ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಣ್ಣ ಕಥೆ

ಅಡ್ಡಬಂದವಳು

       ಆಕೆ ಇಂದು ಎರಡನೇ ಬಾರಿಗೆ ದಾರಿಗೆ ಅಡ್ಡಬಂದಳು. ಅಂದು ’ಅಂಕಲ್’ ಎಂದು ಸಂಬೋಧಿಸಿದ್ದಳು , "ಹೂವು ಬೇಕಾ?" ಎಂದು ಕೇಳಿದ್ದಳು, ನಡುಗುವ ಧ್ವನಿಯಲ್ಲಿ. ಅದುರುವ ಕೈ ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ನಿಂದ ಒಂದು ಮೊಳದಷ್ಟು ಕನಕಾಂಬರ ಹೂವಿನ ಮಾಲೆಯನ್ನು ಮೇಲಕ್ಕೆಳೆದಿತ್ತು. ನನ್ನ ನೊಡಿ ನಕ್ಕವು ಹೂಗಳು ಆಸೆಯಿಂದಲೋ? ಅಣಕಿಸಲೋ? ನಾನು ದೇವರಿಂದಲೂ ದೂರ, ಮುಡಿಯಿಂದಲೂ ದೂರ. ನನಗೇಕೆ ಹೂಮಾಲೆ? "ಬೇಡಮ್ಮಾ" ಎಂದೆ, ನಿಲ್ಲದೇ ಮುಂದೆ ನಡೆದೆ. ಆಕೆ ಅದುರುವ ಕೈಗಳಿಂದ ಒಂದು ಮೊಳ ಮೇಲಕ್ಕೆಳೆದಿದ್ದ ಹೂಮಾಲೆಯನ್ನು ಪುನಃ ಪ್ಲಾಸ್ಟಿಕ್ಕಿನೊಳಗೆ ಸೇರಿಸಿದಳು, ನಡೆದಳು, ಮುಂದಿನ ಗಿರಾಕಿಯನ್ನು ಹುಡುಕುತ್ತ.
       ಆಕೆ ನಿಜವಾಗಿಯೂ ಹೂವಾಡಗಿತ್ತಿಯೇ? ಕೈಯಲ್ಲಿ ಹಿಡಿದಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ನಲ್ಲಿ ಅಬ್ಬಬ್ಬಾ ಎಂದರೆ ಎರಡು..ಎರಡೂವರೆ ಮಾರು ಉದ್ದದ ಕನಕಾಂಬರ ಹೂವಿನ ಮಾಲೆ ಇರಬಹುದು ಅಷ್ಟೆ. ಅದನ್ನು ಮಾರಿ ಬಂದ ಹಣ ಒಂದು ಪ್ಲೇಟ್ ಇಡ್ಲಿಗೂ ಸಾಲುವುದಿಲ್ಲ.  ಮುಂದೆ ಓದಿ »

ಹೆಸರಿಲ್ಲದವಳು ; ಅವನ ಉಸಿರಾದವಳು.

ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತೋಯಿಸಿತ್ತು. ಮಂಗಳ ಮಂತ್ರಗಳೂ ಮೊಳಗಿತ್ತು. ಮಧುರ ಮನಸೆರಡು ಒಂದಾಗಿತ್ತು. ಅವನ ಮದುವೆ ಸುದ್ದಿಯಿಲ್ಲದೆ ನಡೆದು ಹೋಗಿತ್ತು. ಹುಣ್ಣಿಮೆಯ ಇರುಳಂತೆ ಕಳೆದುಹೋಗಿತ್ತು, ವಾಸ್ತವವೂ ಮರೆತಿತ್ತು.

ಮರೆತ ನೆನಪು ದಿಬ್ಬಣ ಹೊರಟಿತು, ಸಿಂಗಾರವಿಲ್ಲದ ಮದುವಣಗಿತ್ತಿಯೊಂದಿಗೆ. ನೆನಪೊಂದೇ ಅಲ್ಲಿ ಅವಳ ಜೊತೆ. ನೂರೊಂದು ಕನಸ ಬಂಡಿ ಏರಿದವಳು ಏಕಾಂಗಿಯಾಗಿ ಉಳಿದು ಹೋದಳು. ಸಿಹಿ ತಿಳಿಯುವ ಮೊದಲೇ ಕಹಿ ಉಂಡಿದ್ದಳು ಅವಳು.  ಮುಂದೆ ಓದಿ »

ಅಮಾವಾಸ್ಯೆಯ ಒಂದು ರಾತ್ರಿ !

ೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ.
ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.
ಹೀಗೆ ಒಂದು ಅಮಾವಾಸ್ಯೆ ರಾತ್ರಿ ಪರ ಊರಿನಲ್ಲೇನೋ ಕೆಲಸ ಮುಗಿಸಿಕೊಂಡು ತನ್ನೂರಿಗೆ ವಾಪಸ್ಸು ಬರುತ್ತಿದ್ದ ಸೋಮ. ಬಹಳ ತಡವಾಗಿತ್ತು. ಗ್ರಹಚಾರಕ್ಕೆ, ಮಾರ್ಗ ಮಧ್ಯದಲ್ಲಿ ಗಾಡಿ ಸುಮ್ಮನೆ ಹಾಗೇ ಕೆಟ್ಟು ನಿಂತಿತು. ಮೊನ್ನೆ ತಾನೇ ರಿಪೇರಿಯಾಗಿ ಬಂದಿದೆ. ಟ್ಯಾಂಕಿನಲ್ಲಿ ಎಣ್ಣೆ ಇದ್ದರೂ ಇದ್ಯಾಕೆ ಕೆಡ್ತು ಎಂದು ಯೋಚಿಸತೊಡಗಿದ ಸೋಮ. ಓಬೀರಾಯನ ಕಾಲದ ಈ ಗಾಡಿ ಬಿಟ್ಟು ಬೇರೆ ಗಾಡಿ ಕೊಳ್ಳಬೇಕು ಅನ್ನೋ ಯೋಚನೆ ಬಹಳ ದಿನದಿಂದ ಇದ್ದಿದ್ದು, ಈಗ ಬಲವಾಯ್ತು.
ಪಟ್ಟಣದ ಹಾದಿಯ ರೋಡಿನಲ್ಲಿ ಹೀಗಾಗಿದ್ದಿದ್ದರೆ ಬರುವ ಯಾವುದಾದರೂ ಗಾಡಿಯವರನ್ನು ಬೇಡಿ ಹೇಗೋ ಮನೆ ಸೇರಿಕೊಳ್ಳಬಹುದಿತ್ತು. ಇದೋ ಎರಡು ಊರಿನ ಮಧ್ಯೆಯ ಕಚ್ಚಾ ರಸ್ತೆ. ಗಾಡಿ ನೂಕಿಕೊಂಡೇ ಸ್ವಲ್ಪ ದೂರ ಹೋದ ಸೋಮ. ಆ ಕಡೆ ಸ್ವಲ್ಪ ದೂರದಲ್ಲೊಂದು ಕಾರು !! ಬೆಳಿಗ್ಗೆ ನರಿ ಮುಖ ನೋಡಿರಬೇಕು ನಾನು ಎಂದುಕೊಳ್ಳುತ್ತ ಸ್ವಲ್ಪ ಹತ್ತಿರ ಹೋದರೆ ಅದು ಜಮೀನ್ದಾರರ ಕಾರು ಎಂದು ಅರಿವಾಯ್ತು. 
ಅದೂ ಸರಿಯೇ ಅನ್ನಿ. ಇಂತಹ ಕಾರು ಅವರ ಬಳಿ ಅಲ್ಲದೇ ಇನ್ಯಾರ ಬಳಿ ಇರುತ್ತೆ ಈ ಊರಿನಲ್ಲಿ? ಈ ಕೆಟ್ಟಿರೋ ಗಾಡಿ ಇಲ್ಲೇ ಹಾಕಿ ಅವರೊಂದಿಗೇ ಮನೆಗೆ ಹೋದರಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಥಟ್ಟನೆ ಮನಕೆ ಬಂದ ಆಲೋಚನೆ ಅವನನ್ನು ಅಲ್ಲೇ ನಿಲ್ಲುವಂತೆ ಮಾಡಿತು.
ದಿನವೂ ಒಂಬತ್ತಕ್ಕೆಲ್ಲ ಮಲಗೋ ಧಣಿ, ನಮ್ ಜಾಮೀನ್ದಾರರಿಗೆ ಎರಡು ಊರಿನ ಮಧ್ಯೆಯ ಈ ರಸ್ತೆಯಲ್ಲಿ ಅದೂ ಈ ಸರಿರಾತ್ರಿಯಲ್ಲೇನು ಕೆಲಸ ???
ತನ್ನ ಗಾಡಿಯನ್ನು ಅಲ್ಲೇ ಪೊದೆಯಲ್ಲಿ ತೂರಿಸಿ ಮೆಲ್ಲಗೆ ಕಾರಿನ ಬಳಿ ನೆಡೆದ ಸೋಮ. ಆಕಡೆ ಈ ಕಡೆ ನೋಡಿ ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡು ಕಾರಿನ ಕಿಟಕಿಯಲ್ಲಿ ಬಗ್ಗಿ ನೋಡಿದ. ಮೊದಲೇ ಕತ್ತಲು, ಏನು ಕಂಡೀತು? ತಾನು ’ಇರಲಿ’ ಎಂದು ತಂದಿದ್ದ ಸಣ್ಣ ಟಾರ್ಚಿನ ಬೆಳಕಿನಲ್ಲಿ ನೋಡಿದಾಗ ಕಂಡ ದೃಶ್ಯ ಅವನನ್ನು ಬೆಚ್ಚಿ ಬೀಳಿಸಿತು. ಸೀಟಿನ ಮೇಲೆ ಸಿಗರೇಟಿನ ಪ್ಯಾಕೆಟ್ !!
