ಪುಸ್ತಕ ಪರಿಚಯ
|
ಲೇಖಕರು: Smitha Melkote
May 20, 2013
2
171
ನಮ್ಮ ಭಾರತೀಯ ಸಂಸ್ಕೃತಿ ಹೆಣ್ಣನ್ನು ಪತಿವ್ರತೆ, ಸಹನಾಮೂರ್ತಿ, ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ ನಡೆಯೋಳು, ಇಡೀ ಸಂಸಾರದ ನೂಗವನ್ನು ಹೊರುವವಳು, ಮುಂದೆ ನಡೆಸುವವಳು ಎಂಬ ಅರ್ಥ ಬರುವ ಹಾಗೆ ಚಿತ್ರಿಸಿಬಿಟ್ಟಿದೆ. ಚಿತ್ರಿಸಿ, ಪತ್ರಿಕೆಗಳಲ್ಲಿ ಸಿನಿಮಾಗಳಲ್ಲಿ ತೋರಿಸಿದ್ದ ಮಾತ್ರಕ್ಕೆ ಹಾಗೆ ಇರಬೇಕೆಂದಿಲ್ಲ .. ಇತ್ತೀಚಿನ ಮಹಿಳೆಯ ನಿಲುವೇ ಬೇರೆಯದೇ ಆಗಿದೆ.. |
ಲೇಖಕರು: ಹೇಮಾ
May 19, 2013
2
212
“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್ವೇರ್ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ. ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು, ಪಾರಂಪರಿಕ ಜ್ಞಾನಗಳು ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುವುದನ್ನು ಹೇಳುತ್ತವೆ. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಅವಳ ಗಂಡ ಕೋಮಣ್ಣ ಹೇಳಿದ, ಮಾಡಿಸಿದ ವ್ರತ,ಪೂಜೆಗಳನ್ನೆಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ. ಕಡೆಗೆ ತನ್ನೂರಿಗೆ ಬಂದ ಭೈರಾಗಿಯೊಬ್ಬನನ್ನು ಕೋಮಣ್ಣ ತನ್ನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳುತ್ತಾನೆ. ಮೊದಲಿಗೆ ನಿರಾಕರಿಸಿದ ಭೈರಾಗಿ ನಂತರ ಕೋಮಣ್ಣನ ಬಲವಂತಕ್ಕೆ ಮಣಿಯುತ್ತಾನೆ. ಮೂರು ದಿನಗಳ ಪೂಜೆಗೆ ವೆಂಕಮ್ಮನನ್ನು ರಾತ್ರಿ ಒಬ್ಬಳನ್ನೇ ಕಳಿಸಲು ಹೇಳುತ್ತಾನೆ. ಮೊದಲ ರಾತ್ರಿಯ ನಂತರವೇ ವೆಂಕಮ್ಮ ಮತ್ತೆ ಹೋಗಲು ನಿರಾಕರಿಸಿದರೂ ಕೋಮಣ್ಣ ಬಲವಂತದಿಂದ ಕಳಿಸಿಕೊಡುತ್ತಾನೆ. ನಂತರ ಅನುಮಾನ ಬಂದು ಅವಳನ್ನು ಹಿಂಬಾಲಿಸಿದಾಗ ನಡೆಯುತ್ತಿರುವ ಸಂಗತಿ ಬಯಲಾಗುತ್ತದೆ. ಹೆಂಡತಿಯನ್ನು ತಪ್ಪಿತಸ್ಥಳನ್ನಾಗಿ ಮಾಡಿ ಅವಳ ಸಂಬಂಧ ಕಡಿದುಕೊಳ್ಳುತ್ತಾನೆ. ಮಗಳ ವಿಷಯ ತಿಳಿದ ತಂದೆತಾಯಿಗಳು ಊರಿಂದ ಬಂದು ಅವಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತಾಯಿ ಮಗಳ ವರ್ತನೆಗೆ ರೋಸಿ ಹೀಗೇಕೆ ಮಾಡಿದೆ ಎಂದು ಕೇಳಿದಾಗ ವೆಂಕಮ್ಮ ‘ಹೇಗಾದರೂ ಮಕ್ಕಳಾಗಲಿ ಅನ್ನಿಸಿತು’ ಎಂದು ತಣ್ಣಗೆ ಉತ್ತರಿಸುತ್ತಾಳೆ. ಅಲ್ಲಿಂದ ಅವಳ ಬದುಕಿನಲ್ಲಿ ಬಂಧು-ಭಾಂದವರೆಲ್ಲ ದೂರವಾಗಿ ಒಂಟಿಯಾಗುತ್ತಾಳೆ. ಭೈರಾಗಿ ಹೇಳಿಕೊಟ್ಟ ಚೇಳಿನ ವಿಷವಿಳಿಸುವ ವೈದ್ಯ ಅವಳ ಬದುಕಿಗೆ ಆಧಾರವಾಗುತ್ತದೆ. ಆದರೆ ಚೇಳಿನ ಸಂತತಿಯನ್ನೇ ನಾಶ ಮಾಡಬಲ್ಲ ಔಷಧ ಬಂದು ವೆಂಕಮ್ಮ ಇಳಿವಯಸ್ಸಿನಲ್ಲಿ ಮತ್ತೆ ನಿರಾಶ್ರಿತಳಾಗುತ್ತಾಳೆ. ಊರಿಗೆ ಹೊಸಬರು ಬಂದಾಗ ‘ನಿಮ್ಮೂರಲ್ಲಿ ಚೇಳಿದ್ದರೆ ನನ್ನ ಕರೆದುಕೊಂಡು ಹೋಗಿ ವಿಷವಿಳಿಸುತ್ತೇನೆ’ ಎಂದು ಕೇಳಿಕೊಳ್ಳುವ ಸ್ಥಿತಿಗೆ ಬಂದು ನಿಲ್ಲುತ್ತಾಳೆ. ತನ್ನ ವೈದ್ಯದಿಂದ ಊರ ಜನರ ಪ್ರಾಣ ಕಾಪಾಡುವ ಸಂದರ್ಭದಲ್ಲಿ ಗೌರವದಿಂದ ನಡೆಸಿಕೊಳ್ಳುತ್ತಿದ್ದ ಮಂದಿ ಚೇಳನ್ನು ಕೊಲ್ಲುವ ಔಷಧ ಸಿಕ್ಕ ತಕ್ಷಣ ಆಕೆಯನ್ನು ತುಚ್ಛವಾಗಿ ಕಾಣಲಾರಂಭಿಸುತ್ತಾರೆ. ವೆಂಕಮ್ಮನಿಗೆ ತನ್ನ ಕೊನೆಗಾಲ ಬಂತೆಂದು ಅನ್ನಿಸಲಾರಂಭಿಸುತ್ತದೆ. ತನಗೆ ತಿಳಿದ ವಿದ್ಯೆ ತನ್ನೊಂದಿಗೆ ನಾಶವಾಗಬಾರದೆಂದು ಯಾರಿಗಾದರೂ ಹೇಳಿಕೊಡೋಣವೆಂದು ಅಂದುಕೊಂಡರು ಅವಳಿಂದ ವಿದ್ಯೆ ಕಲಿಯಲು ಯಾರೂ ಸಿಗದೆ ಆಕೆ ಅದೇ ಚೇಳಿನ ಔಷಧ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. |
|
ಲೇಖಕರು: ನಾಗೇಶ ಮೈಸೂರು
May 18, 2013
8
324
ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ ಬಾಗಿಲ ನೀತಿಯಿಂದ ಕಳೆದು / ಬದಲಾಗಿ ಹೋದ ಆಚಾರ, ವಿಚಾರ, ಸಂಪ್ರದಾಯಗಳ ತುಣುಕುಗಳು ಹೇರಳವಾಗಿ ಸಿಗುವ ಈ ಕಥಾನಕ ಆ ಮಟ್ಟಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಯೆಂದೆ ಹೇಳಬೇಕು. |
ಲೇಖಕರು: Smitha Melkote
May 17, 2013
1
126
ನಾನು ಇತ್ತೀಚಿಗೆ ಓದಿದ ಕಾದಂಬರಿ S. L ಭೈರಪ್ಪ ರವರ ನಾಯಿ ನೆರಳು ಬಹಳ ಹಿಡಿಸಿ ಬಿಟ್ಟಿತು. ಅವರ ಭಾಷ ಪಾಂಡಿತ್ಯ ಓದುಗನನ್ನು ಕಥೆಯಲ್ಲಿ ಒಂದು ಪಾತ್ರವಾಗಿಸಿಬಿಡುತ್ತೆ !!! 1 9 6 8 ರಲ್ಲಿ ಬರೆದ ಪಾತ್ರಗಳು, ಊರಿನ ವಿವರಣೆ ... ನಾವು ಈಗಿರುವ ಕಾಲ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಮರೆಸಿ , ನಮ್ಮನ್ನು ಸಮಯದಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವೇ ಇಲ್ಲ.. ನಾಯಿ ನೆರಳನ್ನು ನಾನು ಅರ್ಥ ಮಾಡಿಕೊಂಡಿರುವ ಪರಿಯನ್ನು ನನ್ನ ಗೆಳೆಯರೊಡನೆ ಹಂಚಿಕೊಳ್ಳುವ ಆಸೆ !!! |
|
ಲೇಖಕರು: ಹೇಮಾ
May 14, 2013
3
263
ಹೇಳತೇವ ಕೇಳ.... “ಮುಂದೊಂದು ದಿನ ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.” ಅವಧಿಯ ಸಂಪಾದಕರಾದ ಜಿ.ಎನ್.ಮೋಹನ್ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಅವಧಿಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಿದು. ಹಲವು ಮಂದಿ ಮಹಿಳೆಯರು ಬಚ್ಚಿಟ್ಟ ತಮ್ಮ ನೋವನ್ನು ಇಲ್ಲಿ ತೆರೆದಿದ್ದಾರೆ. |
ಲೇಖಕರು: ಹೇಮಾ
May 12, 2013
2
132
ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ.. ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ ಬದುಕಿನ ನೆನಪುಗಳ ಬುತ್ತಿ ‘ನನ್ನ ತೇಜಸ್ವಿ’. ತೇಜಸ್ವಿ ನಮ್ಮ ತಲೆಮಾರಿನ ಮಂದಿಗೆ ಹೀರೋನೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವುಗಳು ನಮ್ಮ ಮಕ್ಕಳಿಗೆ ಓದಿಸಲೇಬೇಕಾದ ಲೇಖಕರಲ್ಲಿ ಕೂಡ ತೇಜಸ್ವಿ ಬಹುಮುಖ್ಯರು. ಅವರ ‘ಪರಿಸರದ ಕಥೆ’ ಓದಿ ಹುಚ್ಚರಾದವರು ಅವರನ್ನು ಹುಡುಕಿ ಹೋದವರು ಅದೆಷ್ಟೋ ಮಂದಿ. ಅಂತಹವರಿಗೆ ಈ ಪುಸ್ತಕ ನಿಜಕ್ಕೂ ರಸಗವಳ. |




