ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಲಿತ ಪ್ರಬಂಧ, ಹಾಸ್ಯ

ಸಂ-ಸ ಸಂದರ್ಶನ

ಕನ್ನಡ ಸಾಹಿತಿ ಸಂಕ್ರಾಮಣ್ಣ ಅವರೊಡನೆ ಸವಿವಾಣಿ ಪತ್ರಿಕೆ ನಡೆಸಿದ ಸಂದರ್ಶನ:

ಸವಿವಾಣಿ: ಕನ್ನಡ ಸಾಹಿತ್ಯ ಎಂಬುದು ನಿಂತ ನೀರಾಗಿದೆಯೆ?

ಸಂಕ್ರಾಮಣ್ಣ: ಇಲ್ಲ. ಹರಿಯುತ್ತಿರುವ ಬೀರಾಗಿದೆ.

: ಎಲ್ಲಿಗೆ ಹರಿಯುತ್ತಿದೆ?

ಸಂ: ಜಠರಕ್ಕೆ.

: ಓಹ್! ನೀವೂ ಬೀರು?

ಸಂ: ಇಲ್ಲ. ನನ್ನ ಸಾಹಿತ್ಯ ಖೀರು.

: ’ಅದಕ್ಕೆ ಕಡ್ಡಿ ಗೀರು’ ಅನ್ನುತ್ತಿದ್ದಾರಲ್ಲ ಇಲ್ಲೊಬ್ಬರು?

ಸಂ: ಇಂಥ ಹೇಳಿಕೆಗಳು ನನಗೆ ಬೋರು. ಇವು ಕ್ಲೀಷೆಗಳು. ಇಂಥ ಕ್ಲೀಷಾತ್ಮಕ ಶ್ಲೇಷಾತ್ಮಕ ಶ್ವಪಚ ಹೇಳಿಕೆಗಳೇ ಇಂದು ಕನ್ನಡ ಸಾಹಿತ್ಯಲೋಕದ ಕುಠಾರಪ್ರಾಯ ಕಂಟಕಗಳು ಎಂಬುದು ನನ್ನ ಅಭಿಪ್ರಾಯ. ಇನ್ನೂ ಕ್ಲಿಷ್ಟ ಪದಗಳು ಬೇಕಾದರೆ ಗರಬೂರು ಚಾಮರಂದ್ರಪ್ಪ ಅವರ ಯಾವುದಾದರೂ ಲೇಖನವನ್ನು ಓದಿ ನಾಳೆ ನಿಮಗೆ ಹೇಳುತ್ತೇನೆ.
 ಮುಂದೆ ಓದಿ »

ನಮ್ಮ ಕಷ್ಟಾನೂ ಸ್ವಲ್ಪ ಅರ್ಥ ಮಾಡಿಕೊಳ್ರೀ !!

 ಅದೃಷ್ಟವಶಾತ್ ಬೆಳಿಗ್ಗೆ ಎದ್ದೆ ! 



ಸತ್ಯ ಕಣ್ರೀ. ನೆನ್ನೆ ಇದ್ದೋರು ಇವತ್ತಿಲ್ಲ. ಇವತ್ತಿರೋರು ನಾಳೆ ಇಲ್ಲ. ದುರಾದೃಷ್ಟವಶಾತ್ ಎಡ ಮಗ್ಗುಲಲ್ಲಿ ಎದ್ದೆ. ಅಲ್ಲ, ಬಲ ಮಗ್ಗುಲಲ್ಲಿ ಎದ್ದೇ ದಿನವೂ ಬಾಸ್ ಕೈಲಿ (ಬಾಯಲ್ಲಿ) ಉಗಿಸಿಕೊಳ್ಳೋದು ಗ್ಯಾರಂಟಿ.. ಹಾಗಿರಬೇಕಾದರೆ ಇನ್ನು ಎಡ ಮಗ್ಗುಲಲ್ಲಿ ಎದ್ರೆ ಏನು ಗತಿಯೋ ಏನೋ. 


ಇಲ್ಲ ಕಣ್ರೀ, ಹಂಗೆಲ್ಲ ಅಂದುಕೊಂಡ್ರೆ ಅಸ್ತು ದೇವತೆಗಳು ಅಸ್ತು ಅಂದುಬಿಡ್ತಾರಂತೆ ! ಇಲ್ಲ ಇಲ್ಲ, ಅವೆಲ್ಲ ಮೂಢನಂಬಿಕೆಗಳು !! ಛೇ! ಇಲ್ಲ, ಎಡ ಮಗ್ಗುಲಲ್ಲಿ ಎದ್ದದ್ದಕ್ಕೆ ಒಂದು ರೂಪಾಯಿ ತಪ್ಪು ಕಾಣಿಕೆ ಹಾಕಿಬಿಡ್ತೀನಿ, ಮೊದಲೇ  Performance Evaluation ಸಮಯ ... ಯಾಕ್ ಬೇಕು ರಿಸ್ಕೂ !!! 