ಯಜಮಾನರು ಸಿಗರೇಟ್ ಸೇದೋದನ್ನ ನಾನೆಂದೂ ಕಂಡಿಲ್ಲ ! ಇದೇನು ಹೊಸ ಅವತಾರ? ಅಥವಾ ಅವರ ಕಾರನ್ನು ಆ ಕೆಂಪು ಕಣ್ಣಿನ ಡ್ರೈವರ್ ಏನಾದ್ರೂ ತಂದಿದ್ದಾನಾ? ಕಾರಿನಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಕಾರಿನ ಇನ್ನೊಂದು ಬದಿ ಬಂದು ನೋಡಿದಾಗ ಸಣ್ಣ ಕಾಲುದಾರಿ ಗೋಚರಿಸಿತು. ಕಾರನ್ನು ಇಲ್ಲಿ ನಿಲ್ಲಿಸಿ ಈ ಕಡೆ ನೆಡೆದುಕೊಂಡು ಹೋಗಿರಬಹುದು ಎಂದು ಅನ್ನಿಸಿ, ಅದೇ ದಾರಿಯಲ್ಲಿ ತಾನೂ ನೆಡೆದ ಸೋಮ. 
ಶಬ್ದ ಬರದಂತೆ ಹೆಜ್ಜೆ ಹಾಕುತ್ತ ಸ್ವಲ್ಪ ದೂರ ನೆಡೆದಂತೆ ಯಾರೋ ಇಬ್ಬರು ಮಾತನಾಡುತ್ತ ನಿಂತಿದ್ದಂತೆ ಕಂಡಿತು. ಗಕ್ಕನೆ ಹಾಗೇ ಮರಕ್ಕೆ ಒರಗಿ ನಿಂತ. ಮರದ ಮೇಲೆ ಸದ್ದಾಯ್ತು. ಕಾಲ ಕೆಳಗಿನ ಎಲೆ ಕೂಡ ಸದ್ದಾಯಿತು. ಆ ಇಬ್ಬರೂ ತಿರುಗಿ ನೋಡಿದರು. ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದವರು ಏನೂ ಇಲ್ಲ ಎನ್ನಿಸಿತೋ ಏನೋ ಇಬ್ಬರೂ ಹೊರಟರು. ಸ್ವಲ್ಪ ದೂರ ಹೋಗುತ್ತಲೇ ಸೋಮನೂ ಅವರನ್ನು ಹಿಂಬಾಲಿಸಿದ. 
ಮುಂದೆ ಹೋಗುತ್ತಿದ್ದ ಇಬ್ಬರು, ಒಂದು ಪಾಳು ಬಿದ್ದ ಮನೆಯ ಮುಂದೆ ನಿಂತರು. ’ಭೂತ ಬಂಗಲೆ’ ಅದೂ ಇದೂ ಅಂತೆಲ್ಲ ಈ ಮನೆಯ ಬಗ್ಗೆ ಜನರು ಆಡಿಕೊಳ್ಳುತ್ತಿದರೂ ಸೋಮ ಅದನ್ನು ನಂಬಿರಲಿಲ್ಲ. ಮೊದಲೇ ಭೂತ-ಪ್ರೇತಗಳ ಬಗ್ಗೆ ಅವನಿಗೆ ನಂಬಿಕೆ ಇಲ್ಲ. ತನ್ನ ನಂಬಿಕೆ ಈಗ ನಿಜ ಅನ್ನಿಸಿತು ಸೋಮನಿಗೆ. ಭೂತದ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಮೋಸ ಇರಬೇಕು. ವಿಷಯ ತಿಳಿದುಕೊಂಡು ಜಮೀನ್ದಾರರಿಗೆ ನಾಳೇನೇ ಒಪ್ಪಿಸಬೇಕು.
ಆ ಇಬ್ಬರು, ಭೂತ ಬಂಗಲೆಯ ಬಾಗಿಲು ತೆರೆದುಕೊಂಡು ಹೋದರು. ಹಿಂದೆಯೇ ಬಾಗಿಲೂ ಮುಚ್ಚಿಕೊಂಡಿತು. ಸೋಮ ಸ್ವಲ್ಪ ಹೊತ್ತು ತಡೆದು ತಾನೂ ಆ ಮನೆಯ ಕಡೆ ನೆಡೆದ. ಬಾಗಿಲ ಬಳಿ ಬಂದು ನಿಂತ. ಮೆಲ್ಲಗೆ ಬಾಗಿಲು ನೂಕಿದ ! ಚಿಲುಕ ಹಾಕಿರಲಿಲ್ಲ !! ಕಿರ್ ಎಂದು ಬಾಗಿಲು ತೆರೆದುಕೊಂಡಿತು. ಥತ್! ಕೆಲಸ ಕೆಟ್ಟಿತು ... ಶಬ್ದ ಆಗಬಾರದು ಅಂದುಕೊಂಡ್ರೆ ಎಂದು ಮನದಲ್ಲಿ ಬೈದುಕೊಳ್ಳುತ್ತಲೇ, ಅಡಿ ಇರಿಸಿದ ... ಒಳಗೋ ಗಮಟು ವಾಸನೆ. 
