ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರಬಂಧ

ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.     ಮುಂದೆ ಓದಿ »

ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು

ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?
ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ "ಕೃತಿ" ಗಳನ್ನು ಖಂಡಿಸೋಣ.  ಮುಂದೆ ಓದಿ »

ಅಬಾಯಾ, ಅಭಯ

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ)   "ಹಿಜಾಬ್" ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ ದೊಂಬಿಯಿಂದ  ಉಂಟಾದ ಈ ರಕ್ತಸಿಕ್ತ  ಚಿತ್ರಣವನ್ನು.   ಮುಂದೆ ಓದಿ »

ಮೈ ನೇಮ್ ಇಸ್ ಅಬ್ದುಲ್, ಬಟ್...

my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆಗೆ ಸಂಬಂಧವಿಲ್ಲದ ಮುಗ್ಧ, ಅಮಾಯಕ ಜನರ ಜೀವ ಹಿಂಡುವುದು ನನ್ನ ಜಾಯಮಾನವಲ್ಲ, ಅಷ್ಟು ಮಾತ್ರವಲ್ಲ ನಾನು ಬೆಳೆದು ಬಂದ ಸಂಸ್ಕೃತಿಯೂ ನನಗದನ್ನು ಕಲಿಸಿಲ್ಲ. ಮಾತು ಮಾತಿಗೆ ಇಲ್ಲ್ಲಾ ಘಜನಿ, ಘೋರಿ, ಅಲ್ಲಾವುದ್ದೀನ್ ಖಿಲ್ಜಿ, ಅದು ಬಿಟ್ಟರೆ ಕಾಶ್ಮೀರಿ ಪಂಡಿತರ ಗೋಳು, ಇವುಗಳಾಚೆಯೂ ಪ್ರಪಂಚ ಇದೆ, ದಿನವೂ ಹೊಸ ಸೂರ್ಯ, ಚಂದಿರರು ಹುಟ್ಟುತ್ತಾರೆ ಎನ್ನುವ ಪರಿವೆ ಇಲ್ಲದೆ, ಅತ್ಯುತ್ಸಾಹದಿಂದ ಸಮುದಾಯಗಳ ನಡುವೆ ಕಂದಕ ನಿರ್ಮಿಸಲು ಹೊರಟ ಜನ ನಿಸರ್ಗದಿಂದ ಪಾಠ ಕಲಿತು ಸಹಬಾಳ್ವೆ ನಡೆಸಲು ಪ್ರಯತ್ನಿಸಬೇಕು.       ಮುಂದೆ ಓದಿ »

ಇ - ಪುಸ್ತಕವೋ, ಆ ಪುಸ್ತಕವೋ?

ಇ - ಪುಸ್ತಕವೋ, ಆ ಪುಸ್ತಕವೋ?


ನಿಮಗೆ ಯಾವುದಾಗಬಹುದು?  ಇ - ಪುಸ್ತಕವೋ, ಆ ಪುಸ್ತಕವೋ?


ನನಗಂತೂ  ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ  ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು ಉತ್ಸುಕತೆ ತೋರುವ ಬಣ್ಣ ಬಣ್ಣದ ಕವಚದ ಮೇಲೆ ಕೆಲವೊಮ್ಮೆ ಧೂಳನ್ನು ಹೊತ್ತು ನಿಂತ ಪುಸ್ತಕ, ಕಾಗದದ ಪುಸ್ತಕ.    ಮುಂದೆ ಓದಿ »

ಹಳೇ ಸೇತುವೆಗೆ ತುಂಬಿತು ನೂರು

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  


 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.     ಮುಂದೆ ಓದಿ »

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......

ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸಿಕೊಂಡು ಹೋಗುತ್ತಾರೆ. ಈ ವ್ಯಾನಿಟಿ ಬ್ಯಾಗ್ ಇರುವದರಿಂದಲೋ ಏನೋ ಸದಾ ಅವರ ಮುಖದಲ್ಲೊಂದು ಸುರಕ್ಷಿತ ಭಾವನೆ ಎದ್ದು ಕಾಣುತ್ತಿರುತ್ತದೆ ಹಾಗೂ ತಮ್ಮೆಲ್ಲ ರಹಸ್ಯಗಳನ್ನು ಅದರಲ್ಲಿ ಬಚ್ಚಿಟ್ಟುಕೊಂಡಿರುವದರಿಂದಲೋ ಏನೋ ಅವರ ಮುಖದ ಮೇಲೆ ಸಹಜವಾದ ಒಂದು ನಿರಾಳತೆ ಮೂಡಿರುತ್ತದೆ. ಈ ನಿರಾಳತೆಯನ್ನೇ ನಾವು ‘ವ್ಯಾನಿಟಿ’ ಎಂದುಕೊಂಡು, ಅದನ್ನು ಯಾವಾಗಲೂ ಅವರ ವ್ಯಾನಿಟಿ ಬ್ಯಾಗಿನ ಜೊತೆ ಸಮೀಕರಿಸಿ, ಈ ವ್ಯಾನಿಟಿ ಬ್ಯಾಗಿನಿಂದಲೇ ಅವರಿಗೆ ‘ವ್ಯಾನಿಟಿ’ ಬಂದಿದೆಯೇನೋ ಎಂಬಂತೆ ಮಾತನಾಡುತ್ತೇವೆಯೆ? ಗೊತ್ತಿಲ್ಲ!

