ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ವಿಮರ್ಶೆ

ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ’ಯುಗಾದಿ’ ತರುವುದು ಹೊಸ ಹರುಷ.
  ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ ಅವಿನಾಭಾವ ಸಂಬಂಧ ಹೊಂದಿದೆ ದ.ರಾ. ಬೇಂದ್ರೆಯವರ ಕವನ ’ಯುಗಾದಿ’.
  ಯುಗಾದಿಗೆ ’ಯುಗಾದಿ’ಯೇ ಸಾಟಿ; ’ಯುಗಾದಿ’ಗೆ ಯುಗಾದಿಯೇ ಸಾಟಿ.

  ಯುಗಯುಗಾದಿ ಕಳೆದರೂ
  ಯುಗಾದಿ ಮರಳಿ ಬರುತಿದೆ.
  ಹೊಸ ವರುಷಕೆ ಹೊಸ ಹರುಷವ
  ಹೊಸತು ಹೊಸತು ತರುತಿದೆ

  ಎಂದು ಹರ್ಷಘೋಷದೊಂದಿಗೆ ಆರಂಭವಾಗುತ್ತದೆ ’ಯುಗಾದಿ’ ಕವಿತೆ. ಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿ ವರ್ಷವೂ ಹೊಸ ವರ್ಷಕ್ಕಾಗಿ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯಿಲ್ಲಿ ಸಾರುವಾಗ ಕವಿಯಲ್ಲದ ಕೇವಲ ಭವಿಯ ಮನಸ್ಸೂ ಹರ್ಷದಿಂದ ಹೊಂಗತೊಡಗುತ್ತದೆ.   
 
  ಹೊಂಗೆಹೂವ ತೊಂಗಲಲ್ಲಿ
  ಭೃಂಗದ ಸಂಗೀತಕೇಲಿ  ಮುಂದೆ ಓದಿ »

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ  ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960),  “Arrow of God” (1964),  “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952),  "Dead Men's Path" (1953),  “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.  ಮುಂದೆ ಓದಿ »

ಶ್ರೀಕಾಂತ ಕೃತಿ ಸೌರಭ

ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು.
ಮೊನ್ನೆ ಮೊನ್ನೆ ಈ ಜೋಡಿ ಸಿಡಿಗಳು ಬಂದ ಮೇಲೆ ನಾಕಾರು ಬಾರಿ ಕೇಳಿದ್ದೂ ಆದಮೇಲೆ ಕೆಲವು ಅನಿಸಿಕೆಗಳನ್ನು ಬರೆಯಹೊರಟೆ.

ಈ ಜೋಡಿ ಸಿಡಿಗಳಲ್ಲಿ ಕನ್ನಡ, ಸಂಸ್ಕೃತ ಮತ್ತು ಸಂಕೇತಿ ನುಡಿಗಳಲ್ಲಿ ರಚಿತವಾದ ರಚನೆಗಳನ್ನು ಪ್ರಸ್ತುತಪಡಿಸಲಾಗಿದೆ. ಸಂಕೇತಿ ಮಾತಾಡುವರಲ್ಲಿ ಹಲವಾರು ಪ್ರಸಿದ್ಧ ಸಂಗೀತಗಾರರಿದ್ದರೂ, ಸಂಕೇತಿ ನುಡಿಯಲ್ಲಿ ಮೊದಮೊದಲು ಈ ರೀತಿ ಸಂಗೀತರಚನೆಗಳನ್ನು ಮಾಡಿರುವುದರಲ್ಲಿ ಮೊದಲಾಗಿರುವುದಕ್ಕೆ ಶ್ರೀಕಾಂತ್ ಮೂರ್ತಿ ಅವರನ್ನು ಅಭಿನಂದಿಸುವೆ. ಮೊದಲನೇ ಸಿಡಿಯಲ್ಲಿ ವಿದುಷಿ ಟಿ.ಎಸ್.ಸತ್ಯವತಿ ಮತ್ತು ಅವರ ಶಿಷ್ಯರು ಹಾಡಿರುವ ಒಂಬತ್ತು ರಚನೆಗಳಿದ್ದು, ಎರಡನೇ ಸಿಡಿ ಯಲ್ಲಿ ವಿದುಷಿ ಸುಕನ್ಯಾ ಪ್ರಭಾಕರ್ ಅವರು ಹಾಡಿರುವ ಐದು ರಚನೆಗಳಿವೆ.
 ಮುಂದೆ ಓದಿ »

