Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವ್ಯಕ್ತಿ ವಿಷಯ, ಪರಿಚಯ, ಸಾಧನೆ

ಭರದ್ವಾಜ ಮುನಿ

May 4, 2008 - 11:41pm — ಗಣೇಶ

ಬ್ರಹ್ಮನ ಅಯೋನಿಜ ಪುತ್ರ ದೇವರ್ಷಿ ಅಂಗೀರಾರಿಗೆ ಉತಥ್ಯ ಮತ್ತು ಬೃಹಸ್ಪತಿ ಎಂಬ ಇಬ್ಬರು ಗಂಡು ಮಕ್ಕಳು. ಉತಥ್ಯನ ಪತ್ನಿ ಮಮತಾಳೊಂದಿಗೆ ಬೃಹಸ್ಪತಿ ಸೇರಿ ಭರದ್ವಾಜರ ಜನನ ಆಯಿತು.
ಉತಥ್ಯನ ಕ್ಷೇತ್ರದಲ್ಲಿ ಬೃಹಸ್ಪತಿಯ ಬೀಜದಿಂದ ಜನಿಸಿದುದರಿಂದ ‘ದ್ವಾಜ’.
ದ್ವಾಜಂ ಭರ ಇತಿ ಭರದ್ವಾಜಃ .  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • Login or register to post comments
  • 223 hits
  • Email this page
  • Delicious
  • Google
  • Yahoo

ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು

April 24, 2008 - 2:40pm — sushil
ಗೋಕಾಕ್ ಚಳುವಳಿಯಲ್ಲಿ ನಮ್ಮ ರಾಜ್||

In Memoriam
~ Dr. Raj Kumar ~
1929-2006

ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು ತುಂಬುತ್ತವೆ.ಅಣ್ಣಾವ್ರಿಗೆ ನಮ್ಮೆಲ್ಲರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು!!

ಇಂದಿನ ದಿನ ಕನ್ನಡಿಗರಿಗೆ ಶುಭ ದಿನ ನಮ್ಮ ಪ್ರೀತಿಯ ರಾಜ್ ಹುಟ್ಟಿದ ದಿನ.ಅವರ ಕೊಡುಗೆ ಅಪಾರ ಆದ್ದರಿಂದಲೇ ಅವರು ನಮಗೆಲ್ಲರಿಗೂ ಹೃದಯದಷ್ಟು ಹತ್ತಿರ.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • Login or register to post comments
  • 157 hits
  • Email this page
  • Delicious
  • Google
  • Yahoo

ಬೇಂದ್ರೆ ನೆನಪು

April 15, 2008 - 1:46am — thewiseant

ವರಕವಿ ದ ರಾ ಬೇಂದ್ರೆ

ಪ್ರತಿ ಯುಗಾದಿಯಂದು ರೇಡಿಯೋ ಅಥವಾ ದೂರದರ್ಶನದಲ್ಲಿ ತಪ್ಪದೆ ಪ್ರಸಾರವಾಗುವ ಗೀತೆ ಬೇಂದ್ರೆಯವರ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ". ಒಂದು ರೀತಿಯಲ್ಲಿ ಬೇವು ಬೆಲ್ಲದಂತೆ ಈ ಗೀತೆಯೂ ಹಬ್ಬದ ಅವಿಭಾಜ್ಯ ಅಂಗವಾಗಿದೆ.

ಬೇಂದ್ರೆಯವರು ಈ ಪ್ರಸಿದ್ಧ ಗೀತೆಯಲ್ಲದೆ ಯುಗಾದಿಯ ಬಗ್ಗೆ ಇನ್ನೂ ಒಂದು ಗೀತೆಯನ್ನು ರಚಿಸಿದ್ದಾರೆ. ಅದರ ಮೊದಲ ಸಾಲುಗಳು ಇಂತಿವೆ:
ಅವರವರಿಗೆ ಅವರ ಹಾದಿ
ಅವರ ಹಾದಿ
ನನಗೆ ನಿನಗೆ ಒಂದೇ ಆದಿ
ಒಂದೇ ದಾದಿ
ಯುಗದ ಮಧ್ಯೆ ಬಿಂದು ಒಂದೂ
ಯುಗದ ಮಧ್ಯೆ ಬಿಂದು ಒಂದೂ

ಬೇಂದ್ರೆಯವರ ಇಂಥಹ ಸರಳವೆನಿಸುವ ಕವನಗಳಲ್ಲೇ ಜೀವನ ದರ್ಶನವಾಗುತ್ತದೆ. ಒಮ್ಮೆ ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಲು ಬಂದವರಿಗೆ ವರಕವಿಯ ಕೆಲವು ಅಪರೂಪದ ಅಥವಾ ವಿಶಿಷ್ಟ ಕವನಗಳ ಬಗ್ಗೆ ಹೇಳಲು ಕೋರಲಾಯಿತು. ಅದಕ್ಕೆ ಉತ್ತರವಾಗಿ ಅವರು ಬೇಂದ್ರೆಯವರ ಪ್ರತಿ ಕವನವೂ ವಿಶಿಷ್ಟವೂ ಅಪರೂಪದ್ದೂ ಆದದ್ದು ಎಂದರು.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • Login or register to post comments
  • 221 hits
  • Email this page
  • Delicious
  • Google
  • Yahoo

ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

April 1, 2008 - 9:10pm — rajeshnaik111

ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.

ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.

ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • 2 ಪ್ರತಿಕ್ರಿಯೆಗಳು
  • 202 hits
  • Email this page
  • Delicious
  • Google
  • Yahoo

ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...

March 16, 2008 - 10:00am — narendra
ಪ್ರಸೂನ್ ಜೋಶಿ

ಪ್ರಸೂನ್ ಜೋಶಿಯ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ತಾರೇ ಜಮೀನ್ ಪರ್, ಬ್ಲ್ಯಾಕ್, ರಂಗ್ ದೇ ಬಸಂತಿ ಮುಂತಾಗಿ ಹಲವು ಚಿತ್ರಗಳಲ್ಲಿ ಈತನ ಹಾಡುಗಳನ್ನು ಕೇಳಿದ್ದೀರಿ. ನನ್ನನ್ನು ಸೆಳೆದಿದ್ದು ಇತ್ತೀಚಿನ ತೆಹಲ್ಕಾ ಪತ್ರಿಕೆಯಲ್ಲಿ (15 ಮಾರ್ಚ್ 2008) ಬಂದಿರುವ ಈತನ ಸಂದರ್ಶನ. ನಸ್ರೀನ್ ಮುನ್ನಿ ಕಬೀರ್ ನಡೆಸಿದ ಈ ಸಂದರ್ಶನದಲ್ಲಿ ಪ್ರಸೂನ್ ತನ್ನ ರಕ್ತದ ಕಣಕಣದಲ್ಲೂ ತಾನು ಕವಿ ಎನ್ನುತ್ತಾನೆ! ನಮ್ಮ ಜಯಂತ್ ಕಾಯ್ಕಿಣಿ ಆಗಾಗ ಕವಿತೆಯ ಬಗ್ಗೆ ಆಡುತ್ತ ಬಂದ ಮಾತುಗಳನ್ನೇ ಹೋಲುವಂತಿರುವ ಈತನ ಮಾತುಗಳು ಬರಹಗಾರರಿಗೆ ಕುತೂಹಲ ಹುಟ್ಟಿಸುವಂತಿವೆ.

"ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ." (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ - ಜಯಂತ ಕಾಯ್ಕಿಣಿ).  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • ೧ ಪ್ರತಿಕ್ರಿಯೆ
  • 275 hits
  • Email this page
  • Delicious
  • Google
  • Yahoo
123456789…ಮುಂದಿನ ›ಕೊನೆಯ »
Syndicate content

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator