂತ ತಿರ್ಮಾನ ಮಾಡ್ಕೊಂಡಿದ್ದೀಯ ಏನು ಕಥೆ. ಒಂದು ರೀತಿನಲ್ಲಿ ನಿಮ್ಮ ಅಪ್ಪ,ಅಮ್ಮಾನೆ ನಮ್ಮ ಪ್ರೀತಿಗೆ ವೈರಿಗಳಾಗಿದ್ದಾರೆ. ನೀನು ಹೀಗೆ ನನ್ನ ಕೈ ಬಿಟ್ರೆ ನಾನು ಏನು ಸುಸೈಡ್ ಮಾಡ್ಕೊತೀನಿ ಅಂತ ಅಂದ್ಕೊಬೇಡ. ನಾನು ತುಂಬಾನೇ ಬ್ರೇವ್. ನಾನು ನಿನ್ಮೇಲೆ "ಹ್ಯಾರಾಸ್ಮೆಂಟ್" ಕೇಸ್ ಹಾಕ್ತೀನಿ, ಅಷ್ಟೆ.
ರಾಜೇಶ್:ಓ, ಪ್ರಿಯಾ, ನೀನು ಹಾಗೆಲ್ಲಾದ್ರು ಮಾಡ್ಬಿಟ್ಟೀಯ ಮಾರಾಯ್ತಿ, ನೀನು ಹ್ಯಾರಾಸ್ಮೆಂಟ್ ಕೇಸ್ ಹಾಕಿದ್ರೆ ನನಗೆ ಹುಚ್ಚೀ ಹಿಡಿಯುತ್ತೆ. ಅವಸರ ಪಡ್ಬೇಡ, ನನ್ಹತ್ರ ಒಂದು ಸೂಪರ್ ಸುಪ್ರೀಮ್ ಉಪಾಯ ಇದೆ.
ಪ್ರಿಯಾ:ಏನು ಅದು ?
ರಾಜೇಶ್:ನಿನಗೆ ಗೊತ್ತಿದ್ಯಾ, ನಾನು ಇನ್ನು ಮೂರು ತಿಂಗಳಲ್ಲಿ USಗೆ Onsite ಹೋಗೊ ಅವಕಾಶ ಸಿಗ್ತಾಯಿದೆ ಅಂತ.
ಪ್ರಿಯಾ:ಹೋ, ನಿಜ್ವಾಗ್ಲು. ನನಗೆ ನಂಬೋಕೆ ಆಗ್ತಾ ಇಲ್ಲ.
ರಾಜೇಶ್:ಅದಕ್ಕೆ ನಾನು ಯೋಚನೆ ಮಾಡಿದ್ದೀನಿ, ನಮ್ಮಂತಹ ಯುವಪ್ರೇಮಿಗಳು ಪ್ರೀತಿಸೋದಕ್ಕೆ ಜಾಗ ಕೊಡದೆ ದೊಡ್ಡ ದೊಡ್ಡ ಸಾಫ಼್ಟವೇರ್ ಕಂಪನಿಗಳಿಗೆ ಎಕ್ಕರೆಗಟ್ಟಲೆ ಜಾಗ ಕೊಡ್ತಾಯಿರೊ ಈ ಬೆಂಗಳೂರ್ ಸಹವಾಸವೇ ಬೇಡ. ನಮ್ಮ ಅಪ್ಪ ಅಮ್ಮಂಗೆ ಇಲ್ಲೇ ಲಾಫ಼ಿಂಗ್ ಕ್ಲಬ್ ನಲ್ಲಿ ಲೈಫ಼್ ಟೈಮ್ ಮೆಂಬರ್-ಶಿಪ್ ಕೊಡಿಸಿ ನಾವು USಗೆ ಹೋಗಿ ಸೆಟಲ್ ಆಗೋಣ.ಅಲ್ಲಿ ನಮ್ಮಂತಹ ಪ್ರೇಮಿಗಳಿಗೆ ಬೀದಿಗೊಂದು ಪಾರ್ಕ್ ಇದೆ.