ಇಷ್ಟೆಲ್ಲಾ ದಬ್ಬಾಳಿಕೆಗಳನ್ನ ಎದುರಿಸಿ ನಾನು ಇಷ್ಟು ಮುಂದೆ ಬಂದೆ!!!

 * ಅಲ್ಪ ಸ್ವಲ್ಪ ಓದು ಬರಹ ಕಲ್ತಿರೋ ಹೆಣ್ಣು ಮಕ್ಳು 

 * ಮನೆಯಿಂದ ದಿನ ಹೊರಗೆ ಹೋಗಿ ಬರೋ ಅಥ್ವ 

 * ಮನೆಲೇ ಕೂತಿದ್ರು ತಮ್ಮ ಸುತ್ತಲಿರೋ ಅನ್ಯರ ಏಳಿಗೆ ಸಹಿಸದ ಹೆಣ್ಣು ಮಕ್ಳು, 

ಯಾವತ್ತಿದ್ರು ಭವಿಶ್ಯದ ದ್ರುಷ್ಟಿಯಿಂದ ಸಮಾಜಕ್ಕೆ ಮಾರಕವೇ. 

ಇಂತವರಿಂದ ಮೂಲತಃ ಅವ್ರ ಸ್ವಂತ ಮನೆಲೇ ನೆಮ್ಮದಿಯನ್ನ ಇವ್ರು ಕದಡ್ತಾ ಇರ್ತಾರೆ, ತಾವೂ ಸಮಾಧಾನವಾಗಿ ಇರಲ್ಲ, ಬೇರೆಯವ್ರು ಸಮಾಧಾನವಾಗಿ ಇರೋಕ್ಕು ಬಿಡಲ್ಲ,

ಇವ್ರನ್ನ ಮಾತಾಡ್ಸಿದ್ರೆ ಇವ್ರ ಬಾಯಲ್ಲಿ ಬರೋ ಕೇವ್ಲ ಮಾತುಗಳು ಅಂದ್ರೆ 

 * ನಮ್ಮದು ಪುರುಷ ಪ್ರಧಾನ ಸಮಾಜ, 

 * ಇಲ್ಲಿ ಹೆಣ್ಣಿನ ಮೇಲೆ ದಬ್ಬಾಳಿಕೆ, ದೌರ್ಜನ್ಯಕ್ಕೆ ಮಿತಿಯೇ ಇಲ್ಲ. 

 * ಪುರುಷರಿಗೆ ನೀಡೊವಷ್ಟು ಪ್ರೋತ್ಸಾಹ ನನಗೂ ನೀಡಿದ್ರೆ ಇವತ್ತು ನಾನು ಮತ್ತೇನನ್ನೋ ಸಾಧಿಸಿ ತೋರಿಸ್ತಿದ್ದೆ.

 * ತಮಗೆ ಯಾವುದೋ ಆರೋಗ್ಯ ಸಮಸ್ಯೆಯಿಂದ ರಾತ್ರಿ ಬೇದಿ ಆದ್ರೆ, ಇದಕ್ಕೂ ಹೆಣ್ಣಿನ ಮೇಲೆ ಗಂಡಸರ ದಬ್ಬಾಳಿಕೆಯೇ ಕಾರ‍ಣ.  ಮುಂದೆ ಓದಿ »