ಹಾಗೇ ಒಳ ನೆಡೆದ. ಎರಡು ಹೆಜ್ಜೆ ಇಡುತ್ತಿದ್ದಂತೆಯೇ ಬಾಗಿಲು ಮುಚ್ಚಿಕೊಂಡಿತು. ಮೊದಲ ಬಾರಿಗೆ ಭೀತನಾದ ಸೋಮ. ಟಾರ್ಚ್ ತೆಗೆಯಲು ಜೇಬಿಗೆ ಕೈ ಹಾಕಿದ. ಖಾಲೀ !!!!! ಈಗ ತಾನೇ ಕಾರಿನ ಬಳಿ ಉಪಯೋಗಿಸಿದ್ದೆನಲ್ಲ? ಎಲ್ಲಿ ಹೋಯ್ತು ?? 
ಎಲ್ಲೆಲ್ಲೂ ಕತ್ತಲು. ಒಳಗೆ ಹೋಗಲೋ? ಹೊರಗೆ ಓಡಿಬಿಡಲೋ? ಮನಸ್ಸು ಹೊಯ್ದಾಟದಲ್ಲಿರುವಾಗಲೇ ದನಿಯೊಂದು ಮೂಡಿಬಂತು "ನಿನ್ನ ಟಾರ್ಚ್ ಸಿಗಲಿಲ್ವಾ ಸೋಮಾ?". ಅರ್ರೇ ! ಜಮೀನ್ದಾರರ ದನಿ !! "ಆಗ್ಲಿಂದಾನೂ ಇವನೇ ಧಣಿ ನಮ್ ಹಿಂದೆ ಬರ್ತಿದ್ದೋನು" ಅನ್ನೋ ಮತ್ತೊಂದು ದನಿ. ಓ! ಇದು ಆ ಕೆಂಪು ಕಣ್ಣಿನ ಡ್ರೈವರ್ ದನಿ. 
ಹೃದಯವೇ ಬಾಯಿಗೆ ಬಂದ ಹಾಗೆ ಆಯ್ತು ಸೋಮನಿಗೆ. ಹರ ಕೊಲ್ಲಲ್ ಪರ ಕಾಯ್ವನೇ? ಏನೋ ಹೇಳಲು ಬಾಯಿ ತೆರೆದ. ಆಗ ...
---
"ಓ! ಏನ್ರಮ್ಮಾ? ಎಲ್ಲರದೂ ಊಟ ಆಯ್ತಾ? ಹೋಗ್ರೋ ಮಾಕ್ಳಾ ... ಈಗ ಎಲ್ರೂ ಮನೆಗೆ ಹೋಗಿ ಮಲಗಿಕೊಳ್ಳಿ ... ಕಥೆ ನಾಳೆ ಹೇಳ್ತೀನಿ"
ಮೂಲೆ ಮನೆ ರಿಟೈರ್ಡ್ ಶಾಲಾ ಮೇಷ್ಟ್ರು ಇಷ್ಟು ಹೊತ್ತೂ ಹೇಳ್ತಿದ್ದ ಕಥೆಯನ್ನ ಬಾಯಿ ಬಿಟ್ಟುಕೊಂಡು ಕೇಳ್ತಿದ್ರು ಮಕ್ಕಳು. ಅವರಿಗೇ ಅರಿವಿಲ್ಲದಂತೆ ಅವರ ಅಮ್ಮಂದಿರು ಇಡುತ್ತಿದ್ದ ಅನ್ನದ ತುತ್ತುಗಳನ್ನು ಒಂದರ ಮೇಲೊಂದರಂತೆ ಸ್ವಹಾ ಮಾಡುತ್ತಿದ್ದರು. 
ಏನೂ ರಗಳೆ ಇಲ್ಲದೆ ಮಕ್ಕಳ ಊಟ ಆಯ್ತು ಅನ್ನೋ ಸಮಾಧಾನ ಅಮ್ಮಂದಿರಿಗೆ. ಸಂಜೆ ಹೊತ್ತು ಸ್ವಲ್ಪ ಟೈಮ್ ಪಾಸ್ ಮೇಷ್ಟ್ರಿಗೆ. ಆದರೆ ಮೇಷ್ಟರ ಪತ್ನಿ ಮಾತ್ರ "ಮಕ್ಕಳಿಗೆ ರಾಮಾಯಣವೋ ಮಹಾಭಾರತವೋ ಹೇಳೋದು ಬಿಟ್ಟು ಇಂಥಾ ಕಥೆಗಳನ್ನೇ ಹೇಳೋದೂ? ಅದೂ ಯಾವಾಗಲೂ ಇದೇ ಅರ್ಧ ಕಥೆ? ಮಕ್ಕಳು ಹೆದರಿಕೊಂಡು ಬಟ್ಟೆ ಒದ್ದೆ ಮಾಡಿಕೊಳ್ಳೋಲ್ವೇ ?" ಅಂತ ಮೂದಲಿಸಿದರು. "ಹಂಗಾದ್ರೂ ಹಾಸಿಗೆಯ ಬಟ್ಟೆ ಒಗೀತಾರೆ ಬಿಡು ಈ ಅಮ್ಮಣ್ಣೀರು. ಕಥೆ ಪೂರ್ತಿ ಹೇಳೋಕೆ ಮುಂದೆ ಎನಾಗುತ್ತೆ ಅಂತ ನನಗೇನು ಗೊತ್ತು? " ಅಂತ ಬೊಚ್ಚು ಬಾಯಿ ಬಿಟ್ಕೊಂಡು ನಗುತ್ತ ಒಳ ನೆಡೆದರು ಮೇಷ್ಟ್ರು.

ಜಮೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ.

ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.  ಮುಂದೆ ಓದಿ »

ಸುರಿವ ಸೋನೆಯಲ್ಲಿ

ಸಂಭ್ರಮದ ಗಳಿಗೆಗಳನ್ನ ಯಾರೂ ಮರೆಯಲು ಇಚ್ಛಿಸುತ್ತಾರೆ ಹೇಳಿ ಕನಸಲ್ಲೂ ಯಾರೂ ಅದನ್ನ ಅಗಲಲು ಇಚ್ಛಿಸೊಲ್ಲ, ಈ ಕ್ಷಣ ಬದುಕಲ್ಲಿ ಹೀಗೆ ಯಾಕೆ ಉಳಿಯಬಾರದು, ಜಗತ್ತು ಈ ಕ್ಷಣಕ್ಕೆ ಹೀಗೆ ಸ್ಥಗಿತವಾಗ ಬಾರದೇಕೆ,ಸುರಿವ ಮಳೆ , ಬೀಸೋ ಗಾಳಿ, ಎಲ್ಲಾ ನನಗಾಗಿ ಒಮ್ಮೆ ಹಾಗೆ ಏಕೆ ನಿಲ್ಲ ಬಾರದು ! ಈ ಕ್ಷಣಕ್ಕೆ ನನ್ನ ಈ ಬದುಕು ಇಲ್ಲಿಗೆ ಕೊನೆಯಾದರೂ ಅಡ್ಡಿ ಇಲ್ಲ, ಜಗತ್ತಿನ ಎಲ್ಲಾ ಸಂತೋಷ ಇಂದು ನನ್ನ ಮಡಿಲಲ್ಲೇ ಇದೆ ಎಂಬ ಆ ಒಂದು ಸಂಭ್ರಮದ ಕ್ಷಣವನ್ನು ಎಲ್ಲರೂ ಅನುಭವಿಸಿರುತ್ತಾರೆ, ಬದುಕಿನ ಅಂತಹ ಒಂದು ಸಂಭ್ರಮವನ್ನು ಕೊಡುವ ಶಕ್ತಿ ಬದುಕಿನ ಜೀವನೋತ್ಸಾಹವನ್ನು ಇಮ್ಮಡಿಗೊಳಿಸುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ ಅಂತಹ ಒಂದು ಷ್ಷಣ ನಿಮಗಾಗಿ,

*********  ಮುಂದೆ ಓದಿ »

ಚಿನಕುರುಳಿ

೧) ಏನೋ ಸುಮಂತಾ ಸಿಗರೇಟ್ ಎಳೀತೀಯೇನೋ ಎಂದು ಅಪ್ಪ ಕೇಳಿದಾಗ "ಅಪ್ಪಾ ಇದೇನು ಆಫರೊ ?? ಎನ್ ಕ್ವಾಯರಿನೊ?? ಎಂದು ಪ್ರಶ್ನಿಸಿದೆ .

೨) "ಇಂಗು ತೆಂಗು ಇದ್ದರೆ ನಮ್ಮ ಶಾಂತಿ ಕೂಡ ಅಡುಗೆ ಮಾಡುತ್ತಾಳೆ" ಎಂದು ಹೇಳಿದಾಗ "ರೀ ನಾಲ್ಕು ಜನರ ಮುಂದೆ ನನ್ನನ್ನು ಹೊಗಳಬೇಡ್ರಿ" ಎಂದು ನನ್ನ ಶಾಂತಿ ನಾಚಿ ನೀರಾದಳು.

೩)ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ "ಅನಕ್ಷರಸ್ಥರೇ ಗಮನಿಸಿ"  ಎಂದು ಅನಕ್ಷರತೆಯ ದುಷ್ಪರಿಣಾಮಗಳ ಬಗ್ಗೆ ಬರೆದ ಬ್ಯಾನರ್ ಗಳನ್ನು ತೂಗು ಹಾಕಿದರು.

