ಸಂಪದ ಸಹಾಯ ಪುಟಗಳ ಪುಸ್ತಕ

ಸಂಪದ ಸಹಾಯ ಪುಟಗಳ ಪುಸ್ತಕ ನಿರ್ವಹಣೆ Sat, 02/11/2012 - 16:08

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು ನಿರ್ವಹಣೆ Wed, 04/26/2006 - 18:48

ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ ನಿರ್ವಹಣೆ Sun, 05/21/2006 - 22:41

ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ

ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ hpn Mon, 11/11/2013 - 11:28

ಳೆದ ವರ್ಷ ಆಂಡ್ರಾಯ್ಡ್ ಮೊಬೈಲುಗಳಿಗೆ ಸಂಪದದ app ಹೊರ ತಂದಿದ್ದೆವು. ಈ ವರುಷ ರಾಜ್ಯೋತ್ಸವದ ಸಂದರ್ಭದಲ್ಲಿ ಐಪಾಡ್, ಐಫೋನಿನಲ್ಲೂ ಇದು ಲಭ್ಯವಾಗಿದೆ ಎಂಬುದು ಸಂತಸದ ವಿಷಯ. ಈಗ ಐಫೋನಿನಿಂದಲೇ ಸಂಪದದಲ್ಲಿ ಪ್ರಕಟವಾದ ಪುಟಗಳನ್ನು ಓದಬಹುದು. ಈ app ಡೌನ್ಲೋಡ್ ಮಾಡಿಕೊಳ್ಳಲು ಭೇಟಿ ಕೊಡಿ:
http://bit.ly/HPkF5j

ಸಂಪದದ ಮತ್ತೊಂದು app ಸಂಪದ ಶ್ರ್ಯಾವ್ಯ ಕೂಡ ಐಫೋನಿನಲ್ಲಿ ಈಗ ಲಭ್ಯವಿದೆ. ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಪುಟಕ್ಕೆ ಭೇಟಿ ಕೊಡಿ:
http://bit.ly/1cN9TdE

ಸಂಪದ ಶ್ರಾವ್ಯ ಇದುವರೆಗೂ ಸಂಪದಕ್ಕಾಗಿ ರೆಕಾರ್ಡ್ ಮಾಡಿದ ಸಂದರ್ಶನಗಳ ಮಾಲಿಕೆ. ನಿಮ್ಮ ಐಫೋನಿನಿಂದ ನೇರ ಈ ಸಂದರ್ಶನಗಳನ್ನು ಕೇಳಬಹುದಲ್ಲದೆ ಅವುಗಳ ಪಠ್ಯವನ್ನು ಓದಬಹುದಾದ ಸೌಲಭ್ಯವಿದೆ.

ಇದಲ್ಲದೆ ಸಂಪದದವರೇ ಆದ ಹಂಸಾನಂದಿಯವರು (ರಾಮಪ್ರಸಾದ್) ಬರೆದ ಪುಸ್ತಕ  ॑ಹಂಸನಾದ॑ ಈಗ ನೇಟಿವ್ app ಮಾದರಿಯಲ್ಲಿ ಐಫೋನಿಗೆ ಲಭ್ಯ. ಪ್ರತಿನಿತ್ಯ ಒಂದು ಸುಭಾಷಿತವನ್ನು ಕನ್ನಡದ ಆಡುನುಡಿಯಲ್ಲಿ ನಿಮಗೆ ತಲುಪಿಸುವ ಕೆಲಸ ಈ ‍app ‍ಮಾಡುತ್ತದೆ. ತಪ್ಪದೆ ಡೌನ್ಲೋಡ್ ಮಾಡಿಕೊಳ್ಳಿ!
http://bit.ly/1eClQmu

ಮೇಲಿನ ಮೂರೂ ಅಪ್ಲಿಕೇಶನ್ನುಗಳಲ್ಲಿ in-app purchases ‍ಅಥವ ಜಾಹೀರಾತು ಇಲ್ಲದಿರುವ ಆವೃತ್ತಿಯನ್ನು ಖರೀದಿಸುವ ಸೌಲಭ್ಯವಿದೆ. ಈ ಅಪ್ಲಿಕೇಶನ್ನುಗಳನ್ನು ಖರೀದಿಸಿದ ಹಣದಿಂದ ಸಂದಾಯವಾದ ಲಾಭವನ್ನು ಸಂಪದ ಹಾಗೂ ಇದಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಳಸಲಾಗುವುದು. ಜಗತ್ತಿನಾದ್ಯಂತ ಕನ್ನಡಿಗರು ಅಪ್ಲಿಕೇಶನ್ನುಗಳನ್ನು ಖರೀದಿ ಮಾಡಿ ಅದರ ಮೂಲಕ ಸಂಪದಕ್ಕೆ ಪ್ರೋತ್ಸಾಹ ನೀಡಬಹುದು.

