ಪುಸ್ತಕ ಪರಿಚಯ

ಲೇಖಕರು: Ashwin Rao K P
March 01, 2024
ಖ್ಯಾತ ಆಂಗ್ಲ ಬರಹಗಾರರಾದ ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್ (Charles Lutwidge Dodgson) ಲೂಯಿ ಕರೋಲ್ ಎಂಬ ಗುಪ್ತನಾಮದಲ್ಲಿ ಬರೆದ ಆಲೀಸ್ ಇನ್ ವಂಡರ್ ಲ್ಯಾಂಡ್ (Alice in Wonderland) ಎಂಬ ಮಕ್ಕಳ ಕಥಾ ಸಂಕಲನವನ್ನು ಹೊರತಂದಿದ್ದರು. ಕನ್ನಡದ ಖ್ಯಾತ ಸಾಹಿತಿ ನಾ ಕಸ್ತೂರಿ ಇವರು ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ನ ಆಲೀಸ್ ಕನ್ನಡಕ್ಕೆ ಬರುವಾಗ ಪಾಪಚ್ಚಿ ಆಗಿದ್ದಾಳೆ.  ಕನ್ನಡ ಪುಸ್ತಕ ಪ್ರಾಧಿಕಾರವು ೧೯೩೫, ೧೯೭೩, ೧೯೯೮ ವರ್ಷಗಳಲ್ಲಿ ಈ…
1
ಲೇಖಕರು: Ashwin Rao K P
February 28, 2024
ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ" ಎಂದು ಪ್ರಾಮಾಣಿಕವಾಗಿಯೇ ಹೇಳುವ ರತ್ನಕ್ಕ ಇದುವರೆಗೆ ಬರೆದ ಗಝಲ್ ಗಳನ್ನೆಲ್ಲಾ ಸೇರಿಸಿ ಸಂಕಲನದ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರ ಸಹೋದರ ಹಾಗೂ ಸಾಹಿತಿ ಹಾ ಮ ಸತೀಶ ಮತ್ತು ಕಥಾಬಿಂದು ಪ್ರಕಾಶನದ…
ಲೇಖಕರು: Ashwin Rao K P
February 26, 2024
ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿ ಮೊದಲು ಪ್ರಕಟವಾದದ್ದು ೧೯೭೯ರಲ್ಲಿ. ಆಗ ಅದನ್ನು ಪ್ರಕಾಶಿಸಿದ್ದು ಬೆಂಗಳೂರಿನ ಜಗತ್ ಸಾಹಿತ್ಯ ಮಾಲೆ ಇವರು. ಈಗ ಕನ್ನಡ ಅನುವಾದ ಸಾಹಿತ್ಯ ಅಕಾಡೆಮಿಯವರು ಮರು ಮುದ್ರಣ ಮಾಡಿದ್ದಾರೆ. ಈ ಬಗ್ಗೆ ಈ ಮಾಲಿಕೆಯ ಪ್ರಧಾನ…
ಲೇಖಕರು: Ashwin Rao K P
February 23, 2024
'ಮುದ್ರಾ ಪ್ರವೇಶ' ಎಂಬ ಕೃತಿಯು ಯೋಗಮುದ್ರಾ ವಿಜ್ಞಾನವನ್ನು, ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಬಣ್ಣಿಸಿರುವ ಕೃತಿ. ಸಾಮಾನ್ಯ ಓದುಗನಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ ಕೆ ರಂಗರಾಜ ಅಯ್ಯಂಗಾರ್ ಇವರು. ಈ ಕೃತಿಯಲ್ಲಿ ಅಧ್ಯಾತ್ಮಿಕ ಮುದ್ರೆಗಳು, ಶಾಸ್ತ್ರೀಯ ಹಾಗೂ ಪೂಜಾ ಮುದ್ರೆಗಳು, ಶ್ರೀ ಗಾಯತ್ರೀ ಮುದ್ರೆಗಳು, ಚೈತನ್ಯದಾಯೀ ಮುದ್ರೆಗಳು, ದೇವತಾ ಮುದ್ರೆಗಳು, ಚಿಕಿತ್ಸಾ ಮುದ್ರೆಗಳು, ಹಠಯೋಗ ಮುದ್ರೆಗಳು, ನರ್ತನ ಮುದ್ರೆಗಳು, ತಪ್ತ ಮುದ್ರೆಗಳು ಇತ್ಯಾದಿಗಳ ಬಗ್ಗೆ ಸವಿವರ ಹಾಗೂ…
ಲೇಖಕರು: addoor
February 21, 2024
ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ. "ತೀರ್ಪುಗಾರರ ಮಾತಿ”ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಹತ್ತು ವರ್ಷಗಳ ಅವಧಿಯಲ್ಲಿ ಈ ಕಥೆಗಳು ರಚನೆಯಾಗಿವೆ. ಸಂದೀಪ ನಾಯಕರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ…
ಲೇಖಕರು: Ashwin Rao K P
February 21, 2024
ಜಯಶ್ರೀ ಕದ್ರಿಯವರ ನೂತನ ಕವನ ಸಂಕಲನ ‘ಕೇಳಿಸದ ಸದ್ದುಗಳು'ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಯತ್ರಿಯಾದ ಎಂ ಆರ್ ಕಮಲ. ಅವರ ಪ್ರಕಾರ “ಜಯಶ್ರೀ ಕದ್ರಿಯವರಿಗೆ ಕವಿತೆಯೆನ್ನುವುದು ತುದಿ ಬೆರಳಿಗಂಟಿದ ಪರಾಗ. ಹೂವಿನ ಘಮಲು. ರಾಗವೊಂದನ್ನು ಜೀವದಲ್ಲಿ ಮೆಲ್ಲನೆ ಅರಳಿಸುವ ಸೋಜಿಗ. ಒಳಗಿನ ಕುದಿತ,ಇರಿತಗಳಿಂದ ಬಿಡುಗಡೆಯನ್ನು ಪಡೆವ ಹಾದಿ. ನಿಶ್ಯಬ್ಧಕ್ಕೆ ಶಬ್ಧವನ್ನು ತುಂಬುವ, ಭಾವಕ್ಕೆ ಪದಗಳನ್ನು ನೇಯುವ ಬೆಡಗು. ಲೆಕ್ಕವಿಡದೆ ಕತ್ತಲಲ್ಲಿ…