ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚಿಂತನೆ

ಚಿಂತನೆ - ಸ್ಟಾಲ್ಮನ್

ಬದಲಾಗುತ್ತಿರುವ ಸಂಸತ್ತಿನ ನಡವಳಿಕೆಗಳು

November 21, 2007 - 12:28pm — csomsekraiah

ಭಾರತದ ಸ್ವಾತಂತ್ರ್ಯಾನಂತರದ ಈ ಅರವತ್ತು ವರ್ಷಗಳಲ್ಲಿ , ಸಕಲ ಕ್ಷೇತ್ರಗಳಲ್ಲೂ ಆಗುತ್ತಿರುವ, ಆಗಿರುವ ಬದಲಾವಣೆಗಳು ಅಲೋಚಿಸುವ ಮನಸ್ಸುಗಳನ್ನು , ದಂಗುಬಡಿಸುವ ರೀತಿಯಲ್ಲಿ ಜರುಗಿವೆ .  ಮುಂದೆ ಓದಿ »

  • ಚಿಂತನೆ - ಸ್ಟಾಲ್ಮನ್
~.~
  • Login or register to post comments
  • 319 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)

April 23, 2007 - 4:08pm — hpn

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ನನ್ನ ಸುತ್ತಲು ಬಳಕೆಯಾಗುತ್ತಿರುವ ನನಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.

ಅನುವಾದ ಪ್ರಯತ್ನದ ಎರಡನೇ ಕಂತು ಸುದೀರ್ಘ ಬಿಡುವಿನ ನಂತರ ಈಗ ನಿಮ್ಮ ಮುಂದಿದೆ. ಇದರ ಮೊದಲ ಕಂತು ಓದಲು ಇಲ್ಲಿ ಕ್ಲಿಕ್ ಮಾಡಿ. - ಹರಿ ಪ್ರಸಾದ್ ನಾಡಿಗ್

ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಎರಡನೇ ಕಂತು)

GNU(ಮೊದಲ ಕಂತಿನಿಂದ ಮುಂದುವರೆದ ಭಾಗ...)
ಹೀಗೆ ನಿಮಗೆ ಬಂದ ಡಾಕ್ಯುಮೆಂಟಿನ ಬಗ್ಗೆ "ಇದು ನನಗೊಬ್ಬನಿಗೇ ಆದದ್ದು" ಎಂದು ನೀವು ಆಲೋಚಿಸಿದರೆ, ಅದನ್ನು ಸ್ವತಃ ನಿಭಾಯಿಸಲು ಪ್ರಯತ್ನಿಸೋದು ಸಹಜ. ಆದರೆ ಅದೊಂದು ಕ್ರಮಬದ್ಧವಾದ ಮಾರಕ ಅಭ್ಯಾಸ ಎಂದು ನೀವದನ್ನು ಗುರುತಿಸಿದಾಗ ಒಂದು ಹೊಸ ದೃಷ್ಟಿಕೋನ ಅನಿವಾರ್ಯವಾಗುತ್ತದೆ. ಆ ಫೈಲನ್ನು ನಿಮ್ಮ ತಂತ್ರಾಂಶ ಓದುವಂತೆ ಮಾಡುವುದು ಹಳೆಯ ಖಾಯಿಲೆಯ ಸೂಚನೆಗಳಿಗೆ ಚಿಕಿತ್ಸೆ ಕೊಟ್ಟಂತೆ. ಈ‌ ಖಾಯಿಲೆಯನ್ನು ಗುಣ ಮಾಡಲು ನಾವು ವರ್ಡ್ ಡಾಕ್ಯುಮೆಂಟುಗಳನ್ನು ಬಳಸಬೇಡಿ ಎಂದು ಜನರ ಮನವೊಪ್ಪಿಸಬೇಕು.

ಕಳೆದ ಒಂದು ವರ್ಷದಲ್ಲಿ ನನಗೆ ಬಂದ ವರ್ಡ್ ಆಟ್ಟಾಚ್ಮೆಂಟುಗಳಿಗೆ ಉತ್ತರಿಸುತ್ತ ವರ್ಡ್ ಫೈಲು ಬಳಸುವುದು ಕೆಟ್ಟ ಅಭ್ಯಾಸ ಎಂದು ಸೌಜನ್ಯದ ಸಂದೇಶ ಕಳುಹಿಸುವ ಅಭ್ಯಾಸ ಮಾಡಿಕೊಂಡಿದ್ದೇನೆ ಮತ್ತು ನನಗೆ ಕಳುಹಿಸಿದ್ದನ್ನು ರಹಸ್ಯವಲ್ಲದ ಫಾರ್ಮ್ಯಾಟಿನಲ್ಲಿ ಪುನಃ‌ ಕಳುಹಿಸಿ ಎಂದು ಕೇಳಲಾರಂಭಿಸಿದ್ದೇನೆ. ಹೀಗೆ ಮಾಡುವುದು ಓದಲು ಸಾಧ್ಯವಾಗದ, ಸ್ಪಷ್ಟವಾಗಿಲ್ಲದ ASCII ವಾಕ್ಯಗಳನ್ನು ಓದುವುದಕ್ಕಿಂದ ತುಂಬಾ ಕಡಿಮೆ ಕೆಲಸ. ಸಾಮಾನ್ಯವಾಗಿ ಜನ ಈ ವಿಷಯ ಅರ್ಥಮಾಡಿಕೊಳ್ಳುತ್ತಾರೆಂಬುದನ್ನು ಗಮನಿಸಿದ್ದೇನೆ, ಹಲವರು ಮತ್ತೆ ಬೇರೆಯವರಿಗೆ ವರ್ಡ್ ಫೈಲುಗಳನ್ನು ಕಳುಹಿಸುವುದಿಲ್ಲವೆಂದೂ ಹೇಳುತ್ತಾರೆ.  ಮುಂದೆ ಓದಿ »

  • ಚಿಂತನೆ - ಸ್ಟಾಲ್ಮನ್
~.~
  • 15 ಪ್ರತಿಕ್ರಿಯೆಗಳು
  • 1708 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

January 19, 2007 - 5:34pm — hpn

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ಬಳಕೆಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.