ಪ್ರಿಯಾ:ಆದ್ರೆ, ಈ ಮೂರು ತಿಂಗಳಲ್ಲಿ ನೀನು ನನ್ನನ್ನ ಮದುವೆ ಮಾಡ್ಕೊಳೊಕ್ಕೆ ಆಗುತ್ತ, ನಮ್ಮ ಅಪ್ಪ ಅಮ್ಮ ಒಪ್ತಾರಾ ?
ರಾಜೇಶ್:ಯೋಚನೆ ಮಾಡ್ಬೇಡ ಪ್ರಿಯಾ, ಅಪ್ಪ ಅಮ್ಮನ್ನ ಒಪ್ಸೋಕೆ ಟ್ರೈ ಮಾಡೋಣ, ಒಪ್ಲಿಲ್ಲ ಅಂದ್ರೆ ನೀನು ನಿನ್ನ ಪಾಸ್-ಪೋರ್ಟ್ ರೆಡಿ ಮಾಡ್ಕೊ. ರಿಜಿಶ್ಟರ್ ಮದುವೆ ಮಾಡ್ಕೊಂಡು ನಾವು USಗೆ ಹೋಗಿ ಹೊಸ ಜೀವನ ಕಟ್ಟೋಣ.
ಪ್ರಿಯಾ:ವಾಟ್ ಯ್ಯಾನ್ ಐಡಿಯಾ, ಯೂ ಆರ್ ಟೂ ಮಾರ್ವಲಸ್ ರಾಜೇಶ್, ನೀನು ಹೇಗೆ ಹೇಳ್ತೀಯೋ ನಾನು ಹಾಗೇ ಮಾಡ್ತೀನಿ.ಆದ್ರೆ ನಾನು ನಿಂಜೊತೆ USಗೆ ಬರ್ಬೇಕು ಅಂದ್ರೆ ನನ್ನ ಮುದ್ದು ನಾಯಿ ಮರೀನು USಗೆ ಕರ್ಕೊಂಡು ಹೋಗ್ಬೇಕು. ಇಲ್ಲಾ ಅಂದ್ರೆ ನಾನು ನಿನ್ನನ್ನ ಮದ್ವೆ ಮಾಡ್ಕೊಳೊಲ್ಲ, ಅಷ್ಟೆ.
ರಾಜೇಶ್:ಡೋಂಟ್ ವರಿ, ನಮ್ಮ ಮನೇನಲ್ಲಿ ಇರೋ ಬೆಕ್ಕನ್ನು ಬೇಕಿದ್ರೆ ಕರ್ಕೊಂಡು ಹೋಗೋಣ. ![]()
ಪ್ರಿಯಾ: ಯೂ ಆರ್ ಸೋ ಗುಡ್....!! ![]()
ಕೇಳಿದ್ರಲ್ಲ ಸಂಪದಿಗರೇ, ಈ ಯುವಪ್ರೇಮಿಗಳ ಕರೆಯ ತುಣುಕನ್ನ. ಈಗ ನೀವೇ ಹೇಳಿ. ಇಂತಹ ಪ್ರೇಮಿಗಳು ಪ್ರೀತಿಸೋದಕ್ಕೆ ಸ್ತಳವಿಲ್ಲದೆ ವಿದೇಶಕ್ಕೆ ಹಾರುವಂತೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ನಮ್ಮ ಬೆಂಗಳೂರು ಸಿಲಿಕಾನ್ ವ್ಯಾಲಿ ಹೇಗೆ ಕಾರಣವಾಗ್ತಾಯಿದೆ ಅಂತ. ![]()
ನನ್ನ ಅಭಿಪ್ರಾಯ ಕೇಳಿದ್ರೆ:
೧) ಇಂತಹ ಪ್ರೀಮಿಗಳು ದೇಶ ಬಿಡೋದನ್ನ ಸರ್ಕಾರ ತಪ್ಪಿಸ್ಬೇಕು.
