ಪುಸ್ತಕ ಪರಿಚಯ

ಲೇಖಕರು: Ashwin Rao K P
February 19, 2024
ವಿವಿದ ಲೇಖಕರಿಂದ ಬರೆಯಲ್ಪಟ್ಟ ಚೈನಾ ಮತ್ತು ಜಪಾನ್ ದೇಶದ ಪ್ರಸಿದ್ಧ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಅನುವಾದಕರಾದ ನೀಲತ್ತಹಳ್ಳಿ ಕಸ್ತೂರಿ ಇವರು. ಈ ಪುಸ್ತಕವನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದಿದ್ದಾರೆ. ಈ ಕೃತಿಯಲ್ಲಿ ೮ ಕಥೆಗಳಿವೆ.  ಮೊದಲ ಕಥೆ ಹಾನನ ಅಕೃತ್ಯ ಇದರ ಮೂಲ ಲೇಖಕರು ಷಿಗೆ ನಯೋಯ. ಇವರು ಆಧುನಿಕ ಜಪಾನಿನ ಅತಿ ಪ್ರಮುಖ ಹಾಗೂ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬರು. ಅವರ ಬರಹಗಳಲ್ಲಿ ಅಸಾಧಾರಣವಾದ ಒಂದು ಚೆಲುವು ಹಾಗೂ ಸೂಕ್ಷ್ಮ ದೃಷ್ಟಿಗಳ…
ಲೇಖಕರು: Ashwin Rao K P
February 16, 2024
ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ಮಹಿಳೆಯರ ಬರಹಗಳಿಗೆ ಉತ್ತೇಜನ ನೀಡಲು ಆರಂಭವಾದ ಪ್ರತ್ಯೇಕ ಕಾವ್ಯ ಸಂಪುಟಗಳು ಅನಂತರದಲ್ಲಿ ಅಸ್ಮಿತೆಯ…
ಲೇಖಕರು: Ashwin Rao K P
February 14, 2024
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಬಹಳ ಜನಪ್ರಿಯವಾಗಿತ್ತು. ೧೯೯೦ರಲ್ಲಿ ಅಜಿತಕುಮಾರರ ಅಕಾಲಿಕ ನಿಧನದ ಬಳಿಕ ೨೦೧೯ರಲ್ಲಿ ಹಾಗೂ ೨೦೨೨ರಲ್ಲಿ ಈ ಕೃತಿಯು ಮರು ಮುದ್ರಣವಾಯಿತು. ಇಂಥಹ ಒಂದು ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಒಪ್ಪಿಸಿದ ಅಜಿತಕುಮಾರರ ಸಾಧನೆ ಸದಾ…
ಲೇಖಕರು: Ashwin Rao K P
February 12, 2024
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಜಿ ಪಿ ರಾಜರತ್ನಂ ಅವರು 'ಪ್ರವೇಶ' ಎಂಬ ಮುನ್ನುಡಿ ಬರಹದಲ್ಲಿ ಈ ಕೃತಿಯ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿಸುತ್ತಾ ಹೋಗಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ… “ ಪಾಲಿ ಭಾಷೆಯಲ್ಲಿರುವ ಸಾಹಿತ್ಯವು ಎರಡು ವಿಧವಾದುದೆಂದು ಸ್ಥೂಲವಾಗಿ…
ಲೇಖಕರು: Ashwin Rao K P
February 09, 2024
‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿಯವರು. ಇವರು ತಮ್ಮ ಬೆನ್ನುಡಿಯಲ್ಲಿ “ಕನ್ನಡ ಸಾಹಿತ್ಯ ಪರಂಪರೆಗೆ ಸುಮಾರು ೨೦೦೦ ವರ್ಷಗಳ ಸಮೃದ್ಧ ಇತಿಹಾಸವಿದ್ದು, ಕಾವ್ಯ ರಚನೆಯಲ್ಲಿ ಬೇರೆ ಬೇರೆ ಭಾಷೆಗಳಿಗಿಂತ ಉತ್ತಮ ಕಾವ್ಯವನ್ನು ರಚಿಸಿದ ಹೆಮ್ಮೆ ನಮ್ಮದಾಗಿದೆ. ಹಳೆಗನ್ನಡ, ಪೂರ್ವಕನ್ನಡ, ನಡುಗನ್ನಡ…
ಲೇಖಕರು: Ashwin Rao K P
February 07, 2024
ಉದಯೋನ್ಮುಖ ಕಥೆಗಾರ ಸತೀಶ್ ಶೆಟ್ಟಿ ಅವರ ನೂತನ ಕೃತಿ ‘ಕೊನೆಯ ಎರಡು ಎಸೆತಗಳು'. ಈ ಕೃತಿಗೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು -” ಅಜ್ಜ ನೆಟ್ಟ ಹಲಸಿನ ಮರ' ಓದಿ, ಈಗ ‘ಕೊನೆಯ ಎರಡು ಎಸೆತಗಳು' ಕೃತಿಯನ್ನು ಓದಿದರೆ, ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ಹೊರಟ ಹಾದಿಯ ಜಾಡು ಹಿಡಿಯಬಹುದು. ಅದರಲ್ಲಂತೂ ಅವರದೇ ಊರಿನ, ಕುಂದಾಪುರ ಭಾಷೆಯ ಪೂರ್ಣ ಪರಿಚಯ ಇರುವ ನನಗೆ ಸತೀಶರ ನಡೆ…