ಬರುವ ಒಂದೆರಡು ವಾರಗಳಲ್ಲಿ ಪ್ರತಿ ಲೇಖನವನ್ನೂ ಹಲವು ಕಂತುಗಳಲ್ಲಿ ಸೇರಿಸಲಾಗುವುದು. - ಹರಿ ಪ್ರಸಾದ್ ನಾಡಿಗ್

ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಮೊದಲನೇ ಕಂತು)

GNU
ಇ-ಮೇಯ್ಲುಗಳಲ್ಲಿ M S ವರ್ಡ್ ಡಾಕ್ಯುಮೆಂಟುಗಳು ಬಂದರೆ ನಿಮಗೆ ಸಿಟ್ಟು ಬರೋದಿಲ್ವೆ? ವರ್ಡ್ ಅಟ್ಟಾಚ್ಮೆಂಟುಗಳು ಕಿರುಕುಳ ಕೊಡೋದಷ್ಟೇ ಅಲ್ಲ, ಜನರನ್ನು ಮುಕ್ತ ತಂತ್ರಾಂಶದ ಬಳಕೆಯಿಂದ ದೂರ ತಳ್ಳುತ್ತೆ. ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳನ್ನು ಕಳುಹಿಸೋ ಈ ಅಭ್ಯಾಸವನ್ನ ನಾವುಗಳು ಬಹುಶಃ ಒಟ್ಟುಗೂಡಿದ ಒಂದು ಅತಿ ಸಾಮಾನ್ಯ ಪ್ರಯತ್ನದಿಂದ ನಿಲ್ಲಿಸಬಹುದು.

ಕಂಪ್ಯೂಟರ್ ಬಳುಸುವ ಸುಮಾರು ಜನ ಮೈಕ್ರೊಸಾಫ್ಟಿನ ವರ್ಡ್ ಬಳಸ್ತಾರೆ. ಅದು ಅವರಿಗೆ ದುರದೃಷ್ಟಕರವಾದುದು, ಏಕಂದ್ರೆ ವರ್ಡ್ ಬೇರೊಬ್ಬರ ಸ್ವಾಮ್ಯದಡಿ ಇರುವ ತಂತ್ರಾಂಶ. ಅದನ್ನು ಬಳಸುವವರಿಗೆ ತಂತ್ರಾಂಶವನ್ನು ಅಧ್ಯಯನ ಮಾಡಲು, ಬದಲಾಯಿಸಲು ಅಥವ ಬೇರೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಇದಲ್ಲದೆ, ಮೈಕ್ರೊಸಾಫ್ಟ್ ತನ್ನ ಈ ತಂತ್ರಾಂಶದ ಪ್ರತಿ ಆವೃತ್ತಿಯೊಂದಿಗೂ ಈ ವರ್ಡ್ ಫೈಲುಗಳ ಪಾರ್ಮ್ಯಾಟ್ (ವಿನ್ಯಾಸ) ಬದಲಾಯಿಸುತ್ತದಾದ್ದರಿಂದ ಇದನ್ನು ಬಳಸುತ್ತಿರುವವರು ಪ್ರತಿ ಸಾರಿ ಹೊಸ ಆವೃತ್ತಿಯನ್ನು ಕೊಳ್ಳಲೇಬೇಕು - ತಮಗೆ ಬೇಕೋ ಬೇಡವೋ, ಮುರಿಯಲಾಗದ ಬಂಧನ. ಇಷ್ಟೇ ಅಲ್ಲದೆ, ಈ ತಂತ್ರಾಂಶವನ್ನು ಬಳಸುತ್ತಿರುವವರಿಗೆ ಹಲವು ವರ್ಷಗಳ ನಂತರ ಈಗ ಬರೆದಿಟ್ಟಿರುವ ವರ್ಡ್ ಡಾಕ್ಯುಮೆಂಟುಗಳೂ ಮುಂದೆ ಬರುವ ವರ್ಡ್ ಆವೃತ್ತಿಗಳಲ್ಲಿ ಓದಲು ಬರುವುದಿಲ್ಲ ಎಂಬುದು ತಿಳಿದುಬರಬಹುದೇನೊ.  ಮುಂದೆ ಓದಿ »

  • ಚಿಂತನೆ - ಸ್ಟಾಲ್ಮನ್
~.~
  • 4 ಪ್ರತಿಕ್ರಿಯೆಗಳು
  • 1917 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
  • mahesha
    ಉ: ಗೋಕಾಕ ಮಾದರಿಯ ಚಳುವಳಿ ಎಂದರೇನು?
    October 7, 2008 - 5:02pm
ಇನ್ನಷ್ಟು


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator