ಪುಸ್ತಕ ಪರಿಚಯ

ಲೇಖಕರು: Ashwin Rao K P
April 01, 2024
ನಿವೃತ್ತ ಮುಖ್ಯ ಶಿಕ್ಷಕಿ, ಕವಯತ್ರಿ ಶ್ರೀಮತಿ ರತ್ನಾ ಕೆ ಭಟ್ ತಲಂಜೇರಿ ಇವರ ನೂತನ ಕೃತಿ 'ಹನಿ ಹನಿಗಳ ನಡುವೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಯ ಪ್ರಮುಖ ಅಂಶವೆಂದರೆ ಇದೊಂದು ‘ಆಲ್ ಇನ್ ಒನ್' ಎನ್ನುವಂಥ ಪುಸ್ತಕ. ಏಕೆಂದರೆ ಹನಿ ಕವನದ ಎಲ್ಲಾ ಪ್ರಕಾರಗಳು ಇದರಲ್ಲಿವೆ. ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ, ಮಿನಿ ಕವನ ಎಲ್ಲಾ ಈ ಸಂಕಲನದಲ್ಲಿ ಅಡಕವಾಗಿದೆ.  ‘ಹನಿ ಹನಿಗಳ ನಡುವೆ' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಿ, ಸಾಹಿತಿ, ಶಿಕ್ಷಕರಾದ ಹಾ ಮ ಸತೀಶ್.…
ಲೇಖಕರು: addoor
March 30, 2024
ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಜಾನಪದ ಕತೆಗಳನ್ನು ಕೇಳಿದವರಿಗೆ ಗೊತ್ತು ಅವುಗಳ ಸೊಗಡು. ಅವು ಚಿರನೂತನ ಕತೆಗಳು. ಈ ಸಂಗ್ರಹದಲ್ಲಿವೆ 42 ಜಾನಪದ ಕತೆಗಳು. “ಸುಮಾರು 70 ವರ್ಷದ ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರಕಟಗೊಂಡಿದ್ದ ಜಾನಪದ ಕಥೆಗಳ ಸಂಕಲನದಲ್ಲಿವನ್ನು ಸಂಗ್ರಹಿಸಿ, ತಿದ್ದಿ, ಒಂದು ಆಕಾರವನ್ನು ಕೊಟ್ಟು, ಈ ಪುಸ್ತಕವನ್ನು ಬರೆದಿದ್ದೇನೆ” ಎಂದು “ನನ್ನುಡಿ"ಯಲ್ಲಿ ತಿಳಿಸಿದ್ದಾರೆ ಲೇಖಕಿ ಎಸ್.ಬಿ. ಸರಸ್ವತಿ. "ಜಿಪುಣ ಮುದುಕಿ” ಎಂಬ ಕತೆಯ ಸಾರಾಂಶ: ಒಂದೂರಿನಲ್ಲಿ ಜಿಪುಣ ಮುದುಕಿ…
ಲೇಖಕರು: Ashwin Rao K P
March 29, 2024
ಕಳೆದ ಹಲವಾರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯಜ್ಞ ನಾರಾಯಣ ಉಳ್ಳೂರ್ ತಮ್ಮ ಬಿಡುವಿನ ವೇಳೆಯಲ್ಲಿ ಲೇಖನ, ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ೨೦ ಲೇಖನಗಳನ್ನು ಈ ಪುಟ್ಟ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.  ಯಜ್ಞನಾರಾಯಣ ಇವರು ತಮ್ಮ ‘ಎರಡು ಮಾತು' ಹೇಳುವುದು ಹೀಗೆ -” ಇಂದಿನ ಸಮಾಜದಲ್ಲಿ ನಗುವವರ…