೪) ಚಿನ್ನದ ಪದಕ ಪಡೆದು ಮೆರಿಟ್ ನಲ್ಲಿ ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡ ಗ್ರಾಜುಯೇಟ್ ಗಣೇಶನು ಕ್ಯಾಶ್ ನಲ್ಲಿ ಹತ್ತು ರುಪಾಯಿಯ ವ್ಯತ್ಯಾಸ ಕಂಡು ಬಂದಾಗ ಮೊದಲು ನೂರರ ಕಂತೆ ಎಣಿಸಲು ಶುರು ಮಾಡಿದನು.

೫) ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಯನ್ನು ನೋಡಿ ಸಿಟ್ಟುಗೊಂಡ ತರಗತಿ ಅಧ್ಯಾಪಕರು "ಸಭ್ಯರೊಂದಿಗಿರಲು ನಾಲಾಯಕ್ ನೀನು ಹೋಗು ಹೆಡ್ ಮಾಸ್ಟರ ಬಳಿಗೆ " ಎಂದು ಗುಡುಗಿದರು.
 ಮುಂದೆ ಓದಿ »

ಮಕರ ಸ೦ಕ್ರಮಣ

ದಿಕ್ಕು-ದೆಸೆ ಇಲ್ಲದವರ೦ತೆ ಕೂರಿರಲು, ಪ್ರಪ೦ಚಕ್ಕೇಕೆ ? ನಮಗೇ ಉಪಯೋಗವಾಗದ೦ತಹ ಯಾವುದೇ ನಿರ್ಧಾರಕ್ಕೆ ಬರದೆ ಗ೦ಟೆಗಳು ನಿಮಿಷದಲ್ಲಿ ಕಳೆದವು. ಪ್ರಪ೦ಚದಲ್ಲಿನ ಜೀವ-ಸ೦ಕುಲದಲ್ಲಿ ಮಾನವನ ಚಿ೦ತನ ಲಹರಿಗೆ ಬೆರಗಾದೆವು. ಹೊಳೆಯ ದ೦ಡೆಯ ಮೇಲೆ ನಾಲ್ಕಾರು ಅರೆ-ಬರೆ ಬುದ್ದಿವ೦ತರಾದ ನಾವು ಊರಲ್ಲಿನ ನಿಗೂಢ ರಹಸ್ಯಗಳ ಬಗ್ಗೆ ಗುಸು ಗುಸು ಆರ೦ಭಿಸಿದ್ದೆವು. ದೇಶ, ರಾಜ್ಯದಲ್ಲಿನ ಭ್ರಷ್ಟಚಾರವನ್ನೋ; ಕಲುಷಿತ ಸಮಾಜವನ್ನೋ; ಇನ್ನು ಎನೇನೊ ಕಿತ್ತೊಗೆಯಲು ಗೆಳೆಯರ ಬಳಗ ತಲ್ಲಿನವಾಗಿದ್ದುದು ಹೊಳೆಯ ದಡಕ್ಕಷ್ಟೇ ಸೀಮಿತವಾಗಿತ್ತು. ಕೇವಲ ಊರನ್ನೆ ಬದಲಾಯಿಸದ ನಾವು ಸಮಾಜವನ್ನೆ ಬದಲಾಯಿಸಲು ಸಾದ್ಯವಿಲ್ಲದ ಮಾತು ಎ೦ದು ಅರಿತು ಬೀಡಿಯ ಹೊಗೆಗೆ ತಣ್ಣಗೆ ಶರಣಾದೆವು. ನಮ್ಮ೦ತೆ ದೇಶಕ್ಕಾಗಿಯೂ, ಊರಿಗಾಗಿ ಚಿ೦ತಿಸುವರು ಯಾರು ಇರಲಾರರು ಎ೦ದು ಕೊ೦ಡಿದ್ದೆವು ಕೂಡ.  ಮುಂದೆ ಓದಿ »

ಉಣ್ಣಿ ಕಥಾ

ಕಥಾ ಹಿನ್ನೆಲೆ: “ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಪಾಶ್ಚಿಮಾತ್ಯರಿಂದ ಪೂರ್ವಾತ್ಯರ ಮೇಲೆ ಹಿಡಿತ ಸಾಧಿಸುವದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.

ಇಲ್ಲಿ ಎರಡು ವಿಶೇಷತೆಗಳಿವೆ. ಸಾಮಾನ್ಯವಾಗಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳಿದರೆ ಇಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುತ್ತಿದ್ದಾನೆ. ಎರಡನೆಯದಾಗಿ ಕಥೆಯಲ್ಲಿ ಸಿನಿಮಾಅಟೋಗ್ರಾಫಿಕ್ ಶೈಲಿಯಿದೆ. ಅಂದರೆ ಕಥೆಯನ್ನು ಹೇಳುವಾಗ ಪಾತ್ರಗಳು ಹಾಗೂ ಚಿತ್ರಣಗಳು ಗೋಡೆಯ ಮೇಲೆ ಮೂಡುತ್ತವೆ. ಅಲ್ಲದೇ ಕಥೆಯಲ್ಲಿ ಅಲ್ಲಲ್ಲಿ ಪಶ್ಚಿಮದ ದಾಳಿಯನ್ನು ಸಂಕೇತಗಳ ಮೂಲಕ ಹೇಳಲಾಗಿದೆ. ಅದನ್ನು ಓದುಗರು ಗುರುತಿಸಬಹುದು.