ದೊಡ್ಡೋರ್ಯಾಕೆ ಹಿಂಗೆ?- ಸ್ಯಾಡಿಸ್ಟ್ ಅಜ್ಜಿಯರು

 ನನ್ನ ಅಜ್ಜಿಯಂತಹ ಬ್ರಿಲ್ಲಿಯಂಟ್ ಹೆಣ್ಣುಮಗಳನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ಎಪ್ಪತ್ತೈದರಲ್ಲೂ ಹದಿವಯಸ್ಸಿನವರಂತಹ ನೆನಪಿನ ಶಕ್ತಿ. ಎಲ್ಲವನ್ನೂ ನೆನಪಿಟ್ಟು ಯಾವಾಗ ಬೇಕಾದರೂ ಪುನರುಚ್ಚರಿಸುವ ತಾಕತ್ತು, ಭಾಷಾಸೌಷ್ಟವ!  ಮುಂದೆ ಓದಿ »

ದೊಡ್ಡೋರ್ಯಾಕೆ ಹಿಂಗೆ?- ಪ್ರಶ್ನೋತ್ತರಗಳ ಪರಿಶೆ!

ನನ್ನ ಅಪ್ಪನ ಕಡೆಯವರು ಎಂದರೆ ಕರೂರಿನ ಜನ ಎಂದರೆ ಬುದ್ದಿವಂತರು ಎಂದೇ ಪ್ರಸಿದ್ಧಿ. ಅಥವಾ ನಮ್ಮ ರವಿ ಬೆಳಗೆರೆಯವರಂತೆ ಹಾಗೆ ಪದೇ ಪದೇ ಹೇಳಿಕೊಂಡು ಇಮೇಜ್ ಸೃಷ್ಟಿಸಿಕೊಂಡಿದ್ದರು. ಇದರ ಬಗ್ಗೆ ಹಲವಾರು ಜೋಕುಗಳು ಪ್ರಚಲಿತವಾಗಿವೆ. ನನ್ನ ಅಪ್ಪನ ತಮ್ಮಂದಿರು ಅಕೆಡೆಮಿಕ್ ಆಗಿ ಬುದ್ಧಿವಂತರು. ಒಳ್ಳೆಯ ಅಂಕಗಳನ್ನು ತೆಗೆದು ಸ್ಕಾಲರ್ ಶಿಪ್ ಗಿಟ್ಟಿಸಿಕೊಂಡು ಓದಿದವರು. ಈಗ ಒಳ್ಳೆಯ ಹುದ್ದೆಗಳಲ್ಲಿದ್ದಾರೆ.
 ಅಮ್ಮನ ಅಣ್ಣ ತಮ್ಮಂದಿರು ತಾವು ದಡ್ಡರೆಂದು ಸ್ವತಃ ಯಾವಾಗಲೋ ಘೋಷಿಸಿಕೊಂಡಿದ್ದರು. ಹೀಗಾಗಿ ನನ್ನ ಪ್ರಶ್ನೆಗಳಿಂದ ಅವರು ವಂಚಿತರಾಗಿದ್ದರು. ಆದರೆ ಅಪ್ಪನ ಕಡೆಯವರು ಬುದ್ಧಿವಂತರಲ್ಲವೇ! ಅವರೆಡೆಗೆ ನನ್ನ ಪ್ರಶ್ನೆಗಳು ಸದಾ ಸಿದ್ಧವಾಗಿರುತ್ತಿದ್ದವು. ತಮಗೆ ಉತ್ತರ ಗೊತ್ತಿಲ್ಲದಿದ್ದರೆ ತಮಗೆ ಗೊತ್ತಿಲ್ಲ ಎಂದು ಎಂದೂ ಅವರು ಹೇಳುತ್ತಿರಲಿಲ್ಲ. ಬುದ್ಧಿವಂತರು ಎಂಬ ಇಮೇಜಿಗೆ ಗುದ್ದು ಬೀಳಬಹುದಲ್ಲವೇ? ಎಷ್ಟೊ ಬಾರಿ ಅವರು ಕೊಟ್ಟ ಉತ್ತರ ತಾರ್ಕಿಕವಾಗಿಯೂ ಸಹ ಸರಿ ಅನ್ನಿಸುತ್ತಿರಲಿಲ್ಲ.  ಮುಂದೆ ಓದಿ »

ದೊಡ್ಡೋರ್ಯಾಕೆ ಹಿಂಗೆ?- ಬ್ರಾಹ್ಮಿ ಮುಹೂರ್ತದ ಟಾರ್ಚರ್!

ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದೊಂದು ದಿನ ನಾನೂ ಆ ದೊಡ್ಡವರಲ್ಲೊಬ್ಬನಾಗಬಹುದೆಂಬ ಎಚ್ಚರಿಕೆಯೊಂದಿಗೆ ನೆನಪಿನಿಂದ ಹೆಕ್ಕಿ ಇಲ್ಲಿಡುತ್ತಿದ್ದೇನೆ  ಮುಂದೆ ಓದಿ »

ಬಾನುಲಿದ ಬರಹ

ತೀರಾ ತಾಂತ್ರಿಕ ಮಾಧ್ಯಮಗಳಲ್ಲಿ ಒಂದಾದ ಬಾನುಲಿ ಭಾರತದಲ್ಲಿಂದು ತುಳಿಯುತ್ತಿರುವ ಹಾದಿಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಸಂದರ್ಭ ಇದು. ಹಿಂದೆ ಅಂದರೆ ತೀರಾ ಏಳೆಂಟು ವರ್ಷಗಳವರೆಗೂ ರೇಡಿಯೋ ಎಂದರೆ ಆಕಾಶವಾಣಿ ಒಂದೇ ಆಗಿತ್ತು. ಖಾಸಗೀ ವಾಹಿನಿಗಳಿಗೆ ಪರವಾನಗಿ ಕೊಡದೇ, ಖಾಸಗೀ ಸಹಭಾಗಿತ್ವವನ್ನು ಬಯಸದೇ, ಪ್ರೋತ್ಸಾಹಿಸದೇ ಆಕಾಶವಾಣಿಯು ಸರ್ಕಾರದ ಮಾಧ್ಯಮವಾಗಿ ಬೆಳೆದು ಬಂತು. ಅಂದಿನ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಖಾಸಗೀ ಪ್ರಭುತ್ವವು ಹಣಸುರಿಯುವುದೂ ಅಸಾಧ್ಯವಾಗಿತ್ತು ಎನ್ನುವುದು ಬಡ ಭಾರತದ ವಾಸ್ತವ. ಆದರೆ ಕೆಲವೊಮ್ಮೆ ಸರ್ಕಾರದ ಮುಖವಾಣಿಯಾದ ಆಕಾಶವಾಣಿಯಾದರೂ ಜನರ ದನಿಗೆ, ಅಗತ್ಯಕ್ಕೆ ಸ್ಪಂದಿಸಿತ್ತೇ ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟರೆ ನಿರಾಶೆ.