ಲೇಖಕರು: Ashwin Rao K P
March 27, 2024
ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇ ಸೂರ್ಯನಾರಾಯಣ ರಾವ್ ಇವರು ತಮ್ಮ ವೃತ್ತಿ ಜೀವನದ ಸಮಯದಲ್ಲೇ ಬರೆದ ಸೊಗಸಾದ ನಾಟಕ ‘ಕೋಟಿ-ಚೆನ್ನಯ'. ಸೂರ್ಯನಾರಾಯಣ ರಾವ್ ಬಗ್ಗೆ ಅವರ ಮಗ ಇ ವಿಜಯರವಿ ಬಹಳ ಸೊಗಸಾಗಿ ಒಂದು ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ “ನನ್ನ ತಂದೆಯವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಯಾವುದೇ ಅಭಿನಯ ಇರಲಿ, ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ‘ನನಗಿನ್ನು ನೆನೆಯದೆ' ಸಾಮಾಜಿಕ ನಾಟಕವೊಂದರಲ್ಲಿ ಹೆಣ್ಣು ಮಕ್ಕಳ ತಂದೆಯಾಗಿ ಅವರ ಮದುವೆಗಾಗಿ ಪಡುವ ಕಷ್ಟ…
ಲೇಖಕರು: Ashwin Rao K P
March 25, 2024
ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ ೧೦ ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ‘ಧ್ಯಾನಕ್ಕೆ ಕೂತ ನದಿ’ ಶೀರ್ಷಿಕೆಯ ಕತೆಯು ಭಿನ್ನವಾಗಿದ್ದು, ವಸ್ತು ವೈವಿಧ್ಯ, ಜಾಳಾಗದೇ ಇರುವ ನಿರೂಪಣೆ, ಭಾಷೆಯ ಬಳಕೆಯಲ್ಲಿ ತೋರಿದ ಕಾಳಜಿ, ಹೇಳಲು ಬಯಸಿದ ತಂತ್ರಗಳ ಜೊತೆಗೆ ಪ್ರಜ್ಞಾಪೂರ್ವಕವಾಗಿ ಸೇರಿಸಿರದ ಹಾಗೆ ಕಾಣುವ ರೂಪಕಗಳ ಸೃಷ್ಟಿ ವಿಶೇಷ ಗಮನ ಸೆಳೆಯುತ್ತದೆ. ಮನರಂಜನೆಯ ಜೊತೆಗೆ…
ಲೇಖಕರು: Ashwin Rao K P
March 22, 2024
ಖ್ಯಾತ ಪತ್ರಕರ್ತ, ಲೇಖಕ ದಿ. ರವಿ ಬೆಳಗೆರೆ ಅವರ ನೂರನೇ ಪುಸ್ತಕದ ರೂಪದಲ್ಲಿ ‘ರಜನೀಶನ ಹುಡುಗಿಯರು' ಹೊರಬಂದಿದೆ. ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ ಅಥವಾ ಓಶೋ ರಜನೀಶ್ ಎಂಬ ವ್ಯಕ್ತಿ ೮೦-೯೦ ರ ದಶಕದಲ್ಲಿ ವಿಶ್ವದಾದ್ಯಂತ ಮಾಡಿದ ಮೋಡಿಗೆ ಸಾಟಿ ಇಲ್ಲ. ರಜನೀಶ್ ಆಶ್ರಮದಲ್ಲಿ ಯಾವುದಕ್ಕೂ ನಿರ್ಭಂಧವಿರಲಿಲ್ಲ. ಹುಡುಗಿಯರು, ಸ್ವಚ್ಛಂದ ಕಾಮ, ಡ್ರಗ್ಸ್, ಹಾಡು, ಸಂಗೀತ, ನೃತ್ಯ ಯಾವುದಕ್ಕೂ ನಿಷೇಧವಿರಲಿಲ್ಲ. ಈ ಕಾರಣದಿಂದ ಬಹುತೇಕ ವಿದೇಶೀಯರೇ ಈ ಆಶ್ರಮದ ವಾಸಿಗಳಾಗಿದ್ದರು. ಎಲ್ಲಾ…