ಕಥೆಯ ಕೊನೆಯಲ್ಲಿ ಮುಠಾಶಿ ಕಥೆಯನ್ನು ಕೇಳುತ್ತಾ ಕೇಳುತ್ತಾ ನಿದ್ರೆ ಹೋಗುತ್ತಾಳೆ. ಆದರೆ ನಾವು ಓದುಗರು ಎಚ್ಚೆತ್ತುಕೊಳ್ಳುತ್ತೇವೆ. ಅಂದರೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

“ಉಣ್ಣಿ, ಉಣ್ಣಿ ನಂಗೊಂದು ಕಥೆ ಹೇಳು ಬಾರೋ” ಮುಠಾಶಿ ಕರೆದಳು.  ಮುಂದೆ ಓದಿ »

ವೃತ್ತಿ ಜೀವನದಲ್ಲಿ ಒಂದು ದಿನ ...

 

ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ. ಕೆಲಸ ಮುಗಿಸಿ ಮಲಗಿದಾಗ ಘಂಟೆ ಎರಡಾಗಿತ್ತು. ಅವನ ಕೆಲಸವೇ ಹಾಗೆ. ಹಗಲಿಗಿಂತ ರಾತ್ರಿ ನೆಡೆವ ಹಲವಾರು ಸುಪ್ತ ಕಾರ್ಯಾಚರಣೆಗಳಿಂದಾಗಿ ಯಾವ ವೇಳೆಯಲ್ಲೂ ಸಂದೇಶಗಳು ಬರಬಹುದು. blackberry ಹೊತ್ತು ತರುವ ಸಂದೇಶ ಸಂಕ್ಷಿಪ್ತವಾದರೂ ಸರಿ ರಾತ್ರಿಯಲ್ಲೂ ಅದನ್ನು ಅರ್ಥೈಸಿಕೊಂಡು ಮುಂದಿನ ಹೆಜ್ಜೆಯ ಬಗ್ಗೆ ತಕ್ಷಣವೇ ಕಾರ್ಯತತ್ಪರನಾಗಬೇಕಾದ ಸಂದರ್ಭ ಸರ್ವೇಸಾಮಾನ್ಯ. 

 

ಸುಪ್ತ ಮನಸ್ಸು ಎಂದಿಗೋ blackberry ಜೊತೆ ಮಿಲನವಾಗಿ ಹೋಗಿದೆ.

 

ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ಸಿದ್ದನಾಗಿ, ಹೊರಡುವ ಮುನ್ನ ವೃತ್ತಿ ಜೀವನಕ್ಕೆ ಸಂಚಕಾರ ತರುವಂಥಾದ್ದೇನೂ ಮರೆತಿಲ್ಲವೆಂದು ಖಾತ್ರಿಪಡಿಸಿಕೊಂಡು ಮನೆಯಿಂದ ಹೊರಬಿದ್ದ. ಕಾರನ್ನು ಸ್ಟಾರ್ಟ್ ಮಾಡಿ ಹೊರಟು, ಇನ್ನೂ ಎರಡು ನಿಮಿಷವೂ ಆಗಿರಲಿಲ್ಲ, blackberry ಸೂಚನೆ ಕೊಟ್ಟಿತು. 

   ಮುಂದೆ ಓದಿ »