ನನಗೆ ಚಿಕ್ಕಂದಿನಿಂದಲೂ ಹೆಂಗಸರ ವ್ಯಾನಿಟಿ ಬ್ಯಾಗ್ ನೋಡಿದಾಗಲೆಲ್ಲಾ ಏನೋ ಒಂದು ತರ ವಿಚಿತ್ರ ಕುತೂಹಲ ತಾನೆ ತಾನಾಗಿ ಮೂಡುತ್ತಿತ್ತು. ಯಾಕೆ ಹೆಂಗಸರು ಹೊರಗೆ ಹೋಗುವಾಗ ಯಾವಗಲೂ ತಮ್ಮ ಬಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಹೋಗ್ತಾರೆ ಮತ್ತು ಅದರಲ್ಲಿ ಅಂಥಾದ್ದೇನಿರುತ್ತದೆ ಎಂದು ತಿಳಿಯಬೇಕೆಂಬ ಕುತೂಹಲ. ಏಕೆಂದರೆ ನನ್ನ ಸಂಬಂಧಿಕರಲ್ಲಿ ಬಹಳಷ್ಟು ಹೆಂಗಸರು ಹೊರಗೆ ಹೋಗುವಾಗ ಇದನ್ನು ತಪ್ಪದೇ ಒಯ್ಯುತ್ತಿದ್ದರು ಮತ್ತು ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಭದ್ರವಾಗಿ ಇಟ್ಟು ನಿರಾಳರಾಗುತ್ತಿದ್ದರು. ಇವರೇಕೆ ಅದನ್ನು ಒಯ್ಯುತ್ತಾರೆ?  ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಏಕೆ ಇಡುತ್ತಾರೆ? ಹೊರಗೇ ಇಡಲು ಏನು ಕಷ್ಟ?  ಎಂದು ನನ್ನಷ್ಟಕ್ಕೆ ನಾನೆ ಕೇಳಿಕೊಳ್ಳುತ್ತಿದ್ದೆ. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಒಂದು ಸಾರಿ ಕುತೂಹಲ ತಡೆಯಲಾರದೆ ನನ್ನ ದೊಡ್ದಮ್ಮನನ್ನು ಕೇಳಿಯೂ ಬಿಟ್ಟೆ. ಅದಕ್ಕೆ ಆಕೆ ನಗುತ್ತಾ ನಿಮಗೆ ಗಂಡಸರಿಗಾದರೆ ಜೇಬುಗಳಿರುತ್ತವೆ ಅದರಲ್ಲಿ ಎಲ್ಲಾನೂ ಇಟ್ಕೊಳಿತೀರಿ. ಪಾಪ, ಹೆಂಗಸರಿಗಾದರೆ ಎಲ್ಲಿ ಜೇಬುಗಳಿರುತ್ತವೆ? ಅದ್ಕೆ ಅವರು ಹೊರಗೆ ಹೋಗುವಾಗ ವ್ಯಾನಿಟಿ ಬ್ಯಾಗ್ ಒಯ್ಯುತ್ತಾರೆ ಎಂದು ಉತ್ತರ ಕೊಟ್ಟಿದ್ದಳು. ನಾನಿನ್ನೂ ಚಿಕ್ಕವನಾಗಿದ್ದರಿಂದ ಮತ್ತು ಅಷ್ಟಾಗಿ ತಿಳುವಳಿಕೆ ಇಲ್ಲದ್ದರಿಂದ ಅವಳು ಹೇಳಿದ್ದು ಸರಿಯಿರಬಹುದೆಂದು ಸಮಾಧಾನ ಪಟ್ಟುಕೊಂಡಿದ್ದೆ. ಆದರೆ ಅದರ ಬಗ್ಗೆ ಇರುವ ಅಪಾರ ಕುತೂಹಲ ಮಾತ್ರ ತಣಿದಿರಲಿಲ್ಲ.  ಮುಂದೆ ಓದಿ »

ಮುಟ್ಟಿದ್ದೆಲ್ಲಾ ಚೈನಾ...

ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ.  ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.  ಮುಂದೆ ಓದಿ »

ನೀ ಅಂಕಲ್ ಎಂದು ಕರೆಯದಿರು ಎನ್ನಾ...

ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ ಮತ್ತು ಮತ್ತಿಬ್ಬರನ್ನೂ ಅಂಕಲ್, ಅಣ್ಣ ಎಂದು ಸಂಬೋಧಿಸಿ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಂಕಲ್ ಅಣ್ಣ ಎನ್ನಲು ಕಾರಣ ನೀಡಿದ ಅವರು ತನಗೆ ತನ್ನ ಅಮ್ಮ ಹಿರಿಯರನ್ನು ಅಂಕಲ್ ಅಣ್ಣ ಎಂದು ಕರೆಯಬೇಕು, ಹಾಗೆ ಮಾಡದಿದ್ದರೆ ಅಮ್ಮ ಬಯ್ಯುತ್ತಾರೆ ಎಂದು ಹೇಳಿದರು. ನನ್ನ ಮಟ್ಟಿಗೆ ಹೇಳುವುದಾದರೆ ನನ್ನನ್ನು ಅಣ್ಣ ಎಂದೋ ಮಾವ ಎಂದೋ ಅಂಕಲ್ ಎಂದೋ ಏನು ಕರೆದರೂ ವ್ಯತ್ಯಾಸವಿಲ್ಲ. ಏಕೆಂದರೆ ಇದು ಭಾರತೀಯರಿಗಿರುವ ಗುಣ. ಹಿರಿಯರನ್ನು ಗೌರವಿಸುವುದರೊಂದಿಗೆ ಅವರಿಗೆ ತಮ್ಮ ವಯಸ್ಸಿನ ಪರಿಕಲ್ಪನೆಯೂ ಇರಲಿ ಎನ್ನುವ ತುಂಟತನ, ಚೇಷ್ಟೆ.  ಮುಂದೆ ಓದಿ »

Syndicate content