೨) ಇವರಿಗೆ ಪಾರ್ಕ್ನಲ್ಲಿ ರಿಸರ್ವಡ್ ಬೆಂಚುಗಳನ್ನು ಕೊಡಬೇಕು.
೩) ಹಾಗೇ ತಂದೆ-ತಾಯಿಯರು ಮಕ್ಕಳ ವೀಕೆಂಡ್ ಪಾರ್ಟೀಗಳಿಗೆ ಅಬ್ಜಕ್ಟ್ ಮಾಡಬಾರದು, ಅಬ್ಜಕ್ಟ್ ಮಾಡಿದ್ದಲಿ ಸ್ತಳದಲ್ಲಿಯೇ 500 ರೊ ಗಳ ದಂಡ ಅನ್ನುವ ಕಾಯಿದೆ ಜಾರಿ ಮಾಡ ಬೇಕು.
೪) ಒಂದೇ ಮಾತಿನಲ್ಲಿ ಪ್ರೇಮಿಗಳಿಗೆ OBC ತರಹದ ರಿಸರ್ವೇಷನ್ ಕ್ಯಾಟಗರಿ (LC-Lovers Cast) ರಚಿಸಬೇಕು.
ಬೇಕೇ ಬೇಕು, ಪ್ರೇಮಿಗಳಿಗೆ ಪರ್ಮಿಟ್ಟು...!! ![]()
ಇದಕ್ಕೆ ನೀವೇನ್ಹೇಳ್ತೀರಿ ??
-ಯುವಪ್ರೇಮಿ

- yuvapremi ರವರ ಬ್ಲಾಗ್
- Login or register to post comments
- 193 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪ್ರೇಮಿಗಳ ನಗರಿ ಬೆಂಗಳೂರು...!!
ಈಗ ಕನಿಷ್ಟ ಪಾರ್ಕ್ ಅಥವಾ ಕಾಫಿ ಡೆ ಆದರೂ ಇದೆ ಏನಿಲ್ಲ ಅಂದರೂ ಫೋರ್ ಅದೂ ಇದೂ ಇದೆ ಮೊಬೈಲ್ ಇದೆ
ಏಕಾಂತವಿರಲಿ ನಾವು ( ನಾನು ನಮ್ಮ ಯಜಮಾನರು ಮದುವೆಗೆ ಮುಂಚೆ) ಮಾತಾಡೋಕೆ ಬಹಳ ಕಷ್ಟ ಪಟ್ಟಿದ್ದೇವೆ. ನಾನು ಕೆಲಸ ಮಾಡ್ತಿದ್ದ ಕಂಪೆನೀನಲ್ಲೂ ನಮ್ಮ ತಾಯಿಗೆ ಗೊತ್ತಿರೋ ಫೋನ್ ಆಪರೇಟರ್ (ಅವರ ಪರಿಚಯದವರ ಮಗ ), ಯಾವ ಫೋನ್ ಬಂದರೂ ನಾನು ಮನೆಗೆ ಹೋಗೊ ಮುಂಚೆ ಅಮ್ಮನಿಗೆ ತಿಳೀತಿತ್ತು.
ಅವರಿದ್ದ ಮೊದಲ ಕಂಪೆನೀನಲ್ಲಿ ಬಾಸ್ ಸ್ಟಿಕ್ಟ್. ನಮ್ಮಿಬ್ಬರ ಮನೆಯಲ್ಲಿ ಫೋನ್ ಇರಲಿಲ್ಲ.