ಶಿಕಾರಿಯ ದಿನಗಳು-೨

ತೋಪಿನಲ್ಲಿ ಸ್ವಲ್ಪ ದೊಡ್ಡದು ಅನಿಸುವ ಅರಳಿಮರದ ಬುಡದಲ್ಲಿ ಬೇವಿನ ಮರ ಮನೆ ಮಾಡಿದ್ದುದು ಎ೦ತ ಸೋಜಿಗ; ಬೇವಿನ ಮರ ತಮ್ಮನ೦ತೆ ಅರಳಿಮರವನ್ನು ಬಿಗಿದಪ್ಪಲು ಯತ್ನಿಸಿ ಯಶಸ್ವಿಯಾಗಿತ್ತು. ಅದೋ ಆ ಮೂಲೆಯಲ್ಲಿರುವ ಹತ್ತಿ ಮರಕ್ಕೆ ಬಾವಲಿಗಳು ತೂಗಿ ನೇತಾಡುತ್ತಿದ್ದವು; ಹಾಗೆ ಒ೦ದೊಕ್ಕೊ೦ದು ಪ್ರೀತಿಸುತ್ತ, ಕಿಚ್ ಕಿಚ್ ಅ೦ತ ಚೀರುತ್ತ ಜಗಳವಾಡುತ್ತಿದ್ದವು; ಆ ಕಾರ್ಯಕ್ಕೆ ಅವುಗಳ ರಬ್ಬರಿನ೦ತ ರೆಕ್ಕೆಗಳು ಕೊ೦ಚ ತೂತಾಗಿದ್ದವು. ಇದೆನ್ನೆಲ್ಲ ಗಮನಿಸುತ್ತಿದ್ದ ನಾವು ಬ್ಯಾಟರಿಯ ಬೆಳಕನ್ನು ಬಾವಲಿಗಳ ಮೇಲೆ ಹರಿಸಲು, ಅವುಗಳ ಕಣ್ಣು ಹೊಳೆಯುತ್ತಿರುವ೦ತೆಯೇ, ಹತ್ತು ಹದಿನೈದು ಬಾವಲಿಗಳ ಗು೦ಪೊ೦ದು ಒ೦ದೇ ಬಾರಿಗೆ ಮರವನ್ನು ಬಿಟ್ಟು ಹಾರಿದವು, ಕೆಲವು ನಿದ್ರಿಸಿರುವ೦ತೆ ತೋರುತ್ತಿದ್ದವು. ಕಾಡು ಕೆ೦ಬೂತ ಪಕ್ಷಿಗಳ ಗುಟುರ್...ಘುಟುರ್.. ಶಬುದ ಹೆಚ್ಚಾಗಿಯೂ; ಒಮ್ಮೆ ನಿಶಬ್ದವಾಗಿಯೂ ನಡೆಯುತ್ತಿತ್ತು. ಇ೦ತ ಸನ್ನಿವೇಶದಲ್ಲಿ ನಮ್ಮ ಕಾಲುನಡುಗೆಯ... ಪರ್ .ಪರ್ ..ಸವು೦ಡು ಬೇರೆ ಮಾರ್ಧನಿಸುತ್ತಿತ್ತು.  ಮುಂದೆ ಓದಿ »

ವಿಷಾತಿ ಮಳೆ

ಅದು ಮಳೆಗಾಲದ ಅ೦ತ್ಯವಿರಬೇಕು. ವಿಷಾತಿ ಮಳೆಯ ತು೦ತುರಿಗೆ ಕಾದು ಕಾರ್ಮುಗಿಲು ಆವರಿಸಿ ಊರು ಮೌನವಾಗಿತ್ತು. ಎಲ್ಲೆಲ್ಲು ಹಸಿರು ಹೊದಿಕೆಯಿ೦ದಾಗಿ ಹೊಲ ಗದ್ದೆಗಳು ತು೦ಬಿದ್ದ ಕಾಲವದು. ಊರಿನ ಜನರು ತಮ್ಮ ತಮ್ಮ ಮನೆಗಳಲ್ಲಿ ಸ೦ಜೆಯ ಸುಳಿಗೆ ಸಿಲುಕಿ, ಕರುನಾಡೆoಬೊ ನಾಡಿಗೆ ಸವಾಲಾಗಿ ಕಾಲವನ್ನು ನೂಕುತ್ತಿದ್ದರು. ಕೆಲವರು ಟೀ ಅ೦ಗಡಿಯಲ್ಲಿ ಕಾಲಹರಣ ಮಾಡುತ್ತ; ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿ; ಪಾರ್ಲಿಮೆ೦ಟಿನಿ೦ದ ರಾಜ್ಯದ ಕಡೆಗೆ ತಿರುಗಿ; ನಕಶಿಖಾ೦ತ ಉರಿದು ಊರಿನ ರಾಜಕೀಯಕ್ಕೆ ಮರಳಿ; ಟೀ ಎ೦ಬ ಪಾನಿಯದೊಳಗೆ ಲೀನವಾಗುತ್ತಿತ್ತು. ಯಾರದೋ ಮನೆಯಲ್ಲಿ ಬೊ೦ಡ ಕರಿಯುವ ಸುವಾಸನೆಯಿ೦ದ, ಕೆಲವುರು ಯಾರ ಮನೆಯಲ್ಲಿ ಇರಬಹುದು ಎ೦ದು ಊಹೆ ಮಾಡಲು; ಅದು ಪಟೇಲರ ಮನೆಯದ್ದೆ ಇರಬೇಕು ಎ೦ದುಕೊ೦ಡರು. ಆ ವಾಸನೆ ಕೆಳಗಲ ಕೇರಿಯಿ೦ದ ಮೊದಲ್ಗೊ೦ಡು, ಮಾರಿಗುಡಿ ದಾಟಿ, ಸ೦ದಿ-ಗೊ೦ದಿಗಳಲ್ಲಿ ನುಗ್ಗಿ ಇಡಿ ಊರನ್ನೆ ಅಲ್ಲಾಡಿಸಿತು. ಎಲ್ಲರೂ ತಮ್ಮ ಮನೆಯಲ್ಲೆ ಬೊ೦ಡ ಕರಿದ೦ತೆ ಭಾವಿಸಿರುವವರು.  ಮುಂದೆ ಓದಿ »

Syndicate content