ಎಂದಿನಂತೆ ಇವೆಲ್ಲವನ್ನೂ ಚೊಕ್ಕವಾಗಿ ನಿರ್ಮಿಸಿ, ನಾನು ಆಗಿಂದಾಗ್ಯೆ ವಿಧಿಸುತ್ತಿದ್ದ ಹಲವು ಮಾರ್ಪಾಡುಗಳನ್ನು ವ್ಯವಧಾನದಿಂದ ಸ್ವೀಕರಿಸಿ ನನ್ನ ಜೊತೆ ಕೆಲಸ ಮಾಡಿ ಈ ಕಲಿಕೆಯಲ್ಲಿ ಪಾಲ್ಗೊಂಡ ಸಾರಂಗದ ನನ್ನ ತಂಡಕ್ಕೆ ನಾನು ಋಣಿ. ಈ ಮೊಬೈಲ್ ಅಪ್ಲಿಕೇಶನ್ನು ಹೊರತರುವ ಮುನ್ನ ಬಹಳಷ್ಟು ಕಾಲ ವ್ಯಯ ಮಾಡಿ ಟೆಸ್ಟ್ ಮಾಡಿ ಸಹಾಯ ಮಾಡಿದ ಸುಮ ಬಸಿರಾಗಿದ್ದ ಸಮಯದಲ್ಲೂ ಇದನ್ನು ತುಂಬ ಆಸಕ್ತಿಯಿಂದ ಕೈಗೆತ್ತಿಕೊಂಡು ನಮಗೆ ನೆರವಾಗಿದ್ದಾರೆ. ಐಪಾಡ್ ಹಾಗು ಐಫೋನುಗಳಿಗೆ ಸಂಪದದ app‍ಗಳು ಅಂತರರಾಷ್ಟ್ರೀಯ ಗುಣಮಟ್ಟದಷ್ಟು ಬೆಳೆಯುವಲ್ಲಿ ಇವರ ಕೊಡುಗೆ ಬಹಳಷ್ಟಿದೆ.‍

ಇನ್ನು ಮೊಬೈಲ್ ಫೋನುಗಳು ಹಾಗು ಟ್ಯಾಬ್ಲೆಟ್ಟುಗಳಲ್ಲಿ ಆಟಗಳನ್ನಾಡುವ ಆಸಕ್ತಿ ಇಟ್ಟುಕೊಂಡವರಿಗೆ ನಮ್ಮ ಸಾರಂಗ ತಂಡದ ಮತ್ತೊಂದು ಆಪ್ “ಇಂಡಿಯನ್ ಮೇಝ್” ಕೂಡ ಇತ್ತೀಚೆಗೆ ಲಭ್ಯವಾಗಿದೆ. ಇದನ್ನೂ ಒಮ್ಮೆ ಡೌನ್ಲೋಡ್ ಮಾಡಿ ಪ್ರಯತ್ನಿಸಿ ನೋಡಬಹುದು. ಜಾತ್ರೆಗಳಲ್ಲಿ ಸಿಗುತ್ತಿದ್ದ ಸ್ಟೀಲ್ ಗೋಲಿಗಳಿರುತ್ತಿದ್ದ ಪುಟ್ಟ ಪ್ಲಾಸ್ಟಿಕ್ ಆಟಿಕೆಯ ಡಿಜಿಟಲ್ ರೂಪಾಂತರ ಇದು. ಡೌನ್ಲೋಡ್ ಮಾಡಲು ಭೇಟಿ ಕೊಡಿ:
http://bit.ly/16UHzBb

ಗಮನಿಸಿ: ಆಂಡ್ರಾಯ್ಡ್ ಬಳಕೆದಾರರಿಗೆ ಮೇಲಿನ ಎಲ್ಲ ಅಪ್ಲಿಕೇಶನ್ನುಗಳು ಉಚಿತವಾಗಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಮುಂಚಿನಿಂದ ಲಭ್ಯವಿದೆ:

http://bit.ly/1gg2jsi