ಮಂಚ ಮತ್ತು ಹಾಸಿಗೆ ಒಟ್ಟಿಗೆ ನುಡಿದವು "ಸದ್ಯ ದಡಿಯ ಎದ್ದ" ಅಂತ.  ಮುಂದೆ ಓದಿ »

ಪ್ರತಂಪು ಸಿಂಹ ಬರೆದಿದ್ದಾರೆ: ಮುಹ್ ಖೋಲ್ಕರ್ ನಕ್ಕುನೋಡಿ.... ಮಿಸ್ಟರ್ ಬುದ್ಧಿಜೀವಿ!

ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು' ಎಂಬ ಪದವನ್ನು ನಾನು ಬಳಸುವುದಿಲ್ಲ. ಅಂಕಣ ಬರಹ ವೈಯಕ್ತಿಕವಾಗಿರಬಾರದು ಹಾಗೂ ವ್ಯಕ್ತಿ ನಿಷ್ಟವಾಗಿರಬಾರದು ಎನ್ನುವುದು ನನ್ನ ನಂಬಿಕೆ.ವಸ್ತುನಿಷ್ಟವಾಗಿ ಬರೆಯುವುದರಿಂದಲೇ ನನ್ನ ಅಂಕಣ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿರುವುದು.  ಮುಂದೆ ಓದಿ »

ನಾಲ್ಕನೇ ವರ್ಗ

          ಮುಲ್ಲಾ ನಸ್ರುದ್ದೀನ್ ಎದೆಯವರೆಗೆ ಬರುವಷ್ಟು ಉದ್ದವಾದ ಗಡ್ಡ ಬೆಳೆಸಿದ್ದ. ತುರಿಕೆಯಾಗುತ್ತಿತ್ತು. ಆಗಾಗ ಕೆರೆದುಕೊಳ್ಳಬೇಕಾಗುತ್ತಿತ್ತು. ಅದನ್ನು ಗಮನಿಸಿದ ಸ್ನೇಹಿತನೊಬ್ಬ ಕೇಳಿದ. "ಮುಲ್ಲಾ ಉದ್ದ ಗಡ್ಡ ಬೆಳೆಸಿದ್ದೀಯಾ, ಕಿರಿಕಿರಿ ಅನ್ನುಸುವುದಿಲ್ಲವೇ?"

          "ಅಯ್ಯೋ ತುಂಬ ಕಿರಿಕಿರಿ, i hate it"

          "ಮತ್ತೆ ಯಾಕಿಟ್ಟುಕೊಂಡಿದ್ದೀಯಾ? why can't you get rid of it?"

          "my wife hates it too" ಮುಲ್ಲಾ ಉತ್ತರಿಸಿದ, ಶಾಂತನಾಗಿ !!  ಮುಂದೆ ಓದಿ »

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ

ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಬೆಲ್ಲ ತೂಗುತ್ತ ನಿದ್ದೆ ಮಾಡುವ ವಿದ್ಯಾರ್ಥಿಗಳ ಮೆದುಳು ಹೆಚ್ಚು ಗ್ರಹಿಸುತ್ತಿರುತ್ತದೆ.  ಮಂಡ್ಯದ ಸಂಶೋಧಕರು ನಡೆಸಿರುವ ಅಧ್ಯಯನ  ತೋರಿಸಿಕೊಟ್ಟ ಸಂಗತಿಯಿದು.  ಮುಂದೆ ಓದಿ »

ಹೆಸರಿಡೋರು...!

ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ ಹಲವಾರು ಲಕ್ಷಣಗಳನ್ನು ನಿರಂತರವಾಗಿ ಅಭ್ಯಸಿಸಿ ಒಂದು ಹೆಸರೂ ಅಂತ ಇಟ್ರು ಅಂದ್ರೆ ಮುಗಿತು! ಆ ಮನುಷ್ಯನ ಗತಿ ಅಧೋಗತಿ. ನಾವು ಹಾಸ್ಟೇಲಲ್ಲಿದ್ದಾಗ ನಮ್ಮ ಮಿತ್ರನೊಬ್ಬ ಹಾಗೆ ಹೆಸರಿಡೋದರಲ್ಲಿ ನಿಷ್ಣಾತನಾಗಿದ್ದ. ನಮ್ಮ ಸಹಪಾಠಿಯಾಗಿದ್ದ ನಾಗರಾಜ ಆಗಾಗ ನನ್ನ ರೂಮ್ ಗೆ ಭೇಟಿ ನೀಡುತ್ತಿದ್ದ. ಅವನದು ಸ್ವಲ್ಪ ನರಿಬುದ್ಧಿ. ಸರಿ ನಮ್ಮ ಹೆಸರಿಡೊ ಮಿತ್ರ ಅವನಿಗೆ ಒಂದ್ಯಾವುದೋ ಶುಭ ಮುಹುರ್ತದಲ್ಲಿ ನರಿ ಅಂತ ನಾಮಕರಣ ಮಾಡಿಯೆ ಬಿಟ್ಟ ನೋಡಿ! ಆಮೆಲೆ ಇದ್ದು ಬಿದ್ದವರೆಲ್ಲ ಅವನಿಗೆ ನರಿ ಅನ್ನೋದಕ್ಕೆ ಶುರು ಮಾಡಿದ್ರು. ಎಷ್ಟೋಸರ್ತಿ ಹಿಂಗಾಗ್ತಿತ್ತು ಅಂದ್ರೆ, ಗುಂಪಿನಲ್ಲಿದ್ದಾಗ ಯಾವನೋ ಒಬ್ಬ್ನು ನರಿ ಅನ್ನೋನು. ಇನ್ನೊಬ್ನು ಲೇ ನಾಗ್ಯಾ ಇಂವಾ ನಿನಗ ನರಿ ಅಂದ ನೋಡ್ಲೆ ಅನ್ನೊನು.  ಮುಂದೆ ಓದಿ »

ನಾಯಿಪ್ರೇಮಿಗಳಲ್ಲೊಂದು ಬಿನ್ನಪ

          ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇ, ಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾಯಿ ಯದಕ ಸಾಕ್ತಾರ್ ಗೊರ್ತನ.s..?" ಅಂದ. "ಯಾಕಂದ್ರೆ, ಅವರಿಗೆ ಮನೆನಲ್ಲಿ ಕಿಮ್ಮತ್ತು ಕೊಡೋರು ಯಾರೂ ಇರಲ್ಲ, at least ಒಂದು ನಾಯಿನಾದ್ರೂ ಇರಲಿ ಅಂತ. ಇವರು ಹಾಕಿದ ಬಿಸ್ಕಿಟ್ ತಿಂದು ಬಾಲ ಅಲ್ಲಾಡಿಸ್ತಾ ಇರ್ತದಲ್ಲಾ?" ಅಂತ ನಾನು ಆಣಿಮುತ್ತು ಉದುರಿಸಿಬಿಟ್ಟೆ. ನನ್ನ ಮೇಲೆ ಮುನಿಸಿಕೊಂಡ ಸ್ನೇಹಿತ ಅಂದೆನಲ್ಲಾ, ಆ ಮನುಷ್ಯ ಒಂದಲ್ಲ, ಎರಡಲ್ಲ ಒಟ್ಟೂ ಎಂಟು ನಾಯಿ ಸಾಕಿದ್ದ ! ಅವುಗಳ ಹೆಸರು ಕೇಳಿ, ಶಿವ, ರಾಮ, ಗೌರಿ ಇತ್ಯಾದಿ. ಈ ಹೆಸರುಗಳಿಂದಾಗಿ ಒಮ್ಮೊಮ್ಮೆ ಮಿತ್ರವರ್ಗದ ಸಂಪ್ರದಾಯಸ್ತರೊಡನೆ, ಹತ್ತಿರದಲ್ಲೇ ಇರುವ ದೇವಸ್ಥಾನದ ಅರ್ಚಕರೊಡನೆ ವಾಗ್ವಾದ ಆಗ್ತಾ ಇರತ್ತೆ. ಹೆಸರಲ್ಲೇನು ತಪ್ಪಿಲ್ಲ ಬಿಡಿ. ಯಾರೊಳಗೆ, ಯಾವುದರೊಳಗೆ ದೇವರಿಲ್ಲ ಹೇಳಿ? ಅವನ ಹಾಗೂ ಅವನ ಪತ್ನಿಯ ನಾಯಿಪ್ರೇಮ ಮಾತ್ರ ಪ್ರಶಂಸನೀಯವೇ.  ಮುಂದೆ ಓದಿ »

ದಿಬ್ಬಣ

ಕೇಳಿದಳು ಕನಸಿನಲಿ ಕತ್ರಿನಾ ಕೈಫು
ಆಗಲೇ ಸುಮಂತಾ ನಾ ನಿನ್ನ ವೈಫು
ಹೇಳಿದೆನು ನೀನೊಂದು ಕೆಲಸವನು ಮಾಡು
ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು||
Syndicate content