೧೯೫೬ರಲ್ಲಿ ಪ್ರಾರಂಭವಾದ ವಿವಿಧಭಾರತಿಯು ಜನರ ನಿರಾಶೆಗೆ ಸಂದ ಸಾಂತ್ವನ. ನೆರೆಯ ಶ್ರೀಲಂಕಾದ ವಾಹಿನಿಯು, ಭಾರತೀಯ ಆಕಾಶವಾಣಿಯ ಮಡಿವಂತಿಕೆಯ ಮಡಿಲಲ್ಲಿ ಮುಳುಗಿಹೋಗಿದ್ದ ಚಲನಚಿತ್ರಗೀತೆಗಳನ್ನು ಪ್ರಸಾರ ಮಾಡುವುದರ ಜೊತೆಗೆ ಜಾಹೀರಾತುಗಳನ್ನು ಪ್ರಸಾರ ಮಾಡಿ ಇಡೀ ಭಾರತದ ಕೇಳುಗರು ತಮ್ಮ ದೇಶದ ಚಲನಚಿತ್ರಗೀತೆಗಳನ್ನು ಶ್ರೀಲಂಕಾದ ರೇಡಿಯೋ ವಾಹಿನಿಯಿಂದ ಕೇಳಬೇಕಾದ ಅನಿವಾರ್ಯತೆ ಬಂತು. ಆ ಸಮಯಕ್ಕೆ ನಿದ್ದೆಯಿಂದ ಎಚ್ಚೆತ್ತ ಭಾರತ ಸರ್ಕಾರ ವಿವಿಧ ಭಾರತಿಯನ್ನು ಸ್ಥಾಪಿಸಿತು. ಇಂದಿಗೂ ಮುಂಬೈ ವಿವಿಧಭಾರತಿ ತನ್ನ ಶಾಸ್ತ್ರೀಯ ಶೈಲಿಯ ನಿರೂಪಣೆಗೆ, ಹಾಡುಗಳಿಗೆ ತನ್ನದೇ ಆದ ಕೇಳುಗಬಳಗವನ್ನು ಹೊಂದಿದೆ. ಆದರೆ ಮುಂಬೈನಲ್ಲಿ ವಿವಿಧಭಾರತಿಯನ್ನು ಸ್ಥಾಪಿಸಲು ತೋರಿದ್ದ ಆಸಕ್ತಿಯನ್ನೇ ಇತರ ರಾಜ್ಯಗಳಲ್ಲಿ ಸ್ಥಾಪಿಸಲು ತೋರಿದ್ದರೆ, ಇಂದಿನ ಎಲ್ಲಾ ಖಾಸಗೀ ಎಫ್‌ಎಮ್ ವಾಹಿನಿಗಳ ಅಬ್ಬರ, ಅರಚಾಟ, ಗಲಾಟೆಗಳಿಗೆ ಮೂಲವಾದ, ಗಟ್ಟಿಯಾದ ನೆಲೆಯೊಂದನ್ನು ಸಾತ್ವಿಕ ಹಿನ್ನೆಲೆಯಲ್ಲಿ ಕಟ್ಟಿಕೊಡಬಹುದಾಗಿತ್ತು.  ಮುಂದೆ ಓದಿ »

ಕೊಂಕಣಿಗಳ ಸಂಘ ನಿಷ್ಟೆಯೂ, ಪುಣ್ಯಕೋಟಿಯ ಧರ್ಮನಿಷ್ಟೆಯೂ...

ಈ ಹಿಂದೆ ಕೊಂಕಣಿಗರ ಸಂಘ ನಿಷ್ಟೆ ಮತ್ತು ಅದರಿಂದ ಕೊಂಕಣಿಗರಿಗಾಗಿರುವ ಅನ್ಯಾಯದ ಬಗ್ಗೆ ಗುರು ಬಾಳಿಗರ ಪ್ರಬಂಧಕ್ಕೆ ನನ್ನ ಕೆಲವು ವ್ಯಾಖ್ಯಾನಗಳು.
ಬಾಳಿಗರ ಬರವಣಿಗೆಯ ರೀತಿ ಇಷ್ಟ ಆಯಿತು. ಅವರು ವಿಷಯವನ್ನು ಮಂಡಿಸುವ ರೀತಿಯಂತು ಸುಂದರ... ಇದನ್ನ ಇನ್ನೆಲ್ಲಾದರು ಹೇಳ್ತೆನೆ.. ವಿಷಯಕ್ಕೆ ಬರೋಣ.  ಮುಂದೆ ಓದಿ »

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದರ ಭಾವಾರ್ಥವನ್ನು ತಿಳಿಸುವಂತೆ ಕೇಳಿಕೊಂಡರು.  ಮುಂದೆ ಓದಿ »

Syndicate content