ನಮ್ಮ ಮಾತು ಗಳು ಇವರ ಮನೆಯಲ್ಲೇ ಇವರ ತಾಯಿಯ ಮುಂದೆಯೇ(
ಇಂಗ್ಲೀಶ್‌ನಲ್ಲಿ ಆಗ್ತಿತ್ತು 
ಬೆಂಗಳೂರು ಪ್ರೇಮಿಗಳಿಗೆ ಸ್ವರ್ಗಾನೆ ಈಗ ಇನ್ನೂ ಜಾಸ್ತಿ ಆಗಿದೆ. ನಮ್ಮ ಹಾಗೇನೂ ಕಷ್ಟ ಇಲ್ಲಪ್ಪ ಈಗಿನವರಿಗೆ
http://thereda-mana.blogspot.com/
ರೂಪ
ಉ: ಪ್ರೇಮಿಗಳ ನಗರಿ ಬೆಂಗಳೂರು...!!
ನಿಮ್ಮ ಮಾತು ಒಪ್ತೇನೆ ರೂಪಾ ಮ್ಯಾಡಮ್,
ಆದರೆ ಬಂದಿದೆ ಬಿಟ್ಟಿ ಮೊಬೈಲ್ ಅಂತ ಸಿಕ್ಕ ಸಿಕ್ಕ ಸ್ತಳಗಳಲೆಲ್ಲ (ಬಸ್ ಸ್ಟ್ಯಾಂಡ್, ರಸ್ತೆ, ಅಂಗಡಿ,ಮಳಿಗೆ) ಹುಚ್ಚರಂತೆ ಮಾತನಾಡಿ ಮೊಬೈಲ್ ಶಿಸ್ತನ್ನು ಉಲ್ಲಂಗಿಸಿದರೆ ನಮ್ಮ ವಿದ್ಯೆಗೆ ಔಮರ್ಯಾದಿ ಆಗುವುದಿಲ್ಲವೆ ? (This will be Mobile nuisance.)
ನನಗೆ ಮೊಬೈಲ್ ನಲ್ಲಿ ಪ್ರೀತಿ ಮಾಡೋದು ಸ್ವಲ್ಪವೂ ಇಷ್ಟವಿಲ್ಲ.
"ಬಳ್ಳಿಯ ಮರೆಯಲಿ ಮಾತಾಗಲಿ, ನಡುವೆ ಒಂದೆರಡು ಮುತ್ತುದುರಲಿ"
-ಯುವಪ್ರೇಮಿ
ಉ: ಪ್ರೇಮಿಗಳ ನಗರಿ ಬೆಂಗಳೂರು...!!
ಏನೋ ನಿಜವಾದ ಸ್ಟೋರಿ ಇರ೦ಗೆ ಕಾಣುಸ್ತೈತೆ ಗುರು
. ನಿಜಾನಾ?
ಉ: ಪ್ರೇಮಿಗಳ ನಗರಿ ಬೆಂಗಳೂರು...!!
ಹೌದು ಮನಹ್ಫಠಲ ರೆ,
ನಮ್ಮ ಬೆಂಗಳೂರಿನ ಕೆಲವು ಮೂಲೆಯಲ್ಲಿ ಇಂತಹವು ನಡೆದ್ದಿದ್ದರೂ ಅನುಮಾನವಿಲ್ಲ...!!

ನನ್ನ ಕನಸಿಗೆ ಬಿದ್ದಂತೆ ಬಿಂಬಿಸಿದ್ದೇನೆ, ನನ್ನನ್ನು ಅನುಮಾನಿಸದಿರಿ, ನಾನು ಒಳ್ಳೆ ಹುಡುಗ...!!
[ನನ್ನ ಒರಿಜಿನಲ್ ಸಂಪದ ಕಾತೆಗೆ ಈಗ ವನವಾಸವಿದ್ದಂತಿದೆ, ಅದು ಸರಿಹೋಗುವವರೆಗು ಇದೇ ನನ್ನ ಬ್ಯಾಕ್-ಅಪ್ ಕಾತೆ..!]
-ಯುವಪ್ರೇಮಿ