ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ (ಕಾದಂಬರಿ)
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೮)
January 9, 2006 - 11:43pm — pvravi*****ಭಾಗ ೧೮
ಕಾರಾಗೃಹದ ದಾರಿ ಕಲ್ಲು ಬಂಡೆಗಳ ಮೇಲೆ ಹಾಯ್ದು ಹೋಗುತ್ತಿತ್ತು. ಒಂದು ತಿರುವಿನಲ್ಲಿ ಎತ್ತರದ ಕಡಿದಾದ ಬಂಡೆಗಳು; ಬಂಡೆಗಳ ಮೇಲೆ ಒಂದು ಕಟ್ಟಡ ಕಾಣಿಸಿತು. ಕಟ್ಟಡಲ್ಲಿ ಕೆಲವೊಂದು ಬೆಳಕಿಂಡಿಗಳು ಕಾಣಿಸುತ್ತಿದ್ದವು. ಅವೇ ಕಾರಾಗೃಹ ಹಿಂಭಾಗದಲ್ಲಿರುವ ಸೆರೆ ಕೋಣೆಗಳಿರಬೇಕೆಂದು ಊಹಿಸಿದೆ. ಕಾರಾಗೃಹದ ಮುಂದೆ ಕೋಟೆಯಂತಹ ಭದ್ರತೆ. ಒಳಗೆ ಸೇರಿಸಿ ಬಾಗಿಲನ್ನು ಮುಚ್ಚಿದರೆ ಸೊಳ್ಳೆಯೂ ಹೊರ ಹೋಗಲಾರದು! ಈ ದುರ್ಗದಂತಹ ಕಾರಾಗೃಹಕ್ಕೆ ನನ್ನನ್ನು ಕರೆದೊಯ್ದರು. ಕುದುರೆಯಿಂದ ಕೆಳಗಿಳಿಸಿ ಮೊಗಸಾಲೆಗಳಲ್ಲಿ ಎಳೆದುಕೊಂಡು ಹೋದರು. ಮೊಗಸಾಲೆಯ ಕೊನೆಯಲ್ಲಿ ಆಕಾಶ-ತಾರೆಗಳು ಕಾಣಿಸುತ್ತಿದ್ದವು; ತಣ್ಣನೆಯ ಗಾಳಿಯೂ ಬೀಸುತ್ತಿತ್ತು. ಮೊಗಸಾಲೆಯ ಒಂದು ಬದಿಯಲ್ಲಿ ಒಂದೆರಡು ಮುಚ್ಚಿದ್ದ ಬಾಗಿಲುಗಳನ್ನು ಹಾಯ್ದು ಹೋಗಿ, ಒಂದು ತೆರೆದಿದ್ದ ಬಾಗಿಲಲ್ಲಿ ನನ್ನನ್ನು ತಳ್ಳಿ ಬಾಗಿಲು ಮುಚ್ಚಿದರು. ಮುಂದೆ ಓದಿ »

- Login or register to post comments
- 589 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೨)
January 9, 2006 - 11:43pm — pvravi*****ಭಾಗ ೨
ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೇಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಢೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ. ಮುಂದೆ ಓದಿ »

- Login or register to post comments
- 704 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೯)
January 9, 2006 - 11:43pm — pvravi*****ಭಾಗ ೧೯
ಅಷ್ಟರಲ್ಲಿ ಅವನು "ಅದು ಹಾಗಿರಲಿ, ನಿನ್ನ ಕತೆಯೇನು" ಎಂದು ನನ್ನನ್ನೇ ಕೇಳಿದ. ಮುಂದೆ ಓದಿ »

- Login or register to post comments
- 626 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೩)
January 9, 2006 - 11:43pm — pvravi***** ಭಾಗ ೩.
ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು ಯೋಚಿಸತೊಡಗಿದೆ. ಮುಂದೆ ಓದಿ »

- Login or register to post comments
- 534 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೨೦)
January 9, 2006 - 11:43pm — pvravi*****ಭಾಗ ೨೦
ಎಲ್ಲವನ್ನೂ ಯೋಚಿಸಿದ್ದ ನಾನು ಗಂಗಾನದಿಯ ಶೀತಲತೆಯನ್ನು ಎಣಿಸಿರಲಿಲ್ಲ. ಗಂಗಾನದಿ ಹಿಮಾಲಯ ಪರ್ವತಗಳಿಂದ ಮಂಜು ಕರಗಿ ನೀರಾಗಿ ಹರಿದು ಬರುವ ನದಿ. ಹಾಗಾಗಿ ನದಿ ಬಹಳ ತಂಪಾಗಿರುವುದು. ರಾತ್ರಿಯ ಚಳಿಯಲ್ಲಿ ಆ ಕೊರೆಯುವ ನೀರಿನಲ್ಲೀಜುವುದೆಂದರೆ ಏನು! ಆದರೂ ಆದಷ್ಟೂ ನೀರಿನೊಳಗೇ ಈಜಿಕೊಂಡು ಸ್ವಲ್ಪ ದೂರ ಹೋದೆ. ನದಿ ವೇಗವಾಗಿ ಹರಿಯುತ್ತಿತ್ತು, ನಾನು ಪ್ರವಾಹದೊಡನೆಯೇ ಈಜುತ್ತಿದ್ದರಿಂದ ಮುಂದೆ ಹೋಗಲು ಹೆಚ್ಚು ಶಕ್ತಿ ಪ್ರಯೋಗ ಮಾಡುವ ಅವಕಾಶವಿರಲಿಲ್ಲ. ನಂತರ ಉಸಿರಾಡಲೆಂದು ಮೇಲೆ ಬಂದು ಸುತ್ತ ನೋಡಿದೆ ಎಲ್ಲವೂ ನಿಶ್ಯಬ್ಧವಾಗಿ, ಸುರಕ್ಷಿತವಾಗಿ ಕಾಣಿಸಿತು. ಆದರೂ ಜಾಗ್ರತೆಗಾಗಿ ಮತ್ತೆ ಸ್ವಲ್ಪ ದೂರ ಮುಳುಗಿಕೊಂಡೇ ಈಜುತ್ತಾ ಹೋದೆ. ಸುಮಾರು ಐದಾರು ಕ್ರೋಶಗಳು ಹೋದ ನಂತರ ತೀರದಲ್ಲಿ ಒಂದು ವನ ಕಾಣಿಸಿತು. ನಿಧಾನವಾಗಿ ನೀರಿನಿಂದೆದ್ದು ವನದೊಳಗೆ ಹೊಕ್ಕೆ. ತಂಪನೆಯ ನೀರಿನಿಂದ ಮೈ ಮರಗಟ್ಟಿ ಹೋಗಿತ್ತು. ಮೈ ಬೆಚ್ಚಗೆ ಮಾಡಿಕೊಳ್ಳಲು ಸ್ವಲ್ಪ ಹೊತ್ತು ಅಲ್ಲಿಯೇ ಓಡಾಡಿದೆ. ನನ್ನ ಪಂಚೆಯನ್ನು ಹಿಂಡಿ ಆದಷ್ಟೂ ಒಣಗಿಸಿಕೊಂಡೆ. ನಂತರ ಸುಸ್ತಾಗಿ ಬಂಡೆಯ ಮಗ್ಗುಲಿನಲ್ಲಿ ಮಲಗಿ ನಿದ್ರೆ ಮಾಡಿದೆ. ಮುಂದೆ ಓದಿ »

- Login or register to post comments
- 580 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: